ವಿಷಯಕ್ಕೆ ಹೋಗು

ಭಾರತದಲ್ಲಿ ಬ್ಯಾಂಕಿಂಗ್ ವಲಯದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದ ವಾಣಿಜ್ಯ ಬ್ಯಾಂಕಿಂಗ್ ಸಂರಚನೆ[ಬದಲಾಯಿಸಿ]

 ಬಹು ಹಿಂದಿನ ಕಾಲದಿಂದಲೂ ಭಾರತವು ಕೆಲ ದೇಶೀಯ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹೊಂದಿತ್ತು. ವೇದಗಳ ಕಾಲದಲ್ಲಿಯೂ ಸಹ ಸಾಲ ನೀಡುವ ಚಟುವಟಿಕೆ ಜಾರಿಯಲ್ಲಿತ್ತು ಎಂದು ಹೇಳಲಾಗುತ್ತದೆ. ಆದರೆ ಆಧುನಿಕ ತಳಹದಿಯ ಮೇಲಿನ ಬ್ಯಾಂಕಿಂಗ್ ಒಂದೆರಡು ಶತಮಾನಗಳ ಹಿಂದಷ್ಟೇ ಪ್ರಾರಂಭವಾಯಿತು. ಭಾರತೀಯ ವಾಣಿಜ್ಯ ಬ್ಯಾಂಕುಗಳು ಜಾಯಿಂಟ್ ಸ್ಟಾಕ್ ಕಂಪನಿಗಳ ರೀತಿಯಲ್ಲಿ ಸಂಘಟಿತವಾಗಿರುವುದರಿಂದ ಅವುಗಳನ್ನು ಜಾಯಿಂಟ್ ಸ್ಟಾಕ್ ಬ್ಯಾಂಕುಗಳು ಎಂದು ಕರಯಲಾಗುತ್ತದೆ. ಭಾರತದಲ್ಲಿ ವಾಣಿಜ್ಯ ಬ್ಯಾಂಕುಗಳು ಮುಖ್ಯವಾಗಿ ವಾಣಿಜ್ಯ ಮತ್ತು ವ್ಯಾಪಾರಕ್ಕೆ ಸಾಲವನ್ನು ನೀಡುವಲ್ಲಿ ನಿರತವಾಗುವುದರಿಂದ ಅವುಗಳನ್ನು ವಾಣಿಜ್ಯ ಬ್ಯಾಂಕುಗಳು ಎಂದು ಕರಯಲಾಗುತ್ತಿದೆ.

ವಾಣಿಜ್ಯ ಬ್ಯಾಂಕುಗಳ ವರ್ಗೀಕರಣ[ಬದಲಾಯಿಸಿ]

 ೧೯೩೪ರ ಭಾರತಿಯ ರಿಸರ್ವ್ ಬ್ಯಾಂಕ್ ಕಾಯ್ದೆ ಪ್ರಕಾರ ಭಾರತದ ವಾಣಿಜ್ಯ ಬ್ಯಾಂಕುಗಳು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಆವುಗಳೆಂದರೆ:
 1. ) ಪರಿಶಿಷ್ಟ ಅಥವಾ ಶೆಡ್ಯೂಲ್ಡ್ ಬ್ಯಾಂಕುಗಳು
 2. ) ಪರಿಶಿಷ್ಟೇತರ ಅಥವಾ ನಾನ್ ಶೆಡ್ಯೂಲ್ಡ್ ಬ್ಯಾಂಕುಗಳು

ಪರಿಶಿಷ್ಟ ಅಥವಾ ಶೆಡ್ಯೂಲ್ಡ್ ಬ್ಯಾಂಕುಗಳು:

 ಒಟ್ಟಾರು ೫ ಲಕ್ಷ ರೂ ಅಥವಾ ಇದಕಿಂತ ಹೆಚ್ಚಿನ ಪಾವತಿಯಾದ ಬಂಡವಾಳ ಮತ್ತು ಅಪದ್ಧನ ನಧಿಯನ್ನು ಹೊಂದಿರುವ ಹಾಗು ಭಾರತೀಯ ರಿಸರ್ವ್ ಬ್ಯಾಂಕಿನ ಎರಡನೇ ಪರಿಚ್ಛೇದ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಬ್ಯಾಂಕುಗಳು ಪರಿಶಿಷ್ಟ ಅಥವಾ ಶೆಡ್ಯೂಲ್ಡ್ ಬ್ಯಾಂಕುಗಳು ಎನ್ನಲಾಗುತ್ತದೆ. ಈಬ್ಯಾಂಕುಗಳು ಕೆಲವೊಂದು ನಿರ್ದಿಷ್ಟ ಷರತ್ತುಗಳನ್ನು ಪೂರ್ಣಗೊಳಿಸಬೇಕು ಹಾಗು ರಿಸರ್ವ್ ಬ್ಯಾಂಕಿನ ನಿಬಂಧನೆಗೆ ಒಳಪಟ್ಟಿರಬೇಕು. ಎಲ್ಲಾ ವಾಣಿಜ್ಯ ಬ್ಯಾಂಕುಗಳು ವಾಣಿಜ್ಯ ಮತ್ತು ವಿದೇಶಿಯ, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ರಾಜ್ಯ ಸಹಕಾರಿ ಬ್ಯಾಂಕುಗಳು ಈ ಗುಂಪಿನಲ್ಲಿ ಸೇರಿವೆ. 

ಪರಿಶಿಷ್ಟೇತರ ಅಥವಾ ನಾನ್ ಶೆಡ್ಯೂಲ್ಡ್ ಬ್ಯಾಂಕುಗಳು:

 ಒಟ್ಟಾರು ೫ ಲಕ್ಷ ರೂ. ಗಿಂತ ಕಡಿಮೆ ಪಾವತಿಯಾದ ಬಂಡವಾಳ ಮತ್ತು ಅಪದ್ಧನ ನಧಿಯನ್ನು ಹೊಂದಿರುವ ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆ ೧೯೩೪ರ ಎರಡನೇ ಪರಿಚ್ಛೇದದಲ್ಲಿ ಸೇರಿರದ ಬ್ಯಾಂಕುಗಳನ್ನು ಪರಿಶಿಷ್ಟೇತರ ಅಥವಾ ನಾನ್ ಶೆಡ್ಯೂಲ್ಡ್ ಬ್ಯಾಂಕುಗಳು ಎನ್ನುತ್ತಾರೆ. ಇಂದು ಭಾರತದಲ್ಲಿ ವಾಣಿಜ್ಯ ಬ್ಯಾಂಕಿಂಗ್ ವ್ಯವಸ್ಥೆಯು ಸರ್ಕಾರಿ ಸ್ವಾಮ್ಯದ ಪರಿಶಿಷ್ಟ ಬ್ಯಾಂಕುಗಳು, ಖಾಸಗಿ ಕ್ಷೇತ್ರದ ಪರಿಶಿಷ್ಟ ಹಾಗೂ ಪರಿಶಿಷ್ಟೇತರ ಬ್ಯಾಂಕುಗಳು ಮತ್ತು ವಿದೇಶಿ ಬ್ಯಾಂಕುಗಳು ಒಳಗೊಂಡಿದೆ. 

