ಮನಮೋಹನ್ ಆರ್. ಶೆಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮನಮೋಹನ ಆರ್.ಶೆಟ್ಟಿ
ಚಿತ್ರ:MMshetty.jpg
ಭಾರತೀಯ ಚಲನಚಿತ್ರ ರಂಗದ ನಿರ್ಮಾಪಕರಲ್ಲೊಬ್ಬರು.'ಆಡ್ ಲ್ಯಾಬ್ ಇಮೇಜಿಕಾ,'ಶಶಿ ಮನಮೋಹನ್ ಶೆಟ್ಟಿಮುಕ್ತ ಸಭಾಗೃಹ', ಹಾಗೂ 'ಮುಕ್ತ ಆಟದ ಮೈದಾನ', ವಿಶಿಷ್ಠ ಕೊಡುಗೆ.
ಜನನ
(ದ.ಕ.ಜಿಲ್ಲೆ)ಯ ಮೂಲ್ಕಿ ಸಮೀಪದ ಪ್ರತಿಷ್ಠಿತ 'ಪುತ್ರಭಾವ ಮನೆತನ'ದವರು
ರಾಷ್ಟ್ರೀಯತೆಭಾರತೀಯರು
ಹಳೆ ವಿದ್ಯಾರ್ಥಿಕೃಷಿಕ ಕುಟುಂಬದಲ್ಲಿ ಜನಿಸಿದರು. ಪ್ರಾಥಮಿಕ ಮತ್ತು ಹೈಸ್ಕೂಲು ಶಿಕ್ಷಣವನ್ನುಹುಟ್ಟಿದೂರಿನಲ್ಲಿ, ಮುಂಬಯಿನ ವಿದ್ಯಾವಿಹಾರದಲ್ಲಿರುವ 'ಸೋಮಯ್ಯಾ ಕಾಲೇಜ್' ನಲ್ಲಿ 'ಕಲಾಪದವಿ' ಮುಗಿಸಿ 'ಬಸಂತ್ ಲ್ಯಾಬ್' ನಲ್ಲಿ ಸಂಚಾಲಕ ಹುದ್ದೆಗೆ ಸೇರಿದರು. ಚಲನಚಿತ್ರ ಸಂಸ್ಕರಣ ತಂತ್ರವನ್ನು ಆಳವಾಗಿ ಅಭ್ಯಸಿಸಿದರು.ತಮ್ಮದೇಆದ ಉದ್ಯಮವನ್ನು ಪ್ರಾರಂಭಿಸಿದರು.
ಉದ್ಯೋಗ'ಎಸ್.ಎಂ. ಸಾಮೂಹಿಕ ಶಿಕ್ಷಣ ಸಂಸ್ಥೆ'ಸ್ಥಾಪನೆ. ಪ್ರಾಥಮಿಕ, ಮಾಧ್ಯಮಿಕ ,ಪದವಿ ಕಾಲೇಜುಗಳಲ್ಲದೆ, ಅಂತಾರಾಷ್ಟ್ರೀಯ ಮಟ್ಟದಶಿಕ್ಷಣ ಕೋರ್ಸ್ ಗಳಿವೆ.'ಶಶಿ ಮನಮೋಹನ ಶೆಟ್ಟಿ ಉನ್ನತ ಶಿಕ್ಷಣ ಸಂಕೀರ್ಣ'ವೆಂಬ ಹೆಸರಿದೆ.
ಜೀವನ ಸಂಗಾತಿಶಶಿ ಮನಮೋಹನ ಶೆಟ್ಟಿ.(ದಿವಂಗತ)
ಮಕ್ಕಳುಪೂಜಾಶೆಟ್ಟಿ ದೇವೋರಾ,' ಮತ್ತು 'ಆರತಿಶೆಟ್ಟಿ'
ಪ್ರಶಸ್ತಿಗಳು'ಶ್ರೇಷ್ಠ ಸಮಾಜ ಸೇವಕ ಪ್ರಶಸ್ತಿ',ದಿ ರಾಮನಾಥ ಎಸ್.ಪಯ್ಯಡೆ ಸ್ಮರಣಾರ್ಥ ವರ್ಷದ ಶ್ರೇಷ್ಠ ಸಮಾಜಸೇವಕ ಪ್ರಶಸ್ತಿ.

