ಬ್ಯಾಂಡಿಟ್ ಕ್ವೀನ್
ಬ್ಯಾಂಡಿಟ್ ಕ್ವೀನ್ | |
---|---|
ನಿರ್ದೇಶನ | ಶೇಖರ್ ಕಪೂರ್ |
ನಿರ್ಮಾಪಕ | ಬಾಬಿ ಬೇಡಿ |
ಲೇಖಕ | ರಂಜೀತ್ ಕಪೂರ್ ಮಾಲ ಸೇನ್ |
ಪಾತ್ರವರ್ಗ | ಸೀಮಾ ಬಿಶ್ವಾಸ್ |
ಸಂಗೀತ | ನುಸ್ರತ್ ಫತೆಹ್ ಅಲಿ ಖಾನ್ ರಾಜೆರ್ ವೈಟ್ |
ಸಂಕಲನ | ರೇಣು ಸಲುಜ |
ಬಿಡುಗಡೆಯಾಗಿದ್ದು | ೯ ಸೆಪ್ಟೆಂಬರ್ ೧೯೯೪ |
ದೇಶ | ಭಾರತ |
ಭಾಷೆ | ಹಿಂದಿ |
ಬ್ಯಾಂಡಿಟ್ ಕ್ವೀನ್ ಎನ್ನುವುದು 1994 ರಲ್ಲಿ ತಯಾರಾದ ಪೂಲನ್ ದೇವಿ ಯವರ ಜೀವನಾಧಾರಿತವಾದ ಭಾರತೀಯ ಚಲನಚಿತ್ರವಾಗಿದೆ. ಈ ಚಿತ್ರವನ್ನು ಶೇಖರ್ ಕಪೂರ್ ನಿರ್ದೇಶಿಸಿದ್ದಾರೆ ಮತ್ತು ಪ್ರಮುಖ ಪಾತ್ರಧಾರಿಯಾಗಿ ಸೀಮಾ ಬಿಸ್ವಾಸ್ ನಟಿಸಿದ್ದಾರೆ. ಈ ಚಿತ್ರವನ್ನು ಬಾಬ್ಬಿ ಬೇಡಿಯವರ ಕಲೈಡೋಸ್ಕೋಪ್ ಎಂಟರ್‌ಟೈನ್‌ಮೆಂಟ್ ನಿರ್ಮಿಸಿದೆ.ಚಿತ್ರಕ್ಕೆ ಉಸ್ತಾದ್ ನುಸ್ರತ್ ಫತೇ ಅಲಿ ಖಾನ್ ಅವರು ಸಂಗೀತ ರಚನಾಕಾರರಾಗಿದ್ದಾರೆ.
ಕಥಾವಸ್ತು
[ಬದಲಾಯಿಸಿ]ಚಿತ್ರವು ಉತ್ತರ ಪ್ರದೇಶ ದ ಚಿಕ್ಕ ಹಳ್ಳಿಯಲ್ಲಿ 1968 ರ ಬೇಸಿಗೆಯಲ್ಲಿ ಪ್ರಾರಂಭವಾಗುತ್ತದೆ. ಹನ್ನೊಂದು ವರ್ಷ ವಯಸ್ಸಿನ ಫೂಲನ್ (ಸುನಿತಾ ಭಟ್ ನಟಿಸಿದ್ದಾರೆ), ಸುಮಾರು ಇಪ್ಪತ್ತು ವರ್ಷ ವಯಸ್ಸಿನ ಪುಟ್ಟಿಲಾಲ್ (ಆದಿತ್ಯ ಶ್ರೀವಾಸ್ತವ) ಎಂಬ ಹೆಸರಿನವನೊಂದಿಗೆ ಮದುವೆಯಾಗಿದ್ದಾಳೆ. ಆ ಸಮಯದಲ್ಲಿ ಬಾಲ್ಯ ವಿವಾಹಗಳು ವಾಡಿಕೆಯಾಗಿದ್ದರೂ, ಫೂಲನ್‌ಳ ತಾಯಿ ಮೂಲಾ (ಸಾವಿತ್ರಿ ರೇಕ್ವಾರ್) ಈ ಸಂಬಂಧಕ್ಕೆ ಆಕ್ಷೇಪಿಸುತ್ತಾಳೆ. ಪೂಲನ್‌ಳ ವೃದ್ಧ ತಂದೆ ದೇವಿದೀನ್ (ರಾಮ್ ಚರಣ್ ನಿರ್ಮಲ್‌ಕೆರ್) ನಿಷ್ಕರುಣೆಯಿಂದ ಒಪ್ಪುತ್ತಾನೆ ಮತ್ತು ಫೂಲನ್‌ಳನ್ನು ಪುಟ್ಟಿಲಾಲ್ ಜೊತೆಗೆ ಕಳುಹಿಸಲಾಗುತ್ತದೆ.
