ವಿಷಯಕ್ಕೆ ಹೋಗು

ಬೊಜ್ಜು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಛಾರ್ಲ್ಸ್ ಮೆಲಿನ್ ::circa 1630;oil on canvas; Height: 203 cm (79.9 in). Width: 121 cm (47.6 in).Charles Mellin (attributed) - Portrait of a Gentleman - Google Art Project

ಸ್ಥೂಲಕಾಯತೆ

[ಬದಲಾಯಿಸಿ]
  • ದೇಹವು ಆರೋಗ್ಯಕರ ತೂಕ ಹೊಂದಿರುವುದಕ್ಕಿಂತ ಹೆಚ್ಚು ತೂಕ ಹೊಂದಿದ್ದರೆ ಅದನ್ನು ಬೊಜ್ಜು ಎನ್ನಬಹುದು. ಈ ಬೊಜ್ಜಿನ ಪ್ರಮಾಣ ಬಹಳ ಹೆಚ್ಚಾದರೆ ಅದು ದೇಹದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಮಾಡುವುದು. ಅದನ್ನು ಅಸ್ವಸ್ಥ ಸ್ಥೂಲಕಾಯತೆ. ಎನ್ನುವರು. ಅದನ್ನು ಕಂಡು ಹಿಡಿಯಲು ದೇಹದ ಆರೋಗ್ಯಕರ ತೂಕವನ್ನು ವಯಸ್ಸಿಗೆ ಅನುಗುಣವಾಗಿ ಪುರುಷರಿಗೂ ಮಹಿಳೆಯರಿಗೂ ಅನ್ವಯಿಸುವ ಒಂದು ಆದರ್ಶ ಪಟ್ಟಿಯನ್ನು ವಿಶ್ವ ಆರೋಗ್ಯ ಸಂಶ್ಥೆ ಮತ್ತು ಇತರ ಸಂಶೋಧಕರು ಮಾಡಿದ್ದಾರೆ. ಪ್ರತಿಯೊಬ್ಬರೂ ತಮ್ಮದೇಹದ ತೂಕ ಆರೋಗ್ಯಕರ ತೂಕ ಹೊಂದಿದೆಯೇ ಎಂಬುದನ್ನು ನೋಡಿಕೊಳ್ಳಲು ಅದು ಸಹಾಯಮಾಡುವುದು.
  • ಅಸ್ವಸ್ಥ ಸ್ಥೂಲಕಾಯತೆ ಎಂದರೆ, ದೇಹದ ತೂಕ (ದ್ರವ್ಯರಾಶಿ-ಮಾಸ್) ಸೂಚಿ (ಬಿ.ಎಮ್.ಐ ಎತ್ತರ-ತೂಕ-ಆರೋಗ್ಯ)ಯ ನಿಯಮಕ್ಕಿಂತ ಹೆಚ್ಚಾಗಿರುತ್ತದೆ (೩೫ ಕ್ಕಿಂತ ಮೇಲೆ) .ಬಿಎಂಐ ದೇಹದ ಕೊಬ್ಬಿನ ಪ್ರಮಾಣ ಅಂದಾಜು ಮಾಡಲು ನೆರವಾಗುತ್ತದೆ ಮತ್ತು ನಿಮ್ಮ ಗಾತ್ರ ಒಂದು ಆರೋಗ್ಯಕರ ದೇಹ ತೂಕವನ್ನು ಹೊಂದಿರುವುದನ್ನು ನಿರ್ಧರಿಸಲು ಸಹಾಯ ಮಾಡುವುದು. ಬಿಎಂಐ ಯು ಪರಿಪೂರ್ಣ ಮಾಪನ ಅಲ್ಲ. ಆದರೆ ಇದು ಮಾದರಿ ತೂಕದ ಸಾಮಾನ್ಯ ಕಲ್ಪನೆಯನ್ನು ಎತ್ತರಕ್ಕೆ ವ್ಯಾಪ್ತಿಗೆ ಹೋದಿಸಿ ನೀಡಲು ಸಹಾಯ ಮಾಡುವುದು.
Obesity6; A "super obese" male with a BMI of 53 kg/m2: weight 182 kg (400 lb), height 185 cm (6 ft 1 in)
ಚಿತ್ರ:Robert Earl Hughes.jpg
Robert Earl Hughesರಾಬರ್ಟ್ ಅರ್ಲ್ ಹಗ್ಸ್ (ಜೂನ್ ೪, ೧೯೨೬ – ಜುಲೈ ೧೦, ೧೯೫೮)ಅವನ ಎದೆಯ ೩.೧೫ ಮೀಟರ್ (೧೦.೩ ಅಡಿ) ಯಷ್ಟಿತ್ತು ಎಂದು ಹೇಳಲಾಗಿದೆ, ಮತ್ತು ಅವನ ಭಾರ ಅಂದಾಜು ೪೮೫ ಕೆಜಿ (೧೦೬೯ ಪೌಂಡ್) ಅವನ ಅತಿ ಹೆಚ್ಚು ತೂಕದವ-ಆ ಸಮಯದಲ್ಲಿ.[]

ಕಾರಣಗಳು

[ಬದಲಾಯಿಸಿ]
  • ನೀವು ತಿಂದಾಗ ನಿಮ್ಮ ದೇಹದ ಚಟುವಟಿಕೆ ನೆಡಸಲು ನಿಮ್ಮ ದೇಹ ಕ್ಯಾಲೊರಿಗಳನ್ನು ಬಳಸುತ್ತದೆ. ವಿಶ್ರಾಂತಿಯಲ್ಲೂ ಹೃದಯವನ್ನು ಪಂಪ್ ಮಾಡಲು ಅಥವಾ ಆಹಾರ ಜೀರ್ಣಿಸಿಕೊಳ್ಳಲು ದೇಹಕ್ಕೆ ಕ್ಯಾಲೊರಿಗಳ ಅಗತ್ಯವಿದೆ. ಒಂದು ವೇಳೆ ಆಹಾರ ಹೆಚ್ಚಾಗಿ ಆ ಕ್ಯಾಲೊರಿಗಳನ್ನು ಬಳಸಲಾಗದಿದ್ದರೆ, ದೇಹ ಅವುಗಳನ್ನು ಕೊಬ್ಬು ರೂಪದಲ್ಲಿ ಸಂಗ್ರಹಿಸುತ್ತದೆ. ನೀವು ದೈನಂದಿನ ಚಟುವಟಿಕೆಗಳಲ್ಲಿ ಮತ್ತು ವ್ಯಾಯಾಮದ ಸಮಯದಲ್ಲಿ ಬಳಸಬಹುದಾದ ಪ್ರಮಾಣಕ್ಕಿಂತ ಹೆಚ್ಚು ತಿನ್ನುವುದನ್ನು ಮುಂದುವರಿಸಿದರೆ, ನಿಮ್ಮ ದೇಹ ಹೆಚ್ಚಾದ ಕ್ಯಾಲೊರಿಗಳನ್ನು ಕೂಡಿಡಲು ಕೊಬ್ಬು ಸಂಗ್ರಹದ ಕಣಜ ನಿರ್ಮಿಸಲು ಆರಂಬಿಸುತ್ತದೆ. ಸ್ಥೂಲಕಾಯತೆ ಹಾಗೂ ಗೀಳಿನ ಬೊಜ್ಜು (obesity) ನಿಮ್ಮ ದೇಹದಲ್ಲಿ ಶೇಖರವಾದ ಬಹಳಷ್ಟು ಅನಗತ್ಯ ಕೊಬ್ಬು ಶೇಕರಣೆಯ ಪರಿಣಾಮವಾಗಿದೆ.
  • ಉದಾಹರಣೆಗೆ ಖಿನ್ನತೆ ನಿವಾರಣೆಯ ಕೆಲವು ಔಷಧಗಳು,, ತೂಕ ಹೆಚ್ಚಾಗಲು ಕಾರಣವಾಗಬಹುದು. ಇಂತಹ ಹೈಪೊಥೈರಾಯಿಡಿಸಮ್ ವೈದ್ಯಕೀಯ ಪರಿಸ್ಥಿತಿಗಳು ಕೂಡ ಹೆಚ್ಚು ತೂಕ ಕಾರಣವಾಗಬಹುದು ಆದರೆ ಸಾಮಾನ್ಯವಾಗಿ ಬೊಜ್ಜು ಉಂಟುಮಾಡುವುದನ್ನು , ತಡೆಯುವ ಚಿಕಿತ್ಸೆಯಿಂದ ನಿರ್ವಹಿಸಬಹುದಾಗಿದೆ.[]

ಜಗತ್ತಿನ ಅತಿ ತೂಕದವರು

[ಬದಲಾಯಿಸಿ]
  • ಸುಮಾರು ೧೦೦೦ ಪೌಂಡ್ ತೂಗುವ ವಿಶ್ವದ ಹೆಚ್ಚು ತೂಕದ ವ್ಯಕ್ತಿ ಆಂಡ್ರೆಸ್ ಮೊರೆನೊರನ್ನು ಗ್ಯಾಸ್ಟ್ರಿಕ್ ಬೈಪಾಸ್ ಶಸ್ರಕ್ರಿಯೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಸ್ಟ್ರೇಚರ್ ಬಳಸಿಕೊಂಡು ಏಳು ಜನರು ಮತ್ತು ಒಂದು 'ಸಾಮಾನ್ಯ ದೇಹವನ್ನು ಮಾಡಲು ಎರಡನೇ ಅವಕಾಶಕ್ಕಾಗಿ' ಅವನ ಹಾಸಿಗೆಯಿಂದ ಸಾಗಿಸಿದರು.
  • ಚಿತ್ರ:ಅತಿ ತುಕದವ: The world's heaviest man who weighs almost 1000 pounds []
  • ಇದುವರೆಗಿನ ಹೆಚ್ಚು ತೂಕದವರಲ್ಲಿ ಮೊದಲಿಗ ಯು.ಎಸ್.ಎ.ನ-Jon Brower Minnoch;ಜಾನ್ಬೊವರ್ಮಿನೊಚ್ಎಂದು ದಾಖಲಾಗಿದೆ.

