ಬೇಕಲ ಕೋಟೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಬೇಕಲ ಕೋಟೆ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕಡಲ ತೀರದಲ್ಲಿದೆ. ಇದು ಒಂದು ಪ್ರಮುಖ ಪ್ರವಾಸಿ ಸ್ಥಳವಾಗಿದೆ.

ವಿವರ[ಬದಲಾಯಿಸಿ]

ವಿಸ್ತೀರ್ಣದಲ್ಲಿ ಸುಮಾರು ೪೦ ಎಕರೆಗಳಷ್ಟು ಇದ್ದು ವೀಕ್ಷಣಾ ಗೋಪುರ, ಪಿರಂಗಿಗಳು ಮತ್ತು ರಕ್ಷಣೆಗಾಗಿ ಗೋಡೆಯಲ್ಲಿ ಕಿಂಡಿಗಳನ್ನು ಒಳಗೊಂಡಿದೆ. ಇದು ಕೇರಳದಲ್ಲಿರುವ ಅತಿ ದೊಡ್ಡದಾದ ಕೋಟೆ. ಇದರಲ್ಲಿ ಅರಮನೆ ಇದ್ದ ಕುರುಹು ಏನು ಇಲ್ಲ. ಇದನ್ನು ಕೇವಲ ರಕ್ಷಣೆಗಾಗಿ ಮಾತ್ರ ನಿರ್ಮಿಸಲಾಗಿದೆ. ಕೋಟೆಯ ಮುಖ್ಯ ದ್ವಾರದಲ್ಲಿ ಮುಖ್ಯ ಪ್ರಾಣ (ಹನುಮಾನ್) ದೇವಾಲಯ ಮತ್ತು ಮಸೀದಿಗಳಿವೆ. ಇದು ಸಮುದ್ರ ತೀರದಲ್ಲಿದ್ದು ಕೊಟೆಯ ಒಳಗಿನಿಂದ ಸಮುದ್ರಕ್ಕೆ ಹೋಗಲು ಸುರಂಗ ಮಾರ್ಗವಿದೆ.

ಸಂಕ್ಷಿಪ್ತ ಚರಿತ್ರೆ[ಬದಲಾಯಿಸಿ]

ಇದು ಸುಮಾರು ೧೫ ನೇ ಶತಮಾನದಲ್ಲಿ ನಿರ್ಮಾಣವಾದ ಕೋಟೆ. ಸ್ಥಳೀಯ ಆಡಳಿತಗಾರ ಹಿರಿಯ ವೆಂಕಟಪ್ಪ ನಾಯಕ ಎಂಬುವವರು ಇದನ್ನು ನಿರ್ಮಿಸಲು ಪ್ರಾರಂಭಿಸಿದರು. ನಂತರ ಇದನ್ನು ಶಿವಪ್ಪ ನಾಯಕ ಎಂಬುವವರು ಪೂರ್ಣಗೊಳಿಸಿದರು. ನಂತರ ಇದು ಹೈದರಾಲಿಯ ಅಧೀನಕ್ಕೆ ಒಳಪಟ್ಟಿತು. ಮುಂದೆ ಟಿಪ್ಪು ಇದನ್ನು ತನ್ನ ಮುಖ್ಯ ಸೇನಾ ಕೆಂದ್ರವನ್ನಗಿ ಮಾಡಿಕೊಂಡನು. ೧೭೯೯ ರಲ್ಲಿ ಬ್ರಿಟಿಶರೊಂದಿಗಿನ ಯುದ್ದದಲ್ಲಿ ಟಿಪ್ಪು ಮರಣದ ನಂತರ ಈಸ್ಟ್ ಇಂಡಿಯಾ ಕಂಪೆನಿ ಈ ಕೋಟೆಯನ್ನು ವಶಪಡಿಸಿಕೊಂಡಿತು.

ಬೇಕಲ ಕೋಟೆ-೧
ಬೇಕಲ ಕೋಟೆ-೨
ಬೇಕಲ ಕೋಟೆ-೩
"https://kn.wikipedia.org/w/index.php?title=ಬೇಕಲ_ಕೋಟೆ&oldid=616169" ಇಂದ ಪಡೆಯಲ್ಪಟ್ಟಿದೆ