ವಿಷಯಕ್ಕೆ ಹೋಗು

ಬ್ಯಾಡಗಿ ಮೆಣಸಿನಕಾಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬ್ಯಾಡಗಿ ಮೆಣಸಿನಕಾಯಿ

[ಬದಲಾಯಿಸಿ]
ಹಸಿ- ಹಣ್ಣು ಮೆಣಸು-ಗುಂಟೂರು ಗಿಡ್ಡ ಮೆಣಸಿನಕಾಯಿ
ಒಣಗಿದ ಬ್ಯಾಡಗಿ ಮೆನಸು
ಬ್ಯಾಡಗಿ ಒಣ ಮೆಣಸು

ಭಾರತ ದೇಶದ ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ಒಂದು ತಾಲೂಕು ಬ್ಯಾಡಗಿ.[] ಈ ಪ್ರದೇಶದಲ್ಲಿ ಬೆಳೆಯುವ ಮೆಣಸಿನ ಕಾಯಿಗೆ ಬ್ಯಾಡಗಿ ಮೆಣಸು ಎಂದು ಕರೆಯುತ್ತಾರೆ. ಬ್ಯಾಡಗಿ ಮೆಣಸನ್ನು ಇಂಗ್ಲಿಷ್ ಭಾಷೆಯಲ್ಲಿ Byadgi chilli ಎಂದು ಕರೆಯುತ್ತಾರೆ. ಬ್ಯಾಡಗಿ ಮೆಣಸು ಒಂದು ವಿಶೇಷ ವಿಧದ ಮೆಣಸು. ಇದು ಮುಖ್ಯವಾಗಿ ಭಾರತಕರ್ನಾಟಕ ಕಾಣಸಿಗುವ ಬೆಳೆ. ಬ್ಯಾಡಗಿ ಮೆಣಸು ಗಾಢ ಕೆಂಪು ಬಣ್ಣವನ್ನು ಹೊಂದಿದೆ ಮತ್ತು ಕಡಿಮೆ ಖಾರವನ್ನು ಹೊಂದಿದೆ. ಆದುದರಿಂದ ದಕ್ಷಿಣ ಭಾರತದಲ್ಲಿ ಬೇರೆಬೇರೆ ಆಹಾರಗಳಲ್ಲಿ ಬ್ಯಾಡಗಿ ಮೆಣಸು ಬಳಕೆಯಾಗುತ್ತಿದೆ. ಈ ಕಾರಣಗಳಿಂದಾಗಿ ಬ್ಯಾಡಗಿ ಮೆಣಸು ಭೌಗೋಳಿಕ ಚಿಹ್ನೆಗಳಲ್ಲಿ ೨೦೧೧ನೇ ಫೆಬ್ರವರಿಯಲ್ಲಿ ಗುರುತಿಸಿಕೊಂಡಿದೆ.[] ಇದರ ಚಿಹ್ನೆ ಸಂಖ್ಯೆ ೧೪೪ ಎಂದು ಗುರುತಿಸಲಾಗಿದೆ.[] ಬ್ಯಾಡಗಿ ಎಂಬ ಪ್ರದೇಶದಲ್ಲಿ ಬೆಳೆಯುವ ಮೆಣಸಿಗೆ ಬ್ಯಾಡಗಿ ಮೆಣಸು ಎಂಬ ಹೆಸರು ಬಂತಾದರೂ ಇದರ ಉಪಯೋಗದಲ್ಲೂ ಬಹಳ ವೈಶಿಷ್ಟ್ಯವಿದೆ.

ಕರ್ನಾಟಕ ರಾಜ್ಯದ ಬ್ಯಾಡಗಿ ಮೆಣಸು ಭಾರತದ ಎಲ್ಲಾ ಮೆಣಸುಗಳ ಸಾಲಿನಲ್ಲಿ, ಮತ್ತು ವ್ಯವಹಾರದಲ್ಲಿ ಎರಡನೆಯ ಸ್ಥಾನವನ್ನು ಪಡೆದಿದೆ.[] ಈ ಮೆಣಸನ್ನು ಉಪಯೋಗಿಸಿ ಒಂದು ಎಣ್ಣೆ ತಯಾರಿಸುತ್ತಾರೆ. ಇದರಿಂದ ನೈಲ್‍ಪಾಲಿಶ್ ಮತ್ತು ಲಿಪ್ಸ್‌ಟಿಕ್ ತಯಾರಿಸುತ್ತಾರೆ.[]

