ಭಾರತದ ಕೇಂದ್ರ ಸರ್ಕಾರದ ಮುಂಗಡ ಪತ್ರ ೨೦೧೫-೧೬
೨೦೧೫-೨೦೧೬ ರ ಮುಂಗಡ ಪತ್ರ/ಬಜೆಟ್ ಮಂಡನೆ
[ಬದಲಾಯಿಸಿ]- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ‘ಜನಪ್ರಿಯ ಮೋಡಿ’ಗೆ ಹೊರತಾದ, ತಕ್ಷಣಕ್ಕೆ ಯಾವುದೇ ದೊಡ್ಡ ಘೋಷಣೆಗಳಿಲ್ಲದ ಹಾಗೂ ಜನರನ್ನು ಹೆಚ್ಚಿನ ಉಳಿತಾಯಕ್ಕೆ ಉತ್ತೇಜಿಸುವ ಮೊತ್ತಮೊದಲ ಪೂರ್ಣ ಪ್ರಮಾಣದ ಬಜೆಟ್‌ನ್ನು ೨೮-೨-೨೦೧೫ ಶನಿವಾರ ಮಂಡಿಸಿತು.
- ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಿದ ಬಜೆಟ್‌ನಲ್ಲಿ ವೈಯಕ್ತಿಕ ಆದಾಯ ತೆರಿಗೆ ವರ್ಗೀಕರಣ ಮಿತಿಗಳನ್ನು ಹಿಂದಿನಂತೆಯೇ ಉಳಿಸಿಕೊಳ್ಳಲಾಗಿದೆ. ಆದಾಯ ತೆರಿಗೆ ಕಾಯ್ದೆಯ ೮೦ ಸಿ ಸೆಕ್ಷನ್ ಅಡಿ ಗರಿಷ್ಠ ರೂ. ೧.೫ ಲಕ್ಷ ವರೆಗಿನ ಹೂಡಿಕೆಗೆ ಇದ್ದ ತೆರಿಗೆ ವಿನಾಯಿತಿ ಮುಂದುವರಿದಿದೆ. ಆದರೆ ೮೦ ಸಿಸಿಡಿ ಸೆಕ್ಷನ್ ಅಡಿಯಲ್ಲಿ ಪಿಂಚಣಿ ನಿಧಿಯಲ್ಲಿ ಹೆಚ್ಚುವರಿ ರೂ. ೫೦,೦೦೦ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ. ಅಂದರೆ, ಇದುವರಿಗೆ ಈ ನಿಧಿಯಲ್ಲಿ ವಾರ್ಷಿಕ ರೂ. ೧ ಲಕ್ಷ ಹೂಡಿಕೆಗೆ ಇದ್ದ ಅವಕಾಶ ರೂ. ೧.೫ ಲಕ್ಷಕ್ಕೆ ಏರಿದೆ.
- ಜೇಟ್ಲಿ ಅವರು ಅದೃಷ್ಟವಂತ ವಿತ್ತ ಸಚಿವ. ಅವರು ಸಚಿವರಾಗುತ್ತಿದ್ದಂತೆ ಆರ್ಥಿಕ ಪರಿಸ್ಥಿತಿಯೂ ಉತ್ತಮವಾಗಿದೆ. ಇದಕ್ಕೆ ಕಾರಣ ಅವರ ಕೆಲಸವಲ್ಲ, ಬದಲಿಗೆ ಜಾಗತಿಕ ಆರ್ಥಿಕ ಸ್ಥಿತಿ. ಈ ಬಜೆಟ್‍ನಲ್ಲಿ ಜೇಟ್ಲಿ ಅವರು ಬೃಹತ್ ಆರ್ಥಿಕ ಚೌಕಟ್ಟನ್ನು ಸ್ಥಿರಗೊಳಿಸಲು ಇನ್ನಷ್ಟು ಕ್ರಮ ಕೈಗೊಳ್ಳಬಹುದಿತ್ತು. ಆ ಮೂಲಕ ವಿತ್ತೀಯ ಸಂಚಯನದತ್ತ ಹೆಜ್ಜೆ ಹಾಕಬಹುದಿತ್ತು. ಅವರ ಬಜೆಟ್‍ನಲ್ಲಿ ಕೆಲವೊಂದು ಉತ್ತಮ ಯೋಜನೆಗಳು ಹಾಗೂ ಉದ್ದೇಶಗಳಿವೆ.
- ಆದರೆ ಉದ್ದೇಶಗಳನ್ನು ಘೋಷಿಸಿದಷ್ಟೇ, ಅದರ ಅನುಷ್ಠಾನವೂ ಮುಖ್ಯವಾಗುತ್ತದೆ. ಆದರೆ ನನಗೆಲ್ಲೂ ಇದಕ್ಕೆ ಸರಿಯಾದ ಮಾರ್ಗಸೂಚಿ ಕಂಡುಬರುತ್ತಿಲ್ಲ ಎಂದಿದ್ದಾರೆ ಮನಮೋಹನ್‍ಸಿಂಗ್. ಜತೆಗೆ, ಕೃಷಿ ಕ್ಷೇತ್ರದತ್ತ ಹೆಚ್ಚಿನ ಗಮನ ಹರಿಸುವಲ್ಲಿಯೂ ಜೇಟ್ಲಿ ವಿಫಲರಾಗಿದ್ದಾರೆ ಎನ್ನುವುದು ಸಿಂಗ್ ಅಂಬೋಣ.
ವೈದ್ಯಕೀಯ ವಿಮೆಗೆ ವಾರ್ಷಿಕ ರೂ. ೧೫,೦೦೦ ವರೆಗಿನ ಮೊತ್ತಕ್ಕೆ ಇದ್ದ ತೆರಿಗೆ ವಿನಾಯಿತಿಯನ್ನು ರೂ. ೨೫,೦೦೦ಕ್ಕೆ ಹೆಚ್ಚಿಸಲಾಗಿದೆ. ಹಾಗೆಯೇ ಸಾರಿಗೆ ಭತ್ಯೆಗೆ ತಿಂಗಳಿಗೆ ರೂ. ೮೦೦ ವರೆಗಿನ (ವಾರ್ಷಿಕ ರೂ. ೯,೬೦೦) ಮೊತ್ತಕ್ಕೆ ಇದ್ದ ತೆರಿಗೆ ವಿನಾಯಿತಿಯನ್ನು ತಿಂಗಳಿಗೆ ರೂ. ೧,೬೦೦ಕ್ಕೆ (ವಾರ್ಷಿಕ ರೂ. ೧೯,೨೦೦) ಹೆಚ್ಚಿಸಲಾಗಿದೆ.
ಹಿರಿಯ ನಾಗರಿಕರ ಆರೋಗ್ಯ ವಿಮೆ ಮಿತಿಯನ್ನು ರೂ. ೨೦,೦೦೦ ದಿಂದ ರೂ. ೩೦,೦೦೦ಕ್ಕೆ ಹೆಚ್ಚಿಸಲಾಗಿದೆ. ಹಾಗೆಯೇ ಇದುವರೆಗೂ ವಿಮೆ ವ್ಯಾಪ್ತಿಗೆ ಒಳಪಡದೇ ಇದ್ದ ೮೦ ವರ್ಷವಾದವರಿಗೆ ವಾರ್ಷಿಕ ರೂ. ೩೦,೦೦೦ ವೈದ್ಯಕೀಯ ವೆಚ್ಚಕ್ಕೆ ಅವಕಾಶ ಕೊಡಲಾಗಿದೆ. ವೈಯಕ್ತಿಕ ಆದಾಯ ತೆರಿಗೆದಾರರು ಎಲ್ಲಾ ಹೂಡಿಕೆ ಅವಕಾಶಗಳನ್ನು ಬಳಸಿಕೊಂಡರೆ ರೂ. ೪.೪೪ ಲಕ್ಷವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ. ಗೃಹ ಸಾಲದ ಮೇಲಿನ ಅಸಲು ಮತ್ತು ಬಡ್ಡಿ ಸೇರಿ ವಾರ್ಷಿಕ ರೂ. ೨ ಲಕ್ಷದವರೆಗಿನ ಮೊತ್ತಕ್ಕೆ ತೆರಿಗೆ ವಿನಾಯಿತಿ ಈಗಿರುವಂತೆಯೇ ಮುಂದುವರಿಯಲಿದೆ.
ಮಧ್ಯಮ ವರ್ಗದ ತೆರಿಗೆದಾರರಿಗೆ ಹೆಚ್ಚಿನ ವಿನಾಯಿತಿಗಳನ್ನು ನೀಡಲು ಸಾಧ್ಯವಾಗಿಲ್ಲ ಎಂಬುದನ್ನು ಜೇಟ್ಲಿ ಅವರೇ ಒಪ್ಪಿಕೊಂಡಿದ್ದಾರೆ. ‘೧೪ನೇ ಹಣಕಾಸು ಆಯೋಗದ ಶಿಫಾರಸಿನಂತೆ ತೆರಿಗೆ ಸಂಪನ್ಮೂಲದಲ್ಲಿ ರಾಜ್ಯಗಳ ಪಾಲನ್ನು ಹೆಚ್ಚಿಸಿರುವುದರಿಂದ ಕೇಂದ್ರದ ಬಳಿ ಹೆಚ್ಚಿನ ಹಣ ಇಲ್ಲವಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಕೇಂದ್ರದ ಬಳಿ ಹಣದ ಕೊರತೆ ಇರುವುದರಿಂದ ಜನರ ಉಳಿತಾಯವನ್ನು ಉತ್ತೇಜಿಸಲಾಗಿದೆ. ಹೆಚ್ಚಿನ ಉಳಿತಾಯದಿಂದ ಬರುವ ಹಣವನ್ನು ರಾಷ್ಟ್ರ ನಿರ್ಮಾಣಕ್ಕೆ ನೆರವಾಗುವ ಮೂಲಸೌಕರ್ಯ ಯೋಜನೆಗಳಿಗೆ ಬಳಸಿಕೊಳ್ಳಬಹುದು. ಜನರ ಜೇಬಲ್ಲೇ ಹೆಚ್ಚು ಹಣ ಉಳಿಯುವಂತೆ ಮಾಡಿ ಉಪಭೋಗ ಸಂಸ್ಕೃತಿಯ ಸಮಾಜ ನಿರ್ಮಿಸುವುದಕ್ಕಿಂತ, ಉಳಿತಾಯದ ಹಣವನ್ನು ದೇಶ ಕಟ್ಟುವುದಕ್ಕೆ ಬಳಸಿಕೊಳ್ಳಲು ಒತ್ತು ನೀಡಲಾಗಿದೆ’ ಎಂದರು.
ಆದರೆ, ಜೇಟ್ಲಿ ಅವರು ಕೆಲವೇ ತಿಂಗಳುಗಳ ಹಿಂದೆ ‘ಜನರ ಜೇಬಲ್ಲಿ ಹೆಚ್ಚು ಹಣ ಉಳಿಯುವಂತೆ ಮಾಡಿದರೆ ಆರ್ಥಿಕ ಚಟುವಟಿಕೆಗಳು ಗರಿಗೆದರುತ್ತವೆ’ ಎಂದು ಹೇಳಿದ್ದರು.
ಸೇವಾ ತೆರಿಗೆ ಏರಿಕೆ: ಸೇವಾ ತೆರಿಗೆಯನ್ನು ಶೇ ೧೨.೩೬ ರಿಂದ ಶೇ ೧೪ಕ್ಕೆ ಹೆಚ್ಚಿಸಿರುವುದರಿಂದ ಜನರ ಜೀವನ ನಿರ್ವಹಣಾ ವೆಚ್ಚ ಸ್ವಲ್ಪ ದುಬಾರಿಯಾಗಲಿದೆ.
