ವಿಷಯಕ್ಕೆ ಹೋಗು

ಮಹೇಶ್ ಲಂಚ್ ಹೋಂ, ಫೋರ್ಟ್ ಶಾಖೆ, ಮುಂಬೈ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಹೇಶ್ ಲಂಚ್ ಹೋಂ, ಮುಂಬಯಿನಗರದ ಕೋಟೆಪ್ರದೇಶದಲ್ಲಿರುವ ಅತ್ಯುತ್ತಮ ರೆಸ್ಟಾರೆಂಟ್ ಗಳಲ್ಲೊಂದು.[] ಮುಂಬಯಿ ಮಹಾನಗರದ ಅತ್ಯಂತ ಶುಚಿ-ರುಚಿಕರ ಹಾಗೂ ಸ್ವಾದಿಷ್ಟಕರವಾದ ಭಿನ್ನ-ಭಿನ್ನ ಶೈಲಿಯ ಆಹಾರದ ಭಕ್ಷಭೋಜ್ಯಗಳನ್ನು ಗ್ರಾಹಕರಿಗೆ ಪರೋಸಿಸುತ್ತಿರುವ ಹಾಗೂ ಆಲ್ಲಿರುವ ಮಿಕ್ಕೆಲ್ಲಾ ಹೋಟೆಲ್ ಗಳಿಗಿಂತ ತನ್ನದೇ ಆದ ಭಿನ್ನತೆಯನ್ನು ಹೊಂದಿರುವ ಮತ್ತೊಂದು 'ಉಡುಪಿ ರೆಸ್ಟಾರೆಂಟು ' ಹೆಸರುಮಾಡಿ, ಜನಪ್ರಿಯರಾಗಿದ್ದಾರೆ. ಇತ್ತೀಚೆಗೆ ಮಾಡಿದ ಸರ್ವೇಕ್ಷಣೆಯಲ್ಲಿ, 'ಮಹೇಶ್ ಲಂಚ್ ಹೋಂ,' ಏಶಿಯಾ ಖಂಡದ ಅತ್ಯುತ್ತಮ ೩೨೦ ಹೋಟೆಲ್ ಗಳಲ್ಲಿ ಒಂದೆಂಬ ಹೆಗ್ಗಳಿಕೆ ಪಡೆದಿದೆ. ಏಶಿಯಾದ 'Miele Guide' ಎಂಬ ಅಧಿಕೃತ ಸಂಸ್ಥೆ, ಏಶಿಯಾಖಂಡದ ಸುಪ್ರಸಿದ್ಧ ಹೋಟೆಲ್ ಗಳನ್ನು ಸರ್ವೇ ಮಾಡಿದ್ದು, ಉತ್ತಮ ಸೌಕರ್ಯಗಳನ್ನು ದೊರಕಿಸುವುದಲ್ಲದೆ, ಅತ್ಯುತ್ತಮ ಗ್ರಾಹಕಸೇವೆಯನು ಒದಗಿಸುವ ಹೋಟೆಲ್ ಗಳನ್ನು ಗುರುತಿಸಿ, ಅವುಗಳಲ್ಲಿ ೩೨೦ ಹೋಟೆಲ್ ಗಳನ್ನು ಅತ್ಯುತ್ತಮ ಹೋಟೆಲ್ ಗಳೆಂದು ಗುರುತು ಚೀಟಿ ಕೊಟ್ಟಿದ್ದಾರೆ. 'ಮಹೇಶ್ ಲಂಚ್ ಹೋಂ,' ಅಂತಹ ಹೆಸರಾಂತ ನಮೂದಿಸಿದ ಹೋಟೆಲ್ ಗಳಲ್ಲಿ ಒಂದಾಗಿದೆ. ಮುಖ್ಯ ಮೆನುವಿನಲ್ಲಿ ಫಿಶ್ ಕರಿ, ಕ್ರಾಬ್ಸ್ ಸುಕ್ಕಾ, ಪ್ರಾನ್ಸ್ ಗಸ್ಸಿ, ಪಾಂಪ್ರೆಟ್ ಕರಿ, ಕ್ರ್ಯಾಬ್ ಇನ್ ಬಟರ್ ಪೆಪ್ಪರ್,ಗಾರ್ಲಿಕ್ ಮಹೇಶ್ ಲಂಚ್ ಹೋಂ ನ ಸಿಗ್ನೇಚರ್ ಡಿಶ್ ಗಳೆಂದು ಪ್ರಸಿದ್ಧಿಯಾಗಿವೆ.

