ವಿಷಯಕ್ಕೆ ಹೋಗು

ಭೋಜ್‍ತಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭೋಜ್‍ತಾಲ್ (ಪೂರ್ವದಲ್ಲಿ ಮೇಲಿನ ಸರೋವರ ಅಥವಾ ಅಪರ್ ಲೇಕ್ ಎಂದು ಪರಿಚಿತವಾಗಿತ್ತು) ಭಾರತದ ಮಧ್ಯ ಪ್ರದೇಶದ ರಾಜಧಾನಿ ನಗರ ಭೊಪಾಲ್ನ ಪಶ್ಚಿಮ ಬದಿಯಲ್ಲಿ ಸ್ಥಿತವಾಗಿರುವ ಒಂದು ದೊಡ್ಡ ಸರೋವರವಾಗಿದೆ. ಇದು ಈ ನಗರದ ನಿವಾಸಿಗಳಿಗೆ ಕುಡಿಯುವ ನೀರಿನ ಒಂದು ಪ್ರಮುಖ ಮೂಲವಾಗಿದೆ. ಇದು ಸುಮಾರು 40% ನಿವಾಸಿಗಳಿಗೆ ದಿನಕ್ಕೆ ಸುಮಾರು ೩೦ ದಶಲಕ್ಷ ಇಂಪೀರಿಯಲ್ ಗ್ಯಾಲನ್‌ಗಷ್ಟು ನೀರು ಒದಗಿಸುತ್ತದೆ.[] ಹತ್ತಿರದ ಛೋಟಾ ತಾಲಾಬ್ ಜೊತೆಗೆ, ಬಡಾ ತಾಲಾಬ್ ಇವೆರಡೂ ಭೋಜ್ ತರಿ ಜಮೀನನ್ನು ರೂಪಿಸುತ್ತವೆ. ಈಗ ಇದು ಒಂದು ರಾಮ್‍ಸಾರ್ ತಾಣವಾಗಿದೆ.[]

ಸ್ಥಳೀಯ ಜಾನಪದದ ಪ್ರಕಾರ, ಭೋಜ್‍ತಾಲ್‍ನ್ನು ಪರಮಾರ ರಾಜ ಭೋಜ್ ಮಾಲ್ವಾದ ರಾಜನಾಗಿ ತನ್ನ ಆಳ್ವಿಕೆಯ ಅವಧಿಯಲ್ಲಿ (೧೦೦೫-೧೦೫೫) ನಿರ್ಮಿಸಿದನು ಎಂದು ಹೇಳಲಾಗಿದೆ.

ಖಡ್ಗವನ್ನು ಹಿಡಿದು ನಿಂತಿರುವ ರಾಜ ಭೋಜ್‍ನ ಬೃಹತ್ ಪ್ರತಿಮೆಯನ್ನು ಸರೋವರದ ಒಂದು ಮೂಲೆಯಲ್ಲಿನ ಒಂದು ಕಂಬದ ಮೇಲೆ ಪ್ರತಿಷ್ಠಾಪಿಸಲಾಯಿತು. ಇದು ಸರೋವರಗಳ ನಗರವೆಂದು ಭೋಪಾಲ್‍ನ ಹೆಸರನ್ನು ಬಲಪಡಿಸಿತು.[]

ಛಾಯಾಂಕಣ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Source of potable water". Archived from the original on 29 September 2007. Retrieved 2007-04-05.
  2. "WWF Bhoj Wetland". Archived from the original on 2007-03-03. Retrieved 2007-04-05.
  3. Bhopal May Become Bhojpal Soon Archived 14 June 2012 ವೇಬ್ಯಾಕ್ ಮೆಷಿನ್ ನಲ್ಲಿ.. Outlook, 1 March 2011.