ವಿಷಯಕ್ಕೆ ಹೋಗು

ಬ್ಲ್ಯೂಟೂತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಬ್ಲೂಟೂತ್ ಇಂದ ಪುನರ್ನಿರ್ದೇಶಿತ)
Bluetooth ಲೋಗೋ.

Bluetooth ಎಂಬುದು ಅಲ್ಪ ಅಂತರದ ಸ್ಥಿರ ಮತ್ತು ಸಂಚಾರಿ ಸಾಧನಗಳ ನಡುವೆ ಖಾಸಗಿ ವಲಯ ಜಾಲಗಳನ್ನು (PANಗಳು) ರಚಿಸಿಕೊಂಡು ದತ್ತ ಹಸ್ತಾಂತರ ನಡೆಸಲು ಬಳಸುವ ಮುಕ್ತ ನಿಸ್ತಂತು ಪ್ರೋಟೋಕಾಲ್‌. ಮೂಲತಃ ಇದನ್ನು RS232 ದತ್ತ ತಂತಿಗಳಿಗೆ ನಿಸ್ತಂತು ಪರ್ಯಾಯವಾಗಿ ಕಲ್ಪಿಸಲಾಗಿತ್ತು. ಮೇಳೈಸುವಿಕೆಯ ತೊಂದರೆಗಳಿಂದ ಹೊರಬಂದು ಇದು ಅನೇಕ ಸಾಧನಗಳನ್ನು ಸಂಪರ್ಕಿಸಲು ಸಾಧ್ಯವಾಗಿಸುತ್ತದೆ.

ಹೆಸರು ಮತ್ತು ಲೋಗೋ

[ಬದಲಾಯಿಸಿ]

Bluetooth ಪದವು ಡೆನ್ಮಾರ್ಕ್‌ನ ಹತ್ತನೇ-ಶತಮಾನದ ಚಕ್ರವರ್ತಿ ಹೆರಾಲ್ಡ್‌ Iರ ಹೆಸರಾದ ಹಳೆಯ ನಾರ್ಸ್‌ ಭಾಷೆಯಲ್ಲಿ ಬ್ಲಾಟನ್‌ ಅಥವಾ ಡ್ಯಾನಿಷ್‌ನಲ್ಲಿ ಬ್ಲಾಟಂಡ್‌ ಎಂಬುದರ ಆಂಗ್ಲೀಕೃತ ಆವೃತ್ತಿಯಾಗಿದೆ. ಈ ಚಕ್ರವರ್ತಿಯು ಸಾಮರಸ್ಯದಿಂದಿರದ ಡ್ಯಾನಿಷ್‌ ಬುಡಕಟ್ಟುಗಳನ್ನು ಏಕೀಕೃತಗೊಳಿಸಿ ಸಾಮ್ರಾಜ್ಯ ಸ್ಥಾಪಿತಗೊಳಿಸಿದ್ದನು. ಇದರ ಅಂತರಾರ್ಥವೇನೆಂದರೆ Bluetooth ಸಂವಹನ ಪ್ರೋಟೋಕಾಲ್‌ಗಳೊಂದಿಗೆ ಅದೇ ರೀತಿಯಲ್ಲಿ ವ್ಯವಹರಿಸಿ, ಅವುಗಳನ್ನು ಒಂದು ಸಾರ್ವತ್ರಿಕ ಪ್ರಮಾಣಕ್ಕೆ ಒಳಪಡಿಸುತ್ತದೆ.[][][]

Bluetooth ಚಿಹ್ನೆಯು ಬಂಧಕ ರೂನ್‌ ಚಿಹ್ನೆಯು ಜರ್ಮನಿಯ ರೂನ್‌ಗಳು  (ಹಗಲ್ಲ್‌) ಮತ್ತು   (ಬರ್ಕಾನನ್‌)ಗಳನ್ನು ಸಂಯೋಜಿಸಿದ ಚಿಹ್ನೆಯಾಗಿದೆ.

ಅಳವಡಿಕೆ

[ಬದಲಾಯಿಸಿ]

Bluetooth ತರಂಗಾಂತರ-ಜಿಗಿತದ ಹರವಿನ ರೋಹಿತ ಎಂಬ ರೇಡಿಯೋ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ. ಈ ತಂತ್ರಜ್ಞಾನವು ಕಳುಹಿಸಬೇಕಾದ ದತ್ತವನ್ನು ಅನೇಕ ಭಾಗಗಳಾಗಿ ಛೇದಿಸಿ ನಂತರ 79 ತರಂಗಾಂತರಗಳಲ್ಲಿ ಅದನ್ನು ಪ್ರಸರಿಸುತ್ತದೆ. ತರಂಗಾಂತರಕರಣವು ತನ್ನ ಮೂಲ ವಿಧಾನದಲ್ಲಿ ಗಾಸ್ಸಿಯನ್‌ ತರಂಗಾಂತರ-ಪಲ್ಲಟ ಕೀಲಿಸುವಿಕೆ (GFSK) ಆಗಿದೆ. ಇದು 1 Mb/sನಷ್ಟು ಒಟ್ಟಾರೆ ದತ್ತ ದರವನ್ನು ಸಾಧಿಸಬಹುದಾಗಿದೆ. Bluetooth ಸಂಚಾರಿ ದೂರವಾಣಿಗಳು, ದೂರವಾಣಿಗಳು, ಮಡಿಲಗಣಕಗಳು, ಖಾಸಗಿ ಗಣಕಗಳು, ಮುದ್ರಕಗಳು, ವಿಶ್ವವ್ಯಾಪಿ ಸ್ಥಾನೀಕರಣ ವ್ಯವಸ್ಥೆ (GPS) ಗ್ರಾಹಕಗಳು, ಡಿಜಿಟಲ್‌ ಛಾಯಾಗ್ರಾಹಿಗಳು, ಮತ್ತು ವಿಡಿಯೋ ಆಟಗಳು ಮುಂತಾದ ಅನೇಕ ಸಾಧನಗಳಿಗೆ ಸುರಕ್ಷಿತ, ವಿಶ್ವದಾದ್ಯಂತ ಪರವಾನಗಿರಹಿತ ಔದ್ಯಮಿಕ, ವೈಜ್ಞಾನಿಕ ಮತ್ತು ವೈದ್ಯಕೀಯ (ISM) 2.4 GHz ಕಿರು-ವ್ಯಾಪ್ತಿಯ ರೇಡಿಯೋ ತರಂಗಾಂತರ ಆವರ್ತನ ಶ್ರೇಣಿಯ ಮೂಲಕ ಸಂಪರ್ಕಿಸುವ ಮತ್ತು ಮಾಹಿತಿ ಹಸ್ತಾಂತರಿಸುವ ವಿಧಾನವಾಗಿದೆ. Bluetooth ನಿರ್ದಿಷ್ಟತೆಗಳನ್ನು Bluetooth ವಿಶೇಷ ಆಸಕ್ತಿ ಸಮೂಹ (SIG)ನವರು ಅಭಿವೃದ್ಧಿಪಡಿಸಿರುವುದಲ್ಲದೇ ಅದರ ಪರವಾನಗಿಯನ್ನು ನೀಡುತ್ತಾರೆ. Bluetooth SIG ಸಮೂಹವು ದೂರಸಂವಹನ, ಗಣಕೀಕರಣ, ಜಾಲ, ಮತ್ತು ವಿದ್ಯುನ್ಮಾನ ಗ್ರಾಹಕ ಉಪಕರಣ ಕ್ಷೇತ್ರಗಳ ಕಂಪೆನಿಗಳನ್ನು ಹೊಂದಿದೆ.[]

ಬಳಕೆಗಳು

[ಬದಲಾಯಿಸಿ]

Bluetooth ಮಾನಕವಾಗಿರುವುದಲ್ಲದೇ, ಸಂವಹನ ಪ್ರೋಟೋಕಾಲ್‌ ಸಹಾ ಆಗಿದ್ದು ಇದರಲ್ಲಿ ಮೂಲತಃ ಅಲ್ಪ ಶಕ್ತಿ ಬಳಕೆಯೊಂದಿಗೆ, ಅಲ್ಪ ವ್ಯಾಪ್ತಿಯಲ್ಲಿ ಕಾರ್ಯಾಚರಿಸುವ ಹಾಗೆ, (ಶಕ್ತಿ-ವರ್ಗ-ಅವಲಂಬಿತ: 1 ಮೀಟರ್‌, 10 ಮೀಟರ್‌ಗಳು, 100 ಮೀಟರ್‌ಗಳು) ಅಲ್ಪ-ವೆಚ್ಚದ ಪ್ರೇಷಕ-ಗ್ರಾಹಕ ಸೂಕ್ಷ್ಮ ಚಿಪ್‌ಗಳನ್ನು ಬಳಸಿ ಪ್ರತಿ ಮಾದರಿಯ ಸಾಧನವನ್ನು ನಿರ್ಮಿಸಲಾಗಿರುತ್ತದೆ.[] Bluetooth ಈ ಸಾಧನಗಳು ತಮ್ಮ ವ್ಯಾಪ್ತಿಗೆ ಅನುಗುಣವಾಗಿ ಪರಸ್ಪರ ಸಂಪರ್ಕಿಸುವಷ್ಟು ಸನಿಹಕ್ಕೆ ಬಂದಾಗ ಪರಸ್ಪರ ಸಂವಹನ ನಡೆಸಲು ಸಾಧ್ಯವಾಗಿಸುತ್ತದೆ. ಸಾಧನಗಳು ರೇಡಿಯೋ (ಪ್ರಸಾರ) ಸಂವಹನ ವ್ಯವಸ್ಥೆಯನ್ನು ಬಳಸುವುದರಿಂದ ಅವು ಪರಸ್ಪರ ನೇರವಾಗಿ ಮುಖಾಮುಖಿ ಸಂಪರ್ಕದಲ್ಲಿರಲೇಬೇಕೆಂಬ ಅನಿವಾರ್ಯತೆಯಿಲ್ಲ.[]

ವರ್ಗ ಗರಿಷ್ಠ ಅನುಮತಿಸಿದ ಶಕ್ತಿ
mW (dBm)
ವ್ಯಾಪ್ತಿ
(ಸರಿಸುಮಾರು)
ವರ್ಗ 1 100 mW (20 dBm) ~100 ಮೀಟರ್‌ಗಳು
ವರ್ಗ 2 2.5 mW (4 dBm) ~10 ಮೀಟರ್‌ಗಳು
ವರ್ಗ 3 1 mW (0 dBm) ~1 ಮೀಟರ್‌

ಬಹಳಷ್ಟು ಸಂದರ್ಭಗಳಲ್ಲಿ ವರ್ಗ 2 ಸಾಧನಗಳ ಪರಿಣಾಮಕಾರಿ ವ್ಯಾಪ್ತಿಯು ಪ್ರಾಯಶಃ ವರ್ಗ 1 ಪ್ರೇಷಕ-ಗ್ರಾಹಕ ಸಾಧನಕ್ಕೆ ಸಂಪರ್ಕಿತವಾದರೆ ಅಪ್ಪಟ ವರ್ಗ 2 ಜಾಲದ ವ್ಯಾಪ್ತಿಗೆ ಹೋಲಿಸಿದರೆ ವಿಸ್ತರಿತಗೊಳ್ಳುವುದು. ಈ ಬದಲಾವಣೆಯು ವರ್ಗ 1 ಸಾಧನಗಳಿಗಿರುವ ಹೆಚ್ಚಿನ ಸೂಕ್ಷ್ಮಗ್ರಾಹಿತ್ವ ಹಾಗೂ ಪ್ರಸರಣ ಶಕ್ತಿಯಿಂದ ಸಾಧ್ಯವಾಗಿರುತ್ತದೆ.

ಆವೃತ್ತಿ ದತ್ತ ವೇಗ
ಆವೃತ್ತಿ 1.2 Mbit/s
ಆವೃತ್ತಿ 2.0 + EDR Mbit/s

Bluetooth ವೈಲಕ್ಷಣ್ಯತೆಗಳು

[ಬದಲಾಯಿಸಿ]

Bluetoothಅನ್ನು ಬಳಸಲು, ಸಾಧನವು ನಿರ್ದಿಷ್ಟ Bluetooth ವೈಲಕ್ಷಣ್ಯತೆಗಳೊಂದಿಗೆ ಸಹವರ್ತಿತ್ವವನ್ನು ಕಡ್ಡಾಯವಾಗಿ ಹೊಂದಿರಲೇಬೇಕು. ಈ ಕೆಳಗಿನ ಅಂಶಗಳು ಸಾಧ್ಯವಾಗುವ ಅನ್ವಯಗಳು ಮತ್ತು ತಂತ್ರಜ್ಞಾನದ ಉಪಯೋಗಗಳನ್ನು ತಿಳಿಸುತ್ತವೆ.

ಅನ್ವಯಗಳ ಪಟ್ಟಿ

[ಬದಲಾಯಿಸಿ]
ಪ್ರಾತಿನಿಧಿಕ Bluetooth ಸಂಚಾರಿ ದೂರವಾಣಿ ಶ್ರವ್ಯ ಸಾಧನ.

ಮತ್ತಷ್ಟು ಪ್ರಚಲಿತ Bluetooth ಅನ್ವಯಗಳೆಂದರೆ :

  • ಸಂಚಾರಿ ದೂರವಾಣಿ ಹಾಗೂ ಹಸ್ತ-ಮುಕ್ತ ಶ್ರವ್ಯ ಸಾಧನಗಳ ನಡುವೆ ನಿಸ್ತಂತು ನಿಯಂತ್ರಣ ಮತ್ತು ಸಂವಹನ. ಇದು ಜನಪ್ರಿಯಗೊಂಡ ಅನ್ವಯಗಳಲ್ಲೇ ಅತ್ಯಂತ ಹಳೆಯದು.
  • ಅಲ್ಪ ಆವರ್ತನ ಶ್ರೇಣಿ ಅಗತ್ಯವಿರುವ ಸೀಮಿತ ಸ್ಥಳದಲ್ಲಿನ PCಗಳ ನಡುವಿನ ನಿಸ್ತಂತು ಜಾಲ.
  • ಮೌಸ್‌, ಕೀಲಿಮಣೆ ಮತ್ತು ಮುದ್ರಕಗಳು ಸೇರಿದಂತೆ PCಯ ಆದಾನ ಮತ್ತು ಪ್ರದಾನ ಸಾಧನಗಳೊಂದಿಗೆ ನಿಸ್ತಂತು ಸಂವಹನ.
  • OBEX ಹೊಂದಿರುವ ಸಾಧನಗಳ ನಡುವೆ ಕಡತಗಳ ವರ್ಗಾವಣೆ, ಸಂಪರ್ಕ ವಿವರಗಳು, ಭೇಟಿಯ ದಿನಚರಿ ಮತ್ತು ಜ್ಞಾಪನಾಕಾರಕಗಳ ನಿರ್ವಹಣೆ.
  • ಸಾಂಪ್ರದಾಯಿಕ ತಂತಿ ಸಂಪರ್ಕಿತ ಸರಣಿ ಸಂವಹನ ಪರೀಕ್ಷಾ ಸಾಧನಗಳು, GPS ಗ್ರಾಹಕಗಳು, ವೈದ್ಯಕೀಯ ಉಪಕರಣಗಳು, ಬಾರ್‌ ಕೋಡ್‌ ಪರಿಶೋಧಕಗಳು, ಮತ್ತು ದಟ್ಟಣೆ ನಿಯಂತ್ರಣ ಸಾಧನಗಳ ಬದಲಾಯಿಸುವಿಕೆ .
  • ಸಾಂಪ್ರದಾಯಿಕವಾಗಿ ಅವಗೆಂಪು ವ್ಯವಸ್ಥೆಯನ್ನು ಬಳಸುವ ನಿಯಂತ್ರಕಗಳಲ್ಲಿ ಉಪಯೋಗಿಸಲಾಗುತ್ತದೆ.
  • ಉನ್ನತ [USB] ಆವರ್ತನ ಶ್ರೇಣಿ ಅಗತ್ಯವಿರದ ಮತ್ತು ತಂತಿ-ಮುಕ್ತ ಸಂಪರ್ಕವು ಅಗತ್ಯವಿರುವ ಅಲ್ಪ ಆವರ್ತನ ಶ್ರೇಣಿ ಅನ್ವಯಗಳಲ್ಲಿನ ಬಳಕೆಗಾಗಿ.
  • Bluetooth-ಸಶಕ್ತ ಜಾಹಿರಾತು ಫಲಕಗಳಿಂದ ಇತರೆ ಗೋಚರವಾಗುವ ಸಾಧನಗಳಿಗೆ ಪುಟ್ಟ ಜಾಹಿರಾತುಗಳ ಕಳಿಸುವಿಕೆ[ಸಾಕ್ಷ್ಯಾಧಾರ ಬೇಕಾಗಿದೆ].
  • ಎರಡು ಔದ್ಯಮಿಕ Ethernet (ಉದಾ., PROFINET) ಜಾಲಗಳ ನಡುವೆ ನಿಸ್ತಂತು ಸೇತುವೆ.
  • ಎರಡು ಏಳನೇ-ತಲೆಮಾರಿನ ವಿಡಿಯೋ ಆಟಗಳಾದ, ನಿಂಟೆಂಡೋದ ವೈ [] ಮತ್ತು ಸೋನಿಯ ಪ್ಲೇಸ್ಟೇಷನ್‌ 3ಗಳು, ತಮ್ಮ ತಮ್ಮ ನಿಸ್ತಂತು ನಿಯಂತ್ರಕಗಳಿಗೆ Bluetoothಅನ್ನು ಬಳಸುತ್ತವೆ.
  • ದತ್ತ-ಸಶಕ್ತ ಸಂಚಾರಿ ದೂರವಾಣಿಯನ್ನು ಮೋಡೆಮ್‌ನಂತೆ ಪರಿವರ್ತಿಸಿಕೊಂಡು ವೈಯಕ್ತಿಕ ಗಣಕಗಳಲ್ಲಿ ಅಥವಾ PDAಗಳಲ್ಲಿ ಡಯಲ್‌-ಅಪ್‌ ಅಂತರಜಾಲ ಬಳಕೆ.

ಜಾಲಗಳಲ್ಲಿ Bluetooth vs. Wi-Fi IEEE 802.11 ಬಳಕೆ

[ಬದಲಾಯಿಸಿ]

Bluetooth ಮತ್ತು Wi-Fiಗಳು ಇಂದಿನ ಕಛೇರಿಗಳು, ಗೃಹಗಳು, ಮತ್ತು ಸಂಚಾರದಲ್ಲಿ: ಜಾಲಗಳನ್ನು ಅಣಿಗೊಳಿಸುವಲ್ಲಿ, ಮುದ್ರಣದಲ್ಲಿ, ಅಥವಾ ಪ್ರದರ್ಶನ ಹಾಗೂ ಇತರೆ ಕಡತಗಳನ್ನು PDAಗಳಿಂದ ಗಣಕಗಳಿಗೆ ವರ್ಗಾಯಿಸುವಂತಹಾ ಅನೇಕ ಅನ್ವಯಗಳನ್ನು ಹೊಂದಿವೆ. ಇವೆರಡೂ ಪರವಾನಗಿರಹಿತ ನಿಸ್ತಂತು ತಂತ್ರಜ್ಞಾನದ ಆವೃತ್ತಿಗಳು.

Wi-Fi ಅಂತರ್ಗತ ಸಾಧನ ಸಾಮಗ್ರಿಗಳಿಗೆ ಹಾಗೂ ಅದರ ಇತರ ಅನ್ವಯಗಳಿಗೆಂದು ಉದ್ದೇಶಿಸಲಾಗಿದೆ. ಈ ಅನ್ವಯಗಳ ವರ್ಗವನ್ನು WLAN ಎಂಬ ಹೆಸರಿಂದ, ಎಂದರೆ ನಿಸ್ತಂತು ಸ್ಥಳೀಯ ವಲಯ ಜಾಲ ಎಂದು ಗುರುತಿಸಲಾಗುತ್ತದೆ. ಕಾರ್ಯ ಪ್ರದೇಶಗಳಲ್ಲಿನ ಸಾಧಾರಣ ಸ್ಥಳೀಯ ವಲಯ ಜಾಲ ಸಂಪರ್ಕಗಳಿಗೆಂದು ತಂತಿಗಳ ಬಳಕೆಗೆ ಬದಲಿಯಾಗಿ Wi-Fi ಬಳಕೆಯನ್ನು ಉದ್ದೇಶಿಸಲಾಗಿತ್ತು.

Bluetoothಅನ್ನು ಬಹಿರ್ಗತ ಸಾಧನಗಳು ಹಾಗೂ ಅವುಗಳ ಅನ್ವಯಗಳಿಗೆಂದು ಉದ್ದೇಶಿಸಲಾಗಿದೆ. ಈ ಅನ್ವಯಗಳ ವರ್ಗವನ್ನು ನಿಸ್ತಂತು ಖಾಸಗಿ ವಲಯ ಜಾಲ (WPAN) ಎಂದು ಗುರುತಿಸಲಾಗುತ್ತದೆ. ಅನೇಕ ವಿಧವಾದ ಖಾಸಗೀ ಕಾರ್ಯನಿರ್ವಹಣೆಯ ಅನ್ವಯಗಳಿಗೆಂದು ಯಾವುದೇ ಸನ್ನಿವೇಶದಲ್ಲಿ ತಂತಿಗಳಿಗೆ ಬದಲಿಯಾಗಿ Bluetooth ಉಪಯುಕ್ತವಾಗಿದೆ.

Bluetooth ಸಾಧನಗಳು

[ಬದಲಾಯಿಸಿ]
100 m ವ್ಯಾಪ್ತಿಯ Bluetooth USB ಡಾಂಗಲ್‌.

Bluetooth ಅನೇಕ ಉತ್ಪನ್ನಗಳಾದ, ದೂರವಾಣಿಗಳು, ವೈ, ಪ್ಲೇಸ್ಟೇಷನ್‌ 3, ಲೆಗೊ ಮೈಂಡ್‌ಸ್ಟಾರ್ಮ್ಸ್ NXT ಮತ್ತು ಇತ್ತೀಚೆಗೆ ಕೆಲ ಉನ್ನತ ನಿಷ್ಕೃಷ್ಟ ಕೈಗಡಿಯಾರಗಳು[ಸಾಕ್ಷ್ಯಾಧಾರ ಬೇಕಾಗಿದೆ], ಮೋಡೆಮ್‌ಗಳು ಮತ್ತು ಶ್ರವ್ಯ ಸಾಧನಗಳಲ್ಲಿ ಲಭ್ಯವಿದೆ. ಅಲ್ಪ-ಆವರ್ತನ ಶ್ರೇಣಿಯಲ್ಲಿ ಪರಸ್ಪರ ಹತ್ತಿರವಿರುವ ಎರಡು ಅಥವಾ ಹೆಚ್ಚಿನ ಸಾಧನಗಳ ನಡುವೆ ಮಾಹಿತಿ ವರ್ಗಾವಣೆ ನಡೆಸಬೇಕಾದಂತಹಾ ಸಂದರ್ಭಗಳಲ್ಲಿ ಈ ತಂತ್ರಜ್ಞಾನವು ಉಪಯುಕ್ತ. ಸಾಮಾನ್ಯವಾಗಿ ಧ್ವನಿ ದತ್ತವನ್ನು ದೂರವಾಣಿಗಳ ನಡುವೆ (ಎಂದರೆ, Bluetooth ಶ್ರವ್ಯಸಾಧನದೊಂದಿಗೆ) ಅಥವಾ ಬೈಟ್‌ ದತ್ತವನ್ನು ಹಸ್ತ-ಆಧರಿತ ಗಣಕಗಳ ನಡುವೆ (ಕಡತಗಳ ವರ್ಗಾವಣೆ) ವರ್ಗಾವಣೆ ನಡೆಸಲು Bluetoothಅನ್ನು ಬಳಸಲಾಗುತ್ತದೆ.

