ವಿಷಯಕ್ಕೆ ಹೋಗು

ಮಾಧವ ಹನುಮಂತ ಕೌಜಲಗಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಮಾಧವ ಹನುಮಂತ ಕೌಜಲಗಿ,' ಒಬ್ಬ ಖ್ಯಾತ ಪ್ರಕಾಶಕ, ಹಿರಿಯ ಪತ್ರಕರ್ತ, ಮತ್ತು ಗಾಂಧಿವಾದಿ, ಸ್ಪೂರ್ಥಿಯ ಚಿಲುಮೆಯಾಗಿದ್ದರು. ತಮ್ಮ ಜೀವದುದ್ದಕ್ಕೂ ಖಾದಿ ಬಟ್ಟೆಯನ್ನೇ ಉಡುತ್ತಿದ್ದರು.ಮಹಾತ್ಮಾ ಗಾಂಧಿಯವರ ನಿಷ್ಠ ಅನುಯಾಯಿಯಾಗಿದ್ದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ, ರಾಮಕೃಷ್ಣ ಹೆಗ್ಗಡೆಯವರ ಗೆಳೆಯರು. ಆದರೆ, ರಾಜಕೀಯದಲ್ಲಿ ಆಸಕ್ತಿ ವಹಿಸಲಿಲ್ಲ. ಸಮಾಜ ಸೇವೆ, ಅವರ ಹೃದಯಕ್ಕೆ ಹತ್ತಿರವಾಗಿತ್ತು.ಕರ್ನಾಟಕದ ಖಾದಿ ಗ್ರಾಮೋದ್ಯೋಗದ ಜನಕ, ಪ್ರವರ್ತಕರಾಗಿ, ತಮ್ಮ ಜೀವನದುದ್ದಕ್ಕೂ ರಾಷ್ಟ್ರಕ್ಕಾಗಿ ದುಡಿದರು.

ಜನನ, ಬಾಲ್ಯ, ವಿದ್ಯಾಭ್ಯಾಸ,ವೃತ್ತಿಜೀವನ

[ಬದಲಾಯಿಸಿ]

'ಮಾಧವ ಹನುಮಂತ ಕೌಜಲಗಿ', ಮಾಧವ ಕೌಜಲಗಿಯವರ ಒಬ್ಬನೇ ಮಗ. ಜೂನ್ ೬, ೧೯೨೨ ರಲ್ಲಿ ಜನಿಸಿದರು. ಅಹಮದಾಬಾದ್ ನಲ್ಲಿ ಬಿ.ಕಾಂ ಪದವಿ ಗಳಿಸಿದ ಬಳಿಕ, 'ಠಕ್ಕರ್ ಬಾಪಾ' ಜೊತೆ ೨ ವರ್ಷ ಕೆಲಸಮಾಡಿದರು. ಹುಬ್ಬಳ್ಳಿ, ಮತ್ತು ಬೆಂಗಳೂರಿನಲ್ಲಿ ರಂಗನಾಥ ದಿವಾಕರ, ಮೊಹರೆ ಹನುಮಂತರಾವ್, ಜೊತೆ ಸೇರಿ, ಅವರ ಮಾರ್ಗದರ್ಶನದಲ್ಲಿ 'ಸಂಯುಕ್ತ ಕರ್ನಾಟಕ ಪತ್ರಿಕೆ', ಮತ್ತು, 'ಕರ್ಮವೀರ ವಾರಪತ್ರಿಕೆ'ಗಳನ್ನು ಪ್ರಕಟಿಸಿ ಜನಪ್ರಿಯ ಮಾಡಿದರು. ೧೯೬೪ ರಲ್ಲಿ ಬೆಂಗಳೂರಿನಲ್ಲಿ, 'ಬೃಂದಾವನ ಪ್ರಿಂಟರ್ಸ್ ಅಂಡ್ ಪಬ್ಲಿಷರ್ಸ್ ಮುದ್ರಣಾಲಯ'ವನ್ನು ಸ್ಥಾಪಿಸಿ, ಅದನ್ನು ಉತ್ತುಂಗಕ್ಕೇರಿಸಿದರು.

  • ಘಟಪ್ರಭಾದ ಕರ್ನಾಟಕ ಆರೋಗ್ಯಧಾಮ,
  • ಕಸ್ತುರ್ ಬಾ ಟ್ರಸ್ಟ್,
  • ಗಾಂಧಿ ಸ್ಮಾರಕ ನಿಧಿ,
  • ಲೋಕಸೇವಾ ಟ್ರಸ್ಟ್,
  • ಖಾದಿ ಗ್ರಾಮೋದ್ಯೋಗ, ಮೊದಲಾದ ಸಂಘ ಸಂಸ್ಥೆಗಳ ಸದಸ್ಯರಾಗಿ ದುಡಿದರು.

೮೯ ವರ್ಷವಯಸ್ಸಿನ, ಮಾಧವ ಹನುಮಂತ ಕೌಜಲಗಿ[] ೨೦೧೦ ರ, ಸೆಪ್ಟೆಂಬರ್ ೨೭ ರಂದು ಬೆಂಗಳೂರಿನಲ್ಲಿ ದೈವಾಧೀನರಾದರು. ಇಬ್ಬರು ಪುತ್ರರು, ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]
  1. ಪತ್ರಕರ್ತ, ಗಾಂಧಿವಾದಿ ಮಾಧವ ಕೌಜಲಗಿ ವಿಧಿವಶ, One India kannada, Wednesday, October 6, 2010