ವಿಷಯಕ್ಕೆ ಹೋಗು

ಮಹಾನಂದಿ

ನಿರ್ದೇಶಾಂಕಗಳು: 15°28′14″N 78°37′34″E / 15.47056°N 78.62611°E / 15.47056; 78.62611
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Town
Mahanandi Temple View along Nallamalla hills
Mahanandi Temple View along Nallamalla hills
Location in Andhra Pradesh
Coordinates: 15°28′14″N 78°37′34″E / 15.47056°N 78.62611°E / 15.47056; 78.62611
Country India
Stateಆಂಧ್ರ ಪ್ರದೇಶ
Regionರಾಯಲಸೀಮ
DistrictKurnool
Languages
Time zoneUTC+5:30 (IST)
ZIP Code
518502
Vehicle registrationAP 21
Websitewww.kalagnani.com

ಮಹಾನಂದಿ ಕ್ಷೇತ್ರ ಸರ್ವೇಶ್ವರನು, ಸರ್ವಮಯನು ಅಂದರೇ ವಿಶ್ವದಲ್ಲಿ ಎಲ್ಲೆಲ್ಲಿಯೂ ತುಂಬಿರುವನು, ಹಸುವಿನ ಶರೀರದಲ್ಲಿ ಎಲ್ಲಾ ಭಾಗಗಳಿಂದಲೂ ಹಾಲು ತಯಾರಾಗಿದ್ದರೂ ಕೆಚ್ಚಲಲ್ಲಿ ನಿಂತಿರುವಂತೆ, ಭಗವಂತನೇ ಪುಣ್ಯತೀರ್ಥ ಕ್ಷೇತ್ರಗಳಲ್ಲಿ ಸರ್ವಸಾಮಾನ್ಯ ಜನಗಳು ಸೇವಿಸುವುದಕ್ಕಾಗಿ ನಿಂತಿರುವನು. ಅಂಥಹ ಪುಣ್ಯಕ್ಷೇತ್ರ ತೀರ್ಥಗಳು ಪಾವನವಾದ ಭಾರತ ಭೂಮಿಯಲ್ಲಿ ಲೆಕ್ಕಕ್ಕೆ ಮಿಕ್ಕಿರುವವು ದಕ್ಷಿಣ ಭಾರತದಲ್ಲಿನ ಕರ್ನೂಲು ಜಿಲ್ಲೆಯಲ್ಲಿನ ಶಿವಕ್ಷೇತ್ರಗಳಲ್ಲಿ ಶ್ರೀಶೈಲ ಮತ್ತು ಮಹಾನ್ಂದಿ ಎಂಬಯ್ರಯೆರಡು ಸುಪ್ರಸಿದ್ಧಗಳಾಗಿರುವವು.

ಮಹಾನಂದಿ ಕ್ಷೇತ್ರ ಶ್ರೀಶೈಲದ ದಕ್ಷಿಣ ದ್ವಾರಗಳೊಳಗಿರುವ ಕ್ಷೇತ್ರಗಳಲ್ಲಿ ಒಂದಾಗಿ ತಿಳಿದು ಬರುತ್ತದೆ. ಇದು ನಂದ್ಯಾಲ ತಾಲೂಕಿನ ತಂಬಳಪಲ್ಲೆ ಎಂಬ ಗ್ರಾಮಕ್ಕೆ ಐದು ಮೈಲುಗಳ ದೂರದಲ್ಲಿದೆ. ಇದು ತಿಮ್ಮಾಪುರ ಎಂಬ ಗ್ರಾಮಕ್ಕೆ ಮೂರು ಮೈಲುಗಳ ಮತ್ತು ಗಜುಲಪಲ್ಲೆ ರೈಲ್ವೆ ಸ್ಟೇಷನಿಗೆ ನಾಲ್ಕು ಮೈಲುಗಳ ದೂರದಲ್ಲಿ ಇದೆ. ಈ ಕ್ಷೇತ್ರವನ್ನು ಕುರಿತು ಎರಡು ವಿಧವಾದ ಕಥೆಗಳು ಕೇಳಿಬರುತ್ತಿರುವವು. ಅವುಗಳಲ್ಲಿ ಒಂದು:- ಪೂರ್ವದಲ್ಲಿ ಒಬ್ಬ ಋಷಿಯು ನಲ್ಲಮಲ ಎಂಬ ಪರ್ವತದಲ್ಲಿ ಒಂದು ಕಡೆಯಲ್ಲಿ ಸಣ್ಣ ಆಶ್ರಮದಲ್ಲಿ ಕುಟುಂಬ ಸಮೇತರಾಗಿ ಜೀವಿಸುತಿದ್ದರು. ಆ ಋಷಿಯ ಶಿಲಾಭಕ್ಷನಾಗಿ ಸದಾ ತಪೋಧ್ಯಾವಾಸಕ್ತನಾಗಿ ಇದ್ದನು. ಆ ಕಾರಣದಿಂದಲೇ ಇರಬಹುದು ಆತನಿಗೆ ಶಿಲಾದ ಎಂಬ ಹೆಸರುಬಂದಿತು. ಆತನಿಗೆ ಸಂತಾನವಿಲ್ಲದರಿಂದ ಆತನ ಗೃಹಿಣಿ ಹೇಗಾದರು ಸಂತನವನ್ನು ಪ್ರಸಾದಿಸಬೇಕೆಂದು ಆ ತಪೋದನನ್ನು ಪ್ರಾರ್ಥಿಸಿದಳು. ಆತ ಅದಕ್ಕೆ ಸಂತುಷ್ಟನಾಗಿ ಅರ್ಧಾಂಗಿಯ ಅಭಿಲಾಷೆಯನ್ನು ನೆರವೇರಿಸಲು ನಿಶ್ಚಯ ಮಾಡಿ ಸರ್ವೇಶ್ವರನನ್ನು ಕುರಿತು ನಿಯಮ ನಿಷ್ಠೆಗಳಿಂದ ತಪಸ್ಸು ಮಾಡ ತೊಡಗಿದನು. ಭಗವಂತನಾದ ಶಂಕರನು ಆತನ ತಪಸ್ಸಿಗೆ ಮೆಚ್ಚಿ ಆತನ ಸಮೀಪದಲ್ಲಿಯೇ ಒಂದು ಹುತ್ತವಾಗಿ ವೃದ್ಧಿ ಹೊಂದುತ್ತಲಿದ್ದನು. ಶಿಲಾದನು ಅದನ್ನು ನೋಡಿ ಇದು ಪರಮೇಶ್ವರನ ಮಹಿಮೆಯೇ ಎಂದು ಗ್ರಹಿಸಿ ಸಂತೋಷಿಸುತ್ತಿದ್ದನು.

