ಭುವನೇಶ್ವರ್‌ ಕುಮಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಭುವನೇಶ್ವರ್ ಕುಮಾರ್

ಭುವನೇಶ್ವರ ಕುಮಾರ್[ಬದಲಾಯಿಸಿ]

ಭುವನೇಶ್ವರ ಕುಮಾರ್ ೧೯೯೦ ಫೆಬ್ರವರಿ ೫ ರಂದು ಜನಿಸಿದರು.ಇವರು ಒಬ್ಬ ಭಾರತೀಯ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ. ದೇಶೀಯ ಕ್ರಿಕೆಟ್ನಲ್ಲಿ ಅವರು ಉತ್ತರಪ್ರದೇಶ ರಾಜ್ಯದ ಪರ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದಾರೆ. ಪಾಕಿಸ್ತಾನದ ವಿರುದ್ಧ ಟ್ವೆಂಟಿ -20 ಪಂದ್ಯದಲ್ಲಿ ಯಶಸ್ವಿಯಾಗಿ ಮೂರು ವಿಕೆಟ್ ಗೊಂಚಲು ಪದೆಯುವ ಮೂಲಕ ಅವರ ಪ್ರತಿಭೆಯನ್ನು ಮೊದಲು ಹೊರಹೊಮ್ಮಿಸಿದರು.

ಆರಂಭಿಕ ಜೀವನ[ಬದಲಾಯಿಸಿ]

ಭುವಿ, ಪಶ್ಚಿಮ ಉತ್ತರಪ್ರದೇಶ ಒಂದು ಗುರ್ಜಾರ್ ಕುಟುಂಬಕ್ಕೆ ಸೇರಿದ್ದು, ಮತ್ತು ಮೀರತ್ ನಲ್ಲಿ ಕಿರಣ್ ಪಾಲ್ ಸಿಂಗ್ ಮತ್ತು ಇಂದ್ರೇಶ್ ದ೦ಪತಿಯ ಮಗನಾಗಿ 5 ಫೆಬ್ರವರಿ 1990 ರಂದು ಜನಿಸಿದರು. ಅವರ ತಂದೆ ಉತ್ತರ ಪ್ರದೇಶದಲ್ಲಿ ಪೊಲೀಸ್ ಸಬ್ಇನ್ಸ್ಪೆಕ್ಟರ್ ಆಗಿದ್ದರೆ,ಮತ್ತು ಅವರ ತಾಯಿ ಗೃಹಿಣಿ.ತನ್ನ ಸಹೋದರಿ ರೇಖಾ ಭುವಿ ಅವರನ್ನು ಮೊದಲು ಕ್ರಿಕೆಟ್ ಆಡಲು ಉತ್ತೇಜಿಸಿದರು ಮತ್ತು ಅವರ ೧೩ನೇ ವಯಸ್ಸಿನಲ್ಲಿಮೊದಲು ತರಬೇತಿ ಕೇಂದ್ರಕ್ಕೆ ಕರೆದೊಯ್ದರು.

ದಾಖಲೆ[ಬದಲಾಯಿಸಿ]

  • ಅವರು ತಮ್ಮ ಮೊದಲ ಟೆಸ್ಟ್ ಪಂದ್ಯದಲ್ಲಿ 97 ಎಸೆತಗಳಲ್ಲಿ 38 ರನ್ ಗಳಿಸಿದ್ದರು.
  • ೩೮ ರನ್ 10 ಸ್ಥಾನದಲ್ಲಿ ಬರುವ ಭಾರತೀಯ ಬ್ಯಾಟ್ಸ್ಮನ್ ಗಳಿಸಿದ ಅತ್ಯಧಿಕ ರನ್ ಆಗಿದೆ.
  • 2013ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಪ್ರವಾಸದ ಮೊದಲ ಪ೦ದ್ಯದ ಸಮಯದಲ್ಲಿ ಧೋನಿ ಅವರೊ೦ದಿಗೆ ೯ ವಿಕೆಟ್ಗೆ ೧೪೦ ರನ್ನುಗಳನ್ನು ಬಾರಿಸಿದ್ದರೆ.
  • ಜುಲೈ ೨೦೧೪ರ ಇಂಗ್ಲೆಂಡ್ ಮತ್ತು ಭಾರತದ ಪ್ರವಾಸದ ೧ನೇ ಟೆಸ್ಟ್ಮನ ಪ್ರತಿ ಇನ್ನಿಂಗ್ಸ್ನಲ್ಲಿ ಒಂದುಅರ್ಧ-ಶತಕವನ್ನು ಗಳಿಸಿದ್ದಾರೆ.


