ವಿಷಯಕ್ಕೆ ಹೋಗು

ಭಾರತೀಯ ಬೂದು ಮಂಗಟ್ಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಭಾರತೀಯ ಬೂದು ಹಾರ್ನ್‌ಬಿಲ್‌‌ ಇಂದ ಪುನರ್ನಿರ್ದೇಶಿತ)
ಭಾರತೀಯ ಬೂದು ಮಂಗಟ್ಟೆ
ಗಂಡು ಹೆಣ್ಣಿಗೆ ಆಹಾರ ಒದಗಿಸುತ್ತಿರುವುದು (ವಾಘಾ ಗಡಿ, ಭಾರತ)
Conservation status
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
O. birostris
Binomial name
Ocyceros birostris
(Scopoli, ೧೭೮೬)
Synonyms

Lophoceros birostris
Tockus birostris
Ocyceros ginginianus
Meniceros birostris

ಭಾರತೀಯ ಬೂದು ಮಂಗಟ್ಟೆ ಅಥವಾ ಭಾರತೀಯ ಬೂದು ಹಾರ್ನ್‌ಬಿಲ್‌‌ (ಓಸಿಸೆರಾಸ್‌ ಬಿರೋಸ್ಟ್ರಿಸ್‌‌ ) ಪಕ್ಷಿಯು ಭಾರತೀಯ ಉಪಖಂಡದಲ್ಲಿ ಕಂಡುಬರುವ ಸಾಧಾರಣವಾದ ಮಂಗಟ್ಟೆ ಪಕ್ಷಿಯಾಗಿದೆ. ಇವು ಬಹುತೇಕವಾಗಿ ವೃಕ್ಷನಿವಾಸಿಯಾಗಿದ್ದು ಸಾಧಾರಣವಾಗಿ ಜೋಡಿಗಳಾಗಿ ಕಂಡುಬರುತ್ತವೆ. ಅವುಗಳ ದೇಹದಾದ್ಯಂತ ಬೂದು ಬಣ್ಣದ ಗರಿಗಳನ್ನು ಹೊಂದಿರುತ್ತವಲ್ಲದೆ ನಸು ಬೂದು ಬಣ್ಣದ ಅಥವಾ ಮಬ್ಬು ಬಿಳಿ ಬಣ್ಣದ ಉದರಭಾಗವನ್ನು ಹೊಂದಿರುತ್ತವೆ. ಇದರ ಕೊಂಬು ಕಪ್ಪು ಇಲ್ಲವೇ ದಟ್ಟ ಬೂದು ಬಣ್ಣದ್ದಾಗಿದ್ದು ಕೊಂಬಿನ ಬಾಗುವಿಕೆಯ ಬಿಂದುವಿನವರೆಗೆ ವಿಸ್ತರಿಸಿರುವ ಶಿಖೆಯನ್ನು ಹೊಂದಿರುತ್ತದೆ[]. ಅಗಲವಾದ ಭಾರೀ ಸಾಲುಮರಗಳನ್ನು ಬಳಸಲು ಅವಕಾಶವಿರುವ ಹಾಗೂ ಅಂತಹಾ ಮರಗಳನ್ನು ಹೊಂದಿರುವ ರಸ್ತೆಗಳಿಂದ ಕೂಡಿದ ಮಹಾನಗರ ಪ್ರದೇಶಗಳಲ್ಲಿ ಮಂಗಟ್ಟೆ ತಳಿಗಳಲ್ಲಿ ಒಂದು ವಿಧದ ಪಕ್ಷಿಗಳು ಕಂಡುಬರುತ್ತದೆ.

