ಮಂತ್ರಾಲಯಂ ಶ್ರೀ ರಾಘವೇಂದ್ರಸ್ವಾಮಿ ಮಠ, ಜೋಗೇಶ್ವರಿ, ಮುಂಬೈ
ಶ್ರೀ ರಾಘವೇಂದ್ರ ಸ್ವಾಮಿಗಳ (1595–1671 CE), ಬಾಲ್ಯದ ಹೆಸರು ವೆಂಕಣ್ಣಭಟ್ಟರೆಂದು. ಮುಂದೆ ಯತಿಗಳಾಗಿ ಸಿದ್ಧಿಪಡೆದು ಶ್ರೀರಾಘವೆಂದ್ರ ಸ್ವಾಮಿಗಳೆಂದು ಜಗದ್ವಿಖ್ಯಾತರಾದರು. ಅವರು ಸ್ಥಾಪಿಸಿದ ಶ್ರೀಮಠವು, ಆಂಧ್ರಪ್ರದೇಶದ ಮಂತ್ರಾಲಯಂ ರೋಡ್ ರೈಲ್ವೆ ನಿಲ್ದಾಣಕ್ಕೆ ೮ ಕಿ.ಮೀ.ದೂರದಲ್ಲಿದೆ. ಮುಂಬಯಿನ ಉಪನಗರ, ಜೋಗೇಶ್ವರಿಯಲ್ಲಿ ೧೯೭೧ ರಲ್ಲಿ,'ಶ್ರೀ ರಾಘವೇಂದ್ರ ಸ್ವಾಮಿಮಠ'ವನ್ನು ಸ್ಥಾಪಿಸಲಾಯಿತು. ಈಗ ಆ ಮಠವನ್ನು 'ಅಭಿನವ ಮಂತ್ರಾಲಯ' [೧] ವೆಂಬ ಹೆಸರಿನಲ್ಲಿ ಅಭಿವೃದ್ಧಿಗೊಳಿಸಲು ಸಕಲ ಸಿದ್ಧತೆಗಳೂ ನಡೆಯುತ್ತಿವೆ. ಜೋಗೇಶ್ವರಿ ಮಠವು, ಆಂಧ್ರಪ್ರದೇಶದ ಮಂತ್ರಾಲಯ ಕ್ಷೇತ್ರದಲ್ಲಿರುವ ರಾಘವೇಂದ್ರಸ್ವಾಮಿಗಳ ಮಠದ ಒಂದು ಶಾಖೆಯಾಗಿದೆ.[೨] ಬೃಹದ್ ಯೋಜನೆಯ ಕರಡು ಪ್ರತಿ ಸಿದ್ಧವಾಗಿದ್ದು, ಅದನ್ನು ಕಾರ್ಯಾನ್ವಯಮಾಡಲು ಸದ್ಭಕ್ತರೆಲ್ಲಾ ನಿಷ್ಠೆಯಿಂದ ಮಠದ ಪುನರ್ನಿರ್ಮಾಣ ಕಾರ್ಯಕ್ಕೆ ಶ್ರಮಿಸುತ್ತಿದ್ದಾರೆ. ಧನಸಂಗ್ರಣೆಯ ಕಾರ್ಯದಲ್ಲಿ ತೊಡಗಿದ್ದಾರೆ.[೩] ಮಂತ್ರಾಲಯದ ಯತಿವರ್ಯರಾದ ಸುಮತೀಂದ್ರ ತೀರ್ಥ ಸ್ವಾಮಿಜಿ, ಮತ್ತು ಶ್ರಿ. ಸುಶಮೀಂದ್ರತೀರ್ಥ ಸ್ವಾಮಿಜಿಯವರು ಈ ಅಭಿಯಾನಕ್ಕೆ ತಮ್ಮ ಅನುಗ್ರಹವನ್ನು ನೀಡಿ ಹರಸಿದ್ದಾರೆ. ಅಭಿನವ ಮಂತ್ರಾಲಯ ಯೋಜನೆ : ಇದರ ಬಗ್ಗೆ ರಚಿಸಿರುವ ವೆಬ್ ಸೈಟ್ ನಲ್ಲಿ ಸರ್ವವೂ (ಯೋಜನೆಯ ಎಲ್ಲಾ ವಿವರಗಳೂ) ಉಪಲಭ್ದವಿದೆ. [೧] Archived 2014-02-21 ವೇಬ್ಯಾಕ್ ಮೆಷಿನ್ ನಲ್ಲಿ.
