ಮಹಾಲಿಂಗೇಶ್ವರ ನಾಲ್ಕಾರು, ಕೊಕ್ಕರ್ಣೆ
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಸೂರಾಲು (ಕೊಕ್ಕರ್ಣೆ).[೧] ಈ ದೇವಾಸ್ಥಾನವು ೧೫೦೦ ವರ್ಷಕ್ಕೂ ಹೆಚ್ಚು ಹಳೆಯದಾಗಿದೆ.[೨] ಭಾರತದ ಹಲವು ದೇವಾಲಯಗಳು ಕಲ್ಲಿನಿಂದಲೇ ಮಾಡಲ್ಪಟ್ಟಿವೆ. ಹಾಗೆಯೇ ಈ ದೇವಾಲಯವು ಕೂಡ ಕಲ್ಲಿನಿಂದಲೇ ನಿರ್ಮಿಸಿದ್ದಾರೆ. ಅಲ್ಲಿಯ ಕಂಬಗಳ ಕೆತ್ತನೆಯು ಕೂಡ ವಿಶೇಷವಾಗಿ ಕೆತ್ತಲಾಗಿದೆ. ಇಲ್ಲಿಯ ವಿಶೇಷತೆಯೇನೆಂದರೆ ಗೋಪುರದಲ್ಲಿ ಒಂದೇ ಕಲ್ಲಿನಲ್ಲಿ ಎರಡು ಉಂಗುರಗಳು ಒಂದರೊಳಗೆ ಇನ್ನೊಂದು ಇರುವುದನ್ನು ನಾವು ನೋಡಬಹುದು. ನಂಬಲಾಗದ ಕಲ್ಲಿನ ಕೆತ್ತನೆಗಳು ಮತ್ತು ಕಲ್ಲಿನ ಉಂಗುರಗಳು, ಪರಸ್ಪರ ಜೋಡಿಸಲ್ಪಟ್ಟಿದ್ದು ಮತ್ತು ಚಲಿಸುತ್ತದೆ. ಒಟ್ಟಾಗಿ ನೋಡುಗರ ಮನಸ್ಸಿಗೆ ಚಕಿತಗೊಳಿಸುವಂತಹ ವಾಸ್ತುಶಿಲ್ಪವನ್ನು ಈ ದೇವಾಲಯವು ಹೊಂದಿದೆ. ದೇವಾಲಯದಿಂದ ಕೆಲವೇ ಗಜಗಳಷ್ಟು ದೂರದಲ್ಲಿ ಹಳೆಯ ಅರಮನೆಯಿದೆ. ಈ ಅರಮನೆಯ ರಾಜರು ಈ ದೇವಸ್ಥಾನವನ್ನು ನಿರ್ಮಿಸಿದ್ದಾರೆ. ಹಾಗೇ ದೇವಸ್ಥಾನದ ಎದುರುಗಡೆ, ಇದಕ್ಕೆ ಸಂಬಂಧಪಟ್ಟಂತಹ ಶಾಸನಗಳನ್ನು ಶಿಲೆಯಲ್ಲಿ, ಹಳೆಗನ್ನಡ ಶೈಲಿಯಲ್ಲಿ ಕೆತ್ತಲಾಗಿದೆ. ಇದು ಪುರಾತನ ಕೆತ್ತನೆಯಾಗಿದೆ. ಈಗಲೂ ಈ ದೇವಾಲಯವನ್ನು, ಅರಮನೆಯ ರಾಜವಂಶದವರು ಇದರ ಆಡಳಿತವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಇಲ್ಲಿ ಪ್ರತಿವರ್ಷಕ್ಕೊಮ್ಮೆ ಮಾರ್ಚ್/ ಎಪ್ರಿಲ್‌ನಲ್ಲಿ ದೇವಾಲಯದ ಜಾತ್ರೆಯನ್ನು ವಿಜೃಂಭಣೆಯಿಂದ ನಡೆಸಲಾಗುತ್ತದೆ. ಇಲ್ಲಿ ಪೂಜಿಸುವ ದೇವರು ಶಿವನಾಗಿದ್ದು, ದೇವಿಯ ಸಣ್ಣದೇವಾಲಯವು ಇದೆ. ಈ ದೇವಸ್ಥಾನದ ಇತಿಹಾಸಕ್ಕೆ ಸಂಬಂಧಪಟ್ಟಂತಹ ಪುಸ್ತಕಗಳು ನಶಿಸಿಹೋಗಿವೆ ಮತ್ತು ಇದಕ್ಕೆ ಸಂಬಂಧಪಟ್ಟಂತಹ ವಿಷಯಗಳು ಕಲ್ಲಿನಲ್ಲಿ ಕೆತ್ತಲ್ಪಟ್ಟಿದ್ದು, ಅನೇಕ ಕಾಲದಿಂದ ಗಾಳಿ ಮಳೆಗೆ ತುತ್ತಾಗಿ ಹಾಗೂ ಇದು ಹಳೆಗನ್ನಡ ಶೈಲಿಯಲ್ಲಿರುವುದರಿಂದ ಅನೇಕರಿಗೆ ಸಂಪೂರ್ಣವಾಗಿ ತಿಳಿಯಲು ಸಾಧ್ಯವಾಗಲಿಲ್ಲ.
