ಮನೆಯಂಗಳದಲ್ಲಿ ಔಷಧಿವನ (ಪುಸ್ತಕ)
ಲೇಖಕರು | ಡಾ.ಎಂ. ವಸುಂಧರ, ಮತ್ತು ವಸುಂಧರಾ ಭೂಪತಿ |
---|---|
ದೇಶ | ಭಾರತ |
ಭಾಷೆ | ಕನ್ನಡ |
ವಿಷಯ | ಆಯುರ್ವೇದ |
ಪ್ರಕಾಶಕರು | ನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್ |
ಪ್ರಕಟವಾದ ದಿನಾಂಕ | ೨೦೧೩, ೭ನೇ ಮುದ್ರಣ |
ಪುಟಗಳು | ೨೦೦ |
ಐಎಸ್‍ಬಿಎನ್ | 978-81-7302-930-1 |
ಡಾ|| ಎಂ. ವಸುಂಧರ ಹಾಗೂ ಡಾ|| ವಸುಂಧರಾ ಭೂಪತಿ ಅವರು ಬರೆದ "ಮನೆಯಂಗಳದಲ್ಲಿ ಔಷಧಿವನ" ಔಷಧಿ ಸಸ್ಯಗಳ ಬಗೆ ಕುರಿತು ಮಾಹಿತಿ ನೀಡುವ ಪುಸ್ತಕ.
ನಿಮ್ಮ ಮನೆಯಂಗಳದಲ್ಲಿ ಸ್ವಲ್ಪ ಜಾಗ ಖಾಲಿ ಉಳಿದಿದ್ದಲ್ಲಿ ಅದನ್ನು ಉಪಯುಕ್ತವಾಗಿ ಹೇಗೆ ಬಳಸಿಕೊಳ್ಳಬಹುದು ಹಾಗೂ ಆ ಸ್ಥಳದಲ್ಲಿ ಕೆಲವು ಔಷಧಿ ಅಥವಾ ಸೊಪ್ಪಿನ ಗಿಡಗಳನ್ನು ಬೆಳೆಸುವ ಮೂಲಕ ಅವುಗಳ ಪ್ರಯೋಜನ ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ತಿಳಿಸಿ ಕೊಡುವ ಪುಸ್ತಕ ಇದು.
ಅಮೃತಬಳ್ಳಿಯಿಂದ ಹಿಪ್ಪಲಿವರೆಗಿನ ಇಂತಹ ಮೂವತ್ತಾರು ಸಸ್ಯಗಳ ಕುರಿತು ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಪ್ರತಿಯೊಂದು ಸಸ್ಯವನ್ನು ಯಾವ ವೈಜ್ಞಾನಿಕ ಹೆಸರಿನಿಂದ ಗುರುತಿಸಲಾಗುತ್ತದೆ, ಅದರ ಹಿನ್ನಲೆ, ಅಭಿವೃದ್ಧಿ ಹೇಗೆ, ಹಾಗೂ ಯಾವ ರೀತಿ ಬೇಸಾಯ ಮಾಡಬೇಕು ಎಂದು ಇದರಲ್ಲಿ ವಿವರಿಸಲಾಗಿದೆ.
ಅದೇ ಗಿಡದಲ್ಲಿರುವ ರಾಸಾಯನಿಕ ಘಟಕಗಳು ಯಾವುವು, ಅದರಲ್ಲಿರುವ ಔಷಧಿಯ ಗುಣಗಳು ಯಾವುವು, ಅದನ್ನು ಯಾವ ಜಾಡ್ಯಗಳಿಗೆ ಬಳಸಬಹುದು, ಅಡುಗೆಯಲ್ಲಿ ಯಾವ ರಿತಿ ಬಳಕೆಯಾಗುತ್ತದೆ, ಅದನ್ನು ಯಾವ ಭಾಷೆಯಲ್ಲಿ ಯಾವ ಹೆಸರಿನಿಂದ ಕರೆಯಲಾಗುತ್ತದೆ ಎಮಬುದನ್ನು ಬರೆಯಲಾಗಿದೆ.
ಬಾಹ್ಯ ಸಂಪರ್ಕ
[ಬದಲಾಯಿಸಿ]- http://www.navakarnataka.com/bookslist.php Archived 2014-08-31 ವೇಬ್ಯಾಕ್ ಮೆಷಿನ್ ನಲ್ಲಿ.