ವಿವರಣೆ

[ಬದಲಾಯಿಸಿ]
ಸಣ್ಣದಾದ ಶಿಖೆಯನ್ನು ಹೊಂದಿರುವ ಪ್ರಾಯಶಃ ಹೆಣ್ಣು ಪಕ್ಷಿ

ಅವುಗಳು ಸುಮಾರು ೨೪ ಅಂಗುಲಗಳಷ್ಟು ಉದ್ದವಿರುತ್ತವೆ. ಅವುಗಳ ದೇಹದ ಮೇಲ್ಭಾಗಗಳು ನಸುಬೂದು ಛಾಯೆಯ ಕಂದುಬಣ್ಣದ್ದಾಗಿದ್ದು ಪೇಲವವಾದ ಹುಬ್ಬುಗಳಿರುವ ಜಾಡುಗಳು ಕಂಡುಬರುತ್ತವೆ. ಕಿವಿ ಬುಡದ ಗರಿಗಳು ದಟ್ಟ ವರ್ಣದ್ದಾಗಿರುತ್ತವೆ. ರೆಕ್ಕೆಗಳಲ್ಲಿರುವ ಹಾರುವುದಕ್ಕೆ ಸಹಾಯ ಮಾಡುವ ಗರಿಗಳು ದಟ್ಟ ಕಂದು ಬಣ್ಣದಾಗಿದ್ದು ತುದಿಗಳಲ್ಲಿ ಬಿಳಿಯ ಛಾಯೆಯನ್ನು ಹೊಂದಿರುತ್ತವೆ. ಇವುಗಳ ಬಾಲವು ಬಿಳಿ ತುದಿಯನ್ನು ಹೊಂದಿದ್ದು ದಟ್ಟವರ್ಣದ ಉಪಾಂತದ ಪಟ್ಟಿಯನ್ನು ಹೊಂದಿರುತ್ತದೆ. ಅವುಗಳ ಕಣ್ಣಿನ ಪಾಪೆ ಪೊರೆಗಳು ಕೆಂಪು ಬಣ್ಣದ್ದಾಗಿದ್ದು ಅವುಗಳ ಕಣ್ಣುರೆಪ್ಪೆಗಳು ರೆಪ್ಪೆಗೂದಲುಗಳನ್ನು ಕೂಡಾ ಹೊಂದಿರುತ್ತವೆ. ಅದರ ಶಿಖೆಯು ಸಣ್ಣದಾಗಿದ್ದು ಮೊನಚಾಗಿರುತ್ತದೆ.[] ಗಂಡು ಪಕ್ಷಿಯು ದಟ್ಟವರ್ಣದ ಕೊಕ್ಕಿನ ಮೇಲೆ ದೊಡ್ಡದಾದ ಕೊಕ್ಕನ್ನು ಹೊಂದಿದ್ದರೆ ಪಕ್ಷಿಯ ಕೊಕ್ಕಿನ ಏಣು ಹಾಗೂ ಕೆಳ ದವಡೆಗಳು ಹಳದಿ ಛಾಯೆಯನ್ನು ಹೊಂದಿರುತ್ತದೆ. ಕಣ್ಣಿನ ಸುತ್ತಲಿರುವ ಅನಾಚ್ಛಾದಿತ ಚರ್ಮವು ಗಂಡು ಪಕ್ಷಿಗಳಲ್ಲಿ ದಟ್ಟವರ್ಣದ್ದಾಗಿದ್ದರೆ ಕೆಲವು ವೇಳೆ ಹೆಣ್ಣು ಪಕ್ಷಿಗಳಲ್ಲಿ ಪೇಲವವಾದ ಕೆಂಪುಬಣ್ಣದ್ದಾಗಿರುತ್ತದೆ.[] ಹೆಣ್ಣು ಪಕ್ಷಿಯು ಹೆಚ್ಚು ಹಳದಿ ಛಾಯೆಯ ಕೊಕ್ಕನ್ನು ಹೊಂದಿದ್ದು ತಳ ಭಾಗದ ಅರ್ಧವು ಹಾಗೂ ಶಿಖೆಯ ಮೇಲೆ ಕಪ್ಪುಬಣ್ಣದ್ದಾಗಿರುತ್ತದೆ.[][][]

ಹರಡಿಕೆ

[ಬದಲಾಯಿಸಿ]

ಸುಮಾರು ೨೦೦೦ ಅಡಿಗಳಷ್ಟು ಎತ್ತರದವರೆಗಿನ ಬಯಲು ಪ್ರದೇಶಗಳಲ್ಲಿ ಪ್ರಧಾನವಾಗಿ ಈ ತಳಿಗಳು ಕಂಡುಬರುತ್ತವೆ. ಪಶ್ಚಿಮದಲ್ಲಿ ಸಿಂಧೂ ನದಿವಲಯ ಹಾಗೂ ಪೂರ್ವದಲ್ಲಿ ಗಂಗಾನದಿಯ ನದೀಮುಖಜ ಭೂಮಿಗಳಿಂದ ಸುತ್ತುವರೆದಿರುವ ಹಿಮಾಲಯ ಪರ್ವತಶ್ರೇಣಿಯ ದಕ್ಷಿಣದೆಡೆಗಿನ ಅಡಿಗುಡ್ಡಗಳಲ್ಲಿ ಇವುಗಳು ಕಂಡುಬರುತ್ತವೆ. ಒಣದಾದ ಪಶ್ಚಿಮ ಪ್ರಾಂತ್ಯಗಳಲ್ಲಿ ಇವುಗಳು ಸ್ಥಳೀಯವಾಗಿ ಚಲನವಲನಗಳನ್ನು ಮಾಡಿಕೊಂಡಿರುತ್ತವೆ. ಹಳೆಯದಾದ ಅಗಲವಾದ ಮರಗಳಿರುವ ಮಹಾನಗರಗಳಲ್ಲಿಯೂ ಇವುಗಳು ಕಂಡುಬರುತ್ತವೆ.[] ಸುಮಾರು ೧೪೦೦ mಗಳಷ್ಟು ಎತ್ತರದವರೆಗಿನ ಬಯಲು ಪ್ರದೇಶಗಳಲ್ಲಿ ಪ್ರಧಾನವಾಗಿ ಈ ತಳಿಗಳು ಕಂಡುಬರುತ್ತವೆ ಹಾಗೂ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಮಲಬಾರ್‌ ಬೂದು ಹಾರ್ನ್‌ಬಿಲ್‌‌ ಪಕ್ಷಿಗಳ ಗುಣಲಕ್ಷಣಗಳಿಗಿಂತ ಹೆಚ್ಚಿನ ಭಿನ್ನತೆಗಳನ್ನೇನೂ ಹೊಂದಿರುವುದಿಲ್ಲ.[][]

