ಮಾಡಿ ಕಲಿ (ಪುಸ್ತಕ)

ವಿಕಿಪೀಡಿಯ ಇಂದ
Jump to navigation Jump to search
ಮಾಡಿ ಕಲಿ
ಮಾಡಿ ಕಲಿ
ಲೇಖಕರುಅರವಿಂದ ಗುಪ್ತ ಕನ್ನಡಕ್ಕೆ ಅನುವಾದ ಎಸ್. ಶಾಸ್ತ್ರಿ
ದೇಶಭಾರತ
ಭಾಷೆಕನ್ನಡ
ವಿಷಯವಿಜ್ಞಾನ ಚಟುವಟಿಕೆಗಳು
ಪ್ರಕಾಶಕರುನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್
ಪ್ರಕಟವಾದ ದಿನಾಂಕ
೨೦೧೧, ೨ನೇ ಮುದ್ರಣ
ಪುಟಗಳು೧೨೮
ಐಎಸ್‍ಬಿಎನ್9788184671032

ಇಂಗ್ಲಿಷ್ ಮೂಲ ಕೃತಿಯನ್ನು ಶ್ರೀ ಅರವಿಂದ ಗುಪ್ತ ಹಾಗೂ ಕನ್ನಡಕ್ಕೆ ಶ್ರೀ ವಿ. ಎಸ್. ಶಾಸ್ತ್ರಿ ಅವರ ಅನುವಾದ ಮಾಡಿವ ಮಾಡಿ ಕಲಿ ವಿಜ್ಞಾನ ಚಟುವಟಿಕೆಗಳ ಕುರಿತು ಮಕ್ಕಳಿಗೆ ಮಾಹಿತಿ ನೀಡುವ ಪುಸ್ತಕ.

ಮಾಡಿ ಕಲಿ ಪುಸ್ತಕದಲ್ಲಿ ಅತಿ ಕುತೂಹಲಕರ ಚಟುವಟಿಕೆಗಳಾದ ಕಾಗದ ಮಡಿಕೆಗಳ ಮೂಲಕ ಜ್ಯಾಮಿತಿ, ಆಟಿಕೆಗಳು, ಟ್ಯಾನ್‍ಗ್ರಾಮ್‍ಗಳು, ಪಂಪ್, ಟೋಪಿಗಳು, ಪ್ರಯೋಗಗಳು ಮತ್ತು ಸರಳ ವಿಜ್ಞಾನ ಮಾದರಿಗಳು ಇದೆ. ಸಾವಿರಕ್ಕೂ ಹೆಚ್ಚು ರೇಖಾಚಿತ್ರಗಳಿವೆ. ಅತಿ ಸರಳ ವಸ್ತುಗಳಿಂದ ವಿಜ್ಞಾನ ಅರಿಯಲು ಸಾಧ್ಯತೆಗಳನ್ನು ತೆರೆದಿಟ್ಟಿದೆ.ಸಂಪನ್ಮೂಲ ಕೊರತೆಯಿರುವ ನಮ್ಮ ದೇಶದಲ್ಲಿ ವೆಚ್ಚವಿಲ್ಲದ ವಸ್ತುಗಳಿಂದ ಪ್ರಯೋಗಗಳನ್ನು ಮಾಡಬಹುದು ಹಾಗೂ ಅತಿ ಕಡಿಮೆ ವೆಚ್ಚದಲ್ಲಿ ಮಕ್ಕಳು ವಿಜ್ಞಾನ ಅಧ್ಯಯನ ಕೈಗೊಳ್ಳಬಹುದು. ಪತ್ರಿಕೆಗಳಿಂದ ಟೋಪಿ ಮಾಡಬಹುದು. ಜ್ಯಾಮಿತಿ ಕಲಿಯಲು ಒರಿಗಾಮಿ ಕಲೆ ಅತಿಸೂಕ್ತ, ಫಿಲ್ಮ್ ಡಬ್ಬಿಗಳು, ಕುಡಿಯುವ ನೀರಿನ ಬಾಟಲು, ರಬ್ಬರ್ ಚಪ್ಪಲಿ, ಡಬ್ಬಿ ಮುಚ್ಚಳಗಳು ಸುಂದರ ಆಟಿಕೆಗಳಿಗೆ ಬಳಕೆಯಾಗುತ್ತವೆ. ಟ್ಯಾನ್‍ಗ್ರಾಮ್‍ಗಳಿಂದ, ಬೀಜಗಳಿಂದ, ಕಲ್ಲುಗಳಿಂದ, ಎಲೆಗಳಿಂದ ಮತ್ತು ಹೆಬ್ಬೆರಳ ಗುರಿತಿನಿಂದ ವಿನ್ಯಾಸಗಳನ್ನು ರಚಿಸುವುದು ಮುದ ನೀಡುವ ಆಟವಷ್ಟೇ ಅಲ್ಲ, ಅತಿ ಸೃಜನಶೀಲ, ತೃಪ್ತಿ ನೀಡುವ ಚಟುವಟಿಕೆಗಳಾಗಿವೆ.