Bluetooth ಪ್ರೋಟೋಕಾಲ್‌ಗಳು ಸಾಧನಗಳ ನಡುವೆ ಸೇವೆಗಳ ಪತ್ತೆ ಹಚ್ಚುವಿಕೆ ಹಾಗೂ ಅಣಿಗೊಳಿಸುವಿಕೆಯನ್ನು ಸರಳೀಕರಿಸುತ್ತವೆ. Bluetooth ಸಾಧನಗಳು ತಾವು ನೀಡುವ ಎಲ್ಲಾ ಸೇವೆಗಳ ಬಗ್ಗೆ ಪ್ರಚುರಪಡಿಸಬಲ್ಲವು. ಇನ್ನಿತರ ಅನೇಕ ಜಾಲ ವಿಧಗಳಿಗಿಂತ ಭಿನ್ನವಾಗಿ ಈ ವ್ಯವಸ್ಥೆಯು ಸುರಕ್ಷತೆ, ಜಾಲ ವಿಳಾಸ ಮತ್ತು ಅನುಮತಿ ವ್ಯವಸ್ಥೆಗಳನ್ನು ಸ್ವಯಂಚಾಲಿತಗೊಳಿಸಲು ಸಾಧ್ಯವಾಗುವುದರಿಂದ ಈ ಸೇವೆಗಳನ್ನು ಬಳಸಿಕೊಳ್ಳುವುದು ಸುಲಭವಾಗುತ್ತದೆ.

Wi-Fi ಸಾಂಪ್ರದಾಯಿಕ Ethernet ಜಾಲವಾಗಿದ್ದು, ಹಂಚಿಕೆಯಾಗಿರುವ ಸಂಪನ್ಮೂಲಗಳನ್ನು ಅಣಿಗೊಳಿಸಲು, ಕಡತಗಳ ಪ್ರಸಾರ ಮತ್ತು ಶ್ರವ್ಯ ಸಂಪರ್ಕಗಳನ್ನು ಏರ್ಪಡಿಸಲು (ಉದಾಹರಣೆಗೆ, ಶ್ರವ್ಯ ಸಾಧನಗಳು ಮತ್ತು ಹಸ್ತ-ಮುಕ್ತ ಸಾಧನಗಳು) ವ್ಯವಸ್ಥಾ ಏರ್ಪಡಿಕೆ ಅಗತ್ಯವಿದೆ. Wi-Fi ಸಹಾ Bluetooth ಬಳಸುವಂತಹುದೇ ರೇಡಿಯೋ ತರಂಗಾಂತರಗಳನ್ನು ಬಳಸುವುದಾದರೂ, ಹೆಚ್ಚಿನ ಶಕ್ತಿಯಿಂದೊಡಗೂಡಿದ್ದು, ಉತ್ತಮ ಕ್ಷಮತೆಯ ಸಂಪರ್ಕ ನೀಡುತ್ತದೆ. Wi-Fiಅನ್ನು ಕೆಲವೊಮ್ಮೆ "ನಿಸ್ತಂತು Ethernet" ಎಂದು ಕರೆಯಲಾಗುತ್ತದೆ. ಈ ವಿವರಣೆಯು ತುಲನಾತ್ಮಕವಾಗಿ ವ್ಯವಸ್ಥೆಯ ಸಾಮರ್ಥ್ಯ ಹಾಗೂ ದುರ್ಬಲತೆಗಳನ್ನು ಸೂಚಿಸುವುದರಿಂದ ನಿಖರವಾಗಿದೆ. Wi-Fiಗಾಗಿ ಹೆಚ್ಚಿನ ಅಣಿಗೊಳಿಸುವಿಕೆ ಅಗತ್ಯವಿರುವುದಾದರೂ, ಇದು ಪೂರ್ಣ-ಪ್ರಮಾಣದ ಜಾಲಗಳಿಗೆ ಸೂಕ್ತವಾಗಿರುತ್ತದೆ; ಇದು ವೇಗವಾದ ಸಂಪರ್ಕವನ್ನು ಸಾಧ್ಯವಾಗಿಸುವುದಲ್ಲದೇ, ಮೂಲ ನೆಲೆಯಿಂದ ಉತ್ತಮ ವ್ಯಾಪ್ತಿ ನೀಡುವುದರೊಂದಿಗೆ, Bluetoothಗಿಂತ ಉತ್ತಮ ಸುರಕ್ಷತೆಯನ್ನೂ ನೀಡುತ್ತದೆ.

ಗಣಕ ಅಗತ್ಯತೆಗಳು

[ಬದಲಾಯಿಸಿ]
ಪ್ರಾತಿನಿಧಿಕ Bluetooth USB ಡಾಂಗಲ್‌.
ನೋಟ್‌ಬುಕ್‌ ಗಣಕದ ಆಂತರಿಕ Bluetooth ಫಲಕ (14×36×4 mm).

ಖಾಸಗಿ ಗಣಕವೊಂದು ಇನ್ನಿತರ Bluetooth ಸಾಧನಗಳೊಂದಿಗೆ ಸಂವಹನ ನಡೆಸಲು (ಉದಾಹರಣೆಗೆ ಸಂಚಾರಿ ದೂರವಾಣಿಗಳು, ಮೌಸ್‌ಗಳು ಮತ್ತು ಕೀಲಿಮಣೆಗಳು) Bluetooth ಸಂಯೋಜಕವನ್ನು ಹೊಂದಿರಲೇಬೇಕು. ಆದರೆ ಕೆಲವು ಡೆಸ್ಕ್‌ಟಾಪ್‌ ಗಣಕಗಳು ಮತ್ತು ತೀರ ಇತ್ತೀಚಿನ ಮಡಿಲಗಣಕಗಳು Bluetooth ಸಂಯೋಜಕವನ್ನು ಅಂತರ್ಗತವಾಗಿ ಹೊಂದಿದ್ದರೆ, ಇನ್ನಿತರ ಗಣಕಗಳಿಗೆ ಡಾಂಗಲ್‌ ಮಾದರಿಯ ಬಾಹ್ಯ ಸಂಯೋಜಕದ ಅಗತ್ಯವಿದೆ.

ಪ್ರತಿ ಸಾಧನಕ್ಕೆ ಪ್ರತ್ಯೇಕ ಸಂಯೋಜಕ ಅಗತ್ಯವಿರುವ ತನ್ನ ಪೂರ್ವೀಕ ಸಾಧನವಾದ IrDAದಂತಲ್ಲದೇ, Bluetooth ತನ್ನ ಏಕೈಕ ಸಂಯೋಜಕದೊಂದಿಗೆ ಅನೇಕ ಸಾಧನಗಳು ಗಣಕದೊಂದಿಗೆ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ.

ಕಾರ್ಯಾಚರಣಾ ವ್ಯವಸ್ಥೆ ಬೆಂಬಲ

[ಬದಲಾಯಿಸಿ]

2002ರಲ್ಲಿ ಬಿಡುಗಡೆಯಾದ Mac OS X v10.2 ಆವೃತ್ತಿಯಿಂದಲೂ Apple ಸಂಸ್ಥೆಯು Bluetoothಅನ್ನು ಬೆಂಬಲಿಸುತ್ತಲಿದೆ.[]

Microsoft ವೇದಿಕೆಗಳಿಗೆ, Windows XP ಸೇವಾ ಆವೃತ್ತಿ 2 ಮತ್ತು ನಂತರದ ಆವೃತ್ತಿಗಳು Bluetooth ಬೆಂಬಲವನ್ನು ಸ್ಥಳೀಯವಾಗಿಯೇ ಹೊಂದಿವೆ. ಹಿಂದಿನ ಆವೃತ್ತಿಗಳು ಬಳಕೆದಾರರು ಉಪಯೋಗಿಸುವ Microsoftನಿಂದ ನೇರ ಬೆಂಬಲವಿರದ ಸಂಯೋಜಕಗಳಿಗೆ ತಮ್ಮದೇ ಆದ ಪ್ರತ್ಯೇಕ ಡ್ರೈವರ್‌ಗಳನ್ನು ಸ್ಥಾಪಿಸಬೇಕಾದ ಅಗತ್ಯವನ್ನು ಹೊಂದಿದ್ದವು.[] Microsoftನ ಸ್ವ-ಉತ್ಪಾದಿತ Bluetooth ಡಾಂಗಲ್‌ಗಳು (ಅವರ Bluetooth ಗಣಕ ಸಾಧನಗಳೊಂದಿಗೆ ಸಂಯೋಜಿಸಿದ) ಯಾವುದೇ ಪ್ರತ್ಯೇಕ ಬಾಹ್ಯ ಡ್ರೈವರ್‌ಗಳನ್ನು ಹೊಂದಿಲ್ಲದೇ ಇರುವುದರಿಂದ ಅವು ಕನಿಷ್ಟ Windows XP ಸೇವಾ ಆವೃತ್ತಿ 2ನ್ನು ನಿರೀಕ್ಷಿಸುತ್ತವೆ.

BlueZ ಮತ್ತು Affix ಎಂಬ ಎರಡು ಜನಪ್ರಿಯ Bluetooth ಸ್ಟ್ಯಾಕ್‌ಗಳನ್ನು Linux ಹೊಂದಿದೆ. ಮೂಲದಲ್ಲಿ Qualcommನಿಂದ ನಿರ್ಮಿತವಾದ BlueZ [] ಸ್ಟ್ಯಾಕ್‌ ಬಹಳಷ್ಟು Linux ಕರ್ನಲ್‌ಗಳೊಂದಿಗೆ ಅಡಕವಾಗಿರುತ್ತದೆ. Affix ಸ್ಟ್ಯಾಕ್‌ಅನ್ನು Nokia ನಿರ್ಮಿಸಿದೆ. FreeBSD ತನ್ನ 5.0 ಆವೃತ್ತಿಯಿಂದೀಚೆಗೆ Bluetooth ಬೆಂಬಲವನ್ನು ನೀಡುತ್ತಿದೆ. NetBSD ತನ್ನ 4.0 ಆವೃತ್ತಿಯಿಂದೀಚೆಗೆ Bluetooth ಬೆಂಬಲವನ್ನು ನೀಡುತ್ತಿದೆ. ಇದರ Bluetooth ಸ್ಟ್ಯಾಕ್‌ಅನ್ನು OpenBSDಗೂ ಸಹಾ ಪರಿವರ್ತಿಸಲಾಗಿದೆ.

ಸಂಚಾರಿ ದೂರವಾಣಿ ಅಗತ್ಯತೆಗಳು

[ಬದಲಾಯಿಸಿ]

Bluetooth ಸಶಕ್ತ ಸಂಚಾರಿ ದೂರವಾಣಿಯೊಂದು ಅನೇಕ ಸಾಧನಗಳೊಂದಿಗೆ ಜೋಡಿಯಾಗಬಹುದಾಗಿರುತ್ತದೆ. ಹಳೆಯ ಮಾದರಿಯ ಸಾಧನಗಳಿಗೆ ಬೆಂಬಲಿಸುವುದರೊಂದಿಗೆ, ಹೆಚ್ಚಿನ ವೈವಿಧ್ಯತೆಯ ಸೌಲಭ್ಯಗಳನ್ನು ನೀಡಲು ಸಾಧ್ಯವಾಗಿಸಲು, ಮುಕ್ತ ಸಂಚಾರಿ ದೂರವಾಣಿ ಸಾಧನ ವೇದಿಕೆ (OMTP) ಫೋರಂ ಇತ್ತೀಚೆಗೆ "Bluetooth ಸ್ಥಳೀಯ ಸಂಪರ್ಕತ್ವ" ಎಂಬ ಹೆಸರಿನ ಒಂದು ಶಿಫಾರಸುಗಳ ಪ್ರಕಟಣೆಯೊಂದನ್ನು ಹೊರಡಿಸಿತು; ಈ ಪ್ರಕಟಣೆಯನ್ನು ಇಳಿಸಿಕೊಳ್ಳಲು ಕೆಳಗೆ ನೀಡಿರುವ ಹೊರಗಿನ ಕೊಂಡಿಗಳನ್ನು ನೋಡಿ.

ನಿರ್ದಿಷ್ಟತೆಗಳು ಮತ್ತು ಸೌಲಭ್ಯಗಳು

[ಬದಲಾಯಿಸಿ]

ಜಾಪ್‌ ಹಾರ್ಟನ್‌ಸನ್‌ ಮತ್ತು ಸ್ವೆನ್‌ ಮ್ಯಾಟ್ಟಿಸನ್‌ ಎಂಬಿಬ್ಬರು ಸ್ವೀಡನ್‌ಲುಂಡ್‌ನಲ್ಲಿರುವ Ericsson ಸಂಚಾರಿ ದೂರವಾಣಿ ವೇದಿಕೆ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವಾಗ Bluetooth ನಿರ್ದಿಷ್ಟತೆಯನ್ನು 1994ರಲ್ಲಿ ಅಭಿವೃದ್ಧಿಪಡಿಸಿದರು.[೧೦] ಈ ನಿರ್ದಿಷ್ಟತೆಯು ತರಂಗಾಂತರ-ಜಿಗಿತದ ಹರವಿನ ರೋಹಿತ ತಂತ್ರಜ್ಞಾನದ ಮೇಲೆ ಆಧಾರಿತವಾಗಿವೆ.

ಈ ನಿರ್ದಿಷ್ಟತೆಗಳನ್ನು Bluetooth ವಿಶೇಷ ಆಸಕ್ತಿ ಗುಂಪು (SIG) ತಂಡದವರು ನಿಯಮಬದ್ಧಗೊಳಿಸಿದರು. SIGಯನ್ನು ಮೇ 20, 1998ರಂದು ಅಧಿಕೃತವಾಗಿ ಘೋಷಿಸಲಾಯಿತು. ಇಂದು ಈ ಸಮೂಹವು ವಿಶ್ವದಾದ್ಯಂತ 11,000 ಕಂಪೆನಿಗಳನ್ನು ಸದಸ್ಯರನ್ನಾಗಿ ಹೊಂದಿವೆ. ಈ ಸಮೂಹವನ್ನು Erricson‌, IBM, Intel, Toshiba, ಮತ್ತು Nokiaಗಳು ಸೇರಿ ಸ್ಥಾಪಿಸಿದರೂ ನಂತರ ಇನ್ನೂ ಅನೇಕ ಕಂಪೆನಿಗಳು ಸೇರಿಕೊಂಡವು.

Bluetooth 1.0 ಮತ್ತು 1.0B

[ಬದಲಾಯಿಸಿ]

1.0 ಮತ್ತು 1.0B ಆವೃತ್ತಿಗಳು ಅನೇಕ ತೊಂದರೆಗಳನ್ನು ಹೊಂದಿದ್ದವಲ್ಲದೇ ಉತ್ಪಾದಕರು ತಂತಮ್ಮ ಉತ್ಪಾದನೆಗಳನ್ನು ಪರಸ್ಪರ ಕಾರ್ಯಾಚರಿಸಬಲ್ಲಂತೆ ಮಾಡಲು ಬಹಳ ತೊಂದರೆಗಳನ್ನನುಭವಿಸಿದವು. 1.0 ಮತ್ತು 1.0B ಆವೃತ್ತಿಗಳು ಕಡ್ಡಾಯವಾಗಿದ್ದ Bluetooth ಯಂತ್ರಾಂಶ ಸಾಧನ ವಿಳಾಸ(BD_ADDR) ಪ್ರಸರಣವನ್ನು ಸಂಪರ್ಕವನ್ನು ಹೊಂದುವ ಕಾರ್ಯದ ಭಾಗವಾಗಿ ( ಪ್ರೋಟೋಕಾಲ್‌ ಹಂತದಲ್ಲಿ ಅನಾಮಧೇಯತೆಯನ್ನು ಅಸಾಧ್ಯವಾಗಿಸುವಂತೆ ) ಸೇರಿಸಿಕೊಂಡಿದ್ದವು. ಆದರೆ ಈ ವಿಚಾರವೇ, ಅನೇಕ Bluetooth ವ್ಯವಸ್ಥೆಗಳಲ್ಲಿ ಕಾರ್ಯಾಚರಿಸಲೆಂದು ಉದ್ದೇಶಿಸಿದ್ದ ಸೇವೆಗಳ ಅಲಭ್ಯತೆಗೆ ಕಾರಣವಾಯಿತು.

  • ಇದನ್ನು IEEE ಮಾನಕ 802.15.1-2002 ಎಂದು ಮಾನ್ಯತೆ ನೀಡಲಾಗಿದೆ.
  • 1.0B ನಿರ್ದಿಷ್ಟತೆಗಳಲ್ಲಿ ಪತ್ತೆ ಹಚ್ಚಲಾದ ಅನೇಕ ತಪ್ಪುಗಳನ್ನು ಸರಿಪಡಿಸಲಾಗಿದೆ.
  • ಗೂಢಲಿಪೀಕರಿಸದ ವಾಹಿನಿಗಳಿಗೆ ಬೆಂಬಲವನ್ನು ಸೇರಿಸಲಾಯಿತು.
  • ಸ್ವೀಕೃತ ಸಂಕೇತ ಕ್ಷಮತೆ ಸೂಚಕ (RSSI).

ಈ ಆವೃತ್ತಿಯು 1.1 ಆವೃತ್ತಿಯೊಂದಿಗೆ ಹಿಮ್ಮುಖ ಸಹವರ್ತನೆ ಹೊಂದಿದ್ದು ಈ ಕೆಳಕಂಡ ಅನೇಕ ಪ್ರಮುಖ ವರ್ಧಿತ ಸೌಲಭ್ಯಗಳನ್ನು ಹೊಂದಿದೆ:

  • ವೇಗದ ಸಂಪರ್ಕ ಮತ್ತು ಗೋಚರಿಕೆ
  • ಹೊಂದಿಸಬಹುದಾದ ತರಂಗಾಂತರ-ಜಿಗಿತದ ಹರವಿನ ರೋಹಿತ (AFH) , ಜಿಗಿತದ ಕ್ರಮಾನುಗತಿಯಲ್ಲಿ ಒತ್ತೊತ್ತಾದ ತರಂಗಾಂತರಗಳ ಬಳಕೆ ಮಾಡದೇ ರೇಡಿಯೋ ತರಂಗಾಂತರ ವ್ಯತಿಕರಣಕ್ಕೆ ವಿರೋಧವನ್ನು ವರ್ಧಿಸುವ ಸೌಲಭ್ಯ.
  • ಕಾರ್ಯತಃ 721 kbit/sಗಳವರೆಗೆ 1.1ನೇ ಆವೃತ್ತಿಗಿಂತ ಉನ್ನತ ಸಂವಹನ ವೇಗ.
  • ಶ್ರವ್ಯ ಸಂಪರ್ಕಗಳ ಧ್ವನಿ ಗುಣಮಟ್ಟವನ್ನು ವರ್ಧಿಸಲು ಅಸಮರ್ಪಕ ಪ್ಯಾಕೆಟ್‌ಗಳ ಪುನರ್‌ಸಂವಹನವನ್ನು ಅನುಮತಿಸಬಲ್ಲ, ಏಕಕಾಲಿಕ ದತ್ತ ವರ್ಗಾವಣೆಗೆ ಉತ್ತಮ ಬೆಂಬಲ ನೀಡಲು ಐಚ್ಛಿಕವಾಗಿ ಧ್ವನಿ ವಿಳಂಬವನ್ನು ಹೆಚ್ಚಿಸಬಲ್ಲ ವರ್ಧಿಸಿದ ಸಮಕಾಲಿಕ ಸಂಪರ್ಕಗಳು (eSCO).
  • ಮೂರು-ತಂತಿ UARTಗೆ ಹೋಸ್ಟ್‌ ನಿಯಂತ್ರಕ ಅಂತರ್ವರ್ತನ (HCI) ಬೆಂಬಲ ನೀಡಲಾಗಿದೆ.
  • ಇದನ್ನು IEEE ಮಾನಕ 802.15.1-2005 ಎಂದು ಮಾನ್ಯತೆ ನೀಡಲಾಗಿದೆ.
  • L2CAPಗಾಗಿ ಹರಿವು ನಿಯಂತ್ರಣ ಮತ್ತು ಪುನರ್ಸಂವಹನ ವಿಧಾನಗಳನ್ನು ಪರಿಚಯಿಸಲಾಯಿತು.

Bluetooth ನಿರ್ದಿಷ್ಟತೆಯ ಈ ಆವೃತ್ತಿಯನ್ನು ನವೆಂಬರ್‌ 10, 2004ರಂದು ಪ್ರಕಟಿಸಲಾಯಿತು.ಹಿಂದಿನ ಆವೃತ್ತಿಯಾದ 1.2ರೊಂದಿಗೆ ಹಿಮ್ಮುಖ ಸಹವರ್ತಿತ್ವವನ್ನು ಹೊಂದಿದೆ. ವೇಗದ ದತ್ತ ವರ್ಗಾವಣೆಗೆಂದು ವೃದ್ಧಿಸಿದ ದತ್ತ ದರದ (EDR) ಬಳಕೆಯ ಪ್ರಾರಂಭವೇ ಇಲ್ಲಿನ ಪ್ರಮುಖ ವ್ಯತ್ಯಾಸ. ಕಾರ್ಯತಃ ದತ್ತ ವರ್ಗಾವಣೆ ದರವು ಪ್ರತಿ ಸೆಕೆಂಡಿಗೆ 2.1 ಮೆಗಾಬಿಟ್‌ಗಳೇ ಇದ್ದರೂ ಸಾಧಾರಣ EDR ದರವು ಪ್ರತಿ ಸೆಕೆಂಡಿಗೆ ಸುಮಾರು 3 ಮೆಗಾಬಿಟ್‌ಗಳಾಗಿದೆ.[೧೧] ದತ್ತ ಸಂವಹನಕ್ಕೆಂದು ಪ್ರತ್ಯೇಕ ರೇಡಿಯೋ ತಂತ್ರಜ್ಞಾನಗಳನ್ನು ಬಳಸಿದಾಗ ಹೆಚ್ಚಿನ ಪ್ರಮಾಣದ ವೇಗವು ಲಭ್ಯವಾಗುತ್ತದೆ. ಮಾನಕ , ಅಥವಾ ಮೂಲ ದರದ ಸಂವಹನವು 1 Mbit/sನಷ್ಟು ಸಮಗ್ರ ವಾಯು ದತ್ತ ದರದಲ್ಲಿ ರೇಡಿಯೋ ಸಂಕೇತದ, ಗಾಸ್ಸಿಯನ್‌ ತರಂಗಾಂತರ-ಪಲ್ಲಟ ಕೀಲಿಸುವಿಕೆ (GFSK) ತರಂಗಾಂತರಕರಣವನ್ನು ಬಳಸುತ್ತದೆ. π/4-DQPSK ಮತ್ತು 8DPSK ಎಂಬ ಎರಡು ರೂಪಾಂತರಗಳೊಂದಿಗೆ GFSK ಮತ್ತು ಹಂತ ಪಲ್ಲಟ ಕೀಲಿಸುವಿಕೆ (PSK) ತರಂಗಾಂತರಕರಣಗಳ ಸಂಯೋಜನೆಯನ್ನು EDR ಬಳಸುತ್ತದೆ. ಇವು ಅನುಕ್ರಮವಾಗಿ 2, ಮತ್ತು 3 Mbit/sಗಳಷ್ಟು ಸಮಗ್ರ ವಾಯು ದತ್ತ ದರವನ್ನು ಹೊಂದಿವೆ.[೧೨]

2.0 ನಿರ್ದಿಷ್ಟತೆಯ ಪ್ರಕಾರ, EDR ಈ ಕೆಳಗಿನ ಅನುಕೂಲತೆಗಳನ್ನು ನೀಡುತ್ತದೆ:

  • ಮೂರು ಪಟ್ಟು ಸಂವಹನ ವೇಗ — ಕೆಲ ಸಂದರ್ಭಗಳಲ್ಲಿ 10 ಪಟ್ಟು [ಸಾಕ್ಷ್ಯಾಧಾರ ಬೇಕಾಗಿದೆ] (2.1 Mbit/s) ನೀಡುವ ಸಾಧ್ಯತೆಯೂ ಉಂಟು.
  • ಅಧಿಕ ಆವರ್ತನ ಶ್ರೇಣಿಯಿಂದಾಗಿ ಬಹುವಿಧವಾದ ಏಕಕಾಲಿಕ ಸಂಪರ್ಕಗಳನ್ನು ನೀಡಬೇಕಾದ ಸಂಕೀರ್ಣ ವ್ಯವಸ್ಥೆಯ ಅಗತ್ಯದ ಇಳಿಕೆ.
  • ಇಳಿಸಿದ ಕಾರ್ಯ ಆವರ್ತನೆಯ ಸಹಾಯದಿಂದ ಅಲ್ಪ ಶಕ್ತಿ ಬಳಕೆ.

