ವಿಷಯಕ್ಕೆ ಹೋಗು

ಬೇಗಮ್ ಹಜರತ್ ಮಹಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೇಗಂ ಹಜ್ರತ್ ಮಹಲ್
ಜನನ೧೮೨೦
ಫೈಜ಼ಾಬಾದ್, ಅವಧ್, ಭಾರತ
ಮರಣ೧೮೭೯
ಕಟ್ಮಂಡು, ನೇಪಾಳ
ವೃತ್ತಿಅವಧ್ ರಾಜ್ಯದ ರಾಣಿ
ಸಂಗಾತಿವಜಿದ್ ಅಲಿ ಶಾಹ್
ಮಕ್ಕಳುಬಿರ್ಜಿಸ್ ಖಾದಿರ್

ಬೇಗಂ ಹಜರತ್ ಮಹಲ್ (ಉರ್ದು:. بیگم حضرت محل ),ಅವಧ್ ನವಾಬ್ ವಜಿದ್ ಅಲಿ ಷಾನ ಮೊದಲ ಪತ್ನಿ [].ಇವರನ್ನು ಅವಧ್ ರಾಜ್ಯದ ಬೀಗಮ್ ಎಂದು ಕರೆಯಲಾಗುತಿತ್ತು. ಇವರು ೧೮೫೭ರ ದಂಗೆಯ ಸಮಯದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ವಿರುದ್ಧ ಹೋರಾಡಿದವರು. ಪತಿ ಕಲ್ಕತ್ತಾಗೆ ಗಡೀಪಾರಾದ ನಂತರ, ಇವರು ಅವಧ್ ರಾಜ್ಯದಲ್ಲಿ ವ್ಯವಹಾರಗಳನ್ನು ವಹಿಸಿಕೊಂಡು ಲಕ್ನೌ ರಾಜ್ಯವನ್ನು ವಶಪಡಿಸಿಕೊಂಡರು.ಇವರ ಮಗನಾದ ಬಿರ್ಜಿಸ್ ಖಾದಿರ್ನನ್ನು ಅವಧ್ ರಾಜ್ಯದ ವಾಲಿ(ರಾಜ)ಯಾಗಲು ವ್ಯವಸ್ಥೆ ಮಾಡಿದರು, ಆದರೆ ಅವನು ಸ್ವಲ್ಪಾಳ್ವಿಕೆಯ ನಂತರ ರಾಜ್ಯವನ್ನು ಬಿತ್ತುಕೊಡಬೇಕಾಯಿತು. ಅಂತಿಮವಾಗಿ ನೇಪಾಳಿನಲ್ಲಿ ಆಶ್ರಯವನ್ನು ಕಂಡು ೧೮೭೯ರಲ್ಲಿ ನಿಧನರಾದರು.

ಚರಿತ್ರೆ

[ಬದಲಾಯಿಸಿ]

ಮಹಲ್ ನ ಮೊದಲ ಹೆಸರು ಮಹಮ್ಮದಿ ಖಾನಮ್ ಎಂದಿಡಲಾಗಿತ್ತು.ಇವರು ಫೈಜಾಬಾದನಲ್ಲಿ ಜನಿಸಿದರು[]. ಇವರ ತಂದೆ-ತಾಯಿ ಇವರನ್ನು ರಾಜರ ಬಂಟರಿಗೆ ಮಾರಿದರು.ಅವರು ಇವರನ್ನು ಅವಧ್ ರಾಜನಾದ ವಜಿದ್ ಅಲಿ ಶಾಹ್ಗೆ ಕೊಟ್ಟರು.[4] ಇವರಿಗೆ ರಾಜನ ಹಾಗು ಇವರ ಮಗ ಬಿರ್ಜಿಸ್ನ ಜನನದ ನಂತರ ಹಜ್ರತ್ ಮಹಲ್ ಎಂಬ ನಾಮ ನೀಡಲಾಯಿತು.[]

ಬ್ರಿಟಿಷರು ೧೮೫೬ರಲ್ಲಿ ಅವಧ್ ರಾಜ್ಯವನ್ನು ವಶಪಡಿಸಿಕೊಂಡು ರಾಜನನ್ನು ಕಲ್ಕತ್ತಾಗೆ ಗಡೀಪಾರು ಮಾಡಿದರು. ಪತಿ ಕಲ್ಕತ್ತಾಗೆ ಗಡೀಪಾರಾದ ನಂತರ ಇವರು ನವಾಬಿನ ಜತೆ ವಿಚ್ಛೇದನಕ್ಕೊಳಗಾಗಿದ್ದರೂ ಕೂಡ, ಅವಧ್ ರಾಜ್ಯದ ವ್ಯವಹಾರಗಳನ್ನು ನೋಡತೊಡಗಿದರು.[]

ಉಲ್ಲೇಖಗಳು

[ಬದಲಾಯಿಸಿ]
  1. ಸಾವುಲ್ ಡೇವಿಡ್ ೨೦೦೨ರಲ್ಲಿ ಬರೆದಿರುವ ಇಂಡಿಯನ್ ಮ್ಯೂಟಿನಿ ಪುಸ್ತಕ, ಪುಟ ೧೮೫
  2. http://www.bookrags.com/Begum_Hazrat_Mahal/
  3. ಕ್ರಿಸ್ಟೊಫರ್ ಹಿಬ್ಬರ್ಟ್ ೧೯೮೦ರಲ್ಲಿ ಬರೆದಿರುವ ದಿ ಗ್ರೇಟ್ ಮ್ಯೂಟಿನಿ ಪುಸ್ತಕ, ಪುಟ ೩೭೧
  4. http://www.mapsofindia.com/who-is-who/history/begum-hazrat-mahal.html