ಮನಮೋಹನ ಆರ್.ಶೆಟ್ಟಿಯವರು, ಒಬ್ಬ ಉದ್ಯಮಿ.೧೯೭೮ ರಲ್ಲಿ 'ವಸಂತ್ ಜಿ ಮಾನವೀಯ', ಎಂಬ ಪಾಲುದಾರರೊಡನೆ ಸೇರಿ ದಾದರ್ ಜಿಲ್ಲೆಯಲ್ಲಿ 'ಆಡ್ ಲ್ಯಾಬ್' ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.[೪] 'ನಿಯೋ ಆಡ್ ಫಿಲ್ಮ್ಸ್' ಜಾಹಿರಾತು ಚಿತ್ರ ಹಾಗೂ ಕಿರುಚಿತ್ರಗಳ ಸಂಸ್ಕರಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಎಂಬ ಹೆಸರಿಗೆ ಪರಿವರ್ತನೆಗೊಂದು ಮುಂದೆ ಹೆಸರಾಂತ ಸಂಸ್ಕರಣ ಹಾಗೂ ಕನ್ನಡ ಚಲನಚಿತ್ರ ನಿರ್ಮಾಣ ಸಂಸ್ಥೆಯಾಗಿ ಮಾರ್ಪಾಡುಗೊಂಡಿತು. ಮಾಸುಮ್ ಎಂಬ ಮೊಟ್ಟಮೊದಲ ಚಿತ್ರ ಇಲ್ಲಿ ನಿರ್ಮಾಣವಾಯಿತು. ಇದನ್ನು ಹೆಸರಾಂತ ಚಿತ್ರ ನಿರ್ದೇಶಕ, ಶೇಖರ್ ಕಪೂರ್ ನಿರ್ದೇಶಿಸಿದ್ದರು. ಇದರಲ್ಲಿ ಯಶಸ್ಸನ್ನು ಕಂಡ ಶೆಟ್ಟಿಯವರು. ಮನಮೋಹನ ಆರ್. ಶೆಟ್ಟಿಯವರು, ಭಾರತೀಯ ಚಲನಚಿತ್ರ ರಂಗದ 'ಉದ್ಯಮಸಾಹಸಿ'ಯೆಂದು ಪ್ರಸಿದ್ಧರಾಗಿದ್ದಾರೆ. ಬಂಟರ ಸಂಘ[೧] ಪ್ರತಿಷ್ಠಿತ ಬಂಟರ ಸಂಘದ ಅಧ್ಯಕ್ಷರಾಗಿ ಸೇವೆಸಲ್ಲಿಸಿದರು. ಆರಂಭಿಕ ವರ್ಷಗಳಲ್ಲಿ ಕೇವಲ ೨೪೦ ಮಕ್ಕಳಿಂದ ಶುರುವಾದ, 'ಎಸ್. ಎಂ. ಸಾಮೂಹಿಕ ಶಿಕ್ಷಣ ಸಂಸ್ಥೆ', ಇಂದು ಪ್ರಾಥಮಿಕ, ಮಾಧ್ಯಮಿಕ ,ಪದವಿ ಕಾಲೇಜುಗಳಲ್ಲದೆ, ಅಂತಾರಾಷ್ಟ್ರೀಯ ಮಟ್ಟದಶಿಕ್ಷಣ ಕೋರ್ಸ್ ಗಳಿದ್ದು, ಸುಮಾರು ೮,೦೦೦ ವಿದ್ಯಾರ್ಥಿಗಳು ಅದರ ಲಾಭವನ್ನು ಪಡೆಯುತ್ತಿದ್ದಾರೆ.

'ಬಂಟರ ಸಂಘದ ಉನ್ನತ ಶಿಕ್ಷಣ ಯೋಜನೆ'[ಬದಲಾಯಿಸಿ]

ಚಿತ್ರ:545x.jpg
'ಮನಮೋಹನ್ ಆರ್. ಶೆಟ್ಟಿಯವರು, ಮಕ್ಕಳಾದ, ಪೂಜಾಶೆಟ್ಟಿ, ಆರತಿಶೆಟ್ಟಿ ಜೊತೆಗೆ,ಖೊಪೋಲಿಯಲ್ಲಿರುವ 'ಆಡ್ ಲ್ಯಾಬ್ಸ್ ಇಮ್ಯಾಜಿಕಾ ಪಾರ್ಕ್' ನ ಮುಂದೆ'(೨೦೧೩)

[೨]

