ಭೂತನಾಥ ದೇವಾಲಯಗಳ ಗುಂಪು, ಬಾದಾಮಿ
ಭೂತನಾಥ ದೇವಾಲಯಗಳ ಗುಂಪು, ಬಾದಾಮಿ | |
---|---|
ಧರ್ಮ ಮತ್ತು ಸಂಪ್ರದಾಯ | |
ಧರ್ಮ | ಹಿಂದೂ ಧರ್ಮ |
ಅಧಿ ನಾಯಕ/ದೇವರು | shiva |
Governing body | Archaeological Survey of India |
ಸ್ಥಳ | |
ಸ್ಥಳ | Badami, Karnataka |
Geographic coordinates | 15°55′15″N 75°41′16″E / 15.92083°N 75.68778°E |
ವಾಸ್ತುಶಿಲ್ಪ | |
ಕಲಾಪ್ರಕಾರ | Dravida, Early Chalukya |
ಸ್ಥಾಪನೆ | 7th to 12th-century CE |
Temple(s) | 3 |
ಭೂತನಾಥ ದೇವಾಲಯಗಳ ಸಮೂಹವು ೭ ರಿಂದ ೧೨ ನೇ ಶತಮಾನದ ಹಿಂದೂ ದೇವಾಲಯವಾಗಿದ್ದು, ಭಾರತದ ಕರ್ನಾಟಕ ರಾಜ್ಯದ ಬಾದಾಮಿಯಲ್ಲಿರುವ ಅಗಸ್ತ್ಯ ಸರೋವರದ ಪೂರ್ವದಲ್ಲಿ ಇದೆ. ಇದು ಎರಡು ಉಪಗುಂಪುಗಳನ್ನು ಒಳಗೊಂಡಿದೆ - ಒಂದು ಪೂರ್ವ ಭೂತನಾಥ ಗುಂಪು ಅಥವಾ ಭೂತನಾಥ ಮುಖ್ಯ ಗುಂಪು ,ಇದು 7 ರಿಂದ 8 ನೇ ಶತಮಾನದವರೆಗೆ ಹೆಚ್ಚಾಗಿ ದ್ರಾವಿಡ ವಾಸ್ತುಶಿಲ್ಪ ಶೈಲಿಯಲ್ಲಿದೆ. ಇನ್ನೊಂದು ಉತ್ತರ ಭೂತನಾಥ ಗುಂಪು ಅಥವಾ ಮಲ್ಲಿಕಾರ್ಜುನ ಗುಂಪು , ಇದು ೧೧ ರಿಂದ ೧೨ ನೇ ಶತಮಾನದವರೆಗೆ ಹೆಚ್ಚಾಗಿ ನಾಗರ ವಾಸ್ತುಶಿಲ್ಪದಲ್ಲಿದೆ. [೧] [೨] ಮೊದಲನೆಯದು ಬಾದಾಮಿಯ ಚಾಲುಕ್ಯ ವಾಸ್ತುಶಿಲ್ಪಿಗಳನ್ನು ವಿವರಿಸುತ್ತದೆ, ಎರಡನೆಯದು ಹತ್ತಿರದ ಎಲ್ಲಮ್ಮ ದೇವಸ್ಥಾನದ ಜೊತೆಗೆ ಕಲ್ಯಾಣಿ ಚಾಲುಕ್ಯ ವಾಸ್ತುಶಿಲ್ಪಿಗಳನ್ನು ವಿವರಿಸುತ್ತದೆ. [೨]
ಭೂತನಾಥ ಮುಖ್ಯ ಗುಂಪು
[ಬದಲಾಯಿಸಿ]ಭೂತನಾಥ ಮುಖ್ಯ ಗುಂಪು (೭೦೦–೭೨೫ ಸಿಇ) ಅಗಸ್ತ್ಯ ತೀರ್ಥದ ಪೂರ್ವದಲ್ಲಿರುವ ಹಿಂದೂ ದೇವಾಲಯಗಳ ಹಳೆಯ ಗುಂಪಾಗಿದೆ. ಈ ಗುಂಪಿನಲ್ಲಿರುವ ಅತ್ಯಂತ ಹಳೆಯ ದೇವಾಲಯವು ಮುಖ್ಯವಾದ ದೊಡ್ಡ ದೇವಾಲಯವಾಗಿದೆ. ಇದು ನಾಲ್ಕು ಬೃಹತ್ ಕೇಂದ್ರ ಸ್ತಂಭಗಳನ್ನು (ಭಾಗಶಃ ಅಷ್ಟಭುಜಾಕೃತಿ, ಘನಾಕೃತಿ ಮತ್ತು ಚಾಕಿಯ ಮೇಲೆ ದುಂಡಾದ) ಹೊಂದಿರುವ ಗುಧಾ-ಮಂಟಪವನ್ನು ಹೊಂದಿದೆ. ಈ ಮಂಟಪವು ಶಿವಲಿಂಗವನ್ನು ಹೊಂದಿರುವ ಚಿಕ್ಕ ಚೌಕಾಕಾರದ ಗರ್ಭಗುಡಿಯನ್ನು ಸಂಪರ್ಕಿಸುತ್ತದೆ. ಗರ್ಭಗುಡಿಯ ಮೇಲ್ಭಾಗದಲ್ಲಿ ದ್ರಾವಿಡ ಶೈಲಿಯ ತ್ರಿತಾಳ ಅಧಿರಚನೆಯನ್ನು (ಮೂರು ಅಂತಸ್ತುಗಳು) ಹೊಂದಿದ್ದು, ಕೆಳಗಿನ ಭಾಗವು ಪಾದಬಂಧ ಮತ್ತು ಕುಂಭವನ್ನು ಒಳಗೊಂಡಿದೆ ಹಾಗೂ ವಿಮಾನದ ಗೋಡೆಗಳು ಬ್ರಹ್ಮಕಾಂತ ಶೈಲಿಯ ಪೈಲಸ್ಟರ್‌ಗಳೊಂದಿಗೆ ಕರ್ಣಗಳನ್ನು ಹೊಂದಿದೆ. ಗೋಡೆಯ ಮೇಲೆ ಕಿನ್ನರ ಮತ್ತು ಗಂಧರ್ವರ ತಲೆಗಳನ್ನು ಚಿತ್ರಿಸಲಾಗಿದೆ. ಅಧಿರಚನೆಯ ಎರಡನೇ ಮಹಡಿಯು ಸಣ್ಣ ದೊಡ್ಡ ಅಂತಸ್ತಿನ ಪುನರಾವರ್ತನೆಯಾಗುತ್ತದೆ ಮತ್ತು ಮೂರನೇ ಮಹಡಿಯು ಗಾತ್ರದಲ್ಲಿ ಎರಡನೇ ಅರ್ಧದಷ್ಟಿರುತ್ತದೆ ಮತ್ತೆ ಅದೇ ಅಂಶಗಳನ್ನು ಲಯಬದ್ಧ ರೂಪದಲ್ಲಿ ಪುನರಾವರ್ತಿಸುತ್ತದೆ. ಚಿಕ್ಕ ಶಿಖರದೊಂದಿಗೆ ಮೇಲ್ಭಾಗದ ಚೌಕಾಕಾರದ ವೇದಿಯು ಅಧಿರಚನೆಯನ್ನು ಪೂರ್ಣಗೊಳಿಸುತ್ತದೆ. [೩]
ದೇಗುಲ ಮತ್ತು ಸಭಾಂಗಣದ ಗೋಡೆಯ ಮೇಲಿನ ಚಿತ್ರ ಗೂಡುಗಳು ಈಗ ಖಾಲಿಯಾಗಿವೆ, ಆದರೂ ಉದ್ದವಾದ ಬಾಲಗಳನ್ನು ಹೊಂದಿರುವ ಮಖರಾಸ್ (ಪೌರಾಣಿಕ ಮೃಗ) ನಂತಹ ಕೆಲವು ಅಲಂಕಾರಿಕ ಅಂಶಗಳು ಇನ್ನೂ ಉಳಿದಿವೆ. [೪] ಮಂಟಪವು ಜಾಲಿಯನ್ನು ಹೊಂದಿದೆ (ಒಳ ಮಂಟಪಕ್ಕೆ ಬೆಳಕಿಗಾಗಿ ರಂದ್ರ ಕಿಟಕಿಗಳು). [೧] ದೇಗುಲದ ದ್ವಾರದ ಪಾದದ ಬಲಭಾಗದಲ್ಲಿ ಮಕರದ ಮೇಲೆ ಸವಾರಿ ಮಾಡುತ್ತಿರುವ ಗಂಗಾ ಮಾತೆ ಮತ್ತು ಎಡಭಾಗದಲ್ಲಿ ಆಮೆಯ ಮೇಲೆ ಸವಾರಿ ಮಾಡುತ್ತಿರುವ ಯಮುನಾ ದೇವಿಯ ಚಿತ್ರವಿದೆ. ಹಾಸುಗಲ್ಲಿನ ಮೇಲೆ ಯಾವುದೇ ರೀತಿಯ ಸಮರ್ಪಿತ ಅಡಿಗಲ್ಲುಇಲ್ಲ. [೧] ಸಮೀಪದಲ್ಲಿ ಗಣೇಶ ಮತ್ತು ಮಹಿಷಾಸುರಮರ್ದಿನಿ ಇತರ ಕಲಾಕೃತಿಗಳು ಕಂಡುಬರುತ್ತದೆ. ಇಲ್ಲಿ ಗಮನಾರ್ಹ ವೈಶಿಷ್ಟ್ಯವೆಂದರೆ ದೇವಾಲಯದ ಹೊರ ಗೋಡೆಯ ಮೇಲೆ ಶಾಸನವಿದ್ದು, ಇದು ಪೈಂಗಾರ ಕುಟುಂಬದಿಂದ ಶ್ರೀಧರ್ಬುತೇಶ್ವರನಿಗೆ ಉಡುಗೊರೆಯನ್ನು ಘೋಷಿಸುತ್ತದೆ (ದೇವತೆಯ ವಿಶೇಷಣ). ಈ ಶಾಸನವು ಸುಮಾರು ೯ ನೇ ಶತಮಾನದ ಉತ್ತರಾರ್ಧದಲ್ಲಿದೆ. ಆ ಸಮಯದಲ್ಲಿ ಮುಖ್ಯ ದೇವಾಲಯವು ಸಕ್ರಿಯವಾಗಿ ಬಳಕೆಯಲ್ಲಿತ್ತು ಎಂದು ಇದು ಸೂಚಿಸುತ್ತದೆ. [೩]
