ಮನ್ ಪ್ರೀತ್ ಸಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮನ್ ಪ್ರೀತ್ ಸಿಂಗ್

ಮನ್ ಪ್ರೀತ್ ರವರು ಭಾರತೀಯ ಹಾಕಿ ಆಟಗಾರ ಮತ್ತು ಭಾರತ ಹಾಕಿ ತಂಡದ ನಾಯಕ.

ಜನನ[ಬದಲಾಯಿಸಿ]

ಇವರು ಜೂನ್ ೨೬ ೧೯೯೨ ರಂದು ಜನಿಸಿದರು.[೧]

ವೈಯಕ್ತಿಕ ಜೀವನ[ಬದಲಾಯಿಸಿ]

ಮನ್ ಪ್ರೀತ್ ರವರು ಕೃಷಿಕರ ಕುಟುಂಬದಿಂದ ಬಂದವರು. ಪಂಜಾಬ್ ರಾಜ್ಯದ ಜಲಂಧರ್ ನಗರದವರು. ಹಾಕಿ ಆಟವನ್ನು ಬಿಟ್ಟು ಯೋಗ, ಧ್ಯಾನ, ಇತರ ಕ್ರೀಡೇಗಳು ಮತ್ತು ಪಂಜಾಬಿ ಬಾನ್ಗ್ರಾ ಹಾಡುಗಳನ್ನು ಕೇಳುವ ಹವ್ಯಾಸ ಹೊಂದಿದ್ದಾರೆ.

ಕ್ರೀಡಾಜೀವನ[ಬದಲಾಯಿಸಿ]

