ಮರುಮದುವೆ
ಮರುಮದುವೆ (ಪುನರ್ವಿವಾಹ) ಎಂದರೆ ವಿಚ್ಛೇದನ ಅಥವಾ ವೈಧವ್ಯದ ಮೂಲಕ ಹಿಂದಿನ ವೈವಾಹಿಕ ಒಕ್ಕೂಟ ಅಂತ್ಯಗೊಂಡ ನಂತರ ನಡೆಯುವ ಮದುವೆ. ಕೆಲವು ವ್ಯಕ್ತಿಗಳು ಇತರರಿಗಿಂತ ಮರುಮದುವೆ ಆಗುವ ಸಾಧ್ಯತೆ ಹೆಚ್ಚು; ಹಿಂದಿನ ಸಂಬಂಧದ ಸ್ಥಾನಮಾನ (ಉದಾ. ವಿಚ್ಛೇದನ ಆದ ಅಥವಾ ವಿಧವೆಯಾದ), ಹೊಸ ಪ್ರಣಯ ಸಂಬಂಧವನ್ನು ಸ್ಥಾಪಿಸುವಲ್ಲಿನ ಆಸಕ್ತಿಯ ಮಟ್ಟ, ಲಿಂಗ, ಜನಾಂಗ, ವಯಸ್ಸು, ಇತ್ಯಾದಿ ಅಂಶಗಳನ್ನು ಆಧರಿಸಿ ಈ ಸಾಧ್ಯತೆ ಭಿನ್ನವಾಗಿರಬಹುದು. ಮರುಮದುವೆ ಆಗಲು ಆಯ್ಕೆಮಾಡದವರು ಸಹಜೀವನ ಅಥವಾ ಒಟ್ಟಾಗಿ ಪ್ರತ್ಯೇಕವಾಗಿ ಬದುಕುವಂತಹ ಪರ್ಯಾಯ ವ್ಯವಸ್ಥೆಗಳನ್ನು ಇಷ್ಟಪಡಬಹುದು. ಮರುಮದುವೆಯು ಮಾನಸಿಕ ಮತ್ತು ದೈಹಿಕ ಆರೋಗ್ಯ ಪ್ರಯೋಜನಗಳನ್ನು ಕೂಡ ಒದಗಿಸುತ್ತದೆ. ಮರುಮದುವೆಯಾದ ವ್ಯಕ್ತಿಗಳು ಹೊಸ ಸಂಗಾತಿಯೊಂದಿಗೆ ಸಂಬಂಧ ಹೊಂದದಿರುವವರಿಗಿಂತ ಹೆಚ್ಚು ಉತ್ತಮ ಆರೋಗ್ಯವನ್ನು ಹೊಂದಿರುವ ಸಾಧ್ಯತೆ ಹೆಚ್ಚಾದರೂ, ಅಷ್ಟಾದರೂ ಅವರು ಸಾಮಾನ್ಯವಾಗಿ ನಿರಂತರವಾಗಿ ಮದುವೆಯಾಗಿ ಉಳಿದಿರುವ ವ್ಯಕ್ತಿಗಳಿಗಿಂತ ಕಡಿಮೆ ಆರೋಗ್ಯವಂತರಾಗಿರುತ್ತಾರೆ.
೨೦೦೬ರ ಜನಗಣತಿಯವರೆಗೆ, ೬೫ಕ್ಕಿಂತ ಹೆಚ್ಚಿನ ವಯಸ್ಸಿನ ಅಮೇರಿಕದ ಶೇಕಡ ೩೨ರಷ್ಟು ಜನರು ವಿಧವೆ/ವಿಧುರರಾಗಿದ್ದರು.[೧] ತಮ್ಮ ಸಂಗಾತಿಯನ್ನು ಕಳೆದುಕೊಂಡ ನಂತರ ಬಹುತೇಕ ವ್ಯಕ್ತಿಗಳು ಯಶಸ್ವಿಯಾಗಿ ಹೊಂದಿಕೊಳ್ಳುತ್ತಾರೆ; ಚೇತರಿಸಿಕೊಳ್ಳುವಿಕೆಯು ಅತಿ ಹೆಚ್ಚಿನ ಪರಿಣಾಮವಾಗಿರುತ್ತದೆ ಎಂದು ಅಗಲಿಕೆ ಮಾದರಿಗಳ ಮೇಲಿನ ಸಂಶೋಧನೆ ಕಂಡುಕೊಳ್ಳುತ್ತದೆ. ಆದರೂ, ವಯಸ್ಸಾದ ವಿಧುರರಲ್ಲಿ ಮರುಮದುವೆ ಪ್ರಮಾಣ ಸಾಕಷ್ಟು ಕಡಿಮೆಯಿದೆ, ಮತ್ತು ವಯಸ್ಸಾದ ವಿಧವೆಯರಲ್ಲಿ ಈ ಪ್ರಮಾಣ ಇನ್ನೂ ಕಡಿಮೆಯಿದೆ. ಆದರೆ, ಮರುಮದುವೆ ಪ್ರಮಾಣವನ್ನು ನೋಡುವುದು ಹೊಸ ಪ್ರಣಯ ಸಂಬಂಧಗಳಲ್ಲಿನ ಆಸಕ್ತಿಯನ್ನು ಬಹಳವಾಗಿ ಕಡೆಗಣಿಸುತ್ತದೆ.
