ವಿಷಯಕ್ಕೆ ಹೋಗು

ಮಹಾಮೇರು ಪಂಚಮುಖಿ ಗಣೇಶ ದೇವಸ್ಥಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಹಾಮೇರು ಪಂಚಮುಖಿ ಗಣೇಶ ದೇವಸ್ಥಾನವು ಕರ್ನಾಟಕದ ಬೆಂಗಳೂರು ಜಿಲ್ಲೆಯ ಕೆಂಗೇರಿಯಲ್ಲಿರುವ ಪ್ರಸಿದ್ಧ ಹಿಂದೂ ದೇವಾಲಯವಾಗಿದೆ.[೧][೨] ಈ ದೇವಾಲಯವು ತನ್ನ ಛಾವಣಿಯ ಮೇಲಿರುವ ಪಂಚಮುಖಿ ಗಣೇಶನ ಪ್ರತಿಮೆಗೆ ಹೆಸರುವಾಸಿಯಾಗಿದೆ. ದೇವಾಲಯವು ಕೆಂಗೇರಿ ಬಸ್ಸು ನಿಲ್ದಾಣದಿಂದ ಕೇವಲ ಎರಡು ಕಿ.ಮೀ ದೂರದಲ್ಲಿದೆ.[೩]

ವಾಸ್ತುಶಿಲ್ಪ[ಬದಲಾಯಿಸಿ]

ಈ ದೇವಾಲಯದ ಚಾವಣಿಯ ಮೇಲೆ ೩೦ ಅಡಿ ಎತ್ತರವಿರುವ ಚಿನ್ನದ ಬಣ್ಣದ ಪಂಚಮುಖಿ ಗಣೇಶನ ವಿಗ್ರಹವನ್ನು ನಿರ್ಮಿಸಲಾಗಿದೆ. ದೇವಾಲಯದ ಗರ್ಭಗುಡಿಯೊಳಗೆ ೬ ಅಡಿ ಎತ್ತರದ ಪಂಚಮುಖಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ದೇವಾಲಯದ ಒಳಭಾಗವು ಅಮೃತಶಿಲೆಯ ಕಲ್ಲುಗಳಿಂದ ಮಾಡಲ್ಪಟ್ಟಿದೆ. ದೇವಾಲಯದ ಒಳಗೆ ಮತ್ತು ಪ್ರಾಂಗಣದಲ್ಲಿ ನೀರಿನ ಸಣ್ಣ ಕೊಳಗಳಿವೆ.

ದೇವಾಲಯದ ವಿಶೇಷತೆಗಳು[ಬದಲಾಯಿಸಿ]

ಮೇರು ವಿನ್ಯಾಸದಲ್ಲಿ ದೇವಾಲಯವು ರಚಿತವಾಗಿರುವುದರಿಂದ ಇದನ್ನು ಮಹಾಮೇರು ಪಂಚಮುಖ ಗಣೇಶ ದೇವಾಲಯ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇಲ್ಲಿ ಗುರುಗಳ ಆಶ್ರಮವೂ ಸಹ ಇದ್ದು ಆಗಾಗ ಭಜನೆಗಳು ಹಾಗೂ ಪ್ರವಚನಗಳು ನಡೆಯುತ್ತಿರುತ್ತವೆ.[೪] ಇಲ್ಲಿ ಒಟ್ಟು ೩೨ ಗಣೇಶನ ಪ್ರತಿಮೆಗಳಿದ್ದು ಅವು ಗಣೇಶನ ೩೨ ವಿವಿಧ ಅವತಾರದ ರೂಪಗಳನ್ನು ಪ್ರತಿನಿಧಿಸುತ್ತದೆ.

ಹಬ್ಬ/ಉತ್ಸವಗಳು[ಬದಲಾಯಿಸಿ]

ಆಚರಿಸಲಾಗುವ ಮುಖ್ಯ ಹಬ್ಬಗಳೆಂದರೆ, ಗುರು ಪೂರ್ಣಿಮಾ - ಈ ಹಬ್ಬವನ್ನು ಸಾಂಪ್ರದಾಯಿಕವಾಗಿ ಹಿಂದೂಗಳು, ಬೌದ್ಧರು ಮತ್ತು ಜೈನರು ತಮ್ಮ ಶಿಕ್ಷಕರನ್ನು ಪೂಜಿಸಲು ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ. ಹಬ್ಬವನ್ನು ಆಷಾಢಮಾಸ (ಜೂನ್-ಜುಲೈ)ದ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ . ಸಂಕಷ್ಟ ಚತುರ್ಥಿ - ಗಣೇಶನಿಗೆ ಅರ್ಪಿತವಾದ ಶುಭ ದಿನ. ಇದನ್ನು ತಿಂಗಳ ಕೃಷ್ಣ ಪಕ್ಷದ ೪ ನೇ ದಿನದಂದು ಆಚರಿಸಲಾಗುತ್ತದೆ. ಗಣೇಶ ಚತುರ್ಥಿ - ಗಣೇಶನ ಜನ್ಮ ದಿನವನ್ನು ಆಚರಿಸುವ ಹಿಂದೂ ಹಬ್ಬ. ಇದು ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳುಗಳಲ್ಲಿ ಬರುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. https://isharethese.com/panchamukhi-ganesha-temple-kengeri-timings
  2. https://shreeganesh.com/site/temples/2457/panchamukhi-ganesha-temple-bangalore-karnataka-india
  3. https://www.nativeplanet.com/travel-guide/mahameru-panchamukha-ganesha-in-temple-bengaluru-bangalore-002428.html
  4. https://kannada.nativeplanet.com/travel-guide/mahameru-panchamukha-ganesha-temple-5-headed-elephant-god/articlecontent-pf16921-000860.html