ವಿಷಯಕ್ಕೆ ಹೋಗು

ಮರಗಪ್ಪೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಯೂರೋಪಿನ ಮರಗಪ್ಪೆ (ಹೈಲಾ ಆರ್ಬೋರಿಯಾ)

ಮರಗಪ್ಪೆ ಆಂಫಿಬಿಯ ವರ್ಗ ಆನ್ಯುರ ಗಣ ಹೈಲಿಡೀ ಕುಟುಂಬಕ್ಕೆ ಸೇರಿದ ಹಲವಾರು ಜಾತಿಯ ಕಪ್ಪೆಗಳಿಗೆ ಅನ್ವಯವಾಗುವ ಸಾಮಾನ್ಯ ಹೆಸರು (ಟ್ರೀ ಫ್ರಾಗ್). ಇವುಗಳ ಪೈಕಿ ಮುಖ್ಯವಾದ್ದು ಉತ್ತರ ಮತ್ತು ದಕ್ಷಿಣ ಅಮೆರಿಕಗಳೆರಡರಲ್ಲೂ ಜೀವಿಸುವ ಹೈಲ ಜಾತಿ.

ವಿವರಗಳು

[ಬದಲಾಯಿಸಿ]

ಸಾಮಾನ್ಯವಾಗಿ ಕಪ್ಪೆಗಳು ಜಲ ಅಥವಾ ಭೂವಾಸಿಗಳು. ಅದರೆ ಹೈಲ ಮತ್ತಿತರ ಜಾತಿಯವು ತಮ್ಮ ಜೀವನದ ಬಹು ಕಾಲವನ್ನು ಮರಗಳ ಮೇಲೆ ಕಳೆಯುತ್ತವೆ.[] ಇಂಥ ವೃಕ್ಷಜೀವನಕ್ಕೆ ಅನುಕೂಲವಾಗುವಂತೆ ಇವುಗಳ ಕಾಲಿನ ರಚನೆಗಳೂ ಮಾರ್ಪಾಟಾಗಿವೆ; ಮರಗಿಡಗಳನ್ನು ಹತ್ತಲು ನೆರವಾಗುವಂತೆ ಬೆರಳುಗಳ ತುದಿಗಳು ಅಂಟುಫಲಕಗಳಾಗಿ ರೂಪುಗೊಂಡಿವೆ. ಜೊತೆಗೆ ಬೆರಳಿನ ತುದಿಮೂಳೆ ಕೆಳಮುಖವಾಗಿ ಬಾಗಿದೆ. ಅಂಟು ಫಲಕಗಳಿಂದ ಜಿಗುಟಾದ ದ್ರವ ಒಸರುತ್ತಿದ್ದು ಕಪ್ಪೆ ಮರವನ್ನೇರಲು ಸಹಾಯಕವಾಗುವ ಹಿಡಿತವನ್ನು ಒದಗಿಸುತ್ತದೆ.

ಮರಗಪ್ಪೆಯ ಗಂಟಲಿನಲ್ಲಿ ಶಬ್ದ ಉಂಟುಮಾಡಲು ಬಳಕೆಯಾಗುವ ದೊಡ್ಡ ಗಾತ್ರದ ಧ್ವನಿಚೀಲಗಳುಂಟು. ಇವು ಹೊರಡಿಸುವ ಸದ್ದು ಉಳಿದ ಕಪ್ಪೆಗಳ ಸದ್ದಿಗಿಂತ ಜೋರುತೆರನಾದುದು.

ಸಂತಾನೋತ್ಪತ್ತಿ

[ಬದಲಾಯಿಸಿ]

ಮರಗಪ್ಪೆಗಳ ವಿವಿಧ ಪ್ರಭೇದಗಳು ಕೆಲವು ಮೊಟ್ಟೆಗಳಿಂದ ಹಿಡಿದು ಸಾವಿರಕ್ಕೂ ಹೆಚ್ಚು ಮೊಟ್ಟೆಗಳನ್ನಿಡುತ್ತವೆ. ಹೆಚ್ಚು ಸಂಖ್ಯೆಯಲ್ಲಿ ಮೊಟ್ಟೆಯಿಡುವಂಥ ಪ್ರಭೇದಗಳಲ್ಲಿ ಮೊಟ್ಟೆಗಳು ಪರಸ್ಪರ ಅಂಟಿಕೊಂಡಿದ್ದು ಉದ್ದ ಸರಪಳಿಯಂತಿವೆ. ಕೆಲವು ಪ್ರಭೇದಗಳಲ್ಲಿ ಮೊಟ್ಟೆ ಹಾಗೂ ಮರಿಗಳ ಪಾಲನೆಯ ಪರಿಪಾಟವನ್ನು ಕಾಣಬಹುದು.

ರ‍್ಯಾಕೋಫೋರಸ್ ಮತ್ತು ಪೈಪ ಎಂಬ ಜಾತಿಯ ಕಪ್ಪೆಗಳನ್ನು ಸಹ ಮರಗಪ್ಪೆಗಳೆಂದು ಕರೆಯುವುದಿದೆ. ಆದರೆ ಇವು ವಾಸ್ತವವಾಗಿ ನೆಲವಾಸಿ ಕಪ್ಪೆಗಳು.

ಛಾಯಾಂಕಣ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Amphibians (2008-04-22). "Tree Frog Info". Animals.howstuffworks.com. Retrieved 2013-06-03.


ಗ್ರಂಥಸೂಚಿ

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಮರಗಪ್ಪೆ&oldid=1192343" ಇಂದ ಪಡೆಯಲ್ಪಟ್ಟಿದೆ