ವಿಷಯಕ್ಕೆ ಹೋಗು

ಭೂಮಿಗೆ ಬಂದ ಭಗವಂತ (ಕನ್ನಡ ಧಾರಾವಾಹಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭೂಮಿಗೆ ಬಂದ ಭಗವಂತ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿಯಾಗಿದೆ[] []. ಈ ಧಾರಾವಾಹಿಯು 2023ರ ಮಾರ್ಚ್ 20 ರಿಂದ 4 ಆಗಸ್ಟ್ 2024ರವೆಗೆ ಝೀ ಕನ್ನಡದಲ್ಲಿ ಪ್ರಥಮ ಪ್ರದರ್ಶನ ಗೊಂಡಿತು. ಈ ಧಾರಾವಾಹಿಯು ಹಿಂದಿ ಭಾಷೆಯ ನೀಲಿ ಛತ್ರಿ ವಾಲೆ ಯ ಅಧಿಕೃತ ರೀಮೆಕ್ ಆಗಿದೆ. ನವೀನ್ ಕೃಷ್ಣ, ಕಾರ್ತಿಕ್ ಸಾಮಗ್ ಮತ್ತು ಕೃತಿಕಾ ರವೀಂದ್ರ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

ಭೂಮಿಗೆ ಬಂದ ಭಗವಂತ (ಕನ್ನಡ ಧಾರಾವಾಹಿ)
ಶೈಲಿದೈನಂದಿನ ಧಾರಾವಾಹಿ
ನಿರ್ದೇಶಕರುಆರೂರು ಜಗದೀಶ್
ದೇಶಭಾರತ
ಭಾಷೆ(ಗಳು)ಕನ್ನಡ
ನಿರ್ಮಾಣ
ನಿರ್ಮಾಪಕ(ರು)ತಾಂಡವ್ ರಾಮ್
ಕ್ಯಾಮೆರಾ ಏರ್ಪಾಡುಮಲ್ಟೀ ಕ್ಯಾಮೆರಾ
ಸಮಯ20 - 22 ನಿಮಿಷಗಳು
ನಿರ್ಮಾಣ ಸಂಸ್ಥೆ(ಗಳು)ತಾಂಡವ್ ಪ್ರೊಡಕ್ಷನ್ಸ್
ಪ್ರಸಾರಣೆ
ಮೂಲ ವಾಹಿನಿಝೀ ಕನ್ನಡ
ಮೂಲ ಪ್ರಸಾರಣಾ ಸಮಯ20 ಮಾರ್ಚ್ 2023 (2023-03-20) – 4 ಆಗಸ್ಟ್ 2024

ಕಥಾವಸ್ತು

[ಬದಲಾಯಿಸಿ]

ವೈಯಕ್ತಿಕ ಮತ್ತು ವೃತ್ತಿಯ ಜೀವನದಿಂದ ಒತ್ತಡಕ್ಕೊಳಗಾದ ಮಧ್ಯಮ ವರ್ಗದ ವ್ಯಕ್ತಿ ಶಿವ ಪ್ರಸಾದ್ ಭಗವಂತ ಶಿವನನ್ನು ಮಾನವ ರೂಪದಲ್ಲಿ ಭೇಟಿಯಾಗುತ್ತಾನೆ. ಭಗವಂತ ಶಿವ ಇವನಿಗೆ ಆತನ ಜೀವನದ ಸಂದಿಗ್ಧತೆಗಳ ಮೂಲಕ ಮಾರ್ಗದರ್ಶನ ನೀಡುತ್ತಾನೆ.