ಈ ಅಭಿಯಾನಕ್ಕೆ ಮನಮೋಹನ್ ಶೆಟ್ಟಿಯವರು[೩] ಅತಿ ಹೆಚ್ಚು ಸಹಾಯಧನದ ದೇಣಿಗೆ ನೀಡಿದ್ದಾರೆ. ಹಾಗಾಗಿ ಇದಕ್ಕೆ, ಅವರ ಧರ್ಮಪತ್ನಿಯವರ ಹೆಸರಿನಲ್ಲಿ, 'ಶಶಿ ಮನಮೋಹನ ಶೆಟ್ಟಿ ಉನ್ನತ ಶಿಕ್ಷಣ ಸಂಕೀರ್ಣ' ವೆಂಬ ಹೆಸರನ್ನು ಇಡಲಾಗಿದೆ. ಈ ಅಭಿಯಾನಕ್ಕೆ ಮನಮೋಹನ್ ಶೆಟ್ಟಿಯವರು, ೨೦೦೮-೧೧ ರ ವರೆಗೆ, ಕಾರ್ಯಾಧ್ಯಕ್ಷರಾಗಿದ್ದರು. ಆಸಮಯದಲ್ಲಿ ಕಟ್ಟಡವು, ಮೂರು ಮಹಡಿಯನ್ನು ಮುಟ್ಟಿತು. ಅಲ್ಲಿ ಸ್ಥಾಪಿಸಿದ ಪ್ರಮುಖ ಶಿಕ್ಷಣ ಸಂಸ್ಥೆಗಳು :

ಚಿತ್ರ:M.R.Shetty-002.JPG
'ಶ್ರೇಷ್ಠ ಸಮಾಜ ಸೇವಕ ಪ್ರಶಸ್ತಿ'
 • ರಾಮನಾಥ್ ಪಯ್ಯಡೆ ಕಾಲೇಜ್ ಆಫ್ ಹಾಸ್ಪಿಟ್ಯಾಲಿಟಿ ಮ್ಯಾನೇಜ್ಮೆಂಟ್,
 • ಬಾರ್ಕೂರ್ ಧರ್ಮರಾಜ ಶೆಟ್ಟಿಕಾಲೇಜ್ ಆಫ್ ಮಾಸ್ ಮೀಡಿಯಾ,
 • ಆರತಿ-ಶಶಿಕಿರಣ್ ಶೆಟ್ಟಿ ಕಾಲೇಜ್ ಆಫ್ ಇನ್ಫರ್ಮೇಷನ್ ಟೆಕ್ನೊಲೊಜಿ ಯೋಜನೆಗಳು, ಹುಟ್ಟಿಕೊಂಡವು.

'ಶಶಿ ಮನಮೋಹನ್ ಶೆಟ್ಟಿ ಸಂಕೀರ್ಣ' ದಲ್ಲಿ ೭ ವಿವಿಧ ಕಾಲೇಜುಗಳು ಕಾರ್ಯದಲ್ಲಿ ತೊಡಗಿವೆ. ಸುಮಾರು ೨ ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಮಹಿಳಾ ವಿಭಾಗದ ವಸತಿಗೃಹ, ಹಾಗೂ ಪುರುಷರ ವಸತಿಗೃಹಯೋಜನೆ ಕೆಲಸಮಾಡುತ್ತಿದೆ. ಮನಮೋಹನ್ ಶೆಟ್ಟಿಯವರು ತಮ್ಮ ಧರ್ಮಪತ್ನಿ, ಹೆಸರಿನಲ್ಲಿ ನೀಡಿರುವ, 'ಶಶಿ ಮನಮೋಹನ್ ಶೆಟ್ಟಿಮುಕ್ತ ಸಭಾಗೃಹ', ಹಾಗೂ 'ಮುಕ್ತ ಆಟದ ಮೈದಾನ', ವಿಶಿಷ್ಠ ಕೊಡುಗೆ.