ವಿಶ್ವದ ಅತಿಭಾರದ ಮನುಷ್ಯ, ಜುವಾನ್ ಪೆಡ್ರೊ ಫ್ರಾಂಕೊ

[ಬದಲಾಯಿಸಿ]
  • ೨೯ ಮಾರ್ಚ್ ೨೦೧೭
  • ೨೦೧೭ ರ ವಿಶ್ವದ ಹೆಚ್ಚು ತೂಕದ ಮನುಷ್ಯ, ೩೨ ವರ್ಷ ವಯಸ್ಸಿನ ಜುವಾನ್ ಪೆಡ್ರೊ ಫ್ರಾಂಕೊ, ಶಸ್ತ್ರಚಿಕಿತ್ಸೆಗೆ ಮೊದಲು' ಒಬ್ಬ ಬೊಜ್ಜು ರೋಗಿ ಜುವಾನ್ ಪೆಡ್ರೊ ಫ್ರಾಂಕೊ,ಮೊದಲು ಅರ್ಧಟನ್‍ಗಿಂತ ಹೆಚ್ಚು ತೂಗುತ್ತಿದ್ದು, ನಿಜವಾದ ತೂಕ ೫೯೫ ಕೆ.ಜಿ.ಯಲ್ಲಿ ೩ ತಿಂಗಳಲ್ಲಿ ೧೭೦ ಕೆಜಿ ಕಳೆದುಕೊಂಡಿದ್ದಾನೆ. ಇದು ಮೇ ೯ ರಂದು ಶಸ್ತ್ರಕ್ರಿಯೆ ಕಾರ್ಯಾಚರಣೆಗೆ ತಯಾರಿ. ಮೂರು ತಿಂಗಳ ಆಹಾರದ ನಿಯಮದ ಮೇಲೆ ತೂಕ ಕಡಿಮೆ ಆಗಿದೆ, ಮೆಕ್ಸಿಕೋದಲ್ಲಿ ಅಕ್ವಾಸಲಿನೇಟ್ಸ್ (Aguascalientes), ಸ್ಥಳೀಯ ಆಸ್ಪತ್ರೆ ವಿಶೇಷ ತೂಕ ನಷ್ಟ ಕ್ಲಿನಿಕ್, ಅವನು ಶಸ್ತರಕ್ರಿಯೆ ಕಾರ್ಯಾಚರಣೆಗೆ ಸೂಕ್ತ ಅಭ್ಯರ್ಥಿಯಾಗಲು ಹಾಗೆ ಸುಮಾರು ೧೭೫ ಕೆಜಿ ತೂಕ ಇಳಿಸಿದೆ.ಚಿತ್ರ:[೩] []

ಬೊಜ್ಜಿಗೆ ಒಂದು ಕಾರಣ-ಸಂಶೋಧನೆ

[ಬದಲಾಯಿಸಿ]
  • ಗರ್ಭಿಣಿಯಾಗುವುದಕ್ಕೂ ಮುನ್ನವೇ ಅಧಿಕ ಕೊಬ್ಬಿನ ಅಂಶಗಳುಳ್ಳ ಆಹಾರದಿಂದ ಬೊಜ್ಜು ಬೆಳೆಸಿಕೊಂಡ ಮಹಿಳೆಯರು ತಮ್ಮ ನಂತರದ ಮೂರು ತಲೆಮಾರಿಗೆ ಸ್ಥೂಲಕಾಯದ ಶಾಪವನ್ನು ವರ್ಗಾಯಿಸುತ್ತಾರೆ.
  • ಈ ತಾಯಂದಿರ ಮಕ್ಕಳು ಅತ್ಯಂತ ಹಿತಮಿತ ಹಾಗೂ ಆರೋಗ್ಯಕರ ಶೈಲಿಯ ಆಹಾರ ಪದ್ಧತಿ ಅನುಸರಿಸಿದರೂ ಅವರಲ್ಲಿ ಜೀರ್ಣಕ್ರಿಯೆ ಸಮಸ್ಯೆಗಳು ಎದುರಾಗುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ ಸಂಶೋಧಕರು. ಇಲಿಗಳ ಮೇಲೆ ನಡೆಸಿದ ಪ್ರಯೋಗದಿಂದ ಈ ಅಂಶ ಬೆಳಕಿಗೆ ಬಂದಿದೆ.
  • ತಾಯಂದಿರಲ್ಲಿನ ಬೊಜ್ಜುತನ, ಅವರ ಮೂರು ತಲೆಮಾರಿನ ಜನರಲ್ಲಿ ಮಧುಮೇಹ ಟೈಪ್‌–೨, ಹೃದಯ ಸಂಬಂಧಿ ಕಾಯಿಲೆ ಮತ್ತು ವಂಶವಾಹಿಯಲ್ಲಿನ ಅಸಹಜತೆಗಳಿಗೆ ಕಾರಣವಾಗುವ ಅಪಾಯ ತಂದೊಡ್ಡುವ ಸಾಧ್ಯತೆಗಳಿವೆ ಎಂದು ಹೇಳುತ್ತಾರೆ ವಾಷಿಂಗ್ಟನ್‌ ವಿಶ್ವವಿದ್ಯಾಲಯದ ಪ್ರೊಫೆಸರ್‌ ಕೆಲ್‌ ಮೊಲೀ.
  • ಅಮ್ಮಂದಿರಲ್ಲಿನ ಬೊಜ್ಜು ಮತ್ತು ಅದರಿಂದ ಹುಟ್ಟಿಕೊಂಡ ಜೀರ್ಣಕ್ರಿಯೆ ಸಮಸ್ಯೆಗಳು ಮೈಟೊಕಾಂಡ್ರಿಯದ ಡಿಎನ್‌ಎ ಮೂಲಕ ಮಕ್ಕಳಿಗೂ ದಾಟುತ್ತವೆ. ಜೀರ್ಣಕ್ರಿಯೆ ಸಮಸ್ಯೆಯುಳ್ಳ ಇಲಿಗಳ ಮೇಲೆ ಅಧ್ಯಯನ ನಡೆಸಿದಾಗ,
  • ಅವುಗಳಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸದ ಮೈಟೊಕಾಂಡ್ರಿಯದ ಸಮಸ್ಯೆಯು ಅದರ ಮೂರು ಪೀಳಿಗೆಗೂ ತಾಯಿಯ ಅಂಡಾಣುವಿನ ಮೂಲಕ ರವಾನೆಯಾಗುವುದು ಖಚಿತವಾಗಿದೆ.
  • ಶೇ ೬೦ ರಷ್ಟು ಕೊಬ್ಬಿನಂಶ ಮತ್ತು ಶೇ ೨೦ ರಷ್ಟು ಸಕ್ಕರೆಯ ಅಂಶದ ಆಹಾರ ನೀಡಿ ಸ್ಥೂಲಕಾಯಿಗಳನ್ನಾಗಿಸಿದ ಇಲಿಗಳನ್ನು ಈ ಪ್ರಯೋಗಕ್ಕೆ ಒಳಪಡಿಸಲಾಗಿದೆ.
  • ದಶಕಗಳಿಂದ ನಮ್ಮ ಆಹಾರ ಪದ್ಧತಿ ಹದ ತಪ್ಪಿದೆ. ಫಾಸ್ಟ್‌ಫುಡ್‌ ಮತ್ತು ಅಸುರಕ್ಷಿತ ಆಹಾರಗಳ ಅತಿಯಾದ ಸೇವನೆಯು ಈಗಿನ ಸ್ಥೂಲಕಾಯದ ಸಮಸ್ಯೆಗೆ ಕಾರಣವಾಗಿದೆ.
  • ಮನುಷ್ಯರಲ್ಲಿ ಮಕ್ಕಳ ಆಹಾರ ಸೇವನೆ ಹೆಚ್ಚೂ ಕಡಿಮೆ ಪೋಷಕರಂತೆಯೇ ಇರುತ್ತದೆ. ಹೀಗಾಗಿ ಇಲಿಗಳ ಮೇಲೆ ನಡೆಸಿದ ಪ್ರಯೋಗದಲ್ಲಿ ತಿಳಿದುಕೊಂಡ ಕಾಯಿಲೆಗಳ ಅಪಾಯ ಮನುಷ್ಯರಲ್ಲಿ ಇನ್ನೂ ಹೆಚ್ಚು ಎಂದು ಸಂಶೋಧಕರು ಹೇಳಿದ್ದಾರೆ.
  • []

