ಚರ್ಚೆಪುಟ:ಮಂತ್ರಾಲಯಂ ಶ್ರೀ ರಾಘವೇಂದ್ರಸ್ವಾಮಿ ಮಠ, ಜೋಗೇಶ್ವರಿ, ಮುಂಬೈ
(suMkadavar ೧೧:೧೦, ೨ ಜುಲೈ ೨೦೧೪ (UTC))
ಸ್ವಾಮಿಗಳು, ಮಠ, ಮತ್ತು ಯತಿಗಳ ಬಗ್ಗೆ ಲೇಖನಗಳೆಲ್ಲೇ ಇರಲಿ, ಅವಕ್ಕೆ, ಲಿಂಕ್ ಕೊಡುವುದು ಕಸ್ಟಸಾಧ್ಯವಾದ ಕೆಲಸ. ವೈಜ್ಞಾನಿಕ ಲೇಖನಗಳ ಮಾತೇ ಬೇರೆ. ಇನ್ನು ೨೦ ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ಈ ಜೋಗೇಶ್ವರಿ ಮಠ, ಈಗ ಮರು ರೂಪಾಂತರಗೊಳ್ಳುತ್ತಿದೆ. ಈ ಮಹತ್ಕಾರ್ಯದಲ್ಲಿ ನಿರತರಾಗಿ ಹಗಲಿರುಳೂ ದುಡಿಯುತ್ತಿರುವ ಭಕ್ತರು ಸಾವಿರಾರು ಮಂದಿ. ಈಗಿರುವ ಜಾಗದಲ್ಲಿ ನೆಲೆಮಾಡಿರುವ ಮಠದ ಜಾಗವನ್ನು ಒಬ್ಬ ಸಿಂಗ್ ಎನ್ನುವ ವ್ಯಕ್ತಿ ಹೊಂದಿದ್ದರು. ಅವರಿಗೆ ಕನಸಿನಲ್ಲಿ ಮಂತ್ರಾಲಯದ ಶ್ರೀಗಳು ಪ್ರತ್ಯಕ್ಷರಾಗಿ ಮುಂಬೈನಲ್ಲಿ ತಮ್ಮ ಸನ್ನಿಧಾನಸ್ಥಾಪನೆಗೆ ಕರೆಕೊಟ್ಟಾಗ, ಆತನು ತನ್ನ ಜಾಗದಲ್ಲಿ ಸ್ವಲ್ಪ ಹೆಚ್ಚಾಗಿದ್ದ ಸ್ಥಳವನ್ನು ಶ್ರೀಮಠಕ್ಕೆ ದಾನವಾಗಿ ಕೊಟ್ಟನೆಂದು ನನಗೆ ಇಲ್ಲಿನ ಆಶ್ರಮದ ಅಧಿಕಾರಿಗಳು ಮನವಿಮಾಡಿದರು. ಅದಕ್ಕೆ ಪುರಾವೆಯೆಂಬಂತೆ, ನಾನು ನಮೂದಿಸಿರುವ ಲಿಂಕ್ ಗಳು ಸ್ಪಷ್ಟವಾಗಿ ಮಾಹಿತಿ ನೀಡುತ್ತವೆ. ಸಿಂಗ್ ಹೇಳಿಕೆಯ ಪತ್ರವಾಗಲೀ ಬೇರೆ ಸಾಬೀತುಗಳು ಎಲ್ಲೂ ಇಲ್ಲ. ಇದಕ್ಕೆ ಸಂಬಂಧಪಟ್ಟ ಇತರೆ ಲೇಖನಗಳ ಶೈಲಿಯೂ ಇದೇ ತರಹ ಇದೆ. ನಿಮಗೆ ಅರ್ಥವಾಗುವುದು ಕಷ್ಟ. ಇಷ್ಟು ಮಾತ್ರ ಹೇಳಬಹುದು. ಭಾರತೀಯ ದೇಸಿ ಪದ್ಧತಿಯ ಹಲವಾರು ಲೇಖನಗಳು ಇಂಗ್ಲೀಷ್ ಮಾದರಿಯ ರೀತಿಯಲ್ಲಿ ಬರೆಯುವ ಅಗತ್ಯ ನನಗೆ ಕಾಣಿಸುವುದಿಲ್ಲ. ಇಲ್ಲಿನ ವಿಷಯ ಪ್ರತಿಪಾದನೆಗೆ ವಿಶೇಷ ಅರ್ಥವಿದೆ. ಪ್ರತ್ಯಕ್ಷ, ಕನಸು, ಪವಾಡ, ವೃಂದಾವನದೊಳಗೆ ಸಜೀವ ಸಮಾಧಿ,ಪರಮಾತ್ಮನ ದಿವ್ಯದರ್ಶನ, ಜ್ಞಾನೋದಯ, ದೀಕ್ಷೆ, ಪರಮ ಬೋಧೆ,ಪಾರೋಕ್ಷ ಜ್ಞಾನ, ಇವೆಲ್ಲದರ ಬಗ್ಗೆ ವಿವರಣೆಯನ್ನು ಕೊಡುವುದು ಅತಿ ಕ್ಲಿಷ್ಟಕರ ಸಂಗತಿ. ವಿಕಿಪೀಡಿಯದ ಹಲವಾರು ಲೇಖನಗಳು ಅವು ಲೇಖನಗಳೇ ಆನ್ನಿಸುವಷ್ಟು ಕೆಟ್ಟದಾಗಿವೆ. ದಯಮಾಡಿ ಕಣ್ಣು ಬಿಟ್ಟು ನೊಡಿ.
Start a discussion about ಮಂತ್ರಾಲಯಂ ಶ್ರೀ ರಾಘವೇಂದ್ರಸ್ವಾಮಿ ಮಠ, ಜೋಗೇಶ್ವರಿ, ಮುಂಬೈ
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಮಂತ್ರಾಲಯಂ ಶ್ರೀ ರಾಘವೇಂದ್ರಸ್ವಾಮಿ ಮಠ, ಜೋಗೇಶ್ವರಿ, ಮುಂಬೈ.