ಭಾರತದಲ್ಲಿನ ಮ್ಯೂಚುಯಲ್ ನಿಧಿಗಳು
ಭಾರತದಲ್ಲಿ ಬಹಳಷ್ಟು ಹಿಂದೆಯೇ, ಅಂದರೆ ೧೯೬೩ರಲ್ಲಿಯೇ ಮೊದಲ ಮ್ಯೂಚುಯಲ್ ನಿಧಿಯು ಪರಿಚಯಿಸಲ್ಪಟ್ಟಿತು. ಈ ವರ್ಷದಲ್ಲಿ ಭಾರತ ಸರ್ಕಾರವು ಯುನಿಟ್ ಟ್ರಸ್ಟ್ ಆಫ್ ಇಂಡಿಯಾವನ್ನು (UTI) ಪ್ರಾರಂಭಿಸಿತು. ೧೯೮೭ರವರೆಗೂ ಸದರಿ UTI ಭಾರತೀಯ ಮ್ಯೂಚುಯಲ್ ನಿಧಿ ಮಾರುಕಟ್ಟೆಯಲ್ಲಿ ಒಂದು ಏಕಸ್ವಾಮ್ಯವನ್ನು ಅನುಭವಿಸಿತು ಎನ್ನಬಹುದು. ೧೯೮೭ರ ನಂತರ ಸರ್ಕಾರಿ ನಿಯಂತ್ರಿತ ಇತರ ಭಾರತೀಯ ಹಣಕಾಸಿನ ಕಂಪನಿಗಳು ತಮ್ಮದೇ ಆದ ನಿಧಿಗಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಈ ವಲಯಕ್ಕೆ ಪಾದಾರ್ಪಣ ಮಾಡಿದವು. ಇಂಥವುಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಇತ್ಯಾದಿಗಳು ಸೇರಿದ್ದವು. ಕಾಂಗ್ರೆಸ್ ನೇತೃತ್ವದ ಸರ್ಕಾರವು ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣಗಳ (LPG) ಪ್ರಚಲಿತ ಆಡಳಿತ ಪದ್ಧತಿಯ ಅಡಿಯಲ್ಲಿ ಐತಿಹಾಸಿಕ ಸಾಂವಿಧಾನಿಕ ತಿದ್ದುಪಡಿಗಳನ್ನು ಮಂಡಿಸಿದಾಗ, ಈ ಮಾರುಕಟ್ಟೆಯು ಖಾಸಗಿ ವ್ಯವಹಾರಸ್ಥರಿಗೆ ತೆರೆದುಕೊಂಡಂತಾಯಿತು. ಭಾರತದಲ್ಲಿ ಕಾರ್ಯನಿರ್ವಹಿಸುವಲ್ಲಿನ ಮೊದಲ ಖಾಸಗಿ ವಲಯದ ನಿಧಿ ಎಂಬ ಕೀರ್ತಿಗೆ ಕೊಥಾರಿ ಪಯನೀರ್ ಪಾತ್ರವಾಯಿತಾದರೂ, ನಂತರದಲ್ಲಿ ಇದು ಫ್ರಾಂಕ್ಲಿನ್ ಟೆಂಪಲ್‌ಟನ್ ಜೊತೆಯಲ್ಲಿ ವಿಲೀನಗೊಂಡಿತು.
ಪ್ರಸಕ್ತ ಸನ್ನಿವೇಶ
[ಬದಲಾಯಿಸಿ]ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ನಿಧಿ ಸಂಸ್ಥೆಗಳಲ್ಲಿ ಇವು ಸೇರಿವೆ:
ಫೋರ್ಟಿಸ್ Archived 2010-07-05 ವೇಬ್ಯಾಕ್ ಮೆಷಿನ್ ನಲ್ಲಿ.
ಬಿರ್ಲಾ ಸನ್‌ಲೈಫ್ Archived 2011-02-03 ವೇಬ್ಯಾಕ್ ಮೆಷಿನ್ ನಲ್ಲಿ.
ಬ್ಯಾಂಕ್ ಆಫ್ ಬರೋಡಾ Archived 2011-02-03 ವೇಬ್ಯಾಕ್ ಮೆಷಿನ್ ನಲ್ಲಿ.
HDFC
ING ವೈಶ್ಯ Archived 2010-12-31 ವೇಬ್ಯಾಕ್ ಮೆಷಿನ್ ನಲ್ಲಿ.