ನಡವಳಿಕೆ ಮತ್ತು ಪರಿಸರ ವ್ಯವಸ್ಥೆ

[ಬದಲಾಯಿಸಿ]
ಒಂದು ಗಂಡು ಪಕ್ಷಿ

ಇವುಗಳ ಕೂಗುಗಳು ಒಂದು ತರಹದ ಕೀರಲು/ಕೀಚಲು ಧ್ವನಿಯಿಂದ ಕೂಡಿದ್ದು ಸರಿಸುಮಾರು ಕಪ್ಪು ಗಿಡುಗದ ಕೂಗಿನಂತೆ ಕೇಳಿಬರುತ್ತದೆ. ಇವುಗಳ ಹಾರಾಟವು ಭಾರಿಯದ್ದಾಗಿದ್ದು ಮಧ್ಯೆ ಮಧ್ಯೆ ಜಾರುವಿಕೆಗಳನ್ನೊಳಗೊಂಡ ಜೋಲಾಡುವಿಕೆಗಳನ್ನು ಒಳಗೊಂಡಿರುತ್ತದೆ. ಇವುಗಳು ಜೋಡಿಗಳಾಗಿ ಅಥವಾ ಸಣ್ಣ ಗುಂಪುಗಳಾಗಿ ಹಾರಾಡುವುದು ಕಂಡುಬರುತ್ತದೆ.[]

ಇವುಗಳು ಗೂಡು ಕಟ್ಟುವ ಋತುವಿನ ಅವಧಿಯು ಏಪ್ರಿಲ್‌ನಿಂದ ಜೂನ್‌ನವರೆಗಿರುತ್ತದೆ ಹಾಗೂ ಇವುಗಳ ಕಾವು ಒಂದರಿಂದ ಐದರವರೆಗಿನ ಸಂಖ್ಯೆಯ ಬಹುಸಮ್ಮಿತೀಯವಾದ ಬಿಳಿ ಬಣ್ಣದ ಮೊಟ್ಟೆಗಳನ್ನು ಹೊಂದಿರುತ್ತವೆ. ಭಾರತೀಯ ಬೂದು ಹಾರ್ನ್‌ಬಿಲ್‌‌ ಗಳು uಸಾಧಾರಣವಾಗಿ ಎತ್ತರವಾಗಿರುವ ಭಾರೀ ವೃಕ್ಷಗಳಲ್ಲಿನ ಪೊಟರೆಗಳೊಳಗೆ ತಮ್ಮ ಗೂಡನ್ನು ಕಟ್ಟಿಕೊಳ್ಳುತ್ತವೆ. ಈಗಾಗಲೇ ಇರುವ ಪೊಟರೆಯನ್ನೇ ಮತ್ತಷ್ಟು ಕೊರೆದು ಅಗತ್ಯವಾಗುವ ರೀತಿಯಲ್ಲಿ ಹೊಂದಿಸಿಕೊಳ್ಳುತ್ತವೆ. ಹೆಣ್ಣು ಪಕ್ಷಿಯು ಪೊಟರೆಯೊಳಗಿನ ಗೂಡನ್ನು ಪ್ರವೇಶಿಸಿ ಗೂಡಿನ ಪ್ರವೇಶದ ಕಿಂಡಿಯನ್ನು ಗಂಡು ಪಕ್ಷಿಯು ತನಗೆ ಆಹಾರ ಒದಗಿಸಲು ಬೇಕಾದಷ್ಟು ಮಾತ್ರವೇ ಲಂಬವಾದ ಸೀಳನ್ನು ಬಿಡುವ ರೀತಿಯಲ್ಲಿ ಮುಚ್ಚಿಬಿಡುತ್ತದೆ. ಗೂಡಿನ ಪ್ರವೇಶದ್ವಾರವನ್ನು ಹೆಣ್ಣುಪಕ್ಷಿಯು ತನ್ನ ಮಲವನ್ನು ಬಳಸಿಕೊಂಡು ಮುಚ್ಚಿರುತ್ತದೆ.[][೧೦] ಗೂಡಿನೊಳಗಿರುವ ಸಂದರ್ಭದಲ್ಲಿ, ಹೆಣ್ಣು ಪಕ್ಷಿಯು ತನ್ನ ಹಾರುವ ಗರಿಗಳನ್ನು ಉದುರಿಸುತ್ತಾ ಮೊಟ್ಟೆಗಳಿಗೆ ಕಾವನ್ನು ಕೊಡುತ್ತದೆ. ಹೀಗೆ ಉದುರಿಹೋದ ಗರಿಗಳ ಮರುಬೆಳವಣಿಗೆಯು ಮರಿಗಳು ಸಂಪೂರ್ಣಾವಸ್ಥೆಗೆ ಬರುವುದಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತದೆ ಹಾಗೂ ಆ ಸಂದರ್ಭದಲ್ಲಿ ಅವುಗಳು ಗೂಡನ್ನು ಒಡೆದು ಹೊರಬರುತ್ತವೆ.[][೧೧][೧೨]

