ಮಟ್ಕಾಕುಲ್ಫಿ
Jump to navigation
Jump to search
ಮಟ್ಕಾಕುಲ್ಫಿ ಉತ್ತರ ಭಾರತದಲ್ಲಿ ಪ್ರಸಿದ್ಧವಾಗಿರುವ ಒಂದು ತಂಪು ತಿನಿಸು . ದೊಡ್ಡ ಹಂಡೆಯಂಥ ಮಡಕೆಯಲ್ಲಿ ಮುಚ್ಚಳವುಳ್ಳ ಪ್ಲಾಸ್ಟಿಕ್ ಕೋನ್‌ಗಳ ತುಂಬಾ ಕುಲ್ಫಿ ಸಿದ್ಧವಾಗಿರುತ್ತದೆ. ಈ ಕುಲ್ಫಿಯನ್ನು ಹೆರೆದು ತೆಗೆದು ಒಂದು ತಟ್ಟೆಯಲ್ಲಿಟ್ಟು ಅದರ ಮೇಲೆ ಗಂಜಿಯಿಂದ ತಯಾರಿಸಿದ ನಾರುನಾರು ಶ್ಯಾವಿಗೆಯನ್ನು ಹಿಡಿಯಷ್ಟು ಹಾಕುತ್ತಾರೆ. ಅನಂತರ ಅದಕ್ಕೆ ಸ್ವಲ್ಪ ರಬ್ಡಿ, ಸ್ವಲ್ಪ ಜೇನು, ಸ್ವಲ್ಪ ಗುಲ್ಕನ್ ಸೇರಿಸಿ ಅದರ ಮೇಲೆ ಪಿಸ್ತಾ ಹಾಗೂ ಏಲಕ್ಕಿ ಚೂರುಗಳನ್ನು ಹಾಕಿ ಕೊಡುತ್ತಾರೆ. ಚಮಚೆಯಲ್ಲಿ ಕಲಸಿ ಒಂದು ಚೂರು ಬಾಯಿಗಿಟ್ಟರೆ ಸಿಹಿ, ತಂಪು ಪರಿಮಳದ ಸ್ವಾದಕ್ಕೆ ಮೈಮನ ಎಲ್ಲೋ ತೇಲುತ್ತದೆ. ಮಟ್ಕಾ ಕುಲ್ಫಿಯಂತೆಯೇ ಇರುವ ರಬ್ಡಿ ಫಲೂದಾದಲ್ಲಿ ಅದೇ ಪದಾರ್ಥಗಳಿದ್ದರೂ ಕುಲ್ಫಿಯ ಬದಲಾಗಿ ಹೆಚ್ಚು ರಬ್ಡಿ ಇರುತ್ತದೆ.