Bluetooth ವಿಶೇಷ ಆಸಕ್ತಿ ಸಮೂಹ (SIG) ಈ ನಿರ್ದಿಷ್ಟತೆಯನ್ನು "Bluetooth 2.0 + EDR" ಎಂದು ಘೋಷಿಸಿರುವದರಿಂದ EDR ಕೇವಲ ಐಚ್ಛಿಕ ಸೌಲಭ್ಯವಾಗಿರುತ್ತದೆ. EDR ಮಾತ್ರವಲ್ಲದೇ, 2.0 ನಿರ್ದಿಷ್ಟತೆಗೆ ಇನ್ನೂ ಅನೇಕ ಚಿಕ್ಕ ಸುಧಾರಣೆಗಳನ್ನು ಮಾಡಿರುವುದಲ್ಲದೇ, ಇದರ ಉತ್ಪನ್ನಗಳು ಹೆಚ್ಚಿನ ದತ್ತ ದರವನ್ನು ಬೆಂಬಲಿಸದೆಯೇ "Bluetooth 2.0"ಕ್ಕೆ ತಮ್ಮ ಸಹವರ್ತಿತ್ವವನ್ನು ಸಮರ್ಥಿಸಿಕೊಳ್ಳಬಹುದಾಗಿದೆ. ಇದಕ್ಕೆ ಉದಾಹರಣೆಯಾಗಿರುವ ಕನಿಷ್ಠ ಒಂದು ವಾಣಿಜ್ಯ ಸಾಧನವೆಂದರೆ, HTC TyTN ಪಾಕೆಟ್‌ PC ಸಂಚಾರಿ ದೂರವಾಣಿ, ತನ್ನ ದತ್ತಾಂಶ ಪತ್ರದಲ್ಲಿ ಈ ಬಗ್ಗೆ "EDR ರಹಿತ Bluetooth 2.0" ಎಂದು ಅಧಿಕೃತವಾಗಿ ಘೋಷಿಸಿಕೊಂಡಿದೆ.[೧೩]

Bluetooth ಮೂಲ ನಿರ್ದಿಷ್ಟತೆ ಆವೃತ್ತಿ 2.1ಯು ಸಹವರ್ತಿ 1.2 ಆವೃತ್ತಿಯೊಂದಿಗೆ ಸಂಪೂರ್ಣ ಹಿಮ್ಮುಖ ಸಹವರ್ತಿತ್ವವನ್ನು ಹೊಂದಿದ್ದು, ಜುಲೈ 26, 2007ರಿಂದ Bluetooth SIGಯು ಅದನ್ನು ಅಳವಡಿಸಿಕೊಂಡಿದೆ.[೧೨] ಈ ನಿರ್ದಿಷ್ಟತೆಯು ಕೆಳಕಂಡ ಸೌಲಭ್ಯಗಳನ್ನು ಒಳಗೊಂಡಿದೆ:

ವಿಸ್ತರಿತ ವಿಚಾರಣೆ ಪ್ರತಿಕ್ರಿಯೆ (EIR)
ವಿಚಾರಣಾ ಪ್ರಕ್ರಿಯೆಯಲ್ಲಿ ಹೆಚ್ಚಿನ ಮಾಹಿತಿಯನ್ನು ನೀಡಿ ಸಂಪರ್ಕ ಸಾಧಿಸುವ ಮುನ್ನವೇ ಸಾಧನಗಳನ್ನು ಉತ್ತಮ ರೀತಿಯಲ್ಲಿ ಶೋಧಿಸಲು ನೆರವಾಗುತ್ತದೆ. ಈ ಮಾಹಿತಿಯಲ್ಲಿ ಸಾಧನದ ಹೆಸರು, ಬೆಂಬಲಿಸುವ ಸೇವೆಗಳ ಪಟ್ಟಿ, ವಿಚಾರಣಾ ಪ್ರಕ್ರಿಯೆಗಳಿಗೆ ಬಳಸುವ ಸಂವಹನ ಶಕ್ತಿಯ ಮಟ್ಟ ಹಾಗೂ ಉತ್ಪಾದಕರಿಂದ ಸೂಚಿತವಾದ ದತ್ತಗಳೂ ಸೇರಿರಬಹುದು.
ಗೋಚರಿಕೆ ಪತ್ತೆ ಹಚ್ಚುವ ಉಪಮಾನ್ಯತೆ
ಸಾಧನಗಳು ಗೋಚರಿಕೆ ಪತ್ತೆ ಹಚ್ಚುವ ಅಲ್ಪ-ಶಕ್ತಿ ವಿಧಾನ ಬಳಸುತ್ತಿದ್ದಾಗ ಅದರಲ್ಲೂ ಅಸಮ್ಮಿತ ದತ್ತ ಹರಿವಿನ ಸಂಪರ್ಕಗಳೊಂದಿಗೆ ಶಕ್ತಿವ್ಯಯವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಹೆಚ್ಚು ಅನುಕೂಲ ಪಡೆಯುವುದೆಂದು ಅಂದಾಜಿಸಲಾಗಿರುವ ಮಾನವ ಅಂತರ್ವರ್ತನ ಸಾಧನಗಳೆಂದರೆ (HID) ತಮ್ಮ ಬ್ಯಾಟರಿಯ ಜೀವಿತಾವಧಿಯನ್ನು 3ರಿಂದ 10 ಪಟ್ಟು ಹೆಚ್ಚಿಸಿಕೊಳ್ಳಬಲ್ಲ ಮೌಸ್‌ ಮತ್ತು ಕೀಲಿಮಣೆ ಸಾಧನಗಳು.[ಸಾಕ್ಷ್ಯಾಧಾರ ಬೇಕಾಗಿದೆ] ಈ ವ್ಯವಸ್ಥೆಯು ಸಾಧನಗಳು ಪರಸ್ಪರ ಚಾಲ್ತಿಯಲ್ಲಿರಬೇಕೆಂದು ಸೂಚಿಸುವ ಸಂದೇಶಗಳನ್ನು ಕಳುಹಿಸುವ ಮುನ್ನ ನಿರೀಕ್ಷಿಸಬೇಕಾದ ಸಮಯವನ್ನು ಸ್ವತಃ ನಿರ್ಧರಿಸಲು ಅನುವು ಮಾಡಿಕೊಡುತ್ತದೆ. ಹಿಂದಿನ ವ್ಯವಸ್ಥೆಗಳು ಚಾಲ್ತಿಯಲ್ಲಿರಲು ಸೂಚಿಸುವ ಸಂದೇಶಗಳ ಆವರ್ತನೆಯನ್ನು ಸೆಕೆಂಡಿಗೆ ಅನೇಕ ಬಾರಿ ಎಂದು ನಿಗದಿಪಡಿಸಿದ್ದವು. ತದ್ವಿರುದ್ಧವಾಗಿ 2.1 ನಿರ್ದಿಷ್ಟತೆಯು ಸಾಧನ ಜೋಡಿಗಳನ್ನು ಈ ಸಂಖ್ಯೆಯನ್ನು ಪ್ರತಿ 5 ಅಥವಾ 10 ಸೆಕೆಂಡುಗಳಿಗೆ ಒಮ್ಮೆ ನಿರ್ದಿಷ್ಟ ಆವರ್ತನೆಯಿಲ್ಲದೇ ಪರಸ್ಪರ ತೀರ್ಮಾನಕ್ಕೆ ಬರಲು ಅನುಮತಿಸುತ್ತದೆ.
ಗೂಢಲಿಪೀಕರಣ ಕಿರುವಿರಾಮ/ಮುಂದುವರಿಕೆ (EPR)
ಗೂಢಲಿಪೀಕರಣದ ಸಂಕೇತದ ಬದಲಾವಣೆಯನ್ನು Bluetooth ಹೋಸ್ಟ್‌ನಿಂದ ಅಲ್ಪ ನಿರ್ವಹಣೆಯಲ್ಲಿಯೇ ಪೂರೈಸಲು ಸಾಧ್ಯವಾಗಿಸುತ್ತದೆ. ಗೂಢಲಿಪೀಕೃತ ACL ಸಂಪರ್ಕದ ಪಾತ್ರ ಬದಲಾವಣೆಗೆ ಗೂಢಲಿಪಿ ಸಂಕೇತವನ್ನು ಬದಲಾಯಿಸಲೇಬೇಕಿರುತ್ತದೆ ಅಥವಾ ಪ್ರತಿ 23.3 ಗಂಟೆಗಳಿಗೊಮ್ಮೆ (ಒಂದು Bluetooth ದಿನ) ACL ಸಂಪರ್ಕವನ್ನು ಗೂಢಲಿಪಿ ಸಶಕ್ತಗೊಳಿಸಲಾಗುತ್ತದೆ. ಈ ಸೌಲಭ್ಯವನ್ನು ಪರಿಚಯಿಸುವ ಮುನ್ನ, ಗೂಢಲಿಪಿ ಸಂಕೇತವನ್ನು ಪುನರನುಸಂಧಾನಗೊಳಿಸುವ ಸಮಯದಲ್ಲಿ ಹೊಸ ಸಂಕೇತವನ್ನು ಉತ್ಪಾದಿಸುವ ಮುನ್ನ Bluetooth ಹೋಸ್ಟ್‌ ಗೂಢಲಿಪೀಕರಣದಲ್ಲಿನ ತಾತ್ಕಾಲಿಕ ವ್ಯತ್ಯಯದ ಬಗ್ಗೆ ತಿಳುವಳಿಕೆ ಪಡೆದಿರುತ್ತಿತ್ತು. ಹೀಗಾಗಿ Bluetooth ಹೋಸ್ಟ್‌ ದತ್ತ ವರ್ಗಾವಣೆಯಲ್ಲಿ (ಗೂಢಲಿಪೀಕರಣಗೊಳ್ಳಬೇಕಾದ ದತ್ತವು, ಗೂಢಲಿಪೀಕರಣವು ವಿರಮಿಸಿದೆ ಎಂಬ ಸೂಚನೆ ಬರುವ ಮುನ್ನವೇ ಕಳುಹಿಸಿರುವ ಸಾಧ್ಯತೆಯಿದ್ದರೂ) ಕಿರುವಿರಾಮವನ್ನು ನೀಡುವ ಸೌಲಭ್ಯವನ್ನು ನೀಡಬೇಕಾಗಿತ್ತು. EPR ವ್ಯವಸ್ಥೆಯಲ್ಲಿ, Bluetooth ಹೋಸ್ಟ್‌ ಕಿರುವಿರಾಮದ ಬಗ್ಗೆ ಯಾವ ಸೂಚನೆಯನ್ನೂ ಪಡೆದಿರದಿದ್ದರೂ Bluetooth ನಿಯಂತ್ರಕವು ಸಂಕೇತವು ಪುರುತ್ಪಾದನೆಯಾಗುವ ಮುನ್ನ ಯಾವುದೇ ಗೂಢಲಿಪೀಕರಣಗೊಳ್ಳದ ದತ್ತವು ವರ್ಗಾವಣೆಗೊಳ್ಳದಿರುವ ಹಾಗೆ ಎಚ್ಚರವಹಿಸಿರುತ್ತದೆ.
ಸುರಕ್ಷಿತ ಸರಳ ಜೋಡಣೆ (SSP)
ಸುರಕ್ಷತೆಯ ಬಳಕೆ ಹಾಗೂ ಸಾಮರ್ಥ್ಯವನ್ನು ಉತ್ತೇಜಿಸುವುದರೊಂದಿಗೆ ಈ ವ್ಯವಸ್ಥೆಯು Bluetooth ಸಾಧನಗಳ ಜೋಡಣೆ ಸೌಲಭ್ಯವನ್ನು ಸಂಪೂರ್ಣವಾಗಿ ಸುಧಾರಿಸುತ್ತದೆ. ಈ ಸೌಲಭ್ಯವು Bluetoothನ ಬಳಕೆಯನ್ನು ಗಮನಾರ್ಹವಾಗಿ ಹೆಚ್ಚಿಸುವುದೆಂದು ನಿರೀಕ್ಷಿಸಲಾಗಿದೆ.[೧೪]
ಸಮೀಪ ಕ್ಷೇತ್ರ ಸಂವಹನ (NFC) ಸಹಕಾರ
NFC ರೇಡಿಯೋ ಅಂತರ್ವರ್ತನವು ಲಭ್ಯವಿದ್ದಾಗ ಸುರಕ್ಷಿತ Bluetooth ಸಂಪರ್ಕಗಳ ಸ್ವಯಂಚಾಲಿತ ರಚನೆಯೂ ಸಾಧ್ಯ. ಈ ಸೌಲಭ್ಯವು SSPಯ ಭಾಗವಾಗಿದ್ದು ಇದರಲ್ಲಿ NFCಯು ಜೋಡಣೆಗೊಳ್ಳಲು ಬೇಕಾದ ಮಾಹಿತಿ ವಿನಿಮಯದ ಒಂದು ಮಾರ್ಗವಾಗಿದೆ. ಉದಾಹರಣೆಗೆ, ಶ್ರವ್ಯ ಸಾಧನವೊಂದು NFC ಸಹಿತ Bluetooth 2.1 ದೂರವಾಣಿಯೊಂದಿಗೆ ಕೇವಲ ಎರಡೂ ಸಾಧನಗಳನ್ನು ಪರಸ್ಪರ ಹತ್ತಿರ (ಕೆಲ ಸೆಂಟಿಮೀಟರ್‌ಗಳು) ತರುವುದರಿಂದಲೇ ಜೋಡಣೆಗೊಳ್ಳುವುದು ಸಾಧ್ಯವಾಗಬೇಕು. ಇನ್ನೊಂದು ಉದಾಹರಣೆಯೆಂದರೆ ದೂರವಾಣಿ ಅಥವಾ ಕ್ಯಾಮರಾಗಳನ್ನು ಡಿಜಿಟಲ್‌ ಛಾಯಾಚಿತ್ರ ಫಲಕದ ಸಮೀಪ ತರುವುದರಿಂದಲೇ ಅವುಗಳಿಂದ ಡಿಜಿಟಲ್‌ ಛಾಯಾಚಿತ್ರ ಫಲಕವೊಂದಕ್ಕೆ ಛಾಯಾಚಿತ್ರಗಳ ಸ್ವಯಂಚಾಲಿತ ಪೂರಣವಾಗುವಿಕೆ.[೧೫][೧೬]

ಏಪ್ರಿಲ್‌ 21, 2009ರಂದು 3.0 ನಿರ್ದಿಷ್ಟತೆಯನ್ನು [೧೨] Bluetooth SIG ಸಮೂಹವು ಅಳವಡಿಸಿಕೊಂಡಿತು. ಇದರ ಪ್ರಮುಖ ಸೌಲಭ್ಯವೆಂದರೆ AMPಯಾಗಿದ್ದು (ಪರ್ಯಾಯ MAC/PHY), 802.11ಅನ್ನು ಇದರೊಂದಿಗೆ ಹೆಚ್ಚಿನ ವೇಗದ ವಾಹಕವನ್ನಾಗಿ ಸೇರಿಸಲಾಗಿದೆ. AMPನಲ್ಲಿ ಎರಡು ತಂತ್ರಜ್ಞಾನಗಳನ್ನು ನಿರೀಕ್ಷಿಸಲಾಗಿತ್ತು: 802.11 ಮತ್ತು UWB, ಆದರೆ ನಿರ್ದಿಷ್ಟತೆಗಳಲ್ಲಿ UWBಯನ್ನು ಪ್ರಸ್ತಾಪಿಸಲಾಗಿಲ್ಲ.[೧೭]

ಪರ್ಯಾಯ MAC/PHY
Bluetooth ವೈಲಕ್ಷಣ್ಯಗಳ ದತ್ತವನ್ನು ವರ್ಗಾಯಿಸಲು ಪರ್ಯಾಯವಾಗಿ MAC ಮತ್ತು PHYಗಳೆರಡರ ಬಳಕೆಯನ್ನು ಸಶಕ್ತಗೊಳಿಸುತ್ತದೆ. ಸಾಧನಗಳ ಪತ್ತೆಹಚ್ಚುವಿಕೆ, ಪ್ರಾಥಮಿಕ ಸಂಪರ್ಕ ಮತ್ತು ವೈಲಕ್ಷಣ್ಯ ವ್ಯವಸ್ಥೆಗಳಿಗೆ ಈಗಲೂ Bluetooth ರೇಡಿಯೋ ಸಂಕೇತಗಳನ್ನೇ ಬಳಸಲಾಗುತ್ತಿದೆ, ಆದರೂ ಹೆಚ್ಚು ಪ್ರಮಾಣದ ದತ್ತವನ್ನು ಕಳುಹಿಸಬೇಕಾದಾಗ ಹೆಚ್ಚಿನ ವೇಗದ ಪರ್ಯಾಯ MAC PHY (802.11, ಸಾಧಾರಣವಾಗಿ Wi-Fiನೊಂದಿಗೆ ಗುರುತಿಸಲಾಗುವ)ವನ್ನು ಬಳಸಲಾಗುತ್ತದೆ. Bluetoothನ ರುಜುವಾತಾದ ಅಲ್ಪ ಸಾಮರ್ಥ್ಯದ ಸಂಪರ್ಕ ವಿಧಾನಗಳನ್ನು ವ್ಯವಸ್ಥೆಯು ನಿಷ್ಕ್ರಿಯಗೊಂಡಿರುವಾಗ ಬಳಸಿಕೊಂಡು ಹೆಚ್ಚಿನ ಪ್ರಮಾಣದ ದತ್ತವನ್ನು ಕಳುಹಿಸಬೇಕಾದಾಗ ಪ್ರತಿ ಬಿಟ್‌ಗೆ ಅಲ್ಪ ಸಾಮರ್ಥ್ಯದ ರೇಡಿಯೋ ತರಂಗಗಳನ್ನು ಬಳಸಲಾಗುತ್ತಿದೆ ಎಂಬುದು ಇದರ ಅಂತರಾರ್ಥ.
ಏಕಪ್ರಸಾರಿತ ಸಂಪರ್ಕರಹಿತ ದತ್ತ
ಸೇವಾ ದತ್ತವನ್ನು ಪ್ರತ್ಯೇಕ L2CAP ವಾಹಿನಿಯನ್ನು ಸ್ಥಾಪಿಸದೇ ಕಳುಹಿಸಲು ಅನುವು ಮಾಡುತ್ತದೆ. ಬಳಕೆದಾರರ ಚಟುವಟಿಕೆ ಹಾಗೂ ದತ್ತ ವರ್ಗಾವಣೆ/ ಪುನರ್ಸಂಪರ್ಕಗಳ ನಡುವೆ ಅಲ್ಪ ವಿಳಂಬವನ್ನು ನಿರೀಕ್ಷಿಸುವ ಅನ್ವಯಗಳನ್ನು ಉದ್ದೇಶಿಸಿ ಈ ಸೌಲಭ್ಯ ನೀಡಲಾಗಿದೆ. ಇದು ಅಲ್ಪ ಪ್ರಮಾಣದ ದತ್ತಕ್ಕೆ ಮಾತ್ರ ಸೂಕ್ತ.
ಗೂಢಲಿಪೀಕರಣ ಕೀಲಿ ಗಾತ್ರ ಪಡೆಯುವಿಕೆ
ಗೂಢಲಿಪೀಕರಿಸಿದ ACL ಸಂಪರ್ಕದ ಗೂಢಲಿಪೀಕರಣ ಕೀಲಿ ಗಾತ್ರವನ್ನು ಪಡೆಯಲು Bluetooth ಹೋಸ್ಟ್‌ಗೆ ಹೊಸದೊಂದು ಮಾನಕ HCI ಆದೇಶವನ್ನು ಪರಿಚಯಿಸುತ್ತದೆ. ಸಂಪರ್ಕದೊಂದಿಗೆ ಬಳಸಲಾಗುವ ಗೂಢಲಿಪೀಕರಣ ಕೀಲಿ ಗಾತ್ರವು SIM ಬಳಕೆ ವೈಲಕ್ಷಣ್ಯಗಳಿಗೆ ಅಗತ್ಯವಾಗಿರುತ್ತದೆ, ಆದ್ದರಿಂದ ಸಾಧಾರಣವಾಗಿ Bluetooth ನಿಯಂತ್ರಕಗಳಿಗೆ ಈ ಸೌಲಭ್ಯವನ್ನು ತಂತ್ರಜ್ಞಾನ ಸ್ವಾಮ್ಯದ ಮಾದರಿಯಲ್ಲಿ ನೀಡಲಾಗಿರುತ್ತದೆ. ಈಗ ಈ ಮಾಹಿತಿಯು ಮಾನಕ HCI ಅಂತರ್ವರ್ತನದ ಮೂಲಕವೂ ಲಭ್ಯವಿದೆ.

ಅಲ್ಪ ಶಕ್ತಿ Bluetooth

[ಬದಲಾಯಿಸಿ]

ಏಪ್ರಿಲ್‌ 20, 2009ರಂದು, ಪ್ರಸ್ತುತದ Bluetooth ಪ್ರೋಟೋಕಾಲ್‌ ಸ್ಟ್ಯಾಕ್‌ಗಳೊಂದಿಗೆ ಸಹವರ್ತನೆ ಹೊಂದಿರುವ ಹೊಸದಾದ ಅಲ್ಪ ಶಕ್ತಿ Bluetoothಅನ್ನು ಪೂರ್ಣರೂಪವಾಗಿ ಹೆಚ್ಚುವರಿ ಪ್ರೋಟೋಕಾಲ್‌ ಸ್ಟ್ಯಾಕ್‌ ಆಗಿ Bluetooth SIG ಶಿಫಾರಸು ಮಾಡಿತು. ವಿಬ್ರೀ ಎಂಬ ಹಳೆಯ ಹೆಸರಿಂದ ಕರೆಯುತ್ತಿದ್ದ ಇದನ್ನು ನಂತರ Bluetooth ULP (ಅತ್ಯಲ್ಪ ಸಾಮರ್ಥ್ಯ) ಎಂದು ಕರೆದರೂ ನಂತರ ಈ ಹೆಸರೂ ಹಳೆಯದಾಗಿ ಅಲ್ಪಶಕ್ತಿ Bluetooth ಎಂಬುದು ಅಂತಿಮ ಹೆಸರಾಯಿತು.

