ಬ್ಯಾಂಕೇತರ ಹಣಕಾಸು ಸಂಸ್ಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಬ್ಯಾಂಕೇತರ ಹಣಕಾಸು ಸಂಸ್ಥೆ (ಎನ್‍ಬಿಎಫ಼್‍ಸಿ) ಎಂದರೆ ಪೂರ್ಣಪ್ರಮಾಣದ ಬ್ಯಾಂಕಿಂಗ್ ಪರವಾನಗಿ ಹೊಂದಿರದ ಅಥವಾ ಒಂದು ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಬ್ಯಾಂಕಿಂಗ್ ನಿಯಂತ್ರಕ ಸಂಸ್ಥೆಯಿಂದ ಮೇಲ್ವಿಚಾರಣೆ ಮಾಡಲ್ಪಡದ ಹಣಕಾಸು ಸಂಸ್ಥೆ. ಎನ್‍ಬಿಎಫ಼್‍ಸಿ ಮತ್ತು ಬ್ಯಾಂಕ್‍ಗಳ ನಡುವಿನ ಅತ್ಯಂತ ಮುಖ್ಯವಾದ ವ್ಯತ್ಯಾಸವೆಂದರೆ ಎನ್‍ಬಿಎಫ಼್‍ಸಿಗಳು ಬೇಡಿಕೆ ಠೇವಣಿಗಳನ್ನು ತೆಗೆದುಕೊಳ್ಳುವುದಿಲ್ಲ. ಎನ್‍ಬಿಎಫ಼್‍ಸಿಗಳು ಹಣಹೂಡಿಕೆ, ಅಪಾಯ ಹಂಚಿಕೊಳ್ಳುವಿಕೆ, ಒಪ್ಪಂದ ಸ್ವರೂಪದ ಉಳಿತಾಯಗಳು, ಮಾರುಕಟ್ಟೆ ದಲ್ಲಾಳಿತನದಂತಹ ಬ್ಯಾಂಕ್ ಸಂಬಂಧಿ ಹಣಕಾಸು ಸೇವೆಗಳನ್ನು ಸರಾಗವಾಗಿಸುತ್ತವೆ.[೧] ಇವುಗಳ ಉದಾಹರಣೆಗಳೆಂದರೆ ವಿಮಾ ಸಂಸ್ಥೆಗಳು, ಗಿರವಿ ಅಂಗಡಿಗಳು, ಕ್ಯಾಶಿಯರ್ ಚೆಕ್‍‍ನ್ನು ನೀಡುವವರು, ಚೆಕ್ ವಟಾಯಿಸುವ ಸ್ಥಳಗಳು, ವೇತನದಿನದ ಸಾಲ ನೀಡುವಿಕೆ, ಕರೆನ್ಸಿ ವಿನಿಮಯಗಳು, ಮತ್ತು ಕಿರುಬಂಡವಾಳ ಸಂಸ್ಥೆಗಳು.[೨][೩] ಅರ್ಥವ್ಯವಸ್ಥೆಯ ಉಳಿತಾಯಗಳನ್ನು ಬಂಡವಾಳ ಹೂಡಿಕೆಯಾಗಿ ಪರಿವರ್ತಿಸುವ ಅನೇಕ ಪರ್ಯಾಯಗಳನ್ನು ಒದಗಿಸುವ ಮೂಲಕ ಅರ್ಥವ್ಯವಸ್ಥೆಯನ್ನು ಬಲಪಡಿಸುವಲ್ಲಿ ಎನ್‍ಬಿಎಫ಼್‍ಸಿಗಳು ಪಾತ್ರವಹಿಸುತ್ತವೆ ಮತ್ತು ಇವು ಮಧ್ಯವರ್ತಿಯ ಪ್ರಾಥಮಿಕ ರೂಪವು ವಿಫಲವಾದ ಸಂದರ್ಭದಲ್ಲಿ ಬೆಂಬಲ ಸೌಲಭ್ಯಗಳಾಗಿ ಕಾರ್ಯನಿರ್ವಹಿಸುತ್ತವೆ.[೪]

ಉಲ್ಲೇಖಗಳು[ಬದಲಾಯಿಸಿ]

  1. Carmichael, Jeffrey, and Michael Pomerleano. Development and Regulation of Non-Bank Financial Institutions. World Bank Publications, 2002, 12.
  2. Non-Bank Financial Institutions:A Study of Five Sectors[permanent dead link]
  3. NZ Financial Dictionary, http://www.anz.com/edna/dictionary.asp?action=content&content=non-bank_financial_institution
  4. "FRB: Speech, Greenspan -- Do efficient financial markets mitigate crises? -- October 19, 1999". www.federalreserve.gov. Retrieved 13 April 2018.