 • ಸಾರ್ವಜನಿಕ ವಲಯದ ಬ್ಯಾಂಕುಗಳು
 ಭಾರತದಲ್ಲಿ ಸಾರ್ವಜನಿಕ ಬ್ಯಾಂಕಿಂಗ್ ವಲಯವು ರಾಷ್ಟ್ರೀಕೃತ ಬ್ಯಾಂಕುಗಳು ಹಾಗು ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಅದರ ಸಹವರ್ತಿ ಬ್ಯಾಂಕುಗಳು ಹಾಗೂ ಕೈಗಾರಿಕಾ ಅಭಿವ್ರದ್ಧಿ ಬ್ಯಾಂಕುಗಳು ಒಳಗೊಂಡಿವೆ. ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಅದರ ಸಹವರ್ತಿ ಬ್ಯಾಂಕುಗಳನ್ನು ರಾಷ್ಟ್ರೀಕೃತಿ ಬ್ಯಾಂಕುಗಳ ಜೊತೆ ಸೇರಿಸಬಹುದು. ಭಾರತದಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು ಎಂದರೆ #.ಭಾರತೀಯ ಸ್ಟೇಟ್ ಬ್ಯಾಂಕ್, #.ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, #.ಬ್ಯಾಂಕ್ ಆಫ್ ಇಂಡಿಯಾ, #.ಬ್ಯಾಂಕ್ ಆಫ್ ಬರೋಡ, #.ಪಂಜಾಬ್ ನ್ಯಾಷನಲ್ ಬ್ಯಾಂಕ್, #.ಇಂಡಿಯನ್ ಬ್ಯಾಂಕ್, #.ಅಲಹಾಬಾದ್ ಬ್ಯಾಂಕ್, #.ವಿಜಯಾ ಬ್ಯಾಂಕ್, #.ಆಂಧ್ರ ಬ್ಯಾಂಕ್, #.ಕೆನರಾ ಬ್ಯಾಂಕ್, #.ದೇನಾ ಬ್ಯಾಂಕ್ ಮುಂತಾದವುಗಳು
 • ಖಾಸಗಿ ವಲಯದ ಬ್ಯಾಂಕುಗಳು
 ಇದುವರೆಗು ರಾಷ್ಟ್ರೇಕರಣಗೊಂಡಿರದ ಕೆಲವೇ ಸಂಖ್ಯೆಯ ಭಾರತೀಯ ಪರಿಶಿಷ್ಟ ಬ್ಯಾಂಕುಗಳು ಖಾಸಗಿ ಕ್ಷೇತ್ರದ ಬ್ಯಾಂಕುಗಳಾಗಿವೆ. ನೂತನ ಆರ್ಥಿಕ ನೀತಿಯು ಪ್ರಕಟವಾಗುವ ಮೊದಲು ಈ ಬ್ಯಾಂಕುಗಳ ಚಟುವಟಿಕೆಯ ವ್ಯಾಪ್ತಿ ತೀರಾ ಸಂಕುಚಿತವಾಗಿತ್ತು. ಆದರೆ ಸುಧಾರಣೆಯ ಅವಧಿಯಲ್ಲಿ ಈ ಬ್ಯಾಂಕುಗಳು ಭಾರೀ ಬೆಳವಣಿಗೆಯನ್ನು ಕಂಡವು. ಕೆಲವು ಖಾಸಗಿ ವಲಯದ ಬ್ಯಾಂಕುಗಳ ಉದಾಹರಣೆ ಎಂದರೆ HDFC ಬ್ಯಾಂಕ್ ಲಿಮಿಟೆಡ್, ICICI ಬ್ಯಾಂಕ್ ಲಿಮಿಟೆಡ್, UTI ಬ್ಯಾಂಕ್ ಲಿಮಿಟೆಡ್, IDBI ಬ್ಯಾಂಕ್ ಲಿಮಿಟೆಡ್, ಯೆಸ್ ಬ್ಯಾಂಕ್, ಮುಂತಾದವು. ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಹೋಲಿಸಿದರೆ ಖಾಸಗಿ ವಲಯದ ಬ್ಯಾಂಕುಗಳು ನಿರ್ವಹಣೆ ತುಂಬಾ ಪ್ರಭಾವಿಯಾಗಿದೆ.
 • ವಿದೇಶಿ ಬ್ಯಾಂಕುಗಳು
 ಕಲವು ವಿದೇಶಿ ಬ್ಯಾಂಕುಗಳು ಕೂಡ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇವುಗಳನ್ನು ಸಾಮಾನ್ಯವಾಗಿ ವಿದೇಶಿ ವಿನಿಮಯ ಬ್ಯಾಂಕುಗಳು ಎನ್ನಲಾಗುತ್ತದೆ. ವಿದೇಶಿ ಬ್ಯಾಂಕುಗಳು ಎಂದರೆ ವಿದೇಶದಲ್ಲಿ ಸಂಯೋಜನೆಗೊಂಡು ಭಾರತದಲ್ಲಿ ಶಾಖೆಗಳನ್ನು ಹೊಂದಿರುವ ಬ್ಯಾಂಕುಗಳಾಗಿವೆ. ವಿಭಿನ್ನ ದೃಶ್ಟಿಕೋನವುಳ್ಳ ಈ ಬ್ಯಾಂಕುಗಳು ಸ್ಥಳೀಯ ಬ್ಯಾಂಕುಗಳು ನಿರ್ವಹಿಸುವ ಅದೇ ಕಾರ್ಯಗಳನ್ನು ನಿರ್ವಹಿಸುತ್ತವೆ. ಕಲವು ವಿದೇಶಿ ಬ್ಯಾಂಕುಗಳ ಉದಾಹರಣೆಗಳೆಂದರೆ ಸಿಟಿ ಬ್ಯಾಂಕು, ಗ್ರಿಂಡ್ಲೇಸ್ ಬ್ಯಾಂಕು, ಫೆಡರಲ್ ಬ್ಯಾಂಕು, ಹಾಂಕಾಂಗ್ ಬ್ಯಾಂಕು ಮುಂತಾದವು.