ಪೂಲನ್‌ಳನ್ನು ಜಾತಿ ಪದ್ಧತಿ ಯನ್ನೂ ಒಳಗೊಂಡಂತೆ ಕೆಲವು ಲೈಂಗಿಕ ಮತ್ತು ಇತರ ಶೋಷಣೆಗಳಿಗೆ ದುರುಪಯೋಗಪಡಿಸಿಕೊಳ್ಳಲಾಗುತ್ತದೆ. (ಫೂಲನ್‌ಳ ಹಾಗೂ ಪುಟ್ಟಿಲಾಲ್‌ನ ಕುಟುಂಬದವರು ಕೆಳಮಟ್ಟದ ಮುಲ್ಲಾಹ್ ಉಪ ಜಾತಿಗೆ ಸೇರಿದವರಾಗಿರುತ್ತಾರೆ; ಉನ್ನತ ಮಟ್ಟದ ಥಾಕೂರ್ ಜಾತಿಯವರು ಸಾಮಾಜಿಕ ಮತ್ತು ರಾಜಕೀಯ ಸನ್ನಿವೇಶಗಳಲ್ಲಿ ಪ್ರಭಾವಶಾಲಿಗಳಾಗಿರುತ್ತಾರೆ) ದೈಹಿಕವಾಗಿ ಮತ್ತು ಲೈಂಗಿಕವಾಗಿ ಪುಟ್ಟಿಲಾಲ್ ದುರಾಚಾರಿಯಾಗಿದ್ದು, ಮತ್ತು ಅದನ್ನು ಸಹಿಸಲಾಗದೇ ಅಂತಿಮವಾಗಿ ಫೂಲನ್ ಅಲ್ಲಿಂದ ಓಡಿ ತನ್ನ ಮನೆಗೆ ಹಿಂತಿರುತ್ತಾಳೆ. ಫೂಲನ್ ದೊಡ್ಡವಳಾದಂತೆ, ಥಾಕೂರ್ ಪುರುಷರಿಂದ (ಅವರ ಪಾಲಕರೇ ಪಂಚಾಯತ್ ಅಥವಾ ಗ್ರಾಮ ಸರ್ಕಾರದ ಆಳ್ವಿಕೆ ನಡೆಸುವವರಾಗಿರುತ್ತಾರೆ) ಲೈಂಗಿಕ ದುರ್ಬಳಕೆಯಂತಹ (ಇಚ್ಛಾಪೂರ್ವಕವಲ್ಲದ) ಸನ್ನಿವೇಶಗಳನ್ನು ಎದುರಿಸುತ್ತಾಳೆ. ಮುಂದಿನ ಪಟ್ಟಣದ ಸಭೆಯಲ್ಲಿ, ಮಾನವ ಜೀತದಾಳುವಿನ ರೀತಿಯಲ್ಲಿ ನಡೆಸಿಕೊಳ್ಳುವ ಉನ್ನತ ಜಾತಿಯ ಪುರುಷರ ಲೈಂಗಿಕ ಇಚ್ಛೆಗೆ ಪೂಲನ್‌ಳು ಸಮ್ಮತಿಸದ ಕಾರಣದಿಂದ, ಪಂಚಾಯತ್ ನವರು ಫೂಲನ್‌ಳನ್ನು ಗ್ರಾಮದಿಂದಲೇ ಬಹಿಷ್ಕರಿಸುವ ಮೂಲಕ ತಮ್ಮ ಅಧಿಕಾರ ದರ್ಪವನ್ನು ತೋರಿಸುತ್ತಾರೆ.