ಜೂನ್‌ 12, 2007ರಂದು, Nokia ಮತ್ತು Bluetooth SIGಗಳು ವಿಬ್ರೀ ನಿರ್ದಿಷ್ಟತೆಯು, ಅತ್ಯಲ್ಪ ಸಾಮರ್ಥ್ಯದ Bluetooth ತಂತ್ರಜ್ಞಾನವಾಗಿ Bluetooth ನಿರ್ದಿಷ್ಟತೆಗಳ ಭಾಗವಾಗಿದೆ ಎಂದು ಘೋಷಿಸಿದವು.[೧೮] ಈ ತಂತ್ರಜ್ಞಾನವನ್ನು ಬಳಸಬಹುದಾದ ಸಂದರ್ಭಗಳೆಂದರೆ ಕರೆಗಾರ ID ಮಾಹಿತಿ ಪ್ರದರ್ಶಿಸಬಲ್ಲ ಕೈಗಡಿಯಾರಗಳು, ಧರಿಸುವವರ ಹೃದಯ ಬಡಿತವನ್ನು ಕಸರತ್ತು ನಡೆಸುವಾದ ಗಮನಿಸುವ ಕ್ರೀಡಾ ಸಂವೇದಕಗಳು, ಹಾಗೂ ವೈದ್ಯಕೀಯ ಸಾಧನಗಳು. ವೈದ್ಯಕೀಯ ಸಾಧನಗಳ ಕಾರ್ಯಕಾರಿ ಸಮೂಹವು ಈ ಸೌಲಭ್ಯಕ್ಕೆ ಮಾರುಕಟ್ಟೆಯನ್ನು ವೈದ್ಯಕೀಯ ಸಾಧನಗಳು ವೈಲಕ್ಷಣ್ಯ ಮತ್ತು ಸಂಬಂಧಿತ ಪ್ರೋಟೋಕಾಲ್‌ಗಳನ್ನು ಸಹಾ ಸಶಕ್ತಗೊಳಿಸಲು ವಿನ್ಯಾಸಗೊಳಿಸುತ್ತಿದೆ. ಅಲ್ಪ ಶಕ್ತಿ Bluetooth ತಂತ್ರಜ್ಞಾನವನ್ನು ಸಾಧನಗಳ ಬ್ಯಾಟರಿಯ ಜೀವಿತಾವಧಿಯನ್ನು ಒಂದು ವರ್ಷದವರೆಗೆ ವಿಸ್ತರಿಸಲು ಯೋಜಿಸಲಾಗುತ್ತಿದೆ.

ಭವಿಷ್ಯ

[ಬದಲಾಯಿಸಿ]
ಪ್ರಸಾರ ವಾಹಿನಿ
Bluetooth ಮಾಹಿತಿ ಕೇಂದ್ರಗಳನ್ನು ಸಶಕ್ತಗೊಳಿಸುತ್ತದೆ. ಸಂಚಾರಿ ದೂರವಾಣಿಗಳಲ್ಲಿ Bluetoothನ ಅಳವಡಿಸುವಿಕೆಯನ್ನು ಹೆಚ್ಚಿಸುವುದಲ್ಲದೇ, ಪ್ರಸಕ್ತ ನಿಯಮಿತ ಬಳಕೆಯಲ್ಲಿರುವ ವಸ್ತು ಪ್ರೋತ್ಸಾಹ ವಿಧಾನದ ಬದಲಾಗಿ ಮಾಹಿತಿ ಕೇಂದ್ರಗಳಿಂದ ಮಾಹಿತಿ ಪಡೆಯುವಂತಹಾ ಜಾಹಿರಾತು ವಿಧಾನವನ್ನು ಸಶಕ್ತಗೊಳಿಸುತ್ತದೆ.
ಟೊಪಾಲಜಿ ನಿರ್ವಹಣೆ
ವಿಶೇಷವಾಗಿ ಇತ್ತೀಚೆಗೆ ಬಹಳ ಸಾಮಾನ್ಯವಾಗುತ್ತಿರುವ ಸ್ಕ್ಯಾಟರ್‌ನೆಟ್‌ ಸನ್ನಿವೇಶಗಳಲ್ಲಿ ಪಿಕೊನೆಟ್‌ ಟೊಪಾಲಜಿಗಳ ವ್ಯವಸ್ಥೆಯ ಸ್ವಯಂಚಾಲಿತ ಅಣಿಗೊಳಿಸುವಿಕೆಯನ್ನು ಸಶಕ್ತಗೊಳಿಸುತ್ತದೆ. ಈ ವ್ಯವಸ್ಥೆಯೆಲ್ಲಾ ತಂತ್ರಜ್ಞಾನದ ಬಳಕೆದಾರರ ಮಟ್ಟಿಗೆ ಅದೃಶ್ಯವಾಗಿದ್ದರೂ ಸಹಜವಾಗಿ “ಕಾರ್ಯನಿರತ”ವಾದಂತಿರಬೇಕು.
QoS ಸುಧಾರಣೆಗಳು
ಪ್ರಮುಖವಾಗಿ ಅದೇ ಪಿಕೋನೆಟ್‌ನಲ್ಲಿ ಉತ್ತಮ ಚಟುವಟಿಕೆಯ ದತ್ತಸಂಚಾರವಿರುವ ಸಮಯದಲ್ಲಿ ಶ್ರವ್ಯ ಮತ್ತು ದೃಶ್ಯ ದತ್ತಗಳನ್ನು ಉತ್ತಮ ಗುಣಮಟ್ಟದಲ್ಲಿ ಪ್ರಸರಿಸುವುದನ್ನು ಸಶಕ್ತಗೊಳಿಸುವುದು.

AMP ವ್ಯವಸ್ಥೆಗೆ UWB

[ಬದಲಾಯಿಸಿ]

Bluetooth 3.0ರ ಅಧಿಕ ವೇಗ (AMP) ಸೌಲಭ್ಯವು 802.11ರ ಮೇಲೆ ಆಧಾರಿತವಾಗಿದ್ದರೂ AMP ತಾಂತ್ರಿಕತೆಯು ಉಳಿದ ರೇಡಿಯೋ ತರಂಗಾಂತರಗಳೊಂದಿಗೂ ಬಳಸಲೆಂದು ವಿನ್ಯಾಸಗೊಳಿಸಿದ್ದಾಗಿತ್ತು. ಇದನ್ನು UWBಗೆಂದೇ ಮೂಲವಾಗಿ ಉದ್ದೇಶಿಸಿದ್ದರೂ, UWBಯ Bluetooth ವೈಶಿಷ್ಟ್ಯತೆಯ ಅಂಗವಾದ ವೈಮೀಡಿಯಾ ಒಕ್ಕೂಟವು ಈ ಯೋಜನೆಯನ್ನು ಸ್ಥಗಿತಗೊಳಿಸುವುದಾಗಿ ಮಾರ್ಚ್‌ 2009ರಲ್ಲಿ ಘೋಷಿಸಿತು.

ಮಾರ್ಚ್‌ 16, 2009ರಂದು, ವೈಮೀಡಿಯಾ ಒಕ್ಕೂಟವು ವೈಮೀಡಿಯಾ ಅಲ್ಟ್ರಾ-ವೈಡ್‌ಬ್ಯಾಂಡ್ (UWB) ನಿರ್ದಿಷ್ಟತೆಗಳ ವಿಚಾರದಲ್ಲಿ ತಂತ್ರಜ್ಞಾನ ಹಸ್ತಾಂತರ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿರುವುದಾಗಿ ಘೋಷಿಸಿತು. ವೈಮೀಡಿಯಾ ಭವಿಷ್ಯದ ಅಧಿಕ ವೇಗ ಮತ್ತು ಉತ್ತಮೀಕರಿಸಿದ ಸಾಮರ್ಥ್ಯ ವ್ಯವಸ್ಥೆಗಳ ಮೇಲಿನ ಸಮಸ್ತ ಕಾರ್ಯಯೋಜನೆಗಳೂ ಸೇರಿದಂತೆ, ಎಲ್ಲಾ ಪ್ರಸಕ್ತ ಹಾಗೂ ಭವಿಷ್ಯದ ನಿರ್ದಿಷ್ಟತೆಗಳನ್ನು, Bluetooth ವಿಶೇಷ ಆಸಕ್ತಿ ಸಮೂಹ (SIG), ನಿಸ್ತಂತು USB ಪ್ರೋತ್ಸಾಹನಾ ಸಮೂಹ ಮತ್ತು USB ಕಾರ್ಯವಾಹಿ ಫೋರಂಗಳಿಗೆ ಹಸ್ತಾಂತರಿಸಲಿದೆ. ತಂತ್ರಜ್ಞಾನ, ವ್ಯಾವಹಾರಿಕ ವ್ಯವಸ್ಥೆ ಮತ್ತು ಸಂಬಂಧಿತ ಆಡಳಿತಾತ್ಮಕ ವ್ಯವಸ್ಥೆಗಳ ಯಶಸ್ವಿ ಹಸ್ತಾಂತರವಾದ ನಂತರ ವೈಮೀಡಿಯಾ ಒಕ್ಕೂಟವು ಈ ಕಾರ್ಯಾಚರಣೆಯನ್ನು ನಿಲ್ಲಿಸಲಿದೆ.[೧೯]

ತಾಂತ್ರಿಕ ಮಾಹಿತಿ

[ಬದಲಾಯಿಸಿ]

Bluetooth ಪ್ರೋಟೋಕಾಲ್‌ ಸ್ಟ್ಯಾಕ್‌

[ಬದಲಾಯಿಸಿ]

"Bluetoothಅನ್ನು ಮೂಲ ಪ್ರೋಟೋಕಾಲ್‌ಗಳು, ತಂತಿ ಬದಲಾವಣೆ ಪ್ರೋಟೋಕಾಲ್‌ಗಳು, ದೂರವಾಣಿ ವ್ಯವಸ್ಥೆ ನಿಯಂತ್ರಣ ಪ್ರೋಟೋಕಾಲ್‌ಗಳು, ಮತ್ತು ಅಳವಡಿಕೆಯ ಪ್ರೋಟೋಕಾಲ್‌ಗಳನ್ನೊಳಗೊಂಡ ಪದರ ಪ್ರೋಟೋಕಾಲ್‌ ಯಂತ್ರಶಿಲ್ಪವೆಂದು ವರ್ಣಿಸಬಹುದಾಗಿದೆ." [೨೦] ಎಲ್ಲಾ Bluetooth ಸ್ಟ್ಯಾಕ್‌ಗಳಲ್ಲಿ ಕಡ್ಡಾಯವಾದ ಪ್ರೋಟೋಕಾಲ್‌ಗಳೆಂದರೆ: LMP, L2CAP ಮತ್ತು SDPಗಳು. ಇವುಗಳೊಂದಿಗೆ: HCI ಮತ್ತು RFCOMM ಪ್ರೋಟೋಕಾಲ್‌ಗಳು ಸರಿ ಸುಮಾರು ಸಾರ್ವತ್ರಿಕವಾಗಿ ಬೆಂಬಲ ಪಡೆದಿರುತ್ತವೆ.

LMP (ಸಂಪರ್ಕ ನಿರ್ವಹಣಾ ಪ್ರೋಟೋಕಾಲ್‌)

[ಬದಲಾಯಿಸಿ]

ಎರಡು ಸಾಧನಗಳ ನಡುವಿನ ರೇಡಿಯೋ ಸಂಪರ್ಕದ ನಿಯಂತ್ರಣಕ್ಕೆ ಇದನ್ನು ಬಳಸಲಾಗುತ್ತದೆ. ಇದನ್ನು ನಿಯಂತ್ರಕದಲ್ಲಿ ಅಳವಡಿಸಲಾಗಿರುತ್ತದೆ.

L2CAP (ತಾರ್ಕಿಕ/ಅನುಮೇಯ ಸಂಪರ್ಕ ನಿಯಂತ್ರಣ & ಅಳವಡಿಕೆ ಪ್ರೋಟೋಕಾಲ್‌)

[ಬದಲಾಯಿಸಿ]

ಉನ್ನತ ಸ್ಥಾಯಿಯ ಪ್ರೋಟೋಕಾಲ್‌ಗಳನ್ನು ಬಳಸಿಕೊಂಡು ಎರಡು ಸಾಧನಗಳ ನಡುವೆ ಅನೇಕ ತಾರ್ಕಿಕ ಸಂಪರ್ಕಗಳನ್ನು ಪರಸ್ಪರ ಸಂಘಟಿಸಲು ಇದನ್ನು ಬಳಸಲಾಗುತ್ತದೆ. ಪ್ರಸರಿತವಾಗುತ್ತಿರುವ ಪ್ಯಾಕೆಟ್‌ಗಳ ವಿಭಜನೆ ಮತ್ತು ಮರುಜೋಡಣೆ ಸೌಲಭ್ಯವನ್ನು ನೀಡುತ್ತದೆ.

672 ಬೈಟ್‌ಗಳನ್ನು ಸಾಧಾರಣ MTU ಆಗಿ, ಮತ್ತು 48 ಬೈಟ್‌ಗಳನ್ನು ಕಡ್ಡಾಯವಾಗಿ ಕನಿಷ್ಟ ಬೆಂಬಲಿತ MTUವಾಗಿ ಹೊಂದಿರುವ, 64kBವರೆಗೆ ಅಣಿಗೊಳಿಸಬಲ್ಲ ದತ್ತಪ್ರಮಾಣದ ಸಾಮರ್ಥ್ಯ ಹೊಂದಿರುವ ಪ್ಯಾಕೆಟ್‌ಗಳನ್ನು L2CAP ತನ್ನ ಮೂಲ ವಿಧಾನದಲ್ಲಿ ನೀಡುತ್ತದೆ.

ಪುನರ್ಸಂವಹನ & ಹರಿವು ನಿಯಂತ್ರಣ ವಿಧಾನಗಳಲ್ಲಿ ನಂಬಿಕಾರ್ಹ ಅಥವಾ ಪ್ರತಿ ವಾಹಿನಿಗೆ ಏಕಕಾಲಿಕ ದತ್ತ ವ್ಯವಸ್ಥೆ ಹೊಂದಲು ಪುನರ್ಸಂವಹನಗಳು ಮತ್ತು CRC ತಾಳೆ ನೋಡುವಿಕೆಯ ಮೂಲಕ L2CAPಅನ್ನು ಅಣಿಗೊಳಿಸಬಹುದಾಗಿದೆ.

Bluetooth ಮೂಲ ನಿರ್ದಿಷ್ಟತೆಯ 1ನೇ ಅನುಬಂಧವು ಎರಡು ಅಧಿಕ L2CAP ವಿಧಾನಗಳನ್ನು ಮೂಲ ನಿರ್ದಿಷ್ಟತೆಗೆ ಸೇರಿಸುತ್ತದೆ. ಈ ವಿಧಾನಗಳು ಕಾರ್ಯತಃ ಮೂಲ ಪುನರ್ಸಂವಹನ ಮತ್ತು ಹರಿವು ನಿಯಂತ್ರಣ ವಿಧಾನಗಳನ್ನು ತಡೆಹಿಡಿಯುತ್ತದೆ:

  • ವರ್ಧಿತ ಪುನರ್ಸಂವಹನ ವಿಧಾನ (ERTM): ಈ ವಿಧಾನವು ಮೂಲ ಪುನರ್ಸಂವಹನ ವಿಧಾನದ ಸುಧಾರಿತ ಆವೃತ್ತಿಯಾಗಿದೆ. ಈ ವಿಧಾನವು ನಂಬಿಕಾರ್ಹ L2CAP ವಾಹಿನಿಯನ್ನು ನೀಡುತ್ತದೆ.
  • ಪ್ರವಹಿಸುವ ವಿಧಾನ (SM): ಇದೊಂದು ಯಾವುದೇ ಪುನರ್ಸಂವಹನ ಅಥವಾ ಹರಿವು ನಿಯಂತ್ರಣವಿಲ್ಲದ ಸರಳ ವಿಧಾನವಾಗಿದೆ. ಈ ವಿಧಾನವು ನಂಬಿಕಾರ್ಹವಲ್ಲದ L2CAP ವಾಹಿನಿಯನ್ನು ನೀಡುತ್ತದೆ.

ಈ ವಿಧಾನಗಳ ವಿಶ್ವಾಸಾರ್ಹತೆಯು ಐಚ್ಛಿಕವಾಗಿ ಹಾಗೂ/ಅಥವಾ ಪ್ರತ್ಯೇಕವಾಗಿ ಕೆಳಗಿನ ಪದರ Bluetooth BDR/EDR ವಾಯು ಅಂತರ್ವರ್ತನ ಪುನರ್ಸಂವಹನಗಳ ಸಂಖ್ಯೆ ಮತ್ತು ಚದುರುವಿಕೆಯ ಕಾಲಾವಕಾಶ (ರೇಡಿಯೋ ಪ್ಯಾಕೆಟ್‌‌ಗಳನ್ನು ಚದುರಿಸುವಿಕೆಗೆಂದು ಗೊತ್ತುಪಡಿಸಿದ ಸಮಯ)ಗಳನ್ನು ಅಣಿಗೊಳಿಸುವ ಮೂಲಕ ಖಾತರಿಪಡಿಸಿಕೊಳ್ಳಬಹುದಾಗಿದೆ. ಕೆಳಗಿನ ಪದರವು ಸರಣಿಯ ಕ್ರಮಬದ್ಧತೆಯನ್ನು ಖಾತರಿಪಡಿಸುತ್ತದೆ.

ERTM ಅಥವಾ SMಗೆಂದು ಅಣಿಗೊಳಿಸಿದ L2CAP ವಾಹಿನಿಗಳು ಮಾತ್ರವೇ AMP ತಾರ್ಕಿಕ ಸಂಪರ್ಕಗಳ ಮೇಲೆ ಕಾರ್ಯಾಚರಿಸಬಹುದಾಗಿದೆ.

SDP (ಸೇವಾ ಪ್ರಕಟಣಾ ಪ್ರೋಟೋಕಾಲ್‌)

[ಬದಲಾಯಿಸಿ]

ಸಾಧನಗಳು ಪರಸ್ಪರ ಯಾವ ಸೇವೆಗಳನ್ನು ಬೆಂಬಲಿಸುತ್ತವೆಯೆಂದು ಹಾಗೂ ಯಾವ ಪರಿಮಾಣಗಳನ್ನು ಬಳಸಿ ಸಂಪರ್ಕ ಹೊಂದಬಹುದೆಂದು ತಿಳಿಯಲು ಈ ಪ್ರೋಟೋಕಾಲ್‌ ಅನುಮತಿಸುತ್ತದೆ. ಉದಾಹರಣೆಗೆ ,ಸಂಚಾರಿ ದೂರವಾಣಿಯೊಂದನ್ನು Bluetooth ಶ್ರವ್ಯ ಸಾಧನವೊಂದಕ್ಕೆ ಸಂಪರ್ಕಿಸುವಾಗ, SDPಯನ್ನು ಯಾವ Bluetooth ವೈಲಕ್ಷಣ್ಯಗಳು ಮತ್ತು ಪ್ರತಿ ವೈಲಕ್ಷಣ್ಯಕ್ಕೆ ಸಂಪರ್ಕಿಸಲು ಅಗತ್ಯವಾದ ಯಾವ ಸಂಪರ್ಕ ಪ್ರೋಟೋಕಾಲ್‌ ಬಹುಸಂಘಟಿಕ ಸಜ್ಜಿಕೆಗಳು ಶ್ರವ್ಯ ಸಾಧನದಿಂದ ( ಶ್ರವ್ಯ ಸಾಧನ ವೈಲಕ್ಷಣ್ಯ, ಹಸ್ತ ಮುಕ್ತ ವೈಲಕ್ಷಣ್ಯ, ಉನ್ನತ ಶ್ರವ್ಯ ಹಂಚಿಕೆ ವೈಲಕ್ಷಣ್ಯ ಇತ್ಯಾದಿ) ಬೆಂಬಲಿತವಾಗಿವೆ ಎಂಬುದನ್ನು ನಿರ್ಧರಿಸಲು ಬಳಸಲಾಗುತ್ತದೆ. ಪ್ರತಿ ಸೇವೆಯು ಸಾರ್ವತ್ರಿಕ ಅಸದೃಶ ಸಂಕೇತ (UUID)ದಿಂದ ಗುರುತಿಸಿಕೊಳ್ಳುತ್ತದೆ, ಅಧಿಕೃತ ಸೇವೆಗಳಿಗೆ (Bluetooth ವೈಲಕ್ಷಣ್ಯಗಳು) ಕಿರು ರೂಪದ UUID (ಪೂರ್ಣ 128 ಬಿಟ್‌ಗಳ ಬದಲಿಗೆ 16 ಬಿಟ್‌ಗಳು)ಗಳನ್ನು ನಿಗದಿಪಡಿಸಿರಲಾಗುತ್ತದೆ.

HCI (ಹೋಸ್ಟ್‌/ನಿಯಂತ್ರಕ ಅಂತರ್ವರ್ತನ)

[ಬದಲಾಯಿಸಿ]

ಇದು ಹೋಸ್ಟ್‌ ಸ್ಟ್ಯಾಕ್‌ (e.g., PC ಅಥವಾ ಸಂಚಾರಿ ದೂರವಾಣಿ OS) ಮತ್ತು ನಿಯಂತ್ರಕ ( Bluetooth IC)ಗಳ ನಡುವಿನ ಮಾನಕೀಕರಿಸಿದ ಸಂವಹನ ವ್ಯವಸ್ಥೆ. ಈ ಮಾನಕವು ಹೋಸ್ಟ್‌ ಸ್ಟ್ಯಾಕ್‌ ಅಥವಾ ನಿಯಂತ್ರಕ ICಗಳನ್ನು ಕನಿಷ್ಟ ಅಳವಡಿಕೆಯೊಂದಿಗೆ ಬದಲಾಯಿಸುವ ಅವಕಾಶ ನೀಡುತ್ತದೆ.

ಅನೇಕ HCI ಸಾಗಣೆ ಪದರ ಮಾನಕಗಳು ಲಭ್ಯವಿದ್ದು, ಪ್ರತಿಯೊಂದು ಅದೇ ಆದೇಶ, ಸಂಗತಿ ಮತ್ತು ದತ್ತ ಪ್ಯಾಕೆಟ್‌ಗಳನ್ನು ವರ್ಗಾಯಿಸಲು ಪ್ರತ್ಯೇಕ ಯಂತ್ರಾಂಶ ಅಂತರ್ವರ್ತನಗಳನ್ನು ಬಳಸುತ್ತವೆ. ಹೆಚ್ಚು ಬಳಕೆಯಲ್ಲಿರುವವೆಂದರೆ USB (PCಗಳಲ್ಲಿ) ಮತ್ತು UART (ಸಂಚಾರಿ ದೂರವಾಣಿಗಳು ಮತ್ತು PDAಗಳಲ್ಲಿ).

ಸರಳ ಕಾರ್ಯರೀತಿಯುಳ್ಳ Bluetooth ಸಾಧನಗಳಲ್ಲಿ (e.g., ಶ್ರವ್ಯ ಸಾಧನಗಳು) ಹೋಸ್ಟ್‌ ಸ್ಟ್ಯಾಕ್‌ ಮತ್ತು ನಿಯಂತ್ರಕಗಳೆರಡನ್ನೂ ಒಂದೇ ಸೂಕ್ಷ್ಮಸಂಸ್ಕಾರಕದಲ್ಲಿ ಅಳವಡಿಸಬಹುದಾಗಿರುತ್ತದೆ. ಇಂತಹಾ ಸಂದರ್ಭಗಳಲ್ಲಿ HCI ಐಚ್ಛಿಕವಾದರೂ, ಸಾಮಾನ್ಯವಾಗಿ ಆಂತರಿಕ ತಂತ್ರಾಂಶ ಅಂತರ್ವರ್ತನವಾಗಿ ಅಳವಡಿಸಲಾಗಿರುತ್ತದೆ.

RFCOMM (ತಂತಿ ಬದಲಾವಣೆ ಪ್ರೋಟೋಕಾಲ್‌)

[ಬದಲಾಯಿಸಿ]

ರೇಡಿಯೋ ತರಂಗಾಂತರ ಸಂವಹನ (RFCOMM) ಎಂಬುದು ಅವಾಸ್ತವ ಸರಣಿ ದತ್ತ ಪ್ರವಾಹವನ್ನು ರಚಿಸಲು ಬಳಸುವ ತಂತಿ ಬದಲಾವಣೆ ಪ್ರೋಟೋಕಾಲ್‌. RFCOMM ದ್ವಿಮಾನ ದತ್ತ ವರ್ಗಾವಣೆಯನ್ನು ಒದಗಿಸುವುದಲ್ಲದೇ Bluetooth ಬೇಸ್‌ಬ್ಯಾಂಡ್‌ ಪದರದ ಮೇಲೆ EIA-232 (ಹಿಂದಿನ RS-232) ನಿಯಂತ್ರಣ ಸಂಕೇತಗಳನ್ನು ಅನುಕರಿಸುತ್ತದೆ.