ICICI ಪ್ರುಡೆನ್ಷಿಯಲ್ Archived 2009-06-19 ವೇಬ್ಯಾಕ್ ಮೆಷಿನ್ ನಲ್ಲಿ.
SBI ಮ್ಯೂಚುಯಲ್ ಫಂಡ್ Archived 2011-04-29 ವೇಬ್ಯಾಕ್ ಮೆಷಿನ್ ನಲ್ಲಿ.
ಟಾಟಾ
ಕೋಟಕ್ ಮಹೀಂದ್ರಾ Archived 2011-01-29 ವೇಬ್ಯಾಕ್ ಮೆಷಿನ್ ನಲ್ಲಿ.
ಯುನಿಟ್ ಟ್ರಸ್ಟ್ ಆಫ್ ಇಂಡಿಯಾ
ರಿಲಯೆನ್ಸ್ Archived 2019-09-04 ವೇಬ್ಯಾಕ್ ಮೆಷಿನ್ ನಲ್ಲಿ.
IDFC
ಫ್ರಾಂಕ್ಲಿನ್ ಟೆಂಪಲ್‌ಟನ್
ಸುಂದರಮ್ ಮ್ಯೂಚುಯಲ್ ಫಂಡ್
ರೆಲಿಗೇರ್ ಮ್ಯೂಚುಯಲ್ ಫಂಡ್ Archived 2010-12-19 ವೇಬ್ಯಾಕ್ ಮೆಷಿನ್ ನಲ್ಲಿ.
ಪ್ರಿನ್ಸಿಪಲ್ ಮ್ಯೂಚುಯಲ್ ಫಂಡ್ Archived 2010-12-17 ವೇಬ್ಯಾಕ್ ಮೆಷಿನ್ ನಲ್ಲಿ.
ಭಾರತದಲ್ಲಿ ಮ್ಯೂಚುಯಲ್ ನಿಧಿಗಳು ಒಂದು ಆಳವಾಗಿ ತಲುಪದ ಮಾರುಕಟ್ಟೆಯಾಗಿವೆ
[ಬದಲಾಯಿಸಿ]ಮ್ಯೂಚುಯಲ್ ನಿಧಿಗಳು ಎರಡು ದಶಕಗಳಿಗೂ ಹೆಚ್ಚಿನ ಅವಧಿಯಿಂದಲೂ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಈಗ ಅವುಗಳ ನಿರ್ವಹಣೆಯ ಅಡಿಯಲ್ಲಿನ ಸ್ವತ್ತುಗಳ ಮೌಲ್ಯವು ೭,೮೧,೭೧,೧೫೨ ಲಕ್ಷ ರೂಪಾಯಿಗಳವರೆಗೆ (೨೦೧೦ರ ಫೆಬ್ರುವರಿ ೨೮ರ ವೇಳೆಗೆ ಇದ್ದಂತೆ) ಮುಟ್ಟಿರುವುದರ ಹೊರತಾಗಿಯೂ (ಮೂಲ: ಅಸೋಸಿಯೇಷನ್ ಆಫ್ ಮ್ಯೂಚುಯಲ್ ಫಂಡ್ಸ್, ಇಂಡಿಯಾ) , ೧೦%ಗಿಂತ ಕಡಿಮೆ ಪ್ರಮಾಣದ ಭಾರತೀಯ ಕುಟುಂಬಗಳು ಮ್ಯೂಚುಯಲ್ ನಿಧಿಗಳಲ್ಲಿ ಹಣಹೂಡಿವೆ. ಬಾಸ್ಟನ್ ಅನಲಿಟಿಕ್ಸ್ Archived 2012-07-29 ವೇಬ್ಯಾಕ್ ಮೆಷಿನ್ ನಲ್ಲಿ. ಎಂಬ ಸಂಶೋಧನಾ ಮತ್ತು ವಿಶ್ಲೇಷಣಶಾಸ್ತ್ರ ಸಂಸ್ಥೆಯ ವತಿಯಿಂದ ಪ್ರಕಟಿಸಲ್ಪಟ್ಟಿರುವ, ಭಾರತದಲ್ಲಿನ ಮ್ಯೂಚುಯಲ್ ನಿಧಿಗಳ ಹೂಡಿಕೆಗಳ ಕುರಿತಾದ ಇತ್ತೀಚಿನ ವರದಿಯೊಂದು ಸೂಚಿಸುವ ಪ್ರಕಾರ, ಮ್ಯೂಚುಯಲ್ ನಿಧಿಗಳಲ್ಲಿ ತಮ್ಮ ಹಣವನ್ನು ವಿನಿಯೋಗಿಸಲು ಇಲ್ಲಿನ ಹೂಡಿಕೆದಾರರು ಹಿಂಜರಿಯುತ್ತಿದ್ದಾರೆ; ಮ್ಯೂಚುಯಲ್ ನಿಧಿಗಳು ಹೆಚ್ಚಿನ ಅಪಾಯವನ್ನು ಒಳಗೊಂಡಿರುತ್ತವೆ ಎಂಬ ಗ್ರಹಿಕೆಯನ್ನು ಈ ಹೂಡಿಕೆದಾರರು ಹೊಂದಿರುವುದರ ಜೊತೆಗೆ, ಮ್ಯೂಚುಯಲ್ ನಿಧಿಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಕುರಿತಾದ ಮಾಹಿತಿಯ ಕೊರತೆಯಿರುವುದೂ ಹೂಡಿಕೆದಾರರ ಈ ಹಿಂಜರಿಕೆಗೆ ಕಾರಣವಾಗಿದೆ. ೨೦೧೦ರ ಮಾರ್ಚ್ ವೇಳೆಗೆ ಇದ್ದಂತೆ, ೧೫ ಭಾರತೀಯ ನಗರಗಳು ಮತ್ತು ಪಟ್ಟಣಗಳಲ್ಲಿನ ಸರಿಸುಮಾರು ೧೦,೦೦೦ ಪ್ರತಿಕ್ರಿಯಾಶೀಲರ ಸಮೀಕ್ಷೆಯೊಂದರ ಮೇಲೆ ಈ ವರದಿಯು ಆಧರಿಸಿದೆ.ಸದ್ಯಕ್ಕೆ ಇಲ್ಲಿ ೪೩ ಮ್ಯೂಚುಯಲ್ ನಿಧಿಗಳಿವೆ.
ಮ್ಯೂಚುಯಲ್ ನಿಧಿಗಳಲ್ಲಿ ಹಣಹೂಡಿಕೆಯನ್ನು ಮಾಡದಿರುವುದರ ಪ್ರಧಾನ ಕಾರಣವು ನಗರದ ಗಾತ್ರದೊಂದಿಗೆ ಪರಸ್ಪರ ಸಂಬಂಧ ಹೊಂದಿರುವಂತೆ ತೋರುತ್ತದೆ. ಉದಾಹರಣೆಗೆ, ಕೆಳಗೆ ನೀಡಲಾಗಿರುವ ಲಿಖಿತಸಾಕ್ಷ್ಯದಲ್ಲಿ ಚಿತ್ರಿಸಲ್ಪಟ್ಟಿರುವಂತೆ, ಹೆಚ್ಚಿನ ಉಳಿತಾಯಗಳ ಪ್ರಮಾಣವನ್ನು ಹೊಂದಿರುವ ಪ್ರತಿಕ್ರಿಯಾಶೀಲರ ಪೈಕಿ, ಮಹಾನಗರಗಳು ಮತ್ತು ಶ್ರೇಣಿ Iರ ನಗರಗಳಲ್ಲಿ ವಾಸಿಸುವ ಹತ್ತಿರ ಹತ್ತಿರ ೪೦%ನಷ್ಟು ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ, ಇಂಥ ಹೂಡಿಕೆಗಳು ಅತ್ಯಂತ ಅಪಾಯಕಾರಿಯಾಗಿವೆ ಎಂದು ಉಲ್ಲೇಖಿಸಿದ್ದರೆ, ಶ್ರೇಣಿ IIರ ನಗರಗಳಲ್ಲಿ ವಾಸಿಸುವವರ ಪೈಕಿ ಸುಮಾರು ೩೩%ನಷ್ಟು ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ, ಇಂಥ ಸ್ವತ್ತುಗಳಲ್ಲಿ ಹೇಗೆ ಮತ್ತು ಎಲ್ಲಿ ಹಣಹೂಡುವುದು ಎಂಬುದು ತಮಗೆ ಗೊತ್ತಿರಲಿಲ್ಲವೆಂದು ತಿಳಿಸಿದ್ದಾರೆ.