ಮುಖಮಂಟಪದ ಕಂಬಗಳು ಚೌಕಾಕಾರದ ಅಡ್ಡ ವಿಭಾಗವನ್ನು ಹೊಂದಿದ್ದು ಅದು ಅಷ್ಟಭುಜಾಕೃತಿಯ ಅಡ್ಡ ವಿಭಾಗವಾಗಿ ರೂಪಾಂತರಗೊಳ್ಳುತ್ತದೆ. ಮಂಟಪದ ಹೊರಗೆ ಭಕ್ತಾಧಿಗಳಿಗೆ ಮತ್ತು ಯಾತ್ರಾರ್ಥಿಗಳಿಗೆ ಘಾಟ್‍ಗಳನ್ನು ನಿರ್ಮಿಸಿದ್ದಾರೆ. [೩] ಹಲವು ಚಿಕ್ಕ ದೇಗುಲಗಳು ಪಾಳುಬಿದ್ದಿವೆ ಮತ್ತು ನಂತರ ೮ ನೇ ಶತಮಾನದ ಅಂತ್ಯದವರೆಗೆ ಇವುಗಳನ್ನು ಸೇರಿಸಲಾಯಿತು. ಸಂಕೀರ್ಣದ ಪೂರ್ವಕ್ಕೆ, ಒಂದು ಬಂಡೆಯ ಮೇಲೆ ಅಸಾಮಾನ್ಯ ವಾಸ್ತುಶಿಲ್ಪದ ವಿವರಗಳೊಂದಿಗೆ ನಾಲ್ಕು ಶೈವ ಉಬ್ಬುಶಿಲ್ಪಗಳಿವೆ - ಇವುಗಳು ಶಿವನ ಗರ್ಭಗುಡಿಯ ನಾಲ್ಕು ವಾಸ್ತುಶೈಲಿಯ ಅನಿಸಿಕೆಗಳು ಮತ್ತು ಪಂಚಕೂಟದ ಮೇಲ್ವಿನ್ಯಾಸವನ್ನು ಚೌಕಾಕಾರದ ಯೋಜನೆಯಲ್ಲಿ ಹೊಂದಿಸಲಾಗಿದೆ. ಇವುಗಳನ್ನು ೭ನೇ ಶತಮಾನದ ಉತ್ತರಾರ್ಧ ಅಥವಾ ೮ನೇ ಶತಮಾನದ ಪೂರ್ವದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಬಹುದು ಮತ್ತು ಈ ದೇವಾಲಯದ ಸಂಕೀರ್ಣವು ಅದರ ಮೂಲದಿಂದ ಶೈವರ ದೇವಾಲಯವಾಗಿದೆ ಎಂದು ತಿಳಿಸುತ್ತದೆ. [೩]
ಮುಖ್ಯ ದೇವಾಲಯದ ಉತ್ತರಕ್ಕೆ ಒಂದು ಸಣ್ಣ ದೇವಾಲಯವಿದೆ, ಇದನ್ನು ೧೯೨೩ ರಲ್ಲಿ ಹೆನ್ರಿ ಕೌಸೆನ್ಸ್ ಪ್ರಸ್ತಾಪಿಸಿದರು. ಇದನ್ನು ಮೂಲತಃ ವಿಷ್ಣುವಿಗಾಗಿ ಪವಿತ್ರಗೊಳಿಸಲಾಯಿತು. ಕೆಲವು ಹಂತದಲ್ಲಿ ಹೊರ ಸಭಾಂಗಣವನ್ನು ನಿರ್ಮಿಸಿದ ಮತ್ತು ಗರ್ಭಗುಡಿಯೊಳಗೆ ನಂದಿ (ಶಿವನ ವಾಹನ) ಮತ್ತು ಶಿವಲಿಂಗವನ್ನು ಸ್ಥಾಪಿಸಿದ ಲಿಂಗಾಯತ ಧರ್ಮದ ಅನುಯಾಯಿಗಳು ದೇವಾಲಯಗಳನ್ನು ದತ್ತು ಪಡೆದರು.
ಮಲ್ಲಿಕಾರ್ಜುನ ಗುಂಪು