ಮುಂಬಯಿ ಮಹಾನಗರದ ಸಮೀಪದಲ್ಲಿದ್ದ ಒಂದು ಗೂಡಿನ ಬಳಿ ನಡೆದ ಅಧ್ಯಯನದ ಪ್ರಕಾರ ಸ್ಟ್ರೆಬ್ಲಸ್‌ ಆಸ್ಪರ್‌ , ಕ್ಯಾಸ್ಜೆರಾ ರ್ಹೀಡೈ , ಕ್ಯಾರಿಸ್ಸಾ ಕ್ಯಾರಂಡಾಸ್‌ , ಗ್ರ್ಯೂವಿಯಾ ಟಿಲಿಯೇಫೋಲಿಯಾ ,ಲ್ಯಾನ್ನಿಯಾ ಕೊರೋಮ್ಯಾಂಡೆಲಿಕಾ , ಫಿಕಸ್‌ spp., ಸ್ಟೆರ್‌ಕ್ಯುಲಿಯಾ ಯುರೆನ್ಸ್‌ ಹಾಗೂ ಸೆಕ್ಯುರಿನೆಗಾ ಲ್ಯುಕೊಪೈರಸ್‌ ಮುಂತಾದವು ಅವುಗಳಿಗೆ ಆಹಾರವಾಗಿ ಬಳಸುವ ಹಣ್ಣುಗಳನ್ನು ನೀಡುವ ಪ್ರಧಾನ ವೃಕ್ಷಗಳಾಗಿವೆ ಎಂದು ಕಂಡುಬಂದಿದೆ. ಮೃದ್ವಂಗಿಗಳು, ಚೇಳುಗಳು, ಹುಳಹುಪ್ಪಟೆಗಳು, ಸಣ್ಣ ಪಕ್ಷಿಗಳು (ಗುಲಾಬಿ-ಸುರುಳಿಯಿಂದ ಕೂಡಿದ ಗಿಣಿಗಳ ಮರಿಗಳನ್ನು ಕೀಳುತ್ತಿರುವ ಹಾಗೂ ಬಹುಶಃ ಅವುಗಳಿಗಾಗಿ ಕಾದುಕುಳಿತಿರುವುದನ್ನು ದಾಖಲಿಸಲಾಗಿದೆ[೧೩]) ಹಾಗೂ ಸರೀಸೃಪಗಳನ್ನು ತಮ್ಮ ಆಹಾರವನ್ನಾಗಿ ಹೊಂದುವುದು ತಿಳಿದುಬಂದಿದೆ[೧೪]. ಹಲವು ಕಶೇರುಕಗಳಿಗೆ ವಿಷಪ್ರಾಯವಾಗಿದೆಯೆಂದು ತಿಳಿದುಬಂದಿರುವ ಥೆವೆಟಿಯಾ ಪೆರುವಿಯಾನಾ ಹಣ್ಣುಗಳನ್ನು ಕೂಡಾ ಅವುಗಳು ತಿನ್ನುತ್ತವೆಂದು ತಿಳಿದುಬಂದಿದೆ.[೧೫]