ಜನನ,ವಿದ್ಯಾಭ್ಯಾಸ, ವೃತ್ತಿಜೀವನ[ಬದಲಾಯಿಸಿ]

ಮನಮೋಹನ ಆರ್. ಶೆಟ್ಟಿಯವರು, ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಸಮೀಪದ ಪ್ರತಿಷ್ಠಿತ 'ಪುತ್ರಭಾವ ಮನೆತನ'ದವರು. ಕೃಷಿಕ ಕುಟುಂಬದಲ್ಲಿ ಜನಿಸಿದ ಅವರು ತಮ್ಮ ಪ್ರಾಥಮಿಕ ಮತ್ತು ಹೈಸ್ಕೂಲು ಶಿಕ್ಷಣವನ್ನು ತಮ್ಮ ಹುಟ್ಟಿದೂರಿನಲ್ಲಿ ಮುಗಿಸಿ, ಮುಂದೆ ಮುಂಬಯಿ ಮಹಾನಗರಕ್ಕೆ ಪಾದಾರ್ಪಣೆಮಾಡಿದರು. ಜೀವನದಲ್ಲಿ ಹೆಚ್ಚು ಹೆಚ್ಚು ಸಾಧಿಸುವ ಅದಮ್ಯ ಇಚ್ಛೆ ಅವರ ಮನಸ್ಸಿನಲ್ಲಿತ್ತು. ಮುಂಬಯಿನ ವಿದ್ಯಾವಿಹಾರದಲ್ಲಿರುವ 'ಸೋಮಯ್ಯಾ ಕಾಲೇಜ್' ನಲ್ಲಿ 'ಕಲಾಪದವಿ' ಮುಗಿಸಿ 'ಬಸಂತ್ ಲ್ಯಾಬ್' ನಲ್ಲಿ ಸಂಚಾಲಕ ಹುದ್ದೆಗೆ ಸೇರಿದರು. ಚಲನಚಿತ್ರ ಸಂಸ್ಕರಣ ತಂತ್ರವನ್ನು ಆಳವಾಗಿ ಅಭ್ಯಸಿಸಿ, ಅನುಭವವನ್ನು ಗಳಿಸಿಕೊಂಡರು. ಸ್ವಂತ ಪರಿಶ್ರಮದಿಂದ ತಮ್ಮದೇಆದ ಉದ್ಯಮವನ್ನು ಪ್ರಾರಂಭಿಸಿದರು.

ಆಡ್ ಲ್ಯಾಬ್[ಬದಲಾಯಿಸಿ]

೧೯೭೮ ರಲ್ಲಿ 'ವಸಂತ್ ಜಿ ಮಾನವೀಯ', ಎಂಬ ಪಾಲುದಾರರೊಡನೆ ಸೇರಿ ದಾದರ್ ಜಿಲ್ಲೆಯಲ್ಲಿ 'ಆಡ್ ಲ್ಯಾಬ್' ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.[೪] 'ನಿಯೋ ಆಡ್ ಫಿಲ್ಮ್ಸ್' ಜಾಹಿರಾತು ಚಿತ್ರ ಹಾಗೂ ಕಿರುಚಿತ್ರಗಳ ಸಂಸ್ಕರಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಆಡ್ ಲ್ಯಾಬ್ಸ್ ಪ್ರೈ.ಲಿಮಿಟೆಡ್[ಬದಲಾಯಿಸಿ]

೧೯೮೭ ರಲ್ಲಿ ಇದೇ ಸಂಸ್ಥೆ ಆಡ್ಲ್ಯಾಬ್ ಪ್ರೈ.ಲಿಮಿಟೆಡ್ ಎಂಬ ಹೆಸರಿಗೆ ಪರಿವರ್ತನೆಗೊಂದು ಮುಂದೆ ಹೆಸರಾಂತ ಸಂಸ್ಕರಣ ಹಾಗೂ ಕನ್ನಡ ಚಲನಚಿತ್ರ ನಿರ್ಮಾಣ ಸಂಸ್ಥೆಯಾಗಿ ಮಾರ್ಪಾಡುಗೊಂಡಿತು. ಮಾಸುಮ್ ಎಂಬ ಮೊಟ್ಟಮೊದಲ ಚಿತ್ರ ಇಲ್ಲಿ ನಿರ್ಮಾಣವಾಯಿತು. ಇದನ್ನು ಹೆಸರಾಂತ ಚಿತ್ರ ನಿರ್ದೇಶಕ, ಶೇಖರ್ ಕಪೂರ್ ನಿರ್ದೇಶಿಸಿದ್ದರು. ಇದರಲ್ಲಿ ಯಶಸ್ಸನ್ನು ಕಂಡ ಶೆಟ್ಟಿಯವರು.

