ಜ್ಞಾನ ವಿಜ್ಞಾನ ಕೋಶ (ಪುಸ್ತಕ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜ್ಞಾನ ವಿಜ್ಞಾನ ಕೋಶ (ಪುಸ್ತಕ)
ಲೇಖಕರುಎಂ. ಎ. ಸೇತುರಾವ್, ಕೆ. ಎಲ್. ಗೋಪಾಲಕೃಷ್ಣ ರಾವ್
ದೇಶಭಾರತ
ಭಾಷೆಕನ್ನಡ
ವಿಷಯವಿಜ್ಞಾನ ಕೋಶ
ಪ್ರಕಾಶಕರುನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್
ಪ್ರಕಟವಾದ ದಿನಾಂಕ
೨೦೧೨, ೩ನೆ ಮುದ್ರಣ
ಪುಟಗಳು೭೯೪
ಐಎಸ್‍ಬಿಎನ್978-81-7302-332-3

"ಜ್ಞಾನ ವಿಜ್ಞಾನ ಕೋಶ" ೪ ಸಂಪುಟದಲ್ಲಿ ವಿಜ್ಞಾನದ ಬಗೆ ಕುರಿತು ಸಮಗ್ರ ಮಾಹಿತಿ ನೀಡುವ ವಿಶ್ವಕೋಶ. ಇದರ ಪ್ರಧಾನ ಸಂಪಾದಕರು ಪ್ರೊ|| ಎಂ. ಎ. ಸೇತುರಾವ್ ಹಾಗೂ ಶ್ರೀ ಕೆ. ಎಲ್. ಗೋಪಾಲಕೃಷ್ಣ ರಾವ್.

ನಾಲ್ಕು ಸಂಪುಟಗಳ ಈ ಜ್ಞಾನ ವಿಜ್ಞಾನ ಕೋಶದಲ್ಲಿ ಭೌತ, ರಾಸಾಯನ, ಗಣಿತ, ಖಗೋಳ, ಭೂವಿಜ್ಞಾನ, ಅಂತರಿಕ್ಷ ವಿಜ್ಞಾನ, ತಂತ್ರಜ್ಞಾನ, ಕೃಷಿ, ವೈದ್ಯ ವಿಜ್ಞಾನ, ಪರಿಸರ, ವಾತಾವರಣ, ಇತ್ಯಾದಿ ಸುಮಾರು ಬೇರೆ ಬೇರೆ ಜ್ಞಾನ ಶಾಖೆಗಳಿಗೆ ಸಂಬಂಧಿದಂತೆ ಆಯಾ ವಿಷಯಕ್ಕೆ ಸಂಬಂಧಿಸಿದಂತೆ ಸಾವಿರಕ್ಕೂ ಹೆಚ್ಚು ಲೇಖನಗಳಿವೆ. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವಿಜ್ಞಾನಿಗಳ ಕಿರು ಪರಿಚಯವೂ ಸರಳ ಶೈಲಿಯಲ್ಲಿ ಈ ಪುಸ್ತಕದಲ್ಲಿ ವಿವರಿಸಿದೆ. ಸಾವಿರಕ್ಕೂ ಹೆಚ್ಚು ವರ್ಣರಂಜಿತ ರೇಖಾಚಿತ್ರ ಹಾಗೂ ಛಾಯಾಚಿತ್ರಗಳು ಈ ಪುಸ್ತಕದಲ್ಲಿ ಇದೆ.

ಶಾಲಾ ವಿದ್ಯಾರ್ಥಿಗಳು, ವಿಜ್ಞಾನದಲ್ಲಿ ಆಸಕ್ತಿ ಇರುವ ಓದುಗರಿಗೆ ಈ ಪುಸ್ತಕದ ಉಪಯೋಗ ಪಡೆಯ ಬಹುದು.

ಬಾಹ್ಯ ಸಂಪರ್ಕ[ಬದಲಾಯಿಸಿ]