ಹೋಟೆಲ್ ಖರ್ಚು, ಪ್ರಯಾಣ, ಫೋನ್ ಕರೆ ದರ, ವಿಮೆ ಪ್ರೀಮಿಯಂ ಇತ್ಯಾದಿಗಳು ತುಟ್ಟಿಯಾಗಲಿವೆ. ವಾರ್ಷಿಕ ಒಂದು ಕೋಟಿ ಆದಾಯದವರೆಗಿನ ಸಿರಿವಂತರ ಮೇಲಿನ ಸಂಪತ್ತು ತೆರಿಗೆ ರದ್ದುಗೊಳಿಸಲಾಗಿದೆ. ಆದರೆ ಒಂದು ಕೋಟಿ ಆದಾಯ ಮೀರಿದ ‘ಅತಿ ಸಿರಿವಂತರ’ ತೆರಿಗೆಗೆ ಶೇ ೨ರಷ್ಟು ಸರ್‌ಚಾರ್ಜ್ ವಿಧಿಸಲಾಗುವುದು. ಸಂಪತ್ತು ತೆರಿಗೆ ರದ್ದತಿಯಿಂದ ರೂ. ೧,೦೦೦ ಕೋಟಿ ನಷ್ಟವಾದರೆ, ಸರ್ಚಾರ್ಜ್ನಿಂದ ರೂ. ೯೦೦೦ ಕೋಟಿ ವರಮಾನ ಬರುವ ನಿರೀಕ್ಷೆ ಇದೆ.
ಕಾರ್ಪೊರೇಟ್ ತೆರಿಗೆ ಕಡಿತ: ೨೦೧೬–೧೭ರಿಂದ ಆರಂಭವಾಗಿ ಕಾರ್ಪೊರೇಟ್ ತೆರಿಗೆಯನ್ನು ನಾಲ್ಕು ವರ್ಷಗಳ ಅವಧಿಯಲ್ಲಿ ಶೇ ೩೦ರಿಂದ ಶೇ ೨೫ಕ್ಕೆ ಇಳಿಸಲಾಗುವುದು. ವಿದೇಶಿ ಸಾಂಸ್ಥಿಕ ಹೂಡಿಕೆ (ಎಫ್‌ಐಐ) ಮತ್ತು ಎಫ್‌ಪಿಐಗಳ ವ್ಯತ್ಯಾಸವನ್ನು ರದ್ದುಗೊಳಿಸಿ ಎರಡನ್ನೂ ಒಂದೇ ಎಂದು ಪರಿಗಣಿಸಲಾಗಿದೆ.
ತೆರಿಗೆ ವಂಚನೆ ತಡೆಗೆ ರೂಪಿಸಲಾಗಿರುವ ‘ಜಿಎಎಆರ್ ನಿಯಮ’ವನ್ನು (ಸಾಮಾನ್ಯ ವಂಚನೆ ನಿಗ್ರಹ ನಿಯಮ) ಎರಡು ವರ್ಷಗಳ ನಂತರ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಸರಕು ಮತ್ತು ಸೇವಾ ತೆರಿಗೆ ಪದ್ಧತಿಯನ್ನು (ಜಿಎಸ್‌ಟಿ) ೨೦೧೬ರ ಏ. ೧ರಿಂದ ಜಾರಿಗೊಳಿಸಲು ನಿರ್ಧರಿಸಲಾಗಿದೆ. ವಿದೇಶಗಳಿಂದ ಹೆಚ್ಚಿನ ಹಣ ಹರಿಯುವಂತೆ ಮಾಡುವುದು ಈ ‘ಉದ್ಯಮ ಸ್ನೇಹಿ’ ಕ್ರಮಗಳ ಉದ್ದೇಶ ಎಂಬುದು ವಿಶ್ಲೇಷಕರ ಅಭಿಮತ.
ಕಪ್ಪುಹಣಕ್ಕೆ ಸಂಬಂಧಿಸಿದಂತೆ ವಿದೇಶಗಳಲ್ಲಿ ಹೊಂದಿರುವ ಆಸ್ತಿಗಳ ಮಾಹಿತಿ ಮುಚ್ಚಿಡುವವರಿಗೆ ೧೦ ವರ್ಷ ಜೈಲು ಶಿಕ್ಷೆ ವಿಧಿಸುವ ಹಾಗೂ ವಿದೇಶಗಳ ಮೂಲದಿಂದ ಬರುವ ಆದಾಯ ಮುಚ್ಚಿಟ್ಟರೆ ಶೇ ೩೦೦ರಷ್ಟು ದಂಡ ವಿಧಿಸುವ ಅವಕಾಶವಾಗುವ ಕಾನೂನು ಜಾರಿಗೊಳಿಸುವ ಪ್ರಸ್ತಾಪವನ್ನು ಬಜೆಟ್ ಒಳಗೊಂಡಿದೆ.
ಕಪ್ಪುಹಣ ನಿಯಂತ್ರಣಕ್ಕೆ ಕ್ರಮ, ಹೆಚ್ಚಿನ ಹೂಡಿಕೆಯಿಂದ ಸಹಜವಾಗಿಯೇ ಅಧಿಕವಾಗುವ ಉದ್ಯೋಗ ಸೃಷ್ಟಿಯಿಂದ ದೀರ್ಘಾವಧಿಯಲ್ಲಿ ಮಧ್ಯಮ ವರ್ಗಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
ಇದೇ ಮೊದಲ ಬಾರಿಗೆ ನೀರಾವರಿ ಯೋಜನೆಗಳಿಗೆ ತೆರಿಗೆ ಮುಕ್ತ ಬಾಂಡ್‌ಗಳನ್ನು ಪ್ರಸ್ತಾಪಿಸಲಾಗಿದೆ. ಜತೆಗೆ ಗ್ರಾಮೀಣ ಉದ್ಯೋಗ ಖಾತ್ರಿಗೆ ರೂ. ೫,೦೦೦ ಕೋಟಿಯನ್ನು ಹೆಚ್ಚುವರಿಯಾಗಿ ಮೀಸಲಿಡಲಾಗಿದೆ.
ಮೂಲಸೌಕರ್ಯ ಬಾಂಡ್: ಹಣ ಸಂಪನ್ಮೂಲವಿಲ್ಲದೆ ಸೊರಗಿರುವ ರೈಲ್ವೆ ಮತ್ತು ರಸ್ತೆ ಯೋಜನೆಗಳಿಗೆ ತೆರಿಗೆ ವಿನಾಯಿತಿ ಇರುವ ಮೂಲಸೌಕರ್ಯ ಬಾಂಡ್‌ಗಳ ಮೂಲಕ ಹಣ ಸಂಗ್ರಹಿಸಲು ಅವಕಾಶ ನೀಡಲಾಗಿದೆ. ಮೂಲಸೌಕರ್ಯದ ಮೇಲಿನ ಹೂಡಿಕೆಯನ್ನು ರೂ. ೭೦,೦೦೦ ಕೋಟಿಯಷ್ಟು ಹೆಚ್ಚಿಸಲಾಗಿದೆ.
ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ ಸ್ಥಾಪನೆ ಹಾಗೂ ತಲಾ ೪,೦೦೦ ಮೆಗಾವಾಟ್ ಸಾಮರ್ಥ್ಯದ ಐದು ಅತ್ಯಾಧುನಿಕ ವಿದ್ಯುತ್ ಯೋಜನೆಗಳಿಗಾಗಿ ರೂ. ೨೦, ೦೦೦ ಕೋಟಿ ನಿಗದಿ ಮಾಡಲಾಗಿದೆ. ಸಾರ್ವಜನಿಕ ಭವಿಷ್ಯ ನಿಧಿ/ ಕಾರ್ಮಿಕ ಭವಿಷ್ಯ ನಿಧಿಯಲ್ಲಿ ವಾರಸುದಾರರಿಲ್ಲದೆ ಉಳಿದಿರುವ ರೂ. ೯,೦೦೦ ಕೋಟಿಯನ್ನು ಹಿರಿಯ ನಾಗರಿಕರ ನಿಧಿಗೆ ಬಳಸಿಕೊಳ್ಳುವುದಾಗಿ ಘೋಷಿಸಲಾಗಿದೆ.
ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳಾದ ‘ಭಾರತದಲ್ಲಿಯೇ ತಯಾರಿಸಿ’, ‘ಸ್ವಚ್ಛ ಭಾರತ ಯೋಜನೆ’, ‘ಡಿಜಿಟಲ್ ಇಂಡಿಯಾ’ ಯೋಜನೆಗಳನ್ನು ಉತ್ತೇಜಿಸಲಾಗಿದೆ. ಈ ನಿಟ್ಟಿನಲ್ಲಿ ರಕ್ಷಣಾ ಸಾಧನಗಳ ದೇಶೀಯ ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಆ ಕ್ಷೇತ್ರಕ್ಕೆ ಶೇ ೧೦ರಷ್ಟು ಹೆಚ್ಚು ಹಣ ನಿಗದಿ ಮಾಡಲಾಗಿದೆ. ಹೊಸ ಕಂಪೆನಿಗಳ ಸ್ಥಾಪನೆ ಉತ್ತೇಜಿಸಲು (ತಾಂತ್ರಿಕ ಕಂಪೆನಿಗಳಿಗೆ ವಿಶೇಷ ಆದ್ಯತೆ) ರೂ. ೧,೦೦೦ ಕೋಟಿ ನಿಗದಿ ಮಾಡಲಾಗಿದ್ದು ಇದು ಕೂಡ ‘ಭಾರತದಲ್ಲೇ ತಯಾರಿಸಿ’ ನೀತಿಗೆ ಪೂರಕ ಎನ್ನಲಾಗಿದೆ.
- ‘ಮುದ್ರಾ’ ಬ್ಯಾಂಕ್
ಪರಿಶಿಷ್ಟ ಜಾತಿ ಮತ್ತು ಪಂಗಡದ ಉದ್ಯಮಿಗಳಿಗೆ ಬಂಡವಾಳದ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ‘ಮುದ್ರಾ ಬ್ಯಾಂಕ್’ (Micro Units Development Refinance Agency) ಸ್ಥಾಪಿಸಲು ಮುಂದಾಗಿದೆ. ಇದಕ್ಕಾಗಿ ರೂ. ೨೦ ಸಾವಿರ ಕೋಟಿ ಮೂಲ ಬಂಡವಾಳ ಮತ್ತು ರೂ. ೩ ಸಾವಿರ ಕೋಟಿಯಷ್ಟು ಸಾಲ ಖಾತರಿ ಮೊತ್ತವನ್ನು ನಿಗದಿಪಡಿಸಿದೆ. ದೇಶದಲ್ಲಿ ಸದ್ಯ ೫.೭೭ ಕೋಟಿಗಳಷ್ಟು ಸಣ್ಣ ಉದ್ದಿಮೆಗಳಿದ್ದು, ಬಹುಪಾಲು ಏಕವ್ಯಕ್ತಿ ಒಡೆತನದಲ್ಲೇ ಇವೆ. ಇವರಲ್ಲಿ ಶೇ ೬೨ರಷ್ಟು ಮಂದಿ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗದವರೇ ಆಗಿದ್ದಾರೆ.
- ಬಂಗಾರದ ಬಾಂಡ್
ಗ್ರಾಹಕರು ತಮ್ಮ ಬಳಿ ಇರುವ ಚಿನ್ನವನ್ನು ಬ್ಯಾಂಕ್ನಲ್ಲಿಟ್ಟು, ವಿಶೇಷ ಖಾತೆಯನ್ನು ತೆರೆಯಬಹುದು. ಇದಕ್ಕೆ ಬಡ್ಡಿ ನೀಡಲಾಗುತ್ತದೆ. ವರ್ತಕರು ತಮ್ಮ ಚಿನ್ನದ ಖಾತೆಯ ಮೇಲೆ ಸಾಲ ಪಡೆಯಬಹುದು.