[ಬದಲಾಯಿಸಿ]ಮುಖ್ಯ ಭೂತನಾಥ ಗುಂಪಿಗೆ ಮಲ್ಲಿಕಾರ್ಜುನ ಗುಂಪು ಹತ್ತಿರದಲ್ಲಿದೆ. ಆದರೆ ಇದು ಮಾನವ ನಿರ್ಮಿತ ಸರೋವರದ ಉತ್ತರದಿಕ್ಕಿನ ಹಿಂಭಾಗದಲ್ಲಿದೆ. ಇದು ಹಲವಾರು ದೇವಾಲಯಗಳನ್ನು ಒಳಗೊಂಡಿದೆ. ಇವುಗಳು ದಕ್ಷಿಣಕ್ಕೆ ತೆರೆದುಕೊಳ್ಳುತ್ತವೆ ಮತ್ತು ೧೧ ರಿಂದ ೧೨ ನೇ ಶತಮಾನದ ಫಮಸಾನ ನಾಗರ ಶೈಲಿಯಲ್ಲಿ ಇವುಗಳ ಗಮನಾರ್ಹವಾದ ಪಿರಮಿಡ್‍ನಂತಹ ಅಧಿರಚನೆಯಿಂದ ಗುರುತಿಸಲ್ಪಟ್ಟಿವೆ. ಅತಿದೊಡ್ಡ ದೇವಾಲಯವು ವಿಷ್ಣು ದೇವಾಲಯವಾಗಿದ್ದು, ಈ ಪಾಳುಬಿದ್ದ ದೇವಾಲಯಗಳು ಬಳಕೆಯಾಗದ ಅವಧಿಯನ್ನು ಕಂಡಿತು ಮತ್ತು ಅದರ ಐತಿಹಾಸಿಕ ಕಲಾಕೃತಿಯ ಅವಶೇಷಗಳನ್ನು ಸಂರಕ್ಷಿಸುವಾಗ ಶಿವಲಿಂಗದೊಂದಿಗೆ ಮರು-ಪ್ರತಿಷ್ಠಾಪಿಸಲಾಯಿತು. ಈ ದೇವಾಲಯಗಳು ಕಲ್ಯಾಣಿ ಚಾಲುಕ್ಯ ವಾಸ್ತುಶಿಲ್ಪಿಗಳು ಅನ್ವೇಷಿಸಿದ ನಿರ್ಮಾಣ ಕಲ್ಪನೆಗಳನ್ನು ಪ್ರಸ್ತುತಪಡಿಸುತ್ತವೆ. ಅತಿದೊಡ್ಡ ದೇವಾಲಯವು ಎಂಟು ಸ್ತಂಭಗಳೊಂದಿಗೆ ತೆರೆದ ಆಯತಾಕಾರದ ಮಂಟಪವನ್ನು ಹೊಂದಿದೆ. ಇದು ಒಳ ಮಂಟಪ, ಅಂತರಾಳ ಮತ್ತು ಗರ್ಭಗ್ರೀಯಕ್ಕೆ ಸಂಪರ್ಕ ಕಲ್ಪಿಸುತ್ತದೆ. ಎಲ್ಲವೂ ಚೌಕಾಕಾರದ ಯೋಜನೆಯಲ್ಲಿದೆ. ಈ ಗುಂಪಿನಲ್ಲಿರುವ ಎಲ್ಲಾ ದೇವಾಲಯಗಳು ಸರಳವಾದ ಗೋಡೆಗಳನ್ನು ಹೊಂದಿವೆ ಮತ್ತು ತೆರೆದ ಮಂಟಪದ (ಹಾಲ್) ಮೇಲೆ ಕೋನೀಯ ಸೂರುಗಳಿವೆ . ಈ ಗುಂಪಿನಲ್ಲಿ ಕಂಡುಬರುವ ಕಲಾಕೃತಿಯು ವಿಷ್ಣು ಮತ್ತು ಶಿವ ಇಬ್ಬರನ್ನೂ ಒಳಗೊಂಡಿದೆ. [೫]
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ೧.೨ Cousens (1926), p. 55
- ↑ ೨.೦ ೨.೧ Hardy 1995.
- ↑ ೩.೦ ೩.೧ ೩.೨ ೩.೩ M. A. Dhaky & Michael W. Meister 1983.
- ↑ Cousens (1926), p. 56
- ↑ Michell, George (2011). Badami, Aihole, Pattadakal, Jaico Books. p. 60. ISBN 978-81-8495-600-9.
ಗ್ರಂಥಸೂಚಿ
[ಬದಲಾಯಿಸಿ]- Cousens, Henry (1996) [1926]. The Chalukyan Architecture of Kanarese Districts. New Delhi: Archaeological Survey of India. OCLC 37526233.