ಕೆಲವು ದಿನಗಳ ಮೇಲೆ ಶಿಲಾದನಿಗೆ ಶಿವನು ಪ್ರತ್ಯಕ್ಷನಾಗಿ, ಬೇಕಾದ ವರವನ್ನು ಬೇದಡಿಕೋ ಎಂದು ಹೇಳಿದನು ಆಗ ಆ ಶಿಲಾದನು ಅರ್ಧಾಂಗಿಯ ಅಭಿಲಾಷೆಯನ್ನು ಮರೆತು, ತನಗೆ ವಾಂಛನೀಯವಾದ ವಿಷಯವನ್ನು ನೆನೆದು ಸ್ವಾಮಿ, ನನಗೆ ನಿನ್ನ ನಿರಂತರ ಸೇವೆ ಮಾಡುವ ಭಾಗ್ಯವನ್ನು ಪ್ರಸಾದಿಸು, ಎಂದು ಪ್ರಾರ್ಥಿಸಿದನು. ಆಗ ಸರ್ವಜ್ಞನೂ, ಸರ್ವಶಕ್ತನೂ, ಆದ ಸರ್ವೇಶ್ವರನು ಆತನ ವರವನ್ನು ತಿಳಿದು ಅದನ್ನು ಕೂಡ ನೆರವೇರಿಸಲು ಇಚ್ಚಿಸಿ ಮುಗುಳ ನಗೆಯಿಂದ ಭಕ್ತಶೇಖರ ನಿನ್ನ ಇಷ್ಟದಂತೆ ಆಗಲಿ, ಮತ್ತು ನಿನ್ನ ಅರ್ಧಾಂಗಿಯ ಅಭಿಲಾಷೆಯು ಸಿದ್ಧಿಸಲಿ" ಎಂದು ಆಶಿರ್ವಾದಿಸಿ ಅದೃಶ್ಯವಾದನು. ಆ ಕ್ಷಣದಲ್ಲಿಯೇ ಆ ಹುತ್ತದಿಂದ ಒಬ್ಬ ಬಾಲಕ ಉದ್ಬವಿಸಿ ಬಂದು ಶಿಲಾದನ ಎದುರಿನಲ್ಲಿ ನಿಂತನು. ಆಗ ಆ ಋಷಿಯ ಪರಮಾನಂದದಿಂದ ತನ್ನ ಪತ್ನಿಯನ್ನು ಕರೆದು ಆ ಬಾಲಕನನ್ನು ಆ ಸಾದ್ವಿಗೆ ಕೊಟ್ಟನು. ಆ ಋಷಿ ದಂಪತಿಗಳಿಬ್ಬರೂ ಆ ಬಾಲಕನನ್ನು ಎತ್ತಿ ಮುದ್ದಾಡುತ್ತಾ ಮಹಾನಂದದಲ್ಲಿ ಮಗ್ನರಾದರು. ಆ ರೀತಿ ಮಹಾನಂದದಿಂದ ಬಾಲಕನಿಗೆ ಆ ಮಾತ-ಪಿತೃಗಳು "ಮಹಾನಂದ"ನೆಂದು ನಾಮಕರಣ ಮಾಡಿದರು. ಅವನ ಖ್ಯಾತಿ ಜಗಕ್ಕೆ ಸಾರಿತು.

ಮಹಾನಂದಿಯಲ್ಲಿ ಶಿವಲಿಂಗವು

[ಬದಲಾಯಿಸಿ]

೧. ಸ್ವಯಂ ಭೂಲಿಂಗವು:'

ಸಾಮಾನ್ಯವಾಗಿ ಪ್ರಪಂಚದೊಳಗೆ ಲಿಂಗವನ್ನು ಪಾನವಟ್ಟುದಲ್ಲಿ ಸೇರಿಸುವರು. ಆದರೆ ಇಲ್ಲಿನ ಲಿಂಗವನ್ನು ಪರಿಶೀಲಿಸಿ ನೋಡಿದರೆ ಆ ರೀತಿಯಾಗಿ ಅಲ್ಲದೆ ಪಾವನಟವನ್ನೇ ಲಿಂಗದಲ್ಲಿ ಸೇರಿಸಿದಂತೆ ಕಂಡುಬರುತ್ತದೆ. ಗೋವಿನ ಗೊರಸೆಯ ಗುರತು ಕೂಡ ಸ್ಪಷ್ಟವಾಗಿ ಕಂಗೊಳಿಸುವುದು. ಆದ ಕಾರಣ ಈ ಸ್ಥಳದ ಪುರಾಣ ಎಷ್ಟು ಮಾತ್ರ ಅತಿಶಯೋಕ್ತಿ ಅಲ್ಲವೆಂತಲೂ ಕೇವಲ ಸತ್ಯವಾದ್ದೆಂತಲೂ ನೋಡಿದಮಾತ್ರದಿಂದಲೇ ಸರ್ವರಿಗೂ ಸ್ಪಷ್ಟವಾಗುವುದು.