ಬಜಟ್ ಸಾರ
[ಬದಲಾಯಿಸಿ]- ಬಜೆಟ್ ೨೦೧೫-೨೦೧೬ ರ ಹೊರನೋಟ :
- ಪರೋಕ್ಷ ತೆರಿಗೆಗೆ ಆದ್ಯತೆ; ಕಪ್ಪುಹಣ ಬಚ್ಚಿಟ್ಟರೆ ಜೈಲು; ಪಿಂಚಣಿ ನಿಧಿಯಲ್ಲಿ ಹೂಡಿಕೆ ಮಿತಿ ಏರಿಕೆ; ಸೇವಾ ತೆರಿಗೆ ಹೆಚ್ಚಳದಿಂದ ಜೀವನ ನಿರ್ವಹಣೆ ದುಬಾರಿ; ಜಿಎಎಆರ್ ನಿಯಮ ಎರಡು ವರ್ಷಗಳ ನಂತರ ಜಾರಿ; ಸಿರಿವಂತರ ಸಂಪತ್ತು ತೆರಿಗೆ ರದ್ದು; ಅತಿಸಿರಿವಂತರಿಗೆ ಶೇ ೨ರಷ್ಟು ಸರ್‌ಚಾರ್ಜ್; ಕೃಷಿ ಸಾಲ ರೂ. ೮.೫೦ ಲಕ್ಷ ಕೋಟಿಗೆ ಏರಿಕೆ; ರಕ್ಷಣಾ ಕ್ಷೇತ್ರಕ್ಕೆ ಶೇ ೧೦ರಷ್ಟು ಅಧಿಕ ಹಣ; ಸ್ವಚ್ಚ ಇಂಧನ ಉತ್ಪಾದನಗೆ ಆದ್ಯತೆ
ಕೇಂದ್ರ ಬಜೆಟ್ ಮುಖ್ಯಾಂಶಗಳು
[ಬದಲಾಯಿಸಿ]- ೨೦೨೦ರ ವೇಳೆ ವಿದ್ಯುತ್ ಸಮಸ್ಯೆ ಇಲ್ಲದಂತೆ, ವಿದ್ಯುತ್ ಸೌಲಭ್ಯವಿಲ್ಲದ ೨೦ ಸಾವಿರ ಹಳ್ಳಿಗಳಿಗೆ ವಿದ್ಯುತ್ ಹಾಗೂ ಎಲ್ಲರಿಗೂ ವಸತಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು. ಅಲ್ಲದೆ, ಹಣದುಬ್ಬರವನ್ನು ಶೇ.೬ಕ್ಕಿಂತ ಕಡಿಮೆ ಮಾಡುವುದು ನಮ್ಮ ಸರ್ಕಾರದ ಗುರಿ ಎಂದು ಜೇಟ್ಲಿ ತಿಳಿಸಿದರು.
- 1.ಯೋಜನೇತರ ವೆಚ್ಚ =13.12ಲಕ್ಷ ಕೋಟಿ ರೂ.(12.20 ಲಕ್ಷ ಕೋಟಿ ರೂ.)
- 2.ಯೋಜನಾ ವೆಚ್ಚ =4.65 ,, (5.75 ಲಕ್ಷ ಕೋಟಿ ರೂ.)
- 3.ಒಟ್ಟು ವೆಚ್ಚ =17.77 ,, (17.95 ಲಕ್ಷ ಕೋಟಿ ರೂ.)
- ವರಮಾನ
- 1.ತೆರಿಗೆಯೇತರ ವರಮಾನ 14.49 ಲಕ್ಷ ಕೋಟಿ ರೂ.(13.64ಲಕ್ಷ ಕೋಟಿ ರೂ).
- 2.ರಾಜ್ಯಗಳ ಪಾಲು 5.24 ಲಕ್ಷ ಕೋಟಿ ರೂ. (3.87 ಲಕ್ಷ ಕೋಟಿ ರೂ.)
- 3.ಕೇಂದ್ರದ ಪಾಲು 9.20 ಲಕ್ಷ ಕೋಟಿ ರೂ. (9.77 ಲಕ್ಷ ಕೋಟಿ ರೂ.)
- 4.ನಿವ್ವಳ ಸಾಲದ ಮಿತಿ 4.56 ಲಕ್ಷ ಕೋಟಿ ರೂ. (4.53 ಲಕ್ಷ ಕೋಟಿ ರೂ)
- ಇತರೆ
- ವಿತ್ತೀಯ ಕೊರತೆ ಜಿಡಿಪಿಯ ಶೇ. ರೂ.3.9 -ಸಾದ್ಯತೆ ಶೇ.4.1
- ವರಮಾಹ ಕೊರತೆ ಜಿಡಿಪಿಯ ಶೇ.2.8 -/ಶೇ.2.9.
- ಸೇವಾ ತೆರಿಗೆ ಸಂಗ್ರಹ ಶೇ.14.00 (ಶೇ.12.36.
- ಕೇಂದ್ರ ಬಜೆಟ್ ಮುಖ್ಯಾಂಶಗಳು->ಸರ್ಕಾರದ ಗುರಿ
- ಮೇಕ್ ಇನ್ ಇಂಡಿಯಾದಿಂದ ಉದ್ಯೋಗ ಸೃಷ್ಟಿ
- ಸಣ್ಣ ನೀರಾವರಿ ಯೋಜನೆಗೆ ೫,೩೦೦ ಕೋಟಿ
- ಗ್ರಾಮೀಣಾಭಿವೃದ್ಧಿ ನಿಧಿಗೆ ೨೫ ಸಾವಿರ ಕೋಟಿ ಮೀಸಲು
- ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ, ಪ್ರಧಾನಮಂತ್ರಿ ಜೀವನ್ ಭೀಮಾ ಯೋಜನೆ.
- ಮನ್ ರೇಗಾ ಯೋಜನೆಗೆ ೩೪,೧೦೦ ಕೋಟಿ ರೂಪಾಯಿ
- ದೇಶಾದ್ಯಂತ ೮೦ ಸಾವಿರ ಪ್ರೌಢಶಾಲೆಗಳು ಮೇಲ್ದರ್ಜೆಗೆ
- ಸಂಶೋಧನಾ ಮತ್ತು ಅಭಿವೃದ್ಧಿ ಕ್ಷೇತ್ರಕ್ಕೆ ೧೫೮೦ ಕೋಟಿ ರು
- ಅಂಚೆ ಕಚೇರಿಗಳ ಮೂಲಕ ಜನ ಧನ ಯೋಜನೆ ಜಾರಿ
- ಬಿಪಿಎಲ್ ಕಾರ್ಡ್ ವಯೋವೃದ್ಧರಿಗೆ ಸರ್ಕಾರದಿಂದ ಸಂಪೂರ್ಣ ಚಿಕಿತ್ಸಾ ವೆಚ್ಚ.
- ಪ್ರತಿ ೫ ಕಿ.ಮೀ.ಗೆ ೧ ಶಾಲೆ ನಿರ್ಮಾಣ - ೭೫ ಸಾವಿರ ಪ್ರಾಥಮಿಕ ಶಾಲೆಗಳ ನಿರ್ಮಾಣ - ಪ್ರೌಢಶಾಲೆಗಳ ಸಂಖ್ಯೆ ಹೆಚ್ಚಳ
- ಈಗಾಗಲೇ ೫೦ ಲಕ್ಷ ಶೌಚಾಲಯ ನಿರ್ಮಾಣ ಮಾಡಲಾಗಿದೆ, ೬ ಕೋಟಿ ಶೌಚಾಲಯ ನಿರ್ಮಾಣ ನಮ್ಮ ಗುರಿ
- ಗೋಲ್ಡ್ ಮಾನಿಟರಿಂಗ್ ಸ್ಕೀಮ್ ಮೂಲಕ ಗೋಲ್ಡ್ ಅಕೌಂಟ್ ತೆರೆಯಲಾಗುವುದು.
- ನಿರ್ಭಯಾ ಫಂಡ್ ಗೆ ೧೦೦೦ ಕೋಟಿ ರೂಪಾಯಿ ಹೆಚ್ಚುವರಿ ನೀಡಿಕೆ.
- ದೇಶದ ಬಡ ಜನರಿಗಾಗಿ ಅಟಲ್ ಪೆನ್ಶನ್ ಯೋಜನೆ. ಮಕ್ಕಳ ಸುರಕ್ಷತಾ ಯೋಜನೆಗಾಗಿ ೧,೫೦೦ ಕೋಟಿ ರೂ. ಮೀಸಲು.
- 'ಸೆಟು' ಹೆಸರಿನಲ್ಲಿ ಐ.ಟಿ. ವಲಯಕ್ಕೆ ನೂತನ ಯೋಜನೆ.
- ಸಂಶೋಧನೆ ಮತ್ತು ಅಭಿವೃದ್ದಿಗೆ ೧೫೦ ಕೋಟಿ.
- ೧೫೦ ದೇಶಗಳಿಗೆ ವೀಸಾ ಆನ್ ಅರೈವಲ್ ಸೌಲಭ್ಯ
- ವಾರ್ಷಿಕ ೧ಕೋಟಿಗಿಂತ ಅಧಿಕ ಆದಾಯ ಹೊಂದಿರುವವರಿಗೆ ೨% ಸರ್‌ಛಾರ್ಜ್.
- ಸೇವಾ ತೆರಿಗೆ ಶೇ.೧೪ಕ್ಕೆ ಏರಿಕೆ. ಸೇವಾ ತೆರಿಗೆ ಏರಿಕೆಯಿಂದ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ.
- ಸ್ಥಳೀಯ ಚರ್ಮೋದ್ಯಮಕ್ಕೆ ಪ್ರೋತ್ಸಾಹ. ದೇಶೀಯ ಚರ್ಮೋದ್ಯಮಕ್ಕೆ ಶೇ.೬ ರಷ್ಟು ಸುಂಕ ಕಡಿತ
- ೨೨ ವಸ್ತುಗಳ ಸಾಂಪ್ರದಾಯಿಕ ತೆರಿಗೆ ಕಡಿತಗೊಳಿಸಲಾಗುವುದು.
- ಕಪ್ಪು ಹಣ ಹೊಂದಿರುವವರಿಗೆ ೧೦ ವರ್ಷ ಜೈಲು, ಜಾಮೀನು ಇಲ್ಲ.
- ೨.೫ ಲಕ್ಷದವರೆಗೆ ಟ್ಯಾಕ್ಸ್ ಇಲ್ಲ. ೨.೫ರಿಂದ ೫ ಲಕ್ಷದವರೆಗೆ ಶೇ.೧೦ರಷ್ಟು, ೫ರಿಂದ ೧೦ಲಕ್ಷದವರೆಗೆ ಶೇ.೨೦ರಷ್ಟು, ೧೦ ಲಕ್ಷಕ್ಕೆ ಮೇಲ್ಪಟ್ಟು ಶೇ.೩೦ರಷ್ಟು ತೆರಿಗೆ.
- ತೆರಿಗೆ ಕಳ್ಳರಿಗೆ ೧೦ ವರ್ಷಗಳ ಕಾಲ ಜೈಲುಶಿಕ್ಷೆ. ಐಟಿ ರಿಟರ್ನ್ಸ್ ಮಾಡದಿದ್ದರೆ ಏಳು ವರ್ಷ ಶಿಕ್ಷೆ
- ಬಿಹಾರ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಿಗೆ ವಿಶೇಷ ನೆರವು.
- ಕಪ್ಪು ಹಣ ನಿಯಂತ್ರಣಕ್ಕೆ ಹೊಸ ಮಸೂದೆ
- ಕಾರ್ಪೋರೆಟ್ ತೆರಿಗೆ ಶೇ.೩೦ರಿಂದ ಶೇ.೨೫ಕ್ಕೆ ಇಳಿಕೆ. ಮುಂದಿನ ನಾಲ್ಕು ವರ್ಷಗಳಲ್ಲಿ ಕಾರ್ಪೋರೆಟ್ ತೆರಿಗೆ ಇಳಿಕೆ.
೨೦೧೫-೨೦೧೬ ರ ಮುಂಗಡಪತ್ರ ಮಂಡನೆ ಲೋಕಸಭೆಯಲ್ಲಿ
[ಬದಲಾಯಿಸಿ]- ೧೧:೦೩ am : ಲೋಕಸಭೆಯಲ್ಲಿ ಬಜೆಟ್ ಮಂಡನೆ ಆರಂಭ
- ೧೧:೦೬ am : ನರೇಗಾ, ಬಡತನ ನಿರ್ಮೂಲನೆ ಕುರಿತ ಕೆಲಸಗಳನ್ನು ಸರ್ಕಾರ ಮುಂದುವರೆಸಿಕೊಂಡು ಹೋಗಲಿದೆ.
- ೧೧:೦೯ am : ಗ್ರಾಮಗಳಲ್ಲಿ ೪ ಕೋಟಿ ಮನೆ ನಿರ್ಮಾಣ ಗುರಿ ಸರ್ಕಾರ ಹೊಂದಿದೆ.