ದೇಶೀಯ ಕ್ರಿಕೆಟ್[ಬದಲಾಯಿಸಿ]

ಇವರು ಕೇಂದ್ರ ವಲಯದ ತಂಡದಲ್ಲಿ ತಮ್ಮ 17ನೇ ವಯಸ್ಸಿನಲ್ಲಿ ಬಂಗಾಳ ವಿರುದ್ಧ ಚೊಚ್ಚಲ ಪ್ರಥಮ ದರ್ಜೆ ಪಂದ್ಯವನ್ನು ಆಡಿದ್ದಾರೆ( ದುಲೀಪ್ ಟ್ರೋಫಿ ).ಉತ್ತರ ವಲಯದ ವಿರುದ್ಧ 2ನೇ ಸೆಮಿಫೈನಲ್ ಪಂದ್ಯದಲ್ಲಿ 3.03 ಎಕಾನಮಿ ರೇಟ್ ಜೊತೆ ಒಂದು ವಿಕೆಟ್ಕಬಳಿಸಿದರು. ಒಬ್ಬ ಕೆಳ ಕ್ರಮಾಂಕದ ಆಟಗಾರನಾಗಿಯೂ 312 ಎಸೆತಗಳಲ್ಲಿ 128 ರನ್ನುಗಳನ್ನು ನಾಲ್ಕನೇ ಕ್ರಮಾಂಕದ ಆಟಗಾರನೊಂದಿಗೆ ಜೊತೆಯಾಟವಾಡಿದ್ದಾರೆ. ಈ ಪಂದ್ಯದಲ್ಲಿ ಅವರಿಗೆ ಪಂದ್ಯಪುರುಷ ಪ್ರಶಸ್ತಿ ನೀಡಲಾಯಿತು.2008/09 ರ ಪ್ರಥಮ ದರ್ಜೆಯ ರಣಜಿ ಪೈನಲ್ ಪ೦ದ್ಯದಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಸೊನ್ನೆಗೆ ಉರುಳಿಸಿದ ಪ್ರಥಮಿಗರೆನಿಸಿದರು.


ಅಂತಾರಾಷ್ಟ್ರೀಯ ಕ್ರಿಕೆಟ್[ಬದಲಾಯಿಸಿ]

ಪರ್ವಿನ್ದೆರ್ ಅವನ್ , ಅವರು ಇಂಗ್ಲೆಂಡ್ ವಿರುದ್ಧದ 20-20 ಸರಣಿಯಲ್ಲಿ ತೋರಿದ ಕಳಪೆ ಪ್ರದರ್ಶನದಿಂದಾಗಿ, ಇದರಿಂದಾಗಿ ಮುಂದಿನ ಪಂದ್ಯದಲ್ಲಿ ಭುವಿ ಅವರು ಸ್ಥಾನ ಗಳಿಸುವಲ್ಲಿ ಯಶಸ್ವಿಯಾದರು. ಅದು ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯ ಬೆಂಗಳೂರಿನಲ್ಲಿ ನಡೆಯಿತು. ಆ ಪಂದ್ಯದಲ್ಲಿ ಅವರು, 2.25 ಎಕಾನಮಿಯಲ್ಲಿ 4 ಒವರ್ಗಳಲ್ಲಿ 9 ರನ್ನುಗಳಿಗೆ 3 ವಿಕೆಟನ್ನು ಕಬಳಿಸಿದರು. ಇದರ ಮೂಲಕ T20 ಕ್ರಿಕೆಟ್ನಲ್ಲಿ ಅತ್ಯುತ್ತಮ ಬೌಲಿಂಗ್ ದಾಖಲೆಯನ್ನು ಮುರಿದರು.ಏಕದಿನ ಪಂದ್ಯದಲ್ಲಿ ತಮ್ಮ ಮೊದಲ ಎಸೆತಕ್ಕೆ ಪಾಕಿಸ್ತಾನದ ಹಫೀಜ್ ಅವರನ್ನು ಔಟ್ ಮಾಡಿದರು ಮತ್ತು ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು .


ಟೆಸ್ಟ್ ಪಾದಾರ್ಪಣೆ[ಬದಲಾಯಿಸಿ]

ಇವರ ಮೊದಲ ಟೆಸ್ಟ್ ಬಾರ್ಡರ್ ಗಾವಸ್ಕರ್ ಟ್ರೋಫಿ 2013, ಆಸ್ಟೇಲಿಯಾ ವಿರುದ್ಧದ 4 ಪಂದ್ಯಗಳ ಸರಣಿಯಲ್ಲಿ 6 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.


ಉಲ್ಲೇಖನ[ಬದಲಾಯಿಸಿ]