೨. ಕಾಮೇಶ್ವರಿ ದೇವಲಯ:

ಕಾಮೇಶ್ವರಿದೇವಿಯ ಆಲಯವು ಈಶ್ವರನ ದೇವಾಲಯಕ್ಕೆ ದಕ್ಷಿಣ ಭಾಗದಲ್ಲಿ ನಿರ್ಮಿತವಗಿರುವುದು. ಆ ದೇವಾಲಯ ನಿರ್ಮಾಣ ಕಾರ್ಯದಲ್ಲಿ ಅನೇಕ ಜನ ಭಕ್ತರು ಭಾಗಿಯಾಗಿದ್ದರು. ಅದರಲ್ಲಿ ಭೈರಜ್ಯೋಸ್ಯರ ರಾಮಚಂದ್ರಯ್ಯನವರು ಮತ್ತು ಭೈರವಜ್ಯೋಸ್ಯರ ಮಹಾನಂದಯ್ಯನವರು ಮುಖ್ಯರು. ಆ ಸ್ಥಳದಲ್ಲಿಯೆ ಕುಮಾರಸ್ವಾಮಿಯು, ವಿಘ್ನೇಶ್ವರನು ನೆಲೆಸಿರುವರು.

೩.ಒಳಗಿನ ಸರಸ್ಸ್ಸ:

ಅನಂತರ ಕೆಲವು ಮಹನೀಯರು ರುದ್ರಗೊಂಡನ್ನು ಪ್ರಶಸ್ತಗೊಳಿಸುತ್ತಲೂ ಕಟಾಂಗಜನವನ್ನು ನಿರ್ಮಿಸಿದರು. ಆ ಸರೋವರಕ್ಕೆ ನಾಲ್ಕು ದಿಕ್ಕುಗಳಲ್ಲಿಯೂ ಸೋಪಾನಗಳಿರುವವು. ಆ ಸರೋವರದ ಮಧ್ಯ ಭಾಗದಲ್ಲಿ ಚತುಸ್ಥಂಭ ನಿರ್ಮಿತವಾದ ದೇವಾಲಯವಿರುವುದು. ಆ ದೇವಾಲಯದಲ್ಲಿ ಪಂಚಲಿಂಗಗಳು

ಪ್ರತಿಷ್ಠಿತವಾಗಿರುವವು. ಆ ಸರಸ್ಸಿನ ಪೂರ್ವದಿಶೆಯಲ್ಲಿ ಪ್ರತಿ ಜಾಗದಿಂದಲು ಪ್ರವಾಹ ಬರುವಂತೆ ಪ್ರತ್ಯಕ್ಷವಾಗುವುದು. ಆದರೆ ಆ ದಿಶೆಯಲ್ಲಿನ ಮಧ್ಯ ಭಾಗದಲ್ಲಿ ಇರುವ ನಂದಿಯ ಬಾಯಿಯಿಂದಲೇ ನೀರು ಹೆಚ್ಚಾಗಿ ಬರುತ್ತಿರುವಂತೆ ಭಾವಿಸುವುದು. ಆ ದೇವಾಲಯದ ಗೋಡೆಗಳ್ ಮೇಲೆ ನಟರಾಜ, ಶಂಕರ, ಸೂರ್ಯ, ವರಾಹ ಮೂರ್ತಿ ಮೊದಲಾದ ಚಿತ್ರಗಳು ಅತ್ಯದ್ಭುತವಾಗಿ ಕೆತ್ತಲ್ಪಟ್ಟಿವೆ. ಅಲ್ಲಿಯ ಪ್ರವಾಹ ಎರಡು ತೂಬುಗಳಿಂದ ಬಯಲಿನಲ್ಲಿರುವ ಸರಸ್ಸಿಗೆ ಪ್ರವಹಿಸಿ ಕ್ರಮವಾಗಿ ಅಲ್ಲಿನ ಸುತ್ತ ಮುತ್ತ ಇರುವ ಅಂದಾಜು ಸಾವಿರ ಎಕ್ಕರೆಗಳಷ್ಟು ಭೂಮಿಯನ್ನು ಬಂಗಾರವನ್ನೇ ಬೆಳೆಯುವಂತೆ ಮಾಡಿರುವರು.