ಜೋಗೇಶ್ವರಿ ಮಠದ ಜಾಗ
[ಬದಲಾಯಿಸಿ]ಮುಂಬಯಿ ಉಪನಗರ ಜೋಗೇಶ್ವರಿಯಲ್ಲಿರುವ ಶ್ರೀಮಠವಿರುವ ಜಾಗದಲ್ಲಿ ನೆಲೆಸಿದ್ದ, ಶ್ರೀ.ಸಿಂಗ್, ರಾಘವೇಂದ್ರ ಸ್ವಾಮಿಗಳ ಪರಮಭಕ್ತರು. ನಾರಾಯಣನ ಪೂಜೆಯಲ್ಲಿ ಸದಾ ಆಸಕ್ತರು. ಆಗಾಗ ಮಂತ್ರಾಲಯಕ್ಕೆ ಸೇವಾರ್ಥವಾಗಿ ಹೋಗಿಬರುತ್ತಿದ್ದರು. ಒಮ್ಮೆ ೧೯೬೦ ರಲ್ಲಿ ಜಮೀನಿನ ಮಾಲಿಕ ಶ್ರೀ.ಸಿಂಗ್ ಮಂತ್ರಾಲಯಕ್ಕೆ ಭೆಟ್ಟಿನೀಡಲು ಕಾತುರರಾಗಿದ್ದರು. ಸ್ವಪ್ನದಲ್ಲಿ ರಾಘವೇಂದ್ರ ಸ್ವಾಮಿಗಳು ಪ್ರತ್ಯಕ್ಷರಾಗಿ, ಮಂತ್ರಾಲಯಕ್ಕೆ ಬರುವ ಕಷ್ಟ ತೆಗೆದುಕೊಳ್ಳಬೇಡ. ನಿನ್ನ ಮನೆಯಿರುವ ಜಾಗದಲ್ಲೇ ನಾನಿದ್ದೇನೆ ಎಂದು ಹೇಳಿದರಂತೆ.[ಸೂಕ್ತ ಉಲ್ಲೇಖನ ಬೇಕು] ಇದನ್ನು ಕೇಳಿದ ಸಿಂಗ್, ತಮ್ಮ ಮನೆ ಯ ಹತ್ತಿರವಿದ್ದ ಹೆಚ್ಚುವರಿ ಜಾಗವನ್ನು ಆಶ್ರಮಕ್ಕೆ ಕೊಟ್ಟರು. ನಂತರ 'ಮ್ಹಾಡ' ದವರು ಇದನ್ನು ತಮ್ಮ ವಶಕ್ಕೆ ತೆಗೆದುಕೊಂಡು ಈಗಿನ ದೇವಸ್ಥಾನ ನಿರ್ಮಾಣಕ್ಕೆ 'ಲೀಸ್' ಮೇಲೆ ತೆರೆವುಮಾಡಿಕೊಟ್ಟರು ೧೯೭೧ ರಲ್ಲಿ ಬೃಂದಾವನವನ್ನು ನಿರ್ಮಿಸಿದರು. ೩೩೦ ವರ್ಷದ ಬಳಿಕ, ರಾಯರ ಸಮಕಾಲೀನರಾದ 'ಶ್ರೀ ಅಪ್ಪಣಾ ಚಾರ್ಯರು' ೩೩ ಶ್ಲೋಕಗಳನ್ನು ವಿರಚಿಸಿದ್ದಾರೆ. ಇದನ್ನು ಮುಸಲ್ಮಾನ್ ಭಕ್ತನೊಬ್ಬನಿಂದ ಕನ್ನಡ ಭಾಷೆಯಲ್ಲಿ ಬರೆಸಲ್ಪಟ್ಟ ಶ್ಲೋಕಗಳನ್ನು ರಚಿಸಿದ ಫಲಕವನ್ನು ವೃಂದಾವನದ ಗೋಡೆಯಮೇಲೆ ಸ್ಥಾಪನೆ ಮಾಡಿದ್ದಾರೆ. 'ಪಂ.ಹುಸೇನಿ ಸಾಬ್' ಎನ್ನುವ ಹಿಂದೂಸ್ತಾನಿ ಹಾಡುಗಾರ, ಆಗಾಗ ತಮ್ಮ ಪಕ್ಕವಾದ್ಯದವರೊಂದಿಗೆ ಇಲ್ಲಿಗೆ ಬಂದು ತಮ್ಮ, ಸಂಗೀತ ಕಾರ್ಯಕ್ರಮವನ್ನು ಕೊಡುತ್ತಿದ್ದಾರೆ.೧೬೪೨ ರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಶ್ರೀಗಳನ್ನು 'ಕೊಲ್ಹಾಪುರ'ಕ್ಕೆ, ಕರೆಸಿಕೊಂಡಿದ್ದರು.