ಅವುಗಳು ಬಹುತೇಕ ಮಟ್ಟಿಗೆ ಸಂಪೂರ್ಣವಾಗಿ ವೃಕ್ಷನಿವಾಸಿಗಳಾಗಿರುತ್ತವಲ್ಲದೇ ಎಲ್ಲೋ ಕೆಲವೊಮ್ಮೆ ಅಪರೂಪವಾಗಿ ಮಾತ್ರವೇ ಬಿದ್ದ ಹಣ್ಣುಗಳನ್ನು ತಿನ್ನಲು ಇಲ್ಲವೇ ಮಣ್ಣಿನಸ್ನಾನ ಮಾಡಲು ಕೆಳಗೆ ಹಾರಿಬರುತ್ತವೆ.[೧೬]

ಉಲ್ಲೇಖಗಳು

[ಬದಲಾಯಿಸಿ]
  1. BirdLife International (2009). Ocyceros birostris. In: IUCN 2008. IUCN Red List of Threatened Species. Retrieved 29 December 2009.
  2. ಅಲಿ, ಸಲೀಂ; ಡೇನಿಯಲ್, ಜೆ ಸಿ (2012). The Book on Indian Birds (೧೩ನೇ ed.). ಆಕ್ಸ್ಫಫ಼ರ್ಡ್ ಯುನಿವರ್ಸಿಟಿ ಪ್ರೆಸ್. p. ೧೯೦-೧೯೧. ISBN ೦೧೯೫೬೬೫೨೩೬. {{cite book}}: |access-date= requires |url= (help); Check |isbn= value: invalid character (help); More than one of |pages= and |page= specified (help)
  3. ೩.೦ ೩.೧ ೩.೨ ೩.೩ Whistler, Hugh (1949). Popular handbook of Indian birds (4 ed.). Gurney and Jackson, London. pp. 306–307. ISBN 1406745766.
  4. Pittie, A. (2003). J. Bombay Nat. Hist. Soc. 100 (1): 141–142. {{cite journal}}: Missing or empty |title= (help)
  5. ೫.೦ ೫.೧ Rasmussen PC & JC Anderton (2005). Birds of South Asia: The Ripley Guide. Volume 2. Smithsonian Institution & Lynx Edicions. pp. 272–273.
  6. Baker, ECS. Fauna of British India. Birds. Volume 4 (2 ed.). London: Taylor and Francis. pp. 301–302.
  7. Ali, S. & S. D. Ripley (1983). Handbook of the Birds of India and Pakistan. Volume 4 (2 ed.). New Delhi: Oxford University Press. pp. 130–131.
  8. Amladi,SR; Daniel,JC (1973). "Occurrence of the Common Grey Hornbill (Tockus birostris) in Bombay city". J. Bombay Nat. Hist. Soc. 70 (2): 378–380.{{cite journal}}: CS1 maint: multiple names: authors list (link)
  9. Blanford, WT (1895). Fauna of British India. Birds Volume 3. Taylor and Francis, London. p. 141.
  10. Hall,Eleanor Frances (1918). "Notes on the nidification of the Common Grey Hornbill (Lophoceros birostris)". J. Bombay Nat. Hist. Soc. 25 (3): 503–505.
  11. Finlay,JD (1929). "The nesting habits of the Northern Grey Hornbill Lophoceros birostris". J. Bombay Nat. Hist. Soc. 33 (2): 444–445.
  12. Hume, AO (1889). The nests and eggs of Indian bird volume 3. R H Porter, London. pp. 74–76.
  13. Newnham,A (1911). "Hornbills devouring young Paroquets". J. Bombay Nat. Hist. Soc. 21 (1): 263–264.
  14. Patil,Neelam; Chaturvedi,Naresh; Hegde,Vithoba (1997). "Food of Common Grey Hornbill Tockus birostris (Scopoli)". J. Bombay Nat. Hist. Soc. 94 (2): 408–411.{{cite journal}}: CS1 maint: multiple names: authors list (link)
  15. Neelakantan,KK (1953). "Common Grey Hornbill (Tockus birostris) eating fruits of the Yellow Oleander (Thevetia neriifolia)". J. Bombay Nat. Hist. Soc. 51 (3): 738.
  16. Santharam,V (1990). "Common Grey Hornbill Tockus birostris (Scopoli) dust bathing". J. Bombay Nat. Hist. Soc. 87 (2): 300–301.