ಬೇಕಲ ಕೋಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Bekal Fort
ಸ್ಥಳPallikere, Kerala, India
Coordinates12°22′00″N 75°03′00″E / 12.3667°N 75.05°E / 12.3667; 75.05
ನಿರ್ಮಾಣಶಿವಪ್ಪ ನಾಯಕ
ನಮೂನೆಸಾಂಸ್ಕೃತಿಕ
State Party ಭಾರತ
ಬೇಕಲ ಕೋಟೆ is located in Kerala
ಬೇಕಲ ಕೋಟೆ
Location in Kerala, India

ಬೇಕಲ ಕೋಟೆ (ബേക്കല്‍ കോട്ട) ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕಡಲ ತೀರದಲ್ಲಿದೆ. ಇದು ಒಂದು ಪ್ರಮುಖ ಪ್ರವಾಸಿ ಸ್ಥಳವಾಗಿದೆ.

ವಿವರ[ಬದಲಾಯಿಸಿ]

ವಿಸ್ತೀರ್ಣದಲ್ಲಿ ಸುಮಾರು ೪೦ ಎಕರೆಗಳಷ್ಟು ಇದ್ದು ವೀಕ್ಷಣಾ ಗೋಪುರ, ಪಿರಂಗಿಗಳು ಮತ್ತು ರಕ್ಷಣೆಗಾಗಿ ಗೋಡೆಯಲ್ಲಿ ಕಿಂಡಿಗಳನ್ನು ಒಳಗೊಂಡಿದೆ. ಇದು ಕೇರಳದಲ್ಲಿರುವ ಅತಿ ದೊಡ್ಡದಾದ ಕೋಟೆ. ಇದರಲ್ಲಿ ಅರಮನೆ ಇದ್ದ ಕುರುಹು ಏನು ಇಲ್ಲ. ಇದನ್ನು ಕೇವಲ ರಕ್ಷಣೆಗಾಗಿ ಮಾತ್ರ ನಿರ್ಮಿಸಲಾಗಿದೆ. ಕೋಟೆಯ ಮುಖ್ಯ ದ್ವಾರದಲ್ಲಿ ಮುಖ್ಯ ಪ್ರಾಣ (ಹನುಮಾನ್) ದೇವಾಲಯ ಮತ್ತು ಮಸೀದಿಗಳಿವೆ. ಇದು ಸಮುದ್ರ ತೀರದಲ್ಲಿದ್ದು ಕೊಟೆಯ ಒಳಗಿನಿಂದ ಸಮುದ್ರಕ್ಕೆ ಹೋಗಲು ಸುರಂಗ ಮಾರ್ಗವಿದೆ.

ಬೇಕಲ್ ಅಂತರಾಷ್ಟ್ರೀಯ ಬೀಚ್ ಫೆಸ್ಟಿವಲ್

ಬೇಕಲದಲ್ಲಿ ಪ್ರತಿವರ್ಷ ಡಿಸೆಂಬರ್ ತಿಂಗಳ ಕೊೊನೆಯಲ್ಲಿ ಬೇಕಲ್ ಅಂತರಾಷ್ಟ್ರೀಯ ಬೀಚ್ ಫೆಸ್ಟಿವಲ್ ಆಯೋಜಿಸಲಾಗುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಬೇಕಲ್ ಅಂತರಾಷ್ಟ್ರೀಯ ಬೀಚ್ ಫೆಸ್ಟಿವಲ್ ಆಯೋಜಿಸಲಾಗುತ್ತಿದೆ. 2022ರ ಬೇಕಲ್ ಅಂತರಾಷ್ಟ್ರೀಯ ಬೀಚ್ ಫೆಸ್ಟಿವಲ್ ನಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದ್ದರು. 10 ದಿನಗಳ ಕಾಲ ಈ ಫೆಸ್ಟಿವಲ್ ನಡೆಯುತ್ತದೆ.

ಸಂಕ್ಷಿಪ್ತ ಚರಿತ್ರೆ[ಬದಲಾಯಿಸಿ]

ಇದು ಸುಮಾರು ೧೫ ನೇ ಶತಮಾನದಲ್ಲಿ ನಿರ್ಮಾಣವಾದ ಕೋಟೆ. ಸ್ಥಳೀಯ ಆಡಳಿತಗಾರ ಹಿರಿಯ ವೆಂಕಟಪ್ಪ ನಾಯಕ ಎಂಬುವವರು ಇದನ್ನು ನಿರ್ಮಿಸಲು ಪ್ರಾರಂಭಿಸಿದರು. ನಂತರ ಇದನ್ನು ಶಿವಪ್ಪ ನಾಯಕ ಎಂಬುವವರು ಪೂರ್ಣಗೊಳಿಸಿದರು. ನಂತರ ಇದು ಹೈದರಾಲಿಯ ಅಧೀನಕ್ಕೆ ಒಳಪಟ್ಟಿತು. ಮುಂದೆ ಟಿಪ್ಪು ಇದನ್ನು ತನ್ನ ಮುಖ್ಯ ಸೇನಾ ಕೆಂದ್ರವನ್ನಗಿ ಮಾಡಿಕೊಂಡನು. ೧೭೯೯ ರಲ್ಲಿ ಬ್ರಿಟಿಶರೊಂದಿಗಿನ ಯುದ್ದದಲ್ಲಿ ಟಿಪ್ಪು ಮರಣದ ನಂತರ ಈಸ್ಟ್ ಇಂಡಿಯಾ ಕಂಪೆನಿ ಈ ಕೋಟೆಯನ್ನು ವಶಪಡಿಸಿಕೊಂಡಿತು.

ಚಿತ್ರಗಳು[ಬದಲಾಯಿಸಿ]

Panoramic view from inside Bakel Fort.

ಬಾಹ್ಯಸಂಪರ್ಕಗಳು[ಬದಲಾಯಿಸಿ]