ಭಾರತದ ಮಕ್ಕಳಲ್ಲಿ ಬೊಜ್ಜು

[ಬದಲಾಯಿಸಿ]
  • ಎಳೆಮಕ್ಕಳ ಬೊಜ್ಜಿಗೆ ಅನಾರೋಗ್ಯಕರ ಆಹಾರ ಶೈಲಿ ಮತ್ತು ಕಡಿಮೆ ದೈಹಿಕ ಚಟುವಟಿಕೆ ಕಾರಣ ಎಂದೂ ವರದಿ ಹೇಳಿದೆ. ‘ಶೇ ೨೬ ರಷ್ಟು ಮಕ್ಕಳು ಪ್ರತಿ ದಿನ ಮೂರು ತಾಸಿಗೂ ಹೆಚ್ಚು ಟಿ.ವಿ ಮತ್ತು ಕಂಪ್ಯೂಟರ್‌ ಮುಂದೆ ಕಳೆಯುತ್ತಾರೆ. ಇದು ದೆಹಲಿಯ ಏಮ್ಸ್‌ನ ಸಮುದಾಯ ಆರೋಗ್ಯ ವಿಭಾಗದ ಪ್ರೊ. ಆನಂದ ಕೃಷ್ಣನ್‌‍ ಅಭಿಪ್ರಾಯ.
  • ಬೊಜ್ಜಿನಿಂದಾಗಿ ಮಕ್ಕಳಿಗೆ ಸಕ್ಕರೆ ಕಾಯಿಲೆ (ವಿಧ–೨), ಹೃದಯ ಕಾಯಿಲೆಗಳು, ಲಕ್ವ, ಕೆಲವು ವಿಧದ ಕ್ಯಾನ್ಸರ್‌ ಕಾಯಿಲೆ ಬರುವ ಅಪಾಯ ಹೆಚ್ಚು. ಜೀವನಶೈಲಿಯಲ್ಲಿ ಆಗುತ್ತಿರುವ ಬದಲಾವಣೆ ರೋಗಗಳು ಹೆಚ್ಚಲು ಕಾರಣ.ಬೊಜ್ಜಿನ ಸಮಸ್ಯೆ ಹೆಚ್ಚುವಲ್ಲಿ ಆಹಾರ ಉದ್ಯಮದ ಪಾಲೂ ಇದೆ ಎಂದು ವರದಿ ಹೇಳಿದೆ. ಭಾರತದಲ್ಲಿ ಇರುವ ಹದಿಹರೆಯದವರ ಸಂಖ್ಯೆ ೨೪.೩ ಕೋಟಿ. ಅಂದರೆ ಜಗತ್ತಿನ ಒಟ್ಟು ಹದಿಹರೆಯದವರಲ್ಲಿ ಶೇ ೨೫ ರಷ್ಟು ಭಾಗ ಮಕ್ಕಳು ಭಾರತದಲ್ಲಿಯೇ ಇದ್ದಾರೆ. ಹಾಗಾಗಿ ಮಕ್ಕಳಲ್ಲಿನ ಬೊಜ್ಜು ಸಮಸ್ಯೆ ಪರಿಹಾರಕ್ಕಾಗಿಯೇ ವಿಶೇಷ ಯೋಜನೆ ರೂಪಿಸಲು ಕೇಂದ್ರ ಆರೋಗ್ಯ ಸಚಿವಾಲಯ ಮುಂದಾಗಿದೆ.
  • ಭಾರತದ ಮಕ್ಕಳಲ್ಲಿ ಬೊಜ್ಜು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಇಲ್ಲಿನ ಪ್ರತಿ ಐದು ಮಕ್ಕಳಲ್ಲಿ ಒಂದು ಮಗು ಬೊಜ್ಜು ದೇಹವನ್ನು ಹೊಂದಿರುತ್ತದೆ. ಭವಿಷ್ಯದಲ್ಲಿ ಈ ಮಕ್ಕಳು ಗಂಭೀರ ಕಾಯಿಲೆಗಳಿಗೆ ತುತ್ತಾಗುವ ಅಪಾಯ ಹೆಚ್ಚು ಎಂದು ವರದಿಯೊಂದು ಹೇಳಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ಪಾಪ್ಯುಲೇಷನ್‌ ರೆಫರೆನ್ಸ್‌ ಬ್ಯೂರೊ (ಪಿಆರ್‌ಬಿ)ದ ವರದಿಯಲ್ಲಿ ಈ ಅಂಶ ಬಹಿರಂಗಗೊಂಡಿದೆ.[]

ಬಿ.ಎಮ್.ಐ.

[ಬದಲಾಯಿಸಿ]
ಎಂಟು ವರ್ಷದ ಹುಡುಗಿ ಪ್ರೇಡರ್-ವಿಲ್ಲಿ ಸಿಂಡ್ರೋಮ್ನ, ('ತಣಿಯದ ಹಸಿವಿನ ರೋಗ' ಜನ್ಮಜಾತ) ವಿಶಿಷ್ಟ ಬೊಜ್ಜು ಪ್ರದರ್ಶನ
  • BODY MASS INDEX:: ದೇಹದ ತೂಕದ (ದ್ರವ್ಯರಾಶಿ) ಸೂಚ್ಯಾಂಕ:
ಇಂದ ವರೆಗೆ ತೂಕವನ್ನ ಎತ್ತರದ ವರ್ಗದಿಂದ ಬಾಗಿಸಿದಾಗ ಬಂದ ಫಲಿತಾಂಶದ ಪರಿಣಾಮ
೧೮.೫ ಕಡಿಮೆ ತೂಕ ::underweight
೧೮.೫ ೨೫.೦ ಸಹಜವಾದ ತೂಕ::normal weight
೨೫.೦ ೩೦.೦ ಅಧಿಕ ತೂಕ ::overweight
೩೦.೦ ೩೫.೦ ಮೊದಲ ಹಂತದ ಬೊಜ್ಜು ::class I obesity
೩೫.೦ ೪೦.೦ ಎರಡನೇ ಹಂತದ ಬೊಜ್ಜು ::class II obesity
೪೦.೦ ಮೂರನೇ ಹಂತದ ಬೊಜ್ಜು:: class III obesity  
  • ಬಿಎಂಐ ಕಂಡು ಹಿಡಿಯಲು ವ್ಯಕ್ತಿಯ ತೂಕವನ್ನು ಅವರ ಎತ್ತರದ ವರ್ಗದಿಂದ ಭಾಗಿಸಿದಾಗ ಸಿಗುವ ಪರಿಮಾಣವನ್ನು ಅನುಸರಿಸುತ್ತದೆ.
  • BMI = m / h2
  • ಇಲ್ಲಿ m ಮತ್ತು h ಕ್ರಮವಾಗಿ ವ್ಯಕ್ತಿಯ ತೂಕ ಮತ್ತು ಎತ್ತರ.

ಬಿಎಂಐ ಸಾಮಾನ್ಯವಾಗಿ ತೂಕ ಮತ್ತು ಎತ್ತರಗಳನ್ನು, ಮೀಟರ್ ಮತ್ತು ಕಿಲೋಗ್ರಾಂಗಳಲ್ಲಿ ಅಳೆಯಲಾಗುತ್ತದೆ. ಹಾಗೆ ಮಾಡಿದ ಪರಿಣಾಮವಾಗಿ ಚದರ ಮೀಟರ್‍ಗೆ ಕಿಲೋಗ್ರಾಂಗಳಲ್ಲಿ ಸಿದ್ಧ ಉತ್ತರಸಿಗುವುದು.[]

ಉದಾಹರಣೆ

[ಬದಲಾಯಿಸಿ]
  • ೧ ಸೆ.ಮೀ= ೦.೩೯೩೭ ಇಂಚು
  • ೧ ಇಂಚು = ೨.೫೩೨೨೫೮ ಸೆ.ಮೀ.
  • ೫ ಅಡಿ ೨ ಇಂಚು ಎತ್ತರದವ = ೧೫೭ ಸೆ.ಮೀ ಎತ್ತರ
  • ೫ ಅಡಿ ೩ ಇಂಚು = ೧೬೦.೦೨ ಸೆ.ಮೀ
  • ೫ ಅಡಿ ೩.೫ ಇಂಚು ಎತ್ತರ = ೧೬೧.೦೩ ಸೆಂ.ಮೀ. = ೧.೬೧೦೩ ಮೀಟರ್ (ಇದರ ವರ್ಗ =೧.೬೧ ಮೀಟರ್ X ೧.೬೧ ಮೀಟರ್)
  • ೧.೬೧ X ೧.೬೧= ೨.೫೯೨೧ ಚದರ ಮೀ.
  • ೨.೫೯೨೧ ಚದರ ಮೀ.
  • ೫೩ ಕೆ.ಜಿ ತೂಕ ಇದ್ದರೆ ÷ ೨.೫೯೨೧ ರಿಂದ ಭಾಗಿಸು = ೨೦.೦೬೦೯ ಇದ್ದರ ಮೇಲಿನ ಪಟ್ಟಿಯಂತೆ ಸಹಜ ತೂಕ; ಮಹಿಳೆಗೆ ಈ ಮಿತಿ ಕಡಿಮೆ ಇದೆ.
  • ಅದೇ ಎತ್ತರ ೬೮ ಕಜಿ ಇದ್ದರೆ :: ೬೮ ÷ ೨.೫೯೨೧ ರಿಂದ ಭಾಗಿಸು = ೨೬.೨೩೩೫೫೫೮ ಅಧಿಕತೂಕದ ಸಾಲಿಗೆ ಸೇರುವುದು. ಆರೋಗ್ಯಕರವಲ್ಲ.

