ವಿಷಯಕ್ಕೆ ಹೋಗು

ಬೊಲೊಮೀಟರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೊಲೊಮೀಟರ್ ವಾಹಕದ ತಾಪ ಬದಲಾವಣೆಯೊಂದಿಗೆ ಅದರ ವಿದ್ಯುತ್‌ರೋಧವೂ ಬದಲಾಗುತ್ತದೆ ಎಂಬ ತತ್ತ್ವಾಧಾರಿತ ಉಪಕರಣ. ಇದು ಉಷ್ಣಾಂಶ ಅವಲಂಬಿತ ವಿದ್ಯುತ್ ರೋಧವನ್ನು ಹೊಂದಿರುವ ವಸ್ತುವಿನ ಮೂಲಕ ವಿಕಿರಣ ಉಷ್ಣವನ್ನು ಅಳೆಯುತ್ತದೆ.[೧][೨]

ರಚನೆ, ಕಾರ್ಯ[ಬದಲಾಯಿಸಿ]

ವೀಟ್ಸ್‌ಟನ್ ಬ್ರಿಡ್ಜ್ ಎಂಬುದು ನಾಲ್ಕು ರೋಧಗಳುಳ್ಳ ವ್ಯವಸ್ಥೆ. ಇದರಲ್ಲಿ ಎರಡು ಪ್ಲಾಟಿನಮ್ ಪಟ್ಟಿಗಳು ಎರಡು ರೋಧಗಳ ಪಾತ್ರ ನಿರ್ವಹಿಸುತ್ತವೆ. ಇವುಗಳ ಪೈಕಿ ಒಂದಕ್ಕೆ ಹಣತೆ ಕಪ್ಪು ಲೇಪಿಸಿದರೆ ಬೊಲೊಮೀಟರ್ ಸಿದ್ಧ.[೩][೪] ಹಣತೆ ಕಪ್ಪು ಲೇಪಿಸಿದ ಪಟ್ಟಿಯ ಮೇಲೆ ವಿಕಿರಣ ಬಿದ್ದು ಬಿಸಿಯಾದಾಗ ವಿದ್ಯುತ್ ರೋಧವೂ ಬದಲಾಗುತ್ತದೆ. ಗಾಲ್ವನೊಮೀಟರ್ ನೆರವಿನಿಂದ ರೋಧದಲ್ಲಿ ಆದ ಬದಲಾವಣೆ ಅಳೆಯಬಹುದು.

ಉಲ್ಲೇಖಗಳು[ಬದಲಾಯಿಸಿ]

  1. "Langley's Bolometer, 1880-1890". Science Museum Group. Retrieved 20 March 2022.
  2. See, for example, bolometers – Definition from the Merriam-Webster Online Dictionary
  3. Langley, S. P. (1880-12-23). The "Bolometer". American Metrological Society. p. 1-7.
  4. Langley, S. P. (1881-01-12). "The Bolometer and Radiant Energy". Proceedings of the American Academy of Arts and Sciences. 16: 348. doi:10.2307/25138616. JSTOR 25138616.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: