ವಿಷಯಕ್ಕೆ ಹೋಗು

ಭಾರತಿ ಸಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾರತಿ ಸಿಂಗ್
೨೦೧೭ ರಲ್ಲಿ ಭಾರತಿ ಸಿಂಗ್
ಜನನ೩ ಜುಲೈ ೧೯೮೪
ರಾಷ್ಟ್ರೀಯತೆಭಾರತೀಯ
ವೃತ್ತಿಸ್ಟ್ಯಾಂಡ್ ಅಪ್ ಕಾಮೀಡಿಯನ್
ಗಮನಾರ್ಹ ಕೆಲಸಗಳು
  • ಕಾಮಿಡಿ ಸರ್ಕಸ್
  • ಕಾಮಿಡಿ ನೈಟ್ಸ್ ಬಚಾವೊ
  • ದ ಕಪಿಲ್ ಶರ್ಮಾ ಶೋ
  • ಖತ್ರಾ ಖತ್ರಾ ಖತ್ರಾ
ಸಂಗಾತಿಹರ್ಷ್ ಲಿಂಬಾಚಿಯಾ[]

ಭಾರತಿ ಸಿಂಗ್ ಲಿಂಬಾಚಿಯಾ (ಜನನ ೩ ಜುಲೈ ೧೯೮೪) ಭಾರತದ ಸ್ಟ್ಯಾಂಡ್-ಅಪ್ ಹಾಸ್ಯನಟಿ , ಅಭಿನೇತ್ರಿ ಮತ್ತು ಭಾರತದ ಪಂಜಾಬ್‌ನ ಅಮೃತಸರದ ದೂರದರ್ಶನ ಕಲಾವಿದೆ . ಇವರು ಹಲವಾರು ಹಾಸ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ ಮತ್ತು ಅನೇಕ ಪ್ರಶಸ್ತಿ ಕಾರ್ಯಕ್ರಮಗಳನ್ನು ಸಹ ಆಯೋಜಿಸಿದ್ದಾರೆ. ಇವರು ರಿಯಾಲಿಟಿ ಶೋಗಳಾದ ಝಲಕ್ ದಿಖ್ಲಾ ಜಾ (೨೦೧೨)[], ನಚ್ ಬಲಿಯೆ (೨೦೧೭)[] ಮತ್ತು ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಖಿಲಾಡಿ (೨೦೧೯)[] ನಲ್ಲಿ ಭಾಗವಹಿಸಿದರು. ಡಿಸೆಂಬರ್ ೨೦೧೯ ರಿಂದ, ಇವರು ಖತ್ರಾ ಖತ್ರಾ ಖತ್ರಾ[][] ಎಂಬ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕಾರ್ಯಕ್ರಮವು ಕಲರ್ಸ್ ಟಿವಿಗಾಗಿ ಇವರ ಪತಿ ಹರ್ಷ್ ಲಿಂಬಾಚಿಯಾ ಅವರಿಂದ ಪರಿಕಲ್ಪಿಸಲ್ಪಟ್ಟಿದೆ.

ಬಾಲ್ಯ

[ಬದಲಾಯಿಸಿ]

ಇಂಡಿಯನ್ ಸ್ಟ್ಯಾಂಡ್ಅಪ್ ಕಾಮಿಡಿಯನ್ ಎಂದೇ ಪ್ರಸಿದ್ದರಾಗಿರುವ ಭಾರತಿ ಸಿಂಗ್ ಜುಲೈ ೩, ೧೯೮೪ ರಂದು ಜನಿಸಿದರು. ಇವರು ಮೂಲತಃ ಪಂಜಾಬಿನ ಅಮೃತ್‌ಸರದವರು. ಭಾರತಿ ಸಿಂಗ್‌ರ ತಂದೆ ನೇಪಾಳದ ಮೂಲದವರು ಮತ್ತು ತಾಯಿ ಪಂಜಾಬಿ ಹಿಂದೂ. ಭಾರತಿ ಮಗುವಾಗಿದ್ದಾಗ ತಂದೆ ಮರಣ ಹೊಂದಿದರು. ಇವರಿಗೆ ಇಬ್ಬರು ಸಹೋದರರಿದ್ದಾರೆ. ಡಿಸೆಂಬರ್ ೨೦೧೭ ರಂದು, ಭಾರತಿ ಬರಹಗಾರ ಹರ್ಷ ಲಿಂಬಾಚಿಯಾರನ್ನು ವಿವಾಹವಾದರು. []

ವೃತ್ತಿಜೀವನ

[ಬದಲಾಯಿಸಿ]

ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ (ಸೀಸನ್ ೪) ನ ಸ್ಟ್ಯಾಂಡ್ಅಪ್ ಕಾಮಿಡಿಯನ್ ರಿಯಾಲಿಟಿ ಸರಣಿಯ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಅಲ್ಲಿ ಅವಳ ಸ್ಟ್ಯಾಂಡ್ಅಪ್ ಕಾಮಿಡಿಯ ಮಗುವಿನ ಪಾತ್ರಕ್ಕಾಗಿ ಲಾಲ್ಲಿ ಎಂಬಾ ಪ್ರಶಂಸೆ ಸಿಕ್ಕಿತು. [] ಕಾಮಿಡಿ ಸರ್ಕಸ್ ಥ್ರೀ ಕಾ ಟಾಡ್ಕಾ ಮತ್ತು ಕಾಮಿಡಿ ಸರ್ಕಸ್ ಮಹಾಸಂಗ್ರಾಮದಲ್ಲಿನ ಕಾಮಿಡಿ ಸರ್ಕಸ್ ಥ್ರೀ ಕಾ ತಾಡ್ಕಾ, ಕಾಮಿಡಿ ಸರ್ಕಸ್ ಕೆ ಸೂಪರ್ಸ್ಟಾರ್ಸ್, ಪರೇಶ್ ಗಣತ್ರಾ, ಕಾಮಿಡಿ ಸರ್ಕಸ್ ಕಾ ಜಾಡೂ ಅವರ ತಂಡದೊಂದಿಗೆ ಶರದ್ ಕೇಳ್ಕರ್ ಮತ್ತು ಪರೇಶ್ ಗಣತ್ರಾರೊಂದಿಗೆ ಭಾಗವಹಿಸಿದ್ದಳು. ಮತ್ತು ೨೦೧೧ ರಲ್ಲಿ, ಜುಬಿಲಿ ಕಾಮಿಡಿ ಸರ್ಕಸ್, ಕಾಮಿಡಿ ಸರ್ಕಸ್ ಕೆ ಟಾನ್ಸೆನ್ ಮತ್ತು ಕಾಮಿಡಿ ಸರ್ಕಸ್ ಕಾ ನಯಾ ದೌರ್ನಲ್ಲಿ ಸೋನಿ ಎಂಟರ್ಟೇನ್ಮೆಂಟ್ ಟೆಲಿವಿಷನ್ನಲ್ಲಿ ಕಾಣಿಸಿಕೊಂಡರು. ಮತ್ತು ಅವರು ಕಾಮಿಡಿ ನೈಟ್ಸ್ ಬಾಚಾವೊವನ್ನು ಕೃಷ್ಣ ಅಭಿಷೇಕ್ ಅವರೊಂದಿಗೆ ಹೋಸ್ಟ್ ಮಾಡಿದರು. ೨೦೧೧ ರಲ್ಲಿ, ಅವರು ಸ್ಟಾರ್ ಪ್ಲಸ್ನಲ್ಲಿ ಟಿವಿ ಸರಣಿಯ ಪ್ಯಾರ್ ಮೇನ್ ಟ್ವಿಸ್ಟ್ನಲ್ಲಿ ಅಭಿನಯಿಸಿದರು. ಮತ್ತು ನಂತರ ಪ್ರಸಿದ್ಧ ನೃತ್ಯ ರಿಯಾಲಿಟಿ ಶೋ ಝಲಾಕ್ ದಿಖ್ಲಾ ಜಾ ೫ (೨೦೧೨) ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡರು. ೨೦೧೨ ರಲ್ಲಿ, ಅವರು ದೂರದರ್ಶನದ 'ಶೋ ಸಾ ಸಾಲ್ ಸಿನೆಮಾ ಕೆ' ಕಾರ್ಯಕ್ರಮವನ್ನು ಆಯೋಜಿಸಿದರು. ಮಾಸ್ಟರ್ ಚೆಫ್ ಇಂಡಿಯಾ ಸೀಸನ್ ೩ ನಲ್ಲಿ ಅತಿಥಿ ನಟನಾಗಿ ಕಾಣಿಸಿಕೊಂಡರು. ನಾಚ್ ಬಲಿಯೆ ೬ ರ ಅತಿಥಿ ತಾರೆಯಾಗಿ ಕಾಣಿಸಿಕೊಂಡಳು. ಅವರು ವರ್ಷಗಳಿಂದ ತನ್ನ ಸ್ಟ್ಯಾಂಡ್ಅಪ್ ಕಾಮಿಡಿಯನ್‌ಆಗಿ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ ಮತ್ತು ಪಿಸ್ತೂಲ್ ಶೂಟಿಂಗ್ ಮತ್ತು ಬಿಲ್ಲುಗಾರಿಕೆಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಪಡೆದಿದ್ದಾರೆ.