- M. A. Dhaky; Michael W. Meister (1983). Encyclopaedia of Indian Temple Architecture: Volume 1 Part 2 South India Text & Plates. University of Pennsylvania Press. ISBN 978-0-8122-7992-4.
- James Fergusson; Richard Phené Spiers (1910). History of Indian and Eastern Architecture. John Murray.
- James Fergusson (1967). History of Indian and Eastern Architecture, Volume 2. Munshiram Manoharlal.
- James Fergusson (1876). History of Indian and Eastern Architecture Volume 3. J. Murray.
- Hardy, Adam (1995). Indian Temple Architecture: Form and Transformation-The Karnata Dravida Tradition 7th to 13th Centuries. Abhinav Publications. ISBN 81-7017-312-4.
- Stella Kramrisch (1996). The Hindu Temple, Volume 1. Motilal Banarsidass.
- Stella Kramrisch (1976). The Hindu Temple, Volume 2. Motilal Banarsidass. ISBN 978-81-208-0224-7.
- George Michell (1977). The Hindu Temple: An Introduction to Its Meaning and Forms. Harper & Row. ISBN 978-0-06-435750-0.
- George Michell (1989). The Penguin Guide to the Monuments of India: Buddhist, Jain, Hindu. Penguin Books. ISBN 978-0-14-008144-2.
- George Michell (2000). Hindu Art and Architecture. Thames & Hudson. ISBN 978-0-500-20337-8.
- K. M. Suresh (2003). Temples of Karnataka: Volumes 1 & 2. Bharatiya Kala Prakashan. ISBN 978-81-8090-013-6.