ಭಾರತದಲ್ಲಿ ಅಧಿಕ ರಕ್ತದೊತ್ತಡ
ಗೋಚರ
ರಕ್ತದೊತ್ತಡ
[ಬದಲಾಯಿಸಿ]- “ಹೃದಯ ಆವರ್ತನ”ವು (The cardiac cycle) ಹೃದಯವು ದೇಹದಾದ್ಯಂತ ರಕ್ತವನ್ನು ತಳ್ಳುವ ಕ್ರಿಯೆಯಲ್ಲಿ ಸಂಭವಿಸುವ, ಕುಗ್ಗುವ (ಸಂಕುಚಿಸುವ) ಮತ್ತು (ಹಿಗ್ಗಿ) ವಿಶ್ರಾಂತಿ ಪಡೆಯುವ ಕ್ರಿಯೆಯನ್ನು ವಿವರಿಸಲು ಬಳಸುವ ಪದ. “ಹೃದಯ ಬಡಿತದ ದರ” (Heart rate), ಹೃದಯದ ಆವರ್ತನವನ್ನು ವಿವರಿಸಲು ಬಳಸಲಾಗುವ ಒಂದು ಪದ. ಇದು ನಾಲ್ಕು ಪ್ರಮುಖ ಚಿಹ್ನೆಗಳು ಉಳ್ಳದ್ದು ಎಂದು ಹೆಸರುವಾಸಿಯಾಗಿದೆ ಮತ್ತು ನಿಯಂತ್ರಿತ ವೇರಿಯಬಲ್ (regulated variable) (ಪಲ್ಲಟ) ಉಳ್ಳದ್ದಾಗಿದೆ. ಸಾಮಾನ್ಯವಾಗಿ ಇದು ಒಂದು ನಿಮಿಷದಲ್ಲಿ ಹೃದಯವು (ಹೃದಯ ಬಡಿತಗಳ) ಸಂಕೋಚನವನ್ನು ಹೊಂದುವ ಸಂಖ್ಯೆಯಾಗಿರುತ್ತದೆ ಮತ್ತು "ನಿಮಿಷಕ್ಕೆ ಬಡಿತ ಅಥವಾ ಬೀಟ್ಸ್" ಎಂದು ವ್ಯಕ್ತಪಡಿಸಲಾಗುತ್ತದೆ (ಬಿಪಿಎಂ / ನಿಮಿಷಕ್ಕೆ ಹೃ..ಬಡಿತ ("beats per minute"=bpm)
- ಸಂಕುಚನದಲ್ಲಿ ಹೃದಯ ಅಥವಾ ಹೃತ್’ಕುಕ್ಷಿಯಲ್ಲಿ ಸಂಕೋಚನದ ಒತ್ತಡದ ಅಲೆಗಳು ಉಂಟಾಗುವುವು. ಆ ಅಲೆಗಳು ಹೆಚ್ಚು ಸ್ಥಿತಿಸ್ಥಾಪಕವಾದ ಶುದ್ಧರಕ್ತನಾಳದಲ್ಲಿ (ಅಪಧಮನಿಯಲ್ಲಿ) ಅದರ ಗೋಡೆಗಳನ್ನು ತಾಳಬದ್ಧವಾಗಿ ಸರಿಸಿ ಹಿಗ್ಗಿಸುವುವು. ಇದರಿಂದ ಅಪಧಮನಿಯ ವಿಕೋಚನ ಗುಣವುಳ್ಳ ನಾಳದ ಗೋಡೆಯ ಮತ್ತು ಆಗ ಹಿಗ್ಗಲು ಅನುಕೂಲಿಯಾದ ರಕ್ತ ನಾಳದ ಮುಂಭಾಗದ ಗಿಣ್ಣುವಿಗೆ ರಕ್ತ ನುಗ್ಗುತ್ತದೆ. ಈ ನಾಳ ಮಿಡಿಯುವ ಗುಣದಿಂದ ಒತ್ತಡ ಹೆಚ್ಚಾಗುತ್ತದೆ, ಹೀಗೆ ಒತ್ತಡ ಮತ್ತು ಮಿಡಿಯುವಿಕೆಯಿಂದ ರಕ್ತ ಮುನ್ನುಗ್ಗುತ್ತದೆ. ಇದನ್ನು ಶುದ್ಧರಕ್ತನಾಳದ ಮೇಲೆ ಬರಳಿನಿಂದ ಮುಟ್ಟಿ ಪತ್ತೆ ಮಾಡಬಹುದು. ಶುದ್ಧ ರಕ್ತನಾಳದ (ಅಪಧಮನಿಯ) ಗೋಡೆಯಲ್ಲಿ ಬಿಟ್ಟು ಬಿಟ್ಟು ಆಗುವ ಹಿಗ್ಗುವಿಕಯಿಂದ ನಾಡಿ ಬಡಿತ ಉಂಟಾಗುವುದು.