ಭಾರತದಲ್ಲಿ ವಾಣಿಜ್ಯ ಬ್ಯಾಂಕಿಂಗ್ ಬೆಳವಣಿಗೆ[ಬದಲಾಯಿಸಿ]

 ಬ್ರಿಟಿಷರು ೧೭ನೇ ಶತಮಾನದಲ್ಲಿ ಭಾರತದಲ್ಲಿ ಏಜೆನ್ಸಿ ಹೌಸ್ಗಳನ್ನು ಸ್ಥಾಪಿಸುವುದರೊಂದಿಗೆ ಭಾರತದಲ್ಲಿ ವಾಣಿಜ್ಯ ಬ್ಯಾಂಕಿಂಗ್ ಯುಗ ಆರಂಭವಾಯಿತು. ಅದಕಿಂತ ಮೊದಲು ಕೆಲವು ದೇಶಿಯ ಬ್ಯಾಂಕರರು ಕಾರ್ಯನಿರ್ವಹಿಸುತ್ತಿದ್ದರು.
 ಮೊದಲು ಬ್ಯಾಂಕಾದ ಬ್ಯಾಂಕ್ ಆಫ್ ಹಿಂದುಸ್ತಾನ್ ಸ್ಥಾಪನೆಯಾಯಿತು. ೧೭೭೦ರಲ್ಲಿ ಪ್ರೆಸಿಡೆನ್ಸಿ ಬ್ಯಾಂಕಿನ ಸ್ಥಾಪನೆಯೊಂದಿಗೆ ೧೯ನೇ ಶತಮಾನದ ಮೊದಲ ಭಾಗದಲ್ಲಿ ವಾಣಿಜ್ಯ ಬ್ಯಾಂಕಿಂಗ್ ವ್ಯವಸ್ಥಿತವಾಗಿ ಆರಂಭವಾಯಿತು.೧೮೬೦ರ ಬ್ಯಾಂಕಿಂಗ್ ಕಂಪನೀಸ್ ಕಾಯ್ದೆಯು ಭಾರತದಲ್ಲಿ ಜಾಯಿಂಟ್ ಸ್ಟಾಕ್ ಬ್ಯಾಂಕುಗಳು ಬೆಳವಣಿಗೆಗೆ ಉತ್ತೇಜನ ನೀಡಿತು. ೧೮೮೧ರಲ್ಲಿ ಸ್ಥಾಪಿತವಾದ ಔಧ್ ಕಮರ್ಷಿಯಲ್ ಬ್ಯಾಂಕನ್ನು ಮೊದಲ ಭಾರತೀಯ ಬ್ಯಾಂಕ್ ಎಂದು ಪರಿಗಣಿಸಬಹುದು. ಮೂರು ಪ್ರೆಸಿಡೆನ್ಸಿ ಬ್ಯಾಂಕ್ ಗಳನ್ನು ವಿಲ್ಲೀನಗೊಳಿಸಿ ೧೯೨೦ರಲ್ಲಿ ದಿ ಇಂಪೀರಿಯಿಲ್ ಬ್ಯಾಂಕ್ ಆಫ್ ಇಂಡಿಯಾವನ್ನು ಸ್ಥಾಪಿಸಲಾಯಿತು. ಇದನ್ನು ೧೯೫೫ರಲ್ಲಿ ರಾಷ್ಟ್ರೀಕರಿಸಿ ಭಾರತೀಯ ಸ್ಟೇತ್ ಬ್ಯಾಂಕನ್ನು ರಚಿಸಲಾಯಿತು. ಭಾರತವು ಸ್ವಾತಂತ್ರ್ಯಗೊಂಡ ಅವಧಿಯಲ್ಲಿ ೪೮೧೯ ಶಾಖೆಗಳಿದ್ದ ೬೪೮ ಬ್ಯಾಂಕುಗಳು ಕಾರ್ಯ ನಿರ್ವಹಿಸುತ್ತಿದ್ದವು.
ಚಿತ್ರ:Https://commons.wikimedia.org/wiki/File:SBI Imperial bank seal.jpg
ಇಂಪೀರಿಯಲ್ ಬ್ಯಾಂಕ್

ವಾಣಿಜ್ಯ ಬ್ಯಾಂಕಿಂಗ್ ಬೆಳವಣಿಗೆಯ ಹಂತಗಳು[ಬದಲಾಯಿಸಿ]

 ಭಾರತ ಸ್ವಾತಂತ್ರ್ಯ ಗೊಂಡ ನಂತರ ವಾಣಿಜ್ಯ ಬ್ಯಾಂಕಿಂಗಿನ ಬೆಳವಣಿಗೆಯು ನಾಲ್ಕು ವಿಭಿನ್ನ ಹಂತಗಳಲ್ಲಿ ನಡೆದಿದೆ. ಅವುಗಳೆಂದರೆ 1.ತಳಹದಿಯ ಹಂತ, 2.ವಿಸ್ತರಣಾ ಹಂತ 3.ಏಕತ್ರೀಕರಣ ಹಂತ, 4.ಸುಧಾರಣಾ ಹಂತ.

1.ತಳಹದಿಯ ಹಂತ

 ಈ ಹಂತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯ ಮರು ಸಂಘಟನೆ ಮತ್ತು ಏಕತ್ರೀಕರಣಗೊಳಿಸಲು ಬೇಕಾದ ಅಗತ್ಯ ಕಾನೂನು ಚೌಕಟ್ಟುಗಳನ್ನು ನಿರ್ಮಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು.

2.ವಿಸ್ತರಣಾ ಹಂತ

 ಈ ಹಂತವು ೧೯೬೦ರ ಮಧ್ಯ ಭಾಗದಲ್ಲಿ ಆರಂಭವಾಗಿ ೧೯೬೯ರಲ್ಲಿ ೧೪ ಪ್ರಮುಖ ವಾಣಿಜ್ಯ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿದ ನಂತರ ಸಂಚಲನೆ ಪಡೆಯಿತು.

3.ಏಕತ್ರೀಕರಣ ಹಂತ

 ಈ ಹಂತದಲ್ಲಿ ಸಿಬ್ಬಿಂದಿಗಳ ಕಾರ್ಯದಕ್ಷತೆ, ಬ್ಯಾಣ್ಕುಗಳ ಲಾಭ, ಗ್ರಾಹಕರ ಸೇವೆ ಮತ್ತು ಸಾಲ ನಿರ್ವಹಣೆ ಇತ್ಯಾದಿ ಅಂಶಗಳ ಕಾರ್ಯಕ್ಷಮತೆಯನ್ನು ಸುಧಾರಿಸಲು ಹೆಚ್ಚಿನ ಗಮನ ನೀಡಲಾಯಿತು.

