ಮಹಿಳಾ ಆತ್ಮ ರಕ್ಷಾ ಸಮಿತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಹಿಳಾ ಆತ್ಮ ರಕ್ಷಾ ಸಮಿತಿ ('ವುಮೆನ್ಸ್ ಸೆಲ್ಫ್ ಡಿಫೆನ್ಸ್ ಅಸೋಸಿಯೇಷನ್, ಸಂಕ್ಷಿಪ್ತವಾಗಿ ಎಮ್ ಎ ಆರ್ ಎಸ್) ಭಾರತದ ಬಂಗಾಳದಲ್ಲಿ ನೆಡೆದ ಮಹಿಳಾ ಚಳುವಳಿಯಾಗಿತ್ತು.[೧] ಮಾರ್ಸ್ ಭಾರತೀಯ ಕಮ್ಯುನಿಸ್ಟ್ ಪಕ್ಷದೊಂದಿಗೆ ಸಂಪರ್ಕ ಹೊಂದಿದ ಸಾಮೂಹಿಕ ಸಂಘಟನೆಯಾಗಿದೆ.[೨]

ಸ್ಥಾಪನೆ[ಬದಲಾಯಿಸಿ]

ಎಮ್ ಎ ಆರ್ ಎಸ್ ಅನ್ನು ೧೯೪೨ರಲ್ಲಿ, ಎರಡನೆಯ ಮಹಾಯುದ್ಧದ ಮಧ್ಯದಲ್ಲಿ ಮತ್ತು ಮಹಾ ಬಂಗಾಳದ ಬರಗಾಲದ ಸಮಯದಲ್ಲಿ ಸ್ಥಾಪಿಸಲಾಯಿತು.[೩] ಕಲ್ಕತ್ತಾವು ಹಳ್ಳಿಗಾಡಿನ ಭಾಗದಲ್ಲಿ ಕ್ಷಾಮದಿಂದ ಓಡಿಹೋಗುವ, ಲೈಂಗಿಕ ಶೋಷಣೆಗೆ ಬಲಿಯಾಗುತ್ತಿದೆ (ಸೇನಾ ಶಿಬಿರಗಳಿಗೆ ಕಳುಹಿಸಲಾಗಗುತ್ತಿತ್ತು ಅಥವಾ ನಗರದಲ್ಲಿ ವೇಶ್ಯಾವಾಟಿಕೆಗೆ ಬಲವಂತವಾಗಿ ಕಳುಹಿಸಲಾಲಾಗಗುತ್ತಿತ್ತು)ಮಹಿಳೆಯರಿಂದ ತುಂಬಿತ್ತು. ಕಲ್ಕತ್ತಾದ ವೇಶ್ಯಾಗೃಹಗಳಲ್ಲಿ ಮಹಿಳೆಯರ ಸಂಖ್ಯೆ ದ್ವಿಗುಣಗೊಂಡಿತು. ಅಮೆರಿಕದ ಸೈನಿಕರಿಂದ ಸ್ಥಳೀಯ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಅಥವಾ ಅಪಹರಣದ ಘಟನೆಗಳು ನಡೆಯುತ್ತಿದ್ದವು. ಈ ಬೆಳವಣಿಗೆಗಳಿಗೆ ಪ್ರತಿಕ್ರಿಯೆಯಾಗಿ, ಕಮ್ಯುನಿಸ್ಟ್ ಮಹಿಳೆಯರ ಗುಂಪು ಎಮ್ ಎ ಆರ್ ಎಸ್ ಅನ್ನು ಆಯೋಜಿಸಿತು. ಎಮ್ ಎ ಆರ್ ಎಸ್ ತನ್ನ ಮೂಲವನ್ನು ಕಾಂಗ್ರೆಸ್ ಮಹಿಳಾ ಸಂಘದಲ್ಲಿ ಹೊಂದಿದ್ದು, ೧೯೩೯ ರಲ್ಲಿ ಕಲ್ಕತ್ತಾದಲ್ಲಿ ಜಪಾನಿನ ಬಂಗಾಳದ ಆಕ್ರಮಣದ ವಿರುದ್ಧ ರಕ್ಷಣೆಗಾಗಿ ತಯಾರಿ ಮಾಡುವ ಉದ್ದೇಶದಿಂದ ರೂಪುಗೊಂಡಿತು. ೧೯೪೧ ರಲ್ಲಿ ಈ ಗುಂಪನ್ನು ಕಮ್ಯುನಿಸ್ಟ್ ಮಹಿಳೆಯರು ಸೇರಿಕೊಂಡರು, ಕೆಲವರು ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾದರು.