ಆ ಪ್ರಕಾರವಾಗಿ, ತನ್ನ ಸೋದರ ಸಂಬಂಧಿ ಕೈಲಾಶ್ (ಸೌರಭ್ ಶುಕ್ಲಾ) ನೊಂದಿಗೆ ಫೂಲನ್ ಹೊರ ನಡೆಯುತ್ತಾಳೆ. ಮತ್ತೊಂದು ಗ್ರಾಮಕ್ಕೆ ತೆರಳುವ ಮಧ್ಯದಲ್ಲಿ, ವಿಕ್ರಮ್ ಮುಲ್ಲಾ ಮಸ್ತಾನ್ (ನಿರ್ಮಲ್ ಪಾಂಡೆ) ನಾಯಕತ್ವದ ಬಾಬು ಗುಜ್ಜರ್ ತಂಡದ ಡಕಾಯಿತರು (ದರೋಡೆಕೋರರು) ಅವಳಿಗೆ ಎದುರಾಗುತ್ತಾರೆ. ಕೆಲವು ಸಮಯಗಳವರೆಗೆ ಕೈಲಾಶ್‌ನೊಂದಿಗೆ ಫೂಲನ್ ತಂಗುತ್ತಾಳೆ,ಆದರೆ ಅಂತಿಮವಾಗಿ ಅವಳು ಅವನನ್ನು ಬಿಟ್ಟು ಹೋಗಬೇಕಾಗುತ್ತದೆ ಕೋಪಗೊಂಡ ಮತ್ತು ಹತಾಶಳಾದ ಫೂಲನ್, ಸ್ಥಳೀಯ ಪೊಲೀಸರ ಬಳಿಗೆ (ಅವಳ ಮೇಲಿನ ಬಹಿಷ್ಕಾರವನ್ನು ಹಿಂತೆಗೆದುಕೊಳ್ಳುವಂತೆ ಪ್ರಯತ್ನಿಸಲು) ಹೋಗುತ್ತಾಳೆ, ಆದರೆ ಅವಳನ್ನು ಬಂಧಿಸಿದ ಪೊಲೀಸರು ಅವಳಿಗೆ ಹೊಡೆಯುತ್ತಾರೆ, ಹಿಂಸಿಸುತ್ತಾರೆ ಮತ್ತು ಅವಳು ಕಸ್ಟಡಿಯಲ್ಲಿರುವಾಗ ಅತ್ಯಾಚಾರ ಮಾಡುತ್ತಾರೆ. ಥಾಕೂರರು ಜಾಮೀನನ್ನು ಒದಗಿಸಿ ಅವಳು ಬಿಡುಗಡೆಯಾಗುವಂತೆ ಮಾಡುತ್ತಾರೆ. ಆದರೆ, ಅವಳಿಗೆ ತಿಳಿಯದಿರುವಂತೆ, ಜಾಮೀನು ಲಂಚವಾಗಿರುತ್ತದೆ (ಪೊಲೀಸರ ಮೂಲಕ ಬಾಬು ಗುಜ್ಜರ್ ತಂಡಕ್ಕೆ ಪಾವತಿಸಿದ), ಮತ್ತು ಅವನ ಅಮೂಲ್ಯ ವಸ್ತುವನ್ನು ತೆಗೆದುಕೊಂಡು ಹೋಗಲು ಬಾಬು ಗುಜ್ಜರ್ ಆಗಮಿಸುತ್ತಾನೆ.