TCPಯ ಮಾದರಿಯಲ್ಲಿ RFCOMM ಸರಳ ವಿಶ್ವಾಸಾರ್ಹ ದತ್ತ ಪ್ರವಾಹವನ್ನು ಬಳಕೆದಾರರಿಗೆ ನೀಡುತ್ತದೆ. ಅನೇಕ ದೂರವಾಣಿ ವ್ಯವಸ್ಥೆ ಆಧಾರಿತ ವೈಲಕ್ಷಣ್ಯಗಳು AT ಆದೇಶಗಳಿಗೆ ವಾಹಕವಾಗಿ, Bluetooth ಮೇಲಿನ OBEXಗೆ ಸಾಗಣಾ ಪದರವಾಗಿ ಸಹಾ ಬಳಸುತ್ತವೆ.

ಅನೇಕ Bluetooth ಅನ್ವಯಗಳು RFCOMMಅನ್ನು ಅದರ ಬಹು ವ್ಯಾಪಕ ಬೆಂಬಲ ಹಾಗೂ ಬಹಳಷ್ಟು ಕಾರ್ಯಾಚರಣಾ ವ್ಯವಸ್ಥೆಗಳಲ್ಲಿ ಲಭ್ಯವಿರುವ ಸಾರ್ವಜನಿಕ APIಗಳಿಂದಾಗಿಯೇ ಬಳಸುತ್ತವೆ. ಇದರೊಂದಿಗೆ, ಸರಣಿ ಪೋರ್ಟ್‌ನ್ನು ಸಂವಹನ ನಡೆಸಲು ಬಳಸುತ್ತಿದ್ದ ಅನ್ವಯಗಳು RFCOMM ಬಳಸುವಂತೆ ಕ್ಷಿಪ್ರವಾಗಿ ಹೊಂದಿಕೆಯಾಗಬಲ್ಲವು.

BNEP (Bluetooth ಜಾಲ ಆವರಿಸುವಿಕೆ ಪ್ರೋಟೋಕಾಲ್‌)

[ಬದಲಾಯಿಸಿ]

BNEP ಇನ್ನೊಂದು ಪ್ರೋಟೋಕಾಲ್‌ ಸ್ಟ್ಯಾಕ್‌ನ ದತ್ತವನ್ನು L2CAP ವಾಹಿನಿಯ ಮೂಲಕ ವರ್ಗಾಯಿಸಲು ಬಳಸಲಾಗುತ್ತದೆ. ಇದರ ಪ್ರಮುಖ ಉದ್ದೇಶವೇನೆಂದರೆ ಖಾಸಗಿ ವಲಯ ಜಾಲ ವೈಲಕ್ಷಣ್ಯದಲ್ಲಿ IP ಪ್ಯಾಕೆಟ್‌ಗಳ ವರ್ಗಾವಣೆ. BNEP ನಿಸ್ತಂತು LANನಲ್ಲಿ SNAPನಂತಹಾ ಕಾರ್ಯಶೈಲಿಯನ್ನು ನಿರ್ವಹಿಸುತ್ತದೆ.

AVCTP (ಶ್ರವ್ಯ/ದೃಶ್ಯ ನಿಯಂತ್ರಣ ಸಾಗಣೆ ಪ್ರೋಟೋಕಾಲ್‌)

[ಬದಲಾಯಿಸಿ]

ದೂರ ನಿಯಂತ್ರಣ ವೈಲಕ್ಷಣ್ಯವು AV/C ಆದೇಶಗಳನ್ನು L2CAP ವಾಹಿನಿಯ ಮೂಲಕ ವರ್ಗಾಯಿಸಲು ಇದನ್ನು ಬಳಸುತ್ತದೆ. ಸ್ಟೀರಿಯೋ ಶ್ರವ್ಯ ಸಾಧನಗಳಲ್ಲಿನ ಸಂಗೀತ ನಿಯಂತ್ರಣ ಬಟನ್‌ಗಳು ಸಂಗೀತ ಸಾಧನಗಳನ್ನು ನಿಯಂತ್ರಿಸಲು ಈ ಪ್ರೋಟೋಕಾಲ್‌ಅನ್ನು ಬಳಸುತ್ತವೆ.

AVDTP (ಶ್ರವ್ಯ/ದೃಶ್ಯ ದತ್ತ ಸಾಗಣೆ ಪ್ರೋಟೋಕಾಲ್‌)

[ಬದಲಾಯಿಸಿ]

ಸ್ಟೀರಿಯೋ ಶ್ರವ್ಯ ಸಾಧನಗಳಿಗೆ L2CAP ವಾಹಿನಿಯ ಮೂಲಕ ಸಂಗೀತವನ್ನು ಹರಿಸಲು ಉನ್ನತ ಧ್ವನಿ ಪ್ರಸರಣ ವೈಲಕ್ಷಣ್ಯಗಳು ಬಳಸುತ್ತವೆ. ದೃಶ್ಯ ಪ್ರಸರಣ ವೈಲಕ್ಷಣ್ಯಗಳು ಬಳಸಲೆಂದು ಇದನ್ನು ಉದ್ದೇಶಿಸಲಾಗಿತ್ತು.

ದೂರವಾಣಿ ನಿಯಂತ್ರಣ ಪ್ರೋಟೋಕಾಲ್‌

[ಬದಲಾಯಿಸಿ]

ದೂರವಾಣಿ ವ್ಯವಸ್ಥೆ ನಿಯಂತ್ರಣ ದ್ವಿಮಾನ-ಪ್ರೋಟೋಕಾಲ್‌ (TCS BIN) ಬಿಟ್‌-ಆಧರಿತ ಪ್ರೋಟೋಕಾಲ್‌ ಆಗಿದ್ದು Bluetooth ಸಾಧನಗಳ ನಡುವಿನ ಧ್ವನಿ ಮತ್ತು ದತ್ತ ಕರೆಗಳನ್ನು ಸ್ಥಾಪಿಸಲು ಬಳಸುವ ಕರೆ ನಿಯಂತ್ರಣ ಸಂಕೇತ ವ್ಯವಸ್ಥೆಯೆಂದು ವರ್ಣಿಸಬಹುದು. ಇದರೊಂದಿಗೆ, "Bluetooth TCS ಸಾಧನಗಳ ಸಮೂಹವನ್ನು ನಿರ್ವಹಿಸಲು ಚಲನಶೀಲತೆ ನಿರ್ವಹಣಾ ವಿಧಾನವನ್ನು TCS BIN ವರ್ಣಿಸುತ್ತದೆ."

ಉತ್ಪಾದಕರನ್ನು ಆಕರ್ಷಿಸಲು ವಿಫಲವಾದ ತಂತಿರಹಿತ ದೂರವಾಣಿ ವ್ಯವಸ್ಥೆ ವೈಲಕ್ಷಣ್ಯದಲ್ಲಿ ಮಾತ್ರ TCS-BIN ಬಳಕೆಯಲ್ಲಿದೆ. ಇಂತಹಾ ಸನ್ನಿವೇಶದಲ್ಲಿ ಇದು ಕೇವಲ ಐತಿಹಾಸಿಕ ಆಸಕ್ತಿಯದಾಗಿದೆ.

ಅಳವಡಿಕೆ ಪ್ರೋಟೋಕಾಲ್‌ಗಳು

[ಬದಲಾಯಿಸಿ]

ಅಳವಡಿಕೆ ಪ್ರೋಟೋಕಾಲ್‌ಗಳು ಇತರೆ ಮಾನಕ-ರಚನಾ ಸಂಸ್ಥೆಗಳಿಂದ ವರ್ಣಿತವಾಗಿದ್ದು, ನಂತರ Bluetoothನ ಪ್ರೋಟೋಕಾಲ್‌ ಸ್ಟ್ಯಾಕ್‌ನಲ್ಲಿ ಸಂಯೋಜಿತವಾಗಿರುವ ಪ್ರೋಟೋಕಾಲ್‌ಗಳಾಗಿದ್ದು, Bluetooth ವ್ಯವಸ್ಥೆಗೆ ಅಗತ್ಯ ಬಿದ್ದಾಗ ಮಾತ್ರವೇ ಪ್ರೋಟೋಕಾಲ್‌ಗಳನ್ನು ರಚಿಸುವ ಸೌಲಭ್ಯ ನೀಡಿವೆ. ಲಭ್ಯವಿರುವ ಅಳವಡಿಕೆ ಪ್ರೋಟೋಕಾಲ್‌ಗಳೆಂದರೆ:

ನೆಲೆಯಿಂದ-ನೆಲೆಗೆ ಪ್ರೋಟೋಕಾಲ್‌ (PPP)
IP ಡಾಟಾಗ್ರಾಂಗಳನ್ನು ನೆಲೆಯಿಂದ-ನೆಲೆಗೆ ಸಂಪರ್ಕದ ಮೂಲಕ ವರ್ಗಾಯಿಸಲು ಬಳಸುವ ಅಂತರಜಾಲ ಮಾನಕ ಪ್ರೋಟೋಕಾಲ್‌.
TCP/IP/UDP
TCP/IP ಪ್ರೋಟೋಕಾಲ್‌ ಸಮೂಹದ ತಳಹದಿ ಪ್ರೋಟೋಕಾಲ್‌ಗಳು.
ವಸ್ತು ವಿನಿಮಯ ಪ್ರೋಟೋಕಾಲ್‌ (OBEX)
ವಸ್ತು ಮತ್ತು ಕಾರ್ಯ ಪ್ರತಿನಿಧಿಸುವ ವಿಧಾನ ನೀಡುವಂತಹಾ ವಸ್ತುಗಳ ವಿನಿಮಯಕ್ಕೆಂದು ಬಳಸುವ ಕಾಲಾವಧಿ-ಪದರ ಪ್ರೋಟೋಕಾಲ್.
ನಿಸ್ತಂತು ಅನ್ವಯ ಆವರಣ/ನಿಸ್ತಂತು ಅನ್ವಯ ಪ್ರೋಟೋಕಾಲ್‌ (WAE/WAP)
WAE ನಿಸ್ತಂತು ಸಾಧನಗಳಿಗೆಂದು ಒಂದು ಅನ್ವಯಿಕ ಚೌಕಟ್ಟನ್ನು ಸೂಚಿಸಿದರೆ, WAP ಸಂಚಾರಿ ದೂರವಾಣಿ ಬಳಕೆದಾರರಿಗೆ ದೂರವಾಣಿ ವ್ಯವಸ್ಥೆ ಹಾಗೂ ಮಾಹಿತಿ ಸೇವೆಗಳ ಸೌಲಭ್ಯ ನೀಡುವ ಮುಕ್ತ ಮಾನಕವಾಗಿದೆ.[೨೦]

ಸಂವಹನ ಮತ್ತು ಸಂಪರ್ಕ

[ಬದಲಾಯಿಸಿ]

ನಿಯಂತ್ರಕ Bluetooth ಸಾಧನವೊಂದು ನಿಸ್ತಂತು ಬಳಕೆದಾರ ಗುಂಪಿನಲ್ಲಿರುವ ಏಳಕ್ಕೆ ಮೀರದ ಸಂಖ್ಯೆಯ ಸಾಧನಗಳೊಂದಿಗೆ ಸಂವಹನ ನಡೆಸಬಹುದಾಗಿದೆ. ಈ ಮಾದರಿಯ ಎಂಟು ಸಾಧನಗಳಿರಬಹುದಾದ ಜಾಲ ಸಮೂಹಕ್ಕೆ ಪಿಕೊನೆಟ್‌ ಎಂದು ಕರೆಯುತ್ತಾರೆ.

ಪಿಕೊನೆಟ್‌ ಎಂಬುದು Bluetooth ತಂತ್ರಜ್ಞಾನದ ಪ್ರೋಟೋಕಾಲ್‌ಗಳನ್ನು ಬಳಸಿಕೊಂಡು ಮೂಲ ಸಾಧನವೊಂದನ್ನು ಇತರ ಏಳು ಸಕ್ರಿಯ ಸಾಧನಗಳೊಂದಿಗೆ ಅಂತರ್‌ಸಂಪರ್ಕ ಸಾಧಿಸಲು ಅನುವು ಮಾಡುವ ತಾತ್ಪೂರ್ತಿಕ ಗಣಕ ಜಾಲವಾಗಿದೆ. 255 ಇತರೆ ಸಾಧನಗಳು ನಿಷ್ಕ್ರಿಯ ಇಲ್ಲವೇ ಸ್ಥಗಿತಗೊಂಡ ಸ್ಥಿತಿಯಲ್ಲಿರಬಹುದಾಗಿದ್ದು, ಅವನ್ನು ನಿಯಂತ್ರಕ ಸಾಧನವು ಯಾವುದೇ ಸಮಯದಲ್ಲಾದರೂ ಸಕ್ರಿಯ ಸ್ಥಿತಿಗೆ ತರಬಲ್ಲ ಸಾಮರ್ಥ್ಯ ಪಡೆದಿರುತ್ತದೆ.

ಯಾವುದೇ ಸಮಯದಲ್ಲಿ ನಿಯಂತ್ರಕ ಹಾಗೂ ಮತ್ತೊಂದು ಸಾಧನದ ನಡುವೆ, ದತ್ತ ವರ್ಗಾಯಿಸಬಹುದಾಗಿದೆ. ಇಷ್ಟೇ ಅಲ್ಲದೇ ಸಾಧನಗಳು ತಮ್ಮೊಳಗೆ ಪಾತ್ರವನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದ್ದು, ಅಧೀನ ಸಾಧನವು ನಿಯಂತ್ರಕ ಸಾಧನವಾಗಬಹುದಾಗಿರುತ್ತದೆ. ನಿಯಂತ್ರಕ ಸಾಧನವು ಒಂದು ಸಾಧನದಿಂದ ಇನ್ನೊಂದು ಸಾಧನಕ್ಕೆ ಕ್ಷಿಪ್ರಗತಿಯಲ್ಲಿ ಸುತ್ತು-ಸರದಿ‌ಯ ಮಾದರಿಯಲ್ಲಿ ಬದಲಾಯಿಸುತ್ತಿರುತ್ತದೆ. (ನಿಯಂತ್ರಕ ಸಾಧನದಿಂದ ಇತರೆ ಅನೇಕ ಸಾಧನಗಳಿಗೆ ಸಮಕಾಲಿಕ ಸಂವಹನವು ಸಾಧ್ಯವಿದ್ದರೂ, ಹೆಚ್ಚು ಬಳಕೆಯಲ್ಲಿಲ್ಲ.)

Bluetooth ನಿರ್ದಿಷ್ಟತೆ ಎರಡು ಅಥವಾ ಹೆಚ್ಚಿನ ಪಿಕೋನೆಟ್‌ಗಳನ್ನು ಸಂಯೋಜಿಸಿ ಸ್ಕ್ಯಾಟರ್‌ನೆಟ್‌ಅನ್ನು ರಚಿಸಿಕೊಳ್ಳಲು ಅನುಮತಿಸುತ್ತದೆ. ಇಷ್ಟೇ ಅಲ್ಲದೇ ಸೇತುವೆಯ ಹಾಗೆ ಒಮ್ಮೆಗೆ ಒಂದು ಪಿಕೋನೆಟ್‌ನಲ್ಲಿ ನಿಯಂತ್ರಕವಾಗಿದ್ದು, ಇನ್ನೊಂದೆಡೆ ಅಧೀನ ಸಾಧನವಾಗಿ ಕಾರ್ಯಾಚರಿಸುವಂತಹಾ ಕೆಲ ಸಾಧನಗಳನ್ನು ಸಹಾ ಇದು ಹೊಂದಿರಬಹುದಾಗಿರುತ್ತದೆ.

ಅನೇಕ USB Bluetooth ಸಂಯೋಜಕಗಳು ಲಭ್ಯವಿದ್ದು, ಅವುಗಳಲ್ಲಿ ಕೆಲವು IrDA ಸಂಯೋಜಕವನ್ನು ಸಹಾ ಹೊಂದಿವೆ. ಹಳೆಯ (2003ಕ್ಕಿಂತ ಹಿಂದಿನ) Bluetooth ಸಂಯೋಜಕಗಳು Bluetooth ಸಾಧನ ಪಟ್ಟಿ ರಚನೆ ಮತ್ತು ಅಲ್ಪ-ಶಕ್ತಿಯ Bluetooth ರೇಡಿಯೋ ಸ್ವರೂಪಗಳನ್ನೊಳಗೊಂಡಂತೆ ಕೆಲವೇ ನಿಯಮಿತ ಸೇವೆಗಳನ್ನು ನೀಡಲು ಮಾತ್ರ ಶಕ್ತವಾಗಿದ್ದವು. ಈ ಮಾದರಿಯ ಸಾಧನಗಳು ಗಣಕಗಳನ್ನು Bluetoothನೊಂದಿಗೆ ಸಂಪರ್ಕಿಸುವ ಸೌಲಭ್ಯ ಹೊಂದಿದ್ದರೂ, ಆಧುನಿಕ ಸಂಯೋಜಕಗಳು ನೀಡುವ ಮಾದರಿಯ ಸೇವೆಗಳನ್ನು ನೀಡುತ್ತಿರಲಿಲ್ಲ.

ಬೇಸ್‌ಬ್ಯಾಂಡ್‌ ದೋಷ ತಿದ್ದುಪಡಿ

[ಬದಲಾಯಿಸಿ]

Bluetooth ವ್ಯವಸ್ಥೆಗಳಲ್ಲಿ ಅಳವಡಿಸಿರುವ ಮೂರು ವಿಧವಾದ ದೋಷ ತಿದ್ದುಪಡಿಗಳೆಂದರೆ,

ಸಂಪರ್ಕಗಳ ಏರ್ಪಡಿಕೆ

[ಬದಲಾಯಿಸಿ]

ಯಾವುದೇ Bluetooth ಸಾಧನವು ಆಗ್ರಹದ ಮೇರೆಗೆ ಕೆಳಕಂಡ ಮಾಹಿತಿಯನ್ನು ರವಾನಿಸಬಲ್ಲದು:

  • ಸಾಧನದ ಹೆಸರು.
  • ಸಾಧನದ ದರ್ಜೆ.
  • ಬೆಂಬಲಿಸುವ ಸೇವೆಗಳ ಪಟ್ಟಿ.
  • ತಾಂತ್ರಿಕ ಮಾಹಿತಿ, ಉದಾಹರಣೆಗೆ, ಸಾಧನ ಸೌಲಭ್ಯಗಳು, ಉತ್ಪಾದಕರು, ಬಳಸಿರುವ Bluetooth ನಿರ್ದಿಷ್ಟತೆಗಳು, ಕ್ಲಾಕ್‌ ಆಫ್‌ಸೆಟ್‌ಗಳು.

ಯಾವುದೇ ಸಾಧನವು ಸಂಪರ್ಕಿಸಲೆಂದು ಉಳಿದ ಸಾಧನಗಳ ಕುರಿತು ವಿಚಾರಿಸಬಹುದಾಗಿದ್ದು, ಹಾಗೆಯೇ ಯಾವುದೇ ಸಾಧನವನ್ನು ಆ ಮಾದರಿಯ ವಿಚಾರಣೆಗೆ ಪ್ರತಿಕ್ರಿಯೆ ನೀಡುವ ಕುರಿತು ಅಣಿಗೊಳಿಸಬಹುದಾಗಿದೆ. ಆದರೂ, ಸಂಪರ್ಕಿಸಲೆತ್ನಿಸುವ ಸಾಧನವು ಸಂಪರ್ಕಿಸಬೇಕಾದ ಸಾಧನದ ವಿಳಾಸವನ್ನು ತಿಳಿದಿದ್ದರೆ, ಯಾವಾಗಲೂ ನೇರ ಸಂಪರ್ಕ ಕೋರಿಕೆಗೆ ಪ್ರತಿಕ್ರಿಯೆ ನೀಡುವುದಲ್ಲದೇ, ಕೋರಿಕೆಯ ಮೇರೆಗೆ ಮೇಲ್ಕಂಡ ಪಟ್ಟಿಯಲ್ಲಿರುವ ಮಾಹಿತಿಯನ್ನು ರವಾನಿಸುತ್ತದೆ. ಸಾಧನವೊಂದರ ಸೇವೆಯ ಬಳಕೆಯು ಜೋಡಿಸುವಿಕೆಯನ್ನು ಅಥವಾ ಸಾಧನದ ಮಾಲಿಕರ ಒಪ್ಪಿಗೆಯನ್ನು ನಿರೀಕ್ಷಿಸಿದರೂ, ಸಂಪರ್ಕವನ್ನು ಯಾವುದೇ ಸಾಧನವು ಆರಂಭಿಸಬಹುದಾಗಿದ್ದು, ವ್ಯಾಪ್ತಿಯ ಪ್ರದೇಶದಿಂದ ಹೊರಗೆ ಹೋಗುವವರೆಗೆ ಈ ಸಂಪರ್ಕವನ್ನು ಕಾಯ್ದಿಡಬಹುದಾಗಿರುತ್ತದೆ. ಕೆಲ ಸಾಧನಗಳು ಒಮ್ಮೆಗೆ ಒಂದೇ ಸಾಧನಕ್ಕೆ ಸಂಪರ್ಕ ಹೊಂದಿರಬಹುದಲ್ಲದೇ, ಅಂತಹಾ ಸಾಧನಗಳೊಂದಿಗೆ ಸಂಪರ್ಕಿತವಾದ ಸಾಧನಗಳು ಸಂಪರ್ಕಿತ ಸಮಯದಲ್ಲಿ ಇತರ ಯಾವುದೇ ಸಾಧನಗಳೊಂದಿಗೆ ಸಂಪರ್ಕಿಸುವುದು ಇಲ್ಲವೇ ವಿಚಾರಣೆಯಲ್ಲಿ ಗುರುತಿಸಿಕೊಳ್ಳುವುದು ಇನ್ನೊಂದು ಸಾಧನದಿಂದ ಪ್ರತ್ಯೇಕಗೊಳಿಸುವ ಮುನ್ನ ಸಾಧ್ಯವಿರುವುದಿಲ್ಲ.

ಪ್ರತಿ ಸಾಧನವು ಅಸದೃಶ 48-ಬಿಟ್‌ ವಿಳಾಸವನ್ನು ಹೊಂದಿರುತ್ತದೆ. ಆದರೂ ಈ ವಿಳಾಸಗಳು ಸಾಧಾರಣವಾಗಿ ವಿಚಾರಣೆಗಳಲ್ಲಿ ಪ್ರದರ್ಶಿಸಲ್ಪಡುವುದಿಲ್ಲ. ಬದಲಿಗೆ, ಉಪಯುಕ್ತವಾದ, ಬಳಕೆದಾರರಿಂದ ಸೂಚಿತಗೊಳ್ಳಬಹುದಾದ Bluetooth ಹೆಸರುಗಳನ್ನು ಬಳಸಲಾಗುತ್ತದೆ. ಈ ಹೆಸರು ಇತರೆ ಬಳಕೆದಾರರು ಸಾಧನಗಳಿಗೆಂದು ಪರಿಶೀಲನೆ ನಡೆಸುವಾಗ ಮತ್ತು ಜೋಡಿಯಾಗಿರುವ ಸಾಧನಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತದೆ.