"ಅತ್ಯುತ್ತಮ ಕೋಸ್ಟಲ್ ಫುಡ್ ಸನ್ಮಾನ,"

[ಬದಲಾಯಿಸಿ]

'ಬೆಸ್ಟ್ ೨೦ ಸ್ಪರ್ಧೆ ' ಯಲ್ಲಿ ' ಮಹೇಶ್ ಲಂಚ್ ಹೋಂ' ಗೆ ದೊರೆಯಬೇಕಾಗಿದ್ದ ಗೌರವ ಕೂದಲೆಳೆಯಷ್ಟು ಅಂತರದಲ್ಲಿ ತಪ್ಪಿಹೋಗಿದ್ದು, ಗಮನಿಸಬೇಕಾದ ವಿಶಯವಾಗಿದೆ. ಇಂತಹ ರೆಸ್ಟೋರೆಂಟ್ ನ ಮಾಲೀಕರು, ಪ್ರಖ್ಯಾತ ಹೋಟೆಲ್ ಉದ್ಯಮಿ, ಸಮಾಜಸೇವಕ, 'ಸೂರು ಕರ್ಕೇರ,' ರವರು. ಮೊದಲಿಗೇ ಅವರಿಗೆ ಇಂತಹ ಅನೇಕ ಪ್ರಶಸ್ತಿಗಳು ದೊರೆತಿದ್ದವು. ಈಗ ಅವರನ್ನು ನಾಗಪುರದಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ' Savey Cook Book,' ನವರ "ಅತ್ಯುತ್ತಮ ಕೋಸ್ಟಲ್ ಫುಡ್ ಸನ್ಮಾನ," ಇಂಡಿಯ ಟುಡೆ-೧೦೦", ರವರ ಅತ್ಯುತ್ತಮ ರೆಸ್ಟೋರಾಂಟ್ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಹೋಟೆಲ್ ಗೆ ಆಗಮಿಸುವ ಅತಿಥಿಗಳು, ವಿಶೇಷ ಅತಿಥಿಗಳು, ಹಾಗೂ ಅವರ ಆಪ್ತಮಿತ್ರರುಗಳು ಅಪೇಕ್ಷಿಸುವುದು, ರುಚಿಕರ ಮತ್ತು ಸ್ವಾದಿಷ್ಟ ತಿಂಡಿ-ತಿನುಸುಗಳು ಹಾಗೂ ಅವನ್ನು ಅಚ್ಚುಕಟ್ಟಾಗಿ ಪರೋಸಿಸುವ ವಿಶೇಷ ಕೌಶಲ್ಯವನ್ನು ಮೆಚ್ಚಿಕೊಂಡಿದ್ದಾರೆ. ಹೆಚ್ಚಾಗಿ ವಿದೇಶಿಯರು ಆಶೆಪಡುವುದು ಇಂತಹ ಸನ್ನಿವೇಶವನ್ನೇ ಅವರ ಅಪೇಕ್ಷೆಗನುಗುಣವಾಗಿ, ಅವರೆಲ್ಲರ ಆದ್ಯತೆಗಳನ್ನು ಗಮನಿಸಿ, ಒಮ್ಮೆಯೂ ನಿರಾಶೆಗೊಳಿಸದೆ ಉತ್ತಮ ಸೇವೆಯ ಗುಣಮಟ್ಟವನ್ನು ಎಚ್ಚರಿಕೆಯಿಂದ ಕಾಯ್ದುಕೊಂಡು ಬಂದಿದ್ದಾರೆ.

ಬಾಲಿವುಡ್ ಕಲಾವಿದರ ಭೇಟಿ

[ಬದಲಾಯಿಸಿ]

'ಮಹೇಶ್ ಲಂಚ್ ಹೋಂ,' ನ ಸಿಬ್ಬಂದಿವರ್ಗದವರು,[] ಅಲ್ಲಿಗೆ ಭೇಟಿನೀಡುವ ಗ್ರಾಹಕರೆಲ್ಲರ ಕಣ್ಮಣಿಗಳಾಗಿದ್ದಾರೆ. ಕ್ರಿಕೆಟಿಗರು, ಬಾಲಿವುಡ್ ಸಿನಿಮಾರಂತದ ಪ್ರಮುಖರು, ರಾಜಕೀಯಧುರೀಣರು, ಮೀಡಿಯಾದವರು, ಆಹಾರದ ಬಗ್ಗೆ, ಪ್ರಶಂಸೆಮಾಡಿದ್ದಾರೆ. ದಕ್ಷಿಣ ಕನ್ನಡಿಗರು, ಊಟೋಪಚಾರಗಳಿಗೆ ಹಿಂದಿನಿಂದಲೂ ಮುಂಚೂಣಿಯಲ್ಲಿರುವ ಹೋಟೆಲ್. ಮುಂಬಯಿ ನ ೯೦% ಗಿಂತ ಹೆಚ್ಚನ ಹೋಟೆಲ್ ರೆಸ್ಟೋರಾಂಟ್ ಗಳು ಕನ್ನಡಿಗರದು. ಅವೆಲ್ಲಾ ಒಂದಲ್ಲಾ ಒಂದು ವಿಧದಲ್ಲಿ ಭಿನ್ನವಾಗಿವೆ. ಎಲ್ಲದರಲ್ಲೂ ಎದ್ದು ಕಾಣುವುದು, ಶುಚಿರುಚಿಯಾದ ಪಕ್ವಾನ್ನ, ಹಾಗೂ ಸಮಾಜದ ಎಲ್ಲಾ ವರ್ಗಗದವರಿಗೂ ಎಟುಕುವ ರೀತಿಯಲ್ಲಿ ದರಗಳನ್ನು ನಿಯಂತ್ರಿಸಿರುವ ಚಾಣಾಕ್ಷತನ, ಹಾಗೂ ಸೇವಾಮನೋಭಾವಗಳು ಯಶಸ್ಸಿನ ಗುಟ್ಟೆಂದು ಮೀಡಿಯಾಗಳ ವರದಿ ತಿಳಿಸುತ್ತದೆ.