ಮೇ 1979 ರಲ್ಲಿ, ಫೂಲನ್‌ಳನ್ನು ಬಾಬು ಗುಜ್ಜರ್ (ಅನಿರುದ್ಧ್ ಅಗರವಾಲ್) ಅಪಹರಿಸುತ್ತಾನೆ. ಬಲಶಾಲಿ, ಪ್ರಚಂಡ, ಲೂಟಿಕೋರ ವ್ಯಕ್ತಿಯಾಗಿರುವ ಜೊತೆಗೆ ಗುಜ್ಜರ್ ಓರ್ವ ಕ್ರೂರ ಹಣದಾಸೆಯ ವ್ಯಕ್ತಿಯಾಗಿರುತ್ತಾನೆ. ಪೂಲನ್ ಬಗ್ಗೆ ಗುಜ್ಜರ್‌ನ ಬಲಗೈ ಬಂಟನಾದ ವಿಕ್ರಮ್ ಅನುಕಂಪವನ್ನು ಹೊಂದಿದ್ದರೂ, ಅವಳನ್ನು ಗುಜ್ಜರ್ ಮನಸೋ ಇಚ್ಛೆಯಿಂದ ನಿರ್ದಯವಾಗಿ ಹಿಂಸಿಸುವುದರ ಜೊತೆಗೆ ಅವಮಾನಿಸುತ್ತಾನೆ, ಅಂತಿಮವಾಗಿ ಒಂದು ದಿನ ಫೂಲನ್‌ಗೆ ಗುಜ್ಜರ್ ಅತ್ಯಾಚಾರ ಮಾಡುವುದನ್ನು (ಮತ್ತೊಮ್ಮೆ) ಕಂಡ ವಿಕ್ರಮ್ ಅವನ ಹಣೆಗೆ ಗುಂಡು ಹಾರಿಸುತ್ತಾನೆ. ನಂತರ ವಿಕ್ರಮ್ ತಂಡದ ನಾಯಕತ್ವ ವಹಿಸುತ್ತಾನೆ, ಮತ್ತು ಫೂಲನ್ ಬಗೆಗೆ ಅವನಿಗೆ ಇದ್ದ ಮನೋದೃಷ್ಟಿ ಅಂತಿಮವಾಗಿ ಪರಸ್ಪರ ಗೌರವಯುತ ಪ್ರೌಢ ಸಂಬಂಧವಾಗಿ ಬೆಳೆಯುತ್ತದೆ. ಈ ಸಮಯದಲ್ಲಿ, ಪೂಲನ್ ತನ್ನ ಹಿಂದಿನ ಪತಿ ಪುಟ್ಟಿಲಾಲ್ ಅನ್ನು ಭೇಟಿ ಮಾಡುತ್ತಾಳೆ, ಮತ್ತು ವಿಕ್ರಮ್ ಸಹಾಯದೊಂದಿಗೆ, ಅವನನ್ನು ಒತ್ತೆಯಾಗಿರಿಸಿಕೊಂಡು ಅವನಿಗೆ ಹೊಡೆಯುವ ಮೂಲಕ ಹಿಂದೆ ಅವನು ಮಾಡಿದ ಅತ್ಯಾಚಾರ ಮತ್ತು ದುರಾಚಾರದ ಸೇಡನ್ನು ತೀರಿಸಿಕೊಳ್ಳುತ್ತಾಳೆ. ಅವಳು ವಿಕ್ರಮ್‌ನೊಂದಿಗೆ ಆತ್ಮೀಯತೆಯನ್ನು ಹಂಚಿಕೊಳ್ಳುತ್ತಾಳೆ.
ಥಾಕೂರ್ ಶ್ರೀ ರಾಮ್ (ಗೋವಿಂದ ನಾಮದೇವ್) ಜೈಲಿನಿಂದ ಬಿಡುಗಡೆಯಾಗುವವರೆಗೆ ಎಲ್ಲವೂ ಸುಸೂತ್ರವಾಗಿಯೇ ನಡೆಯುತ್ತದೆ. ಥಾಕೂರ್ ಶ್ರೀ ರಾಮ್ ತಂಡದ ನೈಜ ನಾಯಕ (ಮುಂಚಿನ ಗುಜ್ಜರ್‌ನ ಒಡೆಯ)ನಾಗಿರುತ್ತಾನೆ. ತಂಡಕ್ಕೆ ಶ್ರೀ ರಾಮ್ ಹಿಂತಿರುಗಿ ವಿಕ್ರಮ್ ಅವನನ್ನು ಗೌರವಪೂರ್ಣವಾಗಿ ಬರಮಾಡಿಕೊಳ್ಳುತ್ತಿರುವಂತೆಯೇ, ವಿಕ್ರಮ್‌ನ ಸಮಾನತಾವಾದಿ ನಾಯಕತ್ವ ಶೈಲಿ ಮತ್ತು ಫೂಲನ್ ಬಗೆಗಿನ ದುರಾಸೆಯ ಬಗ್ಗೆ ಶ್ರೀ ರಾಮ್ ಕೆಂಡಕಾರುತ್ತಾನೆ. 