ನಾಯಕತ್ವ[ಬದಲಾಯಿಸಿ]

ರಾಣಿ ಮಿತ್ರ ದಾಸ್‌ಗುಪ್ತ, ಮಣಿಕುಂತಲ ಸೇನ್ ಮತ್ತು ರೇಣು ಚಕ್ರವರ್ತಿ ಅವರು ಎಮ್ ಎ ಆರ್ ಎಸ್ ನ ಪ್ರಮುಖ ನಾಯಕರಾಗಿದ್ದರು. ಆದರೆ ಸಂಘಟನೆಯು ರಾಣಿ ಮಹಲನೋಬಿಸ್ ( ಪ್ರಶಾಂತ ಚಂದ್ರ ಮಹಲನೋಬಿಸ್ ಅವರ ಪತ್ನಿ) ಮತ್ತು ಲೀಲಾ ಮಜುಂದಾರ್ ಅವರಂತಹ ಪ್ರಮುಖ ಕಮ್ಯುನಿಸ್ಟ್ ಅಲ್ಲದ, ಉದಾರವಾದಿ ಮಹಿಳೆಯರನ್ನು ಒಟ್ಟುಗೂಡಿಸಿತು. ಮಹಾಲನೋಬಿಸ್ ಅವರು ಎಮ್ ಎ ಆರ್ ಎಸ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.[೪]

ಆರಂಭಿಕ ಹೋರಾಟಗಳು[ಬದಲಾಯಿಸಿ]

ಎಮ್ ಎ ಆರ್ ಎಸ್ ಭಾರತೀಯ ಸ್ವಾತಂತ್ರ್ಯ ಹೋರಾಟವನ್ನು ಬೆಂಬಲಿಸಿತು. ಮಹಿಳೆಯರಿಗೆ ಆತ್ಮರಕ್ಷಣೆಗಾಗಿ ಸೂಚನೆ ನೀಡಿತು, ಫ್ಯಾಸಿಸಂ ವಿರುದ್ಧ ಎಚ್ಚರಿಕೆ ನೀಡಿತು, ರಾಜಕೀಯ ಕೈದಿಗಳ ಬಿಡುಗಡೆಗೆ ಒತ್ತಾಯಿಸಿತು ಮತ್ತು ಹಸಿವಿನಿಂದ ಜನಸಂಖ್ಯೆಯನ್ನು ರಕ್ಷಿಸಲು ಪ್ರಯತ್ನಿಸಿತು. ಸಂಸ್ಥೆಯು ಕ್ಷಾಮ ಪೀಡಿತ ಸಮುದಾಯಗಳಿಗೆ ಪರಿಹಾರ ಚಟುವಟಿಕೆಗಳನ್ನು ಸಜ್ಜುಗೊಳಿಸಿತು. ೧೭ನೇ ಮಾರ್ಚ್ ೧೯೪೩ ರಂದು, ಆಹಾರ ಪದಾರ್ಥಗಳ ಮೇಲಿನ ಬೆಲೆ ಏರಿಕೆಯನ್ನು ವಿರೋಧಿಸಿ ಎಮ್ ಎ ಆರ್ ಎಸ್, ೫,೦೦೦ ಮಹಿಳೆಯರನ್ನು ಬಂಗಾಳ ಶಾಸನಸಭೆಗೆ ಮೆರವಣಿಗೆ ಮಾಡಲು ಸಜ್ಜುಗೊಳಿಸಿತು. ಕಲ್ಕತ್ತಾದ ಮೆರವಣಿಗೆಯ ನಂತರ ದಿನಾಜ್‌ಪುರ, ಚಿತ್ತಗಾಂಗ್, ಮಿಡ್ನಾಪುರ, ಬದರ್‌ಗಂಜ್, ಮದರಿಪುರ, ಪಬ್ನಾ ಮತ್ತು ಬಂಕುರಾಗಳಲ್ಲಿ ಉಪವಾಸ ಮೆರವಣಿಗೆಗಳು ನಡೆದವು . ಎಮ್ ಎ ಆರ್ ಎಸ್ ತನ್ನ ಮೊದಲ ಸಮ್ಮೇಳನವನ್ನು ಏಪ್ರಿಲ್ ೧೯೪೩ ರಲ್ಲಿ ನಡೆಸಿತು. ಇದರ ಅಧ್ಯಕ್ಷತೆಯನ್ನು ಮೋಹಿನಿ ದೇವಿ ವಹಿಸಿದ್ದರು ಮತ್ತು ಎಲಾ ರೀಡ್ ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು.

