ಭೋಜ್‍ತಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭೋಜ್‍ತಾಲ್ (ಪೂರ್ವದಲ್ಲಿ ಮೇಲಿನ ಸರೋವರ ಅಥವಾ ಅಪರ್ ಲೇಕ್ ಎಂದು ಪರಿಚಿತವಾಗಿತ್ತು) ಭಾರತದ ಮಧ್ಯ ಪ್ರದೇಶದ ರಾಜಧಾನಿ ನಗರ ಭೊಪಾಲ್ನ ಪಶ್ಚಿಮ ಬದಿಯಲ್ಲಿ ಸ್ಥಿತವಾಗಿರುವ ಒಂದು ದೊಡ್ಡ ಸರೋವರವಾಗಿದೆ. ಇದು ಈ ನಗರದ ನಿವಾಸಿಗಳಿಗೆ ಕುಡಿಯುವ ನೀರಿನ ಒಂದು ಪ್ರಮುಖ ಮೂಲವಾಗಿದೆ. ಇದು ಸುಮಾರು 40% ನಿವಾಸಿಗಳಿಗೆ ದಿನಕ್ಕೆ ಸುಮಾರು ೩೦ ದಶಲಕ್ಷ ಇಂಪೀರಿಯಲ್ ಗ್ಯಾಲನ್‌ಗಷ್ಟು ನೀರು ಒದಗಿಸುತ್ತದೆ.[೧] ಹತ್ತಿರದ ಛೋಟಾ ತಾಲಾಬ್ ಜೊತೆಗೆ, ಬಡಾ ತಾಲಾಬ್ ಇವೆರಡೂ ಭೋಜ್ ತರಿ ಜಮೀನನ್ನು ರೂಪಿಸುತ್ತವೆ. ಈಗ ಇದು ಒಂದು ರಾಮ್‍ಸಾರ್ ತಾಣವಾಗಿದೆ.[೨]

ಸ್ಥಳೀಯ ಜಾನಪದದ ಪ್ರಕಾರ, ಭೋಜ್‍ತಾಲ್‍ನ್ನು ಪರಮಾರ ರಾಜ ಭೋಜ್ ಮಾಲ್ವಾದ ರಾಜನಾಗಿ ತನ್ನ ಆಳ್ವಿಕೆಯ ಅವಧಿಯಲ್ಲಿ (೧೦೦೫-೧೦೫೫) ನಿರ್ಮಿಸಿದನು ಎಂದು ಹೇಳಲಾಗಿದೆ.

ಖಡ್ಗವನ್ನು ಹಿಡಿದು ನಿಂತಿರುವ ರಾಜ ಭೋಜ್‍ನ ಬೃಹತ್ ಪ್ರತಿಮೆಯನ್ನು ಸರೋವರದ ಒಂದು ಮೂಲೆಯಲ್ಲಿನ ಒಂದು ಕಂಬದ ಮೇಲೆ ಪ್ರತಿಷ್ಠಾಪಿಸಲಾಯಿತು. ಇದು ಸರೋವರಗಳ ನಗರವೆಂದು ಭೋಪಾಲ್‍ನ ಹೆಸರನ್ನು ಬಲಪಡಿಸಿತು.[೩]

ಛಾಯಾಂಕಣ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Source of potable water". Archived from the original on 29 September 2007. Retrieved 2007-04-05.
  2. "WWF Bhoj Wetland". Archived from the original on 2007-03-03. Retrieved 2007-04-05.
  3. Bhopal May Become Bhojpal Soon Archived 14 June 2012 ವೇಬ್ಯಾಕ್ ಮೆಷಿನ್ ನಲ್ಲಿ.. Outlook, 1 March 2011.