1980 ರ ಆಗಸ್ಟ್‌ನಲ್ಲಿ, ವಿಕ್ರಮ್‌ನನ್ನು ಕೊಲ್ಲಲು ಶ್ರೀ ರಾಮ್ ಯೋಜನೆ ರೂಪಿಸುತ್ತಾನೆ, ಮತ್ತು ಫೂಲನ್‌ಳನ್ನು ಅಪಹರಣ ಮಾಡಿ ಬೇಹ್ಮಾಯಿ ಗ್ರಾಮಕ್ಕೆ ಕರೆತರುತ್ತಾನೆ. ಅವನ ಹಿಂದಿನ ಕಾರ್ಯೋನ್ನತಿಗಳಿಗೆ "ಅಗೌರವ" ಸೂಚಿಸಿದ ಮತ್ತು ಸಮಾನವಾಗಿದ್ದೂ ದರ್ಪತನ ತೋರಿಸಿದ್ದಕ್ಕೆ ಶಿಕ್ಷೆಯಾಗಿ ಫೂಲನ್‌ಳನ್ನು ಶ್ರೀ ರಾಮ್ ಮತ್ತು ತಂಡದ ಇತರ ಸದಸ್ಯರು ಸತತವಾಗಿ ಅತ್ಯಾಚಾರ ಮಾಡಿ ಹಿಂಸೆ ನೀಡುತ್ತಾರೆ. ಅವಳಿಗೆ ನೀಡಿದ ದಿಗ್ಭ್ರಾಂತಿಗೊಳಿಸುವ ಮತ್ತು ವ್ಯಾಕುಲಗೊಳಿಸುವ ಅಂತಿಮ ಅವಮಾನ ಮತ್ತು ಶಿಕ್ಷೆಯೆಂದರೆ, ಅವಳನ್ನು ಬೆತ್ತಲೆಗೊಳಿಸಿ, ಬೆಹ್ಮಾಯಿಯ ಸುತ್ತಲೂ ಮೆರವಣಿಗೆ ಮಾಡಲಾಗುತ್ತದೆ ಮತ್ತು ಹೊಡೆದು ಬಾವಿಯಿಂದ ನೀರು ತರಲು ಕಳುಹಿಸಲಾಗುತ್ತದೆ (ಗ್ರಾಮದ ಜನರ ಪೂರ್ಣ ವೀಕ್ಷಣೆಯಲ್ಲಿ).
ತೀವ್ರವಾಗಿ ಆಘಾತಕ್ಕೊಳಗಾದ ಫೂಲನ್ ತನ್ನ ಸೋದರ ಬಂಧು ಕೈಲಾಶ್ ಬಳಿ ಹಿಂತಿರುಗುತ್ತಾಳೆ. ಅವಳು ಕ್ರಮೇಣ ಚೇತರಿಸಿಕೊಂಡು, ವಿಕ್ರಮ್ ಮುಲ್ಲಾನ ಹಳೆಯ ಸ್ನೇಹಿತನಾದ ಮಾನ್ ಸಿಂಗ್ (ಮನೋಜ್ ಬಾಜ್‌ಪೇಯಿ) ನನ್ನು ಭೇಟಿ ಮಾಡುತ್ತಾಳೆ. ಮಾನ್ ಸಿಂಗ್ ಅವಳನ್ನು ಬಾಬಾ ಮುಸ್ತಾಕಿಮ್ (ರಾಜೇಶ್ ವಿವೇಕ್) ನಾಯಕತ್ವದ ಮತ್ತೊಂದು ದೊಡ್ಡ ತಂಡಕ್ಕೆ ಕರೆತರುತ್ತಾನೆ. ತನ್ನ ಇತಿಹಾಸವನ್ನು ಬಾಬಾನಿಗೆ ವಿವರಿಸಿದ ಫೂಲನ್, ತನಗೆ ಕೆಲವು ಜನರು ಮತ್ತು ಆಯುಧಗಳನ್ನು ನೀಡುವಂತೆ ಕೇಳುತ್ತಾಳೆ. ಬಾಬಾ ಮುಸ್ತಾಕಿಮ್ ಅದಕ್ಕೆ ಒಪ್ಪುತ್ತಾನೆ, ಮತ್ತು ಮಾನ್ ಸಿಂಗ್ ಮತ್ತು ಫೂಲನ್ ಅವರು ಹೊಸ ತಂಡದ ನಾಯಕರಾಗುತ್ತಾರೆ.