- ೧೧:೧೨ am : ಸಬ್ಸಿಡಿಗಳಲ್ಲಿ ಆಗುತ್ತಿರುವ ಸೋರಿಕೆಯನ್ನಷ್ಟೇ ನಾವು ಸರಿಪಡಿಸಲು ಬಯಸಿದ್ದೇವೆ ; ಬದಲಾಗಿ ಸಬ್ಸಿಡಿಗಳನ್ನೇ ತೆಗೆಯುವ ಯೋಚನೆ ಸರಕಾರದ ಮುಂದಿಲ್ಲ.
- ರಕ್ಷಣಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುವು ಮಾಡಿಕೊಟ್ಟಿರುವುದು ಮುಂದಿನವರ್ಷಗಳಲ್ಲಿ ಶಸ್ತ್ರಾಸ್ತ್ರಮತ್ತು ಯುದ್ಧವಿಮಾನ ಉತ್ಪಾದನೆಯಲ್ಲಿ ಪ್ರಮುಖ ಪರಿಣಾಮ ಬೀರಲಿರುವುದಂತೂಸತ್ಯ. ಇದರಿಂದಾಗಿ ರಕ್ಷಣಾ ಕ್ಷೇತ್ರದಲ್ಲಿ ನಮ್ಮ ದೇಶವೂ ಉತ್ಪಾದನೆ ಮಾಡಿ ವಿದೇಶಗಳಿಗೆ ರಫ್ತು ಮಾಡುವ ಅವಕಾಶವೂ ಲಭ್ಯವಾಗಲಿದೆ.
- ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.11ರಷ್ಟು ಅಂದರೆ ರು. 2,46,727 ಕೋಟಿ ಮೊತ್ತವನ್ನು ಮುಂದಿನ ಹಣಕಾಸು ವರ್ಷದಲ್ಲಿ ರಕ್ಷಣಾ ಕ್ಷೇತ್ರಕ್ಕೆ ಮೀಸಲುಇರಿಸಲಾಗಿದೆ. 2014-15ನೇ ಹಣಕಾಸು ವರ್ಷದಲ್ಲಿ ಈ ಕ್ಷೇತ್ರಕ್ಕೆ ರು. 2.22 ಲಕ್ಷ ಕೋಟಿ ಮೊತ್ತವನ್ನು ತೆಗೆದಿರಿಸಲಾಗಿತ್ತು.
- ರಕ್ಷಣಾ ಪಡೆಗಳಿಗಾಗಿ ಈಗಾಗಲೇ 126 ಬಹೂಪಯೋ ಗಿ ಯುದ್ಧ ವಿಮಾನಗಳ ಖರೀದಿಗಾಗಿ ರು. 60 ಸಾವಿರ ಕೋಟಿ, 22 ಅಪಾಚೆ ಹೆಲಿಕಾಪ್ಟರ್‍ಗಳು, 15 ಚಿನೂಕ್ ಕಾಪ್ಟರ್‍ಗಳು, ಹಾರುವ ಸಂದರ್ಭದಲ್ಲೇ ಇಂಧನವನ್ನು ಪೂರೈಸಿಕೊಳ್ಳಲಿರುವ ಆರು ವಿಮಾನಗಳ ಖರೀದಿ, ಅತ್ಯಾಧುನಿಕ ಬಂದೂಕುಗಳು ಹಾಗೂ ಮದ್ದುಗುಂಡುಗಳ ಖರೀದಿ ಪ್ರಕ್ರಿಯೆ ನಡೆದಿದೆ.
- ೧೧:೧೫ am : ದೇಶದ ಮುಂದೆ ೪ ಸವಾಲುಗಳಿವೆ. ಕೃಷಿ ಆರ್ಥಿಕತೆ ಸಾರ್ವಜನಿಕರಿಂದ ಹೂಡಿಕೆ, ಉತ್ಪಾದನೆಗೆ ಒತ್ತು ಉದ್ಯೋಗಕ್ಕೆ ಆದ್ಯತೆ, ಬಡತನ ನಿರ್ಮೂಲನೆ.
- ೧೧:೧೮ am : ಮೇಕ್ ಇಂಡಿಯಾದಿಂದ ಉದ್ಯೋಗ ಸೃಷ್ಠಿ..
- ೧೧:೨೧ am : ವಿದ್ಯುತ್ ಸೌಲಭ್ಯವಿಲ್ಲದ ೨೦ ಸಾವಿರ ಹಳ್ಳಿಗಳಿಗೆ ವಿದ್ಯುತ್ ಸೌಲಭ್ಯ.
- ೧೧:೨೪ am : ೭೫ ಸಾವಿರ ಪ್ರಾಥಮಿಕ ಶಿಕ್ಷಣ ಮಾಧ್ಯಮಿಕ ಶಿಕ್ಷಣ ಅಪ್ ಗ್ರೇಡ್ ಮಾಡಬೇಕಿದೆ.
- ೧೧:೨೭ am : ಪ್ರತಿ ಹಳ್ಳಿ.ಯಲ್ಲೂ ಆರೋಗ್ಯ ಸೌಲಭ್ಯ ಕಲ್ಪಿಸಬೇಕಿದೆ.
- ೧೧:೩೦ am : ಹಣದುಬ್ಬರ ಶೇ.೬ ಕ್ಕಿಂತ ಕಡಿಮೆ ಮಾಡುವುದು ನಮ್ಮ ಗುರಿ.
- ೧೧:೩೭ am : ಮನ್ ರೇಗಾ ಯೋಜನೆಗೆ ೩೪,೧೦೦ ಕೋಟಿ ರೂಪಾಯಿ. ದೇಶಾದ್ಯಂತ ೮೦ ಸಾವಿರ ಪ್ರೌಢಶಾಲೆಗಳು ಮೇಲ್ದರ್ಜೆಗೆ
- ೧೧:೩೮ am : ಎರಡು ವರ್ಷಗಳಲ್ಲಿ ಹಣಕಾಸು ಕೊರತೆಯನ್ನು ೩%ಕ್ಕೆ ಅಂತ್ಯಗೊಳಿಸುವ ಗುರಿ.
- ೧೧:೩೯ am : ಪ್ರಧಾನ್ ಮಂತ್ರಿ ಸುರಕ್ಷಾ ವಿಮಾ ಯೋಜನೆ ಜಾರಿಗೊಳಿಸಲಾಗುವುದು. ಪ್ರಧಾನಮಂತ್ರಿ ಜೀವನ್ ಭೀಮಾ ಯೋಜನೆ.
- ೧೧:೪೦ am : ಪರಿಶಿಷ್ಟ ಜಾತಿಗೆ ೩೦,೮೫೮ ಕೋಟಿ, ಪರಿಶಿಷ್ಟ ಪಂಗಡಕ್ಕೆ ೧೮ ಸಾವಿರ ಕೋಟಿ ರೂ.. ಫಲಾನುಭವಿಗಳಿಲ್ಲದೆ ಇಪಿಎಫ್ ನಲ್ಲಿ ೬ ಸಾವಿರ ಕೋಟಿ ಸಂಗ್ರಹವಾಗಿದ್ದು, ಈ ಹಣವನ್ನು ಬಡವರ ಅಭಿವೃದ್ಧಿಗೆ ಬಳಕೆ.
- ೧೧:೪೧ am : ಎಲ್.ಪಿ.ಜಿ. ಸಬ್ಸಿಡಿ ಹಣದ ನೇರ ವರ್ಗಾವಣೆ (ಪಹಲ್) ಅನ್ನು ದೇಶಾದ್ಯಂತ್ಯ ವಿಸ್ತರಿಸಲಾಗುವು
- ೧೧:೪೩ am : ಎಸ್ ಸಿ, ಎಸ್ ಟಿ ಯೋಜನೆ ಜಾರಿ. ನೂತನ ಉದ್ಯೋಗ ಆರಂಭಿಸುವವರಿಗೆ ನೆರವಾಗುವ ನಿಟ್ಟಿನಲ್ಲಿ ೧೦೦೦ ಕೋಟಿ ತೆಗೆದಿರಿಸಲಾಗುವುದು.
- ೧೧:೪೪ am : ಸಂಶೋಧನೆ ಮತ್ತು ಅಭಿವೃದ್ದಿಗೆ ೧೫೦ ಕೋಟಿ. ಇ ಬಿಜ್ ಫೋರ್ಟಲ್ ಆರಂಭ. ಸಾಲ ಸೌಲಭ್ಯ ಒದಗಿಸಲು ಮುದ್ರಾ ಬ್ಯಾಂಕ್ ಸ್ಥಾಪನೆ.
- ೧೧:೪೬ am : 'ಸೆಟು' ಹೆಸರಿನಲ್ಲಿ ಐ.ಟಿ. ವಲಯಕ್ಕೆ ನೂತನ ಯೋಜನೆ.
- ೧೧:೪೮ am : ಪರೋಕ್ಷ ತೆರಿಗಾಗಿ ಜಿಎಸ್ ಟಿ ಬಳಕೆ. ೨೦ ಸಾವಿರ ಟನ್ ಚಿನ್ನ ದೇಶದಲ್ಲಿ ತಟಸ್ಥವಾಗಿ ಉಳಿದಿದೆ.
- ೧೧:೪೮ am : ದೇಶದ ಬಡ ಜನರಿಗಾಗಿ ಅಟಲ್ ಪೆನ್ಶನ್ ಯೋಜನೆ. ಮಕ್ಕಳ ಸುರಕ್ಷತಾ ಯೋಜನೆಗಾಗಿ ೧,೫೦೦ ಕೋಟಿ ರೂ. ಮೀಸಲು. ಅಂತಾರಾಷ್ಟ್ರೀಯ ಗುಣಮಟ್ಟದ ನೇರ ತೆರಿಗೆ ಯೋಜನೆ
- ೧೧:೪೮ am :ನಮ್ಮ ದೇಶದಲ್ಲಿ ಚಿನ್ನದ ಬಳಕೆ ಅತಿಯಾಗಿದೆ. ಪ್ರತೀ ವರ್ಷ ನಾವು ೮೦೦-೧೦೦೦ ಟನ್ ಗಳಷ್ಟು ಚಿನ್ನವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ.
- ಭಾಷಣದಲ್ಲಿ ಜೇಟ್ಲಿ ಘೋಷಣೆ.
- ೧೧:೪೯ am : ಇದೀಗ ನಮ್ಮ ದೇಶದಲ್ಲಿ ಒಂದು ಅಂದಾಜಿನ ಪ್ರಕಾರ ಸುಮಾರು ೨೦,೦೦೦ ಟನ್ ಚಿನ್ನ ತಟಸ್ಥ ರೂಪದಲ್ಲಿದೆ.
- ೧೧:೪೯ am : ಈ ರೀತಿಯ ಚಿನ್ನವನ್ನು ಸಕ್ರಿಯಗೊಳಿಸಲು ಚಿನ್ನದ ಮೇಲಿನ ನಿಗಾ ಯೋಜನೆಯೊಂದನ್ನು ರೂಪಿಸಲು ನಾವು ಉದ್ದೇಶಿಸಿದ್ದೇವೆ.
- ೧೧:೫೦ am : ಅಶೋಕ ಚಕ್ರ ರೂಪವುಳ್ಳ ಚಿನ್ನದ ನಾಣ್ಯ ಬಿಡುಗಡೆ. ನಿರ್ಭಯಾ ಫಂಡ್ ಗೆ ೧೦೦೦ ಕೋಟಿ ರೂಪಾಯಿ ಹೆಚ್ಚುವರಿ ನೀಡಿಕೆ.
- ೧೧:೫೨ am : ೨೫ ವಿಶ್ವ ಹೆರಿಟೇಜ್ ವೆಬ್ ಸೈಟ್ ಅಭಿವೃದ್ಧಿ. ದೇಶದೆಲ್ಲೆಡೆ ಪ್ರವಾಸೋದ್ಯಮ ಅಭಿವೃದ್ದಿಗೆ ಕ್ರಮ.
- ೧೧:೫೨ am : ಗೋಲ್ಡ್ ಮಾನಿಟರಿಂಗ್ ಸ್ಕೀಮ್ ಮೂಲಕ ಗೋಲ್ಡ್ ಅಕೌಂಟ್ ತೆರೆಯಲಾಗುವುದು.