ಅತಿ ಬೊಜ್ಜಿನ ಅಸ್ವಸ್ಥತೆ

[ಬದಲಾಯಿಸಿ]
ಹೃದಯಸ್ಥಂಬನ;ಹೃದಯಸ್ನಾಯು ಒಡೆದಿರುವುದು; ನಾಳದಲ್ಲಿ ಕೊಬ್ಬು ಕಟ್ಟಿರುವುದು. ::HeartAttack (Myocardial infarct)
  • ದೇಹದ ನೈಸರ್ಗಿಕ ವ್ಯವಸ್ಥೆಗಳಾದ ರಕ್ತ ಪರಿಚಲನಾ ವ್ಯವಸ್ಥೆ, ವಿಸರ್ಜನಾ ವ್ಯವಸ್ಥೆ, ಪಚನ ವ್ಯವಸ್ಥೆ, ಸಮತೋಲನ ವ್ಯವಸ್ಥೆ ಎಲ್ಲವೂ ಏರುಪೇರಾಗುವುದು. ನಾನಾ ಬಗೆಯ ಆರೋಗ್ಯದ ತೊಂದರೆಗಳು ಕಾಣಿಸಿಕೊಳ್ಳವುವು. ಮುಖ್ಯವಾಗಿ ಸ್ಥೂಲಕಾಯತೆಯಿಂದ ಬರುವ ವಿವಿಧ ರೋಗಗಳು, ವಿಶೇಷವಾಗಿ ತೀವ್ರ ರಕ್ತದೊತ್ತಡ, ಹೃದ್ರೋಗ, ಮಧುಮೇಹ 2ನೇ ವಿಧ, ನಿದ್ರೆಯಲ್ಲಿ ಉಸಿರುಕಟ್ಟುವಿಕೆ, ಕೆಲವು ರೀತಿಯ ಕ್ಯಾನ್ಸರ್, ಅಸ್ಥಿ ಸಂಧಿವಾತ, ಸಂಧಿವಾತ, ಮೂತ್ರನಾಳ ರೋಗ ಮತ್ತು ಪಿತ್ತಗಲ್ಲು ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಮತ್ತು ಅಸ್ತಮಾ (ವ್ಯಕ್ತಿಯು ನಿದ್ರೆಯ ಅವಧಿಯಲ್ಲಿ ಅಲ್ಪ ಅವಧಿಗೆ ಉಸಿರಾಟದ ನಿಂತಾಗ), ಉಸಿರಾಟದ ಸಮಸ್ಯೆಗಳು, ಈ ಬಗೆಯ ಆನಾರೋಗ್ಯದ ಸಾಧ್ಯತೆಯನ್ನು ಹೆಚ್ಚಿಸುತ್ತದೆ.[]

ಹೃದಯಸಂಬಂಧಿ ತೊಂದರೆ

[ಬದಲಾಯಿಸಿ]

ರಕ್ತಕೊರತೆಯ ಹೃದಯ ರೋಗ (Ischemic heart disease)

[ಬದಲಾಯಿಸಿ]
  • ಸ್ಥೂಲಕಾಯತೆ ಗಂಟಲೂತ ಮತ್ತು ಹೃದಯಾಘಾತ ಸೇರಿದಂತೆ ಹೃದಯ ಸಂಬಂಧಿ ರೋಗಗಳಿಗೆ ಸಂಬಂಧಿಸಿದೆ. ೨೦೦೨ ರ ವರದಿಯೊಂದು ೨೧% ರಕ್ತಕೊರತೆಯ ಹೃದ್ರೋಗಕ್ಕೆ, ಸ್ಥೂಲಕಾಯ ಕಾರಣ ಎಂದು ನಿರ್ಧರಿಸಿದೆ. ೨೦೦೮ ರ ಯುರೋಪಿಯನ್ ವರದಿ ಒಮ್ಮತದ ೩೫% ಸಂಖ್ಯೆಯನ್ನು ಇರಿಸುತ್ತದೆ. [] [೧೦]

ರಕ್ತ ಕಟ್ಟಿ ಹೃದಯ ಸ್ಥಂಭನ

[ಬದಲಾಯಿಸಿ]
  • ಬೊಜ್ಜು ಹೊಂದಿರುವವರಲ್ಲಿ ಸುಮಾರು ೧೧% ನಷ್ಟು ಪುರುಷರಲ್ಲಿ ಮತ್ತು ೧೪% ಮಹಿಳೆಯರಲ್ಲಿ ಹೃದಯಾಘಾತ ಪ್ರಕರಣಗಳಿಗೆ ಸಂಬಂಧವನ್ನು ಹೊಂದಿದೆ.[೧೧]

ಅಧಿಕ ರಕ್ತದೊತ್ತಡ

[ಬದಲಾಯಿಸಿ]
  • ಅಧಿಕ ರಕ್ತದೊತ್ತಡ ಹೊಂದಿರುವ ೮೫% ರಷ್ಟು ಜನರು ೨೫ ಕ್ಕೂ ಹೆಚ್ಚು ಬಿಎಂಐ (BMI) ಹೊಂದಿರುತ್ತಾರೆ. ರಕ್ತದೊತ್ತಡದ ಅಪಾಯವನ್ನು ಹೊಂದಿರುವ ಸಾಮಾನ್ಯ ತೂಕದ ಜನರಿಗೆ ಹೋಲಿಸಿದರೆ, ಬೊಜ್ಜು ಇರುವವರಲ್ಲಿ ಅಧಿಕ ರಕ್ತದೊತ್ತಡ ೫ ಪಟ್ಟು ಹೆಚ್ಚಾಗಿದೆ.[೧೨]

ಅಸಹಜ ಕೊಲೆಸ್ಟರಾಲ್ ಮಟ್ಟ

[ಬದಲಾಯಿಸಿ]
ದುಗ್ಧರಸಗ್ರಂಥಿಗಳ ಅತಿಶ್ರಾವದ ಉರಿಯೂತಗಳು::Lymphedema
  • ಸ್ಥೂಲಕಾಯತೆಯು ಹೆಚ್ಚಾಗಿರುವವವರಲ್ಲಿ ಕೊಲೆಸ್ಟರಾಲ್ (ಕೆಟ್ಟ ಕೊಲೆಸ್ಟರಾಲ್) (LDL) ಮತ್ತು ಕಡಿಮೆ HDL ಕೊಲೆಸ್ಟರಾಲ್ (ಉತ್ತಮ ಕೊಲೆಸ್ಟರಾಲ್) ಇರುವುದು ಕಂಡುಬಂದಿದೆ.[೧೩]

ಡೀಪ್ ವೇಯ್ನ್ ಥ್ರಾಂಬೋಸಿಸ್ ಪಲ್ಮನರಿ ಎಂಬಾಲಿಸಮ್

[ಬದಲಾಯಿಸಿ]
  • ಸ್ಥೂಲಕಾಯತೆಯಿಂದ ೨.೩ ಪಟ್ಟು ನೆಚ್ಚು ಮೊಣಕಾಲಿನ ಮಲಿನರಕ್ತನಾಳದಲ್ಲಿ (ಸಿರೆಯ ಥ್ರಾಂಬೋಎಂಬಾಲಿಸಮ್) ರಕ್ತ ಗಂಟುಕಟ್ಟಿ (ಉಬ್ಬಿದ ಗಂಟು ರಕ್ತನಾಲಗಳು) ಉಂಟಾಗುವ ಅಪಾಯವನ್ನು ಹೆಚ್ಚಿಸುತ್ತದೆ.

ಚರ್ಮ ಸಂಬಂಧಿತ ಸಮಸ್ಯೆ

[ಬದಲಾಯಿಸಿ]
  • ಸ್ಥೂಲಕಾಯತೆ ಚರ್ಮದಮೇಲೆ 'ಹಿಗ್ಗುಗೆರೆ'ಗಳನ್ನು ಉಂಟುಮಾಡಬಹುದು. ಸಂದುಗಳಲ್ಲಿ (acanthosis) ಮೃತಕೋಶಗಳ ತಗ್ಗುಸಂಗ್ರಹ ಗುರುತು (ನಿಗ್ರಿಕನ್ಸ್) ಆಗಬಹುದು, ದುಗ್ಧರಸಗ್ರಂಥಿಗಳ ಅತಿಶ್ರಾವದ ಉರಿಯೂತಗಳು (lymphedema) ಉಂಟಾಗುವ ಸಾಧ್ಯತೆ ಇವೆ., ವಿಷಾಣುಜೀವಗಳಿಂದ ಚರ್ಮದ ಮೇಲೆ ಕೆಂಪು ದಡಸಲುಗಳು ತೋರಬಹುದು; ರೋಮಾಧಿಕೃತ ಸಹಲಕ್ಷಣವೂ (Hirsutism -ದೇಹದ ಎಲ್ಲಡೆ ಅತಿಯಾಗಿ ರೋಮಗಳು ಬೆಳೆಯುವುದು- ಕರಡಿಯಂತೆ) ಕಾಣಿಸಿಕೊಳ್ಳಬಹುದು , ಮತ್ತು ಕೆಂಪುಕಜ್ಜಿಯ ಚರ್ಮರೋಗಕ್ಕೂ (ಇಂಟೆರ್ಟ್ರಿಗೊ) ಇದು ತಳಕು ಹೊಂದಿದೆ. [೧೪]
  • ದುಗ್ಧರಸ ಗ್ರಂಥಿ (Lymph Node)