ಬಹಳಷ್ಟು ದೂರವಾಣಿಗಳು ಸಾಧಾರಣವಾಗಿ ತಮ್ಮ ಉತ್ಪಾದಕರ ಮತ್ತು ದೂರವಾಣಿ ಮಾದರಿಯ ಹೆಸರನ್ನು Bluetooth ಹೆಸರಾಗಿ ಹೊಂದಿರುತ್ತವೆ. ಬಹಳಷ್ಟು ದೂರವಾಣಿಗಳು ಮತ್ತು ಮಡಿಲಗಣಕಗಳು ಕೇವಲ Bluetooth ಹೆಸರನ್ನು ಮಾತ್ರ ಪ್ರದರ್ಶಿಸುವುದರಿಂದ, ದೂರ ಸಂಪರ್ಕಿತ ಸಾಧನಗಳ ಬಗೆಗಿನ ಹೆಚ್ಚಿನ ಮಾಹಿತಿಗಳಿಗಾಗಿ ವಿಶೇಷ ಪ್ರೋಗ್ರಾಂಗಳ ಅಗತ್ಯವಿರುತ್ತದೆ. ಇದು ಕೆಲವೊಮ್ಮೆ ಗೊಂದಲಕ್ಕೆ ಕಾರಣವಾಗುವುದೂ ಉಂಟು, ಉದಾಹರಣೆಗೆ, ವ್ಯಾಪ್ತಿಯಲ್ಲಿ T610 ಎಂಬ ಹೆಸರಿನ ಅನೇಕ ಸಾಧನಗಳಿರುವ ಸಾಧ್ಯತೆ ಇರುತ್ತದೆ (ಬ್ಲೂಜ್ಯಾಕಿಂಗ್‌ ನೋಡಿ).

ಜೋಡಿಸುವಿಕೆ

[ಬದಲಾಯಿಸಿ]

ಸಾಧನಗಳ ಜೋಡಿಗಳು ಸಂಪರ್ಕ ಕೀಲಿ ಎಂದು ಹೆಸರಾದ ಹಂಚಿಕೊಳ್ಳಬಹುದಾದ ಗುಟ್ಟನ್ನು ರಚಿಸಿ ಪರಸ್ಪರ ಸಂಬಂಧವನ್ನೇರ್ಪಡಿಸಿಕೊಳ್ಳಬಹುದಾಗಿದೆ, ಈ ಪ್ರಕ್ರಿಯೆಯನ್ನು ಜೋಡಿಸುವಿಕೆ ಎಂದು ಕರೆಯುತ್ತಾರೆ. ಎರಡೂ ಸಾಧನಗಳಲ್ಲಿ ಸಂಪರ್ಕ ಕೀಲಿಯು ಸಂಗ್ರಹಿತವಾಗಿದ್ದರೆ ಆ ಸಾಧನಗಳನ್ನು ಬಂಧಿತ ಸಾಧನಗಳು ಎನ್ನಲಾಗುತ್ತದೆ. ಕೇವಲ ಬಂಧಿತ ಸಾಧನದೊಂದಿಗೆ ಮಾತ್ರವೇ ಸಂಪರ್ಕಿಸಬಯಸುವ ಸಾಧನವು ಗೂಢಲಿಪೀಕರಣದ ಮೂಲಕ ಮತ್ತೊಂದು ಸಾಧನದ ಗುರುತನ್ನು ತಾನು ಈ ಹಿಂದೆ ಜೋಡಿಸಿಕೊಂಡಿದ್ದ ಸಾಧನವೇ ಎಂಬುದನ್ನು ದೃಢಪಡಿಸಿಕೊಳ್ಳಬಹುದಾಗಿದೆ. ಸಂಪರ್ಕ ಕೀಲಿಯೊಂದು ರಚನೆಯಾದ ನಂತರ, ಸಾಧನಗಳ ನಡುವಿನ ದೃಢೀಕರಿಸಿದ ACL ಸಂಪರ್ಕವು ಗೂಢಲಿಪೀಕೃತಗೊಳಿಸಬಹುದಾಗಿದ್ದು ವಾಯುತರಂಗಗಳ ಮೂಲಕ ವಿನಿಮಯ ಮಾಡಿಕೊಳ್ಳುವ ದತ್ತವು ಕದ್ದಾಲಿಕೆಗೊಳ್ಳುವುದರಿಂದ ರಕ್ಷಣೆ ಪಡೆಯಬಹುದು. ಸಂಪರ್ಕ ಕೀಲಿಗಳನ್ನು ಉಭಯ ಸಾಧನಗಳಲ್ಲಿ ಯಾವುದು ಬೇಕಾದರೂ ಅಳಿಸಿಕೊಳ್ಳಬಹುದಾಗಿದ್ದು, ಹಾಗೆ ಮಾಡಿದ ನಂತರ ಉಭಯ ಸಾಧನಗಳ ನಡುವಿನ ಬಂಧನವು ನಿಸ್ಸಂದೇಹವಾಗಿ ಕೊನೆಗೊಳ್ಳುವುದು, ಹೀಗಾಗಿ ಸಾಧನವೊಂದು ಸಂಪರ್ಕ ಕೀಲಿಯನ್ನು ಸಂಗ್ರಹಿಸಿಟ್ಟುಕೊಂಡಿದ್ದರೂ ಸಂಬಂಧಿತ ಸಾಧನದ ಜೊತೆಗಿದ್ದ ಬಂಧನವು ಕೊನೆಗೊಂಡಿರುವುದರ ಅರಿವಿಲ್ಲದೇ ಇರುವ ಸಾಧ್ಯತೆ ಇರುತ್ತದೆ.

Bluetooth ಸೇವೆಗಳು ಸಾಧಾರಣವಾಗಿ ಗೂಢಲಿಪೀಕರಣ ಇಲ್ಲವೇ ದೃಢೀಕರಣಗಳಲ್ಲಿ ಯಾವುದಾದರೊಂದನ್ನು ನಿರೀಕ್ಷಿಸುತ್ತವೆ, ಇದೇ ನಿರೀಕ್ಷೆಯು ನಿಗದಿತ ಸೇವೆಯನ್ನು ಬಳಸುವ ಮುನ್ನ ಜೋಡಿಸುವಿಕೆಯನ್ನು ಸಹಾ ನಿರೀಕ್ಷಿಸುತ್ತವೆ. ಕೆಲ ಸೇವೆಗಳು, ಉದಾಹರಣೆಗೆ ವಸ್ತು ಪ್ರೋತ್ಸಾಹ ವೈಲಕ್ಷಣ್ಯಗಳು ಸೇವೆಯ ಬಳಕೆ-ಸಾಧ್ಯತೆಗಳಿಗೆ ಸಂಬಂಧಿಸಿದಂತೆ ಬಳಕೆದಾರರ ಅನುಭವದಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ನಡೆಯದಂತೆ ಮುನ್ನೆಚ್ಚರಿಕೆಯಾಗಿ ಅಧಿಕೃತವಾಗಿ ದೃಢೀಕರಣ ಅಥವಾ ಗೂಢಲಿಪೀಕರಣಗಳನ್ನು ನಿರೀಕ್ಷಿಸದಿರುವಿಕೆಯನ್ನು ಆಯ್ಕೆ ಮಾಡಿಕೊಂಡಿವೆ.

ಜೋಡಿಸುವಿಕೆಯ ತಾಂತ್ರಿಕತೆಯು Bluetooth 2.1 ಆವೃತ್ತಿಯಲ್ಲಿ ಸುರಕ್ಷಿತ ಸರಳ ಜೋಡಿಸುವಿಕೆಯ ಪರಿಚಯದೊಂದಿಗೆ ಗಮನಾರ್ಹವಾಗಿ ಬದಲಾಗಿದೆ. ಜೋಡಿಸುವಿಕೆಯ ತಾಂತ್ರಿಕತೆಗಳನ್ನು ಕೆಳಗೆ ಸಂಕ್ಷಿಪ್ತವಾಗಿ ಕೊಡಲಾಗಿದೆ:

  • ಸಾಂಪ್ರದಾಯಿಕ ಜೋಡಿಸುವಿಕೆ : Bluetooth 2.1ರ ಮುನ್ನ ಲಭ್ಯವಿದ್ದ ಏಕೈಕ ವಿಧಾನವಿದು. ಪ್ರತಿ ಸಾಧನವು PIN ಸಂಕೇತವನ್ನು ಕಡ್ಡಾಯವಾಗಿ ನಮೂದಿಸಬೇಕಿದ್ದುದಲ್ಲದೇ, ಉಭಯ ಸಾಧನಗಳು ಒಂದೇ PIN ಸಂಕೇತವನ್ನು ನೀಡಿದರೆ ಮಾತ್ರವೇ ಜೋಡಿಸುವಿಕೆ ಯಶಸ್ವಿಯಾಗುತ್ತಿತ್ತು. ಯಾವುದೇ 16-ಅಂಕಿ ACSII ಪದವನ್ನು PIN ಸಂಕೇತವನ್ನಾಗಿ ಬಳಸಬಹುದಾಗಿದ್ದರೂ, ಎಲ್ಲಾ ಸಾಧನಗಳೂ ಎಲ್ಲಾ ಸಂಭವನೀಯ PIN ಸಂಕೇತಗಳನ್ನು ನಮೂದಿಸುವ ಸೌಲಭ್ಯವನ್ನು ಹೊಂದಿರುತ್ತಿದ್ದ ಸಾಧ್ಯತೆ ಇರಲಿಲ್ಲ.
    • ನಿಯಮಿತ ಆದಾನ ಸಾಧನಗಳು : ಈ ಮಾದರಿಯ ಸಾಧನಗಳಿಗೆ ಸುಸ್ಪಷ್ಟ ಉದಾಹರಣೆಯೆಂದರೆ ಸಾಧಾರಣವಾಗಿ ಕೆಲವೇ ಆದಾನಗಳಿರುವ Bluetooth ಹಸ್ತ-ಮುಕ್ತ ಶ್ರವ್ಯ ಸಾಧನ. ಈ ಸಾಧನಗಳು ಸಾಧಾರಣವಾಗಿ ಆಂತರಿಕವಾಗಿ ಅಳವಡಿಸಲಾದ ಒಂದು ಸ್ಥಿರ PIN ಅನ್ನು ಹೊಂದಿರುತ್ತವೆ, ಉದಾಹರಣೆಗೆ "0000" ಅಥವಾ "1234".
    • ಸಾಂಖ್ಯಿಕ ಆದಾನ ಸಾಧನಗಳು : ಸಂಚಾರಿ ದೂರವಾಣಿಗಳು ಇವುಗಳಿಗೆ ಅತ್ಯಂತ ಸೂಕ್ತವಾದ ಉದಾಹರಣೆಗಳಾಗಿವೆ. ಇವು ಬಳಕೆದಾರರಿಗೆ 16 ಅಂಕಿಗಳಷ್ಟು ಉದ್ದವಿರಬಹುದಾದ ಸಂಖ್ಯೆಯನ್ನು ನಮೂದಿಸಲು ಅನುಮತಿಸುತ್ತವೆ.
    • ಅಕ್ಷರ-ಸಾಂಖ್ಯಿಕ ಆದಾನ ಸಾಧನಗಳು : PCಗಳು ಮತ್ತು ಚೂಟಿ ಸಂಚಾರಿ ದೂರವಾಣಿಗಳು ಈ ಸಾಧನಗಳಿಗೆ ಉದಾಹರಣೆಯಾಗಿವೆ. ಇವು ಪೂರ್ಣ ASCII ಪಠ್ಯವನ್ನು PIN ಸಂಕೇತವಾಗಿ ನಮೂದಿಸಲು ಬಳಕೆದಾರರಿಗೆ ಸಾಧ್ಯವಾಗಿಸುತ್ತವೆ. ಕಡಿಮೆ ಸಾಮರ್ಥ್ಯದ ಸಾಧನಗಳೊಂದಿಗೆ ಜೋಡಿಸುವಿಕೆಯಾಗುವ ಸಂದರ್ಭದಲ್ಲಿ ಬಳಕೆದಾರರು ಇತರೆ ಸಾಧನದ ಆದಾನದ ಮಿತಿಯನ್ನು ಅರಿತುಕೊಂಡಿರಬೇಕು, ಬಳಕೆದಾರರು ಬಳಸಬಹುದಾದ ಆದಾನ ಮಿತಿಯನ್ನು ಪತ್ತೆ ಹಚ್ಚಬಲ್ಲ ಯಾವುದೇ ರೀತಿಯ ತಾಂತ್ರಿಕತೆಯೂ ಲಭ್ಯವಿಲ್ಲ.
  • ಸುರಕ್ಷಿತ ಸರಳ ಜೋಡಿಸುವಿಕೆ : Bluetooth 2.1 ಆವೃತ್ತಿಯ ವ್ಯವಸ್ಥೆಯು ಇದನ್ನು ನಿರೀಕ್ಷಿಸುತ್ತದೆ. Bluetooth 2.1 ಆವೃತ್ತಿಯ ಸಾಧನವು 2.0ನೇ ಆವೃತ್ತಿ ಅಥವಾ ಹಳೆಯ ಸಾಧನದೊಂದಿಗೆ ಪರಸ್ಪರ ಕಾರ್ಯಾಚರಿಸಬಲ್ಲ ಹಾಗೆ ಕೇವಲ ಸಾಂಪ್ರದಾಯಿಕ ಜೋಡಿಸುವಿಕೆಯನ್ನು ಮಾತ್ರವೇ ಬಳಸಬಲ್ಲದು. ಸುರಕ್ಷಿತ ಸರಳ ಜೋಡಿಸುವಿಕೆಯು ಸಾರ್ವಜನಿಕ ಕೀಲಿ ಗೂಢಲಿಪೀಕರಣದ ಒಂದು ಮಾದರಿಯನ್ನು ಬಳಸುತ್ತಿದ್ದು , ಕೆಳಕಂಡ ಕಾರ್ಯಾಚರಣೆಯ ವಿಧಾನಗಳನ್ನೊಳಗೊಂಡಿದೆ:
    • ಸಹಜ ಕಾರ್ಯಾಚರಣೆ : ಹೆಸರೇ ಸೂಚಿಸುವ ಹಾಗೆ ಈ ವಿಧಾನವು ಸಹಜವಾಗಿ ಕಾರ್ಯಾಚರಿಸುತ್ತದೆ. ಯಾವುದೇ ರೀತಿಯ ಬಳಕೆದಾರರ ಪ್ರತಿಕ್ರಿಯೆಯ ಅಗತ್ಯವಿಲ್ಲ ; ಆದರೂ ಸಾಧನವು ಜೋಡಿಸುವಿಕೆಗೆ ಮುನ್ನ ಜೋಡಿಸುವಿಕೆಯ ಪ್ರಕ್ರಿಯೆಗೆ ಒಪ್ಪಿಗೆಯನ್ನು ಕೋರಿಕೆಯನ್ನು ಕೋರಬಹುದು. ಈ ವಿಧಾನವು ಸಾಧಾರಣವಾಗಿ ಬಹಳ ನಿಯಮಿತ IO ಸಾಮರ್ಥ್ಯಗಳಿರುವ ಶ್ರವ್ಯ ಸಾಧನಗಳೊಂದಿಗೆ ಬಳಸಲಾಗುತ್ತಿದ್ದು, ಈ ವ್ಯವಸ್ಥೆಯು ಈ ಮಾದರಿಯ ನಿಯಮಿತ ಸಾಧನಗಳ ಸಮೂಹದಲ್ಲಿ ಸಾಮಾನ್ಯವಾದ ಸ್ಥಿರ PIN ತಾಂತ್ರಿಕತೆಗಿಂತ ಸುರಕ್ಷಿತವಾದುದಾಗಿದೆ. ಈ ವಿಧಾನವು ಮಾನವ ಹಸ್ತಕ್ಷೇಪರಹಿತ (MITM) ಸುರಕ್ಷೆಯನ್ನು ನೀಡುತ್ತದೆ.
    • ಸಾಂಖ್ಯಿಕ ಹೋಲಿಕೆ : ಉಭಯ ಸಾಧನಗಳೂ ಪ್ರದರ್ಶಕವನ್ನು ಹೊಂದಿದ್ದು, ಅವುಗಳಲ್ಲಿ ಕನಿಷ್ಟ ಒಂದು ಸಾಧನವು ದ್ವಿಮಾನ ಹೌದು/ಇಲ್ಲ ಬಳಕೆದಾರ ಆದಾನವನ್ನು ಸ್ವೀಕರಿಸುವ ಕ್ಷಮತೆಯನ್ನು ಹೊಂದಿದ್ದರೆ ಈ ವಿಧಾನವನ್ನು ಬಳಸಬಹುದು. ಈ ವಿಧಾನವು 6-ಅಂಕಿಯ ಸಾಂಖ್ಯಿಕ ಸಂಕೇತವನ್ನು ಪ್ರತಿ ಸಾಧನದಲ್ಲಿಯೂ ಪ್ರದರ್ಶಿಸುತ್ತದೆ. ಬಳಕೆದಾರ ಇವೆರಡೂ ಸಂಖ್ಯೆಗಳನ್ನೂ ಹೋಲಿಸಿ ಎರಡೂ ಒಂದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿರುತ್ತದೆ. ಹೋಲಿಕೆಯು ಯಶಸ್ವಿಯಾದರೆ ಬಳಕೆದಾರ(ರು) ಆದಾನವನ್ನು ಸ್ವೀಕರಿಸಬಲ್ಲ ಸಾಧನದ(ಗಳ)ಲ್ಲಿ ಜೋಡಿಸುವಿಕೆಯನ್ನು ದೃಢೀಕರಿಸಬೇಕು. ಈ ವಿಧಾನವು, ಬಳಕೆದಾರರು ಸರಿಯಾಗಿ ಹೋಲಿಕೆ ಮಾಡಿ ನೋಡಿ ಉಭಯ ಸಾಧನಗಳಲ್ಲಿ ದೃಢೀಕರಿಸಿದ್ದಾದರೆ MITM ಸುರಕ್ಷತೆಯನ್ನು ನೀಡುತ್ತದೆ.
    • ಸಂಕೇತಕೀಲಿ ನಮೂದನೆ  : ಈ ವಿಧಾನವನ್ನು ದರ್ಶಕ ಹೊಂದಿರುವ ಸಾಧನ ಹಾಗೂ ಸಾಂಖ್ಯಿಕ ಕೀಲಿಮಣೆ ನಮೂದನೆ ಸಾಧ್ಯವಿರುವ (ಕೀಲಿಮಣೆಯಂತಹಾ) ಸಾಧನಗಳ ನಡುವೆ ಇಲ್ಲವೇ ಎರಡು ಸಾಂಖ್ಯಿಕ ಕೀಲಿಮಣೆ ನಮೂದನೆ ಸಾಧ್ಯವಿರುವ ಸಾಧನಗಳಲ್ಲಿ ಬಳಸಲಾಗುತ್ತದೆ. ಮೊದಲನೇ ಸಂದರ್ಭದಲ್ಲಿ, ಕೀಲಿಮಣೆಯ ಮೂಲಕ ಬಳಕೆದಾರರು ನಂತರ ನಮೂದಿಸುವ ಹಾಗೆ ದರ್ಶಕದಲ್ಲಿ 6-ಅಂಕಿಯ ಸಾಂಖ್ಯಿಕ ಸಂಕೇತವನ್ನು ಬಳಕೆದಾರರಿಗೆ ಪ್ರದರ್ಶಿಸಲಾಗುತ್ತದೆ. ಎರಡನೇ ಸಂದರ್ಭದಲ್ಲಿ ಪ್ರತಿ ಸಾಧನದ ಬಳಕೆದಾರರು ಒಂದೇ 6-ಅಂಕಿಯ ಸಂಖ್ಯೆಯನ್ನು ನಮೂದಿಸುತ್ತಾರೆ. ಎರಡೂ ಸಂದರ್ಭಗಳಲ್ಲಿ MITM ಸುರಕ್ಷತೆಯನ್ನು ನೀಡಿರಲಾಗುತ್ತದೆ.
    • ಶ್ರೇಣಿ/ಪಟ್ಟಿಯ ಹೊರಗೆ (OOB): ಈ ವಿಧಾನವು ಜೋಡಿಸುವಿಕೆಯ ಪ್ರಕ್ರಿಯೆಯಲ್ಲಿ ಕೆಲ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು (NFCನಂತಹಾ) ಬಾಹ್ಯ ಸಂವಹನ ಸಾಧನವನ್ನು ಬಳಸುತ್ತದೆ. ಜೋಡಿಸುವಿಕೆಯು Bluetooth ರೇಡಿಯೋ ಸಂಕೇತಗಳನ್ನು ಬಳಸಿ ನಡೆಯುವುದಾದರೂ, OOB ತಾಂತ್ರಿಕತೆಯಿಂದ ಮಾಹಿತಿಯನ್ನು ಪಡೆಯಬೇಕಾಗಿರುತ್ತದೆ. ಇದು ಪ್ರಸಕ್ತ OOB ತಾಂತ್ರಿಕತೆಯಲ್ಲಿ ಲಭ್ಯವಿರುವ ಮಾದರಿಯ MITM ಸುರಕ್ಷತೆಯನ್ನಷ್ಟೇ ನೀಡಬಲ್ಲದಾಗಿರುತ್ತದೆ.

SSPಯನ್ನು ಈ ಕೆಳಕಂಡ ಕಾರಣಗಳಿಂದ ಸರಳವೆನ್ನಲಾಗುತ್ತದೆ:

  • ಬಹಳಷ್ಟು ಸಂದರ್ಭಗಳಲ್ಲಿ, ಈ ವ್ಯವಸ್ಥೆಯು ಸಂಕೇತಕೀಲಿಯನ್ನು ಉತ್ಪಾದಿಸುವ ಅವಶ್ಯಕತೆಯನ್ನು ಹೊಂದಿರುವುದಿಲ್ಲ.
  • MITM ಸುರಕ್ಷತೆಯ ಅಗತ್ಯವಿಲ್ಲದಿರುವ ಸನ್ನಿವೇಶಗಳಲ್ಲಿ, ಬಳಕೆದಾರರ ಪ್ರತಿಕ್ರಿಯೆಯ ಅಗತ್ಯವನ್ನು ನಿವಾರಿಸಲಾಗಿದೆ.
  • ಸಾಂಖ್ಯಿಕ ಹೋಲಿಕೆ ಯಲ್ಲಿ, MITM ಸುರಕ್ಷತೆಯನ್ನು ಬಳಕೆದಾರರಿಂದ ಸರಳ ಸಮತೆ ಪರೀಕ್ಷೆಯ ಮೂಲಕ ಸಾಧಿಸಬಹುದಾಗಿದೆ.
  • NFCಯೊಂದಿಗಿನ OOB ಬಳಕೆಯು ಸಾಧನಗಳು ದೀರ್ಘವಾದ ಜೋಡಿಸುವಿಕೆಯ ಪ್ರಕ್ರಿಯೆಯ ಬದಲಿಗೆ ಕೇವಲ ಸಮೀಪ ಬಂದ ಮರುಕ್ಷಣ ಜೋಡಿಸುವಿಕೆಯನ್ನು ಸಾಧ್ಯವಾಗಿಸುತ್ತದೆ.

ಸುರಕ್ಷತಾ ಅಗತ್ಯಗಳು

[ಬದಲಾಯಿಸಿ]

Bluetooth 2.1 ಆವೃತ್ತಿಗೆ ಮುನ್ನ, ಗೂಢಲಿಪೀಕರಣವು ಅಗತ್ಯವಿರದೇ ಯಾವುದೇ ಸಮಯದಲ್ಲಿ ಬೇಕಾದರೂ ನಿಷ್ಕ್ರಿಯಗೊಳಿಸಬಹುದಾಗಿತ್ತು. ಇಷ್ಟೇ ಅಲ್ಲದೇ, ಗೂಢಲಿಪೀಕರಣ ಕೀಲಿಯು ಕೇವಲ ಸುಮಾರು 23.5 ಗಂಟೆಗಳ ಕಾಲ ಮಾತ್ರವೇ ಉಪಯುಕ್ತವಾಗಿದ್ದು; ಈ ಅವಧಿಗಿಂತ ಹೆಚ್ಚಿನ ಸಮಯ ಗೂಢಲಿಪೀಕರಣ ಕೀಲಿಯ ಬಳಕೆ ಸರಳ XOR ದಾಳಿಗಳ ಮೂಲಕವೇ ಗೂಢಲಿಪೀಕರಣ ಕೀಲಿಯ ಪತ್ತೆ ಹಚ್ಚುವಿಕೆ ಸಾಧ್ಯವಾಗಿಸುತ್ತದೆ.