ಮಂತ್ರಾಲಯದ ಮಠ
[ಬದಲಾಯಿಸಿ]೧೭ ನೆಯ ಶತಮಾನದ ಯತಿವರ್ಯ, ಮಧ್ವಾಚಾರ್ಯರ ಅನುಯಾಯಿಯಾಗಿ, ಮಧ್ವ ಮತದ ದ್ವೈತ ಸಿದ್ಧಾಂತ ಪ್ರತಿಪಾದಕ, ವೀಣಾವಾದ್ಯ ವಿಶಾರದ, ಶ್ರೀ ರಾಘವೇಂದ್ರ ಸ್ವಾಮಿಗಳು,[೪] ಒಟ್ಟಾರೆ ೪೨ ಗ್ರಂಥಗಳ ಕರ್ತೃ. ಅವರ ಬಾಲ್ಯದ ಹೆಸರು 'ವೆಂಕಟನಾಥ'. ೧೬೨೧ ರಲ್ಲಿ ಸನ್ಯಾಸಾಶ್ರಮ ಸ್ವೀಕರಿಸಿದರು. ರಾಘವೇಂದ್ರಯತಿ, ಸುಧೀಂದ್ರತೀರ್ಥರ ತರುವಾಯ ೧೬೨೩ರಲ್ಲಿ ಶ್ರೀರಾಘವೇಂದ್ರತೀರ್ಥರೆಂಬ ಹೆಸರಿನಲ್ಲಿ ಮಂಚಾಲಿಯಲ್ಲಿ ಮಠ ಸ್ಥಾಪಿಸಿದರು. ಹೈದರಾಬಾದಿನ ನವಾಬ, ಅವರಿಗೆ ಬಳುವಳಿಯಾಗಿ ಕೊಟ್ಟ ಈಗಿನ 'ಮಂತ್ರಾಲಯಂ ಗ್ರಾಮ', ಪ್ರಖ್ಯಾತ ವಾಗಿದೆ. ಇದು, ಮಂತ್ರಾಲಯಂ ರೋಡ್ ರೈಲ್ವೆ ನಿಲ್ದಾಣ, ದಿಂದ ೮ ಕಿ.ಮಿ, 'ಗುಂತಕಲ್-ಬೆಂಗಳೂರು ರೈಲುದಾರಿ'ಯಲ್ಲಿದೆ. 'ಮದ್ರಾಸ್ ಗೆಝೆಟಿಯರ್' ನಲ್ಲಿ ಉಲ್ಲೇಖಿಸಿದಂತೆ, ಮಂಚಾಲಿ ಗ್ರಾಮವನ್ನು ತಮ್ಮ ಸಾಮ್ರಾಜ್ಯಕ್ಕೆ ಸೇರಿಸಿಕೊಳ್ಳಲು, 'ಬ್ರಿಟಿಷ್ ಸರಕಾರದ ರೆವಿನ್ಯೂ ಅಧಿಕಾರಿ, ಮಿ.ಥಾಮಸ್ ಮುನ್ರೋ' ಹವಣಿಸಿ, ಮಂಚಾಲಿ ಗ್ರಾಮವನ್ನು ಸರ್ಕಾರದ ವ್ಯಾಪ್ತಿಗೆ ಸೇರಿಸಿ ಕೊಳ್ಳಲು ಕಾಗದ ಪತ್ರ ಜೋಡಿಸುತ್ತಿದ್ದ. ಸರಕಾರದಿಂದ ಶ್ರೀಮಠಕ್ಕೆ ಬರುತ್ತಿದ್ದ ರಿಯಾಯಿತಿಯನ್ನು ತಪ್ಪಿಸಲು ಮುಂದಾಗಿದ್ದ. ಆತ ಬಂದು ಮಠದ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ರಾತ್ರಿ ಅವನ ಕನಸಿನಲ್ಲಿ ರಾಯರು ಪ್ರತ್ಯಕ್ಷವಾಗಿ ಶ್ರೀಮಠಕ್ಕೆ ಮಂಚಾಲಿಗ್ರಾಮವನ್ನು ಒಪ್ಪಿಸ ಬೇಕೆಂದು ಅಪ್ಪಣೆ ಕೊಡಿಸಿದ್ದರಿಂದ, ಅವನ ನಿರ್ಣಯ ಬದಲಾಯಿತು.