ಮಧುಮೇಹ

[ಬದಲಾಯಿಸಿ]
ಅಧಿಕ ಬೊಜ್ಜು ನಾನಾ ವಿಧದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವುದು :: ಅದರ ವಿವರಣೆಯ ಚಿತ್ರ.(ನೋಡಿ: ಜೀವನದ ಗುಣಮಟ್ಟ).
  • ಬೊಜ್ಜು ಮತ್ತು ರೋಗ ನಡುವೆ ಪ್ರಬಲ ಸಂಬಂಧಗಳಲ್ಲಿ 2ನೇ ರೀತಿಯ ಮಧುಮೇಹವೂ ಒಂದು. ೧೯೭೦ ರಲ್ಲಿ ಸಂಶೋಧಕರು ಇದನ್ನು 'ಬೊಜ್ಜುಸಕ್ಕರೆ ರೊಗ' ("diabesity) ಎಂದು ಕರೆಯಲು ಆರಂಭಿಸಿದರು". ಅಧಿಕತೂಕದ ಪುರುಷರಲ್ಲಿ ಮತ್ತು ಮಹಿಳೆಯರಲ್ಲಿ ಮಧುಮೇಹದ ೭೭% ಪ್ರಕರಣಗಳಲ್ಲಿ ೬೪% ಪ್ರಕರಣಗಳು ಇವೆ.

ಗೈನೆಕೊಮಾಸ್ಟಿಯಾ

[ಬದಲಾಯಿಸಿ]
  • ೨೦೦೯ ರ ವಿಮರ್ಶೆ ಪ್ರಕಾರ, ಬೊಜ್ಜು, ಕೆಲವು ವ್ಯಕ್ತಿಗಳಲ್ಲಿ ಆಯಂಡ್ರೊಜೆನ್, ಈಸ್ಟ್ರೋಜೆನ್ಗಳ ಪ್ರೇರಕದ್ರವ್ಯದ (ಹೆಣ್ಣುತನದ ನಿರ್ನಾಳ ಗ್ರಂಥಿದ್ರವ) ಪರಿವರ್ತನೆ ಏರಿಕೆಯೊಂದಿಗೆ ಸಂಬಂಧಿಸಿದಂತೆ ಇರಬಹುದು.

ಜೀರ್ಣಾಂಗ ವ್ಯೂಹದ ಮೇಲೆ ಪರಿಣಾಮ

[ಬದಲಾಯಿಸಿ]

ಜಠರ-ಅನ್ನನಾಳೀಯ ಮರುಪೂರಣ ರೋಗ

[ಬದಲಾಯಿಸಿ]
  • ಹಲವಾರು ಅಧ್ಯಯನಗಳು ಉರಿತೇಗು ಉಕ್ಕಳಿಕೆ ಮತ್ತು ಎದೆಯುರಿ (ತಿಂದ ಆಹಾರ ಉಕ್ಕಳಿಸಿ ಅನ್ನ ನಾಳಕ್ಕೆ ಬರುವುದು,::GERD) (ತೀವ್ರ ಗ್ಯಾಸ್ಟ್ರಿಕ್?) ಲಕ್ಷಣಗಳ ತೀವ್ರತೆಗೆ ಬೊಜ್ಜು ಕಾರಣವೆಂದು ತೋರಿಸಿಕೊಡುತ್ತವೆ.

ಕೊಲೆಲಿಥೈಸಿಸ್ (ಪಿತ್ತಗಲ್ಲು)

[ಬದಲಾಯಿಸಿ]
  • ಸ್ಥೂಲಕಾಯತೆ, ಎನ್ಐಎಚ್ ಪ್ರಕಾರ, ಪಿತ್ತರಸದಲ್ಲಿ ಕೊಲೆಸ್ಟರಾಲ್ ಪ್ರಮಾಣವನ್ನು ಹೆಚ್ಚಸಿ, ಪ್ರತಿಯಾಗಿ ಅಲ್ಲಿ ಕಲ್ಲಿನ ರಚನೆ ಸಂಭವಿಸುವಂತೆ ಮಅಡಬಹುದು. [೧೫][೧೬]

ಬಂಜೆತನಕ್ಕೆ ಕಾರಣ

[ಬದಲಾಯಿಸಿ]
  • ಸ್ಥೂಲಕಾಯತೆ ಪುರುಷರು ಮತ್ತು ಮಹಿಳೆಯರಲ್ಇ ಬಂಜೆತನಕ್ಕೆ ಕಾರಣವಾಗುತ್ತದೆ. ಮಹಿಳೆಯರಲ್ಲಿ ಮಿತಿಮೀರಿದ ಈಸ್ಟ್ರೊಜೆನ್ ಸಾಮಾನ್ಯ ಅಂಡೋತ್ಪತ್ತಿಗೆ (ಅಡ್ಡಿ ಮಾಡುವುದು) ತೊಂದರೆಕೊಡುವುದು ಮತ್ತು ಪುರುಷರಲ್ಲಿ ವೀರ್ಯು ಉತ್ಪಾದನೆಯನ್ನು (spermatogenesis) ಮಾರ್ಪಡಿಸುತ್ತವೆ. [೧೭]

ಗರ್ಭಧಾರಣೆಯ ತೊಡಕುಗಳು

[ಬದಲಾಯಿಸಿ]
  • ಸ್ಥೂಲಕಾಯತೆ ಸೇರಿದಂತೆ ಗರ್ಭಾವಸ್ಥೆಯಲ್ಲಿ ಅನೇಕ ತೊಡಕುಗಳು ಸಂಬಂಧಿಸಿದೆ. ಅಧಿಕ ರಕ್ತಸ್ರಾವ, ಸೋಂಕು, ತಾಯಿಯು ಹೆಚ್ಚುಕಾಲ ಆಸ್ಪತ್ರೆಯಲ್ಲಿ ದಾಖಲಾತಿಯ ಅಗತ್ಯ, ಹಾಗೂ ಶಿಶುವಿನ ಹೆಚ್ಚಿದ ಎಳೆಶಿಶುವಿನ ವಿಶೇಷನಿಗಾ ಘಟಕದ ವ್ಯವಸ್ಥೆ (NICU) ಅಗತ್ಯತೆಗಳು. ಸ್ಥೂಲಕಾಯದ ಹೆಂಗಸರು ಹೆಚ್ಚು ಸಿಸೇರಿನ್‍ಗಳ ಮೂಲಕ ಜನನ ಸಾಮಾನ್ಯ. ಇತರರಿಗೆ ಹೋಲಿಸಿದರೆ ತೂಕದ ಮಹಿಳೆಯರಿಗೆ ಎರಡು ಬಾರಿ ಪ್ರಮಾಣದಲ್ಲಿ ಹೆಚ್ಚು. ಸಹ ಸ್ಥೂಲಕಾಯದ ಹೆಂಗಸರು ಕಾಲಪೂರ್ವಪ್ರಸವ ಜನನದವರು ಮತ್ತು ಕಡಿಮೆ ತೂಕ ಶಿಶುಗಳ ಜನನವಾಗುವ ಅಪಾಯವನ್ನು ಹೆಚ್ಚಿಸಿವೆ.

ಹುಟ್ಟು ನ್ಯೂನತೆಗಳು

[ಬದಲಾಯಿಸಿ]
  • ಇಂತಹ ವಿಭಾಜಕ ಭಿತ್ತಿ ದೋಷಗಳು, ಸೀಳು ತುಟಿ ಮತ್ತು ಅಂಗುಳಿನ, ಗುದ (anorectal) ವಿರೂಪತೆ, ಅಂಗ ಕಡಿತ ವೈಪರೀತ್ಯಗಳು ಸೇರಿದಂತೆ ಮೆದುಳ ದೋಷ (anencephaly) ಮತ್ತು ಸ್ಪೈನ ಬೈಫಿಡ, ಹೃದಯರಕ್ತನಾಳದ ವೈಪರೀತ್ಯಗಳು, ನರನಾಳದ ದೋಷಗಳು ಸೇರಿದಂತೆ ಮತ್ತು ಮೆದುಳಲ್ಲಿ ದ್ರವಸಂಗ್ರಹ (hydrocephaly) ಇತ್ಯಾದಿ ಹಲವಾರು ನ್ಯೂನ್ಯತೆಯ ಮಗುವನ್ನು ಗರ್ಭಾವಸ್ಥೆಯಲ್ಲಿ ಬೊಜ್ಜು ಇರುವವರು ಪಡೆಯವ ಸಂಬವ ಇರುವುದು.

