ಮನೋಹರ ಭಾಲಚಂದ್ರ ಘಾಣೇಕರ
Jump to navigation
Jump to search
ಮನೋಹರ ಭಾಲಚಂದ್ರ ಘಾಣೇಕರ ಇವರು ೧೯೩೭ ಅಗಸ್ಟ ೨ರಂದು ಬನವಾಸಿಯಲ್ಲಿ ಜನಿಸಿದರು.ಇವರ ತಂದೆ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ, ಸಾಹಿತಿ, ಪತ್ರಕರ್ತ ಹಾಗು ಧಾರವಾಡದಲ್ಲಿಯ ಸಮಾಜ ಪುಸ್ತಕಾಲಯದ ಸಂಸ್ಥಾಪಕರಾಗಿದ್ದ ಭಾಲಚಂದ್ರ ಘಾಣೇಕರ. ಮನೋಹರ ಘಾಣೇಕರ ಇವರು ತಮ್ಮ ತಂದೆಯ ನಿಧನದ ನಂತರ ಪ್ರಕಾಶನ ಕಾರ್ಯವನ್ನು ಮುಂದುವರಿಸಿದ್ದಾರೆ.ಇವರು ಮಕ್ಕಳಿಗಾಗಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಇವರ ಕೆಲವು ಕೃತಿಗಳು ಇಂತಿವೆ:
- ಚಿರಂಜೀವಿ ಪರಶುರಾಮ
- ಶ್ರೀ ಬಸವಣ್ಣ
- ಮಾರ್ಕೊ ಪೋಲೊ
- ಗೌತಮ
- ಬೋಧಿಸತ್ವನ ಕಥೆಗಳು
- ಬುದ್ಧ ಜಾತಕ ಕಥೆಗಳು
- ಪುರಾಣ ಪಂಚಕ
- ಮಾತಾಡುವ ಕುದುರೆ
- ಆದರ್ಶದ ಕಥೆಗಳು
- ಠಕ್ಕರ ಗುರು
- ಕೊಪ್ಪರಿಗೆ ತುಂಬ ಕಥೆಗಳು
- ಮಕ್ಕಳ ನಿತ್ಯ ಪಾಠ
- ಅಮೇರಿಕಾದ ಜನಪದ ಕಥೆಗಳು
- ಜಪಾನಿನ ಜನಪದ ಕಥೆಗಳು
- ಇರಾಣದ ಲೋಕನೀತಿ ಕಥೆಗಳು
- ಬಂಗಾರದ ಹೆಜ್ಜೆ
- ತುಷಾರ ಮಣಿ
- ಅಜ್ಜಾ ನನಗೊಂದು ಕಥೆ ಹೇಳು
- ಅಜ್ಜಿ ನನಗೊಂದು ಕಥೆ ಹೇಳು
- ಅಮ್ಮಾ ನನಗೊಂದು ಕಥೆ ಹೇಳು
- ಗರುಡನ ಕಥೆ