4.ಸುಧಾರಣಾ ಹಂತ

 ಭಾರತದ ವಾಣಿಜ್ಯ ಬ್ಯಾಂಕುಗಳ ಬೆಳವಣಿಗೆಯಲ್ಲಿ ಇದೊಂದು ಬಹಳ ಪ್ರಮುಖ ಹಂತವಾಗಿದೆ. ಇತೀಚಿನ ವರ್ಷದಲ್ಲಿ ಕ್ಷೇತ್ರದಲ್ಲಿ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲಾಗಿದ್ದು ಬ್ಯಾಂಕಿಂಗ್ ವ್ಯವಸ್ಥೆಯ ಸಂಯೊಜನೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಈ ಹಂತದಲ್ಲಿ ಹೊಸ ಲೆಕ್ಕ ಪದ್ಧತಿ ಮತ್ತು ಅನುರೂಪಿತ ಬಂಡವಾಳ, ಆದಾಯ ಗುರುತಿಸುವಿಕೆ ಇತ್ಯಾದಿ ದೂರದೃಷ್ಟಿಯ ನಿಯಮಗಳಿಗೆ ಹೆಚ್ಚಿನ ಆದ್ಯತೆ ನೀಡಲಾಯಿತು.

ಬ್ಯಾಂಕಿಂಗ್ ವಲಯದ ಸುಧಾರಣೆ

 ಭರತದಲ್ಲಿನ ಬ್ಯಾಕಿಂಗ್ ವಲಯದ ಸುಧಾರಣಿಯು ೧೯೯೧ರಲ್ಲಿ ಜಾರಿಗೊಳಿಸಲಾದವ್ಯಪಕ ಆರ್ಥಿಕ ಸುಧರಣಿಗಳ ಒಂದು ಭಗಯಯಿತು.ನರಸಿ೦ಮ್ ಸಮಿತಿಯು ೧೯೯೧ ಮತ್ತು ೧೯೯೮ರಲ್ಲಿ ಸಲ್ಲಿಸಿದ ಎರಡು ವರದಿಗಳು ಕಳೆದ ಕೆಲವು ವರ್ಷಗಳ 

ಬ್ಯಾಕಿಂಗ್ ವಲಯದ ಸುಧಾರಾಣೆಳ ಮೀಲೆ ಭರೀ ಪ್ರಭವ ಬೀರಿವೆ.

 ಈ ಹಿಂದೆ ಬ್ಯಾಂಕಿಂಗ್ ವಲಯದ ಕಾರ್ಯದಕತೆ ಮತು ಲಾಭ ಗಳಿಕೆಯು ಭಾರೀ ಹಾನಿಗೊಳಗಾಗಿತ್ತು.ಇದರಿಂದಾಗಿ ಬ್ಯಾಕಿಂಗ್ ಕ್ಷೇತ್ರದಲ್ಲಿ ವ್ಯಪಕ ಸುಧಾರಣೆ ತರಬೆಕಾದ ಅನಿವಾರ್ಯ ಸ್ಥಿತಿ ನಿರ್ಮಾನವಾಗಿತ್ತು.ಈ ಕಾರಣದಿ೦ದಾಗಿ ಸರ್ಕಾರವು 

ಬ್ಯಾಕಿಂಗ್ ವಲಯದಲ್ಲಿ ಸ್ಪರ್ದೆಯನ್ನು ಹೆಚ್ಚಿಸುವ ಗುರಿಯೊ೦ದಿಗೆ ಈವ್ಯಪಕ ಮರುಸ೦ಘಟನೆ ಮತ್ತು ಸುಧಾರಣೆ ಕೈಹಾಕಿತು.ಈ ಉದ್ದೆಶಕ್ಕಾಗಿ ಸರ್ಕಾರವು ಆಗಸ್ಟ್ ೧೪,೧೯೯೧ರಲ್ಲಿ ಎ೦.ನರಸಿ೦ಮ್ ಆಧ್ಯ ಕ್ಷತೆಯ ಒಂಬತ್ತು ಸದಸ್ಯ ಸಮಿತಿಯನ್ನು ನೇಮಿಸಿತು.ಈ ಸಮಿತಿಯು ೧೯೯೧ರ ನವೆಂಬರ್ನಲ್ಲಿ ತನ್ನ ಅಂತಿಮ ವರದಿಯನ್ನು ನೇಮಿಸಿತು.ಈ ಸಮಿತಿಯು ೧೯೯೧ರ ನವೆಂಬರ್ನಲ್ಲಿ ತನ್ನ ಅಂತಿಮ ವರದಿಯನ್ನು ಸಲ್ಲಿಸಿತು.ಮತ್ತೊಮ್ಮೆ ೧೯೯೮ರಲ್ಲಿ ಸರ್ಕಾರವು ಎ೦.ನರಸಿಹಮ್ ಆಧ್ಯ ಕ್ಷತೆಯ ಇನ್ನೊ೦ದು ಬ್ಯಾಕಿಂಗ್ ವಲಯದ ಸುಧಾರಣಾ ಸಮಿತಿಯನ್ನು ರಚಿಸಿತು.ಈ ಸಮಿತಿಯು ಏಪ್ರಿಲ್ ೧೯೯೮ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು.ಈ ಎರಡು ವರದಿಗಳು ಚರಿತ್ರರ್ಹ ದಾಖಲಾತಿಗಳಾಗಿದ್ದು ಬ್ಯಾಕಿಂಗ್ ವಲಯದ ಸುಧಾರಣೆಯಲ್ಲಿ ಮಹತ್ವದ ಪಾತ್ರವಹಿಸಿವೆ.

  ಬ್ಯಾಕಿಂಗ್ ವಲಯ ಸುಧಾರಣೆಯ ಗುರಿಗಳು
ಬ್ಯಾಕಿಂಗ್ ವಲಯ ಸುಧಾರಣೆಯ ಪ್ರಮುಖ ಗುರಿಗಳು ಈ ಮು೦ದಿನ೦ತಿವೆ.