- ೧೧:೫೮ am : ವೀಸಾ ಆನ್ ಅರೈವಲ್ -ವಿವಿಧ ಹಂತಗಳಲ್ಲಿ ೧೫೦ ದೇಶಗಳಿಗೆ ವಿಸ್ತರಣೆ. ಕರ್ನಾಟಕದಲ್ಲಿ ಐಐಟಿ ಸ್ಥಾಪನೆಗೆ ಕೇಂದ್ರ ಅಸ್ತು.
- ೧೧:೫೯ am : ವಿದ್ಯುತ್ ಚಾಲಿತ ವಾಹನಗಳ ಹೆಚ್ಚಳ. ಸ್ಕಿಲ್ ಇಂಡಿಯಾದಿಂದ ಮೇಕ್ ಇನ್ ಇಂಡಿಯಾಗೆ ಸಹಕಾರ. ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಯೋಜನೆ. ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಈ ಯೋಜನೆ ಜಾರಿ.
- ೧೨:೦೦ pm : ರೆಗ್ಯುಲೇಟರಿ ರಿಫಾರ್ಮ್ ಕಾನೂನು ಜಾರಿ.
- ೧೨:೦೨ pm : ಬಿಹಾರದಲ್ಲಿ ಮತ್ತೊಂದು ಏಮ್ಸ್ ಸ್ಥಾಪನೆ. ಕರ್ನಾಟಕದಲ್ಲಿ ಐಐಟಿ ಸ್ಥಾಪನೆ ಬಜೆಟ್ ಭಾಷಣದಲ್ಲಿ ಜೇಟ್ಲಿ ಘೋಷಣೆ.
- ೨-೨೦೧೫
- ೧೨:೦೩ pm : ರೆಗ್ಯುಲೇಟರಿ ರಿಫಾರ್ಮ್ ಕಾನೂನು ಜಾರಿ. ಮಧ್ಯಾಹ್ನದ ಬಿಸಯೂಟ ಯೋಜನೆಗೆ ೬೯ ಸಾವಿರ ಕೋಟಿ ರೂಪಾಯಿ ಮೀಸಲು. ತೆಲಂಗಾಣದಲ್ಲಿರುವ ವಿಶ್ವಪಾರಂಪರಿಕ ತಾಣಗಳ ಅಭಿವೃದ್ಧಿ.
- ೧೨:೦೫ pm : ಅರುಣಾಚಲ ಪ್ರದೇಶದಲ್ಲಿ ಫಿಲಂ ಸ್ಕೂಲ್ ಸ್ಥಾಪನೆ.
- ೧೨:೦೬ pm : ಪ್ರವಾಸಿ ತಾಣಗಳಲ್ಲಿ ಕರ್ನಾಟಕದ ಹಂಪಿಗೂ ಸ್ಥಾನ. ಮಹಾರಾಷ್ಟ್ರದ ಎಲಿಫಂಟಾ ಗುಹೆ. ಗೋವಾದ ಚರ್ಚ್. ಪಂಜಾಬ್ ನ ಐತಿಹಾಸಿಕ ಜಲಿಯನ್ ವಾಲಾಭಾಗ್ ತಾಣಗಳು ವಿಶ್ವಪಾರಂಪರಿಕ ಪಟ್ಟಿಯಲ್ಲಿ ಸೇರಿವೆ.
- ೧೨:೦೭ pm : ರಕ್ಷಣಾ ಕ್ಷೇತ್ರಕ್ಕೆ ೨,೪೬,೭೨೭ ಕೋಟಿ ರೂಪಾಯಿ ಮೀಸಲು. ಅಮೃತಸರದಲ್ಲಿ ತೋಟಗಾರಿಕಾ ವಿವಿ ಸ್ಥಾಪನೆ. ಶಿಕ್ಷಣ ಕ್ಷೇತ್ರಕ್ಕೆ ೬೮,೦೦೦ ಕೋಟಿ ರೂಪಾಯಿ ಮೀಸಲು.
- ೧೨:೦೯ pm : ಪ್ರಸಕ್ತ ಸಾಲಿನ ಯೋಜನಾ ವೆಚ್ಚ ೧೭, ೭೭,೦೪೭ ಕೋಟಿ ರೂಪಾಯಿ.ಈ ವರ್ಷದ ತೆರಿಗೆ ಸಂಗ್ರಹ ಗುರಿ ೧೪,೪೯,೪೯೦.
- ೧೨:೧೦ pm : ಕಾರ್ಪೋರೆಟ್ ತೆರಿಗೆ ಶೇ.೩೦ರಿಂದ ಶೇ.೨೫ಕ್ಕೆ ಇಳಿಕೆ. ಮುಂದಿನ ನಾಲ್ಕು ವರ್ಷಗಳಲ್ಲಿ ಕಾರ್ಪೋರೆಟ್ ತೆರಿಗೆ ಇಳಿಕೆ.
- ೧೨:೧೧ pm : ಆದಾಯ ತೆರಿಗೆಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡದ ಅರುಣ್ ಜೇಟ್ಲಿ.
- ೧೨:೧೪ pm : ಕಪ್ಟು ಹಣಕ್ಕೆ ಕಡಿವಾಣ, ಆದಾಯ ಉತ್ತೇಜಿಸುವ ಗುರಿ ಹೊಂದಿದ್ದೇವೆ. ಕಪ್ಪು ಹಣ ನಿಯಂತ್ರಣಕ್ಕೆ ಹೊಸ ಮಸೂದೆ ಮಂಡಿಸುತ್ತೇವೆ.
- ೧೨:೧೭ pm : ಬಿಹಾರ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಿಗೆ ವಿಶೇಷ ನೆರವು.
- ೧೨:೧೮ pm : ತೆರಿಗೆ ಕಳ್ಳರಿಗೆ ೧೦ ವರ್ಷಗಳ ಕಾಲ ಜೈಲುಶಿಕ್ಷೆ. ಐಟಿ ರಿಟರ್ನ್ಸ್ ಮಾಡದಿದ್ದರೆ ಏಳು ವರ್ಷ ಶಿಕ್ಷೆ.
- ೧೨:೧೯ pm : ೨.೫ ಲಕ್ಷದವರೆಗೆ ಟ್ಯಾಕ್ಸ್ ಇಲ್ಲ. ೨.೫ರಿಂದ ೫ ಲಕ್ಷದವರೆಗೆ ಶೇ.೧೦ರಷ್ಟು, ೫ರಿಂದ ೧೦ಲಕ್ಷದವರೆಗೆ ಶೇ.೨೦ರಷ್ಟು, ೧೦ ಲಕ್ಷಕ್ಕೆ ಮೇಲ್ಪಟ್ಟು ಶೇ.೩೦ರಷ್ಟು ತೆರಿಗೆ.
- ೧೨:೨೨ pm : ಕಪ್ಪು ಹಣ ಹೊಂದಿರುವವರಿಗೆ ೧೦ ವರ್ಷ ಜೈಲು, ಜಾಮೀನು ಇಲ್ಲ.
- ೧೨:೨೩ pm : ಬೇನಾಮಿ ಆಸ್ತಿಗೆ ಸರ್ಕಾರ ಮುಟ್ಟುಗೋಲು.
- ೧೨:೨೫ pm : ಕಸ್ಟಮ್ಸ್ ತೆರಿಗೆಯನ್ನು ಕಡಿತಗೊಳಿಸಲಾಗುವುದು.
- ೧೨:೨೬ pm : ಸಂಪತ್ತು ತೆರಿಗೆ ರದ್ದುಗೊಳಿಸಲಾಗುವುದು.
- ೧೨:೨೬ pm : ಸ್ಥಳೀಯ ಚರ್ಮೋದ್ಯಮಕ್ಕೆ ಪ್ರೋತ್ಸಾಹ. ದೇಶೀಯ ಚರ್ಮೋದ್ಯಮಕ್ಕೆ ಶೇ.೬ ರಷ್ಟು ಸುಂಕ ಕಡಿತ
- ೧೨:೨೬ pm : ೨೨ ವಸ್ತುಗಳ ಸಾಂಪ್ರದಾಯಿಕ ತೆರಿಗೆ ಕಡಿತಗೊಳಿಸಲಾಗುವುದು.
- ೧೨:೨೭ pm : ಸೇವಾ ತೆರಿಗೆ ಶೇ.೧೪ಕ್ಕೆ ಏರಿಕೆ. ಸೇವಾ ತೆರಿಗೆ ಏರಿಕೆಯಿಂದ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಲಿದ್ದು, ಶಿಕ್ಷಣ, ಬ್ಯೂಟಿಪಾರ್ಲರ್, ಹಣ್ಣು, ತರಕಾರಿ, ಮೊಬೈಲ್ , ಸಿನಿಮಾ, ಹೋಟೆಲ್ ಎಲ್ಲ ಬೆಲೆಗಳು ಹೆಚ್ಚಳವಾಗಲಿದೆ.
- ೧೨:೩೧ pm : ವಾರ್ಷಿಕ ೧ ಕೋಟಿಗಿಂತ ಅಧಿಕ ಆದಾಯ ಹೊಂದಿರುವವರಿಗೆ ೨% ಸರ್‌ಛಾರ್ಜ್.
- ೧೨:೩೪ pm : ೧ ಲಕ್ಷಕ್ಕಿಂತ ಹೆಚ್ಚಿನ ವ್ಯವಹಾರಕ್ಕೆ ಪಾನ್ ಕಾರ್ಡ್ ಕಡ್ಡಾಯ.
- ೧೨:೪೧ pm : ಲೆದರ್ ಶೂಗಳ ಮೇಲೆ ಶೇ. ೬ ರಷ್ಟು ತೆರಿಗೆ ಇಳಿಕೆ.
- ೧೨:೪೧ pm : ಯಾತ್ರಾ ಭತ್ಯೆಯನ್ನು ೮೦೦ ರೂ.ಗಳಿಂದ ೧,೬೦೦ಕ್ಕೆ ಹೆಚ್ಚಳ.
- ೧೨:೪೩ pm : ಮುಂದಿನ ಆರ್ಥಿಕ ವರ್ಷದಿಂದ ಜಿಎಸ್ ಟಿ ಜಾರಿ
- ೧೨:೪೪ pm : ಸರ್ವೇ ಜನಾಃ ಸುಖೀನೋ ಭವಂತು... ಸರ್ವೇ ಸಂತು ನಿರಾಮಯಃ' ಎನ್ನುವ ಉಪನಿಷತ್ ವಾಣಿಯೊಂದಿಗೆ ವಿತ್ತ ಸಚಿವ ಅರುಣ್ ಜೇಟ್ಲಿ ತಮ್ಮ ಬಜೆಟ್ ಭಾಷಣ ಮುಗಿಸಿದರು.
೨೦೧೫-೨೦೧೬ ರ ಬಜೆಟ್-ದರ ಏರಿಕೆ:ದರ ಇಳಿಕೆ:
[ಬದಲಾಯಿಸಿ];ದರ ಏರಿಕೆ:
;ದರ ಇಳಿಕೆ:
|
2015-2016 ರಲ್ಲಿ ಆದಾಯ ಮತ್ತು ವೆಚ್ಚ-ಶೇಕಡಾವಾರು
[ಬದಲಾಯಿಸಿ]- ಕೇಂದ್ರ ಸರ್ಕಾರದ ಮುಂಗಡ ಪತ್ರ ೨೦೧೫-೧೬ ಆದಾಯ ವೆಚ್ಚ "ಶೇಕಡಾವಾರು;
- ಕೋಟಿ ಲೆಕ್ಕದಲ್ಲಿ -:ರಕ್ಷಣೆ ವೆಚ್ಚ - 11% (ಶೇ.11)ಕ್ಕೆ ರೂ.2,46,727 ಕೋಟಿ ಯಂತೆ ಉಳಿದ ಶೇಕಡ ಅಂಶಗಳಿಗೆ ಲೆಕ್ಕ ಹಾಕಿದೆ.