ಹೃದಯ ಆವರ್ತನ (Cardiac Cycle)
[ಬದಲಾಯಿಸಿ]- ಪ್ರತಿಯೊಂದು “ಹೃದಯಬಡಿತ” ಮೂರು ಪ್ರಮುಖ ಹಂತಗಳನ್ನು ಒಳಗೊಂಡಿದೆ. ಹೃತ್ಕರ್ಣದ ಸಂಕುಚನ, ಹೃತ್ಕುಕ್ಷಿಯ ಸಂಕುಚನ ಮತ್ತು ಪೂರ್ಣ ಹೃದಯದ ವ್ಯಾಕೋಚನ. (ಕುಗ್ಗುವಿಕೆ-ಹಿಗ್ಗುವಿಕೆ)
- 1. ಹೃತ್ಕರ್ಣದ ಸಂಕೋಚನ (Atrial systole) ಹೃತ್ಕರ್ಣದ ಸಂಕುಚನದಿಂದ ಭಾಗದ ಹೃತ್ಕುಕ್ಷಿಯ ತುಂಬುವಿಕೆ;
- 2. ಹೃತ್ಕುಕ್ಷಿಯ ಸಂಕೋಚನ (Ventricular systole): ಹೃತ್ಕುಕ್ಷಿಗಳ ಸಂಕೋಚನದಿಂದ ರಕ್ತ, ಶ್ವಾಸಕೋಶದ ರಕ್ತನಾಳಗಳಿಗೆ (ಅಪಧಮನಿಯ) ಅಥವಾ ಅಯೋರ್ಟಾ ಶುದ್ಧರಕ್ತನಾಳಕ್ಕೆ (ಎಡದ ಮಹಾಪಧಮನಿಗೆ) ಚಿಮ್ಮುತ್ತವೆ (ಎಡ ಮತ್ತು ಬಲ ಹೃತ್ಕುಕ್ಷಿಯನ್ನು ಅವಲಂಬಿಸಿ.). ಹೃತ್ಕರ್ಣದ ಮತ್ತು ಹೃತ್ಕುಕ್ಷಿಯ ಸಂಕೋಚನ ವ್ಯಾಕೋಚನಗಳು ಒಟ್ಟಿಗೆ ಆಗುತ್ತದೆ.
- 3 ವಿಶ್ರಾಂತಿ ಸಮಯ: ಸಂಪೂರ್ಣ ಹೃದಯದ ಸಂಕುಚನ- ವ್ಯಾಕೋಚನ ನಂತರ ಹೃದಯ ಕ್ಷಣಾರ್ಧ ವಿಶ್ರಾಂತಿ ಪಡೆದು ಮತ್ತೊಮ್ಮೆ ರಕ್ತ ತುಂಬಲು ರಕ್ತ ಕೋಣೆಗಳ ಹಿಗ್ಗು-ಕುಗ್ಗುವ ಚಕ್ರವನ್ನು ಬಿಡುವಿಲ್ಲದೆ ಮುಂದುವರಿಸುವುದು.