ಫೂಲನ್ ತನ್ನ ತಂಡವನ್ನು ಧೈರ್ಯ, ಉದಾರತೆ, ನಮ್ರತೆ ಮತ್ತು ಜಾಣ್ಮೆಯಿಂದ ಮುನ್ನಡೆಸುತ್ತಾಳೆ. ಅವಳ ಶಸ್ತ್ರಾಸ್ತ್ರಗಳ ದಾಸ್ತಾನು ಮತ್ತು ಅವಳ ಪ್ರಸಿದ್ಧಿ ಬೆಳೆಯುತ್ತದೆ. ಅವಳು ಡಕಾಯಿತ ರಾಣಿ, ಫೂಲನ್ ದೇವಿ ಎಂದು ಹೆಸರಾಗುತ್ತಾಳೆ. 1981 ರ ಫೆಬ್ರವರಿಯಲ್ಲಿ, ಬೆಹ್ಮಾಯಿಯಲ್ಲಿ ನಡೆಯುವ ಬೃಹತ್ ಮದುವೆ ಸಮಾರಂಭ ಮತ್ತು ಅದರಲ್ಲಿ ಥಾಕುರ್ ಶ್ರೀ ರಾಮ್ ಪಾಲ್ಗೊಳ್ಳುತ್ತಿರುವ ಬಗ್ಗೆ ಫೂಲನ್‌ಗೆ ಬಾಬಾ ಮುಸ್ತಾಕಿಮ್ ಮಾಹಿತಿ ನೀಡುತ್ತಾನೆ. ಫೂಲನ್ ಹೊರಡುತ್ತಿರುವಂತೆಯೇ, ಶಾಂತಿಯಿಂದಿರುವಂತೆ ಅವಳಿಗೆ ಬಾಬಾ ಮುಸ್ತಾಕಿಮ್ ಎಚ್ಚರಿಸುತ್ತಾನೆ. ಫೂಲನ್ ಮದುವೆ ಸಮಾರಂಭಕ್ಕೆ ದಾಳಿ ಮಾಡುತ್ತಾಳೆ ಮತ್ತು ಅವಳ ತಂಡವು ಬೆಹ್ಮಾಮಿಯ ಸಂಪೂರ್ಣ ಥಾಕೂರ್ ವಂಶದ ಮೇಲಿನ ಸೇಡನ್ನು ತೀರಿಸಿಕೊಳ್ಳುತ್ತದೆ. ಜನರನ್ನು ಸುತ್ತುವರಿದು ಅವರನ್ನು ಬಗ್ಗು ಬಡಿಯುತ್ತಾರೆ. ಅಂತಿಮವಾಗಿ ಬಹಳಷ್ಟು ಪುರುಷರನ್ನು ಗುಂಡಿಕ್ಕಿ ಕೊಲ್ಲಲಾಗುತ್ತದೆ. ಪ್ರತೀಕಾರದ ಈ ಕ್ರಮವು ಅವಳನ್ನು ರಾಷ್ಟ್ರೀಯ ಕಾನೂನು ಜಾರಿಯ ಅಧಿಕಾರಗಳ (ನವದೆಹಲಿಯಲ್ಲಿನ) ಗಮನಕ್ಕೆ ಬರುವಂತೆ ಮಾಡುತ್ತದೆ. ಹಿರಿಯ ಪೊಲೀಸ್ ಅಧಿಕಾರಿಗಳು ಇದೀಗ ಫೂಲನ್‌ಗಾಗಿ ಬೃಹತ್ ಪ್ರಮಾಣದ ಶೋಧ ಕಾರ್ಯಾಚರಣೆಯನ್ನು ಕೈಗೊಳ್ಳುತ್ತಾರೆ, ಮತ್ತು ಥಾಕುರ್ ಶ್ರೀ ರಾಮ್ ಅವರ ಸಹಾಯಕ್ಕೆ ಬರುವ ಮೂಲಕ ಸವಿಯಾದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತಾನೆ.