ವಿವರ | ಆದಾಯ-ಶೇ. | ರೂ.. | . | ವಿವರ | ವೆಚ್ಚ ಶೇ | ರೂ |
---|---|---|---|---|---|---|
ಕಾರ್ಪೋರೇಟ್ ತೆರಿಗೆ | 20% | ರೂ.448594.5454 ಕೋಟಿ | . | ಕೇಂದ್ರೀಯ ಯೋಜನೆಗಳು | 11% | ರೂ. |
ಆದಾಯ ತೆರಿಗೆ | 14% | ರೂ.314016.1818 ಕೋಟಿ | . | ಬಡ್ಡಿ ಪಾವತಿ | 20% | ರೂ. |
ಕಸ್ಟಮ್ಸ್ | 19% | ರೂ.426164.8181 ಕೋಟಿ | . | ರಕ್ಷಣೆ | 11% | ರೂ.2,46,727 ಕೋಟಿ |
ಎಕ್ಸೈಜ್ | 10% | ರೂ.224297.2727 ಕೋಟಿ | . | ಸಬ್ಸಿಡಿ | 10% | ರೂ. |
ತೆರಿಗೆಯೇತರ ವರಮಾನ | 10% | ರೂ.224297.2727 ಕೋಟಿ | . | ಇತರ ಯೋಜನೇತರ ವೆಚ್ಚಗಳು | 11% | ರೂ. |
ಸಾಲ ರಹಿತ ವರಮಾನ | 4% | ರೂ.89718.90908 ಕೋಟಿ | . | ರಾಜ್ಯಗಳ ಪಾಲು | 23% | ರೂ. |
ಸಾಲ ಮತ್ತು ಇತರ ಹೊಣೆ | 24% | ರೂ.538313.4545 ಕೋಟಿ | . | ಯೋಜನೇತರ ಅನುದಾನ | 5% | ರೂ. |
ಸೇವಾ ಮತ್ತು ಇತರ ತೆರಿಗೆ | 9% | ರೂ.201867.5454 ಕೋಟಿ | . | ರಾಜ್ಯ-ಕೇಂದ್ರಪ್ರದೇಶಕ್ಕೆ ನೆರವು | 9% | ರೂ. |
ಒಟ್ಟು | 1೦೦% | ರೂ.2242972.727ಕೋಟಿ | . | ಒಟ್ಟು ವೆಚ್ಚ | 1೦೦% | 2242972.727ಕೋಟಿ |
ಸರ್ಕಾರಿ ಉದ್ಯೋಗಿಗಳಿಗೆ ಕೆಲವು ಸೌಲತ್ತಗಳು
[ಬದಲಾಯಿಸಿ]2004 ರಿಂದ ನೇಮಕವಾದ ಸರ್ಕಾರಿ ನೌಕರರಿಗೆ ನಿವೃತ್ತಿ ವೇತನ (ಪಿಂಚಣಿಯನ್ನು ರದ್ದುಮಾಡಲಾಗಿದೆ ಅವರಿಗೆ ಪಿಂಚಣಿ ಬರುವುದಿಲ್ಲ (ಎನ್.ಡಿಎಯೋಜನೆ). ಅದಕ್ಕಾಗಿ ಸರ್ಕಾರ ‘ನೌಕರರ ಭವಿಷ್ಯ ನಿಧಿ’ಯೋಜನೆಯಲ್ಲಿ ನೌಕರರು ತಮ್ಮ ಅಪರ ವಯಸ್ಸಿನಲ್ಲಿ ಬದುಕಲು ‘ನೌಕರರ ಭವಿಷ್ಯ ನಿಧಿ’ಯಲ್ಲಿ ವೇತನದ 12% (10%)ಹಣ ತೊಡಗಿಸಿರಬೇಕು. ಸರ್ಕಾರವೂ ಅಷ್ಟೇ ಹಣ ಅದಕ್ಕೆ ಸೇರಿಸಿಕೊಡುವುದು. ಆದರೆ ಸರ್ಕಾರ ಕೊಡುವ ಹಣವನ್ನು ಸೆfಕಾರವು ಕಂಪನಿಗಳ ಷೇರುಗಳಲ್ಲಿ ಇಡುವುದು. ಅದು ನಿವೃತ್ತರಿಗೆ ಸಿಗದು(?); ಅದರಿಂದ ಮಾಸಿಕ ವರಮಾನವೂ ಬರವುದಿಲ್ಲ. ಅದಕ್ಕಾಗಿ ಈ ಬಜೆಟ್ಟಿನಲ್ಲಿ ಕೆಲವು ಆಯ್ಕೆ ನೀಡಿದೆ.
- ನೌಕರರಿಗೆ ಕೆಲವು ಆಯ್ಕೆ
- ಉದ್ಯೋಗಿಗಳ ಪ್ರತಿ ತಿಂಗಳ ವೇತನದಲ್ಲಿ ಈವರೆಗೂ ‘ನೌಕರರ ಭವಿಷ್ಯ ನಿಧಿ’ಗೆ (ಇಪಿಎಫ್‌ಗೆ) ನಿಗದಿತ ಮೊತ್ತ ಮೂಲದಲ್ಲೇ ಕಡಿತವಾಗುತ್ತಿತ್ತು. ಇನ್ನು ಮುಂದೆ ‘ಇಪಿಎಫ್’ನಲ್ಲೇ ಹಣ ತೊಡಗಿಸಬೇಕು ಎಂದೇನಿಲ್ಲ. ನೂತನ ಪಿಂಚಣಿ ಯೋಜನೆಯಲ್ಲಿಯೂ (ಎನ್‌ಪಿಎಸ್) ಹಣ ತೊಡಗಿಸಲು ಅವಕಾಶವಿದೆ ಎಂದು ಕೇಂದ್ರ ಬಜೆಟ್‌ನಲ್ಲಿ ಹೇಳಲಾಗಿದೆ.
- ನಿಗದಿಪಡಿಸಿದ್ದಕ್ಕಿಂತ ಕಡಿಮೆ ಮಾಸಿಕ ವೇತನ ಪಡೆಯುತ್ತಿರುವವರು ನೌಕರರ ಭವಿಷ್ಯ ನಿಧಿಗೆ ಹಣ ತೊಡಗಿಸುವುದು ಅವರ ಆಯ್ಕೆಗೆ ಬಿಟ್ಟಿದ್ದು. ಆದರೆ ಉದ್ಯೋಗದಾತ ಸಂಸ್ಥೆಯು ತನ್ನ ಉದ್ಯೋಗಿಯ ಇಪಿಎಫ್‌ಗೆ ನೀಡುತ್ತಿರುವ ಪಾಲಿನ ಮೊತ್ತ ಯಥಾರೀತಿ ಮುಂದುವರಿಯುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.
- ಆದರೆ, ನೌಕರರ ಮಾಸಿಕ ವೇತನದ ಪ್ರಮಾಣ ಎಷ್ಟು? ಎಂಬ ಬಗ್ಗೆ ಅವರು ಬಜೆಟ್‌ನಲ್ಲಿ ಸ್ಪಷ್ಟ ವಿವರಣೆ ನೀಡಿಲ್ಲ.
- ಸದ್ಯ, ಪ್ರತಿ ನೌಕರರು ತಮ್ಮ ಮೂಲ ವೇತನದಲ್ಲಿ ಶೇ 12ರಷ್ಟನ್ನು ಭವಿಷ್ಯನಿಧಿಗೆ ನೀಡುವುದು ಕಡ್ಡಾಯವಾಗಿದೆ. ಇನ್ನು ಮುಂದೆ, ನೌಕರರು ತಮಗೆ ಇಷ್ಟವಾದರೆ ಮಾತ್ರ ಭವಿಷ್ಯ ನಿಧಿಗೆ ವಂತಿಗೆ ನೀಡಬಹುದು.
- ಇದೇ ವೇಳೆ, ಖಾಸಗಿ ಭವಿಷ್ಯನಿಧಿ ಸಂಘಟನೆಗಳ ಸದಸ್ಯರು ನಿರ್ದಿಷ್ಟ ಅವಧಿಗೂ ಮುಂಚೆಯೇ ಪಿಎಫ್ ಪಡೆದರೆ, ಅದಕ್ಕೆ ತೆರಿಗೆ ಪಾವತಿಸಬೇಕಿಲ್ಲ ಎಂದೂ ಬಜೆಟ್‌ನಲ್ಲಿ ತಿಳಿಸಲಾಗಿದೆ.
- ಎನ್‌ಪಿಎಸ್‌ನಲ್ಲಿ ಅವಕಾಶ
- ನೌಕರರು ಭವಿಷ್ಯ ನಿಧಿಯಲ್ಲಿ ಮಾತ್ರವೇ ಹಣ ತೊಡಗಿಸಬೇಕು ಎಂದೇನೂ ಇಲ್ಲ. ಹೊಸ ಪಿಂಚಣಿ ಯೋಜನೆಯಲ್ಲೂ (ಎನ್‌ಪಿಎಸ್) ಹಣ ತೊಡಗಿಸಬಹುದು ಎಂದು ಜೇಟ್ಲಿ ಹೇಳಿದ್ದಾರೆ.
- ಅಲ್ಲದೆ, ಆರೋಗ್ಯ ವಿಮೆ ಮತ್ತು ನೌಕರರ ರಾಜ್ಯ ವಿಮಾ ನಿಗಮದ (ಇಎಸ್‌ಐಸಿ) ಆರೋಗ್ಯ ಯೋಜನೆಗಳಲ್ಲಿಯೂ ಹಣ ತೊಡಗಿಸಬಹುದಾಗಿದೆ.
- 2004ನೇ ಜನವರಿ 1ರಿಂದ ಸೇವೆಯಲ್ಲಿರುವ ಕೇಂದ್ರ ಸರ್ಕಾರದ ಸೇವೆಯಲ್ಲಿರುವ ಮತ್ತು ಕೇಂದ್ರದ ಸ್ವಾಯತ್ತ ಸಂಸ್ಥೆಗಳಲ್ಲಿರುವ ನೌಕರರಿಗೆ ಎನ್‌ಪಿಎಸ್ ಅನ್ವಯಿಸಲಿದೆ (ಅವರಿಗೆ ಪಿಂಚಣಿಬರುವುದಿಲ್ಲ).
- (ಆದರೆ ಈ ಉಳಿತಾಯದ ಬಡ್ಡಿಯಿಂದ ಇನ್ನು 20ವರ್ಷಗಳ ನಂತರ ವೃದ್ಧಾಪ್ಯ ಜೀವನ ಸಾಗಿಸಲು ಕಷ್ಟ; ಸಾಧ್ಯವೇ?)
2015-2016 ರ ಬಜೆಟ್`ನಲ್ಲಿ ಕರ್ನಾಟಕಕ್ಕೆ ಕೊಡಿಗೆ
[ಬದಲಾಯಿಸಿ]- ೧.ಕರ್ನಾಟಕಕ್ಕೆ ಕೊನೆಗೂ ‘ಭಾರತೀಯ ತಂತ್ರಜ್ಞಾನ ಸಂಸ್ಥೆ’ (ಐಐಟಿ) ದೊರೆತಿದೆ. ಕನ್ನಡಿಗರ ಬಹು ದಿನಗಳ ನಿರೀಕ್ಷೆ ಕೈಗೂಡಿದೆ.
- ೨.‘ವಿಶ್ವ ಪರಂಪರೆ ಪಟ್ಟಿ’ಯಲ್ಲಿ ಸೇರಿರುವ ವಿಶ್ವವಿಖ್ಯಾತ ಹಂಪಿಯನ್ನು ಮೂಲಸೌಲಭ್ಯಗಳ ಅಭಿವೃದ್ಧಿಗೆ ಗುರುತಿಸಲಾಗಿದೆ.
- ೩.ಕೇಂದ್ರದ ತೆರಿಗೆಗಳಲ್ಲಿ ರಾಜ್ಯಗಳ ಪಾಲಿನ ಪ್ರಮಾಣ ಏರಿಕೆ ಆಗಿರುವುದರಿಂದ ಪ್ರಸಕ್ತ ಹಣಕಾಸು ವರ್ಷ ಕರ್ನಾಟಕಕ್ಕೆ ರೂ. 8,200 ಕೋಟಿ ಹೆಚ್ಚುವರಿ ಹಣ ದೊರೆತಿದೆ.