ಹಿಗ್ಗಿದ-ಕುಗ್ಗಿದ ರಕ್ತದೊತ್ತಡ (Systolic and Diastolic Blood Pressure)
[ಬದಲಾಯಿಸಿ]- ಹೃದಯದ ಸಂಕೋಚನದ ಮತ್ತು ವ್ಯಾಕೋಚನದ ಆವರ್ತನದುದ್ದಕ್ಕೂ, ಸಕ್ರಿಯ ಹೃತ್ಕುಕ್ಷಿಯ ಸಂಕೋಚನದ ಹಂತಗಳಲ್ಲಿ ಶುದ್ಧರಕ್ತನಾಳದ(ಅಪಧಮನಿಯ) ರಕ್ತದ ಒತ್ತಡವು ಹೆಚ್ಚಾಗುತ್ತದೆ ಮತ್ತು ಹೃತ್ಕುಕ್ಷಿಯ ಭಾಗದ ತುಂಬುವಿಕೆಯ ಸಮಯದಲ್ಲಿ ಅಂದರೆ ಹೃತ್ಕರ್ಣದ ಸಂಕುಚನ ಸಮಯದಲ್ಲಿ ರಕ್ತದ ಒತ್ತಡವು ಕಡಿಮೆ ಆಗುವುದು.
- ಈ, ಅಸ್ತಿತ್ವವುಳ್ಳ ಎರಡು ರೀತಿಯ ರಕ್ತದೊತ್ತಡಗಳು ಅಳೆಯಬಹುದಾದವು.
- ಒಂದು ಸಂಕೋಚನದ ಸಮಯದಲ್ಲಿ: ಸಂಕೋಚನದ ರಕ್ತದೊತ್ತಡ ಮತ್ತು ಎರಡನೆಯದು ವಿಶ್ರಾಂತಿ ಸಮಯದಲ್ಲಿ: ವ್ಯಾಕೋಚನದ ರಕ್ತದೊತ್ತಡ; ಹೆಚ್ಚು. (ಹೃದಯ ಕುಗ್ಗುವುದು ಮತ್ತು ಹಿಗ್ಗುವುದು -ಸಂಕೋಚನ ಮತ್ತುವ್ಯಾಕೋಚನ) ಸಂಕೋಚನದ ರಕ್ತದೊತ್ತಡವು ವ್ಯಾಕೋಚನದ ರಕ್ತದೊತ್ತಡಕ್ಕಿಂತ ಯಾವಾಗಲೂ ಹೆಚ್ಚಿನದು. ಸಾಮಾನ್ಯವಾಗಿ ಸಂಕೋಚನದ ರಕ್ತದೊತ್ತಡ ಮತ್ತು ವ್ಯಾಕೋಚನದ ರಕ್ತದೊತ್ತಡವನ್ನು ಮೇಲೆ/ಕೆಳಗೆ; ಒಂದು ಅನುಪಾತ ಕ್ರಮದಲ್ಲಿ ಮಾಹಿತಿ ನೀಡಲಾಗುತ್ತದೆ. ಉದಾಹರಣೆಗೆ, 115/75 ಎಂ.ಎಂ. ಎಹ್.ಜಿ.( mmHG.) ; 115 ಎಂ.ಎಂ. ಎಹ್.ಜಿ.. ಒಂದು ಸಂಕೋಚನದ ರಕ್ತದೊತ್ತಡ ಮತ್ತು ಇನ್ನೊಂದು ವ್ಯಾಕೋಚನದ ರಕ್ತದೊತ್ತಡ. ಅಥವಾ 75 ಎಂ.ಎಂ. ಎಹ್.ಜಿ.. ಎಂದು ಸೂಚಿಸುತ್ತದೆ. ರಕ್ತದೊತ್ತಡದ ಸಾಮಾನ್ಯ ಶ್ರೇಣಿ 90/60 ಮತ್ತು 120/80 ಎಂ.