ಬ್ಯಾರಿ ಫ್ಲಾನಗನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
'ಅಮೆರಿಕದ, ವಾಶಿಂಗ್ಟನ್ ವಿ.ವಿ.ದ ಲೈಬ್ರೆರಿಯ ಸಮೀಪದಲ್ಲಿ 'ಆಲೋಚನಾಮಗ್ನ ಮೊಲದ ಪುತ್ಥಳಿ'

ಬ್ಯಾರಿ ಫ್ಲಾನಗನ್' RA, OBE (ಜನವರಿ ೧೧,೧೯೪೧-ಆಗಸ್ಟ್ ೩೧, ೨೦೦೯) 'ಬ್ಯಾರಿ ಫ್ಲಾನಗನ್' ಕಂಚಿನ ಲೋಹದಲ್ಲಿ ಪ್ರಾಣಿಗಳ ಅದರಲ್ಲೂ ವಿಶೇಷವಾಗಿ ಮೊಲಗಳ ಆಕೃತಿಗಳನ್ನು ನಿರ್ಮಿಸುವುದರಲ್ಲಿ ಮಾಹಿರರಾಗಿದ್ದ ವೆಲ್ಷ್ ದೇಶದ ಮಹಾನ್ ಶಿಲ್ಪಿ.

ಜನನ, ಬಾಲ್ಯ ಹಾಗೂ ವಿದ್ಯಾಭ್ಯಾಸ[ಬದಲಾಯಿಸಿ]

'ಬ್ಯಾರಿ ಫ್ಲಾನಗನ್' ರವರು, ಉತ್ತರ ವೇಲ್ಸ್ ಪ್ರಾಂತ್ಯದ ಪ್ರೆಸ್ಟಿಟನ್ ಜನವರಿ, ೧೧, ೧೯೪೧ ರಲ್ಲಿ ಜನಿಸಿದರು. ಸನ್,(೧೯೫೭-೫೮) ರವರೆಗೆ ಬರ್ಮಿಂಗ್ ಹ್ಯಾಂ ಕಾಲೇಜ್ ನಲ್ಲಿ ಕಲೆ ಮತ್ತು ಹಸ್ತಕಲೆಯಲ್ಲಿ ಪರಿಣತಿಯನ್ನುಗಳಿಸಿದ ಬಳಿಕ, ಸನ್,೧೯೬೪ ರಲ್ಲಿ, ಲಂಡನ್ ನ ಸೇಂಟ್ ಮಾರ್ಟಿನ್ ಕಾಲೇಜ್ ಆಫ್ ಆರ್ಟ್ಸ್ ಗೆ ಸೇರಿದರು. ಸನ್, ೧೯೬೬ ರಲ್ಲಿ ಪದವೀಧರರಾದರು. (೧೯೬೭-೧೯೭೧) ಅದೇ ಕಾಲೇಜಿನಲ್ಲೇ ಬೋಧಿಸುವ ಕೆಲಸ ತೆಗೆದುಕೊಂಡರು. ಸೆಂಟ್ರೆಲ್ ಸ್ಕೂಲ್ ಆಫ್ ಆರ್ಟ್ಸ್, ಮತ್ತು ಕ್ರಾಫ್ಟ್ಸ್ ೧೯೮೨ ರಲ್ಲಿ ವೆನಿಸ್ ಬಿಯೆನೇಲ್ ನಲ್ಲಿ ಬ್ರಿಟನ್ ನನ್ನು ಪ್ರತಿನಿಧಿಸಿದ್ದರು. ೧೯೯೩ ರಲ್ಲಿ ಮೆಡ್ರಿಡ್ ನ ಫಂಡೇಶನ್ ಲಾ ಕೇಕ್ಸಿ ನಲ್ಲಿ ಅವರು ಪಡೆದ ಶಿಕ್ಷಣದ ಹಲವಾರು ಪಠ್ಯಗಳು ಪುನರಾವರ್ತನೆಯಾದವು. ಸನ್, ೧೯೯೪ ರಲ್ಲಿ,ಮಿಸಿ ಎ ಆರ್ಟ್ಸ್ ದಿ ನೆಂಟ್ಸ್ ಸನ್, ಪ್ರದೇಶದ ಪ್ರವಾಸ ಕೈಗೊಂಡರು. 'ಬ್ಯಾರಿ ಫ್ಲಾನಗನ್' ರ ಕಂಚಿನ ಆಲೋಚನಾ ಮಗ್ನನಾದ ಮೊಲದ ಪುತ್ಥಳಿ ಅಲ್ಲಿ ಪ್ರದರ್ಶನ ಕಂಡಿತು. ತದನಂತರ, ರಾಜ್ಯದ ಒಳಗೆ ಮತ್ತು ಹೊರಗೆ

  • ೧೯೯೫-೯೬ ನ್ಯೂಯಾರ್ಕ್ ನ ಪಾರ್ಕ್ ಅವೆನ್ಯು ನಲ್ಲಿ,
  • ೧೯೯೬ ರಲ್ಲಿ, ಚಿಕಾಗೊ ನಗರದ ಗ್ರಾಂಟ್ ಪಾರ್ಕ್ ನಲ್ಲಿ,
  • ೧೯೯೯, ಬ್ರಸಲ್ಸ್ ನಲ್ಲಿ 'ಒಬ್ಬರದೇ ಸೋಲೋ ಪ್ರದರ್ಶನ', 'ಝೇವಿಯರ್ ಹಾಫ್ ಕೆನ್ಸ್',
  • ೨೦೦೦ ರಲ್ಲಿ 'ಟೇಟ್ ಗ್ಯಾಲರಿ, ಲಿವರ್ ಪೂಲ್' ನಲ್ಲಿ,
  • ೨೦೦೨ ರಲ್ಲಿ, ಒಂದು ಅತಿ ಮಹತ್ವದ ಪ್ರದರ್ಶನ, ಜರ್ಮನಿಯ ಕುನ್ಸ್ಥಾಲ್ ರಾಕ್ಲಿಂಗ್ ಹೇಸನ್ ನಲ್ಲಿ,
  • ಹಾಗೂ ಫ್ರಾನ್ಸ್ ದೇಶದ ನೈಸ್ ನಲ್ಲಿ,'ಮಿಸಿ ಬೋಸ್ ಆರ್ಟ್ಸ್ ಡಿ ನೇನ್ಸ್ ಮಾಡೆರ್ನ್ ಕಂಟೆಂಪೊರೇನ್'

'ಥಿಂಕರ್ ಆನ್ ಎ ರಾಕ್' ಎಂಬ 'ಆಲೋಚನಾ ಮಗ್ನ ಮೊಲದ ಶಿಲ್ಪ'[ಬದಲಾಯಿಸಿ]

'ಸೇಂಟ್ ಲೂಯಿಸ್’ ರಾಜ್ಯದ ' ವಾಶಿಂಗ್ಟನ್ ವಿಶ್ವ ವಿದ್ಯಾಲಯದ ಒಳಾಂಗಣ'ದ 'ಆಲಿನ್ ಲೈಬ್ರರಿ'ಯ ಬಳಿ ಯ ಉದ್ಯಾನದಲ್ಲಿ "Thinker on a Rock" ಯೆಂಬ ಹೆಸರಾಂತ ಶಿಲ್ಪವನ್ನು ಸ್ಥಾಪಿಸಿದ್ದಾರೆ. ವಿದ್ಯಾರ್ಥಿಗಳ ಪ್ರೀತಿಯ ಬನ್ನಿ ಯೆಂದು ಕರೆಸಿಕೊಳ್ಳುವ, ಮೊಲದ ದೊಡ್ಡ ಶಿಲ್ಪವನ್ನು 'ಫ್ಲಾನಗನ್' ಸಂಸ್ಥೆಗೆ ಎರವಲಾಗಿ ಕೊಟ್ಟಿದ್ದಾರೆ. ಇದೇತರಹದ ಮತ್ತೊಂದು ಆಲೋಚನಾಮಗ್ನ ಮೊಲದ ಪುತ್ಥಳಿ,'ವಾಶಿಂಟನ್ ಡಿಸಿ'ಯ ಡ್ಯಾನ್ ಫರ್ತ್ ನಲ್ಲಿದೆ. ನ್ಯಾಷನಲ್ ಗಾರ್ಡನ್ ಆಫ್ ಆರ್ಟ್ ಸ್ಕಲ್ಪ್ಟರ್ ಗಾರ್ಡನ್. ೧೯೮೦ ನಲ್ಲಿ ಈತರಹದ 'ಆಲೋಚನಾ ಮಗ್ನ ಮೊಲದ ಶಿಲ್ಪ'ಹಾಗೂ ಮೊಲದ ಕಂಚಿನ ಪುಠಳಿಗಳ ಲಾಂಛನದ ಕಲ್ಪನೆ ಅವರಿಗೆ ಮುದತಂದಿತ್ತು. ಅದರ ನಂತರ, ಮೊಲ, ಎಲ್ಲೆಲ್ಲೂ ಪ್ರದರ್ಶನ ಕಂಡಿತು. ಅಲ್ಲಿಂದ ಮುಂದೆ ಫ್ಲಾನಗನ್ ರವರು ಶಿಲ್ಪಗಳನ್ನು ರಚಿಸುತ್ತಾಬಂದರು. ೧೮೮೦ ಯ ರಾಡಿನ್ ರವರ, ವಿಶೇಷ ಭಂಗಿಯನ್ನು ಹೋಲುವ 'ಥಿಂಕರ್ ಮಹಾನ್ ಶಿಲ್ಪದ ಆಧಾರದ ಮೇಲೆ'. "ಲಾರ್ಜ್ ಲೆಫ್ಟ್ ಲೆಫ್ಟ್ ಹಾಂಡೆಡ್ ಡ್ರಮ್ಮರ್", ಸನ್ ೨೦೦೭ ರ, ಜೂನ್, ೨೪ ರಂದು, ಅವರ ಕೃತಿ, 'ನ್ಯೂಯಾರ್ಕ್ ನಗರದ ಯೂನಿಯನ್ ಸ್ಕ್ವೇರ್' ನ ಪಾರ್ಕ್ ನಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ.

ಮರಣ[ಬದಲಾಯಿಸಿ]

'ಬ್ಯಾರಿ ಫ್ಲಾನಗನ್' ರವರು, ಆಗಸ್ಟ್ ೩೧, ೨೦೦೯ ರಲ್ಲಿ ’ಮೋಟರ್ ನ್ಯೂರೊನ್ ಬೇನೆ’ಯಿಂದ ಮರಣಿಸಿದರು.

ಉಲ್ಲೇಖಗಳು[ಬದಲಾಯಿಸಿ]

^ "Barry Flanagan: Sculptor known for his distinctive giant bronzes". The Independent. 4 September 2009.

[೧]

^ http://www.nga.gov/feature/sculpturegarden/sculpture/sculpture9.shtm Archived 2010-05-27 ವೇಬ್ಯಾಕ್ ಮೆಷಿನ್ ನಲ್ಲಿ.

^ The Hare In Union Square - Daily Plant Newsletter

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

  • Official site of Barry Flanagan
  • Royal Academy of Arts
  • Waddington-Galleries