 • ಚಕ್ರ,
 • ಅರ್ಧಸತ್ಯ
 • ಹೋಳಿ,
 • ಹಿಪ್ ಹಿಪ್ ಹುರ್ರೆ,
 • ಆಘತ್ ಮೊದಲಾದ ಚಿತ್ರಗಳನ್ನು ನಿರ್ಮಿಸಿದರು.

ಹೀಗೆ ಆರಂಭವಾದ ಕಂಪೆನಿಯಿಂದ ಹಿಂದಿ ಚಲನಚಿತ್ರ ರಂಗದ ೯೦% ಪ್ರತಿಶತ್ ಚಿತ್ರಗಳು ಸಂಸ್ಕರಣಗೊಂಡವು. ನೂತನ ತಂತ್ರಜ್ಞಾನದ ಸಹಾಯದಿಂದ ದೇಶದಲ್ಲಿ ಪ್ರಥಮಾವೆಂಬಂತೆ, ೧೬ ಎಮ್. ಎಮ್. ನಿಂದ ೩೫ ಎಂ.ಎಂಗಳ ಅತಿದೊಡ್ಡ ಚಿತ್ರಗಳು ಬೆಳಕುಕಂಡವು.

ಮಲ್ಟಿಪ್ಲೆಕ್ಸ್ ಕ್ರಾಂತಿ[ಬದಲಾಯಿಸಿ]

೨೦೦೧ ರ ಮಾರ್ಚ್ ೨೫ ರಂದು, ದೇಶದಲ್ಲೇ ಪ್ರಪ್ರಥಮಾ 'ಐ ಮ್ಯಾಕ್ಸ್ ಡೋಮ್ ಥಿಯೇಟರ್' ನ್ನು ಶೆಟ್ಟಿಯವರು ಮುಂಬಯಿನ ವಡಾಲ ಜಿಲ್ಲೆಯಲ್ಲಿ ಸ್ಥಾಪನೆಗೊಳಿಸಿದರು. ಡೋಮ್ ಆಕಾರದ ಪರದೆಯಲ್ಲಿ ತ್ರಿ ಡಿ- ತಂತಜ್ಞಾನವನ್ನು ಅಳವಡಿಸಲಾಗಿತ್ತು. ೫೨೦ ಆರಾಮದಾಯಕ ಸೀಟಿರುವ ೧೩,೭೦೦ ಚ ಅಡಿ ವಿಶ್ವದ ಅತಿದೊಡ್ಡ ಸ್ಕ್ರೀನ್ ಎಂಬಹೆಗ್ಗಳಿಕೆಗೆ ಪಾತ್ರವಾಗಿದೆ. ೨೦೦೮ ರಲ್ಲಿ ಮಲ್ಟಿಪ್ಲೆಕ್ಸ್ ನೂರು ಸ್ಕ್ರೀನ್ ಗಳನ್ನು ಹೊಂದಿದ್ದ 'ಆಡ್ ಲ್ಯಾಬ್' ನ,ಮಾರುಕಟ್ಟೆ ಬಂಡವಾಳ ಆಸಮಯದಲ್ಲಿ ಒಟ್ಟು, ಒಂದು ಬಿಲಿಯನ್ ರೂಪಾಯಿಗಳಷ್ಟಿತ್ತು.

ವಾಕ್ ವಾಟರ್ ಮೀಡಿಯ ಲಿಮಿಟೆಡ್[ಬದಲಾಯಿಸಿ]

೨೦೦೭ ರಲ್ಲಿ ಶುರುವಾಯಿತು. ಉದ್ಯಮ ವ್ಯವಹಾರ, ಚಲನಚಿತ್ರ ನಿರ್ಮಾಣ,ದೂರದರ್ಶನ, ಆನಿಮೇಶನ್ ಹಾಗೂ ಮತ್ತಿತರ ಮಾಧ್ಯಮಗಳ ಬೆಳವಣಿಗೆಗೆ ಇದು ನಾಂದಿಯಾಯಿತು. ಇಬ್ಬರು ಪುತ್ರಿಯರಾದ [೫]'ಪೂಜಾಶೆಟ್ಟಿ ದೇವ್ರಾ,' ಮತ್ತು 'ಆರತಿಶೆಟ್ಟಿ' ಕಂಪೆನಿಯನ್ನು ಸಂಭಾಳಿಸಿಕೊಂಡು ಹೋಗುತ್ತಿದ್ದಾರೆ. 'ಮಿಲಿಂದ್ ದೇವೋರಾ',[೬] 'ಮುರಳಿ ದೇವೋರ' ರವರ ಪುತ್ರ. ಆರತಿ ಶೆಟ್ಟಿ ಚಿತ್ರನಿರ್ಮಾಣದ ಕ್ರಿಯೇಟಿವ್ ಹೆಡ್ ಆಗಿ, ಕಾರ್ಯ ನಿರ್ವಹಿಸುತ್ತಿದ್ದಾರೆ. ೨೦೧೦ ರಲ್ಲಿ 'ತೇರೆ ಬಿನ್ ಲಾದೆನ್' ಚಿತ್ರ ಸೂಪರ್ ಹಿಟ್ ದಾಖಲೆ ನಿರ್ಮಿಸಿತ್ತು.

