ಬೈಜಿಕ ಸಂಲಯನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೈಜಿಕ ಸಂಲಯನ

ಬೈಜಿಕ ಭೌತಶಾಸ್ತ್ರದ[೧] ಲ್ಲಿ ಬೈಜಿಕ ಸಂಲಯನವು ಬೈಜಿಕ ಪ್ರಕ್ರಿಯೆಯಲ್ಲಿ ಎರಡಕ್ಕಿಂತ ಹೆಚ್ಚು ಪರಮಾಣು ಬೀಜಗಳು ಅತೀ ಸಮೀಪಕ್ಕೆ ಬರುತ್ತವೆ ಮತ್ತು ಒಂದಕ್ಕೊಂದು ಶೀಘ್ರ ಜವದಲ್ಲಿ ಅಪ್ಪಳಿಸುತ್ತವೆ ಹಾಗೂ ಒಂದು ಹೊಸ ಪರಮಾಣು ಬೀಜವನ್ನು ಸೃಷ್ಠಿಸುತ್ತದೆ. ಈ ಪ್ರಕ್ರಿಯೆಯಲ್ಲಿ ದ್ರವ್ಯವು ಸಂರಕ್ಷಿಸಲ್ಪಡದೇ ಸ್ವಲ್ಪ ಪ್ರಮಾಣದ ದ್ರವ್ಯವು ಬೆಳಕಟ್ಟು (ಶಕ್ತಿ) ಆಗಿ ಪರಿವರ್ತನೆಯಾಗುತ್ತದೆ.ಸಂಲಯನ ಪ್ರಕ್ರಿಯೆಯು ಸಕ್ರೀಯ ಅಥವಾ 'ಪ್ರಮುಖ ಶ್ರೇಣಿ ' ನಕ್ಷತ್ರಗಳಿಗೆ ಸಾಮರ್ಥ್ಯವನ್ನು ನೀಡುತ್ತದೆ. ಕಬ್ಬಿಣಕ್ಕಿಂತ ಕಡಿಮೆ ದ್ರವ್ಯರಾಶಿ ಹೊಂದಿರುವ ಎರಡು ಬೀಜಗಳ ಸಂಲಯನವು ಸಾಮಾನ್ಯವಾಗಿ ಶಕ್ತಿಯನ್ನು ಬಿಡುಗಡೆಗೊಳಿಸುತ್ತದೆ. ಆದರೆ ಕಬ್ಬಿಣಕ್ಕಿಂತ ಹೆಚ್ಚು ದ್ರವ್ಯರಾಶಿ ಹೊಂದಿರುವ ಬೀಜಗಳ ಸಂಲಯನವು ಶಕ್ತಿಯನ್ನು ಹೀರಿಕೊಳ್ಳುತ್ತದೆ. ಬೈಜಿಕ ವಿಧಳನ ಕ್ರಿಯೆಯಲ್ಲಿ ಈ ಪ್ರಕ್ರಿಯೆಯು ತದ್ವಿರುದ್ಧವಾಗಿರುತ್ತದೆ.ಅಂದರೆ ಸಂಲಯನವು ಸಾಮಾನ್ಯವಾಗಿ ಹಗುರ ಧಾತುಗಳಲ್ಲಿ ಮಾತ್ರ ಜರುಗುತ್ತದೆ.ಮತ್ತು ಅದರಂತಯೇ ವಿಧಳನ ಕ್ರಿಯೆ ಯು ಭಾರ ಧಾತುಗಳಲ್ಲಿ ಮಾತ್ರ ಜರುಗುತ್ತದೆ.ಕೆಲವೊಂದು ಖಗೋಳಭೌತಶಾಸ್ತ್ರೀಯ ಘಟನೆಗಳಲ್ಲಿ ಕಡಿಮೆ ಅವಧಿಯ ಭಾರ ಧಾತುಗಳ ಬೈಜಿಕ ಸಮ್ಮಿಳನ ಕ್ರಿಯೆಯು ಜರುಗುತ್ತದೆ.ಈ ಪ್ರಕ್ರಿಯೆಯು ಬೀಜಸಂಶ್ಲೇಷಣೆ ಕ್ರಿಯೆಗೆ ಕಾರಣವಾಗಿ ಅತಿ ಭಾರವಾದ ಧಾತುಗಳ ಸೃಷ್ಠಿಗೆ -ಅಂದರೆ ಮಹಾನವ್ಯ[೨] ದ ಘಟನೆಗೆ ಕಾರಣವಾಗುತ್ತದೆ.