ಶೋಧ ಕಾರ್ಯಾಚರಣೆಯಲ್ಲಿ ಫೂಲನ್ ತಂಡದ ಹಲವಾರು ಸದಸ್ಯರು ಸಾವನ್ನಪ್ಪುತ್ತಾರೆ. ಅವರು ಅಂತಿಮವಾಗಿ ಚಂಬಲ್‌ನ ಕಡಿದಾದ ಕಂದರಗಳಲ್ಲಿ ನೀರು ಮತ್ತು ಆಹಾರವಿಲ್ಲದೇ ತಲೆಮರೆಸಿಕೊಳ್ಳುವಂತಾಗುತ್ತದೆ. ತನ್ನ ಆಯ್ಕೆಗಳನ್ನು ಪರಾಮರ್ಶಿಸಿದ ಫೂಲನ್ ಶರಣಾಗಲು ನಿರ್ಧರಿಸುತ್ತಾಳೆ. ತನ್ನ ಸಹಚರರನ್ನು ರಕ್ಷಿಸುವುದು ಮತ್ತು ಅವರ ಅಗತ್ಯಗಳನ್ನು (ನಿರ್ದಿಷ್ಟವಾಗಿ ಮಹಿಳೆಯರು ಮತ್ತು ಮಕ್ಕಳು) ಪೂರೈಸುವುದು ಅವಳ ಒಪ್ಪಂದವಾಗಿರುತ್ತದೆ. 1983 ರ ಫೆಬ್ರವರಿ ಫೂಲನ್ ಶರಣಾಗುವುದರೊಂದಿಗೆ ಚಲನಚಿತ್ರವು ಮುಕ್ತಾಯಗೊಳ್ಳುತ್ತದೆ. ಅಂತಿಮ ಭಾಗವು ಅವಳ ವಿರುದ್ಧದ ಆರೋಪಗಳನ್ನು ಹಿಂಪಡೆಯಲಾಗಿರುವುದನ್ನು (ಬೆಹ್ಮಾಯಿಯಲ್ಲಿ ಮಾಡಿದ ಹತ್ಯೆಯ ಆರೋಪಗಳನ್ನೂ ಒಳಗೊಂಡು), ಮತ್ತು ಅವಳನ್ನು 1994 ರಲ್ಲಿ ಬಿಡುಗಡೆ ಮಾಡಿರುವುದನ್ನು ಸೂಚಿಸುತ್ತದೆ.
ಪಾತ್ರವರ್ಗ
[ಬದಲಾಯಿಸಿ]- ಸೀಮಾ ಬಿಸ್ವಾಸ್ ... ಫೂಲನ್ ದೇವಿ
- ನಿರ್ಮಲ್ ಪಾಂಡೆ ... ವಿಕ್ರಮ್ ಮಲ್ಲಾಹ್
- ಆದಿತ್ಯ ಶ್ರೀವಾಸ್ತವ ... ಪುಟ್ಟಿಲಾಲ್
- ರಾಮ್ ಚರಣ್ ನಿರ್ಮಲ್‌ಕೆರ್ ... ದೇವಿದೀನ್
- ಸಾವಿತ್ರಿ ರೇಕ್‌ವಾರ್ ... ಮೂಲಾ
- ಸೌರಭ್ ಶುಕ್ಲಾ ... ಕೈಲಾಶ್
- ಮನೋಜ್ ಬಾಜಪೇಯಿ ... ಮಾನ್ ಸಿಂಗ್
- ರಘುವೀರ್ ಯಾದವ್ ... ಮಧೂ
- ರಾಜೇಶ್ ವಿವೇಕ್ ಬಾಬಾ ಮುಸ್ತಾಕಿಮ್
- ಅನಿರುಧ್ ಅಗರವಾಲ್ .... ಬಾಬು ಗುಜ್ಜರ್
- ಗೋವಿಂದ್ ನಾಮ್‌ದಿಯೋ ... ಥಾಕುರ್ ಶ್ರೀ ರಾಮ್
- ಶೇಖರ್ ಕಪೂರ್ ... ಕಿರು ಪಾತ್ರದಲ್ಲಿ ಲಾರಿ ಚಾಲಕನಾಗಿ
ಪ್ರಶಸ್ತಿಗಳು
[ಬದಲಾಯಿಸಿ]- 1995: ಫಿಲ್ಮ್‌ಫೇರ್ ಪ್ರಶಸ್ತಿ
- ಅತ್ಯುತ್ತಮ ಚಿತ್ರಕ್ಕಾಗಿ ವಿಮರ್ಶಕರ ಪ್ರಶಸ್ತಿ
- 1996: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
- ಹಿಂದಿಯ ಅತ್ಯುತ್ತಮ ಚಲನಚಿತ್ರ