ಆಡ್ ಲ್ಯಾಬ್ ಇಮೇಜಿಕ[ಬದಲಾಯಿಸಿ]

ಶೆಟ್ಟಿಯವರ ಮತ್ತೊಂದು ಮನರಂಜನಾ ಯೋಜನಾ ಸಂಸ್ಥೆ, 'ಇಮೇಜಿಕಾದ ಥೀಮ್ ಪಾರ್ಕ್' ಗಳನ್ನು ಒಟ್ಟು ೧೬೦೦ ಕೋಟಿ. ಎನ್.ಆರ್.ವಿಚ್ಚದಲ್ಲಿದಲ್ಲಿ ನಿರ್ಮಿಸಲಾಗಿದ್ದು ಸುಮಾರು ೩೦೦ ಎಕರೆಪ್ರದೇಶವನ್ನೊಳಗೊಂಡಿದೆ.ಮುಂಬಯಿ ಪುಣೆ ಎಕ್ಸ್ಪ್ರೆಸ್ ಕಾಲಾಪುರ್, ಖೊಪೋಲಿ ಹತ್ತಿರ ಸ್ಥಾಪನೆಗೊಂಡಿರುವ 'ಆಡ್ ಲ್ಯಾಬ್ ಇಮೇಜಿಕಾ'ದಲ್ಲಿ ೫೦೦ ಜನ ಸಿಬ್ಬಂದಿ ದೂಡಿಯುತ್ತಿದ್ದಾರೆ. ೨೦,೦೦೦ ಪ್ರವಾಸಿಗಳಿಗೆ ಇಲ್ಲಿ ಸ್ಥಳಾವಕಾಶವಿದೆ. ಮೊದಲವರ್ಷದ ಕೊನೆಯಲ್ಲಿ ಬೃಹತ್ ಪ್ರಮಾಣದಲ್ಲಿ ಪ್ರವಾಸಿಗರು ವೀಕ್ಷಿಸಬಹುದು. ಭಾರತೀಯ ಗ್ರಾಹಕರ ಮಾನಸಿಕ ರಹಸ್ಯವನ್ನು ತಿಳಿದು ಅದಕ್ಕೆ ಸ್ಪಂದಿಸುವಲ್ಲಿ ಯಶನ್ನು ಪಡೆದರು.

ಪ್ರಶಸ್ತಿಗಳು[ಬದಲಾಯಿಸಿ]

 • ಚಿತ್ರ ಸಂಸ್ಕರಣಾ ತಾಂತ್ರಿಕತೆಗೆ ಹಲವಾರು ಪ್ರಶಸ್ತಿಗಳು
 • ಫಿಲ್ಫೇರ್ ಅವಾರ್ಡ್ ಮತ್ತಿತರ ಪ್ರಶಸ್ತಿಗಳು
 • ೨೦೦೦ ಇಸವಿಯಲ್ಲಿ ಸಾರ್ವಜನಿಕ ಚಲನಚಿತ್ರ ಪ್ರದರ್ಶನಗಳ ಉದ್ಯಮಕ್ಕೆ ಹೆಜ್ಜೆ ಇಟ್ಟು ಯಶಸ್ವಿಯಾದ ಭಾರತದ ಹೆಸರಾಂತ ಸಂಸ್ಥೆಯೆಂದು ಹೆಸರು ಗಳಿಸಿತು.
 • ದಿ ರಾಮನಾಥ ಎಸ್. ಪಯ್ಯಡೆ ಸ್ಮರಣಾರ್ಥ ವರ್ಷದ ಶ್ರೇಷ್ಠ ಸಮಾಜಸೇವಕ ಪ್ರಶಸ್ತಿ.[೭]

ಇತರ ಚಟುವಟಿಕೆಗಳು[ಬದಲಾಯಿಸಿ]

 • ರಾಷ್ಟ್ರೀಯ ಫಿಲ್ಮ್ ಡೆವೆಲಪ್ಮೆಂಟ್ ಕಾರ್ಪೊರೇಶನ್ ನ, ಮಾಜಿ ಕಾರ್ಯಾಧ್ಯಕ್ಷರಾಗಿದ್ದರು.