ಸೂರಾಲು ಅರಮನೆ
[ಬದಲಾಯಿಸಿ]೧೫ನೇ ಶತಮಾನದಲ್ಲಿ ತೋಳಾರ್ ಕುಟುಂಬ( ಜೈನರು) ನಿರ್ಮಿಸಿದರು ಎಂದು ನಂಬಲಾಗಿದೆ.[೩] ಅರಮನೆಯು ಸುಮಾರು ಒಂದು ಎಕರೆಯಷ್ಟು ಆವರಿಸಿದೆ. ಸುಮಾರು ೬೦೦ ವರ್ಷಗಳಿಂದ ದೃಡವಾಗಿ ನಿಂತಿರುವ ಮಣ್ಣು ಮತ್ತು ಮರಳಿನಿಂದ ಗೋಡೆಗಳನ್ನು ನಿರ್ಮಿಸಲಾಗಿದೆ. ಸೂರಾಲು ಉಡುಪಿ ನಗರದಿಂದ ಸುಮಾರು ೩೦ ಕಿಮೀ ದೂರದಲ್ಲಿದೆ. ಈ ಸ್ಥಳವು ಹಿಂದೂ- ಜೈನ ಸಾಂಸ್ಕೃತಿಕ ಶ್ರೇಣಿಯಿಂದ ಪಡೆದ ವಾಸ್ತುವಿನ ಮಿಶ್ರಣವನ್ನು ಹೊಂದಿದೆ. ಇದು ಆ ಕಾಲದ ಪ್ರಾದೇಶಿಕ ಶಿಲ್ಪಗಳು ಮತ್ತು ವಾಸ್ತುವನ್ನು ಸಹ ಚಿತ್ರಿಸುತ್ತದೆ. ಇದನ್ನು ಮಣ್ಣು ಮತ್ತು ಮರವನ್ನು ಬಳಸಿ ನಿರ್ಮಿಸಲಾಗಿದೆ. ಮುಂಭಾಗದ ಭಾಗವನ್ನು ಹೊರತುಪಡಿಸಿ ಅಡಿಪಾಯವಿಲ್ಲದೇ ರಚನೆಯನ್ನು ನಿರ್ಮಿಸಿರುವುದರಿಂದ ಇದು ಪ್ರಾಚೀನ ಜನರ ಕೌಶಲ್ಯಗಳಿಗೆ ಸಾಕ್ಷಿಯಾಗಿದೆ. ಆಶ್ಚರ್ಯಕರವಾಗಿ, ಅರಮನೆಗೆ ಯಾವುದೇ ಅಡಿಪಾಯವಿಲ್ಲ. ಮರದ ಕಂಬಗಳು ಛಾವಣಿಯನ್ನು ಬೆಂಬಲಿಸುತ್ತದೆ ಮತ್ತು ಮರದ ತುಂಡುಗಳನ್ನು ಪರಸ್ಪರ ಸಂಪರ್ಕಿಸಲು ಪುರಾತನ ಇಂಟರ್ಲಾಕ್ ವ್ಯವಸ್ಥೆಯನ್ನು ಬಳಸಲಾಗಿದೆ. ಸೂರಾಲಿನ ಅರಮನೆಯ ಬಳಿ ಇರುವುದೇ ಈ ಮಹಾಲಿಂಗೇಶ್ವರ ದೇವಾಸ್ಥಾನ. ಈ ದೇವಾಲಯವು ಅರಮನೆಯ ರಾಜರಿಗೆ ಸಂಬಂಧಪಟ್ಟದು.