ಶಾಖೆಗಳು

[ಬದಲಾಯಿಸಿ]

ಉಪನಗರ, ಜುಹು, ಪುಣೆ, ಹಾಗೂ ಥಾಣೆ, ಹೋಟೆಲ್ ನ ಆಡಳಿತ, ಸಿಬ್ಬಂದಿವರ್ಗಕ್ಕೆ ನೀಡಿದ ತರಬೇತು, ಹಾಗೂ ಅವರೆಲ್ಲರ ಮಾನಸಿಕ ಸಿದ್ಧತೆ, ಮತ್ತು ಪರಿಶ್ರಮ, ಕಾಲಕಾಕಾಲಕ್ಕೆ ಮಾಡುವ ಮಾರ್ಪಾಡು, ಅದಕ್ಕೆ ಹೊಂದಿಕೊಂಡಂತೆ ಅಳವಡಿಸಿದ ಏರ್ಪಾಡುಗಳು ಅತಿ ಮುಖ್ಯ ಪಾತ್ರವನ್ನು ವಹಿಸಿವೆ. ಮುಂಬಯಿ ನಂತಹ ಹೆಚ್ಚು ಜನಸಂದಣಿಯ, ಹಾಗೂ ಅತಿಕಡಿಮೆ ಸ್ಥಳಾವಕಾಶವಿರುವ, ನಗರದಲ್ಲಿ ಹೋಟೆಲ್ ನಡೆಸುತ್ತಿದ್ದಾರೆ. ದಂಗೆ, ಸ್ಟ್ರೈಕ್ ಮುಂತಾದ ಸಮಯದಲ್ಲಿ ಸಾಮಾನ್ಯವಾಗಿ ಹೋಟೆಲ್ ಗಳು ಸುಲಭ ಟಾರ್ಗೆಟ್ ಆಗುವ ಅಪಾಯ ಮೊದಲಿನಿಂದಲೂ ಇದೆ. ಅವರನ್ನೆಲ್ಲಾ ಎದುರಿಸಲು ದೇಹಶಕ್ತಿಯನ್ನು ಹೊಂದಿದ ಸಿಬ್ಬಂದಿಗಳೂ ಇದ್ದಾರೆ. ಮಹೇಶ್ ಲಂಚ್ ಹೋಂ ನ ಶಾಖೆಗಳು, ಮಹೇಶ್ ಲಂಚ್ ಹೋಂ, ಚಾನ್ಸರಿ ಪೆವಿಲಿಯನ್ ಪಕ್ಕ, ರೆಸಿಡೆನ್ಸಿ ರಸ್ತೆ.ಬೆಂಗಳೂರು []ಸೆಲೆಬ್ರಿಟಿಗಳ ಲಂಚ್ ಹೋಂ, ಕೆ.ಎಂ.ಸತೀಶ್ ಬೆಳ್ಳಕ್ಕಿ, ಶನಿವಾರ,ಪ್ರಜಾವಾಣಿ, 12/15/2012</ref> ಮತ್ತು ಡುಬೈ ನಗರದಲ್ಲಿ ಸ್ಥಾಪಿಸಲ್ಪಟ್ಟಿದೆ.

ಪ್ರಶಸ್ತಿ

[ಬದಲಾಯಿಸಿ]
  • ೨೦೧೬ ರ ಸಾಲಿನ ಪ್ರತಿಷ್ಠಿತ ಟೈಮ್ಸ್ ಫುಡ್ ಪ್ರಶಸ್ತಿ[][]

ಉಲ್ಲೇಖಗಳು

[ಬದಲಾಯಿಸಿ]
  1. Mahesh lunch home, Sea food specials
  2. MSN Travel
  3. ಪ್ರಜಾವಾಣಿ,ಶನಿವಾರ,08/10/2013,'ನಾಲಗೆಯ ಮೊಗ್ಗು ಅರಳಿಸುವ ಮೀನಿನೂಟ'-ಕೆ.ಎಂ.ಸತೀಶ್ ಬೆಳ್ಳಕ್ಕಿ
  4. 'ಕರ್ನಾಟಕ ಮಲ್ಲ ಪ್ಲಸ್', ಮುಂಬಯಿ,ಪುಟ-೧, ೧೯-೦೩-೨೦೧೬,೨೦೧೬ ರ ಸಾಲಿನ ಪ್ರತಿಷ್ಠಿತ ಟೈಮ್ಸ್ ಫುಡ್ ಅವಾರ್ಡ್ ನ್ನು ಮಹೇಶ್ ಲಂಚ್ ಹೋಮ್ ಗಳಿಸಿದೆ
  5. facebook.com,/MaheshLunchHome,Sea food restaurant