ವಿಷಯಕ್ಕೆ ಹೋಗು

ಮಾನಸ ದೇವಿ ದೇವಾಲಯ, ಮೊಹಾಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೊಹಾಲಿಯಿಂದ ಅಂದಾಜು 19 ಕಿ.ಮೀ ಅಂತರದಲ್ಲಿರುವ ಹರಿಯಾಣದ ಪಂಚಕುಲ ಜಿಲ್ಲೆಯಲ್ಲಿ ಈ ಮಾನಸ ದೇವಿ ದೇವಾಲಯವಿದೆ. ಮಾನಸ ದೇವಿಯ ಈ ದೇವಾಲಯ ಉತ್ತರಭಾರತದಲ್ಲೇ ಹಿಂದೂಗಳ ಶಕ್ತಿಯುತ ದೇವಾಲಾಯ ಎಂದು ನಂಬಲಾಗಿದೆ. ಮಣಿ ಮಜ್ರಾದ ಮಹಾರಾಜ ಗೋಪಾಲ್ ಸಿಂಗ್ ನಿಂದ 1811 ರಿಂದ 1815 ರಲ್ಲಿ ಈ ದೇವಾಲಯವನ್ನು ಕಟ್ಟಲಾಯಿತು. ನಂತರ 1840 ರಲ್ಲಿ, ಪಾಟಿಯಾಲ ದೇವಸ್ಥಾನ ಎಂಬ ಮತ್ತೊಂದು ದೇವಸ್ಥಾನವನ್ನು ಮುಖ್ಯ ದೇವಸ್ಥಾನದಿಂದ 200 ಮೀ ದೂರದಲ್ಲಿ ಹಾರಾಜ ಪಾಟಿಯಾಲ, ಕರಮ್ ಸಿಂಗ್ ನಿಂದ ನಿರ್ಮಿಸಲಾಯಿತು. ನವರಾತ್ರಿಯ ಸಂದರ್ಭದಲ್ಲಿ ಸಾವಿರಾರು ಭಕ್ತರು ಸೇರುವ ಈ ದೇವಾಲಾಯ ಮೊಹಾಲಿ ಹತ್ತಿರದಲ್ಲಿರುವ ಭೇಟಿ ನೀಡಲೇ ಬೇಕಾದ ಪ್ರವಾಸಿ ಸ್ಥಳ.

ಗಮನಿಸಿ:ಮೊಹಾಲಿಯಲ್ಲಿ ಮಾನಸ ದೇವಿ ದೇವಾಲಯ ಎಂದು ಹುಡುಕಿದರೆ ಸಿಗುವ ಪಲಿತಾಂಶ ನಿಖರವಾಗಿ ತೋರುವುದಿಲ್ಲ. ಆದಾಗ್ಯೂ ಮೊಹಾಲಿ ಹತ್ತಿರದ ಪಂಚಕುಳದಲ್ಲಿರುವ ಮಾನಸ ದೇವಿ ದೇವಾಲಯ ಹೆಚ್ಚು ಪ್ರಖ್ಯಾತಿ ಹೊಂದಿದ ದೇವಾಲಯವಾಗಿದ್ದು ಅದರ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2016-07-15. Retrieved 2016-07-03.