ಮಹೇಶ್ವರಪ್ಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಪ್ರೊ. ಮಹೇಶ್ವರಪ್ಪ ನವರು ವಿಶ್ರಾಂತ ಪ್ರಾಧ್ಯಾಪಕರು , ಮೈಸೂರು ಮಾನಸ ಗಂಗೋತ್ರಿಯಲ್ಲಿ ೧೯೬೭ರಿಂ೧೯೭೦ರ ವರೆಗೆ ಸಹಾಯಕ ಭಾಷಾಂತರಕಾರರಾಗಿ ಕಾರ್ಯನಿರ್ವಹಿಸಿದವರು . ಅವರು ಸಾಹಿತ್ಯ ಕ್ಷೇತ್ರದಲ್ಲಿಯೂ , ಸಲ್ಲಿಸಿರುವ ಸೇವೆ ಗಣನೀಯ .ಅವರ ಹುಟ್ಟೂರು (೫-೬-೧೯೩೪)ಗರುಗದಹಳ್ಳಿ , ಕಡೂರುತಾಲ್ಲೋಕು, ಚಿಕ್ಕಮಗಳೂರು ಜಿಲ್ಲೆ ಸದ್ಯದಲ್ಲಿ ಚಿತ್ರದುರ್ಗ ನಗರದಲ್ಲಿ ವಾಸಿಸುತ್ತಿದ್ದಾರೆ .

ಅವರ ಕೃತಿಗಳು: ಭಾಷಾಂತರ ಪ್ರವೇಶಿಕೆ (ಭಾಷಾಂತರಕಾರರಿಗೆ ಅತ್ಯಂತ ಉಪಯುಕ್ತ ಮಾರ್ಗದರ್ಶಿ ಕೃತಿ), ಟ್ರೆಷರ್ ಐಲ್ಯಾಂಡ್ ( ಆರ್.ಎಲ್. ಸ್ಟೀವನ್ ಸನ್ ಕೃತ ಕಾದಂಬರಿ ಸಂಕ್ಷಿಪ್ತ ಕನ್ನಡಾನುವಾದ, ಮಿತ್ರರ ಸಹಕಾರದೊಡನೆ ),ಭಾವ ಬಿಂದು (ಪ್ರಬಂಧ ಸಂಕಲನ),ಚಿಂತನವಲ್ಲರಿ ( ಆಕಾಶವಾಣಿಯ ನಲ್ನುಡಿಗಳ ಸಂಗ್ರ್ತಹ),ಹಳೆ ಬೇರು ಹೊಸ ಚಿಗುರು(ಕವನಸಂಕಲನ), ಸಾಮಾಜಿಕ ಒಡಂಬಡಿಕೆ (ಜೆ.ಜೆ ರೂಸೋನ ಸೋಶಿಯಲ್ ಕಾಂಟ್ರ್ಯಾಕ್ಟ್'ನ ಅನುವಾದ), ಭಾರತದಲ್ಲಿ ವಿವಾಹ ಮತ್ತು ಕುಟುಂಬ ಪದ್ದತಿ(ಮ್ಯಾರೆಜ್ ಅಂಡ್ ಫ್ಯಾಮಿಲಿ ಇನ್ ಇಂಡಿಯಾ ದ ಕನ್ನಡ ಅನುವಾದ, ಮೂಲ ,ಕೆ.ಎಮ್. ಕಪಾಡಿಯ ), ಆಧುನಿಕ ಸಂವಿಧಾನಗಳು( ಕೆ ಸಿ. ವೀಯರ್ ನ ಮಾಡ್ರನ್ ಕಾನ್ಶ್ಟಿಟ್ಯೂಷನ್ಸ ನ ಅನುವಾದ ),ತಾಯಿಯ ಹಾಲಿನ ಮಹತ್ವ (ಬ್ರೆಷ್ಟ್ ಫೀಡೀಂಗ್ ನ ಅನುವಾದ,ಮೂಲ ಯುನೆಸ್ಕೋ ಪ್ರಕಟನೆ ).

ಇವಲ್ಲದೆ ಬಿ. ಶಿವಮೂರ್ತಿ ಶಾಸ್ತ್ರಿಗಳ ಷಷ್ಟಬ್ಧಿ ಗ್ರಂಥ, ಜಿ.ಎಸ್ ಶಿವರುದ್ರಪ್ಪನವರ ೭೫ನೇ ಜನ್ಮ ದಿನೋತ್ಸವದ ನೆನಪಿನ ಕೃತಿ 'ಹಣತೆ' , ಎಸ್.ವಿ. ಪರಮೇಶ್ವರ ಭಟ್ಟರ ವ್ಯಕ್ತಿ,ಅಭಿವ್ಯಕ್ತಿ (ಕಮಗೋಡು ನರಸಿಂಹ ಶಾಸ್ತ್ರಿಯವರ ನೆನಪಿನ ಕೃತಿ) ,ಇವುಗಳಲ್ಲಿ ವಿಶೇಷ ಲೇಖನ .

ಚಿತ್ರದುರ್ಗ ಆಕಾಶವಾಣಿ ಕೇಳುಗರ ಒಕ್ಕೂಟದ ಅಧ್ಯಕ್ಷರಾಗಿ ನಾಲ್ಕುವರ್ಷ ಕಾರ್ಯ ನಿರ್ವಹಣೆ .೧೫ ವರ್ಷಗಳಿಂದ ನಿಯತ ಕಾಲಿಕಗಳಲ್ಲಿ ಸತತ ಲೇಖನ ; ಆಕಾಶವಾಣಿಯಲ್ಲಿ ಕಾರ್ಯಕ್ರಮಗಳು .ಕಳೆದ ಮುವ್ವತ್ತು ವರ್ಷಗಳಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ,ಚಿತ್ರದುರ್ಗ ದಲ್ಲಿ ನಡೆಯುವ ಅಧಿಕಾರಿಗಳಿಗೆ ,ನೌಕರರಿಗೆ ' ಆಡಳಿತದಲ್ಲಿ ಕನ್ನಡ 'ತರಬೇತಿ ಶಿಬಿರದ ನಿರ್ದೇಶಕರು .

೨೦೦೧ ರಲ್ಲಿ ಕಡೂರಿನಲ್ಲಿ ನಡೆದ ಪ್ರಥಮ ತಾಲ್ಲೋಕು ಕನ್ನಡ ಸಾಹಿತ್ಯ ಸಮ್ಮೇಳನದ ಶಾಸನ ಗೋಷ್ಟಿಯ ಅಧ್ಯಕ್ಷತೆ .