ಮಹಾನಂದಿ ಕ್ಷೇತ್ರಕ್ಕೆ ಮಾನವ ದೇಹಕ್ಕೆ ಇರುವ ಹೋಲಿಕೆಗಳು

[ಬದಲಾಯಿಸಿ]
ಅಧ್ಯಾತ್ಮವಿದರಾದವರು ಮಹಾನಂದಿ ಕ್ಷೇತ್ರವನ್ನು ಮಾನವ ದೇಹವಾಗಿ ಹೋಲಿಸಿ ಹೇಳುವರು. ಮಾನವ ಶರೀರವೇ ಮಹಾನಂದಿ ಕ್ಸ್ಶೇತ್ರವು. ಶರೀರದಲ್ಲಿರುವ ಇಪ್ಪತೈದು ತತ್ವಗಳೇ ಕ್ಷೇತ್ರದ ಸುತ್ತಲಿರುವ ಪ್ರಕರಗಳು. ನಾಲ್ಕು ಅಂತರೇಂದ್ರಿಯಗಳೇ ದೇವಾಲಯದ ಚತುಷ್ಟಯ ಗೋಪುರಗಳು.ಮೂಲದಲ್ಲಿರುವ ಸುಷುಮ್ನ ನಾಡಿಯೇ ಇಲ್ಲಿನ ಒಳಭಾಗದಲ್ಲಿರುವ ಸರೋವರವು. ಈಡ, ಪಿಂಗಳ ಎಂಬ ಎರಡು ನಾಡಿಗಳೇ ಗುಡಿಯ ಬಹಿರ್ದೇಶೆಯಲ್ಲಿರುವ ಎರಡು ಸರಸ್ಸುಗಳು. ಇಪ್ಪತ್ತೊಂದು ಸಾವಿರ ಆರನೂರು ಪರ್ಯಾಯಗಳು ಮನುಷ್ಯನ ದೇಹದಲ್ಲಿ ಜರಗುವ ಹಂಸಜಪಗಳು.

ಈ ತೀರ್ಥದಲ್ಲಿ ಸುಹುಮ್ನನಾಳದಲ್ಲಿ ಸ್ನಾನವನ್ನಾಚರಿಸಿ, ಅತಿ ನಿಷ್ಠೆಯಿಓದ ದೃಷ್ಟಿಯನ್ನು ಸೇರಿಸಿ ನಿರೀಕ್ಷಿಸಿದರೆ ಕಂಡು ಬರುವ ಆತ್ಮ ಜ್ಯೋತಿಯೇ ಶಿವಲಿಂಗವು.

ಮಹಾನಂದಿ ಕ್ಷೇತ್ರದ ಅಭಿವೃದ್ಧಿ

[ಬದಲಾಯಿಸಿ]
ಈ ಮಹಾನಂದಿ ಕ್ಷೇತ್ರವನ್ನು ನಂದ್ಯಾಲ ಪಟ್ಟಣವಾಸಿಯು ಸದ್ಬಾಹ್ರ್ಮಣನು ಆದ ಶ್ರೀ ಭೈರವಜ್ಯೋಸ್ಯರ ಮಹನಂದಯ್ಯನವರು ಸುಮಾರು ೪೫ ವರ್ಷಗಳು ಈ ದೇವಾಲಯಕ್ಕೆ ಧರ್ಮಕರ್ತರಾಗಿದ್ದು ಬಹು ಅಭಿವೃದ್ಧಿ ಸ್ಥಿತಿಗೆ ತಂದರು. ಇವರ ಸಹೋದರರಾದ ರಾಮಚಂದ್ರಯ್ಯನವರು ಕೂಡ ಧರ್ಮಕರ್ತರಾಗಿದ್ದರು. ಈ ಸಂದರ್ಭದಲ್ಲಿ ಕೆಲವು ಕಾಲ ಇವರಿಗೆ ಸಹಾಯವಾಗಿದ್ದರು. ಮಹಾದೇವಯ್ಯನವರು ಅಲ್ಲಿನ ಗಾಳಿಗೋಪುರಗಳನ್ನು ಅದರ ಸುತ್ತು ಇರುವ ಮಂಟಪಗಳನ್ನು, ಕಾಮೇಶ್ವರಿದೇವಿಯ ಆಲಯವನ್ನು, ೨ ಸರೋವರಗಳನ್ನು, ಉತ್ಸವಕ್ಕೆ ಬೇಕಾದಂಥವರನ್ನು, ಎಲ್ಲ ಕಡೆಗಳಿಂದಲೂ ರೋಡುಗಳನ್ನು, ಎತ್ತುಗಳನ್ನು ಎಳೆಯುವುದಕ್ಕೆ ತಕ್ಕ ಮಿಕ್ಕ ಕಲ್ಲಿನ ತೋಲೆಯನ್ನು ಸುತ್ತ ಮುತ್ತು ಇರುವ ಪ್ರದೇಶಗಳಿಂದ ಶೇಖರಿಸಿ ಯಾತ್ರಿಕರಿಗೆ ಅವಶ್ಯಕವಾದ ಸಹಪಾಯಗಳನ್ನು ಊಂಟು ಮಾಡಿದರು. ಮಹಾನಂದಿ ಸುತ್ತಲೂ ಇರುವ ಸುಮಾರು ನಲವತ್ತು ಎಕ್ಕರೆಗಳ ಸಾರವಂತಿವಾದ ಭೂಮಿಯನ್ನು ಸ್ವಾಮಿಯ ಹೆಸರಿನಲ್ಲಿ ಸೇರಿಸಿದರು. ಆ ಭೂಮಿಯಲ್ಲಿ ಬಾಳೆ, ಭತ್ತ ಮುತಾದ ಬೆಳೆಯನ್ನು ಬೆಳೆಯಲಾಯಿತು. ಈ ಭೂಮಿಗಳಿಗೆ ಭೂಮಿಯ ಗುತ್ತಿಗೆ ಮಾತ್ರವೇ ತೆರೆಗೆಕೊಡುವಂತೆಯು, ನೀರಿನ ಗುತ್ತಿಗೆ ಮಾಫಿ ಮಾಡುವಂತೆಯು ಅಂದಿನ ಕಲೆಕ್ಟರವರಿಂದ ಉತ್ತರಹಳನ್ನು ಹೊಂದಿದರು. ತಮ್ಮಡಪಲ್ಲೆಯಲ್ಲಿ ಸುಮಾರು ಐದು ಎಕ್ಕರೆಗಳ ಮಾಗಾಣಿಯನ್ನು ಮತ್ತು ಅರ್ವತೈದು ಎಕ್ಕರೆಗಳ ಬೀಳು ಭೂಮಿಯನ್ನು ಸಂಪಾದಿಸಿಟ್ಟರು.