ಸಮಾಜಕ್ಕೆ ಸಂದೇಶ

[ಬದಲಾಯಿಸಿ]

ಧಾರಾವಾಹಿಯು ಮಧ್ಯಮವರ್ಗದ ಜೀವನದಲ್ಲಿ ಎದುರಾಗುವ ಗೊಂದಲಗಳು, ಸಮಸ್ಯೆಗಳ ಬಗ್ಗೆ ಗಮನಹರಿಸುತ್ತದೆ. ಸಾಮಾಜಿಕ ಪಿಡುಗು ಎಂದು ಭಾವಿಸುವ ವಿಚಾರಗಳನ್ನು ಎತ್ತಿತೋರಿಸುವ ಕೆಲಸವನ್ನು ಮಾಡುತ್ತಿದೆ[].

ಪ್ರಸಾರ

[ಬದಲಾಯಿಸಿ]

ಧಾರಾವಾಹಿಯು ಮೊದಲಿಗೆ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9:30 ರಿಂದ 10ರ ವರೆಗೆ ಪ್ರಸಾರವಾಗಿತ್ತು. ಆದರೆ ಸೀತಾ-ರಾಮ ಧಾರಾವಾಹಿಯ ಪ್ರಸಾರದ ಕಾರಣದಿಂದ ಜುಲೈ 17 ರಿಂದ ರಾತ್ರಿ 10:00 ರಿಂದ 10:30ರ ವರೆಗೆ ತನ್ನ ಸಮಯದಲ್ಲಿ ಬದಲಾವಣೆ ಮಾಡಿತು[].

ಪಾತ್ರವರ್ಗ

[ಬದಲಾಯಿಸಿ]

ಮುಖ್ಯ ಭೂಮಿಕೆಯಲ್ಲಿ

[ಬದಲಾಯಿಸಿ]
  • ನವೀನ್ ಕೃಷ್ಣ[]:- ಶಿವ ಪ್ರಸಾದ್ ಪಾತ್ರದಲ್ಲಿ, ಗಿರಿಜಾ ಗಂಡನಾಗಿ.
  • ಕಾರ್ತಿಕ್ ಸಾಮಗ[] []:- ಭಗವಂತ ಶಿವನ ಪಾತ್ರದಲ್ಲಿ.
  • ಕೃತಿಕಾ ರವೀಂದ್ರ[]:- ಗಿರಿಜಾ ಪಾತ್ರದಲ್ಲಿ. ಶಿವ ಪ್ರಸಾದ್ ಹೆಂಡತಿಯಾಗಿ.
  • ಉಮೇಶ್:- ವಿಶ್ವನಾಥ್ ಪಾತ್ರದಲ್ಲಿ, ಶಿವ ಪ್ರಸಾದ್ ತಂದೆಯಾಗಿ.
  • ಅಂಕಿತಾ ಜಯರಾಮ್[]:- ಪ್ರಣೀತಾ ಪಾತ್ರದಲ್ಲಿ, ಶಿವ ಪ್ರಸಾದ್ ಮತ್ತು ಗಿರಿಜಾ ಮಗಳಾಗಿ.
  • ಅನುರಾಗ್:- ಸ್ಕಂದಾ ಪಾತ್ರದಲ್ಲಿ, ಶಿವ ಪ್ರಸಾದ್ ಮತ್ತು ಗಿರಿಜಾ ಮಗನಾಗಿ.
  • ಬೆಂಗಳೂರು ನಾಗೇಶ್:- ಅನಂತ ದೇಶಪಾಂಡೆ
  • ಶಶಿ ದೇಶಪಾಂಡೆ:- ವೀವೆಕ್ ದೇಶಪಾಂಡೆ
  • ಡಿ.ಲಿಂಗರಾಜ್:- ಮೊಗ್ಗು ಸುರೇಶ್
  • ಗೌತಮಿ:- ಮಾರ್ಗರೆಟ್
  • ಮುರಳಿ:- ಬಾಸ್ಕರ್
  • ಬಾಲು:- ಬಾಬು
  • ರವೀಂದ್ರನಾಥ:- ನಾಗರಾಜ್
  • ಪವನ್ ಕುಮಾರ್: ರಾಮಯ್ಯ

