ಮಾನ್ಯಪುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಣ್ಣೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲು ಹೋಬಳಿಯಲ್ಲಿನ ಒಂದು ಊರು. ಇದು ಗಂಗರ ರಾಜಧಾನಿಯಾಗಿತ್ತು. (ಎನ್.ಹೆಚ್.೪ ) ಡಾಬಸ್ ಪೇಟೆ ಇಂದ ದೊಡ್ಡಬಳ್ಳಾಪುರಕ್ಕೆ ಹೋಗುವ ರಸ್ತೆಯಲ್ಲಿ ಡಾಬಸ್ ಪೇಟೆ ಇಂದ ಸುಮಾರು ೮ ಕಿ.ಮೀ ಗಳಷ್ಟು ಕ್ರಮಿಸಿದರೆ ಮುದ್ದಲಿಂಗನ ಹಳ್ಳಿ ಎಂಬಲ್ಲಿ ರಸ್ತೆಗೆ ಅಡ್ಡಲಾಗಿ ರೈಲು ಹಳಿ ಹಾದುಹೋಗುತ್ತದೆ. ಅಲ್ಲಿಂದ ಎಡಕ್ಕೆ ತಿರುಗಿದರೆ ಮಣ್ಣೆ ಕೆರೆ, ಅದರ ಏರಿಯ ಮೇಲೆ ೧.೫ ಕಿ.ಮೀ ಕ್ರಮಿಸಿದರೆ ಗಂಗರಸರ ರಾಜಧಾನಿ ಮಣ್ಣೆ ಅಥವಾ ಮಾನ್ಯಪುರ ಕಾಣಬಹುದು. ಮಣ್ಣೆಗೆ ರತ್ನಪುರಿ ಎಂತಲೂ ಹೆಸರಿತ್ತೆಂದು ಹೇಳಲಾಗಿದೆ. ಕೆರೆ ಏರಿಯ ಮೇಲೆ ಸ್ವಲ್ಪ ದೂರ ಕ್ರಮಿಸಿ ಬಲಭಾಗಕ್ಕೆ ನೋಡಿದಾಗ ಬಂಡೆಯೊಂದು ನಾಲ್ಕು ಭಾಗವಾಗಿ ಸೀಳಿಕೊಂಡಿರುವುದನ್ನು ಕಾಣಬಹುದು. ಇದು ಸಾಮಾನ್ಯ ಬಂಡೆ ಎಂದು ಭಾವಿಸಿದಲ್ಲಿ ನಿಮ್ಮ ಊಹೆ ತಪ್ಪಾದೀತು. ಈ ಬಂಡೆಯ ಉದರದಿಂದ ಸಪ್ತ ಶಕ್ತಿ ದೇವತೆಗಳು ಜನ್ಮಿಸಿದವೆಂದು ಪ್ರತೀತಿ ಇದೆ. ಮಣ್ಣೆಮ್ಮ, ಮಾದಾಪುರದಮ್ಮ, ಎಲ್ಲಮ್ಮ, ಅಣ್ಣಮ್ಮ, ಕುರಾಳಮ್ಮ, ಇತ್ಯಾದಿ ಅಕ್ಕ ತಂಗಿಯರೆನ್ನಲಾದ ಸಪ್ತ ಶಕ್ತಿ ದೇವತೆಗಳು ಜನ್ಮಿಸಿದವೆಂದು ಪ್ರತೀತಿ ಇದೆ. ಮಣ್ಣೆ ಗ್ರಾಮದಲ್ಲಿ ಗಂಗರಸರ ಕಾಲದಲ್ಲಿ ನಿರ್ಮಾಣವಾದ ಕಪಿಲೇಶ್ವರ ಸ್ವಾಮಿ ದೇವಸ್ತಾನ, ಅಕ್ಕ ತಂಗಿಯರ ಗುಡಿ, ಸೂಳೆ ಗುಡಿ (ಜೈನ ಬಸದಿ),ಸೋಮೇಶ್ವರ ದೇವಸ್ತಾನ, ಸೂರ್ಯದೇವತೆ ಮುಂತಾದವುಗಳಿವೆ. ಅವುಗಳಲ್ಲಿ ಸೂರ್ಯದೇವತೆ ವಿಗ್ರಹ ಇತ್ತೀಚೆಗಷ್ಟೇ ಕಳುವಾಗಿದ್ದು ದುಃಖದ ಸಂಗತಿಯಾಗಿದೆ. ಮಣ್ಣೆ ಗ್ರಾಮದಲ್ಲಿ ಕಳೆದ ಐದಾರು ವರ್ಷಗಳಿಂದ ಅದೇ ಗ್ರಾಮದ (Jeeva Kala Kannada Seva Sangha, Manne) ಜೀವ ಕಲಾ ಕನ್ನಡ ಸೇವಾ ಸಂಘ ಮಣ್ಣೆ www.jkkssmanne.blogspot.com ಇತಿಹಾಸದ ಪಳೆಯುಳಿಕೆ, ಸಂಸ್ಕ್ರುತಿಯ ಉಳಿವಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶ್ರಮಿಸುತ್ತಿದ್ದಾರೆ.