ಪಚ್ಚಿಮ ಭಾಗದಲ್ಲಿ ಒಂದು ದೊಡ್ಡ ತೆಂಗಿನ ತೋಟವು ನಿರ್ಮಿಸಲ್ಪಟ್ಟಿತು. ದೇವಾಲಯದ ಸ್ಥಳದ ಸರಿಹದ್ದುಗಳಲ್ಲಿ ಯಾರೂ ಬೇಟೆ ಆಡದಿರುವಂತೆಯು ಆ ಆವರಣದಲ್ಲಿ ಎಲ್ಲಿಯೂ ಮೀನುಗಳನ್ನು ಹಿಡಿಯದಂತೆಯೂ ಉತ್ತರಗಳು ಹೊಂದಲ್ಪಟ್ಟವು. ಈ ಕ್ಷೇತ್ರವನ್ನು ಕಾರ್ಯನಿರ್ವಾಹಕೋದ್ಯೋಗಿಯಾದ ಶ್ರೀ ಪಿ. ಸಿದ್ದಾರೆಡ್ಡಿಯವರು ಯಾತ್ರಿಕರಿಗೆ ಆಕರ್ಷಣೆಯಾಗುವಂತೆ ಮಾಡಿರುವುದಲ್ಲದೇ ಅನೇಕ ವಸತಿಗೃಹಗಳು, ಶಿಥಲ ಪ್ರದೇಶಗಳ ನಿರ್ಮಾಣ ಮಾಡಿದರು. ಪ್ರಭುತ್ವಶಾಖೋದ್ಯೋಗಿಗಳು ಉಳಿಯುವುದಕ್ಕೆ ವಸತಿ ಗೃಹಗಳ ಏರ್ಪಾಟು ಮಾಡಿದರು. ಟಪಾಲು ಸೌಕರ್ಯಗಳ್ನ್ನು ಕಲ್ಪಿಸಿದರು.

ಅಯ್ಯನ್ನುರುಗು

[ಬದಲಾಯಿಸಿ]
ಮಹಾನಂದಿಗೆ ಪಶ್ಚಿಮ ದಿಶೆಯಲ್ಲಿ ಸುಮಾರು ಒಂದು ಮೈಲು ದೂರ್ದಲ್ಲಿ "ಆಯನ್ನುರುಗು " ಎಂಬ ಪ್ರದೇಶವಿರುವುದು. ಅಲ್ಲಿ ಎರಡು ದಿಬ್ಬಗಳು, ಅವುಗಳ ಮೇಲೆ ನೆರಳು ನೀಡುವ ವೃಕ್ಷಗಳು, ಆ ಸಮೀಪದಲ್ಲಿ ಭಾವಿಯು ಒಂದು ಚೀನಿ ತೋಟವು ಸ್ವಾಮಿಯವರ ಪೂಜಾದಿಗಳಿಗೆ ಬೇಕಾದ ಪೂಜಾ ಫಲಾದಿಗಳ ತೋಟವು ಇರುವುದು.

ಗೋ ರಕ್ಷಣ ಶಾಲೆ

[ಬದಲಾಯಿಸಿ]
ಎರಡು ಮೈಲಿಗಳ ದೂರದಲ್ಲಿ ಒಂದು ವಿಶಾಲವಾದ ಗೋರಕ್ಷಣಶಾಲೆಯೂ ಇರುವುದು. ಈ ಪ್ರದೇಶದಲ್ಲಿ ಬ್ರಾಹ್ಮ ಣರಿಗಾಗಿ ಒಂದು ಅಗ್ರಹಾರವು, ಭಾವಿಯ ಸಣ್ಣ ಸರಸ್ಸು ಮತ್ತು ಶಿವಾಲಯವು ಇರುವವು. ಅದು ಈಗ "ಅಲ್ಲಿನಗರ" ಎಂಬುವ ಹೆಸರಿನಿಂದಿರುವುದು. "ನಲ್ಲಮಲ" ಎಂಬುವ ಗುಡ್ಡಗಳಲ್ಲಿ ೨೫೦ ಆಕಳವರೆಗೂ ಸುಂಕವಿಲ್ಲದಂತೆ ಮೇಯುವುದಕ್ಕೆ ಜಿಲ್ಲಾ ಫಾರೆಸ್ಟ್ ಆಫೀಸರಿಂದ ಉತ್ತರಗಳು ಇರುವವೆಂದು ತಿಳಿದು ಬರುತ್ತೆ. ನಂದ್ಯಾಲ ಪಟ್ಟಣದಲ್ಲಿಯೂ ಒಂದು ಗೋ ರಕ್ಷಣ ಶಾಲೆಯು ಶಿವಾಲಯವು ಇರುವವು. ಅಲ್ಲಿಯೂ ನಿತ್ಯ ಪೂಜೆಗಳು ನಡೆಯುತ್ತವೆ.
ನಂದ ಮಹಾರಾಜನು ಶಿವಾರ್ಚನೆಗಾಗಿ "ತಂಬಳ್ಲ" ಅವರನ್ನು ಅಲ್ಲಿ ಇರಿಸಿ ಅವರಿಗೆ ಒಂದು ಗ್ರಾಮ ದಾನಕೊಟ್ಟು ಅರ್ಚನಾ ಕೆಲಸಕ್ಕೆ ನಿಯಮಿಸಲಾಗಿತ್ತು. ತಓಬಳ್ಲ ಅವರಿಗೆ ಕೊಡಲ್ಪಟ್ಟಿದ್ದ ದಾನದಂದ ಅದನ್ನು ತಂಬಳ್ಲ ಪಲ್ಲೆ ಅಥವಾ ತಮ್ಮಡ ಪಲ್ಲೆ ಎಂದು ಕರೆಯುವರು. ರಾಜನು ಆ ಹಳ್ಳಿಯಲ್ಲಿಯೂ ಒಂದು ಶಿವಾಲಯವನ್ನು ಕಟ್ಟಿಸಿದನು. ಆದರೆ ಆ ದೇವರಿಗೆ ಪ್ರತಿದಿನ ಅಭಿಷೇಕವು ನಡೆಯುವಂತೆ ಕಂಡುಬರುವುದಿಲ್ಲ . ಸ್ವಾಮಿ ಕೋಪಿಸಿ ತಂಬಳ್ಲಪಲ್ಲೆಯಲ್ಲಿ ತಂಬಳ್ಲ ಅವರನ್ನು ಇಲ್ಲದಂತೆ ಮಾಡಿದನೋ ಅಥವಾ ತಂಬಳಪಲ್ಲೆಯಲ್ಲಿ ತಂಬಳ್ಳ ಅವರು ಇಲ್ಲದೇ ಹೋದುದರಿಂದ ಅಲ್ಲಿ ಶಿವನಿಗೆ ನಿತ್ಯಾಭಿಷೇಕವು ನಡೆಯುವುದಿಲ್ಲವೋ ಹೇಳುವುದಕ್ಕೆ ಸಾಧ್ಯವಿಲ್ಲ.
ಮಹಾನಂದಿಕ್ಷೇತ್ರದಲ್ಲಿ ಸ್ವಾಮಿಗೆ ಪ್ರತಿನಿತ್ಯವು ಮಂಗಳವಾದ್ಯಗಳಂದ ಅಭಿಷೇಕಾಧಿಗಳು ಜರಗುವವು. ಇಲ್ಲಿನ ಜಲಪ್ರವಾಹ ಅತ್ಯದ್ಭುತವಾದದ್ದು. ಇಂತಹ ಸ್ಪಷ್ಟವಾದ ಪುಷ್ಕಳವಾದ ನೀರನ್ನು ಪಡೆದು ಇಷ್ಟು ಸೌಕರ್ಯಗಳನ್ನು ಹೊಂದಿದ ನಿರ್ಮಲ ಪುಣ್ಯ ಕ್ಷೇತ್ರವು ದಕ್ಷಿಣ ಭಾರತದಲ್ಲಿ ಮತ್ತೊಂದು ಇಲ್ಲವೆಂದೆ ಹೇಳಬಹುದು.

