ಭೂಗರ್ಭ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭೂಮಿಯ ಆಂತರಿಕ ರಚನೆ

ಭೂಗರ್ಭವು ಭೂಮಿಯ ಅತ್ಯಂತ ಒಳಗಿನ ಭೂವೈಜ್ಞಾನಿಕ ಪದರವಾಗಿದೆ. ಇದು ಪ್ರಧಾನವಾಗಿ ಘನಾಕಾರದ ಚೆಂಡಿನಾಕೃತಿಯಾಗಿದ್ದು ಸುಮಾರು ೧,೨೨೦ ಕಿಲೊಮೀಟರ್‌ಗಳ ತ್ರಿಜ್ಯವನ್ನು ಹೊಂದಿದೆ (ಭೂಮಿಯ ತ್ರಿಜ್ಯದ ಸುಮಾರು ೨೦% ನಷ್ಟು ಅಥವಾ ಚಂದ್ರನ ತ್ರಿಜ್ಯದ ೭೦% ನಷ್ಟು).[೧][೨]

ಭೂಮಿಯ ಮ್ಯಾಂಟ‍ಲ್‍ಗೆ ಲಭ್ಯವಿರುವಂತೆ ನೇರವಾದ ಮಾಪನಕ್ಕಾಗಿ ಭೂಗರ್ಭದ ಯಾವುದೇ ಮಾದರಿಗಳು ಲಭ್ಯವಿಲ್ಲ. ಭೂಗರ್ಭದ ಬಗ್ಗೆ ಮಾಹಿತಿಯು ಬಹುತೇಕವಾಗಿ ಭೂಕಂಪ ತರಂಗಗಳು ಮತ್ತು ಭೂಮಿಯ ಕಾಂತಕ್ಷೇತ್ರದ ವಿಶ್ಲೇಷಣೆಯಿಂದ ಬರುತ್ತದೆ.[೩] ಭೂಗರ್ಭವು ಕಬ್ಬಿಣ ನಿಕಲ್ ಮಿಶ್ರಲೋಹ ಜೊತೆಗೆ ಕೆಲವು ಇತರ ಮೂಲಧಾತುಗಳಿಂದ ರಚಿತವಾಗಿದೆ ಎಂದು ನಂಬಲಾಗಿದೆ. ಭೂಗರ್ಭದ ಮೇಲ್ಮೈ ಮೇಲೆ ಉಷ್ಣಾಂಶವು ಸುಮಾರು 5700 ಕೆಲ್ವಿನ್‍ನಷ್ಟಿದೆ ಎಂದು ಅಂದಾಜಿಸಲಾಗಿದೆ. ಇದು ಸೂರ್ಯನ ಮೇಲ್ಮೈ ಮೇಲೆ ಇರುವ ಉಷ್ಣಾಂಶದಷ್ಟಿದೆ.[೪]

ಉಲ್ಲೇಖಗಳು[ಬದಲಾಯಿಸಿ]

  1. Monnereau, Marc; Calvet, Marie; Margerin, Ludovic; Souriau, Annie (May 21, 2010). "Lopsided Growth of Earth's Inner Core". Science. 328 (5981): 1014–1017. Bibcode:2010Sci...328.1014M. doi:10.1126/science.1186212. PMID 20395477.
  2. Engdahl, E. R.; Flinn, E. A.; Massé, R. P. (1974). "Differential PKiKP Travel Times and the Radius of the Inner Core". Geophysical Journal International. 39 (3): 457–463. doi:10.1111/j.1365-246x.1974.tb05467.x.
  3. Allègre, Claude J.; Manhès, Gérard; Göpel, Christa (April 1995). "The age of the Earth". Geochimica et Cosmochimica Acta. 59 (8): 1445–1456. doi:10.1016/0016-7037(95)00054-4. ISSN 0016-7037.
  4. Alfè, D.; Gillan, M. J.; Price, G. D. (2007). "Temperature and composition of the Earth's core". Contemporary Physics. 48 (2): 63–80. doi:10.1080/00107510701529653.
"https://kn.wikipedia.org/w/index.php?title=ಭೂಗರ್ಭ&oldid=987653" ಇಂದ ಪಡೆಯಲ್ಪಟ್ಟಿದೆ