- ೪.ಮೆಟ್ರೋಗೆ ಕೊಡಿಗೆ,
- ೧.ಐಐಟಿ
- ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಲೋಕಸಭೆಯಲ್ಲಿ ಶನಿವಾರ ಮಂಡಿಸಿದ ಬಜೆಟ್‌ನಲ್ಲಿ ಕರ್ನಾಟಕದಲ್ಲಿ ಐಐಟಿ ಸ್ಥಾಪಿಸಲು ಉದ್ದೇಶಿಸಿರುವುದಾಗಿ ತಿಳಿಸಿದರು.
- ರಾಜ್ಯ ಸರ್ಕಾರ ಐಐಟಿಗೆ ಅಗತ್ಯವಿರುವ ಜಮೀನು ಗುರುತಿಸಿ, ಮಂಜೂರು ಮಾಡಬೇಕು. ಕೇಂದ್ರ ಸರ್ಕಾರದ ತಜ್ಞರು ಅದನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳುವರು. ಕರ್ನಾಟಕ ಸರ್ಕಾರ ಎಷ್ಟು ಬೇಗನೆ ತೀರ್ಮಾನ ಮಾಡಲಿದೆಯೊ ಅಷ್ಟು ತ್ವರಿತವಾಗಿ ಐಐಟಿ ಬರಲಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
- ಸದ್ಯದ ನಿಯಮದ ಪ್ರಕಾರ ಐಐಟಿ ಸ್ಥಾಪನೆಗೆ 500ಎಕರೆ ಭೂಮಿ ಅಗತ್ಯವಿದೆ. ಆದರೆ, ಕಡಿಮೆ ಜಮೀನಿನಲ್ಲಿ ಸಂಸ್ಥೆ ಕಟ್ಟುವ ಕುರಿತು ಪರಿಶೀಲಿಸಲು ಕೇಂದ್ರ ಸರ್ಕಾರ ಈಗಾಗಲೇ ತಜ್ಞರ ಸಮಿತಿ ರಚಿಸಿದೆ. ಈ ಸಮಿತಿ ಸಂಸ್ಥೆಯ ವಿನ್ಯಾಸದ ಮಾದರಿಗಳನ್ನು ಸಿದ್ಧಪಡಿಸುತ್ತಿದ್ದು ಶೀಘ್ರವೇ ವರದಿ ನೀಡಲಿದೆ.
- ಯುಪಿಎ ಸರ್ಕಾರವೇ ರಾಜ್ಯಕ್ಕೆ ಐಐಟಿ ಮಂಜೂರು ಮಾಡಲು ಉದ್ದೇಶಿಸಿತ್ತು. 2006ರಲ್ಲಿ ಮಾನವ ಸಂಪನ್ಮೂಲ ಸಚಿವರಾಗಿದ್ದ ಅರ್ಜುನ್ ಸಿಂಗ್ ಕೆಲವು ರಾಜ್ಯಗಳ ಜತೆ ಕರ್ನಾಟಕಕ್ಕೂ ಐಐಟಿ ನೀಡಲು ಅಪೇಕ್ಷಿಸಿದ್ದರು. ಸ್ಥಳ ಪರಿಶೀಲನೆಗೆ ಕೇಂದ್ರ ಸರ್ಕಾರ ತಜ್ಞರ ಸಮಿತಿಯನ್ನು ರಚಿಸಿತ್ತು. ಖ್ಯಾತ ವಿಜ್ಞಾನಿ ಹಾಗೂ ಪ್ರಧಾನಿ ಅವರ ವೈಜ್ಞಾನಿಕ ಸಲಹೆಗಾರರಾಗಿದ್ದ ಡಾ. ಸಿ.ಎನ್.ಆರ್. ರಾವ್ ಅವರು ಮೈಸೂರನ್ನು ಐಐಟಿಗೆ ಶಿಫಾರಸು ಮಾಡಿದ್ದರು.
- ಮರು ವರ್ಷ ಐಐಟಿ, ಅವಿಭಜಿತ ಆಂಧ್ರ ಪ್ರದೇಶದ ಮೆಡಕ್ ಜಿಲ್ಲೆಗೆ ಸ್ಥಳಾಂತರಗೊಂಡಿತು. 8 ವರ್ಷದ ಬಳಿಕ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಾಜ್ಯದ ಜನರ ಕನಸನ್ನು ಸಾಕಾರಗೊಳಿಸಿದೆ.
- ೨.ಹಂಪಿ ವಿಶ್ವವಿಖ್ಯಾತ ಪ್ರವಾಸಿ ತಾಣ
- ಕೇಂದ್ರ ಹಣಕಾಸು ಸಚಿವರು ಮೂಲಸೌಲಭ್ಯ ಅಭಿವೃದ್ಧಿಪಡಿಸಲು ಗುರುತಿಸಿರುವ ವಿಶ್ವವಿಖ್ಯಾತ 25 ಪ್ರವಾಸಿ ತಾಣಗಳಲ್ಲಿ ಹಂಪಿಯೂ ಸೇರಿದೆ.
- ಅರುಣ್ ಜೇಟ್ಲಿ ಮಾಡಿದ ಬಜೆಟ್ ಭಾಷಣದಲ್ಲಿ, ಹಂಪಿ ಪ್ರದೇಶದ ಸೌಂದರ್ಯೀಕರಣ, ಸೂಚನಾ ಫಲಕಗಳ ಅಳವಡಿಕೆ, ಮಾಹಿತಿ ಕೇಂದ್ರ, ದೀಪಾಲಂಕಾರ, ವಾಹನ ನಿಲುಗಡೆ, ಪ್ರವಾಸಿಗರ ಸುರಕ್ಷತೆ, ಶೌಚಾಲಯ, ಕುಡಿಯುವ ನೀರು ಹಾಗೂ ಅಂಗವಿಕಲರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದ್ದಾರೆ.
- ಹಂಪಿ 1986ರಲ್ಲಿ ವಿಶ್ವ ಪರಂಪರೆ ಪಟ್ಟಿಗೆ ಸೇರಿದೆ. 1999ರಲ್ಲಿ ಇದನ್ನು ಅವನತಿ ಅಂಚಿನಲ್ಲಿರುವ ಸ್ಮಾರಕ ಎಂದು ಘೋಷಿಸಲಾಗಿದೆ. ಅನಂತರ ವಿಶ್ವವಿಖ್ಯಾತ ಸ್ಮಾರಕದ ಜಾಗ ಅತಿಕ್ರಮಣ ತೆರವುಗೊಳಿಸಲಾಗಿದೆ.
- ಹಂಪಿಗೆ ದೇಶ, ವಿದೇಶಗಳಿಂದ ಪ್ರವಾಸಿಗರು ಬರುತ್ತಿದ್ದು, ಮೂಲ ಸೌಲಭ್ಯಗಳ ಕೊರತೆ ಇದೆ. ಸ್ಮಾರಕದ ನಿರ್ವಹಣೆಗಾಗಿ ರಾಜ್ಯ ಸರ್ಕಾರ ಈಗಾಗಲೇ ಪ್ರಾಧಿಕಾರ ರಚಿಸಿದೆ. ಮೂಲಸೌಲಭ್ಯಕ್ಕೆ ಸಂಬಂಧಿಸಿದ ಸಮಗ್ರ ಯೋಜನೆಯನ್ನು ಸರ್ಕಾರ ಸಿದ್ಧಪಡಿಸಬೇಕಿದೆ. ಅದಕ್ಕೆ ಅಗತ್ಯವಿರುವ ಹಣವನ್ನು ಕೇಂದ್ರ ಸರ್ಕಾರ ಒದಗಿಸಲಿದೆ.
- ೩.ರೂ. 8,200 ಕೋಟಿ ಹೆಚ್ಚುವರಿ ಹಣ
- ಕೇಂದ್ರದ ತೆರಿಗೆಗಳಲ್ಲಿ ರಾಜ್ಯಗಳ ಪಾಲಿನ ಪ್ರಮಾಣ ಏರಿಕೆ ಆಗಿರುವುದರಿಂದ ಪ್ರಸಕ್ತ ಹಣಕಾಸು ವರ್ಷ ಕರ್ನಾಟಕಕ್ಕೆ ರೂ. 8,200 ಕೋಟಿ ಹೆಚ್ಚುವರಿ ಹಣ ದೊರೆತಿದೆ.
- 2014–15ನೇ ಸಾಲಿನಲ್ಲಿ ರೂ. 16,589 ಕೋಟಿ ಹಂಚಿಕೆ ಮಾಡಲಾಗಿತ್ತು. 2015–16ನೇ ಸಾಲಿನಲ್ಲಿ ರೂ. 24,790 ಕೋಟಿ ನಿಗದಿಪಡಿಸಲಾಗಿದೆ.
- ಹದಿನಾಲ್ಕನೇ ಹಣಕಾಸು ಆಯೋಗ ಕೇಂದ್ರದ ತೆರಿಗೆಗಳಲ್ಲಿ ರಾಜ್ಯಗಳಿಗೆ ಹಂಚಿಕೆ ಮಾಡುವ ಪಾಲನ್ನು ಶೇ32ರಿಂದ 42ಕ್ಕೆ ಏರಿಕೆ ಮಾಡುವಂತೆ ಶಿಫಾರಸು ಮಾಡಿತ್ತು. ಆಯೋಗದ ಶಿಫಾರಸನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿರುವುದರಿಂದ ರಾಜ್ಯಕ್ಕೆ ಹೆಚ್ಚಿನ ಹಣ ದೊರೆತಿದೆ.
- ೪.ಮೆಟ್ರೋಗೆ 947ಕೋಟಿ ರೂ.
ಬೆಂಗಳೂರು ಮೆಟ್ರೋಗೆ 2015-16 ರ ಮುಂಗಡ ಪತ್ರದಲ್ಲಿ 994 ಕೋಟಿ ರೂ. ನೀಡಿದ್ದಾರೆ. 2014-15ರಲ್ಲಿ 947ಕೋಟಿ ರೂ. ನೀಡಲಾಗಿತ್ತು
ಕೆಲವು ವಿಶೇಷ ಯೋಜನೆಗಳು
[ಬದಲಾಯಿಸಿ]- ಉನ್ನತ ಶಿಕ್ಷಣಕ್ಕೆ ಬಂಪರ್ ಕೊಡುಗೆ
- 1.ರೂ. 68,968 ಕೋಟಿ ಭವಿಷ್ಯದ ಬೇಡಿಕೆಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡ¬ಲಾಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಾಪ¬ನೆಗೆ ಆದ್ಯತೆ ನೀಡಲಾಗಿದೆ.
- 2. ಆರು ಅಖಿಲಭಾರತವೈದ್ಯಕೀಯ ಸಂಸ್ಥೆ (ಏಮ್ಸ) ಸ್ಥಾಪನೆ. ಕರ್ನಾಟಕದಲ್ಲಿ ಒಂದು ಭಾರತೀಯ ತಣತ್ರಜ್ಞಾನ ಸಂಸ್ಥೆ (ಐಐಟಿ) ಸ್ಥಾಪನೆ. ಇದರಿಂದ ದೇಶದ ಐಐಎಂಗಳ ಸಂಖ್ಯೆ 20ಕ್ಕೂ , ಐಐಟಿಗಳ ಸಂಖ್ಯ 23 ಕ್ಕೂ ಏರುವುದು.
- 3.ವಿದ್ಯಾಲಕ್ಷ್ಮಿ ಯೋಜನೆ : ಹಣದ ಕೊರತೆಯಿಂದ ಬಡ ವಿದ್ಯಾರ್ಥಿಗಳು ಉನ್ನತ ಶಕ್ಷಣದಿಂದ ವಂಚಿತರಾಗಬಾರದು ಎಂದು ,”ಪ್ರಧನ ಮಂತ್ರಿ ವಿದ್ಯಾಲಕ್ಷ್ಮಿಯೋಜನೆ”ಯಡಿ ತಂತ್ರಜ್ಞಾನ ಆಧಾರಿತ ಉನ್ನತ ಶಿಕ್ಷಣಕ್ಕೆ ಹಣಕಾಸು ಸೌಲಭ್ಯ , ಸಾಲ, ವಿದ್ಯಾರ್ಥಿ ವೇತನಘೋಷಿಸಲಾಗಿದೆ. ಸೌಲಭ್ಯ ಪಡೆಯಲು ಸಮಗ್ರ ಮಾಹಿತಿ ಇನ್ನೂ ನೀಡಬೇಕಾಗಿದೆ.