ಗುಣಲಕ್ಷಣ

[ಬದಲಾಯಿಸಿ]

ಬ್ಯಾಡಗಿ ಮೆಣಸಿನ ಗಿಡಗಳನ್ನು ನೆಟ್ಟು ೪೦ ದಿನಗಳಲ್ಲಿ ಹೂವು ಬಿಡುತ್ತದೆ. ೬೦ ರಿಂದ ೮೦ ದಿನಗಳಲ್ಲಿ ಗಿಡ ಸಂಪೂರ್ಣ ಹೂವು ಬಿಡುತ್ತದೆ. ಹೆಚ್ಚಾಗಿ ಜನವರಿಯಲ್ಲಿ ನೆಟ್ಟರೆ ಮೇ ತಿಂಗಳಲ್ಲಿ ಕೊಯಿಲು ಆಗುತ್ತದೆ.[] ಒಂದು ವರ್ಷಕ್ಕೆ ಸುಮಾರು ೨೧,೦೦೦ದಷ್ಟು ಬ್ಯಾಡಗಿ ಮೆಣಸಿನ ಉತ್ಪತ್ತಿ ಆಗುತ್ತದೆ.[] The quality of chilli varieties is measured in terms of the extractable red colour pigment; this colour is measured in ASTA colour units. Byadagi Chilli has an ASTA colour value of 156.9.[] ಅಧಿಕ ಕೆಂಪು ಬಣ್ಣವನ್ನು ಹೊಂದಿದ್ದು, ತುಂಬ ಉತ್ತಮ ಗುಣಮಟ್ಟದ ಮೆಣಸು ಉತ್ಪಾದನೆಯಾಗುವುದರಿಂದ ಬ್ಯಾಡಗಿ ಮೆಣಸಿಗೆ ಮಾರ್ಕೆಟ್‌ನಲ್ಲಿ ಹೆಚ್ಚು ಬೆಲೆಯಿದೆ. ಬ್ಯಾಡಗಿ ಮೆಣಸನ್ನು ದಾಸ್ತಾನು ಮಾಡುವುದರಲ್ಲಿ ಉದಾಸಿನ ಮಾಡಿದರೂ ಉಳಿದ ಮೆಣಸುಗಳಂತೆ ಬೇಗ ಹಾಳಾಗುವುದಿಲ್ಲ. ಬೂಸ್ಟು ಬರುವುದಿಲ್ಲ.