೧.ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿರುವ ಸಮಗ್ರ ಆರ್ಥಿಕ ದೂರಣೆ ಚೌಕಟ್ಟನ್ನು ಸರಿಪಡಿಸಿ ಸುಧಾರಿಸುವುದು. ೨.ಬ್ಯಾಂಕುಗಳು ಹನಕಾಸು ಆರೋಗ್ಯ ಮತ್ತು ಸ್ಥಿತಿಗತಿಗಳನ್ನು ನಿಧಾರಿಸುವುದು. ೩.ವಿಚಾರಣೆ,ಲೆಕ್ಕ ಪರಿಶೂಧನೆ,ತ೦ತ್ರಜ್ಞಾನ ಮತ್ತು ಕಾನೂನು ಚೌಕಟ್ಟಿಗೆ ಸಂಬಂಧಿಸಿದ ಮೂಲ ಸೌಕರ್ಯ ಮತ್ತು ಹನಕಸು ಸಂಸ್ಥೆಗಳನ್ನು ನಿರ್ಮಾನ ಮಾಡುವುದು. ೪.ನೆಮಕತಿ,ತರಬೆತಿ,ನಿಯೋಜನೆ ಇತ್ಯಾದಿ ವಿಚರಗಳಿಗೆ ಸಂಬಂಧಿಸಿದ ನೀತಿಗಳನ್ನು ಪುನರ್ವಿಮರ್ಶಿಸಿ ವ್ಯವಸ್ಧಾಪನ ದಕ್ಷತೆ ಮತ್ತು ಮನವ ಸ೦ಪನ್ಮೂಲ ಗುನಮಟವನ್ನು ನುದರಿಸುವುದು ೫.ಹನಕಸು ಉಳಿತಯ ಮರ್ಗವನ್ನು ಸುಧಾರಿಸುವುದು ೬.ಮಧ್ಯವರ್ತಿ ವೆಚ್ಚಗಳು ಮತ್ತು ಬ್ಯಾಂಕಿಂಗ್ ವ್ಯವಸ್ಥಯ ವಿರೂಪಳನ್ನು ಮಿತಗೊಳಿಸುವುದು. ೭.ಹನಕಸು ವಲಯಕ್ಕೆ ಮುಕ್ತ ಪ್ರವೇಶ ಮತ್ತು೭ ನಿರ್ಗಮವನ್ನು ಪ್ರೋತ್ಸಾಹಿಸಿ ಪೈಪೊಟಿಯನ್ನು ಸುಧಾರಿಸಲು ಮತ್ತು ೮ಪಾರದರ್ಶಕ ಮತ್ತು ದಕ್ಷ ಬ೦ಡವಾಳ ಮತ್ತು ಹಣದ ಮಾರುಕಟ್ಟೆಯಲ್ಲಿ ಆಭಿವ್ರುದ್ಧಿ ಪಡಿಸುವುದು.

  ನರಸಿಹಮ್ ಸಮಿತಿ (೧೯೯೧)ಯ ಶಿಫಾರಸುಗಳನ್ನು
ಬ್ಯಾಂಕುಗಳಿಗೆ ಸ೦ಪನ್ಮೂಗಳು ಸಾರ್ವಜನಿಕರಿಂದ ಲಭ್ಯವಾಗುತ್ತವೆ.ಆದ್ದರಿಂದ ಅವುಗಳನ್ನು ತು೦ಬ ವಿವೆಕದಿ೦ದ ತೂಡಗಿಸಿ ಅನುಕಲ ಭ್ಯವಾಗುವ೦ತೆ ಮಾಡಬೆಕು ಎ೦ಬುದು ನರಸಿಹಮ್ ಸಮಿತಿಯ ಶಿಫಾರಸುಗಳ ಪ್ರಮುಕ ಗುರಿಗಳು ಈ ಮು೦ದಿನ೦ತಿವೆ.

ಅ)ಉನ್ನತ ದರ್ಜೆಯ ವ್ಯವಹರ ನಮ್ಯತೆಯನ್ನು ಸಾಧಿಸುವುದು. ಆ)ನಿರ್ಣಯ ಕೈಗೊಳ್ಳುವಿಕೆಯಲ್ಲಿ ಆ೦ತರಿಕ ಸ್ವಾಯತ್ತತೆ, ಮತ್ತು ಇ) ಬ್ಯಾಕಿಂಗ್ ವ್ಯವಹರಗಳಲ್ಲಿ ಸ್ಪರ್ಧೆ ಮತ್ತು ವ್ರುತ್ತಿಪರತೆಯನ್ನು ಹೆಚ್ಚಿಸುವುದು.

೧೯೯೧ರ ನರಸಿಹಮ್ ಸಮಿತಿಯ ಪ್ರಮುಖ ಶಿಫಾರಸುಗಳು ಈ ಕೆಳಗಿನಂತೆ

೧.ಶಾಸನಬದ್ಧ ದ್ರವ್ಯತೆ ಅನುಪಾತ ಕಡಿತ

 ನರಸಿಹಮ್ ಸಮಿತಿಯು ಶಸನಬದ್ದ ದ್ರವ್ಯತಾ ಅನುಪತವನ್ನು ಮುಂದಿನ ೫ ವರ್ಷಗಳಲ್ಲಿ ಸುಮಾರು ೩೮.೫ ರಿಂದ ಶೆಕಡ ೨೫ಕ್ಕೆ ಇಳಿಸಬೆಕು ಎಂದು ಶಿಫಾರಸು ಮಾಡಿತು.

೨.ನಗದು ಮೀಸಲು ಅನುಪಾತ ಕಡಿತ

ನಗದು ಮೀಸಲು ಅನುಪಾತವನ್ನು ಗರಿಷ್ಟ ಶೆಕಡ ೧೫ ರಿಂದ ಶೆಕಡ ೩ ರಿಂದ ೫ಕ್ಕೆ ಪ್ರಗತಿಪರವಾಗಿ ತಗ್ಗಿಸಬೆಕು ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಹೆಚ್ಚಾಗಿ ತೆರೆದ ಮಾರುಕಟ್ಟೆ ನೀತಿಯನ್ನು ಅವಲ೦ಬಿಸಬೆಕು ಎಂದು ಸಮಿತಿ ಮಾಡಿತು.

೩.ನಿರ್ದೆಶಿತ ಸಾಲ ಕಾರ್ಯಕ್ರಮಗಳು ರದ್ಧತಿ

 ಸಮಿತಿಯು ನಿರ್ದೀಶಿತ ಸಾಲ ಕಾರ್ಯಕ್ರಮಗಳು ನಿಧಾನವಾಗಿ ರದ್ದುಗೊಳಿಸಬೆಕು ಎಂದು ಶಿಫಾರಸು ಮಾಡಿತು.ಅದು ಆದ್ಯತಾ ವಲಯವನ್ನು ಕೇವಲ ಅತಿಸಣ್ಣ ರೈತರು, ಗ್ರಮೀಣ ಕುಶಲಕರ್ಮಿಗಳು,ಗುಡಿ ಮತ್ತು ಗ್ರಮೀಣ ಕೈಗಾರಿಕೆಳು ಮು೦ತಾದುವನ್ನು ಒಳಗೊ೦ಡಿರುವ೦ತಹ ವ್ಯಖ್ಯನ ನೀಡಲು ಕರೆಕೊಟ್ಟಿತು.ಈ ವಲಯಕ್ಕೆ ನೀಡಲಾಗು೮ವ ಸಾಲವು ಬ್ಯಾಂಕುಗಳ ಒಟ್ಟು ಸಾಲದ ಶಕಡ ೧೦ ರಷ್ಟಿರಬೆಕಕು ಹಾಗು ಇದನ್ನೂ ಸಹ ಮೂರು ವರ್ಷಗಳ ನಂತರ ಮರು ಪರಿಶೀಲಿಸಬೆಕು ಎ೦ದಿತು.

