ಭಾರತೀಯ ಮಹಿಳಾ ಬ್ಯಾಂಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇದೊಂದು ಮಹಿಳಾ ಆರ್ಥಿಕಸೇವಾ ಬ್ಯಾಂಕ್ ಆಗಿದ್ದು, [೧] ನವೆಂಬರ್ ೧೯, ೨೦೧೩ ರಂದು ಮಾಜಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ರವರಿಂದ ಉದ್ಗಾಟನೆಗೊಂಡಿತು.[೨][೩] ಈ ಬ್ಯಾಂಕಿಗೆ ಎಲ್ಲರೂ ಹಣವನ್ನು ಠೇವಣಿಮಾಡಬಹುದು, ಆದರೆ ಸಾಲವನ್ನು ಮಹಿಳೆಯರಿಗೆ ಮಾತ್ರ ನೀಡಲಾಗುತ್ತದೆ. ಈ ಬ್ಯಾಂಕು ೨೦೧೭ನೇ ಎಪ್ರಿಲ್ ೦೧ ರಂದು ಎಸ್ ಬಿ ಐ ನೊಂದಿಗೆ ಮೀಲಿನಗೊಂಡಿದೆ.ಇದು ಭಾರತದ ಮೊದಲ ಮಹಿಳಾ ಬ್ಯಾಂಕ್ ಆಗಿದೆ.

ಶಾಖೆಗಳು[ಬದಲಾಯಿಸಿ]

ಈ ಬ್ಯಾಂಕು ೧೦೩ ಉಪಶಾಖೆಗಳನ್ನು ಹೊಂದಿದ್ದು, ೭೦೦ಕ್ಕೂ ಹೆಚ್ಚು ಶಾಖೆಗಳನ್ನು ನಿರ್ಮಿಸುವ ಯೋಜನೆಯನ್ನು ಹೊಂದಿದೆ. ಇದರ ಮುಖ್ಯ ಕಛೇರಿ ಮುಂಬೈನಲ್ಲಿದೆ. ಪಾಟ್ನಾ, ಪೊನೆ, ಭುವನೇಶ್ವೇರ, ರಾಯಪುರ, ಕಾನ್ಪುರ, ಜೈಪುರ, ಆಗ್ರಾ, ಬೆಂಗಳೂರು, ಮಂಗಳೂರು, ಕೊಚ್ಚಿ, ಹೈದೆರಾಬಾದ್, ವಿಶಾಕಪಟ್ಟಣ, ಹಲವು ಕಡೆಗಳಲ್ಲಿ ಶಾಖೆಗಳನ್ನು ಹೊಂದಿದೆ.

ನಿರ್ವಹಣೆ[ಬದಲಾಯಿಸಿ]

ಈ ಬ್ಯಾಂಕು ಭಾರತ ಸರ್ಕಾರಕ್ಕೆ ಸೇರಿದ್ದು, ೦೮ ಮಹಿಳಾ ಕಾರ್ಯನಿರ್ದೇಶಕರನ್ನು ಒಳಗೊಂಡಿದೆ. ಶ್ರೀ ಮತಿ ಉಷಾ ಅನಂತಸುಬ್ರಹ್ಮಣ್ಯನ್ ಅವರು ಇದರ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿಯಾಗಿದ್ದಾರೆ.

ಧ್ಯೇಯ[ಬದಲಾಯಿಸಿ]

ಮಹಿಳೆಯರ ಆರ್ಥಿಕ ಅವಶ್ಯಕತೆಗಳನ್ನು ಪೂರೈಸುವ ಗುರಿಯನ್ನು ಹೊಂದಿದ್ದು, ಮಹಿಳಾ ಸಬಲೀಕರಣಕ್ಕೆ ಕೊಡುಗೆಯನ್ನು ನೀಡುತ್ತಾ ಬಂದಿದೆ.

ಉಲ್ಲೇಖಗಳು[ಬದಲಾಯಿಸಿ]

  1. https://www.google.co.in/search?ei=NezOWuyxIonhvgSLyKawBg&q=meaning+of+november&oq=meaning+of+november&gs_l=psy-ab.3..0l10.28734.1538453.0.1540870.29.20.4.5.5.0.183.2542.0j19.19.0....0...1c.1.64.psy-ab..1.28.2612...0i131i67k1j0i67k1j0i131k1j0i46i67k1j46i67k1.0.eequwhOoVtc
  2. https://www.thehindubusinessline.com/economy/banking/manmohan-singh-inaugurates-bharatiya-mahila-bank/article5367768.ece
  3. https://www.firstpost.com/business/bharatiya-mahila-bank-all-you-need-to-know-about-first-all-women-bank-1237365.html