ಮನರಂಜನಾಸಂಸ್ಥೆಯ ಅಡಿಯಲ್ಲಿ ನಿರ್ಮಿಸಿದ ಚಿತ್ರಗಳು[ಬದಲಾಯಿಸಿ]

 • ಗಂಗಾಜಲ್
 • ಮೈ ಮಾಧುರಿ ದೀಕ್ಷಿತ್ ಬನ್ ನಾ ಚಾಹತೀ ಹೂ,
 • ಇಂತೇಹ್,
 • ಮುನ್ನಾಭಾಯ್ ಎಂಬಿಬಿಎಸ್ ಚಿತ್ರಗಳು

ಫಿಲ್ಮೋಗ್ರಫಿ[ಬದಲಾಯಿಸಿ]

ಫಿಲ್ಮೋಗ್ರಫಿಯಲ್ಲಿ,(೨೦೦೩-೨೦೦೮ರಲ್ಲಿ),

 • ದೇವ್,
 • ದಿಲ್ ಜೋ ಭಿ ಕಹೆ,
 • ಬ್ಲಫ್ ಮಾಸ್ಟರ್,
 • ವಕ್ತ್,
 • ಅಪಹರಣ್,
 • ಟ್ಯಾಕ್ಸಿ ನಂಬರ್ ೯೨೧೧,
 • ಶಿವ್,
 • ದರ್ವಾಜ ಬ್ಂದ್ ರಖೊ,
 • ಮಿಟ್ಟೀ ವಜನ್ ಮಾರ್ ದೀ,
 • ಜಾನೀ ಗದ್ದಾರ್,
 • ಕೊಯ ಕೊಯ ಚಾಂದ್,
 • ಮೆರಿ ಗೋಲ್ಡ್,
 • ರಾಮ್ ಗೋಪಾಲ್ ವರ್ಮಾ ಕಿ ಆಗ್,
 • ನಿಶಬ್ದ್,
 • ದಿಲ್ ದೋಸ್ತಿ,
 • ನಮಸ್ತೆ ಲಂಡನ್,
 • ಸಿಂಗ್ ಈಸ್ ಕಿಂಗ್,

ಉಲ್ಲೇಖಗಳು[ಬದಲಾಯಿಸಿ]

 1. ಆರತಿ ಶಶಿಕಿರಣ್‌ ಶೆಟ್ಟಿ ಜ್ಯೂನಿಯರ್‌ ಕಾಲೇಜು ಲೋಕಾರ್ಪಣೆ[ಶಾಶ್ವತವಾಗಿ ಮಡಿದ ಕೊಂಡಿ]
 2. Indian Bollywood personality Manmohan Shetty (C) with daughters Pooja Shetty (L) and Aarti Shetty (R) at the Adlabs Imagica theme park at Khopoli, on April 15, 2013
 3. http://articles.economictimes.indiatimes.com/keyword/manmohan-shetty/recent/2
 4. http://www.in.com/manmohan-shetty/photogallery-497377.html?imid=099faJQdTOc7e[ಶಾಶ್ವತವಾಗಿ ಮಡಿದ ಕೊಂಡಿ]
 5. http://www.indiainfoline.com/Markets/News/Manmohan-Shetty-launches-ADLABS-IMAGICA/5661181603
 6. "ಆರ್ಕೈವ್ ನಕಲು". Archived from the original on 2017-03-28. Retrieved 2014-04-15.
 7. "ಆರ್ಕೈವ್ ನಕಲು". Archived from the original on 2016-03-04. Retrieved 2014-04-17.

-ನಿರೂಪಣೆ : ಪ್ರೇಮ್ ನಾಥ ಮಂಡ್ಕೂರ್, 'ಕರ್ನಾಟಕ ಮಲ್ಲ', ದಿನಪತ್ರಿಕೆ, ೨೦೧೪, ಏಪ್ರಿಲ್, ೧೩, ಪು. ೪