ಭೂಸ್ಪರ್ಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಂದು ವಿಮಾನ ಭೂಸ್ಪರ್ಶ ಮಾಡಲು ಸನ್ನಿಹಿತವಾಗಿರುವುದು

ಭೂಸ್ಪರ್ಶ ಒಂದು ಹಾರಾಟದ ಕೊನೆಯ ಭಾಗ. ಇದರಲ್ಲಿ ಒಂದು ಹಾರುತ್ತಿರುವ ಪ್ರಾಣಿ, ವಿಮಾನ ಅಥವಾ ಬಾಹ್ಯಾಕಾಶ ನೌಕೆ ಭೂಮಿಗೆ ಮರಳುತ್ತದೆ. ಹಾರುತ್ತಿರುವ ವಸ್ತು ನೀರಿಗೆ ಮರಳಿದಾಗ, ಆ ಪ್ರಕ್ರಿಯೆಯನ್ನು ಇಳಿತ ಎಂದು ಕರೆಯಲಾಗುತ್ತದೆಯಾದರೂ, ಸಾಮಾನ್ಯವಾಗಿ ಅದನ್ನೂ ಭೂಸ್ಪರ್ಶ ಎಂದೇ ಕರೆಯಲಾಗುತ್ತದೆ. ಒಂದು ಸಾಮಾನ್ಯ ವಿಮಾನ ಹಾರಾಟವು ಭೂಚಲನೆ, ಮೇಲಕ್ಕೆ ಏಳುವುದು, ಏರುವುದು, ಗಾಳಿಯಲ್ಲಿ ಚಲನೆ, ಅವರೋಹಣ ಮತ್ತು ಭೂಸ್ಪರ್ಶ ಸೇರಿದಂತೆ ಹಲವಾರು ಭಾಗಗಳನ್ನು ಹೊಂದಿರುತ್ತದೆ.

ವಿಮಾನವು ಸಾಮಾನ್ಯವಾಗಿ ಒಂದು ವಿಮಾನ ನಿಲ್ದಾಣದಲ್ಲಿ ಗಟ್ಟಿಯಾದ ಓಡುದಾರಿಯ ಮೇಲೆ ಭೂಸ್ಪರ್ಶಮಾಡುತ್ತದೆ. ಇದನ್ನು ಸಾಮಾನ್ಯವಾಗಿ ಡಾಂಬರು ಕಾಂಕ್ರೀಟ್, ಕಾಂಕ್ರೀಟ್, ಜಲ್ಲಿ ಅಥವಾ ಹುಲ್ಲಿನಿಂದ ನಿರ್ಮಿಸಲಾಗುತ್ತದೆ. ಪ್ಲಾವಕಗಳನ್ನು ಹೊಂದಿದ ಅಥವಾ ಒಡಲಿನ ಆಕಾರದ ಚೌಕಟ್ಟನ್ನು ಹೊಂದಿರುವ ವಿಮಾನಗಳು ನೀರಿನ ಮೇಲೆ ಇಳಿಯಬಲ್ಲವು. ವಿಮಾನಗಳು ಹಿಮ ಅಥವಾ ಐಸಿನ ಮೇಲೆ ಇಳಿಯಲು ಕೆಲವೊಮ್ಮೆ ಹಿಮ ಹಾವುಗೆಗಳನ್ನೂ ಬಳಸುತ್ತವೆ.