ಶ್ರೀ.ಸುಬುಧೇಂದ್ರ ತೀರ್ಥಸ್ವಾಮಿಗಳ ಬೇಟಿ
[ಬದಲಾಯಿಸಿ][೫] ಅಭಿನವ ಮಂತ್ರಾಲಯದ ನೂತನ ಯೋಜನೆಯ ಉದ್ಘಾಟನೆಯನ್ನು ಮಾಡಿದ ಸ್ವಾಮಿಗಳು [೬] ಶ್ರೀ.ಸುಬುಧೇಂದ್ರ ತೀರ್ಥಸ್ವಾಮಿಗಳು, ಹೊಸ ಕಟ್ಟಡದ ಬೆಳವಣಿಗೆಗಳನ್ನು ಅವಲೋಕಿಸಿ ಸೂಕ್ತ ಸಲಹೆಕೊಡುವುದಲ್ಲದೆ, ನೆರವನ್ನೂ ಅನುಗ್ರಹಿಸಿರುತ್ತಾರೆ. [೭]
ದೇವಾಲಯ ನಿರ್ಮಾಣದಲ್ಲಿ
[ಬದಲಾಯಿಸಿ]- ಆರ್.ಜೆ.ಆಶರ್ ಅಂಡ್ ಕಂ ಮುಂಬಯಿ[೮]
ನೂತನ ಅಭಿನವ ಮಂತ್ರಾಲಯದ ಲೋಕಾರ್ಪಣಾ ಮಹೋತ್ಸವ
[ಬದಲಾಯಿಸಿ]೨೦೧೭ ರ ಮಾರ್ಚ್, ೨೦,ಸೋಮವಾರದಂದು ಹಳೆ ಮಠದ ಪರಿಸರದಲ್ಲಿಯೇ ನೂತನ ಮಠವನ್ನು ನಿರ್ಮಿಸಲಾಗಿದ್ದು, ಅದರ ಉದ್ಘಾಟನಾ ಮಹೋತ್ಸವವನ್ನು ಶ್ರೀ.ಸುಬುಧೇಂದ್ರ ತೀರ್ಥರು ನೆರೆವೇರಿಸಿ, ಭಕ್ತಾದಿಗಳನ್ನು ಆಶೀರ್ವದಿಸಿದರು. [೯] ಮಂತ್ರಾಲಯದ ಮೂಲ ಸಂಸ್ಥಾನದ ಪೀಠಾಧಿಪತಿ ೧೯೭೧ ರಲ್ಲಿ ಶ್ರೀ ಸುಜಯೀಂದ್ರ ತೀರ್ಥರು ಭಕ್ತರನ್ನು ಆಶೀರ್ವದಿಸಿ ಬೃಂದಾವನ ಸ್ಥಾಪಿಸಿದ್ದರು. ಮಂತ್ರಾಕ್ಷತೆಯ ಗಾತ್ರದ ಮೂಲ ವೃತ್ತಿಕೆಯನ್ನು ಬೃಂದಾವನದಲ್ಲಿ ಆಗ ಅಳವಡಿಸಿದ್ದರು. ಮುಂದಿನ ವರ್ಷಗಳಲ್ಲಿ ಶ್ರೀಶುಷ್ಮೀಂದ್ರ ತೀರ್ಥರು,ಹಾಗೂ ಸುಯತೀಂದ್ರ ತೀರ್ಥರು ಆಗಮಿಸಿ ಆಶೀರ್ವಚನ ನೀಡಿದ್ದರು. ಈಗ, ಶ್ರೀಸುಬುಧೇಂದ್ರ ತೀರ್ಥಸ್ವಾಮಿಗಳು, ಆ ಕಾರ್ಯವನ್ನು ಮುಂದುವರೆಸಿ, ನೂತನ ಕಟ್ಟಡವನ್ನು ಭಕ್ತಾದಿಗಳು ಹಾಗೂ ಶ್ರದ್ಧಾಳುಗಳ ನೆರವಿನಿಂದ ಸಂಪೂರ್ಣಗೊಳಿಸಿದ್ದಾರೆ. ವೆಂಕಟೇಶ ವಿಗ್ರಹ, ಮುಖ್ಯಪ್ರಾಣದೇವರು,ರುದ್ರದೇವರು,ಮಂಚಾಲಮ್ಮ ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ಶಂಖತೀರ್ಥ,ತುಪ್ಪ-ಗಂಧ-ಫಲಾದಿಗಳ ಅರ್ಪಣೆಗಳೊಂದಿಗೆ ಪೂಜಾ ವಿಧಿ-ವಿಧಾನಗಳನ್ನು ಸಂಪನ್ನಗೊಳಿಸಿದ್ದಾರೆ.