  • ಗೂಢಲಿಪೀಕರಣದ ನಿಷ್ಕ್ರಿಯತೆ ಅನೇಕ ಸಾಮಾನ್ಯ ಕಾರ್ಯಾಚರಣೆಗಳಿಗೆ ಅಗತ್ಯವಾಗಿದ್ದು, ನಿಷ್ಕ್ರಿಯತೆಯ ಮೂಲ ಕಾರಣವು ಅಗತ್ಯತೆಯೇ ಇಲ್ಲವೇ ಸುರಕ್ಷತೆಯ ಮೇಲಿನ ದಾಳಿಯೇ ಎಂದು ಪತ್ತೆ ಹಚ್ಚುವುದು ಕಷ್ಟವಾಗಿತ್ತು.
  • Bluetooth 2.1 ಈ ಸಮಸ್ಯೆಯನ್ನು ಕೆಳಗಿನ ರೀತಿಗಳಲ್ಲಿ ಬಗೆಹರಿಸುತ್ತದೆ:
    • ಗೂಢಲಿಪೀಕರಣವು ಎಲ್ಲಾ SDPಯಲ್ಲದ (ಸೇವಾ ಪ್ರಕಟಣಾ ಪ್ರೋಟೋಕಾಲ್‌) ಸಂಪರ್ಕಗಳಿಗೆ ಅಗತ್ಯವನ್ನಾಗಿ ಮಾಡುವುದು
    • ಗೂಢಲಿಪೀಕರಣ ನಿಷ್ಕ್ರಿಯಗೊಳಿಸಬೇಕಿರುವ ಎಲ್ಲಾ ಸಾಮಾನ್ಯ ಕಾರ್ಯಗಳಿಗೆ ಹೊಸ ಮಾದರಿಯ ಗೂಢಲಿಪೀಕರಣದ ಕಿರುವಿರಾಮ ಮತ್ತು ಮುಂದುವರೆ ಸೌಲಭ್ಯವನ್ನು ಒದಗಿಸುವುದು. ಈ ವ್ಯವಸ್ಥೆಯು ಸುರಕ್ಷತೆಯ ಮೇಲಿನ ಆಕ್ರಮಣಕ್ಕೂ ಹಾಗೂ ಸಾಮಾನ್ಯ ಕಾರ್ಯಾಚರಣೆಗೂ ನಡುವಿನ ವ್ಯತ್ಯಾಸವನ್ನು ಪತ್ತೆಹಚ್ಚಲು ಸಹಾಯಕವಾಗುತ್ತದೆ.
    • ಗೂಢಲಿಪೀಕರಣ ಕೀಲಿಯ ಅವಧಿಯು ಮುಗಿಯುವ ಅದನ್ನು ಪರಿಷ್ಕರಿಸಿರಲೇಬೇಕು.

ಸಂಪರ್ಕ ಕೀಲಿಗಳನ್ನು Bluetooth ಚಿಪ್‌ನ ಬದಲಿಗೆ, ಸಾಧನದ ಕಡತ ವ್ಯವಸ್ಥೆಯಲ್ಲಿಯೇ ಶೇಖರಿಸಬಹುದು. ಅನೇಕ Bluetooth ಚಿಪ್‌ ತಯಾರಕರು ಸಂಪರ್ಕ ಕೀಲಿಗಳನ್ನು ಸಾಧನದಲ್ಲಿ ಶೇಖರಿಸುವ ಸೌಲಭ್ಯವನ್ನು ಕೊಡುತ್ತಾರೆ ; ಆದರೂ ಸಾಧನದ ಸ್ಥಳವನ್ನು ಬದಲಾಯಿಸುವುದು ಸಾಧ್ಯವಾಗುವುದಾದರೆ ಸಂಪರ್ಕ ಕೀಲಿ ಸಹಾ ಸಾಧನದೊಂದಿಗೆ ಸ್ಥಳ ಬದಲಾಯಿಸಿರುತ್ತದೆ.

ವಾಯು ಅಂತರ್ವರ್ತನ

[ಬದಲಾಯಿಸಿ]

ಪ್ರೋಟೋಕಾಲ್‌ 2.4-2.4835 GHz ಸಾಮರ್ಥ್ಯದ ಪರವಾನಗಿ-ಮುಕ್ತ ISM ಬ್ಯಾಂಡ್‌ನಲ್ಲಿ ಕಾರ್ಯಾಚರಿಸುತ್ತದೆ. 2.45 GHz ಬ್ಯಾಂಡ್‌ನ್ನು ಬಳಸುವ ಇತರೆ ಪ್ರೋಟೋಕಾಲ್‌ಗಳೊಂದಿಗೆ ಘರ್ಷಣೆಯನ್ನು ನಿವಾರಿಸಿಕೊಳ್ಳಲು , Bluetooth ಪ್ರೋಟೋಕಾಲ್‌ ಈ ಬ್ಯಾಂಡ್‌ಅನ್ನು 79 ವಾಹಿನಿಗಳಾಗಿ (ಪ್ರತಿಯೊಂದೂ 1 MHz ವಿಸ್ತಾರವಿರುವಂತೆ) ವಿಭಜಿಸುವುದಲ್ಲದೇ ವಾಹಿನಿಗಳನ್ನು ಪ್ರತಿ ಸೆಕೆಂಡಿಗೆ 1600ರವರೆಗೆ ಬದಲಾಯಿಸುತ್ತಿರುತ್ತದೆ. 1.1 ಮತ್ತು 1.2ನೇ ಆವೃತ್ತಿಯ ಸಾಧನಗಳು 723.1 kbit/sನಷ್ಟು ವೇಗವನ್ನು ಮುಟ್ಟಬಲ್ಲವು. 2.0ನೇ ಆವೃತ್ತಿ ಸಾಧನಗಳು Bluetooth ಉನ್ನತ ದತ್ತ ದರ (EDR) ಸೌಲಭ್ಯವನ್ನು ಹೊಂದಿದ್ದು 2.1 Mbit/sನಷ್ಟು ವೇಗವನ್ನು ಹೊಂದಬಲ್ಲವು. ತಾಂತ್ರಿಕವಾಗಿ, 2.0ನೇ ಆವೃತ್ತಿಯ ಸಾಧನಗಳು ಹೆಚ್ಚಿನ ಶಕ್ತಿಯನ್ನು ವ್ಯಯಿಸುತ್ತವಾದರೂ, ಇವುಗಳು ನೀಡುವ ಮೂರು ಪಟ್ಟು ವೇಗದ ಸಂವಹನದ ಪರಿಣಾಮವಾಗಿ 1.x ಸಾಧನಗಳ ಶಕ್ತಿ ವ್ಯಯದ (ಸಮಾನ ದಟ್ಟಣೆಯ ಒತ್ತಡದಲ್ಲಿ) ಅರ್ಧದಷ್ಟು ತಗ್ಗಿಸುತ್ತವೆ.

ಭದ್ರತೆ

[ಬದಲಾಯಿಸಿ]

ಅವಲೋಕನ

[ಬದಲಾಯಿಸಿ]

Bluetooth ಗೋಪ್ಯತೆ, ದೃಢೀಕರಣ ಮತ್ತು ಕೀಲಿ ರಚನೆಗಳನ್ನು SAFER+ ಬ್ಲಾಕ್‌ ಗೂಢಲಿಪಿಯ ಮೇಲೆ ಆಧರಿಸಿದ ಗ್ರಾಹಕೀಕರಿಸಿದ ಕ್ರಮಾವಳಿಗಳನ್ನು ಬಳಸಿ ಅಳವಡಿಸುತ್ತದೆ. Bluetooth ವ್ಯವಸ್ಥೆಯಲ್ಲಿ, ಕೀಲಿಯ ಉತ್ಪಾದನೆಯು ಸಾಮಾನ್ಯವಾಗಿ ಉಭಯ ಸಾಧನಗಳಲ್ಲಿ ನಮೂದಿಸಲಾಗುವ Bluetooth PINನ ಮೇಲೆ ಆಧಾರಿತವಾಗಿರುತ್ತದೆ. ಯಾವುದಾದರೊಂದು ಸಾಧನವು (e.g., ಶ್ರವ್ಯ ಸಾಧನಗಳು ಅಥವಾ ಆ ಮಾದರಿಯ ಪರಿಮಿತಿಗೊಳಪಟ್ಟ ಬಳಕೆದಾರ ಅಂತರ್ವರ್ತನಗಳುಳ್ಳ ಸಾಧನಗಳು) ಸ್ಥಿರ PINಅನ್ನು ಹೊಂದಿದ್ದರೆ ಈ ಪ್ರಕ್ರಿಯೆಯು ಕೆಲ ಬದಲಾವಣೆಗಳಿಗೆ ಒಳಪಡಬೇಕಾಗಿರುತ್ತದೆ. ಜೋಡಣೆಯ ಸಮಯದಲ್ಲಿ, ಪ್ರಾಥಮಿಕ ಕೀಲಿ ಅಥವಾ ನಿಯಂತ್ರಕ ಕೀಲಿಯನ್ನು E22 ಕ್ರಮಾವಳಿಯನ್ನು ಬಳಸಿ ಉತ್ಪಾದಿಸಲಾಗುತ್ತದೆ.[೨೧] ಗೋಪ್ಯತೆಯನ್ನು ನೀಡುವ ಮತ್ತು ಹಂಚಿಕೊಂಡ ಗೂಢಲಿಪೀಕರಿಸಿದ ಗುಪ್ತ ವಿವರ, ಉದಾಹರಣೆಗೆ ಹಿಂದೆಯೇ ಉತ್ಪಾದಿಸಿದ ಸಂಪರ್ಕ ಕೀಲಿ ಅಥವಾ ನಿಯಂತ್ರಕ ಕೀಲಿಯ ಮೇಲೆ ಆಧಾರಿತವಾಗಿ E0 ಪ್ರವಾಹ ಗೂಢಲಿಪಿಯನ್ನು ಬಳಸಿ ಪ್ಯಾಕೆಟ್‌ಗಳನ್ನು ಗೂಢಲಿಪೀಕರಿಸಲಾಗುತ್ತದೆ. ಒಂದು ಇಲ್ಲವೇ ಎರಡೂ ಸಾಧನಗಳಲ್ಲಿ ನಮೂದಿಸಲಾದ Bluetooth PINನ ಮೇಲೆ ಆಧಾರಿತವಾಗಿರುವ ಕೀಲಿಗಳನ್ನು ನಂತರದಲ್ಲಿ ವಾಯು ಅಂತರ್ವರ್ತನದಲ್ಲಿ ಕಳಿಸಲಾಗುವ ದತ್ತವನ್ನು ಗೂಢಲಿಪೀಕರಿಸುವಾಗ ಬಳಸಲಾಗುತ್ತದೆ.

ಆಂಡ್ರಿಯಾಸ್‌ ಬೆಕರ್‌ ಎಂಬುವವರು Bluetoothನ ಸುರಕ್ಷತಾ ಲೋಪಗಳಿಂದಾಗಬಹುದಾದ ಶೋಷಣೆಗಳನ್ನು ಕುರಿತ ಅವಲೋಕನವನ್ನು ಪ್ರಕಟಿಸಿದ್ದಾರೆ.[೨೨]

ಸೆಪ್ಟೆಂಬರ್‌ 2008ರಲ್ಲಿ , ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್‌ ಸ್ಟ್ಯಾಂಡರ್ಡ್ಸ್‌ ಅಂಡ್‌ ಟೆಕ್ನಾಲಜಿ (NIST) ಸಂಸ್ಥೆಯು Bluetooth ಭದ್ರತೆಯ ಬಗ್ಗೆ, Bluetooth ತಂತ್ರಜ್ಞಾನಗಳನ್ನು ರಕ್ಷಣೆಗೆ ಕೈಗೊಳ್ಳಬಹುದಾದ ಮಾರ್ಗೋಪಾಯಗಳನ್ನು ಹಾಗೂ Bluetoothನ ಭದ್ರತಾ ಸಾಮರ್ಥ್ಯದ ಕುರಿತು ಕೈಪಿಡಿಯೊಂದನ್ನು ಪ್ರಕಟಿಸಿತು. Bluetooth ತನ್ನದೇ ಆದ ಅನುಕೂಲಗಳನ್ನು ಹೊಂದಿದ್ದರೂ, ಅದು ಸೇವಾ ನಿರಾಕರಣೆ ದಾಳಿಗಳು, ಕದ್ದಾಲಿಕೆ, ಮಾನವ ಹಸ್ತಕ್ಷೇಪ, ಸಂದೇಶ ಬದಲಾವಣೆ ಹಾಗೂ ಸಂಪನ್ಮೂಲದ ದುರ್ಬಳಕೆಗಳಿಗೆ ತುತ್ತಾಗುವ ಆಸ್ಪದವೀಯುವ ಸಾಧ್ಯತೆಯಿರುತ್ತದೆ. ಬಳಕೆದಾರರು/ಸಂಸ್ಥೆಗಳು ತಮ್ಮ ತಮ್ಮ ಹಾನಿ ನಿರೋಧಕ ಸಾಮರ್ಥ್ಯದ ಆಧಾರದ ಮೇಲೆ Bluetooth ಸಾಧನಗಳ ಜೀವನಚಕ್ರದಲ್ಲಿ ಭದ್ರತೆಯನ್ನು ಅಳವಡಿಸಿಕೊಳ್ಳಬೇಕು. ಹಾನಿಯನ್ನು ತಗ್ಗಿಸಲು ಸಹಾಯವಾಗುವಂತೆ, ಮಾರ್ಗದರ್ಶಿಸೂತ್ರಗಳೊಂದಿಗೆ ಭದ್ರತಾ ತಾಳೆಪಟ್ಟಿಗಳು ಹಾಗೂ ಸುರಕ್ಷಿತ Bluetooth ಪಿಕೋನೆಟ್‌ಗಳು, ಶ್ರವ್ಯ ಸಾಧನಗಳು, ಮತ್ತು ಚೂಟಿ ಕಾರ್ಡ್‌ರೀಡರ್‌ಗಳ ಉತ್ಪಾದನೆ ಮತ್ತು ಮೇಲ್ವಿಚಾರಣೆಗಳಿಗೆಂದು ಶಿಫಾರಸುಗಳನ್ನು NISTಯ ಭದ್ರತಾ ದಾಖಲೆಯಲ್ಲಿ ನೀಡಲಾಗಿದೆ.[೨೩]

ಬ್ಲೂಜ್ಯಾಕಿಂಗ್‌

[ಬದಲಾಯಿಸಿ]

ಬ್ಲೂಜ್ಯಾಕಿಂಗ್‌ ಎಂದರೆ ಬಳಕೆದಾರನೊಬ್ಬನು ಚಿತ್ರ ಇಲ್ಲವೇ ಸಂದೇಶವೊಂದನ್ನು ಅಪರಿಚಿತ ಬಳಕೆದಾರರೊಬ್ಬರಿಗೆ Bluetooth ನಿಸ್ತಂತು ತಂತ್ರಜ್ಞಾನದ ಮೂಲಕ ಕಳುಹಿಸುವುದು. ಇದರ ಸಾಮಾನ್ಯ ಅನ್ವಯಗಳೆಂದರೆ ಸಂಕ್ಷಿಪ್ತ ಸಂದೇಶಗಳು (e.g., "ನಿಮ್ಮ ಸಾಧನವು ಈಗತಾನೆ ಬ್ಲೂಜ್ಯಾಕ್‌ ಆಗಿದೆ!"). [೨೪] ಸಾಧನದಿಂದ ಯಾವುದೇ ದತ್ತದ ನಿರ್ಮೂಲನ ಅಥವಾ ಬದಲಾವಣೆಯನ್ನು ಮಾಡುವುದು ಬ್ಲೂಜ್ಯಾಕಿಂಗ್‌ ಎನಿಸಿಕೊಳ್ಳುವುದಿಲ್ಲ.

ಸುರಕ್ಷತಾ ಹಿತಾಸಕ್ತಿಗಳ ಇತಿಹಾಸ

[ಬದಲಾಯಿಸಿ]

2001ರಲ್ಲಿ, ಬೆಲ್‌ ಪ್ರಯೋಗಾಲಯದ ಜಾಕೊಬ್‌ಸನ್‌ ಮತ್ತು ವೆಟ್ಜೆಲ್‌ ಎಂಬಿಬ್ಬರು ತಂತ್ರಜ್ಞರು Bluetoothನ ಜೋಡಿಸುವಿಕೆಯ ಪ್ರೋಟೋಕಾಲ್‌ಗಳಲ್ಲಿ ನ್ಯೂನತೆಗಳನ್ನು ಪತ್ತೆಹಚ್ಚಿದುದಲ್ಲದೇ, ಗೂಢಲಿಪೀಕರಣದ ವ್ಯವಸ್ಥೆಯಲ್ಲಿನ ಸುರಕ್ಷತಾ ಲೋಪಗಳನ್ನು ಸಹಾ ತೋರಿಸಿದರು.[೨೫]

ನವೆಂಬರ್‌ 2003ರಲ್ಲಿ , A.L. ಡಿಜಿಟಲ್‌ ಲಿ. ಸಂಸ್ಥೆಯ ಬೆನ್‌ ಮತ್ತು ಆಡಮ್‌ ಲೌರಿ/ಲಾರಿ ಎಂಬ ತಂತ್ರಜ್ಞರು Bluetooth ಭದ್ರತೆಯಲ್ಲಿನ ಗಮನಾರ್ಹ ನ್ಯೂನತೆಗಳಿಂದ ಖಾಸಗಿ ದತ್ತದ ಅನಾವರಣವಾಗಬಹುದು ಎಂಬುದನ್ನು ಪತ್ತೆಹಚ್ಚಿದರು.[೨೬] ಆದರೂ, ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ವರದಿಯಾದ ಭದ್ರತಾ ಸಮಸ್ಯೆಗಳು ಕೆಲ ತೀರ ಸಾಧಾರಣ ಗುಣಮಟ್ಟದ Bluetooth ಸಾಧನಗಳಿಗೆ ಸಂಬಂಧಿಸಿತ್ತೇ ಹೊರತು ಪ್ರೋಟೋಕಾಲ್‌ಗೆ ಅಲ್ಲ.

ನಂತರದ ಪ್ರಯೋಗವೊಂದರಲ್ಲಿ, ಟ್ರಿಫಿನೈಟ್‌.ಗ್ರೂಪ್‌ನ ಮಾರ್ಟಿನ್‌ ಹರ್ಫರ್ಟ್‌ ಎಂಬುವವರು CeBITನ ಬಯಲು ಪ್ರದೇಶದಲ್ಲಿ ಕ್ಷೇತ್ರ-ಪರೀಕ್ಷೆ ನಡೆಸಿ ಈ ಸಮಸ್ಯೆಯ ಗಹನತೆಯನ್ನು ವಿಶ್ವಕ್ಕೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾದರು. ಬ್ಲೂಬಗ್‌ ಎಂದು ಕರೆಯಲಾದ ಹೊಸತೊಂದು ಮಾದರಿಯ ದಾಳಿಯನ್ನು ಈ ಪರೀಕ್ಷೆಯ ಸಂದರ್ಭದಲ್ಲಿ ಮಾಡಲಾಗಿತ್ತು.[೨೭] Bluetooth ಸಂವಹನದಲ್ಲಿನ ಭದ್ರತೆಗೆ ಸಂಬಂಧಿಸಿದಂತೆ ಎತ್ತಿದ ಅನೇಕ ಹಿತಾಸಕ್ತಿ ವಿಚಾರಗಳಲ್ಲಿ ಇದೂ ಸಹಾ ಒಂದು.

2004ರಲ್ಲಿ ಮೊತ್ತ ಮೊದಲ ಸಂಚಾರಿ ದೂರವಾಣಿಗಳಲ್ಲಿ Bluetoothನ ಮೂಲಕ ಹರಡಲೆಂದು ಉದ್ದೇಶಿಸಿದ ವೈರಸ್‌ Symbian OSನಲ್ಲಿ ಕಾಣಿಸಿಕೊಂಡಿತು.[೨೮] ಬಳಕೆದಾರರು ಅಪರಿಚಿತ ತಂತ್ರಾಂಶವೊಂದನ್ನು ಸ್ಥಾಪಿಸಲು ಅನುಮತಿ ನೀಡಿದ್ದರೆ ಮಾತ್ರವೇ ಹರಡುತ್ತಿದ್ದ ಈ ವೈರಸ್‌ನ ಲಕ್ಷಣಗಳನ್ನು ಮೊತ್ತಮೊದಲಿಗೆ Kaspersky Labನವರು ವರ್ಣಿಸಿದರು. ಈ ವೈರಸ್‌ಅನ್ನು ಪ್ರಾಥಮಿಕ ಪ್ರಯೋಗಾತ್ಮಕ ರೀತಿಯಲ್ಲಿ "29A" ಎಂದು ಹೆಸರಾದ ವೈರಸ್‌ ರಚನಾಕಾರರ ಗುಂಪೊಂದು ರಚಿಸಿ ವೈರಸ್‌-ನಿರೋಧಕ ತಂತ್ರಾಂಶಗಳ ಗುಂಪಿಗೆ ಕಳುಹಿಸಲಾಗಿತ್ತು. ಈ ವೈರಸ್‌ ವ್ಯವಸ್ಥೆಯಿಂದ ಹೊರಕ್ಕೆ ಹರಡದೇ ಇದ್ದುದರಿಂದ, ಇದನ್ನು Bluetooth ಅಥವಾ Symbian OSಗಳ ಸಂಭಾವ್ಯ (ಆದರೆ ನಿಜವಲ್ಲದ್ದು) ಭದ್ರತಾ ಲೋಪವೆಂದೇ ಪರಿಗಣಿಸಬೇಕಾಗಿದೆ.

ಆಗಸ್ಟ್‌ 2004ರಲ್ಲಿ, ವಿಶ್ವ-ದಾಖಲೆ-ಸಜ್ಜಿತ ಪ್ರಯೋಗವೊಂದರಲ್ಲಿ (ಇದನ್ನೂ ನೋಡಿ Bluetooth ಛಿದ್ರಣ) 2ನೇ ದರ್ಜೆಯ Bluetooth ರೇಡಿಯೋ ಸಂಕೇತಗಳ ಶ್ರೇಣಿಯೊಂದು ದಿಕ್ಸೂಚಕ ಆಂಟೆನಾಗಳು ಮತ್ತು ಸಂಕೇತ ವರ್ಧಕಗಳ ಸಹಾಯದೊಂದಿಗೆ 1.78 km (1.08 ಮೈಲಿ)ಯವರೆಗೆ ವಿಸ್ತರಿಸಬಹುದೆಂದು ತೋರಿಸಲಾಯಿತು.[೨೯] ನಿರೀಕ್ಷೆಗೂ ಮೀರಿದ ದೂರದಿಂದ ಭೇದ್ಯ Bluetooth-ಸಾಧನಗಳನ್ನು ಸಂಪರ್ಕಿಸಲು ದಾಳಿಕೋರರಿಗೆ ಆಸ್ಪದವೀಯುವ ನಿಗೂಢ ಭದ್ರತಾ ಲೋಪವನ್ನು ಈ ಸಮಸ್ಯೆ ಎತ್ತಿ ತೋರುತ್ತದೆ. ಸಂಪರ್ಕ ಹೊಂದುವ ಮುನ್ನ ದಾಳಿಕೋರರು ದಾಳಿಗೆ ಬಲಿಯಾಗುವ ಸಾಧನದಿಂದ ಮಾಹಿತಿಗಳನ್ನು ಪಡೆಯುವ ಸೌಲಭ್ಯ ಹೊಂದಿರಬೇಕಾಗುತ್ತದೆ. ದಾಳಿಕೋರರು ಸಾಧನದ Bluetooth ವಿಳಾಸಗಳು ಮತ್ತು ಯಾವ ವಾಹಿನಿಗಳಲ್ಲಿ ರವಾನಿಸಬೇಕೆಂದು ತಿಳಿದುಕೊಳ್ಳದೇ ಯಾವುದೇ Bluetooth ಸಾಧನವನ್ನು ದಾಳಿಗೊಳಪಡಿಸಲಾಗುವುದಿಲ್ಲ.