೨೦೧೬ ರಲ್ಲಿ ಬ್ಯಾಡಗಿ ಮೆಣಸಿನಕಾಯಿ ಆವಕ ಮತ್ತು ಸನಸ್ಯೆ

[ಬದಲಾಯಿಸಿ]
  • ಅಂತರರಾಷ್ಟ್ರೀಯ ಖ್ಯಾತಿಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯು (ಎಪಿಎಂಸಿ) ಹೊಸ ಆರ್ಥಿಕ ವರ್ಷದ (2016–17) ವಹಿವಾಟಿನ ಮೊದಲ ದಿನವೇ ದಾಖಲೆ ಬರೆದಿದೆ. ಮಾರುಕಟ್ಟೆಯ 68 ವರ್ಷದ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದೇ ದಿನ 2,00,111 ಚೀಲ (60 ಸಾವಿರ ಕ್ವಿಂಟಲ್‌ಗೂ ಹೆಚ್ಚು) ಮೆಣಸಿನಕಾಯಿ ಆವಕವಾಯಿತು. (ಆದರೆ ದರ ಸ್ವಲ್ಪ ಕುಸಿತ ಕಂಡಿದೆ.)ಮೆಣಸಿನಕಾಯಿ ಸಾಂಬಾರು ಪದಾರ್ಥವಾಗಿ ಮಾತ್ರವಲ್ಲದೇ ಇಲ್ಲಿನ ಮೆಣಸಿನಕಾಯಿಯಲ್ಲಿ ಎಣ್ಣೆ, ರಾಳ, ಸೌಂದರ್ಯ ವರ್ಧಕ, ಔಷಧಿ ಮತ್ತಿತರ ಅಂಶಗಳು ಹೇರಳವಾಗಿರುವ ಕಾರಣ ಜಾಗತಿಕ ಮಟ್ಟದಲ್ಲಿ ಬೇಡಿಕೆ ಇದೆ. ಈ ಪೈಕಿ ಬ್ಯಾಡಗಿ ಡಬ್ಬಿ, ಕಡ್ಡಿ ಮತ್ತು ಗುಂಟೂರು ತಳಿಗೆ ಅಧಿಕ ಬೇಡಿಕೆ ಹೆಚ್ಚು.
  • ಬ್ಯಾಡಗಿ ಮಾರುಕಟ್ಟೆಯಲ್ಲಿ ಇ–ಟೆಂಡರಿಂಗ್ ಇದ್ದು, ಅದೇ ದಿನ ಹಣ ಪಾವತಿ ಆಗುತ್ತದೆ. ಅಲ್ಲದೇ, ಪಟ್ಟಣದಲ್ಲಿ 19 ಶೈತ್ಯಾಗಾರಗಳಿವೆ. ವಿದೇಶಿ ಕಂಪೆನಿಗಳೂ ಖರೀದಿಗೆ ಬರುತ್ತಿದ್ದು, ಉಳಿದೆಡೆಗಿಂತ ಇಲ್ಲಿ ಉತ್ತಮ ಬೆಲೆ ಸಿಗುತ್ತಿದೆ.ಮಾರುಕಟ್ಟೆಯ 78 ಎಕರೆ ಪ್ರಾಂಗಣ ಪ್ರಸ್ತುತ ವಹಿವಾಟಿಗೆ ಸಾಕಾಗುತ್ತಿಲ್ಲ. ಅದನ್ನು ಇನ್ನೂ 50 ಎಕರೆಗೆ ವಿಸ್ತರಿಸಬೇಕು ಎಂಬ ಬೇಡಿಕೆ ಕೇಳಿಬಂದಿದೆ. ಮಾರುಕಟ್ಟೆಯನ್ನು ಅವಲಂಬಿಸಿದ 50 ಸಾವಿರಕ್ಕೂ ಹೆಚ್ಚು ಜನ ಜಮಾಯಿಸುತ್ತಾರೆ. ಇದು ಬ್ಯಾಡಗಿ ಪಟ್ಟಣದ ಜನಸಂಖ್ಯೆಯ (30 ಸಾವಿರ) ಸುಮಾರು ಎರಡು ಪಟ್ಟು. ಇವರಿಗೆ ಬೇಕಾದ ಶೌಚಾಲಯ, ಸಮುದಾಯಭವನ ಮತ್ತಿತರ ಮೂಲಸೌಕರ್ಯದ ಅಗತ್ಯವಿದೆ.[]

ಉಲ್ಲೇಖ

[ಬದಲಾಯಿಸಿ]
  1. "Focus on entrepreneurship to boost rural development". Online Edition of The Hindu, dated 20 June 2007. Chennai, India: The Hindu. 20 June 2007. Archived from the original on 1 ಅಕ್ಟೋಬರ್ 2007. Retrieved 26 July 2007.
  2. "Scotch whisky, Karnataka's Byadgi Chilli get GI tag - The Times of India". The Times Of India. 16 February 2011. Archived from the original on 2013-01-03. Retrieved 2016-01-28.
  3. https://en.wikipedia.org/wiki/Geographical_indication
  4. "Spice players put blame on British customs". Online Edition of The Times of India, dated 21 February 2005. Times Internet Ltd. 21 February 2005. Retrieved 26 July 2007.
  5. Lokeshvarappa N. "Red Hot Chilli Peppers". Online Edition of The Deccan Herald, dated 2007-06-19. The Printers (Mysore) Pvt. Ltd. Archived from the original on 21 June 2007. Retrieved 26 July 2007.
  6. "Know Your Ingredient". Online webpage of Sanjeev Kapoor. Archived from the original on 29 ಸೆಪ್ಟೆಂಬರ್ 2007. Retrieved 26 July 2007.
  7. ೭.೦ ೭.೧ "KARVY Commodities Research" (PDF). Seasonal Report on Chilli, dated 28 April 2006. KARVY Comtrade Ltd. Archived from the original (PDF) on 9 ಅಕ್ಟೋಬರ್ 2007. Retrieved 26 July 2007.
  8. (ಪ್ರಜಾವಾಣಿ ೫-೪-೨೦೧೬ )

ಇವನ್ನೂ ನೋಡಿ

[ಬದಲಾಯಿಸಿ]