[೪] ಅರಸರು ದೇವಸ್ಥಾನದ ಮೂಕ್ತೇಸರು ಆಗಿದ್ದರು. ಉತ್ಸವದ ಸಮಯದಲ್ಲಿ ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಕೊಡೆ ಹಿಡಿದುಕೊಂಡು ದೇವಾಸ್ಥಾನಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಕುಕ್ಕೆಹಳ್ಳಿ ಮಹಾಲಿಂಗೇಶ್ವರ ದೇವಾಸ್ಥಾನ, ಸೂರಾಲು ಮಹಾಲಿಂಗೇಶ್ವರ ದೇವಾಸ್ಥಾನ, ಶಿರೂರು(ಮುದ್ದು ಮನೆ) ಮಹಾಲಿಂಗೇಶ್ವರ ದೇವಾಸ್ಥಾನ ಈ ಮೂರು ದೇವಾಸ್ಥಾನ ಒಬ್ಬನೆ ರಕ್ಕಸ ಪ್ರತಿಷ್ಠಾಪನೆ ಮಾಡಿದ ಕ್ಷೇತ್ರ.ಸೂರಾಲು ಅರಮನೆಯ ರಾಜರು ಪೆರ್ಡೂರು ಅನಂತ ಪದ್ಮನಾಭ ದೇವಾಸ್ಥಾನಕ್ಕೆ ಸ್ವರ್ಣದ ಕವಚ ಮಾಡಿದ್ದರು. ಕೊಕ್ಕರ್ಣೆಯಲ್ಲಿ ಇರುವ ಮೊಗವೀರ ಪೇಟೆ ಸೂರಾಲು ಅರಮನೆಗೆ ಸಂಬಂಧಪಟ್ಟದ್ದು. ಕಾಲಭೈರವ ಕೆಂಪ್ಪಣ್ಣನಾಗಿ ಅರಮನೆಯಲ್ಲಿ ಆಶ್ರಯ ಪಡೆದಿದ್ದರು. ಭೂತಗಳೆಲ್ಲ ದಾಳಿ ಮಾಡಿದಾಗ ಕೆಂಪ್ಪಣ್ಣ ತನ್ನ ನಿಜ ಸ್ವರೂಪವನ್ನು ತೋರಿಸುತ್ತಾನೆ.
ಹೋಗುವ ಮಾರ್ಗ
[ಬದಲಾಯಿಸಿ]ದೇವಾಲಯವು ಉಡುಪಿಯಿಂದ ೨೮ ಕಿಮೀ ದೂರವಿದೆ. ಉಡುಪಿ ಜಿಲ್ಲೆಯ ಕೊಕ್ಕರ್ಣೆ ಗ್ರಾಮದಲ್ಲಿರುವ ಸೂರಾಲು ಎಂಬ ಹಳ್ಳಿಯಲ್ಲಿದೆ. ಬಸ್ ಮೂಲಕ ಸಾಗಿ ದೇವಾಸ್ಥಾನ ನೋಡಲು ಬಯಸುವವರು ಉಡುಪಿಯ ಸರ್ವೀಸ್ ಬಸ್ ನಿಲ್ದಾಣದಲ್ಲಿ ನಿಗದಿತ ಬಸ್‌ಗಳಿವೆ.ಸಂಜೆ ಮೇಲೆ ಬಸ್ ಇರುವುದು ಸ್ವಲ್ಪ ಕಡಿಮೆ. ಬಾರಕೂರಿನಿಂದ ಸಹ ಹೋಗಬಹುದು.
ಉಲ್ಲೇಖಗಳು
[ಬದಲಾಯಿಸಿ]