ಜನವರಿ 2005ರಲ್ಲಿ, Lasco.A ಎಂದು ಹೆಸರಾದ ಸಂಚಾರಿ ದೂರವಾಣಿ ಜಾಹಿರಾತುರೂಪಿ ವರ್ಮ್‌ವೊಂದು Symbian OS (ಸೀರೀಸ್‌ 60 ವೇದಿಕೆ) ಬಳಸುವ ಸಂಚಾರಿ ದೂರವಾಣಿಗಳನ್ನು ಗುರಿಯಾಗಿಟ್ಟುಕೊಂಡು Bluetooth-ಸಶಕ್ತ ಸಾಧನಗಳನ್ನು ಬಳಸಿಕೊಂಡು ವೃದ್ಧಿಯಾಗತೊಡಗಿದುದಲ್ಲದೇ ಮತ್ತು ಇತರ ಸಾಧನಗಳಿಗೆ ಹರಡತೊಡಗಿತು. ಇದೊಂದು ಸ್ವಯಂ-ಸ್ಥಾಪಕ ವರ್ಮ್‌ ಆಗಿದ್ದು ಇನ್ನೊಂದು ಸಂಚಾರಿ ದೂರವಾಣಿ ಬಳಕೆದಾರರು ಇನ್ನೊಂದು ಸಾಧನದಿಂದ (ವೆಲಾಸ್ಕೊ.ಸಿಸ್‌) ಕಡತ ವರ್ಗಾವಣೆಗೆ ಒಪ್ಪಿಗೆ ಸೂಚಿಸಿದೊಡನೆ ಸ್ಥಾಪನೆಯಾಗುತ್ತದೆ. ಒಮ್ಮೆ ಸ್ಥಾಪಿತವಾದ ನಂತರ, ಇನ್ನಿತರ Bluetooth-ಸಶಕ್ತ ಸಾಧನಗಳಿಗೆ ವ್ಯಾಪಿಸಲೆಂದು ಹುಡುಕತೊಡಗುತ್ತದೆ. ಇಷ್ಟೇ ಅಲ್ಲದೇ ಈ ವರ್ಮ್‌ ಸಾಧನದಲ್ಲಿರುವ ಇನ್ನಿತರ .SIS ಕಡತಗಳಿಗೂ ಹಬ್ಬುತ್ತದಲ್ಲದೇ, ತೆಗೆದುಹಾಕಬಹುದಾದ ಮಾಧ್ಯಮಗಳ (ಸುರಕ್ಷಿತ ಡಿಜಿಟಲ್‌, ಕಿರು ಫ್ಲಾಷ್‌ ಸಾಧನಗಳು , ಇತ್ಯಾದಿ.) ಬಳಕೆಯ ಮೂಲಕ ಮತ್ತೊಂದು ಸಾಧನದಲ್ಲಿ ನಕಲುಗೊಳ್ಳಲು ಅನುವು ಮಾಡಿಕೊಳ್ಳುತ್ತದೆ. ಈ ವರ್ಮ್‌ ಸಂಚಾರಿ ಸಾಧನವನ್ನು ಅಸ್ಥಿರಗೊಳಿಸಬಲ್ಲದು.[೩೦]

ಏಪ್ರಿಲ್‌ 2005ರಲ್ಲಿ, ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದ ಭದ್ರತಾ ಸಂಶೋಧಕರು ವಾಣಿಜ್ಯ Bluetooth ಸಾಧನಗಳ ನಡುವಿನ PIN-ಆಧರಿತ ಜೋಡಿಸುವಿಕೆಯ ಮೇಲೆ ನಿಷ್ಕ್ರಿಯಗೊಳಿಸುವಿಕೆ ನಡೆಸಿದ ಪ್ರಕೃತ ದಾಳಿಗಳ ಫಲಿತಾಂಶಗಳನ್ನು ಪ್ರಕಟಿಸಿ, ದಾಳಿಗಳು ಕಾರ್ಯಸಾಧ್ಯತಃ ವೇಗವಾಗಿರಬಲ್ಲದು ಹಾಗೂ ಸಮ್ಮಿತೀಯ ಕೀಲಿ ರಚನೆಯು ದಾಳಿಗೆ ಹೆಚ್ಚು ಆಸ್ಪದವನ್ನೀಯಬಲ್ಲದು. ಈ ದುರ್ಬಲತೆಯನ್ನು ನಿವಾರಿಸಿಕೊಳ್ಳಲು ಅವರು ನಿರ್ಮಿಸಿದ ಸಾಧನ ವ್ಯವಸ್ಥೆಯು ಸಂಚಾರಿ ದೂರವಾಣಿಗಳಂತಹ ನಿಗದಿತ ವರ್ಗದ ಸಾಧನಗಳಿಗೆ ಪ್ರಬಲ, ಅಸಮ್ಮಿತೀಯ ಕೀಲಿ ರಚನೆಯು ಹೆಚ್ಚು ಸೂಕ್ತವೆಂದು ತೋರಿಸಿಕೊಟ್ಟಿತು.[೩೧]

ಜೂನ್‌ 2005ರಲ್ಲಿ, ಯಾನಿವ್‌ ಶೇಕ್‌ಡ್‌ Archived 2007-11-09 ವೇಬ್ಯಾಕ್ ಮೆಷಿನ್ ನಲ್ಲಿ. ಮತ್ತು ಅವಿಶೈ ವೂಲ್‌ ಎಂಬುವವರು Bluetooth ಸಂಪರ್ಕಕ್ಕೆ ಸಕ್ರಿಯ ಹಾಗೂ ನಿಷ್ಕ್ರಿಯ ಎರಡೂ ವಿಧಾನಗಳ ಮೂಲಕ PIN ಸಂಕೇತವನ್ನು ಪಡೆಯುವ ಬಗ್ಗೆ ವಿವರವನ್ನು ಹೊಂದಿರುವ ಲೇಖನ ಪ್ರಕಟಿಸಿದರು. ಅಗತ್ಯ ಸಿದ್ಧತೆ ಮಾಡಿಕೊಂಡಿರುವ ದಾಳಿಕೋರನು ಮಾಡುವ ನಿಷ್ಕ್ರಿಯ ದಾಳಿಯು, ದಾಳಿಕೋರರು ಪ್ರಾಥಮಿಕ ಜೋಡಿಸುವಿಕೆಯ ಸಂದರ್ಭದಲ್ಲಿ ಉಪಸ್ಥಿತರಿದ್ದರೆ ಸಂವಹನಗಳ ಕದ್ದಾಲಿಕೆ ಮಾಡಲು ಹಾಗೂ ವಂಚನೆ ಮಾಡಲು ಅವಕಾಶ ನೀಡುತ್ತದೆ. ಸಕ್ರಿಯ ವಿಧಾನದಲ್ಲಿ ವಿಶೇಷವಾಗಿ ನಿರ್ಮಿತವಾದ ಸಂದೇಶವನ್ನು ಪ್ರೋಟೋಕಾಲ್‌ನ ನಿರ್ದಿಷ್ಟ ಬಿಂದುವಿನಲ್ಲಿ ಮಾತ್ರವೇ ಅಳವಡಿಸಿದರೆ ನಿಯಂತ್ರಕ ಹಾಗೂ ಅಧೀನ ಸಾಧನಗಳೆರಡೂ ಜೋಡಿಸುವಿಕೆಯ ಪ್ರಕ್ರಿಯೆಯನ್ನು ಪುನರಾವರ್ತಿಸುವಂತೆ ಮಾಡಬಹುದಾಗಿರುತ್ತದೆ. ಇಷ್ಟಾದ ನಂತರ, ಮೊದಲ ವಿಧಾನವನ್ನು PIN ಸಂಕೇತವನ್ನು ಭೇದಿಸಲು ಬಳಸಬಹುದು. ಈ ವಿಧಾನದ ಪ್ರಮುಖ ದುರ್ಬಲತೆಯೆಂದರೆ ದಾಳಿಯ ಸಮಯದಲ್ಲಿ ಸಾಧನವು PIN ಸಂಕೇತವನ್ನು ಪುನಃ ನಮೂದಿಸಲು ಸೂಚಿಸಿದಾಗ ದಾಳಿಗೊಳಪಟ್ಟ ಸಾಧನದ ಬಳಕೆದಾರರು ನಮೂದಿಸಿದರೆ ಮಾತ್ರವೇ ದಾಳಿ ಯಶಸ್ವಿಯಾಗುವುದು. ಇಷ್ಟೇ ಇಲ್ಲದೇ, ಬಹಳಷ್ಟು ವಾಣಿಜ್ಯಿಕವಾಗಿ ಲಭ್ಯವಿರುವ Bluetooth ಸಾಧನಗಳು ಅಗತ್ಯವಿರುವ ಅವಧಿ ಹೊಂದಾಣಿಕೆಯನ್ನು ಹೊಂದಿರುವುದಿಲ್ಲವಾದುದರಿಂದ ಸಕ್ರಿಯ ದಾಳಿಯು ಗ್ರಾಹಕೀಕರಿಸಿದ ಯಂತ್ರಾಂಶವನ್ನು ಬಹುಶಃ ನಿರೀಕ್ಷಿಸಬಹುದು.[೩೨]

ಆಗಸ್ಟ್‌ 2005ರಲ್ಲಿ, ಇಂಗ್ಲೆಂಡ್‌ನ ಕೇಂಬ್ರಿಡ್ಜ್‌‌ಷೈರ್‌ ಪೋಲಿಸರು, ಕಾರುಗಳಲ್ಲಿ ಬಿಟ್ಟು ಹೋಗಿರಬಹುದಾದ ಇತರೆ ಸಾಧನಗಳನ್ನು ಪತ್ತೆ ಹಚ್ಚಲು Bluetooth-ಸಶಕ್ತ ಸಂಚಾರಿ ದೂರವಾಣಿಗಳನ್ನು ಬಳಸುತ್ತಿರುವ ಬಗ್ಗೆ ಎಚ್ಚರಿಕೆ ರವಾನಿಸಿದ್ದರು. ಪೋಲೀಸರು ಈ ಮಾದರಿಯಲ್ಲಿ ಮಡಿಲಗಣಕಗಳು ಮತ್ತು ಇನ್ನಿತರ ಸಾಧನಗಳನ್ನು ಬಿಟ್ಟುಹೋಗುವುದಾದರೆ ಯಾವುದೇ ಸಂಚಾರಿ ಜಾಲಸಂಬಂಧಿ ಸಂಪರ್ಕಗಳನ್ನು ನಿಷ್ಕ್ರಿಯಗೊಳಿಸಿರಲು ಸಲಹೆ ನೀಡಿದ್ದರು.[೩೩]

ಏಪ್ರಿಲ್‌ 2006ರಲ್ಲಿ, Secure Network ಮತ್ತು F-Secure ಸಂಸ್ಥೆಗಳ ಸಂಶೋಧಕರು ಬಹು ಸಂಖ್ಯೆಯ ಸಾಧನಗಳನ್ನು ಗೋಚರ ಸ್ಥಿತಿಯಲ್ಲಿ ಬಿಟ್ಟಿರುವ ಬಗ್ಗೆ ಎಚ್ಚರಿಸಿದ ಹಾಗೂ ಹರಡಬಹುದಾದ ಅನೇಕ Bluetooth ಸೇವೆಗಳು ಮತ್ತು Bluetooth ವರ್ಮ್‌ನ ಸಂಭಾವ್ಯ ಹರಡುವಿಕೆಯ ಬಗ್ಗೆ ಅಂಕಿಅಂಶಗಳನ್ನು ನಮೂದಿಸಿದ ವರದಿಯನ್ನು ಪ್ರಕಟಿಸಿದರು.[೩೪]

ಅಕ್ಟೋಬರ್‌ 2007ರಲ್ಲಿ ಲಕ್ಸೆಂಬರ್ಗ್‌ನ Hack.lu ಭದ್ರತಾ ಸಮ್ಮೇಳನದಲ್ಲಿ ಕೆವಿನ್‌ ಫಿನಿಸ್ಟೆರೆ ಮತ್ತು ಥಿಯೆರ್ರಿ ಜಾಲ್ಲರ್‌ ಎಂಬುವವರು ದೂರವಾಹಿ ಕಾರ್ಯನಿರ್ವಾಹಕ ಪ್ರೋಗ್ರಾಂಅನ್ನು Bluetooth ಮೂಲಕ Mac OS X v10.3.9 ಮತ್ತು v10.4 ಆವೃತ್ತಿಗಳಲ್ಲಿ ಪ್ರದರ್ಶಿಸಿ ಬಿಡುಗಡೆ ಸಹಾ ಮಾಡಿದರು. ವೂಲ್‌ ಮತ್ತು ಷೇಕ್‌ಡ್‌ರ ಸಂಶೋಧನೆಯ ಮೇಲೆ ಆಧಾರಿತವಾಗಿದ್ದ ಪ್ರಪ್ರಥಮ Bluetooth PIN ಮತ್ತು ಸಂಪರ್ಕಕೀಲಿಗಳ ಭೇದಕವನ್ನೂ ಸಹಾ ಅವರು ಪ್ರದರ್ಶಿಸಿದರು.

ಆರೋಗ್ಯ ಹಿತಾಸಕ್ತಿಗಳು

[ಬದಲಾಯಿಸಿ]

2.4 GHzರಿಂದ 2.4835 GHzವರೆಗಿನ ವ್ಯಾಪ್ತಿಯ ಮೈಕ್ರೋವೇವ್‌ ರೇಡಿಯೋ ತರಂಗಾಂತರ ರೋಹಿತವನ್ನು Bluetooth ಬಳಸುತ್ತದೆ. Bluetooth ರೇಡಿಯೋ ಸಂಕೇತದ ಗರಿಷ್ಠ ಶಕ್ತಿಯ ಉತ್ಪಾದನೆಯೆಂದರೆ ಅನುಕ್ರಮವಾಗಿ ವರ್ಗ 1, ವರ್ಗ 2, ವರ್ಗ 3 ಸಾಧನಗಳಿಗೆ 100 mW, 2.5 mW, ಮತ್ತು 1 mW. ಈ ಪ್ರಕಾರ ಸ್ಥೂಲವಾಗಿ ವರ್ಗ 1 ಸಾಧನಗಳು ಸಂಚಾರಿ ದೂರವಾಣಿಗಳಿಗೆ ಸಮಾನ ಮಟ್ಟದಲ್ಲಿರುವಂತೆ, ಹಾಗೂ ಇನ್ನೆರಡು ವರ್ಗಗಳನ್ನು ಮತ್ತೂ ಕೆಳಗಿನ ಮಟ್ಟಕ್ಕೆ ಸೂಚಿಸಿರುತ್ತದೆ.[೩೫] ಆ ಪ್ರಕಾರವಾಗಿ, ವರ್ಗ 2 ಮತ್ತು ವರ್ಗ 3 Bluetooth ಸಾಧನಗಳು ಸಂಚಾರಿ ದೂರವಾಣಿಗಳಿಗಿಂತ ಕಡಿಮೆ ಅಪಾಯದ ಸಂಭಾವ್ಯತೆ ಹೊಂದಿದ್ದರೆ , ವರ್ಗ 1 ಸಂಚಾರಿ ದೂರವಾಣಿಗಳಿಗೆ ಸಮನಾದ ಅಪಾಯದ ಸಂಭಾವ್ಯತೆ ಹೊಂದಿರುತ್ತದೆ.

ಇದನ್ನು ನೋಡಿರಿ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. Monson, Heidi (1999-12-14). "Bluetooth Technology and Implications". SysOpt.com. Archived from the original on 2011-08-24. Retrieved 2009-02-17.
  2. "About the Bluetooth SIG". Bluetooth SIG. Archived from the original on 2006-03-18. Retrieved 2008-02-01.
  3. Kardach, Jim (2008-05-03). "How Bluetooth got its name". Archived from the original on 2011-08-24. Retrieved 2009-02-24.
  4. ೪.೦ ೪.೧ ನ್ಯೂಟನ್‌, ಹೆರಾಲ್ಡ್‌‌. 2007ನ್ಯೂಟನ್‌'ಸ್‌‌ ಟೆಲಿಕಾಂ ಡಿಕ್ಷನರಿ. ನ್ಯೂ ಯಾರ್ಕ್‌: ಫ್ಲಾಟಿರಾನ್‌ ಪ್ರಕಾಶನ.
  5. "How Bluetooth Technology Works". Bluetooth SIG. Archived from the original on 2008-01-17. Retrieved 2008-02-01.
  6. "Wii Controller". Bluetooth SIG. Retrieved 2008-02-01.
  7. "Apple Introduces "Jaguar," the Next Major Release of Mac OS X" (Press release). Apple. 2002-07-17. Retrieved 2008-02-04.
  8. "Network Protection Technologie". Changes to Functionality in Microsoft Windows XP Service Pack 2. Microsoft Technet. Retrieved 2008-02-01.
  9. BlueZ - ಅಧಿಕೃತ Linux Bluetooth ಪ್ರೋಟೋಕಾಲ್‌ ಸ್ಟ್ಯಾಕ್‌
  10. "The Bluetooth Blues". Information Age. 2001-05-24. Retrieved 2008-02-01.
  11. Guy Kewney (2004-11-16). "High speed Bluetooth comes a step closer: enhanced data rate approved". Newswireless.net. Retrieved 2008-02-04.
  12. ೧೨.೦ ೧೨.೧ ೧೨.೨ "Specification Documents". Bluetooth SIG. Archived from the original on 2008-02-20. Retrieved 2008-02-04.
  13. "HTC TyTN Specification" (PDF). HTC. Archived from the original (PDF) on 2006-10-12. Retrieved 2008-02-04.
  14. "Simple Pairing Whitepaper" (PDF). Version V10r00. Bluetooth SIG. 2006-08-03. Archived from the original (PDF) on 2007-06-16. Retrieved 2007-02-01. {{cite journal}}: Cite journal requires |journal= (help)
  15. Michael Oryl (2007-03-15). "Bluetooth 2.1 Offers Touch Based Pairing, Reduced Power Consumption". MobileBurn. Retrieved 2008-02-04.
  16. Taoufik Ghanname (2007-02-14). "How NFC can to speed Bluetooth transactions-today". Wireless Net DesignLine. Archived from the original on 2008-03-08. Retrieved 2008-02-04.
  17. David Meyer (2009-04-22). "Bluetooth 3.0 released without ultrawideband". zdnet.co.uk. Archived from the original on 2011-08-24. Retrieved 2009-04-22.
  18. "Wibree forum merges with Bluetooth SIG" (PDF) (Press release). Nokia. 2007-06-12. Archived from the original (PDF) on 2014-12-29. Retrieved 2008-02-04.
  19. http://www.wimedia.org/, http://www.wimedia.org/imwp/download.asp?ContentID=15508[ಶಾಶ್ವತವಾಗಿ ಮಡಿದ ಕೊಂಡಿ], http://www.wimedia.org/imwp/download.asp?ContentID=15506 Archived 2009-03-23 ವೇಬ್ಯಾಕ್ ಮೆಷಿನ್ ನಲ್ಲಿ., http://www.bluetooth.com/Bluetooth/Technology/Technology_Transfer/[ಶಾಶ್ವತವಾಗಿ ಮಡಿದ ಕೊಂಡಿ], http://www.usb.org/press/WiMedia_Tech_Transfer/ Archived 2011-06-10 ವೇಬ್ಯಾಕ್ ಮೆಷಿನ್ ನಲ್ಲಿ., http://www.incisor.tv/2009/03/what-to-make-of-bluetooth-sig-wimedia.html Archived 2018-09-16 ವೇಬ್ಯಾಕ್ ಮೆಷಿನ್ ನಲ್ಲಿ.
  20. ೨೦.೦ ೨೦.೧ ಸ್ಟಾಲ್ಲಿಂಗ್ಸ್‌, ವಿಲಿಯಂ. 2005.ವೈರ್‌ಲೆಸ್‌ ಕಮ್ಯುನಿಕೇಷನ್ಸ್‌ ಅಂಡ್‌ ನೆಟ್‌ವರ್ಕ್ಸ್‌. ಮೇಲಿನ ಸ್ಯಾಡಲ್‌ ನದಿ, NJ: ಪಿಯರ್‌ಸನ್‌ ಪ್ರೆಂಟಿಸ್‌ಹಾಲ್‌.
  21. Juha T. Vainio (2000-05-25). "Bluetooth Security" (PDF). Helsinki University of Technology. Retrieved 2009-01-01.
  22. Andreas Becker (2007-08-16). "Bluetooth Security & Hacks" (PDF). Ruhr-Universität Bochum. Retrieved 2007-10-10. {{cite journal}}: Cite journal requires |journal= (help)
  23. Scarfone, K., and Padgette, J. (September 2008). "Guide to Bluetooth Security" (PDF). National Institute of Standards and Technology. Archived from the original (PDF) on 2009-02-06. Retrieved 2008-10-03. {{cite journal}}: Cite journal requires |journal= (help)CS1 maint: multiple names: authors list (link)
  24. "What is bluejacking?". Helsinki University of Technology. Archived from the original on 2008-02-26. Retrieved 2008-05-01.
  25. "Security Weaknesses in Bluetooth". RSA Security Conf. – Cryptographer’s Track. Retrieved 2009-03-01.
  26. "Bluetooth". The Bunker. Archived from the original on 2007-01-26. Retrieved 2007-02-01.
  27. "BlueBug". Trifinite.org. Retrieved 2007-02-01.
  28. John Oates (2004-06-15). "Virus attacks mobiles via Bluetooth". The Register. Retrieved 2007-02-01.
  29. "Long Distance Snarf". Trifinite.org. Retrieved 2007-02-01.
  30. "F-Secure Malware Information Pages: Lasco.A". F-Secure.com. Archived from the original on 2008-05-17. Retrieved 2008-05-05.
  31. Ford-Long Wong, Frank Stajano, Jolyon Clulow (2005-04). "Repairing the Bluetooth pairing protocol" (PDF). University of Cambridge Computer Laboratory. Archived from the original (PDF) on 2006-06-18. Retrieved 2007-02-01. {{cite journal}}: Check date values in: |date= (help); Cite journal requires |journal= (help)CS1 maint: multiple names: authors list (link)
  32. Yaniv Shaked, Avishai Wool (2005-05-02). "Cracking the Bluetooth PIN". School of Electrical Engineering Systems, Tel Aviv University. Archived from the original on 2018-12-23. Retrieved 2007-02-01. {{cite journal}}: Cite journal requires |journal= (help)
  33. "Phone pirates in seek and steal mission". Cambridge Evening News. Archived from the original on 2007-07-17. Retrieved 2008-02-04.
  34. "Going Around with Bluetooth in Full Safety" (PDF). F-Secure. 2006-05. Archived from the original (PDF) on 2006-06-10. Retrieved 2008-02-04. {{cite journal}}: Check date values in: |date= (help); Cite journal requires |journal= (help)
  35. M. Hietanen, T. Alanko (2005-10). "Occupational Exposure Related to Radiofrequency Fields from Wireless Communication Systems" (PDF). XXVIIIth General Assembly of URSI - Proceedings. Union Radio-Scientifique Internationale. Archived from the original (PDF) on 2006-10-06. Retrieved 2007-04-19. {{cite web}}: Check date values in: |date= (help); External link in |publisher= (help)

ಹೊರಗಿನ ಕೊಂಡಿಗಳು

[ಬದಲಾಯಿಸಿ]