ಬಂಗಾಳದ ಪ್ರತಿ ಜಿಲ್ಲೆಯಲ್ಲೂ ಎಮ್ ಎ ಆರ್ ಎಸ್ ಶಾಖೆಗಳನ್ನು ಸ್ಥಾಪಿಸಲಾಯಿತು ಮತ್ತು ಅವರು ಪ್ರಾಂತ್ಯದಾದ್ಯಂತ ಪ್ರತಿಭಟನೆಗಳನ್ನು ಸಜ್ಜುಗೊಳಿಸಲಾಯಿತು. ೧೯೪೪ರ ಹೊತ್ತಿಗೆ ಆಂದೋಲನವು ೪೩,೫೦೦ ಸದಸ್ಯರನ್ನು ಹೊಂದಿತ್ತು. ಎಮ್ ಎ ಆರ್ ಎಸ್ ನಂತರದ ದಿನಗಳಲ್ಲಿ ತೇಭಾಗ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. "ತೇಭಾಗ ಆಂದೋಲನ ಜೋಡಿ ಪ್ರದೀಪ್ ಹೋಯೆ ತಾಹೊಳೆ ಎಮ್ ಎ ಆರ್ ಎಸ್ ಹೋಲೋ ಶೋಲ್ತೆ ಪಕಾನೋ" (ತೇಭಾಗ ಚಳುವಳಿ ದೀಪವಾಗಿದ್ದರೆ, ಮಹಿಳಾ ಆತ್ಮರಕ್ಷಾ ಸಮಿತಿ (ಎಮ್ ಎ ಆರ್ ಎಸ್ ) ಬತ್ತಿಯ ಉರುಳುವಿಕೆಯನ್ನು ಪ್ರತಿನಿಧಿಸುತ್ತದೆ). "ತೇಭಾಗ ಪ್ರಾರಂಭವಾಗುವ ಹೊತ್ತಿಗೆ, ರೈತ ಹೋರಾಟದಲ್ಲಿ ಭಾಗವಹಿಸಲು ಬಂಗಾಳದ ನಗರ ಮತ್ತು ಗ್ರಾಮೀಣ ಮಹಿಳೆಯರಿಬ್ಬರನ್ನೂ ಸಿದ್ಧಪಡಿಸಿದ ನಿರ್ಣಾಯಕ ಅಂಶವು ಕೆಲಸ ಮಾಡಿತು. ಇದು ೧೯೪೨ ರಿಂದ, ಎಮ್ ಎ ಆರ್ ಎಸ್ ನಿಂದ ಸಂಘಟಿತವಾದ ಮಹಿಳಾ ಚಳುವಳಿಯಲ್ಲಿ ಜಂಟಿ ರಾಜಕೀಯ ಕೆಲಸದ ಅನುಭವವಾಗಿದೆ. ೧೯೪೩ರ ಬಂಗಾಳ ಕ್ಷಾಮದ ಸಮಯದಲ್ಲಿ ಮತ್ತು ನಂತರದ ಪರಿಹಾರ ಕಾರ್ಯ ಮತ್ತು ರಾಜಕೀಯ ಮೆರವಣಿಗೆಗಳಲ್ಲಿ ವಿನಾಶಗೊಂಡ ಗ್ರಾಮೀಣ ಜನರೊಂದಿಗೆ ನಗರ ಎಮ್ ಎ ಆರ್ ಎಸ್ ಮತ್ತು ಕಮ್ಯುನಿಸ್ಟ್ ಪಾರ್ಟಿ (ಸಿಪಿ) ಕಾರ್ಯಕರ್ತರ ನಿರಂತರ ಸಂವಾದವಾಗುತ್ತದೆ. ತೆಭಾಗಾದಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರಿಲ್ಲದಿದ್ದರೂ, ೧೯೩೭ರ ವೇಳೆಗೆ ರೈತ ಮಹಿಳೆಯರು ಈಗಾಗಲೇ ರಾಜಕೀಯವಾಗಿ ಸಕ್ರಿಯರಾಗಿದ್ದ ಟಂಕಾ, ಹತ್ತೋಲಾ ಮತ್ತು ಅಡಿಯಾರ್‌ನಂತಹ ಪೂರ್ವದ ಕೃಷಿ ಚಳುವಳಿಗಳಲ್ಲಿ ಸಕ್ರಿಯರಾಗಿದ್ದರು.