ಗರ್ಭನಾಳದೊಳಗೆ ಭ್ರೂಣದ ಮರಣ

[ಬದಲಾಯಿಸಿ]
  • ಬೊಜ್ಜು ಇರುವ ಗರ್ಭಿಣಿಯರು (ಮೆಟರ್ನಲ್ ಒಬೆಸಿಟಿ) ಗರ್ಭನಾಳದೊಳಗೆ ಭ್ರೂಣದ ಮರಣದ ಅಪಾಯ ದುರಿಸುವ ಸಂಬವ ಇದೆ.[೧೭]

ಇಡಿಯೋಪಥಿಕ್ ಇಂಟ್ರಾಕ್ರೇನಿಯಲ್ ಹೈಪರ್

[ಬದಲಾಯಿಸಿ]
  • ಇಡಿಯೋಪಥಿಕ್ ಇಂಟ್ರಾಕ್ರೇನಿಯಲ್ ಹೈಪರ್, ಅಥವಾ ತಲೆಬುರುಡೆಯ ಭಾಗವು ವಿವರಿಸಲಾಗದ ಅಧಿಕ ಒತ್ತಡದಿಂದ ದೃಷ್ಟಿ ಹಾಳಾಗುವುದು. ಆಗಿಂದಾಗ್ಗೆ ತೀವ್ರ ತಲೆನೋವು ಮತ್ತು ಕಿವಿಮೊರೆತ ಉಂಟಾಗಲು ಕಾರಣವಾಗಬಹುದು. ಇದು ಒಂದು ಅಪರೂಪದ ಸ್ಥಿತಿಯಾಗಿದೆ. ಇದು ಸಾಮಾನ್ಯವಾಗಿ ಬೊಜ್ಜು ಮಹಿಳೆಯರಲ್ಲಿ ಕಂಡುಬರುತ್ತದೆ.

ಮಲ್ಟಿಪಲ್ ಸ್ಕ್ಲೆರೋಸಿಸ್

[ಬದಲಾಯಿಸಿ]
  • ೧೮ ನೇ ವಯಸ್ಸಿಗೆ ಬೊಜ್ಜು ಬಂದ ಮಹಿಳೆಯರಿಗೆ ಮೆದುಳು ಬೆನ್ನುಹುರಿಯ ಮೆದುಳುಬಳ್ಳಿಯದೋಷ (ಎಂಎಸ್ ದುಪ್ಪಟ್ಟು ಅಪಾಯದ ಸಂಬವನೀಯತೆ ಹೊಂದಿವೆ.

ಕ್ಯಾನ್ಸರ್

[ಬದಲಾಯಿಸಿ]
  • ಅಧಿಕತೂಕ ಅಥವಾ ಅಥವಾ ಬೊಜ್ಜು ಇರುವವರಿಗೆ ಹೆಚ್ಚಿನ ಆವರ್ತನದಲ್ಲಿ ಕ್ಯಾನ್ಸರ್ (ಅಥವಾ oncological) ಹಲವು ಕ್ಯಾನ್ಸರ್ ಸಂಭವಿಸುತ್ತದೆ. ಯುನೈಟೆಡ್ ಕಿಂಗ್ಡಮ್‍ನಿಂದ ಬಂದ ಅಧ್ಯಯನವು, ಸರಿಸುಮಾರು ೬% ಹೆಚ್ಚುವರಿ ಕ್ಯಾನ್ಸರ್‍ಗೆ ಹೆಚ್ಚುತೂಕ ಕಾರಣ ಎಂದಿದೆ. [೧೮]

ಮಾನಸಿಕ ಅನಾರೋಗ್ಯ ಸೈಕಿಯಾಟ್ರಿಕ್

[ಬದಲಾಯಿಸಿ]
  • ಯುನೈಟೆಡ್ ಸ್ಟೇಟ್ಸ್‍ನಲ್ಲಿ ಹೆಚ್ಚಿನ 'ದೇಹದ ದ್ರವ್ಯರಾಶಿ ಸೂಚಿ' ಆತ್ಮಹತ್ಯೆ ರಾರಣವಾಗುತ್ತದೆ.ಉದಾಹರಣೆಗೆ:ಖಿನ್ನತೆ- ಸಾಮಾನ್ಯ.
  • ಸಮಾಜಲ್ಲಿ ದೂಷಣೆಯ ಅಥವಾ ಅಪಹಾಸ್ಯದ ಕಾರಣ ಸ್ಥೂಲಕಾಯತೆ ಖಿನ್ನತೆ ಜೊತೆಗೆ ಸಂಬಂಧಿತವಾಗಿದೆ. ಈ ಸಂಬಂಧ ಹೆಚ್ಚು ಬೊಜ್ಜು ಇರುವವರಿಗೆ ಪ್ರಬಲವಾಗಿರುತ್ತದೆ, ಕಿರಿಯ ಮತ್ತು ಮಹಿಳೆಯರಲ್ಲಿ ಖಿನ್ನತೆ ಇರುವುದಿಲ್ಲ. ಕಿರಿಯರಲ್ಲಿ ಆತ್ಮಹತ್ಯೆ ಪ್ರಮಾಣ ಹೆಚ್ಚಿನ ಬಿಎಂಐ(BMI೦) ಅನ್ನು ಹೊಂದಿದ್ದರೂ ಕಡಿಮೆಯಾಗುತ್ತದೆ

ಉಸಿರಾಟದ ವ್ಯವಸ್ಥೆ

[ಬದಲಾಯಿಸಿ]
ಉಸಿರಾಟದ ತೊಂದರೆ ಇರುವವರಿಗೆ ಉಸಿರಾಟಕ್ಕೆ ಸಹಾಯ ಮಾಡುವ ಯಂತ್ರ;CPAP machine commonly used in OHS

ಪ್ರತಿರೋಧಕ ನಿದ್ರೆಯಲ್ಲಿ ಉಸಿರುಕಟ್ಟುವಿಕೆ

[ಬದಲಾಯಿಸಿ]
  • ಸ್ಥೂಲಕಾಯತೆ ನಿದ್ರೆಯಲ್ಲಿ ಪ್ರತಿರೋಧಕ ಉಸಿರುಕಟ್ಟುವಿಕೆ ಅಪಾಯಕಾರಿ ಅಂಶವಾಗಿದೆ.

ಸ್ಥೂಲಕಾಯ ಹೈಪೊವೆಂಟಿಲೇಶನ್ ಸಿಂಡ್ರೋಮ್

[ಬದಲಾಯಿಸಿ]
  • ಸತತ ಗಾಳಿ ಕೊಡುವ (CPAP) ಯಂತ್ರವನ್ನು ಅತಿಸ್ಥೂಲತೆಯಲ್ಲಿ ಉಸಿರಾಟಕ್ಕೆ ಸಾಮಾನ್ಯವಾಗಿ (OHS) ಬಳಸಲಾಗುತ್ತದೆ.
  • ಸ್ಥೂಲಕಾಯ ಬೊಜ್ಜು, ಹೈಪೊವೆಂಟಿಲೇಶನ್ ಸಿಂಡ್ರೋಮ್ ಹೈಪೊವೆಂಟಿಲೇಶನ್ ಪರಿಣಾಮವಾಗಿ ಹೈಪಕ್ಷಿಯಾ (CPAP machine - hypoxia) ವನ್ನು ನಿದ್ರೆಯ ಅವಧಿಯಲ್ಲಿ ಆಮ್ಲಜನಕಕ್ಕೆ ಮತ್ತು ಹೈಪೆರ್‍ಕಾಪ್ನಿಯಾ (hypercapnia) ಸಂಯೋಜನೆಯನ್ನು ಹಗಲಿನಲ್ಲಿ ಬಳಸುವರು.

ದೀರ್ಘಕಾಲದ ಶ್ವಾಸಕೋಶ

[ಬದಲಾಯಿಸಿ]
  • ಸ್ಥೂಲಕಾಯತೆ ಉಬ್ಬಸ ಮತ್ತು COPD ಸೇರಿದಂತೆ ದೀರ್ಘಕಾಲಿಕ ಶ್ವಾಸಕೋಶ ಕಾಯಿಲೆಗಳಿಗೆ ಸಂಬಂಧಿಸಿದೆ. ಇದು ಸ್ಥೂಲಕಾಯತೆಯ ಕೆಲ ಕಾರಣಗಳಿಂದ ಪ್ರೇರಿತ. ಒಂದು ವ್ಯವಸ್ಥಿತ ಪೂರ್ವ-ಇನ್‍ಫ್ಲೇಮೇಟರಿ ಸ್ಥತಿ, ವಾಯುಮಾರ್ಗದ ಉರಿಯೂತ ಅಸ್ತಮಾಕ್ಕೆ ಕಾರಣವಾಗುತ್ತದೆ ಎಂದು ನಂಬಲಾಗಿದೆ.

ಸಾಮಾನ್ಯ ಅರಿವಳಿಕೆ ಸಮಯದಲ್ಲಿ ತೊಡಕುಗಳು

[ಬದಲಾಯಿಸಿ]

ಸ್ಥೂಲಕಾಯತೆ ಗಣನೀಯವಾಗಿ ಸಾಮಾನ್ಯ ಅರಿವಳಿಕೆಯಲ್ಲಿ ಉಸಿರಾಟದ ಕ್ರಿಯೆಯ ಶ್ವಾಸಕೋಶದ ಗಾತ್ರದಲ್ಲಿ ಕಡಿಮೆಗೊಳಿಸಿ ಅದರ ಧರಡತೆ ಕಡಿಮೆಯಾಗುವುದು. ಆಗ ಉಸಿರಾಟ ನಿರ್ವಹಣೆಗೆ ನಿರ್ದಿಷ್ಟ ಯೋಜನೆಗಳು ಅಗತ್ಯ.