೪.ಬಡ್ಡಿದರಗಳು ನಿಯಂತ್ರಣ ನಿರ್ಮೂಲನೆ

 ಬಡ್ಡಿ ದರಗಳ ಸ೦ರಚನೆಗೆ ಸ೦ಬ೦ಧಿಸಿದ೦ತೆ ಸಮಿತಿಯು ಬಡ್ದಿ ದರವು ಮಾರುಕಟ್ಟೆ ನಿರ್ಧರಿತವಾಗಿರಬೆಕು ಮತ್ತು ಬಡ್ಡಿ ದರದ ಮೆಲಿನ ಎಲ್ಲಾ ನಿಯಂತ್ರಣ ಮತ್ತು ಹತೂಟಿಗಳನ್ನು ರದ್ದುಗೊಳಿಸಬೆಕು ಎಂದು ಕರೆಕೊಟ್ಟಿತು.ಆದ್ಯತಾ ವಲಯಗಳಿಗೆ ನೀಡಲಾಗುವ ರಿಯಾಯಿತಿ ಬಡ್ಡಿ ದರ ಮತ್ತು IRDPಗೆ ನೀಡಲಾಗುವ ಸಹಾಯ ಧನವನ್ನು ರದ್ದುಗೊಳಿಸಬೆಕು ಎಂದು ಅದು ಹೆಳಿತು.

೫.ಬ್ಯಾಂಕಿಂಗ್ ಕ್ಷೇತ್ರದ ರಚನಾತ್ಮಕ ಮರುಸಂಘಟನೆ

 .ಬ್ಯಾಂಕಿಂಗ್ ವ್ಯವಹರಗಳಲ್ಲಿ ದಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ನರಸಿಹಮ್ ಸಮಿತಿಯು ಸಾರ್ವಜನಿಕ ವ್ಫ಼ಲಯ ಬ್ಯಾಂಕುಗಳ ಸಂಖ್ಯೆಯನ್ನು ವಿಲೀನ ಮತ್ತು ಸ೦ಪಾದನೆ ಮೂಲಕ ಕಡಿಮೆಗೊಳಿಸುವ೦ತೆ ಸೂಚಿಸಿತು.ಈ ಉದ್ದೆಶಕ್ಕಗಿ ಸಮಿತಿಯು ನಾಲ್ಕು ಹಂತಗಳ ಬ್ಯಾಂಕಿಂಗ್ ವ್ಯಸ್ದೆಯನ್ನು ಹೊ೦ದಲು ಸಲಹೆ ಮಾಡಿತು.ಎಸ್ಬಿಐ ಸೇರಿದ೦ತೆ ೩ ರಿಂದ ೪ .ಬ್ಯಾಂಕುಗಳು ಅಂತಾರಾಷ್ಟ್ರೀಯ ಲಕ್ಷಣ ಹೊ೦ದಬೇಕು.೮ ರಿಂದ ೧೦ ರಾಷ್ಟ್ರೀಯ ಬ್ಯಾಂಕುಗಳು ದೇಶದಾದ್ಯ೦ತ ಶಖೆಗಳ ಜಾಲವನ್ನು ಹೊ೦ದಿರಬೇಕು.ಪ್ರದೇಶಿಕ ವ್ಯವಹರಗಳಿಗೆ ಸ್ಧಳೀಯ ಬ್ಯಾಂಕುಗಳು ಮತ್ತು ತಳಮಟ್ಟದಲ್ಲಿ ಕೃಷಿ ಮತ್ತು ಸ೦ಬಧಿ ಚಟುವಟಿಕೆಗಳಿಗೆ ಹ್ಯನಕಸು ಒದಗಿಸಲು ಗ್ರಾಮೀಣಾ .ಬ್ಯಾಂಕುಗಳು ಇರಬೇಕು ಎಂದು ಅದು ಹೇಳಿತು.

೬..ಬ್ಯಾಂಕುಗಳ ರಾಷ್ಟ್ರೀಕರಣ ಇಲ್ಲ

 ಬ್ಯಾಂಕುಗಳ ರಾಷ್ಟ್ರೀಕರಣ ವಿಚಾರಕ್ಕೆ ಸ೦ಬ೦ಧಿಸಿದ೦ತೆ ಸಮಿತಿಯು ಸರ್ಕಾರ ಇನ್ನು ಮುಂದೆ ಯಾವುದೇ ಬ್ಯಾಂಕುಗಳ ರಾಷ್ಟ್ರೀಕರಣ ಈಳ್ಳಾ ಎಂದು ಘೋಷಿಸಬೇಕು ಎಂದು ಸಲಹೆ ನೀಡಿತು.

೭.ಹೊಸ ಬ್ಯಾಂಕುಗಳ ಸ್ಧಾಒಅನೆಗೆ ಅನುಮತಿ

ಸಮಿತಿಯು ಖಾಸಗ ವಲಯದಲ್ಲಿ ಹೊಸ ಬ್ಯಾಂಕುಗಳ ಸ್ದಾಪನೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿ ನೀಡಬೇಕು ಎಂದು ಹೇಳಿತು.ಸಾರ್ವಜನಿಕರ ವಲಯದ ಬ್ಯಾಂಕುಗಳ ನಡುವೆ ಹತೋಟಿ,ನಿಯ೦ತ್ರಣ,ಆಥಿತ್ಯ ಇತ್ಯದಿ ವಿಚರಗಳಲ್ಲಿ ಯಾವುದೇ ತರತಮ್ಯ ಇರಬರದು ಎಂದು ಅದು ಹೇಳಿದೆ.