ವಿಭಜನೆಯ ನಂತರ[ಬದಲಾಯಿಸಿ]

೧೯೪೭ರಲ್ಲಿ, ಸಂಸ್ಥೆಯ ಹೆಸರನ್ನು ಪಶ್ಚಿಮ ಬಂಘಾ ಮಹಿಳಾ ಆತ್ಮ ರಕ್ಷಾ ಸಮತಿ ಎಂದು ಬದಲಾಯಿಸಲಾಯಿತು (ಬೆಂಗಾಲ್ ವುಮೆನ್ಸ್ ಸೆಲ್ಫ್ ಡಿಫೆನ್ಸ್ ಅಸೋಸಿಯೇಷನ್'). ೨೭ನೇ ಏಪ್ರಿಲ್ ೧೯೪೯ ರಂದು ಎಮ್ ಎ ಆರ್ ಎಸ್ ರಾಜಕೀಯ ಕೈದಿಗಳ ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸಲು ಕಲ್ಕತ್ತಾದಲ್ಲಿ ಪಾದಯಾತ್ರೆಯನ್ನು ಆಯೋಜಿಸಿತು. ಬೌಬಜಾರ್‌ನಲ್ಲಿ ನಡೆದ ಪ್ರತಿಭಟನೆಯ ಮೇಲೆ ಪೊಲೀಸರು ಗುಂಡು ಹಾರಿಸಿದ ಪರಿಣಾಮ ಆರು ಜನರು ತಿರಿಹೋದರು.

ಏಪ್ರಿಲ್ ೧೯೫೪ ರ ಹೊತ್ತಿಗೆ ಎಮ್ ಎ ಆರ್ ಎಸ್ ೧೮೦೦೦ ಸದಸ್ಯತ್ವವನ್ನು ಪಡೆದುಕೊಂಡಿತು. ಅವರಲ್ಲಿ ಬಹುಪಾಲು ರೈತರು ಅಥವಾ ಸೆಣಬಿನ ಗಿರಣಿಗಳಲ್ಲಿ ಕೆಲಸ ಮಾಡುತ್ತಿದ್ದರು. ಎರಡು ತಿಂಗಳ ನಂತರ ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟದ ಸ್ಥಾಪನೆಗೆ ಎಮ್ ಎ ಆರ್ ಎಸ್ ಉಪಕ್ರಮವನ್ನು ತೆಗೆದುಕೊಂಡಿತು.[೫]

ಉಲ್ಲೇಖಗಳು[ಬದಲಾಯಿಸಿ]