ವಿಷಯಕ್ಕೆ ಹೋಗು

ಮನೋಮಾಹಿತಿಶಾಸ್ತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮನೋಮಾಹಿತಿಶಾಸ್ತ್ರ (ಸೈಕೋಇನ್‌ಫರ್ಮ್ಯಾಟಿಕ್ಸ್) ಒಂದು ಉದಯೋನ್ಮುಖ ಅಂತರಶಿಸ್ತೀಯ ಕ್ಷೇತ್ರವಾಗಿದ್ದು, ವ್ಯಕ್ತಿತ್ವ ಮತ್ತು ಮನಸ್ಥಿತಿಯಂತಹ ಮಾನಸಿಕ ಗುಣಲಕ್ಷಣಗಳ ಬಗ್ಗೆ ಮಾಹಿತಿಯನ್ನು ಅರಿಯಲು ಮನೋವಿಜ್ಞಾನದಿಂದ ಮಾಹಿತಿಯನ್ನು ಪಡೆಯುವಿಕೆ, ವಿಭಾಗೀಕರಣ ಮತ್ತು ಸಂಶ್ಲೇಷಣೆಗಾಗಿ ಕಂಪ್ಯೂಟರ್ ವಿಜ್ಞಾನದ ತತ್ವಗಳನ್ನು ಬಳಸುತ್ತದೆ. [೧]

ಮನೋವಿಜ್ಞಾನವು ಐತಿಹಾಸಿಕವಾಗಿ ಮಾಹಿತಿಯನ್ನುನು ಸಂಗ್ರಹಿಸಲು ಪ್ರಯೋಗಗಳು ಮತ್ತು ಪ್ರಶ್ನಾವಳಿಗಳನ್ನು ಅವಲಂಬಿಸಿದೆ. ಈ ವಿಧಾನದಲ್ಲಿ ಹಲವಾರು ಅನನುಕೂಲತೆಗಳಿವೆ. ಅವುಗಳೆಂದರೆ ಪ್ರಯೋಗಗಳು ಸಾಮಾನ್ಯವಾಗಿ ಕಡಿಮೆ ಸಂಖ್ಯೆಯ ವ್ಯಕ್ತಿಗಳನ್ನು ಒಳಗೊಂಡಿರುತ್ತವೆ (ಅವರನ್ನು ಭಾಗವಹಿಸಲು ಪ್ರೋತ್ಸಾಹಿಸಬೇಕು) ಮತ್ತು ಭಾಗವಹಿಸಿದವರು ಸ್ವಯಂ-ವರದಿ ಮಾಡಿದ ಉತ್ತರಗಳು ಮತ್ತು ಸಂದರ್ಶನಗಳು ಪಕ್ಷಪಾತ ಮತ್ತು ವಿಶ್ವಾಸಾರ್ಹವಲ್ಲದವಾಗಿರುತ್ತವೆ. ಮನೋಮಾಹಿತಿಶಾಸ್ತ್ರ ಈ ಸಮಸ್ಯೆಗಳನ್ನು ಮನೋವಿಜ್ಞಾನಕ್ಕೆ ಸಂಬಂಧಿಸಿದ ಬಿಗ್ ಡೇಟಾವನ್ನು ಸಂಗ್ರಹಿಸುವ ಮೂಲಕ ಹಾಗೂ (ಉದಾಹರಣೆಗೆ ಸ್ಮಾರ್ಟ್‌ಫೋನ್‌ಗಳು ಅಥವಾ ಸಾಮಾಜಿಕ ಮಾಧ್ಯಮ ಜಾಲತಾಣಗಳಲ್ಲಿನ ಸಂವಹನಗಳು) ಸಂಬಂಧಿತ ಮಾನಸಿಕ ಮಾಹಿತಿಗಾಗಿ ದತ್ತಾಂಶ ಗಣಿಗಾರಿಕೆ ಮಾಡುವ ಮೂಲಕ ಪರಿಹರಿಸುತ್ತದೆ. [೨]

ಸಹ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Yarkani, Tal (3 December 2012). "Psychoinformatics". Current Directions in Psychological Science. 21 (6): 391–397. doi:10.1177/0963721412457362.
  2. Montag, Christian; Duke, Eilish; Markowetz, Alexander (16 May 2016). "Toward Psychoinformatics: Computer Science Meets Psychology". Computational and Mathematical Methods in Medicine. 2016: 1–10. doi:10.1155/2016/2983685. PMC 4923556. PMID 27403204.{{cite journal}}: CS1 maint: unflagged free DOI (link)