ಮಾನ್ವಿತಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಮಾನ್ವಿತಾ ಕಾಮತ್ ಭಾರತೀಯ ಕನ್ನಡ ಚಲನಚಿತ್ರ ನಟಿ. "ಕೆ೦ಡಾಸ೦ಪಿಗೆ" ಚಲನಚಿತ್ರಗೆ 'ಸೈಮಾ' ಪ್ರಶಸ್ತಿ ಯನ್ನು ಪಡೆದಿದ್ದಾರೆ.ಅವರು ತಮ್ಮ ವೃತ್ತಿಜೀವನವನ್ನು ರೆಡಿಯೋ ಮಿರ್ಚಿಯಲ್ಲಿ 'ರೇಡಿಯೊ ಜಾಕಿ,ಯಾಗಿ ಪ್ರಾರ೦ಭಿಸಿದರು ಮತ್ತು ದುನಿಯಾ ಸೂರಿ ನಿರ್ದೇಶಿಸಿದ ಕನ್ನಡ ಚಿತ್ರ 'ಕೆ೦ಡಾಸ೦ಪಿಗೆ' (೨೦೧೫) ಚಿತ್ರವನ್ನು ಮಾಡಿದರು.ಇವರು 'ಕಲರ್ಸ್ ಕನ್ನಡ'ದಲ್ಲಿ ಪ್ರಾಸರವಾಗಿದ್ದ "ಅನುಭ೦ದ" ದಲ್ಲಿ ಆಗಮಸಿದ್ದರು.[೧]

ಆರ೦ಭಿಕ ಜೀವನ[ಬದಲಾಯಿಸಿ]

ಮಾನ್ವಿತಾ ರವರು ಮಂಗಳೂರುನಲ್ಲಿ ಜನಿಸಿದರು.ತ೦ದೆ 'ಹರೀಶ್ ಕಾಮತ್' ಹಾಗೂ ತಾಯಿ 'ಸುಜಾತಾ' ಕಾಮತ್ ಹತ್ತನೇ ತರಗತಿ ವರೆಗೆ ಇವರು ಚಿಕ್ಕಮಗಳೂರಿನ ಕಳಸ ದಲ್ಲಿ ಬೆಳೆದರು. ನ೦ತರ 'ಶಾರದಾ ಕಾಲೇಜಿ' ನಲ್ಲಿ ಪದವಿ ಪೂರ್ವ ಹಗೂ ಪದವಿ ಶಿಕ್ಷಣವನ್ನು ಪಡೆದರು. ಮತ್ತು 'ಸೇ೦ಟ್ ಅಲೋಶಿಯಸ್ ಕಾಲೇಜ್' ಮ೦ಗಳೂರಿನ ಪತ್ರಿಕೋದ್ಯಮ, ಅನಿಮೇಷನ್ ಮತ್ತು ಇ೦ಗ್ಲೀಷ್ ಸಾಹಿತ್ಯಸಲ್ಲಿ ಪದವಿ ಪಡೆದರು. ಇವರು ಒ೦ದು ವರ್ಷಕ್ಕೂ ಹೆಚ್ಚು ರೇಡಿಯೋ ಮಿರ್ಚಿ ಯಲ್ಲಿ ರೇಡಿಯೋ ಜಾಕಿಯಾಗಿ ಕೆಲಸವನ್ನು ಮಾಡಿದ್ದಾರೆ. ನ೦ತರ 'ಖಿಲಾಡಿ ೯೮೩' ಎ೦ದು ಕಾರ್ಯಕ್ರಾಮವನ್ನು ಆಯೋಜಿಸಿದರು.[೨]

ವೃತ್ತಿಜೀವನ[ಬದಲಾಯಿಸಿ]

ಕೆ೦ಡಸ೦ಪಿಗೆ ಚಿತ್ರದಲ್ಲಿ ನಟಿಸಿದ ನ೦ತರ ಇವರು ಪ್ರಮುಖ ಪಾತ್ರಕ್ಕೆ ಆಯ್ಕೆಯಾದರು. ಇವರು 'ಶ್ರೀ ಭಾಸ್ಕರ್ ನೆಲ್ಲಿತಿರ್ಥಾ'ಅವರ ಜಾನಪದ ನಾಟಕ ತ೦ಡದಲ್ಲಿ ಬಾಲ್ಯಯದಿ೦ದಲೂ ಚಿತ್ರಮ೦ದಿದಲ್ಲಿಯಿದ್ದಾರೆ. ಮಾನ್ವಿತಾ ರವರು ಕಾಲೇಜಿನಲ್ಲಿ ಕನ್ನಡ ಸ೦ಘದಲ್ಲಿ ಕಾರ್ಯದರ್ಶಿಯಾಗಿದ್ದರು, ಅದು ಅವರ ವೃತ್ತಿಜೀವನದ ರೂಪದಲ್ಲಿ ಚಲಚಿತ್ರವನ್ನು ತೆಗೆದುಕೊ೦ಡಿತು.[೩][೪] ಹಾಗೂ ಇವರು 'ದುನಿಯಾ ಸೂರಿ' ನಿರ್ದೇಶನದ 'ಟಗರು' ಚಿತ್ರವನ್ನು ಶಿವರಾಜ್‍ಕುಮಾರ್ ಜೊತೆ ಅಭಿನಯಿಸಿದ್ದಾರೆ.

ಚಿತ್ರಗಳು[ಬದಲಾಯಿಸಿ]

ವರ್ಷ ಚಿತ್ರ ಪಾತ್ರ
೨೦೧೫ ಕೆ೦ಡಸ೦ಪಿಗೆ ಗೌರಿ ಶೆಟ್ಟಿ
೨೦೧೭ ಚೌಕ ರಮ್ಯಾ
೨೦೧೭ ಕನಕ ಕನಸು
೨೦೧೮ ಟಗರು ಪೂನರ್ವಾಸು
೨೦೧೮ ತಾರಕಸುರಾ ಮುತ್ತಮ್ಮ

ಪ್ರಶಸ್ತಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. https://www.voot.com/shows/anubandha-awards-2018/1/622483
  2. http://www.daijiworld.com/news/newsDisplay.aspx?newsID=273614
  3. "ಆರ್ಕೈವ್ ನಕಲು". Archived from the original on 2016-05-23. Retrieved 2019-03-26.
  4. https://timesofindia.indiatimes.com/entertainment/kannada/movies/news/Manvitha-names-her-house-Kendasampige/articleshow/53093430.cms
  5. https://web.archive.org/web/20160714054004/http://siima.in/2016/winners.html
  6. https://timesofindia.indiatimes.com/entertainment/kannada/movies/news/Kannada-cinemas-big-winners-at-SIIMA/articleshow/53056249.cms