ದೇವಸ್ಥಾನ ಶಿಲ್ಪಿಗಳು
[ಬದಲಾಯಿಸಿ]ಶ್ರೀ ದಕ್ಷಿಣಾ ಮೂರ್ತಿ, ಶ್ರೀ ಗಣೇಶ್ ಮೂರ್ತಿ,
ವಿವೇಕ್ ವೈದಿಕ್ ಆರ್ಕಿಟೆಕ್ಟ್ಸ್, ಚೆನ್ನೈ
ಉಲ್ಲೇಖಗಳು
[ಬದಲಾಯಿಸಿ]- ↑ Abhinava Mantralaya
- ↑ "The Life and Times of Sri Raghavendra Swamy, Mantralaya by G. Venkatesh". Archived from the original on 2014-07-02. Retrieved 2014-07-01.
- ↑ 'ಆಯಕರ ತಜ್ಞ, ವರಿಷ್ಠ ನ್ಯಾಯಾಲಯದ ನ್ಯಾಯವಾದಿ, ಸಮಾಜಸೇವಕ, ಎನ್.ಆರ್.ರಾವ್ ಮಠಕ್ಕೆ ಬಹುದೊಡ್ಡ ದಾನಿ'
- ↑ "Life Story of Guru Raghavendra Swamy | More Details". Archived from the original on 2015-09-20. Retrieved 2014-07-02.
- ↑ "'ಟೆಂಪಲ್ ಕಾಂಪ್ಲೆಕ್ಸ್ ಆಗಿ ಹೊರಹೊಮ್ಮಲಿದೆ' ಎಂದು 'ಮುಂಬಯಿಯ ಜೋಗೇಶ್ವರಿ ಮಠದ ಅಭಿನವ ಮಂತ್ರಾಲಯ'ಕ್ಕೆ ಭೇಟಿನೀಡಿದ ಶ್ರೀ.ಸುಬುಧೇಂದ್ರ ತೀರ್ಥಸ್ವಾಮಿಗಳು ನುಡಿದರು". Archived from the original on 2016-04-11. Retrieved 2016-05-12.
- ↑ ಮಂತ್ರಾಲಯ ರಾಯರ ಮಠ ಹೊಸ ಉತ್ತರಾಧಿಕಾರಿ Sunday, May 26, 2013
- ↑ 'ಕಾರ್ನಾಟಕ ಮಲ್ಲ', ೧೬-೦೫-೨೦೧೬, ಪುಟ-೭, "ಅಭಿನವ ಮಂತ್ರಾಲಯ ಮುಂಬಯಿ-ಜೋಗೇಶ್ವರಿಯಲ್ಲಿ ಸಾಕಾರಗೊಳ್ಳುತ್ತಿದೆ". ಲೇಖನ ಸುಪ್ರಸಿದ್ಧ ಅಂಕಣಕಾರ, ಡಾ. ಜಿ.ವಿ.ಕುಲಕರ್ಣಿಯವರಿಂದ
- ↑ ಕಾರ್ನಾಟಕ ಮಲ್ಲ ದಿನಪತ್ರಿಕೆ,ಪು.೭, 'ಅಭಿನವ ಮಂತ್ರಾಲಯ' ಮುಂಬಯಿಯ ಜೋಗೇಶ್ವರಿಯಲ್ಲಿ, ಸಾಕಾರಗೊಳ್ಳುತ್ತಿದೆ-೨-'ಜೀವನ ಮತ್ತು ಸಾಹಿತ್ಯ ಅಂಕಣ'. ಡಾ.ಜಿ.ವಿ.ಕುಲಕರ್ಣಿ
- ↑ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠ,ಜೋಗೇಶ್ವರಿ ಶಾಖೆಯಲ್ಲಿ ಅಭಿನವ ಮಂತ್ರಾಲಯ ಲೋಕಾರ್ಪಣೆ, ಬೃಂದಾವನ ಪುನಃಪ್ರತಿಷ್ಠಾಪನೆ.ಉದಯವಾಣಿ ಪತ್ರಿಕೆ, ೨೧,ಮಾರ್ಚ್,೨೦೧೭,ಮಂಗಳವಾರ
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- ಕಾರ್ನಾಟಕ ಮಲ್ಲ, ೨೯,ಆಗಸ್ಟ್, ೨೦೧೬,ಜೀವನ ಮತ್ತು ಸಾಹಿತ್ಯ, ಡಾ.ಜಿ.ವಿ.ಕುಲಕರ್ಣಿ, ರಾಘವೇಂದ್ರಸ್ವಾಮಿಗಳ ೩೪೫ ನೇ ಆರಾಧನಾ ಮಹೋತ್ಸವ. ಪುಟ.೭
- [VID-20170323-WA0004.mp4 ಯೂಟ್ಯೂಬ್, Mumbai news]