- ಅತ್ಯುತ್ತಮ ನಟಿ: ಸೀಮಾ ಬಿಸ್ವಾಸ್
- ಅತ್ಯುತ್ತಮ ವಸ್ತ್ರ ವಿನ್ಯಾಸ: ಡಾಲಿ ಅಹ್ಲುವಾಲಿಯಾ
- 1997: ಫಿಲ್ಮ್‌ಫೇರ್ ಪ್ರಶಸ್ತಿ
- ಅತ್ಯುತ್ತಮ ನಿರ್ದೇಶಕ: ಶೇಖರ್ ಕಪೂರ್
- ಅತ್ಯುತ್ತಮ ಚಲನಚಿತ್ರ ಛಾಯಾಗ್ರಾಹಕ : ಅಶೋಕ್ ಮೆಹ್ತಾ
ಚಿಕ್ಕ-ಚೊಕ್ಕ ವಿಷಯಗಳು
[ಬದಲಾಯಿಸಿ]- ಚಲನಚಿತ್ರದ ನಿರ್ದೇಶಕರಾದ ಶೇಖರ್ ಕಪೂರ್ ಅವರು ಲಾರಿ ಚಾಲಕನಾಗಿ ಕಿರು ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಹೆಚ್ಚಿನ ಓದಿಗಾಗಿ
[ಬದಲಾಯಿಸಿ]- ಇಂಡಿಯಾಸ್ ಬ್ಯಾಂಡಿಟ್ ಕ್ವೀನ್: ದಿ ಟ್ರುತ್ ಸ್ಟೋರಿ ಆಫ್ ಫೂಲನ್ ದೇವಿ , ಮಾಲಾ ಸೇನ್ ಇವರಿಂದ, ಪಂಡೋರಾ ಇವರಿಂದ 1993 ರಲ್ಲಿ ಪ್ರಕಟಿತ. ಐಎಸ್ ಬಿಎನ್ 0688168949
ಉಲ್ಲೇಖಗಳು
[ಬದಲಾಯಿಸಿ]- Moxham, Roy (3 June 2010). Outlaw: India's Bandit Queen and Me. Rider. ISBN 9781846041822.
ಬಾಹ್ಯ ಕೊಂಡಿಗಳು
[ಬದಲಾಯಿಸಿ]Awards and achievements | ||
---|---|---|
ಪೂರ್ವಾಧಿಕಾರಿ Kabhi Haan Kabhi Naa |
Filmfare Critics Award for Best Movie 1995 |
ಉತ್ತರಾಧಿಕಾರಿ Bombay |
- Pages using duplicate arguments in template calls
- ೧೯೯೪ ರ ಚಲನಚಿತ್ರಗಳು
- ಭಾರತೀಯ ಚಲನಚಿತ್ರಗಳು
- ಭಾರತ ಕಲಾ ಚಿತ್ರಗಳು
- ಭಾರತದಲ್ಲಿನ ಸಂಘಟಿತ ಅಪರಾಧದ ಬಗ್ಗೆ ಚಲನಚಿತ್ರಗಳು
- ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಪ್ರಶಸ್ತಿ ಜಯಿಸಿದವರ ನಟನೆಯನ್ನು ಒಳಗೊಂಡ ಚಲನಚಿತ್ರಗಳು
- ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರಕ್ಕಾಗಿರುವ ಅಕಾಡೆಮಿ ಪ್ರಶಸ್ತಿಗಾಗಿ ಭಾರತೀಯ ಚಿತ್ರಗಳ ಸಲ್ಲಿಕೆಗಳು
- ಶೇಖರ್ ಕಪೂರ್ ನಿರ್ದೇಶಿಸಿದ ಚಲನಚಿತ್ರಗಳು