ಸಂಧಿವಾತ

[ಬದಲಾಯಿಸಿ]
  • ಕೀಲುನೋವು ಮತ್ತು ಅಸ್ಥಿಚಿಕಿತ್ಸೆ;

ಪಾದ ಸೆಳೆತ (ಗೌಟ್)

[ಬದಲಾಯಿಸಿ]
  • ೨೧-೨೩ ಕ್ಕೂ ಹೆಚ್ಚಿನ ಬಿಎಂಐ (BMI)ಇರುವ ಪುರುಷರಿಗೆ ಹೋಲಿಸಿದರೆ, ೩೦-೩೫ ಹೆಚ್ಚಿನ ಬಿಎಂಐ (BMI) ಪುರುಷರು ೨.೩ ಪಟ್ಟು ಹೆಚ್ಚು ಪಾದ ಸೆಳೆತ (ಗೌಟ್), ಮತ್ತು ೩೫ ಕ್ಕಿಂತ ಹೆಚ್ಚು ಬಿಎಂಐ (BMI) ಅನ್ನು ಹೊಂದಿರುವ ಪುರುಷರು ೩.೦ ಪಟ್ಟು ಹೆಚ್ಚು ಗೌಟ್-ಪಾದಸೆಳೆತ ಹೊಂದಿರುತ್ತಾರೆವ. ತೂಕ ನಷ್ಟ ಈ ಅಪಾಯಗಳನ್ನು ತಗ್ಗಿಸುತ್ತದೆ.

ಕಳಪೆ ಚಲನಶೀಲತೆ

[ಬದಲಾಯಿಸಿ]

ಬೊಜ್ಜು ಮತ್ತು ಮಾಂಸಖಂಡಾಸ್ಥಿ ನೋವಿನ ಮತ್ತು ಅಂಗವೈಕಲ್ಯ ನಡುವೆ ಬಲವಾದ ಸಂಬಂಧವಿದೆ.

ಅಸ್ಥಿಸಂಧಿವಾತ

[ಬದಲಾಯಿಸಿ]
  • ಹೆಚ್ಚು ತೂಕ ಹೊಂದಿರುವವರಲ್ಲಿ ಸಂಧಿವಾತ ಮತ್ತು ತೂಕ-ಕೊಡುವ ಎರಡು ಸಂದಿಗಳಲ್ಲಿ (ಜಾಯಿಂಟ್ ) ನೋವುಕಂಡುಬರುತ್ತದೆ.ತೂಕ ನಷ್ಟ ಮತ್ತು ವ್ಯಾಯಾಮದಿಂದ ಸಂಧಿವಾತ ಅಪಾಯವನ್ನು ಕಡಿಮೆ ಮಾಡಲು ಸಾಧ್ಯ.

ಬೆನ್ನಿನ ನೋವು

[ಬದಲಾಯಿಸಿ]

ಬೊಜ್ಜು ವ್ಯಕ್ತಿಗಳು ತಮ್ಮನ್ನು, ಸಾಮಾನ್ಯ ತೂಕದ ಕಡಿಮೆ ಬೆನ್ನುನೋವು ಗೆಳೆಯರೊಂದಿಗೆ ಹೋಲಿಸಿದರೆ, ಅವರಿಗಿಂತ ನಾಲ್ಕು ಬಾರಿ ಹೆಚ್ಚು, ಅಥವಾ ಕನಿಷ್ಟ ಎರಡು ಬಾರಿ ಹೆಚ್ಚು ಬೆನ್ನುನೋವು ಹೊಂದಿರುವ ಸಾಧ್ಯತೆ ಇದೆ.[೧೯]

ಮೂಳೆ ಮುರಿತ

[ಬದಲಾಯಿಸಿ]
  • ಮಹಿಳೆಯರಲ್ಲಿ, ವರ್ಗ IIರ ಬೊಜ್ಜು (ಅಂದರೆ ಬಿಎಂಐ = ೩೫ರ ಮೇಲೆ) ಇರುವವರು, ಸಾಮಾನ್ಯವಾಗಿ, ಮೇಲಿನ ತೋಳು ಮೂಳೆ ಮುರಿತಗಳು ಹಾಗೂ ಆಸ್ಟಿಯೋಪೊರೆಟಿಕ್ ಮುರಿತಗಳು ಹೆಚ್ಚು ಸಂಬವಿಸುವುದು ಒಂದು ಅಪಾಯಕಾರಿ ಅಂಶವಾಗಿದೆ.

ಮೂತ್ರಪಿಂಡ ಮತ್ತು ಮೂತ್ರಜನಕಾಂಗಗಳ ಸಮಸ್ಯೆ

[ಬದಲಾಯಿಸಿ]
ಮೂತ್ರಜನಕಾಂಗ ವ್ಯವಸ್ಥೆ::Urinary system
  • ಮೂತ್ರ ನಿರೋಧರಾಹಿತ್ಯತೆ
  • ಮೂತ್ರ ಮಾಡಲು,ಅವಸರದ ಸಮಸ್ಯೆ, ಒತ್ತಡ, ಮತ್ತು ಅಸಂಯಮ (ಅನಿಯಮಿತ) ವಿಸರ್ಜನೆ ಈ ಎಲ್ಲಾ ಸಮಸ್ಯೆಗಳು ಹೆಚ್ಚಿನ ಬೊಜ್ಜು ದರ ಇರುವವರಲ್ಲಿ ಕಾಣಿಸಿಕೊಳ್ಳಬಹುದು ಮಿಶ್ರ. ಈ ಸಮಸ್ಯೆಗಳು ಸಾಮಾನ್ಯ ತೂಕದ ಜನರಲ್ಲಿ ಕಂಡುಬಂದಿಲ್ಲ. ತೂಕ ಕಳೆದುಕೊಂಡರೆ ಮೂತ್ರ ನಿರೋಧರಾಹಿತ್ಯತೆ ಇರದು.

ದೀರ್ಘಕಾಲದ ಮೂತ್ರಪಿಂಡ ಕಾಯಿಲೆ

[ಬದಲಾಯಿಸಿ]
  • ಸ್ಥೂಲಕಾಯತೆ ಮೂರು ನಾಲ್ಕು ಪಟ್ಟು ದೀರ್ಘಕಾಲದ ಮೂತ್ರಜನಕಾಂಗದ ರೋಗದ ಅಪಾಯವನ್ನು ಹೆಚ್ಚಿಸುತ್ತದೆ.

ಹೈಪೋಗೊನೆಡಿಸಮ್

[ಬದಲಾಯಿಸಿ]
  • ಪುರುಷರಲ್ಲಿ, ಬೊಜ್ಜು ಮತ್ತು ಚಯಾಪಚಯ ರೋಗಲಕ್ಷಣ ಎರಡೂ ಈಸ್ಟ್ರೊಜೆನ್ ಮತ್ತು ಅಡಿಪೊಕೈನ್ (adipokine ಹಸಿವು ಪ್ರೇರಕದ್ರವ್ಯ-ಹಾರ್ಮೊನ್) ಉತ್ಪಾದನೆ ಹೆಚ್ಚಿಸುವುದು. ಈ ತಿರುವು ಹಾರ್ಮೋನು ಮತ್ತು ಅಂಡ-ಕೋಶಕವನ್ನು ಉತ್ತೇಜಿಸುವ ಹಾರ್ಮೋನನ್ನು ಕಡಿಮೆಮಾಡುವುದು, ಅದಕ್ಕೆ ಸಂಬಂಧಪಟ್ಟ ಗೊನೆಡೋಟ್ರೋಪಿನ್-ಬಿಡುಗಡೆಯಲ್ಲಿ ಹಾರ್ಮೋನು ಕಡಿಮೆಗೊಳಿಸುತ್ತದೆ. ಪರಿಣಾಮವಾಗಿ ಟೆಸ್ಟೋಸ್ಟೆರಾನ್ ದ್ರವ ಪುರುಷಬೀಜಗಳಲ್ಲಿ (testis) ಉತ್ಪಾದನೆಯು ಕಡಿತ ಮತ್ತು ಅಡಿಪೊಕೈನ್ (adipokine) ಮಟ್ಟದಲ್ಲಿ ಮತ್ತಷ್ಟು ಏರಿಕೆ. ಈ ಕ್ರಿಯೆ ಮತ್ತಷ್ಟು ತೂಕಕ್ಕೆ ಕಾರಣವಾಗಬಹುದು.[೨೦]

ನಿಮಿರುವಿಕೆಯ ಅಪಕ್ರಿಯೆ

[ಬದಲಾಯಿಸಿ]
  • ಬೊಜ್ಜು ಪುರುಷರು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಅಥವಾ ಶಿಶ್ನದ ಅನಿಮಿರುವುಕೆಯ ವಿಫಲತೆಯ ಸಮಸ್ಯೆಯನ್ನು, (ಹಾಗೂ, ಮಧುಮೇಹ ಸಹಯೋಗದಲ್ಲಿ) ಅನುಭವಿಸುತ್ತಾರೆ, ಆದರೆ ತೂಕ ನಷ್ಟಮಾಡಿಕೊಂಡಾಗ ಅವರ ಲೈಂಗಿಕ ಕ್ರಿಯೆಯಲ್ಲಿ ಸುಧಾರಣೆಗ ಕಂಡುಬರುತ್ತದೆ.[೨೧]

