ವಿಷಯಕ್ಕೆ ಹೋಗು

ಮಶೋಬ್ರಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಶೋಬ್ರಾ ಹಿಮಾಚಲ ಪ್ರದೇಶ ರಾಜ್ಯದ ಶಿಮ್ಲಾ ಜಿಲ್ಲೆಯಲ್ಲಿನ ಒಂದು ಪಟ್ಟಣ.

ಏಕಾಂತ ಸ್ಥಳ

[ಬದಲಾಯಿಸಿ]

ಮಶೋಬ್ರಾ ಭಾರತದ ಎರಡು ಅಧ್ಯಕ್ಷೀಯ ಏಕಾಂತ ಸ್ಥಳಗಳಲ್ಲಿ ಒಂದಾಗಿದೆ. ಇನ್ನೊಂದು ಏಕಾಂತ ಸ್ಥಳವೆಂದರೆ ಸಿಕಂದರಾಬಾದ್‌ನ ರಾಷ್ಟ್ರಪತಿ ನಿಲಯಂ.

ಇತರ ಆಸಕ್ತಿಯ ಸ್ಥಳಗಳು

[ಬದಲಾಯಿಸಿ]

ಮಶೋಬ್ರಾ ಪ್ರವಾಸಿ ತಾಣವೂ ಆಗಿದೆ.[][] ಈಗ ಒಬೆರಾಯ್ ಹೊಟೇಲ್‌ನ ಆಸ್ತಿಯಾಗಿರುವ ಛರಬ್ರಾದ ವೈಲ್ಡ್ ಫ್ಲವರ್ ಹಾಲ್, ಬ್ರಿಟಿಷ್ ರಾಜ್ ಸಮಯದಲ್ಲಿ ಲಾರ್ಡ್ ಕಿಚನರ್ ಮತ್ತು ಲಾರ್ಡ್ ರಿಪನ್‍ರ ನಿವಾಸವಾಗಿತ್ತು.[] ಮಶೋಬ್ರಾದಿಂದ ೩ ಕಿ.ಮೀ. ದೂರದಲ್ಲಿ ಕ್ಯಾರಿಗ್ನಾನೊ ಎಂಬ ಪಿಕ್ನಿಕ್ ತಾಣವಿದೆ. ಇದು ರಾವುತ ಫೆಡೆರಿಕೊ ಪೆಲಿಟಿಯ ವಿಲಾ ಆಗಿತ್ತು.[] 1920 ರಲ್ಲಿ ಈ ವಿಲಾವನ್ನು ವಾರಾಂತ್ಯದ ರೆಸಾರ್ಟ್ ಆಗಿ ಪರಿವರ್ತಿಸಲಾಯಿತು.

ಸಸ್ಯ ಮತ್ತು ಪ್ರಾಣಿ ಸಮೂಹ

[ಬದಲಾಯಿಸಿ]
ಪ್ರವೇಶದ್ವಾರ, ಶಿಮ್ಲಾ ಜಲಾನಯನ ಪ್ರದೇಶದ ವನ್ಯಜೀವಿ ಅಭಯಾರಣ್ಯ, ಹಿಮಾಚಲ ಪ್ರದೇಶ, ಭಾರತ
ಶಿಮ್ಲಾ ಜಲಾನಯನ ಪ್ರದೇಶದ ವನ್ಯಜೀವಿ ಅಭಯಾರಣ್ಯ, ಹಿಮಾಚಲ ಪ್ರದೇಶ, ಭಾರತದ ಒಳಗಿನ ನೋಟ

ಮಶೋಬ್ರಾ ಶಿಮ್ಲಾ ಜಲಾನಯನ ಪ್ರದೇಶದ‌ ವನ್ಯಜೀವಿ ಅಭಯಾರಣ್ಯದ ಭಾಗವಾಗಿದೆ.[] ನೈಸರ್ಗಿಕ ಸಸ್ಯವರ್ಗವು ಪೈನ್, ಓಕ್, ಸೀಡರ್ ಅಥವಾ ಹಿಮಾಲಯನ್ ಡಿಯೋಡರ್, ಮತ್ತು ರೋಡೋಡೆಂಡ್ರಾನ್, ಜೊತೆಗೆ ಮೇಪಲ್ ಮತ್ತು ಹಾರ್ಸ್ ಚೆಸ್ಟ್‌ನಟ್‍ನ್ನು ಒಳಗೊಂಡಿದೆ. ವನ್ಯಜೀವಿ ಸಮೂಹದಲ್ಲಿ ಕೋತಿಗಳು, ಮುಸುವಗಳು, ಸೇರಿವೆ. ಜೊತೆಗೆ ನರಿಗಳು, ಕಕ್ಕರ್ (ಗರ್ಜಿಸುವ ಜಿಂಕೆ), ಹಾಗೂ ಸಾಂದರ್ಭಿಕ ಚಿರತೆ ಮತ್ತು ಹಿಮಾಲಯದ ಹದ್ದು, ಜೀವಂಜೀವಗಳು, ಚಿಕೋರ್ ಹಾಗೂ ಕೌಜುಗಗಳಂತಹ ಅಸಂಖ್ಯ ಪಕ್ಷಿ ಪ್ರಭೇದಗಳು ಸೇರಿವೆ .

ಉಲ್ಲೇಖಗಳು

[ಬದಲಾಯಿಸಿ]
  1. "Travelogue in TIME". 8 November 2003. Archived from the original on 4 February 2006. Retrieved 5 July 2006.
  2. "Travelogue in Outlook magazine". Archived from the original on 9 November 2006. Retrieved 5 July 2006.
  3. "Oberoi hotels website about Mashobra". Retrieved 5 July 2006.
  4. "Federico Peliti's 19th Century India". Retrieved 18 January 2015.
  5. "Department Notification No. FFE-B-F(6)-11/2005-II/Shimla Water Catchment" (PDF). Government of Himachal Pradesh Department of Forests. 7 June 2013. Retrieved 18 February 2017.


"https://kn.wikipedia.org/w/index.php?title=ಮಶೋಬ್ರಾ&oldid=1023629" ಇಂದ ಪಡೆಯಲ್ಪಟ್ಟಿದೆ