೮.ವೆದೇಶಿ ಬ್ಯಾಂಕುಗಳಿಗೆ ಅನುಮತಿ

 ದೇಶದಲ್ಲಿ ವಿದೇಶಿ ಬ್ಯಾಂಕುಗಳು ಶಾಖೆಗಳನ್ನು ತೆರೆಯೆಲು,ಜ೦ಟಿ ಉದ್ಯಮ ಸ್ಧಾಪಿಸಲು ಸರ್ಕಾರ ಅನುಮತಿ ನೀಡಬೇಕು ಎಂದು ಸಮಿತಿ ಕರೆಕೂಟ್ಟೆತು.

೯.ಕೆಟ್ಟ ಮತ್ತು ಅನುಮಾನಸ್ವದ ಸಾಲಗಲು

 ರಾಷ್ಟ್ರೇಕ್ರುತು ಬ್ಯಾಂಕುಗಳು ಮತ್ತು ಹನಕಾಸು ಸ೦ಸ್ದೆಸಳಿ೦ದ ಕೆಲಭಗದ ಕೆಟ್ಟ ಮತ್ತು ಅನುಮಾನಸ್ವದ ಸಾಲಗಳನ್ನು ಸೋಡಿಯಲ್ಲಿ ಪಡೆಯಲು ಅನುವಾಗುವತೆ ಆಸ್ತಿ ಪುನರ್ ನಿರ್ಮಾಣ ನಿಧಿಯನ್ನು ಸ್ದಾಪಿಸುವ೦ತೆ ಸಮಿತಿ ಹೆಳಿತು. 

೧೦.ದ್ವಿಮುಖಹತೋಟಿಯ ರದ್ದು

  ಪ್ರಸ್ತುತ ಬ್ಯಾಂಕಿಂಗ್ ವ್ಯವಸ್ದೆಯ ಹತೋಟಿಗೆ ಇರುವ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಹನಕಾಸಿನ ಸಚಿವಲಯದ ಬ್ಯಾಂಕಿಂಗ್ ವಿಭಾಗದ ದ್ವಿಮುಖ ಹತೋಟಿಯನ್ನು ರದ್ದುಗೋಳಿಸಲು ಸಮಿತಿ ಕರೆಕೊಟ್ಟಿತು.

೧೧..ಸಾರ್ವಜನಿಕ ಬ್ಯಾಂಕುಗಳುಲ್ಲಿ ಹೂಡಿಕೆಗೆತ

   ಇತೆರೆ ಸಾರ್ವಜನಿಕ ಉದ್ಯಮಗಳಂತೆ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲೂ ಕೆಲವೊಂದು ಭಗದ ಷೇರು ಹನವನ್ನು ಹೂಡಿಕೆ ಹಿಂತೆಗೆತ ಮೂಲಕ ಖಾಸಗಿಯವರಿಗೆ ಮಾರಾಟ ಮಾಡಾಬೇಕು ಎಂದು ಸಮಿತಿ ಹೇಳಿತು.

೧೨.ಗ್ರಾಮಿನ ಬ್ಯಾಂಕಿಂಗ್ ಅಂಗಗಳ ಸ್ಧಪನೆ

   ಪ್ರತಿಯೊಂದು ಸಾರ್ವಜನಿಕ ವಲಯದ ಬ್ಯಾಂಕು ಒಂದು ಆಥವಾ ಅದಕ್ಕಿಂತ ಹೆಚ್ಚಿನ ಅಂಗಸ್ಧಗಳನ್ನು ಸ್ಧಾಪಿಸಿ ತಮ್ಮ ಎಲ್ಲಾ ಗ್ರಾಮಿಣ ಶಖೆಗಳನ್ನು ಅವುಗಳಿಗೆ ವಹಿಸಬೇಕು ಮತ್ತು ಅವುಗಳು ಪ್ರದೇಶಿಕ ಗ್ರಾಮೀನ ಬ್ಯಂಕುಗಳ ಮಾದರಿಯಲ್ಲಿರಬೇಕು ಎಂದು ಸಮಿತಿ ಹೇಳಿತು.

೧೩.ಸ್ವತಂತ್ರ ಸಿಬ್ಬಂದಿ ನೇಮಕಾತಿ

  ಬ್ಯಂಕುಗಳ ಆಧಿಕಾರಿಗಳ ಸಾರ್ವಜನಿಕ ನೇಮಕಾತಿ ಪದ್ದತಿಯನ್ನು ರದ್ದು ಗೋಳಿಸಬೇಕು,ಪ್ರಮುಖ ಹುದ್ದೆಗಳ ನೇಮಕಾತಿಯು ರಾಜಕೀಯ ಪರಿಗಣನೆಯಿಂಅದ ದೂರವಿರಬೇಕು ಮತ್ತು ಬ್ಯಂಕಿನ ಮುಖ್ಯ ಕಾರ್ಯನಿರ್ವಾಹಕನನ್ನು ಸ್ವತಂತ್ರ ಸಮಿತಿ ಆಯ್ಕೆ ಮಾಡಬೇಕು ಎಂದು ಸಮಿತಿ ಶಿಫಾರಸು ಮಾಡಿತು.

೧೪.ಕಂಪ್ಯೂಟರೀಕರಣ

   ಬ್ಯಂಕುಗಳ ಸೇವೆಯ ದಕ್ಷತೆಯನ್ನು ಸುಧಾರಿಸಲು ಮತ್ತು ಪೈಪೋಟಿ ಸಾಮರ್ಥ್ಯವನ್ನು ಹೆಚ್ಚಿಸಲ ಎಲ್ಲಾ ಬ್ಯಂಕುಗಳು ಬ್ಯಾಂಕಿಂಗ್ ಸೇವೆಯ ತ್ವರಿತ ಕಂಪ್ಯೂಟರೀಕರಣ ಮಾಡಬೇಕು ಎಂದು ಸಮಿತಿ ಹೇಳಿತು.
 1. ಬ್ಯಾಂಕಿಂಗ್ ವಲಯದ ಸುಧಾರಣಾ ಸಮಿತಿ (೧೯೯೮)
  ಭಾರತ ಸರ್ಕಾರದ ಹನಕಸು ಮಾಂತ್ರಲಯವು ಎಂ.ನರಸಿಹಮ್ ಅವರ ಅಧ್ಯಕ್ಷತೆಯಲ್ಲಿ ಇನೋಂದು ಸಮಿತಿಯನ್ನು ೧೯೯೮ರಲ್ಲಿ ರಚಿಸಿತು.ಈ ಸಮಿತಿಯನ್ನ್ನು ಬ್ಯಾಂಕಿಂಗ್ ವಲಯದ ಸುಧಾರಣೆಯ ಮೇಲಿನ ಸಮಿತಿ ಎಂದು ಕರೆಯಲಾಯಿತು.ಈ ಸಮಿತಿಯನ್ನು ಬ್ಯಾಂಕಿಂಗ್ ಅಲ್ಲಿಯವರೆಗೆ ಜಾರಿಗೊಂಡು ಬ್ಯಾಂಕಿಂಗ್ ವಲಯದ ಸುದಾರಣಾ ಕ್ರಮಗಳಾನ್ನು ಪರಿಶೀಲಿಸಲು ಮತ್ತು ಭಾರತಿಯ ಹನಕಾಸು ಮಾರುಕಟ್ಟೆಯನ್ನು ಬಲಪಡಿಸಲು ಮತ್ತು ಅಂತಾರಾಷ್ಟ್ರೀಯವಾಗಿ ಪೈಪೋಟಿಯುಕ್ಕ ಗೊಳಿಸಲು ಆವಶ್ಯವಿರುವ ಸುದಾರಣಾ ಕ್ರಮಗಳನ್ನು ಸೂಚಿಸಲು ಕೋರಲಾಯಿತು.ಈ ಸಮಿತಿಯು ತನ್ನ ಅಂತಿಮ ಪರದಿಯನ್ನು ೧೯೯೮ರ ಏಪ್ರಿಲ್ನಲ್ಲಿ ಸರ್ಕಾರಕ್ಕೆ ಸಲ್ಲಿಸಿತು.ಈ ಸಮಿತಿಯು ಪ್ರಮುಖ ಶಿಫಾರಸುಗಳು ಈ ಮುಂದಿನಂತಿವೆ;