- 4.ಆಸಕ್ತಿ ಹೊಂದಿದ ರಾಜ್ಯದ ರಾಜ್ಯದ 2.5 ಲಕ್ಷ ಗ್ರಾಮಗಳಿಗೆ ಆಪ್ಟಿಕಲ್ ಫೈಬರ್ ಸೌಲಭ್ಯದ ದೂರ ಸಂಪರ್ಕ ಒದಗಿಸುವ ಯೋಜನೆ.
- 5.ತಂತ್ರಜ್ಞಾನ ವಲಯದಲ್ಲಿ ಸ್ಟಾರ್ಟ್ಅಪ್ (ಸಣ್ಣ ಉದ್ದಿಮೆ) ಸ್ಥಾಪನೆಗೆ ಮತ್ತು ಉದ್ದಿಮೆದಾರರಿಗೆ ಉತ್ತೇಜನ ನೀಡಲು ರೂ. 1,000 ಕೋಟಿ ನಿಧಿ ಸ್ಥಾಪಿಸಲಾಗುತ್ತಿದೆ.
- ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ವಲಯದಲ್ಲಿ ಸಣ್ಣ ಉದ್ದಿಮೆ ಸ್ಥಾಪನೆಗೆ ಹೆಚ್ಚಿನ ಆಸಕ್ತಿ ಕಂಡುಬರುತ್ತಿದೆ. ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ ನೀಡಿ, ಅವು ಬಲವಾಗಿ ನೆಲೆಯೂರುವಂತೆ ಮಾಡಲು ತಂತ್ರಜ್ಞಾನ ಸಂಸ್ಥೆ ಮತ್ತು ಉದ್ಯಮದಾರರ ನಿಧಿ ಸ್ಥಾಪನೆಗೆ ನಿರ್ಧರಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಪ್ರಕಟಿಸಿದ್ದಾರೆ.
- ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನೇತರ ವಲಯದ ವರಮಾನ 2014–15ರಲ್ಲಿ ರೂ. 73.35 ಲಕ್ಷ ಕೋಟಿಗಳಷ್ಟಾಗಿದೆ. ಈ ಉದ್ಯಮ ಕ್ಷೇತ್ರ ನೇರವಾಗಿ 40 ಲಕ್ಷ ಮಂದಿಗೆ ಉದ್ಯೋಗ ನೀಡಿದೆ. ದೇಶದ ಸಮಗ್ರ ಅಭಿವೃದ್ಧಿಗೆ ಯುವಪೀಳಿಗೆಯನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು. ಅದಕ್ಕಾಗಿ ಹೆಚ್ಚು ಉದ್ಯೋಗಾವಕಾಶ ಸೃಷ್ಟಿಸಬೇಕು, ದೇಶದಲ್ಲಿ ಉದ್ಯಮ ವ್ಯವಹಾರ ಚಟುವಟಿಕೆ ನಡೆಸುವುದನ್ನು ಸುಲಭವಾಗಿಸಬೇಕು ಎಂದಿದ್ದಾರೆ.
- ತಂತ್ರಜ್ಞಾನ ವಲಯದಲ್ಲಿ ಹೊಸ ಉದ್ಯಮ ಸ್ಥಾಪನೆ ಮತ್ತು ಸ್ವ–ಉದ್ಯೋಗ ಕಾರ್ಯಕ್ರಮ ಉತ್ತೇಜಿಸಲು ‘ಸ್ವ–ಉದ್ಯೋಗ ಮತ್ತು ಕೌಶಲ ಸದ್ಬಳಕೆ’ (ಎಸ್‌ಇಟಿಯು) ವ್ಯವಸ್ಥೆ ಜಾರಿಗೆ ನಿರ್ಧರಿಸಲಾಗಿದೆ ಎಂದಿದ್ದಾರೆ.
ಪ್ರಗತಿ
[ಬದಲಾಯಿಸಿ]- 2011-12 ರಿಂದ ಮೂರು ವರ್ಷಗಳಲ್ಲಿ
ಪ್ರಸ್ತುತ ದರದಲ್ಲಿ ->2014-15 | 2011-12 | 2013-14 | 2014-15 |
---|---|---|---|
ತಲಾ ಆದಾಯ | 64,316ರೂ. | 71,793ರೂ. | 88,533ರೂ. |
ಶೇಕಡಾವಾರು ಪ್ರಗತಿ | 3.2 | 5.4 | 6.1 |
ಆರ್ಥಿಕ ಸಮೀಕ್ಷೆ | 2014-15 | <(ಆಧಾರ)> | (ಪ್ರಜಾವಾಣಿ=1-3-2015) |
ತೆರಿಗೆಸಂಗ್ರಹ
[ಬದಲಾಯಿಸಿ]- ಪ್ರಸಕ್ತ ಹಣಕಾಸು ವರ್ಷದ ಮೊದಲ 11 ತಿಂಗಳಿನಲ್ಲಿ ನೇರ ತೆರಿಗೆ ಸಂಗ್ರಹ ಪ್ರಮಾಣ ರೂ 6.12 ಲಕ್ಷ ಕೋಟಿಗೇರಿದೆ. ಕಳೆದ ಹಣಕಾಸು ವರ್ಷದ ಇದೇ ಅವಧಿಗಿಂತ ಶೇ 10.67ರಷ್ಟು ಹೆಚ್ಚಳವಾಗಿದೆ.
- ಕಳೆದ ಹಣಕಾಸು ವರ್ಷದ ಏಪ್ರಿಲ್–ಫೆಬ್ರುವರಿ ಅವಧಿಯಲ್ಲಿ ನೇರ ತೆರಿಗೆಯಿಂದ ರೂ 5.53 ಲಕ್ಷ ಕೋಟಿ ಸಂಗ್ರಹಿಸಲಾಗಿತ್ತು.
- 2014–15ನೇ ಹಣಕಾಸು ವರ್ಷದಲ್ಲಿ ನೇರ ತೆರಿಗೆ ಮೂಲಕ ಒಟ್ಟು ರೂ7.36 ಲಕ್ಷ ಕೋಟಿ ಸಂಗ್ರಹಿಸುವ ಅಂದಾಜನ್ನು ಬಜೆಟ್ನಲ್ಲಿ ಪ್ರಕಟಿಸಲಾಗಿತ್ತು. ನಂತರದ ಬಜೆಟ್‌ನಲ್ಲಿ ರೂ7.05 ಲಕ್ಷ ಕೋಟಿಗೆ ತಗ್ಗಿಸಲಾಗಿದೆ.
- ಈ ಪರಿಷ್ಕೃತ ಅಂದಾಜಿನಂತೆ, ಕಳೆದ ವರ್ಷದ ರೂ6.38 ಲಕ್ಷ ಕೋಟಿಗೆ ಹೋಲಿಸಿದರೆ ಈ ಬಾರಿ ಶೇ 10.5ರಷ್ಟು ಹೆಚ್ಚು ತೆರಿಗೆ ಸಂಗ್ರಹವಾಗಲಿದೆ.
- ಪ್ರಸಕ್ತ ಹಣಕಾಸಿನ 11 ತಿಂಗಳ ಅವಧಿಯಲ್ಲಿ ಕಾರ್ಪೊರೇಟ್ ತೆರಿಗೆ ಸಂಗ್ರಹವು ಶೇ 9.99ರಷ್ಟು ಹೆಚ್ಚಿದ್ದು, ರೂ3.79 ಲಕ್ಷ ಕೋಟಿಗೆ ತಲುಪಿದೆ. ಕಳೆದ ವರ್ಷ ರೂ3.45 ಲಕ್ಷ ಕೋಟಿಗಳಷ್ಟಾಗಿತ್ತು.
- ಅಂತೆಯೇ, ವೈಯಕ್ತಿಕ ಆದಾಯ ತೆರಿಗೆ ಸಂಗ್ರಹವೂ ಏಪ್ರಿಲ್–ಫೆಬ್ರುವರಿ ಅವಧಿಗೆ ಶೇ 11.10ರಷ್ಟು ಅಂದರೆ, ರೂ2.25 ಲಕ್ಷ ಕೋಟಿಗೆ ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ರೂ2.02 ಲಕ್ಷ ಕೋಟಿಗಳಷ್ಟು ತೆರಿಗೆ ಸಂಗ್ರಹವಾಗಿತ್ತು.
- ಷೇರು ಮತ್ತು ಬಾಂಡ್ ವಹಿವಾಟು ತೆರಿಗೆ (ಎಸ್‌ಟಿಟಿ) ಸಂಗ್ರಹ ಶೇ 45.44ರಷ್ಟು ಹೆಚ್ಚಾಗಿದ್ದು, ರೂ6,280 ಕೋಟಿಗೆ ತಲುಪಿದೆ.
- ಒಟ್ಟು ನಿವ್ವಳ ನೇರ ತೆರಿಗೆ ಸಂಗ್ರಹವು ಶೇ 6.88ರಷ್ಟು ಹೆಚ್ಚಿದ್ದು, ರೂ5.06 ಲಕ್ಷ ಕೋಟಿಗೆ ತಲುಪಿದೆ. ಕಳೆದ ವರ್ಷ ರೂ4.74 ಲಕ್ಷ ಕೋಟಿಗಳಷ್ಟಿತ್ತು.
- ಮೂಲದಲ್ಲಿಯೇ ತೆರಿಗೆ ಕಡಿತ (ಟಿಡಿಎಸ್) ಕಳೆದ ವರ್ಷಕ್ಕಿಂತ ಇಳಿಕೆಯಾಗಿದೆ. ಕಳೆದ ವರ್ಷದ 11 ತಿಂಗಳಿನಲ್ಲಿ ಶೇ 16.69ರಷ್ಟಿದ್ದಿದ್ದು, ಈ ಬಾರಿ 7.49ರಷ್ಟು ದಾಖಲಾಗಿದೆ.
- 2014–15ರ 11 ತಿಂಗಳಿನಲ್ಲಿ ಮುಂಗಡ ತೆರಿಗೆ ಸಂಗ್ರಹವೂ ಶೇ 13.41ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಮುಂಗಡ ತೆರಿಗೆ ಸಂಗ್ರಹವು ಶೇ 8.67ರಷ್ಟಿತ್ತು.
- ಪ್ರಸಕ್ತ ಹಣಕಾಸು ವರ್ಷಕ್ಕೆ ಒಟ್ಟಾರೆ ತೆರಿಗೆ ಸಂಗ್ರಹವನ್ನು (ಪರೋಕ್ಷ ತೆರಿಗೆ ಒಳಗೊಂಡು) ರೂ12.51 ಲಕ್ಷ ಕೋಟಿಗಳಿಗೆ ತಗ್ಗಿಸಲಾಗಿದೆ. ಈ ಮೊದಲು ಬಜೆಟ್‌ನಲ್ಲಿ ರೂ13.6 ಲಕ್ಷ ಕೋಟಿ ಸಂಗ್ರಹಿಸುವ ಅಂದಾಜು ಮಾಡಲಾಗಿತ್ತು.
ನೋಡಿ
[ಬದಲಾಯಿಸಿ]- ಭಾರತ ಸರ್ಕಾರದ ರೈಲ್ವೆ ಬಜೆಟ್ 2015-2016
- ಭಾರತದ ಕೇಂದ್ರ ಸರ್ಕಾರದ ಮುಂಗಡ ಪತ್ರ;2014-2015
- ಬಜೆಟ್ ಸಿದ್ಧವಾಗುವುದು ಹೇಗೆ?
- ಕರ್ನಾಟಕ ಸರ್ಕಾರದ ಮುಂಗಡ ಪತ್ರ-2015-2016
- ಭಾರತದ ಕೇಂದ್ರ ಸರ್ಕಾರದ ಬಜೆಟ್ 2016-17+ಆದಾಯ ತೆರಿಗೆ
ಆಧಾರ
[ಬದಲಾಯಿಸಿ]- .prajavani.-೧-೩-೨೦೧೫
- timesofindia -೧-೩-೨೦೧೫
- ವಿಜಯ ಕರ್ನಾಟಕ - ೧-೩-೨೦೧೫
- ಕನ್ನಡಪ್ರಭ - ೧-೩-೨೦೧೫