ಅವರು ಇಂಡಿಯಾ ಗಾಟ್ ಟ್ಯಾಲೆಂಟ್ ೫ (೨೦೧೪), ಇಂಡಿಯಾಸ್ ಗಾಟ್ ಟ್ಯಾಲೆಂಟ್ ೬ (೨೦೧೫) ಮತ್ತು ಇಂಡಿಯಾ ಗಾಟ್ ಟ್ಯಾಲೆಂಟ್ ೭ (೨೦೧೬) ಗಳಿಗೆ ಆತಿಥ್ಯ ನೀಡಿದ್ದಾರೆ. ೨೦೧೭ ರಲ್ಲಿ ಸ್ಟಾರ್ ಪ್ಲಸ್ನಲ್ಲಿನ ನಚ್ ಬಲಿಯೆ ೮[] ರಿಯಾಲಿಟಿ ಶೋನಲ್ಲಿ ಹರ್ಶ್ ಜೊತೆಗೆ ೬ ನೇ ಸ್ಥಾನ ಪಡೆದರು. ೨೦೧೮ ರಲ್ಲಿ ರಿಯಾಲಿಟಿ ಶೋ ಡ್ಯಾನ್ಸ್ ಡಿವಾನೆ (ಸೀಸನ್ ೧) ಮತ್ತು ಬಿಗ್ ಬಾಸ್ (ಸೀಸನ್ ೧೨) (ಕಲರ್ಸ್ ಟಿವಿ ಎರಡರಲ್ಲೂ) ಅತಿಥಿಯಾಗಿ ಕಾಣಿಸಿಕೊಂಡರು. ಅದೇ ವರ್ಷ, ಅವರು ಕಲರ್ಸ ಟಿವಿಯಲ್ಲಿ 'ಇಂಡಿಯಾ ಗಾಟ್ ಟ್ಯಾಲೆಂಟ್ ೮' ಅನ್ನು ಆತಿಥ್ಯ ಮಾಡಿದರು ಮತ್ತು ಸೋನಿ ಟಿವಿಯಲ್ಲಿ 'ದಿ ಕಪಿಲ್ ಶರ್ಮಾ ಷೋ' (ಸೀಸನ್ ೨) ಹಾಸ್ಯ ನಾಟಕದಲ್ಲಿ ಟಿಟ್ಲಿ ಯಾದವ್ ಆಗಿ ಕಾಣಿಸಿಕೊಂಡರು. ೨೦೧೯ ರಲ್ಲಿ, ಅವರು ಫಿಯರ್ ಫ್ಯಾಕ್ಟರ್: ಖಟ್ರೋನ್ ಕೆ ಖಿಲಾಡಿ ೯ ನಲ್ಲಿ ಕಲರ್ಸ್ ಟಿವಿಯಲ್ಲಿ ಪತಿ ಹರ್ಶ್ ಜೊತೆಗೆ ಮತ್ತೆ ಭಾಗವಹಿಸಿದರು.[೧೦]

ದೂರದರ್ಶನ

[ಬದಲಾಯಿಸಿ]

•ಸ್ಟಾರ್ ಒನ್ ಚಾನೆಲ್‌ನಲ್ಲಿ ೨೦೦೮ 'ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ ಕಾಂಟೆಸ್ಟಂಟ್' ನಲ್ಲಿ ಎ ಸ್ಟ್ಯಾಂಡ್ ಅಪ್ ಕಾಮೀಡಿಯನ್ ಆಗಿದ್ದರು.

•ಸೋನಿ ಟಿವಿಯಲ್ಲಿ ೨೦೦೯ರಲ್ಲಿ ಕಾಮಿಡಿ ಸರ್ಕಸ್ ೩ ಕಾ ತಡ್ಕಾ ಪರೇಶ್ ಗಣತ್ರ ಮತ್ತು ಶರದ್ ಕೆಲ್ಕರ್ ಜೊತೆ ನಿರೂಪಕಿಯಾಗಿದ್ರ‍್ಯು

• ಬಿಗ್ ಬಾಸ್ ಸೀಸನ್ ೬ ಅತಿಥಿಯಾಗಿ ಭಾಗವಹಿಸಿದ್ದರು.

•೨೦೧೩ ಬಿಗ್ ಬಾಸ್ ಸೀಸನ್ ೭ ಅತಿಥಿಯಾಗಿ ಭಾಗವಹಿಸಿದ್ದರು.