ವಿಜ್ಞಾನ ಕೃಷಿಗೈದ ಹಿರಿಯರು ಅತಿ ಸರಳ ಸಲಕರಣೆಗಳನ್ನೇ ಬಳಸಿದ್ದಾರೆ. ಇವರ ಹೆಜ್ಜೆಯಗುಂಟ ನಡೆದು ಅವರಂತೆಯೇ ಅತಿ ಸರಳ ಕಡಿಮೆ ವೆಚ್ಚದ ಉಪಕರಣಗಳನ್ನು ಬಳಸಿ ವಿಜ್ಞಾನ ಅರಿಯಬಹುದು.

ಈ ಪುಸ್ತಕದಲ್ಲಿ ಉದಾರ ಮರ, ಗಿಣಿಗೊಂದು ತಾಲೀಮು, ಸಂಖ್ಯೆಗಳನ್ನು ಪ್ರೀತಿಸಿದವನು, ಇನ್ನೂ ಮುಂತಾದ ಅನೇಕ ಉತ್ತೇಜಕ ಕಥೆಗಳಿವೆ. ಈ ಕಥೆಗಳು ಶಿಕ್ಷಣ, ಶಾಂತಿ, ಗಣಿತ ಮತ್ತು ಪರಿಸರದ ಕುರಿತಾಗಿವೆ.

ಶ್ರೀ ಅರವಿಂದ ಗುಪ್ತರವರು IIT ಕಾನ್ಪುರದಿಂದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿಯನ್ನು ೧೯೭೫ರಲ್ಲಿ ಪಡೆದರು. ಇವರು ವಿಜ್ಞಾನ ಚಟುವಟಿಕೆಗಳ ಬಗ್ಗೆ ಹನ್ನೆರಡು ಪುಸ್ತಕಗಳನ್ನು ಬರೆದಿದ್ದಾರೆ. ಹಿಂದಿ ಭಾಷೆಗೆ ೮೦ ಹೆಚ್ಚು ಪುಸ್ತಕಗಳನ್ನು ಅನುವಾದಿಸುದ್ದಾರೆ. ವಿಜ್ಞಾನದ ಬಗ್ಗೆ ೯೬ ಕಿರು ಚಲನಚಿತ್ರಗಳನ್ನು ತಯಾರಿಸಿದ್ದಾರೆ. ಇವರ ಮೊದಲ ಪುಸ್ತಕವಾದ Matchstick Models & other science Experiments ಭಾರತದ ೧೨ ಭಾಷೆಗಳಲ್ಲಿ ಅನುವಾದಿಸಿದ್ದಾರೆ. ಇವರಿಗೆ ಸಂದ ಪ್ರಶಸ್ತಿಗಳು ಅನೇಕ. ಜನಪ್ರಿಯ ವಿಜ್ಞಾನ ಪ್ರಚಾರಕ್ಕಾಗಿ ನೀಡುವ NASPC ಪ್ರಶಸ್ತಿ (೧೯೮೮), IIT ಕಾನ್ಪುರದಿಂದ Distinguished Alumnus ಪ್ರಶಸ್ತಿ (೨೦೦೦), ಇವು ಮಕ್ಕಳಲ್ಲಿ ವಿಜ್ಞಾನದ ಅಸಕ್ತಿಯನ್ನು ಕುದುರಿಸಿದ್ದಕ್ಕಾಗಿ ಸಿಕ್ಕಿವೆ. ಹಾಲಿ ಇವರು ಪಿಣೆಯ IUCAA ದಲ್ಲಿನ ಮಕ್ಕಲ ವಿಜ್ಞಾನ ಕೇಂದ್ರದಲ್ಲಿ ಕೆಲಸಮಾಡುತ್ತಿದ್ದಾರೆ.

ಬಾಹ್ಯ ಸಂಪರ್ಕ[ಬದಲಾಯಿಸಿ]