ಎಂ. ಎಹ್.ಜಿ (mmHG.) ನಡುವೆ ಇರುವುದು. ಇದಕ್ಕೂ ಹೆಚ್ಚಿನದು ಇರುವಾಗ ಅಧಿಕ ರಕ್ತದೊತ್ತಡ ಸೂಚಿಸಬಹುದು (hypertension: High Blood Pressure). ಕಡಿಮೆ ಇದ್ದಾಗ ಒತ್ತಡ ರಕ್ತದೊತ್ತಡ ಸೂಚಿಸಬಹುದು ಶ್ರೇಣಿಯ ಹೆಚ್ಚಿನ ಒತ್ತಡ, ಕಡಿಮೆ ರಕ್ತದೊತ್ತಡ ಸೂಚಿಸಬಹುದು (hypotension: Low Blood Pressure).. ಆದರೂ ಇದು ನೇರವಾಗಿ ಹೃದಯ ಚಕ್ರದಲ್ಲಿ ಹೃದಯದ ರಕ್ತದ ಪ್ರಮಾಣ ಮತ್ತು ಅದರ ಹೊರತಳ್ಳುವಿಕೆಯನ್ನು (ಔಟ್ಪುಟ್) ಆಧರಿಸಿದೆ ಸಂಬಂಧಿಸಿದೆ (ಪರಿಸ್ಥಿತಿಗೆ ತಕ್ಕಂತೆ ಅನಿಯಂತ್ರಿತ ಅಥವಾ ಅಸ್ಥಿರವಾಗಿದೆ).[೧]
ಭಾರತದಲ್ಲಿ ಅಧಿಕ ರಕ್ತದೊತ್ತಡ
[ಬದಲಾಯಿಸಿ]- ಜಗತ್ತಿನಲ್ಲಿ 113 ಕೋಟಿ ಜನರು ಅಧಿಕ ರಕ್ತದೊತ್ತಡ ಹೊಂದಿದ್ದಾರೆ. ಅದರಲ್ಲಿ ಭಾರತದ 20 ಕೋಟಿ ವಯಸ್ಕರು ಸೇರಿದ್ದಾರೆ ಎಂದು ಲಂಡನ್ ಇಂಪೀರಿಯಲ್ ಕಾಲೇಜ್‌ನ ವಿಜ್ಞಾನಿಗಳು ನಡೆಸಿದ ಅಧ್ಯಯನದ ವರದಿ ಹೇಳಿದೆ.
- ಲಂಡನ್‌ನ ‘ದಿ ಲ್ಯಾನ್ಸೆಟ್ ಜರ್ನಲ್’ನಲ್ಲಿ ಈ ವರದಿಯ ವಿವರಗಳು ಪ್ರಕಟವಾಗಿವೆ. ಅಧಿಕ ರಕ್ತದೊತ್ತಡ ಹೊಂದಿರುವವರ ಸಂಖ್ಯೆ ಕಳೆದ 40 ವರ್ಷಗಳಲ್ಲಿ ಎರಡು ಪಟ್ಟು ಹೆಚ್ಚಿದೆ. 2015ರಲ್ಲಿ ಅಧಿಕ ರಕ್ತದೊತ್ತಡ ಹೊಂದಿರುವ ಜಗತ್ತಿನ ಅರ್ಧಕ್ಕಿಂತಲೂ ಹೆಚ್ಚು ವಯಸ್ಕರು ಏಷ್ಯಾದಲ್ಲಿ ವಾಸಿಸಿದ್ದರು ಹಾಗೂ ಈ ಸಮಸ್ಯೆ ಹೊಂದಿರುವ 26 ಕೋಟಿಯಷ್ಟು ಜನರು ಚೀನಾದಲ್ಲಿದ್ದಾರೆ ಎಂದು ಈ ಅಧ್ಯಯನ ತಿಳಿಸಿದೆ.