ಭೂಸ್ಪರ್ಶ ಮಾಡಲು, ವಾಯುವೇಗ ಮತ್ತು ಅವರೋಹಣ ಪ್ರಮಾಣವನ್ನು ಕಡಿಮೆಮಾಡಲಾಗುತ್ತದೆ, ಎಷ್ಟೆಂದರೆ ವಸ್ತುವಿಗೆ ಸೌಮ್ಯ ಸ್ಪರ್ಶಕ್ಕೆ ಆಸ್ಪದ ಕೊಡುವಷ್ಟು ಕಡಿಮೆ ಪ್ರಮಾಣದಲ್ಲಿ. ನಿಧಾನಿಸಿ ಓಡುದಾರಿಯ ಮೇಲೆ ಅವರೋಹಣ ಮಾಡಿ ಭೂಸ್ಪರ್ಶವನ್ನು ಸಾಧಿಸಲಾಗುತ್ತದೆ. ಒತ್ತಡವನ್ನು ಕಡಿಮೆಮಾಡಿ ಮತ್ತು/ಅಥವಾ ರೆಕ್ಕೆಭಾಗಗಳು, ಅವರೋಹಣ ಉಪಕರಣ ಅಥವಾ ವೇಗ ಬಿರಿಗಳನ್ನು ಬಳಸಿ ಹೆಚ್ಚಿನ ಪ್ರಮಾಣದ ಎಳೆತವನ್ನು ಉಂಟುಮಾಡಿ ಈ ವೇಗ ಕಡಿತವನ್ನು ಸಾಧಿಸಲಾಗುತ್ತದೆ. ಒಂದು ಸ್ಥಿರ ರೆಕ್ಕೆ ವಿಮಾನವು ನೆಲವನ್ನು ಸಮೀಪಿಸಿದಾಗ, ಪರಿವರ್ತನೆ ಅಥವಾ ರೌಂಡ್-ಔಟ್ ನಿರ್ವಹಿಸಲು ಪೈಲಟ್ಟು ನಿಯಂತ್ರಣ ದಂಡವನ್ನು ಹಿಂದಕ್ಕೆ ಚಲಿಸುತ್ತಾನೆ. ಇದು ದಾಳಿಯ ಕೋನವನ್ನು ಹೆಚ್ಚಿಸುತ್ತದೆ. ನಿಯಂತ್ರಣ ದಂಡದ ಕ್ರಮೇಣ ಚಲನೆಯು ವಿಮಾನವು ಓಡುದಾರಿಯ ಮೇಲೆ ಕನಿಷ್ಠ ವೇಗದಲ್ಲಿ ಸ್ಥಾಪನೆಯಾಗಲು ಅನುಮತಿಸುತ್ತದೆ. ಮೂರುಗಾಲಿಯ ಉಪಕರಣವಿರುವ ವಿಮಾನದ ವಿಷಯದಲ್ಲಿ ಮುಖ್ಯ ಗಾಲಿಗಳು ಮೊದಲು ಸ್ಪರ್ಶಿಸುತ್ತವೆ, ಅಥವಾ ಸಾಂಪ್ರದಾಯಿಕ ಭೂಸ್ಪರ್ಶ ಉಪಕರಣವಿರುವ ವಿಮಾನದ ವಿಷಯದಲ್ಲಿ ಎಲ್ಲ ಮೂರು ಗಾಲಿಗಳು ಏಕಕಾಲದಲ್ಲಿ ಸ್ಪರ್ಶಿಸುತ್ತವೆ. ಇದನ್ನು ಫ಼್ಲೇರಿಂಗ್ ಎಂದು ಕರೆಯಲಾಗುತ್ತದೆ.[೧]

ಅಡ್ಡಗಾಳಿಯಂತಹ ಅಂಶಗಳು ಸುರಕ್ಷಿತ ಭೂಸ್ಪರ್ಶವನ್ನು ಖಾತರಿಗೊಳಿಸಲು ಪೈಲಟ್ಟುಗಳು ಸ್ವಲ್ಪ ವೇಗವಾಗಿ ಮತ್ತು ಕೆಲವೊಮ್ಮೆ ಭಿನ್ನ ವಿಮಾನ ಎತ್ತರದೊಂದಿಗೆ ಭೂಸ್ಪರ್ಶ ಮಾಡುವುದಕ್ಕೆ ಕಾರಣವಾಗುತ್ತವೆ. ಇತರ ಅಂಶಗಳಲ್ಲಿ ವಿಮಾನದ ಗಾತ್ರ, ಗಾಳಿ, ಭಾರ, ಓಡುದಾರಿಯ ಉದ್ದ, ಹವಾಮಾನ, ಓಡುದಾರಿಯ ಎತ್ತರ ಮುಂತಾದವು ಸೇರಿವೆ.

ಉಲ್ಲೇಖಗಳು[ಬದಲಾಯಿಸಿ]

  1. Aviation Glossary (2011). "Flare (ICAO Definition)". Archived from the original on 20 ನವೆಂಬರ್ 2010. Retrieved 26 January 2011.