ಮತ್ತೊಂದೆಡೆ, ಹಣಹೂಡಿರುವವರ ನಡುವಿನ ಹತ್ತು ಪ್ರತಿಕ್ರಿಯಾಶೀಲರ ಪೈಕಿ ಸುಮಾರು ಒಂಬತ್ತು ಮಂದಿ ತಮ್ಮ ಈ ಕ್ರಮದ ಕುರಿತು ಮಾತನಾಡುತ್ತಾ, ಇತರ ಸ್ವತ್ತು ವರ್ಗಗಳಿಗಿಂತ ಈ ಸ್ವತ್ತುಗಳು ಹೆಚ್ಚು ವೃತ್ತಿಪರವಾಗಿ ನಿರ್ವಹಿಸಲ್ಪಟ್ಟಿವೆ ಎಂದು ತಾವು ಭಾವಿಸಿದ್ದರಿಂದಲೇ ತಾವು ಹಾಗೆ ಹೂಡಿಕೆ ಮಾಡಿದ್ದು ಎಂಬುದನ್ನು ತಿಳಿಸಿದ್ದಾರೆ. ಮ್ಯೂಚುಯಲ್ ನಿಧಿಗಳಲ್ಲಿ ಹಣಹೂಡಿಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಪ್ರಭಾವಬೀರುವ ಕೆಲವೊಂದು ಅಂಶಗಳನ್ನು ಲಿಖಿತಸಾಕ್ಷ್ಯ ೨ ಪಟ್ಟಿಮಾಡುತ್ತದೆ.ಕುತೂಹಲಕರವೆಂಬಂತೆ, ಮ್ಯೂಚುಯಲ್ ನಿಧಿಗಳಲ್ಲಿ ತಾವು ಹಣಹೂಡಿಕೆ ಮಾಡದಿರುವುದಕ್ಕೆ ಅವು ಒಳಗೊಂಡಿರುವ “ಅಪಾಯ”ವನ್ನು ಪ್ರಧಾನ ಕಾರಣಗಳಲ್ಲಿ ಒಂದೆಂಬಂತೆ ಹೂಡಿಕೆದಾರರಲ್ಲದವರು ಉಲ್ಲೇಖಿಸಿದ್ದರೆ, ಹಣಹೂಡಿಕೆ ಮಾಡುವವರು ವಾಸ್ತವಾಂಶವನ್ನು ಉಲ್ಲೇಖಿಸುತ್ತಾ, ಮ್ಯೂಚುಯಲ್ ನಿಧಿಗಳು “ವೃತ್ತಿಪರವಾಗಿ ನಿರ್ವಹಿಸಲ್ಪಟ್ಟವುಗಳಾಗಿವೆ” ಮತ್ತು “ಹೆಚ್ಚು ವೈವಿಧ್ಯಮಯವಾಗಿವೆ” ಎಂದು ತಿಳಿಸಿದ್ದಾರೆ ಹಾಗೂ ಇತರ ಹೂಡಿಕೆಗಳಲ್ಲಿ ತಮ್ಮ ಹಣವನ್ನು ಹೂಡುವುದಕ್ಕೆ ಬದಲಾಗಿ ಮ್ಯೂಚುಯಲ್ ನಿಧಿಗಳಲ್ಲಿ ತಾವು ಹೂಡಿಕೆ ಮಾಡುವುದಕ್ಕೂ ಹೆಚ್ಚಿನಂಶ ಇವೇ ಕಾರಣಗಳಾಗಿವೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಮೂಲ
[ಬದಲಾಯಿಸಿ]೧.ಬಾಸ್ಟನ್ ಅನಲಿಟಿಕ್ಸ್ Archived 2012-07-29 ವೇಬ್ಯಾಕ್ ಮೆಷಿನ್ ನಲ್ಲಿ.
೨.ಅಸೋಸಿಯೇಷನ್ ಆಫ್ ಮ್ಯೂಚುಯಲ್ ಫಂಡ್ಸ್ ಇಂಡಿಯಾ
೩.ಇಂಡಿಯಾಮಾರ್ಟ್ Archived 2011-06-15 ವೇಬ್ಯಾಕ್ ಮೆಷಿನ್ ನಲ್ಲಿ.