ಮಕ್ಕಳಲ್ಲಿ ಸ್ಥೂಲಕಾಯ

[ಬದಲಾಯಿಸಿ]
  • ೨೭ ಜೂನ್, ೨೦೧೭;
  • ಸ್ಥೂಲಕಾಯದ ಮಕ್ಕಳ ಸಂಖ್ಯೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ ಎಂದು ಜಾಗತಿಕ ಮಟ್ಟದ ಅಧ್ಯಯನವೊಂದು ಹೇಳಿದೆ. ಚೀನಾ ಮೊದಲನೇ ಸ್ಥಾನದಲ್ಲಿದೆ. ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಕಂಡುಬರುತ್ತಿರುವುದು, ಏಷ್ಯಾದ ಎರಡು ದೊಡ್ಡ ರಾಷ್ಟ್ರಗಳ ಮುಂದಿನ ಪೀಳಿಗೆಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಅಧ್ಯಯನ ವಿವರಿಸಿದೆ.
  • ಅಧ್ಯಯನದ ಪ್ರಮುಖ ಅಂಶಗಳು
  • ವಿಶ್ವದಾದ್ಯಂತ ಸ್ಥೂಲಕಾಯ ಹೊಂದಿರುವವರಲ್ಲಿ ಮೂರನೇ ಒಂದು ಭಾಗದಷ್ಟು ಮಕ್ಕಳು ಭಾರತ ಮತ್ತು ಚೀನಾದಲ್ಲಿದ್ದಾರೆ.
  • ಕಳೆದ ೨೫ ವರ್ಷಗಳಲ್ಲಿ ೧೯೫ ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ಸ್ಥೂಲಕಾಯದ ಸಮಸ್ಯೆ ಕುರಿತ ಮಾಹಿತಿ ಈ ಅಧ್ಯಯನದಲ್ಲಿದೆ.
  • ದೇಹದ ತೂಕ ಮತ್ತು ಎತ್ತರದ ಅನುಪಾತದ (ಬಾಡಿ ಮಾಸ್‌ ಇಂಡೆಕ್ಸ್‌ – ಬಿಎಂಐ) ಪರಿಮಾಣವನ್ನು ಆಧಾರವಾಗಿಟ್ಟುಕೊಂಡು ಈ ಅಧ್ಯಯನ ಮಾಡಲಾಗಿದೆ.
  • ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ೧೯೮೦ ರಿಂದ ೨೦೧೫ ರ ಅವಧಿಯಲ್ಲಿ ಸ್ಥೂಲಕಾಯ ಹೊಂದಿರುವ ಬಾಲಕ ಮತ್ತು ಬಾಲಕಿಯರ ಸಂಖ್ಯೆ ಶೇ ೨೦ ರಷ್ಟು ಹೆಚ್ಚಿದೆ.
  • ಇದೇ ಅವಧಿಯಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಿದೆ. ಇದು ಜನರು ಅನುಸರಿಸುತ್ತಿರುವ ಜೀವನ ಶೈಲಿಯ ಪರಿಣಾಮ ಎಂದು ಅಧ್ಯಯನ ಹೇಳಿದೆ.
  • ವ್ಯಕ್ತಿ ೧೪–೧೫ ವರ್ಷ ವಯಸ್ಸಿನವನಾಗಿದ್ದಾಗ ಸ್ಥೂಲಕಾಯ ಸಮಸ್ಯೆ ಹೆಚ್ಚುತ್ತಾ ಹೋಗುತ್ತದೆ.
  • ಸದ್ಯದ ಮಟ್ಟಿಗೆ ಸ್ಥೂಲಕಾಯದ ಅಂಕಿ–ಅಂಶ ಭಾರತದಲ್ಲಿ ಹೆಚ್ಚು ಕಂಡುಬರದಿದ್ದರೂ, ಭವಿಷ್ಯದಲ್ಲಿ ಸಮಸ್ಯೆ ಎದುರಾಗಲಿದೆ. ಭಾರತದಲ್ಲಿ ಬೊಜ್ಜು ಮತ್ತು ಅಪೌಷ್ಟಿಕಾಂಶದ ಸಮಸ್ಯೆ ಇರುವುದರಿಂದ ಈ ಸಮಸ್ಯೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ.

ಅಂಕಿ ಅಂಶ

[ಬದಲಾಯಿಸಿ]
  • ೨೦೧೫ ರಲ್ಲಿ ಪ್ರಪಂಚದಲ್ಲಿ ಬೊಜ್ಜು ಹೊಂದಿದ ಮಕ್ಕಳು -೧೦.೭೭ ಕೋಟಿ
  • ೨೦೧೫ ರಲ್ಲಿ ಚೀನಾದಲ್ಲಿ ಬೊಜ್ಜು ಹೊಂದಿದ ಮಕ್ಕಳು -೧.೫೩ ಕೋಟಿ
  • ೨೦೧೫ರಲ್ಲಿ ಭಾರತದಲ್ಲಿ ಬೊಜ್ಜು ಹೊಂದಿದ ಮಕ್ಕಳು -೧.೪೪ ಕೋಟಿ

ವಯಸ್ಕರಲ್ಲಿ ಬೊಜ್ಜು

[ಬದಲಾಯಿಸಿ]
  • ವಿಶ್ವದಾದ್ಯಂತ ಬೊಜ್ಜು ಉಳ್ಳವರು :೬೩.೭ ಕೋಟಿ
  • ಅಮೇರಿಕಾ ನಂ.೧ ಸಂಖ್ಯೆ = ೭ ಕೋಟಿ ೮೪ ಜನ
  • ಚೀನಾ ನಂ.೨ :ಸಂಖ್ಯೆ = ೫ ಕೋಟಿ ೭೩ ಜನ
  • ಕೊನೆಯ ಸ್ಥಾನ ಬಾಂಗ್ಲಾದೇಶ ಮತ್ತು ವಿಯೆಟ್ನಾಂ : ಶೇಕಡಾ ೧
  • ಜೆ. ಎಸ್‌. ಠಾಕೂರ್‌ (ಅಧ್ಯಯನದಲ್ಲಿ ಪಾಲ್ಗೊಂಡ ಸಂಶೋಧಕರಲ್ಲಿ ಒಬ್ಬರು):[೨೨]

ಉಲ್ಲೇಖ

[ಬದಲಾಯಿಸಿ]
  1. ["Robert Earl Hughes, became heaviest known human... June 4 in History at BrainyHistory.com". Retrieved 11 March 2017.]
  2. Causes Risk Factors Diagnosis Complications Treatment Prevention;Morbid Obesity
  3. The world's heaviest man
  4. World’s heaviest man, Juan Pedro Franco, loses 170 kg in 3 months ahead of surgery;: Mar 29, 2017
  5. ದಿ.30/6/2016:prajavani:ಬೊಜ್ಜು-ಮೂರು-ಪೀಳಿಗೆಗೆ-ಮಾರಕ[೧]
  6. ಶೇ 20ರಷ್ಟು ಮಕ್ಕಳಲ್ಲಿ ಬೊಜ್ಜು ಸಮಸ್ಯೆ[೨]
  7. WHO 2000 p.9
  8. Health Risks Linked to Obesity
  9. [Yusuf S, Hawken S, Ounpuu S, et al. (2004). "Effect of potentially modifiable risk factors associated with myocardial infarction in 52 countries (the INTERHEART study): case-control study".]
  10. [Tsigos C, Hainer V, Basdevant A, et al. (2008). "Management of obesity in adults: European clinical practice guidelines". Obes Facts. 1 (2): 106–16. doi:]
  11. [Haslam DW, James WP (October 2005). "Obesity". Lancet. 366 (9492): 1197–209. doi:]
  12. (ಮೇಲಿನದು)
  13. ಅದೇ
  14. Yosipovitch G, DeVore A, Dawn A (June 2007). "Obesity and the skin: skin physiology and skin manifestations of obesity". J. Am. Acad. Dermatol. 56 (6):
  15. Gallstones;What are gallstones?
  16. Acid Reflux (GER & GERD) in Adults
  17. ೧೭.೦ ೧೭.೧ Arendas K, Qiu Q, Gruslin A (June 2008). "Obesity in pregnancy: pre-conceptional to postpartum consequences". J Obstet Gynaecol Can. 30 (6): 477–88.
  18. Calle EE, Rodriguez C, Walker-Thurmond K, Thun MJ (April 2003)
  19. he stigma of obesity in the general public and its implications for public health - a systematic review;Journal ListBMC Public Healthv.11; 2011PMC3175190
  20. Corona G, Bianchini S, Sforza A, Vignozzi L, Maggi M (October 2015). "Hypogonadism as a possible link between metabolic diseases and erectile dysfunction in aging men". Hormones (Athens). 14 (4): 569–78. doi
  21. Erectile dysfunction and central obesity: an Italian perspective
  22. ಜಾಗತಿಕ ಮಟ್ಟದ ಅಧ್ಯಯಸ್ಥೂಲಕಾಯದ ಮಕ್ಕಳು: ಭಾರತಕ್ಕೆ ಎರಡನೇ ಸ್ಥಾನ;ಏಜೆನ್ಸಿಸ್‌;27 Jun, 2017
"https://kn.wikipedia.org/w/index.php?title=ಬೊಜ್ಜು&oldid=1187062" ಇಂದ ಪಡೆಯಲ್ಪಟ್ಟಿದೆ