೧೯೨೯ ರಲ್ಲಿ ರಾಬರ್ಟ ಅಟಕಿನ್‍ಸನ,ಮತ್ತು ಪ್ರಿಟ್ಜ ಹೌಟರ್‍ಮ್ಯಾನ್ಸರವರು ಹಗುರ ಧಾತುಗಳ ದ್ರವ್ಯರಾಶಿಗಳನ್ನು ಅಳತೆ ಮಾಡುವುದರೊಂದಿಗೆ ಸಣ್ಣ ಬೀಜಗಳ ಸಂಲಯನದಿಂದ ಶಕ್ತಿಯನ್ನು ಬಿಡುಗಡೆಗೊಳಿಸಬಹುದೆಂದು ತಿಳಿಸಿದ್ದಾರೆ.ಇದು ಸಾಧ್ಯವಾದ್ದು ಫ್ರೆಡರಿಕ್ ಹೂಂಡರವರ ಕ್ವಾಂಟಮ್ ಟನೆಲಿಂಗ್[೩] ಎಂಬ ಆವಿಷ್ಕಾರದಿಂದ.ಅರ್ನೆಸ್ಟ ರುದರ್ ಪೋರ್ಢರವರ ಬೈಜಿಕ ರೂಪಬದಲಾವಣೆ ಪ್ರಯೋಗಗಳ ಆಧಾರದ ಮೇಲೆ ಹಲವು ವಷ‍ಗಳ ಮೊದಲೇ ೧೯೩೨ ಮಾರ್ಕ ಓಲಿಫಂಟ್‍ರವರು ಪ್ರಯೋಗ ಶಾಲೆಯಲ್ಲಿ ಜಲಜನಕದ ಸಮಸ್ಥಾನಿಗಳ ಸಮ್ಮಿಲನ ಕ್ರಿಯೆಯನ್ನು ಸಾ‍ಧಿಸಿದರು.ಉಳಿದ ದಶಕದ ನಂತರದಲ್ಲಿ ಹ್ಯಾನ್ಸ ಬೆಥೆರವರು ನಕ್ಷತ್ರಗಳಲ್ಲಿ ಬೈಜಿಕ ಸಂಲಯನ ಕ್ರಿಯೆಯ ಮುಖ್ಯ ಸುತ್ತು(ಆವರ್ತ)ಗಳ ಹಂತಗಳ ಅಧ್ಯಯನ ನಡೆಸಿದ್ದಾರೆ.೧೯೪೦ರ ಪೂರ್ವದಲ್ಲಿ ಮ್ಯಾನ್ ಹ್ಯಾಟನ್ ಯೋಜನೆ ಯನ್ವಯ ಸೈನ್ಯದ ಉದ್ದೇಶಕ್ಕಾಗಿ ಸಂಲಯನದ ಬಗ್ಗೆ ಸಂಶೋಧನೆಗಳು ಆರಂಭಗೊಂಡವು.ಹಸಿರುಮನೆ ಘಟಕದಡಿಯಲ್ಲಿ ನಡೆದ ಬೈಜಿಕ ಪರೀಕ್ಷಣ ಮೂಲಕ ೧೯೫೧ ರಲ್ಲಿ ಸಂಲಯನದ ಬಗೆಗಿನ ಅಧ್ಯಯನವನ್ನು ಪೂರ್ಣಗೊಳಿಸಲಾಯಿತು.ಬೈಜಿಕ ಸಂಲಯನವನ್ನು ಆಗಾಧ ಪ್ರಮಾಣದಲ್ಲಿ ೧೯೫೨ ನವ್ಹೆಂಬರ್ ೧ ರಲ್ಲಿ ಪ್ರಥಮ ಸ್ಪೋಟದೊಂದಿಗೆ ಐವಿ ಮೈಕ್ ಜಲಜನಕ ಬಾಂಬ್ ಪರೀಕ್ಷಣ ನಡೆಸಲಾಯಿತು.

ಬೈಜಿಕ ಸ್ಪೋಟ ಪರೀಕ್ಷಣ ದೃಷ್ಯಾವಳಿ

,

ಬೈಜಿಕ ಸ್ಪೋಟ ಪರೀಕ್ಷಣ

.

೧೯೫೦ರ ಮೊದಲು ನಿಯಂತ್ರಿತ ಉಷ್ಣಬೈಜಿಕ ಸಂಲಯನ ಪ್ರಕ್ರಿಯೆಯನ್ನು ನಾಗರಿಕ ಉದ್ದೇಶಗಳಿಗಾಗಿ ಬಳಸುವಲ್ಲಿ ಸಂಶೊಧನೆಗಳು ನಡೆದಿರುತ್ತವೆ. ಹಾಗೂ ಪ್ರಸ್ತುತ ದಿನಗಳಲ್ಲಿಯೂ ಸಹ ಸಂಶೋಧನೆಗಳು ಪ್ರಗತಿಯಲ್ಲಿವೆ.

ಪ್ರಕ್ರಿಯೆ[ಬದಲಾಯಿಸಿ]

ಸಂಲಯನದಲ್ಲಿ ಬಿಡುಗಡೆಯಾಗುವ ಶಕ್ತಿಯು ಎರಡು ಹಗುರವಾದ ಧಾತುಗಳ ನಡುವಿನ ವಿರುದ್ಧವಾದ ವಿಕರ್ಷಣಾ ಬಲಗಳಿಂದಾಗುತ್ತದೆ, ಬೈಜಿಕ ಬಲವು ಪರಮಾಣುಗಳಲ್ಲಿನ ಪ್ರೋಟಾನ್ ಮತ್ತು ನ್ಯೂಟ್ರಾನ್‍ಗಳನ್ನು ಸೇರಿಸುವದಾಗಿದೆ ಮತ್ತು ಕೋಲಂಬನ ಬಲವು ಪ್ರೋಟಾನ್‍ಗಳು ಒಂದಕ್ಕೊಂದು ವಿಕರ್ಷಿ‍ಸುವಂತೆ ಮಾಡುತ್ತದೆ.ಪ್ರೋಟಾನ್‍ಗಳು ಧನ ವಿದ್ಯುದಂಶವನ್ನು ಹೊಂದಿವೆ ಮತ್ತು ಅವು ಪರಸ್ಪರ ವಿಕರ್ಷಿಸಿದಾಗ್ಯೂ ಕೂಡಿಸಿ ಹಿಡಿದಲ್ಪಟ್ಟಿವೆ.

ಉಲ್ಲೇಖಗಳು[ಬದಲಾಯಿಸಿ]

  1. http://phys.colorado.edu/research/nuclear-physics
  2. https://www.nasa.gov/audience/forstudents/5-8/features/nasa-knows/what-is-a-supernova.html
  3. "ಆರ್ಕೈವ್ ನಕಲು". Archived from the original on 2015-09-09. Retrieved 2015-08-19.