- ರಕ್ತದೊತ್ತಡಕ್ಕೆ ಸಂಬಂಧಿಸಿದಂತೆ ಸಂಶೋಧಕರು 1975ರಿಂದ 2015ರವರೆಗೆ ಎಲ್ಲ ದೇಶಗಳಲ್ಲಾದ ಬದಲಾವಣೆಗಳನ್ನು ಅಭ್ಯಸಿಸಿದ್ದಾರೆ. 2015ರಲ್ಲಿ ಮಹಿಳೆಯರಿಗಿಂತ ಪುರುಷರು ಅಧಿಕ ಸಂಖ್ಯೆಯಲ್ಲಿ ಈ ಸಮಸ್ಯೆ ಹೊಂದಿದ್ದಾರೆ ಎಂದಿದೆ ಸಂಶೋಧನೆ. ಜಾಗತಿಕವಾಗಿ 59 ಕೋಟಿಗಿಂತಲೂ ಹೆಚ್ಚು ಪುರುಷರು ಹಾಗೂ 52 ಕೋಟಿಗಿಂತಲೂ ಹೆಚ್ಚು ಮಹಿಳೆಯರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ.
- ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಲ್ಲಿ ರಕ್ತದೊತ್ತಡ ಸಮಸ್ಯೆ ಕಡಿಮೆಯಾಗಿದೆ. ಆದರೆ ಅಭಿವೃದ್ಧಿ ಹೊಂದುತ್ತಿರುವ ಅಥವಾ ಜನರ ಆದಾಯ ಕಡಿಮೆಯಿರುವ ರಾಷ್ಟ್ರಗಳಲ್ಲಿ ಈ ಸಮಸ್ಯೆ ಹೆಚ್ಚಾಗಿದ್ದು, ಪ್ರಮುಖವಾಗಿ ದಕ್ಷಿಣ ಏಷ್ಯಾ ಮತ್ತು ಆಫ್ರಿಕಾದಲ್ಲಿರುವ ದೇಶಗಳು ಇದರಲ್ಲಿ ಸೇರಿವೆ ಎನ್ನುತ್ತದೆ ಅಧ್ಯಯನ.
- ‘1975ರಲ್ಲಿದ್ದ ನಂಬಿಕೆಯಂತೆ ರಕ್ತದೊತ್ತಡ ಸಮಸ್ಯೆಯು ಶ್ರೀಮಂತಿಕೆಗೆ ಸಂಬಂಧಿಸಿಲ್ಲ, ಬದಲಿಗೆ ಬಡತನಕ್ಕೆ ಸಂಬಂಧಿಸಿದ ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ’ ಎಂದು ಇಂಪೀರಿಯಲ್ ಕಾಲೇಜಿನ ಅಧ್ಯಾಪಕ ಮಜಿದ್ ಎಜ್ಜತಿ ಹೇಳಿದ್ದಾರೆ. ಈ ಸಮಸ್ಯೆಗೆ ಸ್ಪಷ್ಟವಾದ ಕಾರಣಗಳು ಸಿಕ್ಕಿಲ್ಲ. ಆದರೆ ಇದು ಸಮಗ್ರವಾದ ಉತ್ತಮ ಆರೋಗ್ಯಕ್ಕೆ ತಳಕು ಹಾಕಿಕೊಂಡಿರಬಹುದು. ಜೊತೆಗೆ ಹಣ್ಣು ಮತ್ತು ತರಕಾರಿಗಳ ಸೇವನೆ ಹೆಚ್ಚಾಗಿರುವುದು ಇದಕ್ಕೆ ಕಾರಣವಿರಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.[೨]
ನೋಡಿ
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]- ↑ "ಬೌಂಡ್ಲೆಸ್. "ಹೃದಯ ಆವರ್ತನ. 'ಅನಂತ ಅಂಗರಚನಾಶಾಸ್ತ್ರ ಮತ್ತು ಶರೀರಶಾಸ್ತ್ರ. ಮಿತಿಯಿಲ್ಲದ ಹೃದಯ ಆವರ್ತನ,29 ಜುಲೈ.2016". Archived from the original on 2016-11-22. Retrieved 2016-11-19.
- ↑ 20 ಕೋಟಿ ಭಾರತೀಯರಿಗೆ ಅಧಿಕ ರಕ್ತದೊತ್ತಡ’;19 Nov, 2016