ರೂಪಾಂತರಗಳು

[ಬದಲಾಯಿಸಿ]
ಭಾಷೆ ಶಿರ್ಷಿಕೆ ಮೂಲ ಬಿಡುಗಡೆ ವಾಹಿನಿ(ಗಳು) ಕೊನೆಯ ಪ್ರಸಾರ ಟಿಪ್ಪಣಿಗಳು
ಹಿಂದಿ Neeli Chatri Waale

नीली छतरी वाले
20 ಆಗಸ್ಟ್ 2014 ಝೀ ಟಿವಿ 14 ಆಗಸ್ಟ್ 2016 ಮೂಲ
ಕನ್ನಡ Bhoomige Banda Bhagavantha

ಭೂಮಿಗೆ ಬಂದ ಭಗವಂತ
20 ಮಾರ್ಚ್ 2023 ಝೀ ಕನ್ನಡ 4 ಆಗಸ್ಟ್ 2024 ರೀಮೆಕ್

ಬಾಹ್ಯಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "ಭಕ್ತನಿಗಾಗಿ ಭೂಮಿಗೆ ಬಂದ ಭಗವಂತ". News18 Kannada. Retrieved 16 ಜನವರಿ 2023.
  2. "ನೂರು ಸಂಚಿಕೆಗಳನ್ನು ಪೂರೈಸಿದ ಭೂಮಿಗೆ ಬಂದ ಭಗವಂತ". ವಿಜಯ ಕರ್ನಾಟಕ. Retrieved 4 ಆಗಸ್ಟ್ 2023.
  3. "ಮುಟ್ಟು ಶಾಪವಲ್ಲ, ವರ ಎಂದ ಭಗವಂತ". ಫಿಲ್ಮಿಬೀಟ್ ಕನ್ನಡ. Retrieved 23 ಅಕ್ಟೋಬರ್ 2023.
  4. "ಸಮಯ ಬದಲಾಯಿಸಿದ ಭೂಮಿಗೆ ಬಂದ ಭಗವಂತ". ವಿಜಯ ಕರ್ನಾಟಕ. Retrieved 16 ಜುಲೈ 2023.
  5. "Naveen Krishna To Act In This New Kannada Serial". News18. Retrieved 14 ಮಾರ್ಚ್ 2023.
  6. "ಭಗವಂತನ ಪಾತ್ರದಲ್ಲಿ ಅಭಿನಯಿಸುತ್ತಿರುವುದು ನನ್ನ ಅದೃಷ್ಟ: ಕಾರ್ತಿಕ್ ಸಾಮಗ". ವಿಜಯ ಕರ್ನಾಟಕ. Retrieved 28 ಏಪ್ರಿಲ್ 2023.
  7. "ಭೂಮಿಗೆ ಬಂದ ಭಗವಂತ ಧಾರಾವಾಹಿ ನಟ ಕಾರ್ತಿಕ್ ಸಾಮಗ್‌ಗೆ ಶಾಬ್ಬಾಶ್ ಎಂದ ಪ್ರಭಾಸ್". ಸುವರ್ಣ ನ್ಯೂಸ್. Retrieved 27 ಸೆಪ್ಟಂಬರ್ 2023.
  8. "ಭೂಮಿಗ ಬಂದ ಭಗವಂತ ಧಾರಾವಾಹಿ ಗಿರಿಜಾ ಪಾತ್ರದ ಕೃತಿಕಾ ನಿಜ ಬದುಕಿನ ಕಹಿ ಅಧ್ಯಾಯ". ವಿಜಯ ಕರ್ನಾಟಕ. Retrieved 4 ಜುಲೈ 2023.
  9. "ಭೂಮಿಗೆಬಂಧ ಭಗವಂತ ಧಾರಾವಾಹಿ ಬಾಲನಟಿ ಈಗ ಹಿರೋಹಿನ್". ವಿಜಯ ಕರ್ನಾಟಕ. Retrieved 7 ಆಗಸ್ಟ್ 2023.