ಇವರಿಗೆ ಭಾರತದ ಮಾಜಿ ಹಾಕಿ ತಂಡದ ನಾಯಕನಾದ ಪದ್ಮಶ್ರೀ ಪರ್ಗತ್ ಸಿಂಗ್ ರವರು ಸ್ಫೂರ್ತಿಯಾಗಿದ್ದರು. ಇವರ ಸಹೋದರನು ಗಳಿಸಿದ್ದ ಪ್ರಶಸ್ತಿಗಳಿಂದ ಪ್ರೇರಣೆ ಪಡೆದರು. ೨೦೦೨ರಲ್ಲಿ ೧೦ ವರ್ಷದ ಬಾಲಕನಾದ ಮನ್ ಪ್ರೀತ್ ರವರು ಹಾಕಿ ಆಡಲು ಆರಂಭಿಸಿದ್ದರು. ೨೦೧೧ರಲ್ಲಿ ಭಾರತದ ಪರವಾಗಿ ಹಾಕಿ ಆಡುವಾಗ ಇವರಿಗೆ ೧೯ ವರ್ಷವಾಗಿತ್ತು. ೨೦೧೩ರಲ್ಲಿ ಕಿರಿಯರ ಹಾಕಿ ತಂಡದ ನಾಯಕನಾಗಿ ಆಯ್ಕೆಯಾದರು ಮತ್ತು ಸುಲ್ತಾನ್ ಜೋಹರ್ ಕಪ್ ಪಂದ್ಯದಲ್ಲಿ ಭಾರತವು ಮಲೇಶಿಯಾ ತಂಡವನ್ನು ೩-೦ ಅಂತರದಿಂದ ಸೋಲಿಸಿತ್ತು. ೨೦೧೪ರಲ್ಲಿ ಭಾರತವನ್ನು ಏಷ್ಯಾದ ಕಿರಿಯ ಆಟಗಾರನಾಗಿ ಪ್ರತಿನಿಧಿಸಿದ್ದರು.೨೦೧೪ರಲ್ಲಿ ದಕ್ಷಿಣ ಕೋರಿಯಾದಲ್ಲಿ ನೆಡೆದ ಏಷ್ಯಾ ಕ್ರೀಡಾಕೂಟದಲ್ಲಿ ಭಾರತದ ಪರವಾಗಿ ಆಟವಾಡಿದ್ದರು. ಈ ಕ್ರೀಡಾಕೂಟದಲ್ಲಿ ಭಾರತವು ಪಾಕಿಸ್ತಾನ ತಂಡವನ್ನು ೪-೨ ಅಂತರದಿಂದ ಗೆದ್ದು, ಸ್ವರ್ಣ ಪದಕವನ್ನು ಗಳಿಸಿತು. ನಂತರ ೨೦೧೪ರ ಕಾಮನ್ವೇಲ್ತ್ ಕ್ರೀಡಾಕೂಟವು ಸ್ಕಾಟ್ಲ್ಯಾಂಡ್ ನಲ್ಲಿ ನೆಡೆಯಿತು. ಸಿಂಗ್ ರವರು ಭಾರತದ ಪರವಾಗಿ ಆಟವಾಡಿದ್ದರು. ಇಲ್ಲಿ ಭಾರತವು ಅಂತಿಮ ಸುತ್ತಿನಲ್ಲಿ ಆಸ್ಟ್ರೇಲಿಯವನ್ನು ಎದುರಿಸಿ, ಬೆಳ್ಳಿ ಪದಕವನ್ನು ಗಳಿಸಿತು. ೨೦೧೬ರಲ್ಲಿ ಲಂಡನ್ ನಲ್ಲಿ ನೆಡೆದ ಪುರುಷರ ಹಾಕಿ ಪಂದ್ಯದಲ್ಲಿ ಬೆಳ್ಳಿ ಪದಕವನ್ನು ಜಯಿಸಿದರು. ೨೦೧೬ರ ಬೇಸಿಗೆ ಒಲಂಪಿಕ್ಸ್ ನಲ್ಲಿ ಭಾರತ ತಂಡದ ಆಟಗಾರರಗಿದ್ದರು. ೨೦೧೬ರಲ್ಲಿ ಸುಲ್ತಾನ್ ಅಜ಼್ಲನ್ ಶಾಹ್ ಪಂದ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು, ಭಾರತವು ಮೊದಲನೇ ಪಂದ್ಯದಲ್ಲಿ ಜಪಾನ್ ನ ವಿರುದ್ದ ಜಯಗಳಿಸಿತ್ತು. ತಮ್ಮ ತಂದೆಯ ನಿಧನದಿಂದ ಆಸ್ಟ್ರೇಲಿಯಾದ ವಿರುದ್ದದ ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ. ನಂತರ ಕೆನಡಾದ ವಿರುದ್ದ ದ ಪಂದ್ಯದಲ್ಲಿ ತಮ್ಮ ತಂಡಕ್ಕೆ ಮರಳಿದ್ದರು. ಈ ಪಂದ್ಯದಲ್ಲಿ ಭಾರತ ಜಯ ಸಾಧಿಸಿತ್ತು. ಪಾಕಿಸ್ತಾನ, ನ್ಯೂಜಿಲ್ಯಾಂಡ್ ವಿರುದ್ದ ಗೆದ್ದು, ಮಲೇಷ್ಯಾ ವಿರುದ್ದದ ಪಂದ್ಯದಲ್ಲಿ ಸೋಲನ್ನು ಅನುಭವಿಸಿತು. ಆದರೆ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಿ ಎರಡನೇ ಸ್ಥಾನದಲ್ಲಿ ಜಯಗಳಿಸಿತು.

ಮನ್ನಣೆಗಳು[ಬದಲಾಯಿಸಿ]

  1. ೨೦೧೪ರಲ್ಲಿ ಏಷ್ಯಿಯಾ ಹಾಕಿ ಒಕ್ಕೂಟದ ಕಡೆಯಿಂದ ವರ್ಷದ ಕಿರಿಯ ಹಾಕಿ ಆಟಗಾರ ಎಂಬ ಬಿರುದನ್ನು ಪಡೆದರು.[೨]
  2. ೨೦೧೮ರಲ್ಲಿ ಭಾರತ ಸರ್ಕಾರವು ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿದೆ.[೩]

ಉಲ್ಲೇಖಗಳು[ಬದಲಾಯಿಸಿ]