ಶಿವರಾತ್ರಿ ಉತ್ಸವಗಳು

[ಬದಲಾಯಿಸಿ]
ಪೂರ್ವ ಕಾಲದಲ್ಲಿ ದೇವತರು ರಾಕ್ಷಸರು ಯುದ್ಧಗಳ್ನ್ನು ಮಾಡುತ್ತಿದ್ದರು. ಆ ಯುದ್ಧಗಳಲ್ಲಿ ಸತ್ತು ಹೋಗುವ ದೇವತರಸಂಖ್ಯಯೇ ಹೆಚ್ಚಾಗಿತ್ತು. ಮೈತ್ರಿ ಹೊಂದುವ ರಾಕ್ಷಸರ ಸಂಖ್ಯೆ ಕಡಿಮೆಯಾಗಿರುವುದಲ್ಲದೇ ಸತ್ತು ಹೋದವರು ಶುಕ್ರಾಚ್ಚಾರ್ಯರ ಮೃತ ಸಂಜೀವಿನಿ ವಿದ್ಯಾ ಪ್ರಭಾವದಿಂದ ಮತ್ತೆ ಬದುಕುತ್ತಲಿದ್ದರು. ಅದು ದೇವತರಿಗೆ ಬಹಳ ಭಾದಕರವಾಗಿತ್ತು. ಅದಕ್ಕಾಗಿ ದೇವತರು ಅಮೃತವನ್ನು ಸಂಪಾದಿಸಿ ಸೇವಿಸಿದರೆ ಅಮರತತ್ವವು ಸಿದ್ಧಿಸುವುದೆಂದು ನಿಶ್ಚಯಿಸಿದರು. ಆದಕಾರಣ ಅವರು ಅದ್ಭುತ ಮಥನಕ್ಕೆ ವಾಸುಹಿಯನ್ನು ಕಡಗೋಲಿನ ಹಗ್ಗವಾಗಿಯೂ, ಮಂದರ ಪರ್ವತವನ್ನು ಕಡಗೋಲಾಗಿಯೂ ಮಾಡಿಕೊಂಡು ಕ್ಷೀರ ಸಮುದ್ರವನ್ನು ಕಡಿಯಲು ನೆರ್ಧರಿಸಿದರು. ಅದನ್ನು ತಿಳಿದು ರಾಕ್ಷಸರು ಬಂದು ಆ ಅಮೃತದಲ್ಲಿ ತಮಗೂ ಭಾಗ ಕೊಡಬೇಕೆಂತಲೂ ಸಮುದ್ರ ಮಥನಕ್ಕೆ ತಾವು ಬರುತ್ತೇವೆಂತಲೂ ದೇವರನ್ನು ಭಾಧಿಸ ತೊಡಗಿದರು. ಆಗ ದೇವತರು ವಿಧಿ ಇಲ್ಲದೆಯೇ ಅದಕ್ಕೆ ಅಂಗೀಕರಿಸಿದರು. ರಾಕ್ಷಸರು ಆ ವಾಸುಕಿ ತಲೆಯ ಕಡೆಯು, ದೇವತರು ಅದರ ಬಾಲದ ಕಡೆಯೂ ಹಿಡಿದು ಕ್ಷೀರ ಸಾಗರವನ್ನು ಮಧಿಸಿದರು.ಆ ಮಧನೆಯಲ್ಲಿ ಕ್ರಮವಾಗಿ ಉಚ್ಚೇಶ್ವರವು, ಐರಾವತವು, ಕಾಮಧೇನುವು, ಕಲ್ಪವೃಕ್ಷವು ಜನಿಸಿದವು. ದೇವೇಂದ್ರನು ಅವುಗಳನ್ನು ಸ್ವೀಕರಿಸಿದನು. ಅನಂತರ ಚಂದ್ರನು ಮತ್ತು ಲಕ್ಷ್ಮಿಯು ಉದ್ಭವಿಸಿದರು. ಕೌಸ್ಸುಭ ಮಣಿ ಜನಿಸಿತು. ಲಕ್ಷ್ಮೀದೇವಿಯನ್ನು ಕೌಸ್ಸ್ತುಭವನ್ನು ವಿಷ್ಣುದೇವನು ತೆಗೆದುಕೊಂಡನು. ನಂತರ ಅಪ್ಸರೆಯರು ಹುಟ್ಟಿದರು. ಅವರನ್ನು ದೇವೇಂದ್ರನು ಗ್ರಹಿಸಿದನು. ಹೀಗೆ ಮಥಿಸುತ್ತಿರುವಾಗ ಕೆಲವು ಕಾಲದ ಮೇಲೆ ಲೋಕಭೀಕರವಾದ ಹಾಲಾಹಲವೆಂಬ ವಿಷವು ಉದ್ಭವಿಸಿತು. ಆ ಮಹಾ ವಿಷವು ಜಗತ್ತನೆಲ್ಲಾ ಸುಡುವುದಕ್ಕೆ ಪ್ರಾರಂಭಿಸಿ ಸರ್ವ ಸಂಹಾರಕ್ಕೆ ನಿಂತಿತು. ದೇವತೆಗಳು ಅದನ್ನು ನೋಡಿ ದಿಕ್ಕುಗೆಟ್ಟು ಶಿವನ ಕಡೆ ಓಡಿ ವಿಷವನ್ನು ಸಂಹರಿಸಿ ತಮ್ಮನ್ನು, ಜಗತ್ತನ್ನು ಸಂರಕ್ಷಿಸಬೇಕೆಂದು ಸರ್ವ ವಿಧಗಳಿಂದ ಪ್ರಾರ್ಥಿಸಿದರು. ಪರಮೇಶ್ವರನು ಈ ವಿಷಯವಾಗಿ ಪಾರ್ವತಿದೇವಿಗೆ ತಿಳಿಸಿ ಆಕೆಯ ಅನುಮತಿಯನ್ನು ಪಡೆದು ಕಲ್ಯಾಣಾರ್ಥವಾಗಿ ಆ ಪ್ರಳಯ ಭೀಕರವಾದ ಹಾಲಾಹಲವನ್ನು ನೇರಳೆ ಹಣ್ಣಿನಂತೆ ಅಂಗೈಯಲ್ಲಿ ಧರಿಸಿ, ದೇವತೆಗಳು ದಿಕ್ಕುಗಳು ಜಯಜಯಕಾರವನ್ನು ಮಾಡುತ್ತಿರಲು, ಅದನ್ನು ನುಂಗಿ ಕಂಠದಲ್ಲಿಯೇ ನಿಲ್ಲಿಸಿಕೊಂಡು ನೀಲಕಂಠನಾದನು. ಆರಾತ್ರಿ ಪರಶಿವನು ನಿದ್ರಿಸಲಿಲ್ಲ. ಉದಯವಾಗುವವರೆಗೂ ಸರ್ವದೇವತೆಗಳು ಪರಶಿವನಿಗೆ ವಿಷದ ಜ್ವಾಲೆ ತಗ್ಗುವುದಕ್ಕಾಗಿ ಗೋಕ್ಷಿರಾದಿಗಳಿಂದ ಅಭಿಷೇಕವನ್ನು ಮಾಡಿದರು. ಈ ರೀತಿ ಪರಮೇಶ್ವರನು ಲೋಕೋಪಕಾರಾರ್ಥವಾಗಿ ಆ ಮಹಾ ವಿಷವನ್ನು ನುಂಗಿ ಜಾಗರಣೆ ಮಾಡಿದ ದಿನವಾದ್ದರಿಂದ ಅದನ್ನು ಮಹಾಶಿವರಾತ್ರಿ ಎನ್ನುವರು. ಆ ಕಾರಣದಿಂದ ಮಹಾಶಿವರಾತ್ರಿಯ ದಿನ ಈಗಲೂ ಭಕ್ತರು ಉಪವಾಸದಿಂದ ಕೂಡಿದ ಜಾಗರಣೆಯನ್ನು ಮಾಡುವರು.
ಶಿವನ ಉತ್ಸವಕ್ಕೆ ಸಂಬಂಧಿಸಿದ ವಿಗ್ರಹಗಳು ನಂದ್ಯಾಲನದಲ್ಲಿರುವ ಮಹಾನಂದೀಶ್ವರ ದೇವಾಲಯದಲ್ಲಿ ಇರುವವು. ಪ್ರತಿ ಸಂವತ್ಸರದಲ್ಲಿಯೂ ಇಲ್ಲಿ ಮಹಾವೈಭವದಿಂದ ಶಿವರಾತ್ರಿ ಉತ್ಸವಗಳು ನಡೆಯುವವು. ಮೊದಲನೆಯ ದಿನ ವಿಗ್ರಹಗಳನ್ನು ನಂದ್ಯಾಲ ಪಟ್ಟಣದಲ್ಲಿ ಮೆರವಣಿಗೆ ಮಾಡಿ ಮಫ಼ಾನಂದಿಗೆ ಬೋಯಿಗಳು ಹೊತ್ತು ತರುವರು. ಆ ರಾತ್ರಿ ಅಲ್ಲಿ ಭಕ್ತರೆಲ್ಲರೂ ಉಪವಾಸವಿದ್ದು ಶಿವಜಾಗರಣೆಯನ್ನು ಮಾಡುವರು. ಬೆಳಗಿನ ಜಾವದಲ್ಲಿ ಪಾರ್ವತಿ ಪರಮೇಶ್ವರರಿಗೆ ವಿವಾಹ ಮಹೊತ್ಸವವು ನಡೆಯುವುದು. ಎರಡನೆಯ ದಿನ ಮಯೂರವಾಹನದಲ್ಲಿ ಪಾರ್ವತಿ ಪರಮೇಶ್ವರರ ಮೆರವಣಿಗೆ ನಡೆಯುವುದು. ಮೂರನೆಯ ದಿನ ರಥೋತ್ಸವವು ಮಹಾ ವೈಭವದಿಂದ ನಡೆಯುವುದು. ಈ ಉತ್ಸವಕ್ಕೆ ಆ ಬಾಲ ಗೋಮಾಲಕದ ಜನರು ಮಹಾನಂದಿ ಕ್ಷೇತ್ರಕ್ಕೆ ಬರುವರು. ಲಕ್ಷಗಟ್ಟೆ ಜನರ ಸಮೂಹ ಅಲ್ಲಿ ಅಂದು ಸೇರುವುದು. ಭಯ ಭಕ್ತಿಗಳಿಂದ ಮಹಾ ಆನಂದದಿಂದ ರಥೋತ್ಸವವನ್ನು ಜರುಗಿಸುವರು. ಅಲ್ಲಿ ಇರುವ ಕಲ್ಲಿನ ತೊಲೆಯನ್ನು ದೊಡ್ಡ ದೊಡ್ಡ ಎತ್ತುಗಳಿಂದ ಎಳೆಸುವರು. ಭಾರಗಳನ್ನು ಎತ್ತುವುದು ಮತ್ತು ಅನೇಕ ವಿನೋದ ಕಾರ್ಯಕ್ರಮಗಳು ನಡೆಸಿ ಆ ಪೈಪೋಟಿಯಲ್ಲಿ ಗೆದ್ದವರಿಗೆ ತಕ್ಕ ಬಹುಮಾನವನ್ನು ಕೊಟ್ಟು ಪ್ರೋತ್ಸಾಹಿಸುವರು. ದೇವಾಲಯದವರು ಮಾತ್ರವೇ ಅಲ್ಲದೇ ನಂದ್ಯಾಲದ ಪಂಚಾಯಿತಿ ಸಮಿತಿಯವರು ಕೂಡಾ ಈ ಕಾರ್ಯಕಲಾಪಗಳಲ್ಲಿ ತಕ್ಕ ಪ್ರೋತ್ಸಾಹವನ್ನು ಕೊಡುವರು. ಶಿವರಾತ್ರಿಯ ದಿನಗಳಲ್ಲಿ ಬ್ರಾಹ್ಮಣರಿಗೂ, ಲಿಂಗಾಯತರಿಗೂ, ವೈಶ್ಯರಿಗೂ ಅನ್ನ ಛತ್ರಗಳ್ಲ್ಲಿ ಸಂತರ್ಪಣೆಗಳ ಏರ್ಪಾಡು ಮಾಡಲ್ಪಡುವುದು.
ಬ್ರಾಹ್ಮಣರಿಗೆ ಇಲ್ಲಿ ನಿತ್ಯ ಸೌಕರ್ಯಗಳ ತಕ್ಕ ಏರ್ಪಾಟುಗಳು ಮಾಡುವುದಕ್ಕೆ ಪ್ರಯತ್ನಗಳು ನಡೆಯುತ್ತಿದ್ದರೂ ಇನ್ನೂ ಕಾರ್ಯ ರೂಪದಲ್ಲಿ ಬಂದಿಲ್ಲ. ನಂದ್ಯಾಲಯ ಆರ್ಯ ವೈಶ್ಯ ಸಂಘದವರು ಅನ್ನ ಛತ್ರವನ್ನು ಏರ್ಪಾಡು ಮಾಡಿದ್ದಾರೆ. ಅಲ್ಲಿ ನಿತ್ಯ ಭೋಜನ ಸೌಕರ್ಯಗಳಿಗೆ ಅವಶ್ಯಕವಾದ ಪ್ರಯತ್ನಗಳು ಬಲವಾಗಿ ನಡೆಯುತ್ತಿರುವವು. ಭಗವಂತನು ಭಕ್ತಾದಿಗಳನ್ನು ಪ್ರೇರೆಬ್ಬಿಸಿ ಬೇಗನೆ ಬ್ರಾಹ್ಮಣ ವೈಶ್ಯರಿಗೆ ಮಾತ್ರವಲ್ಲದೆ ಎಲ್ಲಾ ಜಾತಿಗಳವರಿಗೂ ನಿರುತಾನ್ನ ಪ್ರಧಾನ ಸೌಕರ್ಯಗಳು ಜರುಗುವ ಏರ್ಪಾಡುಗಳು ಮಾಡಲಿ.

ಚಿತ್ರಶಾಲೆ

[ಬದಲಾಯಿಸಿ]
"https://kn.wikipedia.org/w/index.php?title=ಮಹಾನಂದಿ&oldid=1224877" ಇಂದ ಪಡೆಯಲ್ಪಟ್ಟಿದೆ