ಬೈಜಿಕ ಪೂರೈಕೆದಾರರ ಗುಂಪು
ಬೈಜಿಕ ಪೂರೈಕೆದಾರರ ಗುಂಪು (ಪರಮಾಣು ಪೂರೈಕೆದಾರರ ಗುಂಪು - ಎನ್ಎಸ್‍ಜಿ) ಬೈಜಿಕ ಅಸ್ತ್ರಗಳನ್ನು ತಯಾರಿಸಲು ಬಳಸಬಹುದಾದ ವಸ್ತುಗಳು, ಉಪಕರಣ ಮತ್ತು ತಂತ್ರಜ್ಞಾನದ ರಫ್ತನ್ನು ನಿಯಂತ್ರಿಸಿ ಬೈಜಿಕ ಪ್ರಸರಣವನ್ನು ತಡೆಗಟ್ಟಲು ಬಯಸುವ ಬೈಜಿಕ ಪೂರೈಕೆದಾರ ದೇಶಗಳ ಒಂದು ಗುಂಪು.
ಮೇ ೧೯೭೪ರಲ್ಲಿ ಭಾರತದ ಬೈಜಿಕ ಪರೀಕ್ಷೆಗೆ ಪ್ರತಿಕ್ರಿಯೆಯಾಗಿ ಎನ್ಎಸ್‍ಜಿ ಸ್ಥಾಪನೆಗೊಂಡಿತು[೧] ಮತ್ತು ಮೊದಲು ನವೆಂಬರ್ ೧೯೭೫ರಲ್ಲಿ ಭೇಟಿಮಾಡಿತು. ಕೆಲವು ಅಸ್ತ್ರೇತರ ನಿರ್ದಿಷ್ಟ ಬೈಜಿಕ ತಂತ್ರಜ್ಞಾನವನ್ನು ಅಸ್ತ್ರಗಳ ಅಭಿವೃದ್ಧಿಗೆ ಸರಾಗವಾಗಿ ಪರಿವರ್ತಿಸಬಹುದು ಎಂದು ಆ ಪರೀಕ್ಷೆ ತೋರಿಸಿಕೊಟ್ಟಿತು. ಈಗಾಗಲೇ ಬೈಜಿಕ ಅಪ್ರಸರಣ ಒಪ್ಪಂದದ (ಎನ್‍ಪಿಟಿ) ಸಹಿದಾರ ರಾಷ್ಟ್ರಗಳು ಬೈಜಿಕ ಉಪಕರಣ, ಸಾಮಗ್ರಿಗಳು ಅಥವಾ ತಂತ್ರಜ್ಞಾನದ ರಫ್ತನ್ನು ಇನ್ನಷ್ಟು ಸೀಮಿತಿಗೊಳಿಸುವ ಅಗತ್ಯ ಕಂಡವು. ಎನ್‍ಪಿಟಿ ಯಲ್ಲಿಲ್ಲದ ಮತ್ತು ಜ಼್ಯಾಂಗರ್ ಸಮಿತಿಯಲ್ಲಿಲ್ಲದ ರಾಷ್ಟ್ರಗಳನ್ನು, ಆಗ ನಿರ್ದಿಷ್ಟವಾಗಿ ಫ಼್ರಾನ್ಸ್ ಅನ್ನು, ಒಳ ತರುವುದು ಮತ್ತೊಂದು ಪ್ರಯೋಜನವಾಗಿತ್ತು.
೧೯೭೫ರಿಂದ ೧೯೭೮ರ ವರೆಗೆ ಲಂಡನ್‍ನಲ್ಲಿ ಭೇಟಿಗಳ ಸರಣಿ ರಫ್ತಿಗಾಗಿ ಮಾರ್ಗದರ್ಶನಗಳ ಒಪ್ಪಂದಗಳಲ್ಲಿ ಪರಿಣಮಿಸಿತು. ಕೆಲವು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ರಕ್ಷಣೋಪಾಯಗಳನ್ನು ಒಪ್ಪಿಕೊಂಡರೆ ಮಾತ್ರ ಅಥವಾ ಸುರಕ್ಷತೆಗೆ ಸಂಬಂಧಿಸಿದ ಅಸಾಧಾರಣ ಸಂದರ್ಭಗಳು ಇದ್ದರೆ ಮಾತ್ರ ಪಟ್ಟಿಯಲ್ಲಿದ್ದ ವಸ್ತುಗಳನ್ನು ಅಬೈಜಿಕ ದೇಶಗಳಿಗೆ ರಫ್ತು ಮಾಡಬಹುದಾಗಿತ್ತು.
ಈ ಭೇಟಿಗಳು ಲಂಡನ್‍ನಲ್ಲಿ ನಡೆದ ಕಾರಣ ಈ ಗುಂಪಿಗೆ "ಲಂಡನ್ ಕ್ಲಬ್" ಎಂಬ ಹೆಸರು ಬಂದಿತು.
ಎನ್ಎಸ್‍ಜಿ ೧೯೯೧ ರ ವರೆಗೆ ಮತ್ತೆ ಭೇಟಿಯಾಗಲಿಲ್ಲ. ಪ್ರಚೋದಕ ಪಟ್ಟಿ ೧೯೯೧ರ ವರೆಗೆ ಬದಲಾಗದೆ ಉಳಿಯಿತು, ಆದರೆ ಜ಼್ಯಾಂಗರ್ ಪಟ್ಟಿ ನಿಯತವಾಗಿ ನವೀಕರಿಸಲ್ಪಡುತ್ತಿತ್ತು.
ಚೀನಾ ೨೦೦೪ ರಲ್ಲಿ ಈ ಗುಂಪಿನ ಸದಸ್ಯವಾಯಿತು. ೨೦೧೬ ರ ವೇಳೆಗೆ ಈ ಗುಂಪಿನಲ್ಲಿ ೪೮ ಸದಸ್ಯರುಗಳಿದ್ದವು. ೨೦೧೦ರಿಂದ ಭಾರತ ಈ ಗುಂಪಿನ ಸದಸ್ಯನಾಗಲು ಪ್ರಯತ್ನಿಸುತ್ತಿದೆ. ಅಮೇರಿಕ, ಬ್ರಿಟನ್, ಫ಼್ರಾನ್ಸ್, ರಷ್ಯಾ, ಸ್ವಿಟ್ಸರ್ಲಂಡ್, ಜಪಾನ್, ಮುಂತಾದ ರಾಷ್ಟ್ರಗಳು ಈ ಗುಂಪಿನಲ್ಲಿ ಭಾರತದ ಭಾಗವಹಿಕೆಯನ್ನು ಬೆಂಬಲಿಸಿವೆ. ಆದರೆ ಚೀನಾ ಭಾರತದ ಪ್ರವೇಶವನ್ನು ವಿರೋಧಿಸುತ್ತಿದೆ. ಈ ಗುಂಪಿಗೆ ಪಾಕಿಸ್ತಾನದ ಪ್ರವೇಶಕ್ಕೆ ಚೀನಾದ ಬೆಂಬಲವಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ User, Super. "Nuclear Suppliers Group - History". www.nuclearsuppliersgroup.org. Archived from the original on 26 ಜೂನ್ 2016. Retrieved 28 June 2016.
{{cite web}}
:|last=
has generic name (help)