•ನಾಚ್ ಬಲಿಯೆ ಸೀಸನ್ ೫ ನಲ್ಲಿ ಸ್ಪರ್ಧಿಯಾಗಿದ್ದರು.[೧೧]

•ಝಾಲಾಕ್ ದಿಖ್ಲಾ ಜಾ ಸೀಸನ್ ೬ ಡಾನ್ಸ್ ಶೋನಲ್ಲಿ ಸ್ಪರ್ಧಿಯಾಗಿದ್ದರು .

•೨೦೧೪ ಇಂಡಿಯಾ ಗಾಟ್ ಟ್ಯಾಲೆಂಟ್ ನಲ್ಲಿ ನಿರೂಪಕಿಯಾಗಿದ್ದರು.

•೨೦೧೫-೭ ಕಾಮಿಡಿ ನೈಟ್ಸ್ ಬಚಾವೊ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿದ್ದರು.

•೨೦೧೫ ಫಿಯರ್ ಫ್ಯಾಕ್ಟರ್: ಖಥ್ರೋಂ ಕೆ ಖಿಲಾಡಿ ಸೀಸನ್ ೬ ರಲ್ಲಿ ಭಾಗವಹಿಸಿದ್ದರು.

•೨೦೧೬ ಕಾಮಿಡಿ ನೈಟ್ಸ್ ಲೈವ್ ನಲ್ಲಿ ನಿರೂಪಕಿಯಾಗಿದ್ದರು.

•ಫಿಯರ್ ಫ್ಯಾಕ್ಟರ್: ಖಥ್ರೋಂ ಕೆ ಖಿಲಾಡಿ ಸೀಸನ್ ೭ ಅತಿಥಿಯಾಗಿ ಭಾಗವಹಿಸಿದ್ದರು.

•ಇಂಡಿಯಾಸ್ ಗಾಟ್ ಟ್ಯಾಲೆಂಟ್: ಸೀಸನ್ ಸೀಸನ್ ೭ ನಲ್ಲಿ ನಿರೂಪಕಿಯಾಗಿದ್ದರು.

•ಬಿಗ್ ಬಾಸ್ ಸೀಸನ್ ೧೦ ಅತಿಥಿಯಾಗಿದ್ದರು.[೧೨]

•೨೦೧೭ ನ್ಯಾಚ್ ಬಲಿಯೆ ಸೀಸನ್ ೮ ನಲ್ಲಿ ತಮ್ಮ ಗಂಡ ಹರ್ಷ ಅವರೊಡನೆ ಸ್ಪರ್ಧಿಸಿದ್ದರು.

•ಇಂಡಿಯಾಸ್ ಗಾಟ್ ಟ್ಯಾಲೆಂಟ್ ಸೀಸನ್ ೮ ನ ನಿರೂಪಕಿಯಾಗಿದ್ದರು.

•೨೦೧೮-೨೦೧೯ ಕಪಿಲ್ ಶರ್ಮಾ ಶೋ ನಲ್ಲಿ ಭಾಗವಹಿಸಿದ್ದರು .[೧೩]

•೨೦೧೯ ಫಿಯರ್ ಫ್ಯಾಕ್ಟರ್: ಖಥ್ರೋಂ ಕೆ ಖಿಲಾಡಿ ಸೀಸನ್ ೯ನಲ್ಲಿ ಪತಿ ಹರ್ಷ ಲಿಂಬಾ[೧೪]ಚಿಯವರೊಡನೆ ಸ್ಪರ್ಧಿಸಿದ್ದರು.

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]

೨೦೧೧ ಏಕ್ ನೂರ್, ಪಂಜಾಬಿ ಭಾಷೆಯ ಚಿತ್ರ .[೧೫]

೨೦೧೨ ಯಮಲೆ ಜಾಟ್ ಯಮಲೆ, ಪಂಜಾಬಿ ಭಾಷೆಯ ಚಿತ್ರ .

೨೦೧೨ ಖಿಲಾಡಿ ೭೮೬, ಹಿಂದಿ ಭಾಷೆಯ ಚಿತ್ರ .[೧೬]

೨೦೧೩ ಜ್ಯಾಟ್ ಅಂಡ್ ಜೂಲಿಯೆಟ್ ೨ ಪಂಜಾಬಿ ಭಾಷೆಯ ಚಿತ್ರ .[೧೭]

೨೦೧೩ ರಂಗನ್ ಸ್ಟೈಲ್, ಕನ್ನಡ ಭಾಷೆಯ ಚಿತ್ರ

೨೦೧೪ ಮಂಡಿಯನ್ ಟನ್ ಬಚ್ಕೆ ರಹೀನ್, ಪಂಜಾಬಿ ಭಾಷೆಯ ಚಿತ್ರ

೨೦೧೬ ಸನಮ್ ರೇ, ಹಿಂದಿ ಭಾಷೆಯ ಚಿತ್ರ .[೧೮]