ಅ)ಬಲ್ಲಿಷ್ಟ ಬ್ಯಾಮ್ಕಿಂಗ್ ವ್ಯವಸ್ಧೆಯ ನಿರ್ಮಾಣ ಆ)ಬ್ಯಾಂಕಿಂಗ್ ನಿಯಮಗಳ ವಿಮರ್ಶೆ ಮತ್ತು ತಿದ್ದುಪಡಿ ಇ)ಆಧಿಕ ಬಂಡವಾಳಾ ಪರ್ಯಾಪ್ತಿ ಅನುಪಾತವನ್ನು ನಿರ್ಧರಿಸುವುದು ಈ)ಬಲಹೀನ ಬ್ಯಂಕುಗಳ ಸ್ಧಿತಿ ಸುಧಾರಣೆ ಅಥವಾ ಮುಚುವುದು ಮತ್ತು ಉ)ಸಣ್ಣ ಸ್ಧಳೀಯ ಬ್ಯಂಕುಗಳ ಸ್ಥಾಪನೆ

''''ಪ್ರಮುಖ ಬ್ಯಾಂಕಿಂಗ್ ವಲಯದ ಸುಧಾರಣೆಗಳು'''

ನರಸಿಂಹಮ್ ಸಮಿತಿಯ ಶಿಫಾರಸು ಆಧಾರದ ಮೇಲೆ ಸರ್ಕಾರವು ಈ ಕೆಳಗಿನ ಮಹತ್ವದ ಸುಧಾರಣೆಗಳು ಜಾರಿಗೊಳಿಸಿದೆ

೧)ಎಸ್ಎಲ್ಆರ್ ಮತ್ತು CRR

 ಸರ್ಕಾರವು ಶನಬದ್ಧ ದ್ರವ್ಯತಾ ಅನುಪಾತವನ್ನು ಶೆಕಡ ೩೮.೫ ರಿಂದ ಬ್ಯಂಕು ನಗದು ಮೀಸಲು ಅನುಪಾತವನ್ನು ಶೆಕಡ ೧೫ರಿಂದ ಹಂತ ಹಂತವಾಗಿ ಕಡಿಮೆಗೊಳಿಸಿ ೨೦೦೯ರ ಅಕ್ಟೋಬರ್ ೨೭ರಂದು ಶೇಕಡ ೫ರಲ್ಲಿ ನಿಲ್ಲಿಸಿತು.ನಂತರ ಜನವರಿ ೨೦೧೨ರಲ್ಲಿ ಇದನ್ನು ಶೇಕಡ ೫.೫ಕ್ಕೆ ಏರಿಸಿತು.ಶೇಕಡ ೧೦ರ ಹೆಚುವರಿ ನಗದು ಮೀಸಲು ಅನುಪಾತವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.

೨)ಬಡ್ದಿ ದರಗಳ ನಿಯಂತ್ರಣಹಿತತೆ ಬಡ್ಡಿದರದ ವ್ಯವಸ್ದೆಯನ್ನು ಉದಾರೀಕಕರಣವು ಹನಕಸು ವಲಯದ ಸುದಾರಣೆಯ ಅತ್ಯಂತ ಮಹತ್ವದ ಭಾಗವ್ವಾಗಿದೆ.ಈಗ ಬಡ್ಡಿ ದರಗಳ ಸಂರಚನೆಯು ಸರಳವಾಗಿ ಮುಕ್ತವಾಗಿವೆ.೧೯೯೪-೧೯೯೫ರ ವೇಳೆಗೆ ಬಡ್ಡಿ ದರಗಳ ಹಂತಗಳನ್ನು ಕ್ರಮೇಣವಾಗಿ ೨೦ ರಿಂದ ೨ಕ್ಕೆ ಇಲಿಸಲಾಗಿದೆ.ಈಗ ಬ್ಯಂಕುಗಳು ತಮ್ಮ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಕನಿಷ್ಠ ಮತ್ತು ಗರಿಷ್ಠ ದರದ ಇತಿಮಿತಿಯ ನಡುವೇ ನಿರ್ಧರಿಸಿಕೊಳ್ಳಲು ಸ್ವತಂತ್ರ.

೩)ವಿವೇಕಯುತ ನಿಯಂತ್ರಣ ಮತ್ತು ಮೇಲುಸ್ತುವಾರಿ

೪)ಬಂಡವಾಳ ಅರ್ಹತೆ ರೂಢಿಗಳನ್ನು

೫)ಬಂಡವಾಳ ಮಾರುಕಟ್ಟೆಯಲ್ಲಿ ಪ್ರವೇಶ

೬)ಕಾರ್ಯಾಚರಣೆಗಳ ಸ್ವಾತಂತ್ರ್ಯ

೭)ಪೈಪೋಟಿ

೮)ಪರಿಣಾಮಕಾರಿ ಮೇಲ್ವಿಚಾರಣೆ

೯)ಸ್ಥಳೀಯ ವಲಯ ಬ್ಯಾಂಕುಗಳು

[೧] [೨]

 1. https://en.wikipedia.org/wiki/Banking_in_India
 2. ಭಾರತದ ಆರ್ಥಿಕ ಅಭಿವೃದ್ಧಿ