ವಿಷಯಕ್ಕೆ ಹೋಗು

ಬೊಗಳಾಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೊಗಳಾಟವು ಅತ್ಯಂತ ಸಾಮಾನ್ಯವಾಗಿ ನಾಯಿಗಳು ಮಾಡುವ ಶಬ್ದ.

ನಾಯಿಗಳ ಬೊಗಳಾಟವು ತೋಳಗಳ ಬೊಗಳಾಟದಿಂದ ಭಿನ್ನವಾಗಿದೆ. ತೋಳಗಳ ಬೊಗಳಾಟವು ತೋಳಗಳ ಎಲ್ಲ ಧ್ವನಿಗಳ ಕೇವಲ ಶೇಕಡ ೨.೩ ರಷ್ಟನ್ನು ಪ್ರತಿನಿಧಿಸುತ್ತದೆ[] ಮತ್ತು ಇವನ್ನು ಅಪರೂಪದ ಘಟನೆಗಳೆಂದು ವರ್ಣಿಸಲಾಗುತ್ತದೆ. ಷಾಸ್‍ಬರ್ಗರ್ ಪ್ರಕಾರ, ತೋಳಗಳು ಕೇವಲ ಎಚ್ಚರಿಕೆಯಾಗಿ, ರಕ್ಷಣೆಗಾಗಿ, ಮತ್ತು ಪ್ರತಿಭಟನೆಗಾಗಿ ಬೊಗಳುತ್ತವೆ. ತದ್ವಿರುದ್ಧವಾಗಿ, ನಾಯಿಗಳು ವ್ಯಾಪಕ ಶ್ರೇಣಿಯ ಸಾಮಾಜಿಕ ಪರಿಸ್ಥಿತಿಗಳಲ್ಲಿ ಬೊಗಳುತ್ತವೆ. ನಾಯಿಗಳಲ್ಲಿನ ಶಬ್ದಸಂಬಂಧಿ ಸಂವಹನವು ಅತಿವೃದ್ಧಿ ಗುಣವುಳ್ಳದ್ದು ಎಂದು ವಿವರಿಸಲಾಗಿದೆ.[] ಹೆಚ್ಚುವರಿಯಾಗಿ, ತೋಳಗಳ ಬೊಗಳಾಟ ಲಘು ಹಾಗೂ ಪ್ರತ್ಯೇಕವಾಗಿರುವ ಪ್ರವೃತ್ತಿ ಹೊಂದಿರುತ್ತದೆ. ಆದರೆ, ವಯಸ್ಕ ನಾಯಿಗಳು ದೀರ್ಘ, ಲಯಬದ್ಧ ವೃತ್ತಗಳಲ್ಲಿ ಬೊಗಳುತ್ತವೆ. ನಾಯಿಗಳು ಗಂಟೆಗಟ್ಟಲೆ ಬೊಗಳುವುದು ತಿಳಿದುಬಂದಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. Schassburger, R.M. (1987). "Wolf vocalization: An integrated model of structure, motivation, and ontogeny". In H. Frank (ed.). Man and Wolf. Dordrecht, the Netherlands: Dr. W. Junk.
  2. Fedderson-Peterson, D.U. (2000). "Vocalization of European wolves (Canus lupus lupus L.) and various dog breeds (Canus lupus f., fam.)". Arch. Tierz. 4. Kiel, Germany: Institut für Haustierkunde, Christian-Albrechts-University: 387–397.
  3. Coppinger, R.; M. Feinstein (1991). "'Hark! Hark! The dogs do bark...' and bark and hark". Smithsonian. 21: 119–128.


"https://kn.wikipedia.org/w/index.php?title=ಬೊಗಳಾಟ&oldid=915389" ಇಂದ ಪಡೆಯಲ್ಪಟ್ಟಿದೆ