ಉಲ್ಲೇಖಗಳು

[ಬದಲಾಯಿಸಿ]
  1. name="HT marriage"
  2. "Jhalak Dikhla Jaa 5 Contestants". indiatimes.com (in ಇಂಗ್ಲಿಷ್). 9 June 2012. Retrieved 6 January 2020.
  3. June 23, India Today Web Desk; June 23, India Today Web Desk; Ist, India Today Web Desk. "Bharti Singh to miss Nach Baliye 8 grand finale; the reason will make you sad". India Today (in ಇಂಗ್ಲಿಷ್). Retrieved 6 January 2020.{{cite news}}: CS1 maint: numeric names: authors list (link)
  4. DelhiJanuary 28, India Today Web Desk New; January 28, India Today Web Desk New; Ist, India Today Web Desk New. "Khatron Ke Khiladi 9: Bharti Singh loses elimination task. Contestants shed tears". India Today (in ಇಂಗ್ಲಿಷ್). Retrieved 6 January 2020.{{cite news}}: CS1 maint: numeric names: authors list (link)
  5. "Khatra Khatra Khatra review: Bharti Singh's jokes on her husband Haarsh are more entertaining than the challenges - Times of India". The Times of India (in ಇಂಗ್ಲಿಷ್). Retrieved 6 January 2020.
  6. DelhiAugust 13, Indo-Asian News Service New; August 13, Indo-Asian News Service New; Ist, Indo-Asian News Service New. "Khatra Khatra Khatra completes 100 episodes: Bharti Singh says comedy comes naturally to her". India Today (in ಇಂಗ್ಲಿಷ್). Retrieved 6 January 2020.{{cite news}}: CS1 maint: numeric names: authors list (link)
  7. https://youtube.com/watch?v=uVR5X_gIKM4
  8. https://timesofindia.indiatimes.com/tv/news/hindi/kapil-sharma-to-bharti-singh-popular-comedians-we-are-missing-on-tv/photostory/65458574.cms
  9. June 23, India Today Web Desk; June 23, India Today Web Desk; Ist, India Today Web Desk. "Bharti Singh to miss Nach Baliye 8 grand finale; the reason will make you sad". India Today (in ಇಂಗ್ಲಿಷ್). Retrieved 10 January 2020.{{cite news}}: CS1 maint: numeric names: authors list (link)
  10. https://en.wikipedia.org/wiki/The_Hindu
  11. https://web.archive.org/web/20120611065843/http://www.hindustantimes.com/Entertainment/Television/She-can-dance-too/Article1-868906.aspx
  12. "Bigg Boss 10, Episode 14, October 30th update: Bharti Singh, Karan Wahi give Weekend Ka Vaar a comic twist". The Times of India (in ಇಂಗ್ಲಿಷ್). 31 October 2016. Retrieved 10 January 2020.
  13. DelhiSeptember 4, India Today Web Desk New; September 4, India Today Web Desk New; Ist, India Today Web Desk New. "Kapil Sharma to team up with Bharti Singh for a new show? Here's the truth". India Today (in ಇಂಗ್ಲಿಷ್). Retrieved 10 January 2020.{{cite news}}: CS1 maint: numeric names: authors list (link)
  14. DelhiJanuary 28, India Today Web Desk New; January 28, India Today Web Desk New; Ist, India Today Web Desk New. "Khatron Ke Khiladi 9: Bharti Singh loses elimination task. Contestants shed tears". India Today (in ಇಂಗ್ಲಿಷ್). Retrieved 10 January 2020.{{cite news}}: CS1 maint: numeric names: authors list (link)
  15. "Bharti Singh Birthday, Real Name, Age, Weight, Height, Family, Contact Details, Boyfriend(s), Bio & More - Notednames". notednames.com. Retrieved 10 January 2020.
  16. June 8, P. T. I.; June 8, P. T. I.; Ist, P. T. I. "Working with Akshay Kumar dream come true: Bharti Singh". India Today (in ಇಂಗ್ಲಿಷ್). Retrieved 10 January 2020.{{cite news}}: CS1 maint: numeric names: authors list (link)
  17. http://archive.indianexpress.com/news/jatt-and-juliet-2-cast-in-city/1134882/
  18. "Bharti Singh makes her Big Bollywood Splash with Divya Khosla Kumar's 'Sanam Re' - Times of India". The Times of India (in ಇಂಗ್ಲಿಷ್). Retrieved 10 January 2020.