ಪುರುಷರು ಮತ್ತು ಮಹಿಳೆಯರು ಭಿನ್ನವಾದ ಮರುಮದುವೆ ಪ್ರಮಾಣಗಳನ್ನು ಹೊಂದಿರುವುದರ ಜೊತೆಗೆ, ಮತ್ತೆ ಸಂಬಂಧ ಬೆಳೆಸುವ (ಹೊಸ ಪ್ರಣಯ ಸಂಬಂಧ ಸ್ಥಾಪಿಸುವಲ್ಲಿನ) ಅವರ ಆಸೆಯಲ್ಲಿಯೂ ಭಿನ್ನತೆ ಇರುತ್ತದೆ. ಸಂಗಾತಿಯ ಮರಣದ ಒಂದೂವರೆ ವರ್ಷದ ನಂತರ, ೬೫ ಅಥವಾ ಹೆಚ್ಚಿನ ವಯಸ್ಸಿನ ಶೇಕಡ ೧೫ರಷ್ಟು ವಿಧವೆಯರು ಮತ್ತು ಶೇಕಡ ೩೭ರಷ್ಟು ವಿಧುರರು ಪ್ರಣಯ ವಿಹಾರದಲ್ಲಿ ಆಸಕ್ತಿ ಹೊಂದಿದ್ದರು. ಹೊಸ ಪ್ರಣಯ ಸಂಬಂಧ ಬೆಳೆಸುವ ಆಸೆಯಲ್ಲಿನ ವ್ಯತ್ಯಾಸಗಳು ಪುರುಷರು ಮತ್ತು ಮಹಿಳೆಯರು ಮದುವೆಯ ಒಳಗೆ ಮತ್ತು ಹೊರಗೆ ಪಡೆಯುವ ಭಿನ್ನ ಲಾಭಗಳ ಕಾರಣದಿಂದಿರಬಹುದು.
ತಮ್ಮ ಸಂಗಾತಿಯನ್ನು ಕಳೆದುಕೊಂಡ ನಂತರ ಮತ್ತೊಬ್ಬ ಸಂಗಾತಿ ಇಲ್ಲದೆ ಉಳಿದಿರಲು ಹಿರಿಯ ವಯಸ್ಕರು ನೀಡುವ ಅತ್ಯಂತ ಹೆಚ್ಚಿನ ಕಾರಣಗಳು ಲಿಂಗ ನಿರ್ದಿಷ್ಟವಾಗಿರುತ್ತವೆ. "ಮಹಿಳೆಯರು ದುಃಖಪಡುತ್ತಾರೆ, ಪುರುಷರು ಬದಲಿಸುತ್ತಾರೆ" ಎಂಬುದು ಸಾಮಾನ್ಯ ನಂಬಿಕೆಯಾದರೂ, ಸಂಶೋಧನೆಯು ಈ ಮಾದರಿಯನ್ನು ಬೆಂಬಲಿಸುವುದಿಲ್ಲ. ಬದಲಾಗಿ ತಾವು ಹೊಸದಾಗಿ ಕಂಡುಕೊಂಡ ಸ್ವಾತಂತ್ರ್ಯವನ್ನು ಕಳೆದುಕೊಳ್ಳಲು ಇಷ್ಟವಿಲ್ಲ/ಮನಸ್ಸಿಲ್ಲ ಎಂದು ವಿಧವೆಯರು ವರದಿ ಒಪ್ಪಿಸುವ ಸಾಧ್ಯತೆ ಹೆಚ್ಚು.
ಉಲ್ಲೇಖಗಳು
[ಬದಲಾಯಿಸಿ]- ↑ U.S. Census Bureau. (2006). American Community Survey: 2006 (No. S1201): Marital Status. As cited in Bradbury, T. N., & Karney, B. R. (2010). Intimate Relationships. W. W. Norton & Company.